Pages

Wednesday, October 3, 2012

ಚಪ್ಪಲಿ ಹೊಲಿದು ಮಗಳನ್ನು ಇಂಜಿನಿಯರ್ ಮಾಡಿಸಿದ ರಾಜೇಂದರ್!!


ನನ್ನ ತಂಗಿ ಮಗ ಸುಬ್ರಹ್ಮಣ್ಯ ತನ್ನ ಫೇಸ್ ಬುಕ್ ನಲ್ಲಿ  ಈ ಫೋಟೋ ಹಾಕಿಕೊಂಡಿದ್ದ. ನೋಡುತ್ತಿದ್ದಂತೆಯೇ ನನ್ನ ಬಾಲ್ಯ ನೆನಪಾಯ್ತು. ನಮ್ಮಪ್ಪ ಅಮ್ಮ ಕಣ್ಮುಂದೆ ಬಂದರು. ಅಬ್ಭಾ! ಅದೊಂದು ರೋಚಕ ಅಧ್ಯಾಯ!! ಅಂದಿನ ಅನುಭವವೇ ಇಂದು ನನ್ನಲ್ಲೇನಾದರೂ ಮನುಷ್ಯತ್ವದ ಗುಣಗಳಿದ್ದರೆ ಅದಕ್ಕೆ ಕಾರಣ.ನನ್ನ ಕಥೆ ಹಾಗಿರಲಿ.
ಇಲ್ಲಿ ಮೀರಾ ಮತ್ತು ಅವಳ ತಂದೆ ರಾಜೇಂದರ್ ನಮ್ಮೆಲ್ಲರ ಮೆಚ್ಚುಗೆಗೆ ಸಹಜವಾಗಿ ಪಾತ್ರರಲ್ಲವೇ?  ಹಗಲು ರಾತ್ರಿ ಚಪ್ಪಲಿ ಹೊಲಿದು ಮಗಳನ್ನು ಇಂಜಿನಿಯರ್ ಮಾಡಿಸಿದ ರಾಜೇಂದರ್!! ಬಡತನ ಲೆಕ್ಕಿಸದೆ ಓದಿದ ಮೀರಾ!!!
ನಿಮಗೆ ಶತ ಶತ ನಮನಗಳು

ಮಾಧ್ಯಮ-ಸಂವಾದ

ಹಾಸನ ಜನತೆಗೆ  ವೇದಾಧ್ಯಾಯೀ  ಶ್ರೀ ಸುಧಾಕರಶರ್ಮರ ಪರಿಚಯವಾಗಿ ನಾಲ್ಕೈದು ವರ್ಷವಾಯ್ತು. ಹಾಸನದ ಶ್ರೀ ಶಂಕರ ಮಠದಲ್ಲಿ ಅವರ ನಾಲ್ಕಾರು ಉಪನ್ಯಾಸಗಳು ನಡೆದಿದ್ದು   ಈಗ್ಗೆ ಎರಡು ವರ್ಷಗಳ ಹಿಂದೆ     "ವೇದಸುಧೆ"ಯ ವಾರ್ಷಿಕೋತ್ಸವದಲ್ಲಿ ಅವರ ಉಪನ್ಯಾಸಗಳ ಸಿಡಿ. "ನಿಜವ ತಿಳಿಯೋಣ" ಬಿಡುಗಡೆಯಾಗಿತ್ತು. ಆ ನಂತರ ಶ್ರೀಯುತರ ಅನಾರೋಗ್ಯದಿಂದಾಗಿ ಹಾಸನಕ್ಕೆ ಅವರನ್ನು ಮತ್ತೆ ಕರೆಸಲಾಗಿರಲಿಲ್ಲ.ಹಾಸನದ ಜನತೆಗೆ ಶ್ರೀಯುತರ ಮಾತು ಕೇಳುವ ಕಾತುರತೆ ಇತ್ತು. ಅದಕ್ಕೆ ಅವಕಾಶವೂ ಒದಗಿಬಂತು. ಪ್ರವಾಸ ಮಾಡುವಷ್ಟು ಅವರ ಆರೋಗ್ಯ ಸುಧಾರಿಸದಿದ್ದರೂ ಹಾಸನದ ಜನತೆಯ ಮೇಲಿನ ಪ್ರೀತಿ ಮತ್ತು ವೇದ ಪ್ರಚಾರ ಮಾಡುವ ಅವರ ದೃಢ ನಿಲುವು ಅವರನ್ನು ಹಾಸನಕ್ಕೆ ಬರುವಂತೆ ಮಾಡಿತು. ದಿನಾಂಕ 29.09.2012 ಶನಿವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಶ್ರೀಯುತರೊಡನೆ ಮಾಧ್ಯಮ-ಸಂವಾದ ನಡೆಯಿತು. ಮುಕ್ತವಾತಾವರಣದಲ್ಲಿ ಅತ್ಯಂತ ಸಂಬ್ರಮದಿಂದ  ನಡೆದ  ಸಂವಾದದ ಆಡಿಯೋ ಇಲ್ಲಿದೆ.http://www.vedasudhe.com/%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae-%e0%b2%b8%e0%b2%82%e0%b2%b5%e0%b2%be%e0%b2%a6/ ವಿಚಾರ ಮಾಡುವಂತಹ ಎಲ್ಲರೂ ಅತ್ಯಗತ್ಯವಾಗಿ ಕೇಳಲೇ  ಬೇಕಾದ ಮಾತುಗಳು. ಎಲ್ಲವೂ  2-3 ನಿಮಿಷಗಳ ಆಡಿಯೋ ಕ್ಲಿಪ್ ಗಳು. ಕೇಳಿ ,ನಿಮ್ಮ ಅಭಿಪ್ರಾಯ ತಿಳಿಸಿ.



ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರಾಸ್ತಾವಿಕ ನುಡಿ:

ಪ್ರಶ್ನೆ-1 ಅಪಾತ್ರರಿಗೆ ವೇದವನ್ನು ಕಲಿಸಬಾರದು, ಅಂತಾರಲ್ಲಾ?
ಪ್ರಶ್ನೆ-2 ವೇದಾಧ್ಯಯನ ಮಾಡಲು ಆಹಾರ ಮತ್ತು ವಸ್ತ್ರ ಸಂಹಿತೆ ಇದೆಯೇ?
ಪ್ರಶ್ನೆ-3 ವೇದ ಎಂದರೆ ಏನು?
ಪ್ರಶ್ನೆ-4 ಸ್ಮೃತಿಗಳ ಬಗ್ಗೆ ಏನು ಹೇಳುವಿರಿ?
ಪ್ರಶ್ನೆ-5 ನಮ್ಮ ಸಂಪ್ರದಾಯಗಳು ನಮ್ಮ ಸಮಾಜದಲ್ಲಿ ಸಮಸ್ಯೆಗಳಿಗೆ ಕಾರಣವಾಗಿವೆಯೇ?
ಪ್ರಶ್ನೆ-6 ವೇದಾಭ್ಯಾಸವನ್ನು ಮಾಡಲು ಉಪನಯನ ಸಂಸ್ಕಾರ ಆಗಿರಲೇ ಬೇಕೇ?
ಪ್ರಶ್ನೆ-7 ವೇದಗಳನ್ನು ಪರಮಪ್ರಮಾಣ ಎಂದು ಹೇಗೆ ಹೇಳುವಿರಿ?
ಪ್ರಶ್ನೆ-8 ಜಾತಿ ಪದ್ದತಿ ಹೇಗೆ ಬೆಳೆದು ಬಂತು?
ಪ್ರಶ್ನೆ-9 ವೇದದ ದೃಷ್ಟಿಯಲ್ಲಿ ಶಿಕ್ಷಣ ಅಂದರೆ.....?