ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, January 17, 2016

ಯೋಗ ಶಿಬಿರದಲ್ಲಿ ಮೃತ್ಯುಂಜಯ ಮಂತ್ರ ಸಹಿತ ವಿಶೇಷ ಅಗ್ನಿಹೋತ್ರ
ಕಳೆದ ವರ್ಷ ಜೂನ್ 21 ನ್ನು  ನಮ್ಮ ನೆಚ್ಚಿನ ಪ್ರಧಾನಿಯವರು "ವಿಶ್ವ ಯೋಗದಿನ " ಎಂದು ಘೋಷಿಸಿದ ಪರಿಣಾಮ ಹಾಸನದಲ್ಲಿ  ಪತಂಜಲಿ ಯೋಗಕೇಂದ್ರ ಮತ್ತು ವೇದಭಾರತಿಯು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಮಾಡಲು   ಆರಂಭಿಸಿದವು. ಹಾಸನದಲ್ಲಿ ನಡೆಯುತ್ತಿರುವ ಎಲ್ಲಾ ಯೋಗಕೇಂದ್ರಗಳಲ್ಲೂ ಅಗ್ನಿಹೋತ್ರ ಮತ್ತು ವೇದದ ಪರಿಚಯ ಮಾಡಿಕೊಡುವ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಜೂನ್ 21 ರ ನಂತರ ವಿಶೇಷವಾದ ಮೂರು ಶಿಬಿರಗಳನ್ನು ಏರ್ಪಡಿಸಿ ಸುಮಾರು ಒಂದು ಸಾವಿರ ಜನರಿಗೆ ಯೋಗದ ತರಬೇತಿಯನ್ನು ನೀಡಲಾಗಿದೆ. ಎಲ್ಲಾ ಶಿಬಿರಗಳಲ್ಲೂ ಅಗ್ನಿಹೋತ್ರವು  ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ಪ್ರಮುಖ ಭಾಗವಾಗಿರುತ್ತದೆ. 11.01.2016  ರಿಂದ 20.01.2016 ರವರಗೆ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಸುಮಾರು 200   ಶಿಬಿರಾರ್ಥಿಗಳು ಪಾಲ್ಗೊಂಡಿದ್ದು   ದಿನಾಂಕ 17.01.2016 ಭಾನುವಾರ ಮುಂಜಾನೆ 6.30 ಕ್ಕೆ  ವಿಶೇಷ ಅಗ್ನಿಹೋತ್ರವು ನಡೆಯಿತು. ಗಾಯತ್ರಿ ಮಂತ್ರ ಹಾಗೂ ಮೃತ್ಯುಂಜಯ ಮಂತ್ರದ ಜೊತೆಗೆ ಶಿಬಿರಾರ್ಥಿಗಳೆಲ್ಲರೂ ಯಜ್ಞ ಕ್ಕೆ ಹವಿಸ್ಸನ್ನು ಅರ್ಪಿಸಿದರು.