ಹಾಸನ ಜಿಲ್ಲೆಯ ಕೊಣನೂರು ಸಮೀಪ ಇರುವ ತರಗಳಲೆಯಲ್ಲಿ ನಡೆದ ಏಕಲ್ ವಿದ್ಯಾಲಯದ ಆಚಾರ್ಯರ ಅಭ್ಯಾಸ ವರ್ಗದಲ್ಲಿ ಹಾಸನ ವೇದಭಾರತಿಯ ಸದಸ್ಯರು ಪಾಲ್ಗೊಂಡು ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶ್ರೀ ಹರಿಹರಪುರಶ್ರೀಧರ್ ಅವರು ವೇದದ ಸರಳ ಪರಿಚಯಮಾಡಿಕೊಟ್ಟು ವೇದವು ಎಲ್ಲರಿಗಾಗಿ ಎಂದು ವಿವರಿಸಿದರು. ಅಗ್ನಿಹೋತ್ರದ ಅರ್ಥವನ್ನು ತಿಳಿದ ಆಚಾರ್ಯರುಗಳು ತಾವು ಅಗ್ನಿಹೋತ್ರ ಕಲಿಯುವ ಆಸಕ್ತಿ ವ್ಯಕ್ತಪಡಿಸಿದರು.ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಏಕಲ್ ವಿದ್ಯಾಲಯ ಚಟುವಟಿಕೆಗಳು ಪ್ರಶಂಸನೀಯವಾಗಿವೆ.

