ಕೇರಳದ ಕೆಲವು ಚಿತ್ರಗಳು!ಹಾಸನದ ಕೆಲವು ಚಿತ್ರಗಳು! ಒಂದು ಕಡೆ ಕೇರಳದ ಆಚಾರ್ಯ ರಾಜೇಶ್ ಮತ್ತೊಂದು ಕಡೆ ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮ.
ವೇದದ ಕೆಲಸಕ್ಕೆ ಯಾವ ಗಡಿ! ಸಾಗರಗಳನ್ನೂ ದಾಟಿರುವಾಗ!!
"ಎಲ್ಲರಿಗಾಗಿ ವೇದ " ಎಂಬ ವೇದಭಾರತಿಯ ಉದ್ದೇಶಕ್ಕೆ ಹೊಂದುವ ಕೇರಳದ ಆಚಾರ್ಯ ರಾಜೇಶ್ ಅವರ ಕೆಲಸವನ್ನು ಗಮನಿಸಿದಾಗ ಆಚಾರ್ಯ ರಾಜೇಶ್ ಮತ್ತು ವೇದಭಾರತಿಯ ಚಿಂತನೆಗಳಿಗೆ ಸಾಮ್ಯತೆಯು ಗೊತ್ತಾಗುತ್ತದೆ.
ವೇದಭಾರತಿಯು ಅಗ್ನಿಹೋತ್ರಕ್ಕೆ ಕೊಟ್ಟಿರುವಂತೆಯೇ ಮಹತ್ವವನ್ನು ಆಚಾರ್ಯ ರಾಜೇಶ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿರುವುದನ್ನು ಗಮನಿಸಬಹುದು. ಅವರದು ಸುಮಾರು ಹದಿನೈದು ವರ್ಷಗಳ ಸಾಹಸ ಯಾತ್ರೆ. ವೇದಭಾರತೀ ಈಗಿನ್ನೂ ಮೂರನೇ ವರ್ಷದಲ್ಲಿ ಪದಾರ್ಪಣೆ ಮಾಡುತ್ತಿರುವ ಶಿಶು.
ಆಚಾರ್ಯರ ಮಾರ್ಗದರ್ಶನ ಪಡೆಯಲು ಯಾವ ಅಡ್ದಿಯೂ ಇಲ್ಲ. ಆಚಾರ್ಯರು ಅಲ್ಲಿನ ದೇವಾಲಯಗಳನ್ನೇ ಕೇಂದ್ರವಾಗಿಟ್ಟು ಕೊಂಡಿದ್ದಾರೆ. ವೇದಭಾರತಿಯದೂ ಅದೇ ಪ್ರಯತ್ನ.ನಮಗೆ ಮಾರ್ಗದರ್ಶನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು.ವೇದಭಾರತಿಗೆ ರಾ.ಸ್ವ.ಸಂಘದ ಹಿರಿಯರಾದ ಶ್ರೀ ಸು.ರಾಮಣ್ಣ ನವರ ಸಹಿತ ಹಲವರ ಮಾರ್ಗದರ್ಶನ ಸಿಕ್ಕಿದೆ. ಹುಬ್ಬಳ್ಳಿಯ ಆರ್ಷ ವಿದ್ಯಾಲಯದ ಪೂಜ್ಯ ಶ್ರೀ ಚಿದ್ರೂಪಾನಂದರೂ ಸಹ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀ ರಾಮಕೃಷ್ಣ ಮಿಷನ್ ಸೇರಿದಂತೆ ಹಲವಾರು ಯತಿಗಳು ವೇದಭಾರತಿಯ ಕಾರ್ಯವನ್ನು ಗಮನಿಸುತ್ತಿದ್ದಾರೆ.
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಅನಾರೋಗ್ಯದಿಂದ ಹೊರ ಊರುಗಳಿಗೆ ಪ್ರವಾಸ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ ವೇದಭಾರತಿಯು ಎಲ್ಲೆ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಬೆಂಗಳೂರಿನ ಅವರ ಮನೆಯಲ್ಲೇ ಕುಳಿತು ದೂರವಾಣಿ ಮೂಲಕವೇ ಶರ್ಮರು ಮಾಡುವ ಉಪನ್ಯಾಸವನ್ನು ಮೈಕ್ ಗೆ ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಅವರ ಪ್ರವಚನವನ್ನು ಪ್ರಸ್ತುತ ಪಡಿಸಲಾಗುತ್ತಿದೆ.
ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸುತ್ತಿರುವ ಆಚಾರ್ಯ ರಾಜೇಶ್ ಮತ್ತು ವೇದಾಧ್ಯಾಯೀ ಸುಧಾಕರ ಶರ್ಮರ ಚಿಂತನೆಯನ್ನು ಸಾಕಾರಗೊಳಿಸುವಲ್ಲಿ ವೇದಾಭಿಮಾನಿಗಳ ಸಹಕಾರ ಇನ್ನೂ ಹೆಚ್ಚು ಲಭ್ಯವಾಗಲೆಂಬುದು ವೇದಭಾರತಿಯ ಅಪೇಕ್ಷೆ.
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯ ಪೂರ್ಣವಾಗಿ ಸುಧಾರಿಸಿಬಿಟ್ಟರೆ ವೇದಭಾರತಿಯ ಕೆಲಸ ಇನ್ನೂ ಹೆಚ್ಚು ಊರುಗಳಿಗೆ ವಿಸ್ತರಿಸುವುದರಲ್ಲಿ ಅನುಮಾನವಿಲ್ಲ. ಅವರ ಆರೋಗ್ಯ ಸುಧಾರಿಸಲೆಂಬುದೇ ಭಗವಂತನಲ್ಲಿ ನಮ್ಮ ಪ್ರಾರ್ಥನೆ.
 |
ಆಚಾರ್ಯ ರಾಜೇಶ್ |
 |
ವೇದಾಧ್ಯಾಯೀ ಶ್ರೀಸುಧಾಕರಶರ್ಮ |
 |
ಕೇರಳದಲ್ಲಿ ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಗ್ನಿಹೋತ್ರ |
 |
ಕೇರಳದಲ್ಲಿ ಮಹಿಳೆಯರೇ ಮಾಡುತ್ತಿರುವ ಅಗ್ನಿಹೋತ್ರ |
 |
ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ಸಾಮೂಹಿಕ ಅಗ್ನಿಹೋತ್ರ |
 |
ಜಾತಿಭೇದವಿಲ್ಲದೆ ಎಲ್ಲರಿಗಾಗಿ-ದೇವಾಲಯಗಳಲ್ಲಿ ಅಗ್ನಿಹೋತ್ರ ಕೇರಳದ ದೇವಾಲಯದಲ್ಲಿ |
 |
ಹಾಸನ ವೇದಭಾರತಿಯಿಂದ ದೇವಾಲಯದಲ್ಲಿ ಸಾಮೂಹಿಕ ಅಗ್ನಿಹೋತ್ರ |
 |
ವೇದಭಾರತಿಯ ಸಾಮೂಹಿಕ ಅಗ್ನಿಹೋತ್ರದಲ್ಲಿ RSS ಹಿರಿಯರಾದ ಶ್ರೀ ಸು.ರಾಮಣ್ಣ ಮತ್ತು ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತೀ |