Pages

Showing posts with label ಸಂಪಾದಕೀಯ. Show all posts
Showing posts with label ಸಂಪಾದಕೀಯ. Show all posts

Saturday, February 20, 2016

ಭಾರತ ಮೊದಲು !


ಇದೆಂತಾ ಪ್ರಾಜಾಪ್ರಭುತ್ವ?

ದೇಶದ ವಿರುದ್ಧವಾಗಿ ಘೋಷಣೆ ಕೂಗುವುದನ್ನು ಸಹಿಸಬೇಕು!

ಯಾವ ನೆಲದಲ್ಲಿ ಹಸುವನ್ನು ಗೋಮಾತೆ ಎಂದು ಪೂಜಿಸುತ್ತೇವೋ ಅದೇ ನೆಲದಲ್ಲಿ ಅದರ ಮಾರಣಹೋಮವನ್ನು ನೋಡಬೇಕು!

ಬಾಂಬ್ ಸಿಡಿಸಿ ಅಮಾಯಕರನ್ನು ಹತ್ಯೆ ಮಾಡುವ ರಕ್ಕಸರನ್ನು ಗಲ್ಲಿಗೇರಿಸಿದರೆ ಅದರ ವಿರುದ್ಧ ಪ್ರತಿ ಭಟಿಸಿದವರನ್ನು ಸಹಿಸಿಕೊಳ್ಳ ಬೇಕು!!

ಛೇ! ಛೇ!!
ಅತಿಯಾಯ್ತು!


ಈ ಪ್ರಜಾಬ್ರಭುತ್ವ ವ್ಯವಸ್ಥೆಯಲ್ಲಿ ಇನ್ನೂ ಎಷ್ಟು ಜನರ ಮಾರಣ ಹೋಮ ನಡೆಯಬೇಕಾಗಿದೆ?

ಇನ್ನೂ ಎಷ್ಟು ಗೋಮಾತೆಯ ಹತ್ಯೆಯಾಗಬೇಕಾಗಿದೆ?

ಇನ್ನೂ ಎಷ್ಟು ಮಾತೆಯರ ಮೇಲೆ ಅತ್ಯಾಚಾರ ನಡೆಯಬೇಕಾಗಿದೆ?

ಇನ್ನೂ ಎಷ್ಟು ಪ್ರಾಣಿಗಳ ಮತ್ತು ಮನುಷ್ಯರ ರಕ್ತ ರಸ್ತೆಯಲ್ಲಿ ಹರಿಯಬೇಕಾಗಿದೆ??


ಮನುಷ್ಯಮಾತ್ರದವನು ಇನ್ನು ಸಹಿಸಲು ಸಾಧ್ಯವಿಲ್ಲ!

ಮೋದಿಯವರು ಇನ್ನು ಸುಮ್ಮನಿರಬೇಕಾಗಿಲ್ಲ!


ಪ್ರಧಾನ ಮಂತ್ರಿಗಳೇ,


ನಿಮ್ಮನ್ನು ಈ ದೇಶದ ದೇಶಭಕ್ತರೇ ಆರಿಸಿದ್ದು !! ದೇಶವನ್ನು ತಲ್ಲಣಗೊಳಿಸುತ್ತಿರುವ, 0.001% ಕ್ಕೂ ಕಮ್ಮಿ ಇರುವ ದೇಶದ್ರೋಹಿಗಳಿಂದ ನೀವು ಆರಿಸಿ ಬಂದಿಲ್ಲ!!


ಇನ್ನು ಯಾಕೆ ತಡ ಮಾಡುತ್ತಿದ್ದೀರಿ?

ನಿಮ್ಮ ಅಂತಿಮ ಅಸ್ತ್ರ ಪ್ರಯೋಗಿಸಲು ಕಾಲ ಪಕ್ವವಾಗಿದೆ!


* ಇನ್ನು ಮುಂದೆ ಭಾರತದ ಯಾವ ಮೂಲೆಯಲ್ಲೂ ಅಮಾಯಕರು ಕಣ್ಣೀರು ಹಾಕಬಾರದು.

* ಅತ್ಯಾಚಾರ ನಡೆಯಬಾರದು

* ಪ್ರಾಣಿಗಳ ರಕ್ತ ರಸ್ತೆಯಲ್ಲಿ ಹರಿಯಬಾರದು

* ಭಯೋತ್ಪಾದಕರ ನಿರ್ನಾಮವಾಗಬೇಕು


ಪೇಲಿಸರಿಗೆ ಮತ್ತು ನಮ್ಮ ದೇಶವನ್ನು ಕಾಯುವ ಸೈನಿಕರಿಗೆ ಆತ್ಮಬಲವನ್ನು ತುಂಬುವ ಕೆಲಸವಾಗಬೇಕು. ದೇಶದ್ರೋಹಿಗಳ ಚಟುವಟಿಕೆಗಳ ಮೆಲೆ ನಿರಂತರ ಕಣ್ಣಿಡಲು ಗುಪ್ತಚರ ಇಲಾಖೆಯ ಸಾಮರ್ಥ್ಯವನ್ನು ಹೆಚ್ಚಿಸಿ. ಅತ್ಯಂತ ಸೂಕ್ಷ್ಮವಾದ ಮತ್ತು ಹೆಚ್ಚು ಸಾಮರ್ಥ್ಯ ಉಳ್ಳ ಸಲಕರಣೆ ಗಳನ್ನು ನಮ್ಮ ಗುಪ್ತಚರ ಇಲಾಖೆಗೆ ಒದಗಿಸಿ,ದೇಶದ ಸಾರ್ವಭೌಮತ್ವಕ್ಕೆ, ಅಖಂಡತೆಗೆ, ಶಾಂತಿಗೆ ಬಂಗ ತರುವಂತಹ ಯಾವುದೇ ವ್ಯಕ್ತಿಯನ್ನು ಆಧಾರ ಸಹಿತ ಅರೆಸ್ಟ್ ಮಾಡಲು ಆದೇಶ ಕೊಡಿ. ಯಾವುದೇ ವಿಚಾರಧಾರೆಯ ಛತ್ರಿಯಡಿಯಲ್ಲಿ ದೇಶದ್ರೋಹಿಗಳು ರಕ್ಷಣೆ ಪಡೆಯಬಾರದು. ಹಾಗೆ ಆದೇಶ ಹೊರಡಿಸಿ.


ಭಾರತ ಮೊದಲು !

ದೇಶದ ಅಖಂಡತೆಗೆ ಪ್ರಥಮ ಪ್ರಾಶಸ್ತ್ಯ!

ಅಮಾಯಕರ ನೆಮ್ಮದಿಯೇ ಸರ್ಕಾರದ ಗುರಿಯಾಗಲಿ!

ನಮ್ಮ ದೇಶದ ಎಲ್ಲಾ ಪೋಲೀಸ್ ಅಧಿಕಾರಿಗಳಿಗೆ, ಸೈನ್ಯದ ಅಧಿಕಾರಿಗಳಿಗೆ, ಮತ್ತು ಡಿವಿಶನಲ್ ಕಮೀಶನರುಗಳಿಗೆ ದೇಶಭಕ್ತಿಯ ಸರಿಯಾದ ತರಬೇತಿ ಕೊಡಿ. ಅವರಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಅರ್ಹತೆ ಬೆಳಸಿ. ನಾಲಾಯಕ್ ಅಧಿಕಾರಿಗಳನ್ನು ಮನೆಗೆ ಕಳಿಸಿ.


ಹೌದು , ದೇಶದಲ್ಲಿ ಶಾಂತಿ , ನೆಮ್ಮದಿ ನೆಲಸಿ, ದೇಶವು ಸುಭಿಕ್ಷವಾಗಿರಬೇಕಾದರೆ ಕೆಲವು ದೇಶದ್ರೋಹಿಗಳ ತಲೆ ಉರುಳಲೇ ಬೇಕಾಗುತ್ತದೆ.ರಾಷ್ಟ್ರ ಯಜ್ಞಕ್ಕೆ ಆಹುತಿಯಾಗದೇ ಫಲ ಸಿಗಲಾರದು!!! ಕೋಟಿ ಕೋಟಿ ಜನರ ನೆಮ್ಮದಿಗಾಗಿ ಕೆಲವು ನೂರುಜನ ದೇಶದ್ರೋಹಿಗಳ ಆಹುತಿಯಾಗಬಹುದು!!


ರಾಷ್ಟ್ರಾಯ ಸ್ವಾಹಾssssss|

ರಾಷ್ಟ್ರಾಯ ಇದಂ ನಮಮ ||

Tuesday, November 3, 2015

ನಿಮ್ಮ ಪಾತ್ರವೇನು?

ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನಮ್ಮ ದೇಶದ ಯುವ ಸಂಪತ್ತಿನ ಬಗ್ಗೆ ಬಲು ವಿಶ್ವಾಸ ಹೊಂದಿದ್ದಾರೆ. ಇದೀಗ ಕಾಲ ಪಕ್ವವಾಗಿದೆ. ಯುವ ಮಿತ್ರರೇ, ನಿಮಗೆ ಈಗ ಪಂಥಾಹ್ವಾನವಿದೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ವಿಶ್ವದೆತ್ತರಕ್ಕೆ ಕೊಂಡುಯ್ಯುವ ಹೊಣೆ ನಿಮ್ಮ ಹೆಗಲ ಮೇಲಿದೆ. ಈಗ ನಿಮಗೆ ಸತ್ವ ಪರೀಕ್ಷೆಯ ಕಾಲ. ಧರ್ಮ ವಿರೋಧಿಗಳು, ಭಾರತದ ವಿರೋಧಿಗಳು ನಮ್ಮ ಧರ್ಮ, ಸಂಸ್ಕೃತಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದು ಸಣ್ಣ ಮೌಢ್ಯವನ್ನು ಹಿಡಿದು ಇಡೀ ಧರ್ಮವನ್ನು ವಿರೋಧಿಸುವ ಶಡ್ಯಂತ್ರ ನಡೆದಿದೆ. ಹೌದು, ಮೌಢ್ಯದ ವಿಚಾರದಲ್ಲಿ ನಾವೇಕೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಅನ್ಯಮತಗಳ ವಿಚಾರ ಹಾಗಿರಲಿ. ಹಿಂದುಸಮಾಜದಲ್ಲಿ ಇಂದಿನ ಕಾಲಕ್ಕೆ ಬಾಹಿರವಾದ ಆಚರಣೆಗಳಿದ್ದರೆ ಅದನ್ನೇಕೆ ಬುಡ ಸಮೇತ ಕಿತ್ತುಹಾಕಬಾರದು? ಧರ್ಮವಿರೋಧಿಗಳ ಹಲ್ಲಿಗೆ ಆಹಾರವಾಗುವ ಯಾವ ಸಂಗತಿಗಳಿದ್ದರೂ ಅದನ್ನು ಬೇರು ಸಮೇತ ಕಿತ್ತು ಹಾಕಲೇ ಬೇಕು. ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ಗುಡಿಸಿಕೊಂಡು, ಆನಂದವಾಗಿರಬೇಡವೇ? ಇಂತಾ ಸ್ವಚ್ಚತಾ ಆಂದೋಳನದಲ್ಲಿ ನಿಮ್ಮ ಪಾತ್ರವೇನು?

Monday, November 2, 2015

ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ?


ಅಬ್ಬಾ!ಒಂದುಕಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ಹಾಸಿಗೆಯಿಂದೆದ್ದು ಮನೆಯ ಒಂದು ಭಾಗದಲ್ಲಿರುತ್ತಿದ್ದ ಕೊಟ್ಟಿಗೆಯಲ್ಲಿನ ಗೋವುಗಳ ದರ್ಶನ ಮಾಡಿ ಮುಖ ತೊಳೆದು , ಸೂರ್ಯೋದಯ   ವಾಗುತ್ತಿದ್ದಂತೆ ಮನೆಯ ಹೊರಗೆ ಸೂರ್ಯದೇವನಿಗೆ ಕೈ ಮುಗಿದು ಆರಂಭವಾಗುತ್ತಿದ್ದ ದಿನಚರಿ!! ಇದು ಸಾಮಾನ್ಯವಾಗಿ  ನಮ್ಮ ಎಲ್ಲಾ ಹಳ್ಳಿ ರೈತರ ಜೀವನ ಪದ್ದತಿ! ಸೋಮವಾರಗಳಲ್ಲಿ ಎತ್ತಿನ ಬದಲು ಪತಿಪತ್ನಿಯರೇ ನೊಗ ಹೊತ್ತು ಭೂಮಿ ಉಳುತ್ತಿದ್ದುದು ಸಾಮಾನ್ಯ ದೃಶ್ಯ!
ಗೋವೆಂದರೆ ಅಷ್ಟು ಭಕ್ತಿ. ಗೋಮಾತಾ ಪ್ರತ್ಯಕ್ಷ ದೇವತೆ. ಯಾರಿಗೆ ಈ ವಿಷಯ ಗೊತ್ತಿಲ್ಲ? ಸಿದ್ರಾಮಯ್ಯನವರಿಗೆ ಗೊತ್ತಿಲ್ಲವೇ? ಉಳಿದ ರಾಜಕಾರಣಿಗಳಿಗೆ ಗೊತ್ತಿಲ್ಲವೇ?
ರಾಜಕೀಯಕ್ಕಾಗಿ ಏನೆಲ್ಲಾ ಮಾತಾಡ್ತಾರೆ? ಏನೆಲ್ಲಾ ಮಾಡ್ತಾರೆ?
ರಸ್ತೆಯಲ್ಲಿ ಸಹಭೋಜನ ಮಾಡಿ-ಅಲ್ಲಿ ಗೋಮಾಂಸ ತಿನ್ನುತ್ತಾರೆ! ಪುರಭವನದೆದುರು, ಜಿಲ್ಲಾಧಿಕಾರಿಗಳ ಕಚೇರಿ ಎದಿರು ಗೋಮಾಂಸದೂಟಮಾಡುತ್ತಾರೆ!!
ಛೆ! ಛೇ!!
ಇದೇನಿದು? ಏನಾಯ್ತು ಈ ರಾಜಕಾರಣಿಗಳಿಗೆ?
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ. ಕಾಂಗ್ರೆಸ್ಸಿನ ನಮ್ಮ ಮುಖ್ಯ ಮಂತ್ರಿ ಹೇಳ್ತಾರೆ- " ಇದುವರೆವಿಗೆ ನಾನು ಗೋಮಾಂಸ ತಿಂದಿಲ್ಲ. BJP ಯವರಿಗೆ ಬುದ್ಧಿ ಕಲಿಸಲು ಗೋಮಾಂಸವನ್ನು ತಿನ್ನುವೆ. ಹಂದಿ ಮಾಂಸವನ್ನೂ ತಿನ್ನುವೆ.
ಸ್ವಾಮಿ, ಮುಖ್ಯಮಂತ್ರಿಗಳೇ
ನೀವು ಮುಖ್ಯಮಂತ್ರಿಗಳಾಗಲು ಕರ್ನಾಟಕದ ಮತದಾರ ಕಾರಣ. BJP ಯವರಿಗೆ ಚಾಲೆಂಜ್ ಮಾಡಲು ಗೋಮಾಂಸ ತಿನ್ನುತ್ತೇನೆಂದರೆ ಅದರರ್ಥವೇನು? ಸಾಮಾನ್ಯಮತದಾರನ ಭಾವನೆಗೆ ಅದೆಷ್ಟು ಪೆಟ್ಟು ಬೀಳುತ್ತದೆಂದು ಯೋಚಿಸಿದ್ದೀರಾ?
ಈಗಾಗಲೇ ನಮ್ಮ ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟಿರುವುದು ಸಾಲದೇ? ಇನ್ನೂ ಅದೆಷ್ಟು ಹದಗೆಡಬೇಕು? ನಾಡಹಸು ಎತ್ತುಗಳ ವಂಶ ಕೊನೆಯಾದರೆ ಅದೆಂತಹ ಘೋರಪರಿಣಾಮ ಬೀರುತ್ತದೆಂಬ ವಿವೇಚನೆ ನಿಮಗಿದೆಯೇ?
ದನಗಳ ಗೊಬ್ಬರದಿಂದ ಬೆಳೆಯುತ್ತಿದ್ದ ಬೆಳೆ ಹೇಗಿರುತ್ತಿತ್ತು?
ಮನೆಯಲ್ಲಿ ಒಂದು ಜೊತೆ ಎತ್ತು ಒಂದು ಕರಾವಿನ ಹಸು ಇದ್ದರೆ ಒಂದು ಎಕರೆ ಜಮೀನಿನಲ್ಲಿ ರೈತ ಎಷ್ಟು ಆನಂದವಾಗಿ ಬಾಳ್ಮೆ ನಡೆಸುತ್ತಿದ್ದರು!!
ಜೋಡೆತ್ತಿನ ಗಾಡಿ!!
ನೇಗಿಲಿನಿಂದ ಉಳುಮೆ!!
ದನಗಳ ಗೊಬ್ಬರ!
ಕರಾವಿನ ಹಸು!!
ಈ  ವಾಕ್ಯಗಳು ನೆನಪಾದಾಗ ನಿಮ್ಮ ಕಣ್ಣು ತೇವಗೊಳ್ಳಲಿಲ್ಲವೆಂದರೆ ಈ ನೆಲದ ವಾಸನೆ ಮರೆತು ಹೋಗಿದೆ ಎಂದೇ ಭಾವಿಸಬೇಕಾಗುತ್ತದೆ!!
ಇದೇ ನಾಡದನಗಳ ಸಗಣಿ, ಗಂಜಲಗಳು ಹಲವಾರು ರೋಗಗಳಿಗೆ ರಾಮಬಾಣ!! ಎನ್ನುವುದು ಇತ್ತೀಚಿನ ಸಂಶೋಧನೆ!!!!
ಆದರೆ ಇದೇ ನಾಡದನಗಳ ಉಸಿರಿನ ವಾಸನೆಯಿಂದಲೇ ಮನೆಯಲ್ಲಿ ಆರೋಗ್ಯ ನೆಲೆಸುತ್ತಿತ್ತು! ಎಂಬುದು ನಮ್ಮ ಹಿರಿಯರ ಅನುಭವ!!
ಸ್ವಾಮಿ,
ನಿಮ್ಮ  ರಾಜಕಾರಣಕ್ಕಾಗಿ ಸಮಾಜದ ಸ್ವಾಸ್ಥ್ಯವನ್ನು ನಾಶಮಾಡಬೇಡಿ.
ಇಡೀ ವಿಶ್ವವು ನಮ್ಮ ಕಡೆ ನೋಡುತ್ತಿದೆ! ಎಂಬ ಎಚ್ಚರ ನಿಮಗೂ ಇರಲಿ. ವಿಶ್ವವು ನಮ್ಮನ್ನು ಗೌರವಿಸಲು  ಪ್ರಮುಖ ಕಾರಣ ಏನೆಂಬುದರ ಅರಿವು ನಿಮಗಿಲ್ಲವೇ?
ಇಂದಿನ ಯುವಕರಿಗೆ ಈ ನೆಲದ ಮಣ್ಣಿನ ವಾಸನೆ ಗೊತ್ತಿಲ್ಲ. ಅದೆಲ್ಲಾ ರಾಸಾಯನಿಕ ಗೊಬ್ಬರದಿಂದ ಗಬ್ಬೆದ್ದು ಹೋಗಿದೆ! ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಮ್ಮ ನಿಜ ಸಂಸ್ಕೃತಿಯ ಅರಿವೇ ಇಲ್ಲವಾಗಿದೆ.
ಇಂದಿನ ನನ್ನ ಪ್ರೀತಿಯ ಯುವ ಮಿತ್ರರೇ!

ನಾವೆಲ್ಲಾ ಅಮ್ಮನ ಹಾಲು ಕುಡಿದದ್ದು ಒಂದೆರಡು ವರ್ಷ. ಆಮೇಲೇ?
 ಮನೆಯಲ್ಲಿರುತ್ತಿದ್ದ ನಾಡಹಸುವಿನ ಕೆಚ್ಚಲಿಗೆ ಬಾಯಿಹಾಕಿ ಚಪ್ಪರಿಸಿದವರು ನಾವು!!
ನಮ್ಮ    ಆಯುಶ್ಯ ಇನ್ನೇನು ಮುಗಿಯುತ್ತಾ ಬಂತು!  ನಮ್ಮ   ತಲೆಮಾರು ಮಾಯವಾಗುದಕ್ಕೆ ಮುಂಚೆಯೇ  ನಮ್ಮ ಗತವೈಭವಗಳೆಲ್ಲಾ ಮಾಯವಾಗುತ್ತಿವೆ!!
ಓಹ್! ಗತ ವೈಭವ ಎಂದಾಗ ನೀವು ಅಣಕಿಸುತ್ತೀರ, ಅಲ್ವಾ?
ಹೌದು, ಇಂದಿನಂತೆ ಕಂಪ್ಯೂಟರ್, ಮೊಬೈಲ್, ಟಿ.ವಿ. ನಮ್ಮ ಕಾಲದಲ್ಲಿರಲಿಲ್ಲ. ಕಾರ್ ಗಳ ಓಡಾಟವೂ ಇರಲಿಲ್ಲ.
ಜೊತೆ ಜೊತೆಗೆ  ನಮ್ಮ ಕಾಲದಲ್ಲಿ ಮಕ್ಕಳು ಕನ್ನಡಕ ಹಾಕುತ್ತಿರಲಿಲ್ಲ!
ಬಿ.ಪಿ. ಶುಗರ್  ಖಾಯಿಲೆ ಗೊತ್ತಿರಲಿಲ್ಲ!!
ಅಂದಿನ ಕಾಲದಲ್ಲಿ  ತಿಂಗಳಲ್ಲಿ    ಒಂದು ಕ್ವಿಂಟಾಲ್ ಅಕ್ಕಿ ಖರ್ಚಾಗುತ್ತಿದ್ದ ಮನೆಯಲ್ಲಿ ಇಂದು 10 ಕೆ.ಜಿ. ಅಕ್ಕಿ ಖರ್ಚಾಗುತ್ತಿಲ್ಲ.
ಅಂದು ಹಸಿವಿತ್ತು. ಆರೋಗ್ಯವಿತ್ತು. ಅನ್ನ ರುಚಿಸುತ್ತಿತ್ತು
ಇಂದು ಹಸಿವಿಲ್ಲ. ಆರೋಗ್ಯವಿಲ್ಲ. ಅನ್ನ ರುಚಿಸುವುದಿಲ್ಲ!!
ಇದು ಸತ್ಯವೋ? ಸುಳ್ಳೋ ನೀವೇ ಹೇಳಿ. ನಿಮಗೆ ಊಹಿಸಲು ಕಷ್ಟವಾದೀತು. ಬದುಕಿದ್ದರೆ  ನಿಮ್ಮ       ಅಜ್ಜ-ಅಜ್ಜಿ ಅಥವಾ ನಿಮ್ಮ ಅಪ್ಪ-ಅಮ್ಮನನ್ನು ಕೇಳಿ. ಸತ್ಯವನ್ನು ತಿಳಿದುಕೊಳ್ಳಿ.
ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ? ಇನ್ನುಳಿದ ಪಕ್ಷಗಳು ಈ ನೆಲದ ಸಂಸ್ಕೃತಿಯ ವಿರೋಧಿಗಳೇ?

Tuesday, October 13, 2015

ದೇವಾಲಯಗಳಲ್ಲಿ ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ

 ಶರನ್ನವರಾತ್ರಿಯ  ಮೊದಲದಿನವಾದ ಇಂದು ವಿಜಯವಾಣಿಯಲ್ಲಿ ಡಾ.ಕೆ.ಎಸ್.ನಾರಾಯಣಾಚಾರ್ಯರ ಮನದಾಳದ ನೇರ-ದಿಟ್ಟ  ನುಡಿಗಳನ್ನು ಓದಿದ ಮೇಲೆ ದಿಕ್ಕೆಟ್ಟ ಜನರಿಗೆ ಸೂಕ್ತ ಮಾರ್ಗದರ್ಶಕರು ಈ ದೇಶದಲ್ಲಿ  ಇನ್ನೂ  ಇದ್ದಾರೆಂಬ ಭಾವನೆಯಿಂದ ನನ್ನ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ಕೊಡಬೇಕೆಂದು ಮನದಲ್ಲೇ ನಿರ್ಧರಿಸಿಕೊಂಡೆ.
ಈ ದೇಶ ಉದ್ಧಾರವಾಗಬೇಕಾದರೆ..... ಲೇಖನದ ಕೊನೆಯ ಮಾತು ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಎಂಬ ಮಾತು ಇಂದಿಗೆ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ನನಗೆ ಲೇಖನ ಓದುವಾಗ ಹಾಸನದ ಶಂಕರಮಠದಲ್ಲಿ ಈಗ್ಗೆ ಸುಮಾರು ಎಂಟು ಹತ್ತು ವರ್ಷಗಳಲ್ಲಿ ವಿಜಯದಶಮಿ ಸಂದರ್ಭಗಳಲ್ಲಿ ನಾವು ಆಯೋಜಿಸುತ್ತಿದ್ದ  ಜ್ಞಾನಯಜ್ಞದ ನೆನಪಾಗುತ್ತಿದೆ. ಗದಗ್ ಶ್ರೀರಾಮಕೃಷ್ಣಾಶ್ರಮದ ಪೂಜ್ಯ ನಿರ್ಭಯಾನಂದರು, ತುಮಕೂರಿನ ಪೂಜ್ಯ ವೀರೇಶಾನಂದರು, ಬೆಂಗಳೂರು ಭವತಾರಣಿ ಆಶ್ರಮದ ಮಾತಾಜಿ ವಿವೇಕಮಯೀ, ಚಿನ್ಮಯಾಮಿಷನ್ನಿನ ಬ್ರಹ್ಮಚಾರಿ ಸುಧರ್ಮಚೈತನ್ಯರು, ಹುಬ್ಬಳ್ಳಿಯ ಪೂಜ್ಯ ಚಿದ್ರೂಪಾನಂದಸರಸ್ವತೀ, ಬೆಂಗಳೂರಿನ ವೇದಾಧ್ಯಾಯೀ ಶ್ರೀಸುಧಾಕರಶರ್ಮರು. . . . ಇವರೆಲ್ಲಾ ಬಂದು ನಡೆಸಿಕೊಡುತ್ತಿದ್ದ ಉಪನ್ಯಾಸಗಳು! ಅಬ್ಬಾ! ಒಂದೇ ಎರಡೇ!!
ಈಗಲೂ ಹಲವು ಮಿತ್ರರು ನನ್ನನ್ನು ಆಗಿಂದಾಗ್ಗೆ ಕೇಳುತ್ತಾರೆ ಯಾಕೆ ಉಪನ್ಯಾಸಗಳನ್ನು ನಡೆಸುವುದನ್ನು ನಿಲ್ಲಿಸಿ ಬಿಟ್ಟಿರಿ? ನಿಲ್ಲಿಸಿಲ್ಲ. ನನ್ನ ಕಾರ್ಯಚಟುವಟಿಕೆಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನಮ್ಮ ಮನೆ ಈಶಾವಾಸ್ಯಮ್ ನಲ್ಲಿ ಪ್ರತೀ ದಿನ ಸತ್ಸಂಗದಲ್ಲಿ ವೇದಭಾರತಿಯು ಇದೇ ಕೆಲಸವನ್ನು ಮಾಡುತ್ತಿದೆ-ಎನ್ನುತ್ತೇನೆ.
ಹೌದು ಶ್ರೀ ನಾರಾಯಣಾಚಾರ್ಯರ ಮಾತು ಎಷ್ಟು ಅರ್ಥಗರ್ಭಿತ! ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಇಂದಿನಿಂದ ಬಹುತೇಕ ದೇವಾಲಯಗಳಲ್ಲಿ ದುರ್ಗಾಮಾತೆಗೆ ಪ್ರತೀ ದಿನ ಒಂದೊಂದು ಅಲಂಕಾರ, ಹವನ-ಹೋಮಗಳು, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಜನರು ಸಾಲುಗಟ್ಟಿ ದುರ್ಗೆಯ ದರ್ಶನ ಪಡೆಯುತ್ತಾರೆ. ಉತ್ತಮ ಕಾರ್ಯವೇ ಆಗಿದೆ. ಆದರೆ ಅಷ್ಟೇ ಸಾಕೇ? ಇವೆಲ್ಲವೂ ನಾವು ನೆಮ್ಮದಿಯಾಗಿರಬೇಕೆಂದು ಮಾಡುವ ದೇವತಾ ಕಾರ್ಯಗಳು ತಾನೇ? ಆದರೆ ನಿಜವಾಗಿ ನಮ್ಮ ಮನೆಗಳಲ್ಲಿ ನೆಮ್ಮದಿ ಇದೆಯೇ? ಸುಖ ಇದೆಯೇ? ಆನಂದಕ್ಕೆ ಆಸ್ಪದ ಇದೆಯೇ? ಮಕ್ಕಳೇ ಮನೆಗೆ ಆಸ್ತಿ ಅಲ್ಲವೇ? ಅವರು ನಿಜವಾಗಿ ಆಸ್ತಿಯಾಗಿದ್ದಾರಾ? ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕಂತೆ ಅವರಿಲ್ಲವೆಂದಾದರೆ ತಪ್ಪು ಯಾರದ್ದು? ಮಕ್ಕಳದ್ದೇ? ಅಥವಾ ಪೋಷಕರದ್ದೇ?
ದೇವಾಲಯಗಳಲ್ಲಿ ನೋಡಿ, ಸಾಮಾನ್ಯವಾಗಿ ನಲವತ್ತು ವಯಸ್ಸಿನ ಮೇಲ್ಪಟ್ಟವರಿಂದಲೇ ತುಂಬಿರುತ್ತದೆ! ಉಪನ್ಯಾಸ ಕಾರ್ಯಕ್ರಮಗಳಿಗೆ ಬರುವವರು ಯಾರು? ಕಿವಿ ಮಂದವಾಗಿರುವ             ದೃಷ್ಟಿ ಕಮ್ಮಿಯಾಗಿರುವ! ಅರವತ್ತು ದಾಟಿದ ಎಪ್ಪತ್ತು ಎಂಬತ್ತರ ವೃದ್ಧರಿಗೆ ಉಪನ್ಯಾಸ! ಅವರಿಗೆ ವಿಷಯ ಯಾವುದಿರಬೇಕೋ ಅದಿರುತ್ತದೆ. ಆದರೆ ನಮ್ಮ ಯುವಕರು ಉಪನ್ಯಾಸಗಳಿಗೆ ಬರುತ್ತಾರಾ? ಬರುವುದಿಲ್ಲವಾದರೆ ಕಾgಣ ಏನು? ಅವರನ್ನು ಆಕರ್ಷಿಸುತ್ತಿರುವ ವಿಷಯಗಳು ಯಾವುವು? ಆಕರ್ಷಣೆಗೆ ಒಳಗಾಗುವ ವಿಷಯಗಳ ಪ್ರಭಾವ ಏನು? ಯುವಕರು ನಮ್ಮ ದೇಶದ ಸಂಪತ್ತೆಂಬುದು ನಮ್ಮ ನೆಚ್ಚಿನ ಪ್ರಧಾನಿಯವರ ಆಶಯ. ಆದರೆ ಎಷ್ಟು ಯುವಕರು ನಮ್ಮ ದೇಶಕ್ಕೆ ಆಸ್ತಿಯಾಗಿದ್ದಾರೆ! ಯುವ ಶಕ್ತಿಯ ಎಷ್ಟುಭಾಗ ದೂರದರ್ಶನದ ಮುಂದೆ ಕ್ರಿಕೆಟ್ ಪಂದ್ಯ ನೋಡುತ್ತಲೋ, ಅಂತರ್ಜಾಲದಲ್ಲಿ ಬೆತ್ತಲೆದೃಶ್ಯ ನೋಡುವುದರಲ್ಲೋ ಕಳೆದು ಹೋಗಿದೆ? ನಮ್ಮ ದೇಶದ ಎಷ್ಟು ಯುವಕರಿಗೆ ದೇಶಭಕ್ತಿ ಇದೆ? ದೇಶಕ್ಕಾಗಿ ನನ್ನ ಬದುಕು !! ಎನ್ನುವ ಮನೋಭಾವದ ಯುವಕರೆಷ್ಟು ಜನರಿದ್ದಾರೆ!!
ದೇಶದ ಇಂತಾ ದೊಡ್ದ ಯುವಸಂಪತ್ತಿನ ಉಪಯೋಗ ದೇಶಕ್ಕೆ ಸರಿಯಾಗಿ ಆಗಬೇಡವೇ? ಹಳ್ಳಿಗಳಲ್ಲಂತೂ ಪುಡಾರಿಗಳ ಹಿಂದೆ ಸುತ್ತುವ ಯುವಕರನ್ನು ನೋಡಿದಾಗ ಬಲು ದುಃಖವಾಗುತ್ತದೆ. ಇವರಲ್ಲಿ ಜಾಗೃತಿ ಮಾಡುವುದು ಯಾವಾಗ? ಯಾರು ಜಾಗೃತಿ ಕೆಲಸ ಮಾಡಬೇಕು!
ನಿಜವಾಗಿ ಅಂತಾ ಕೆಲಸ ಕೂಡ ನಡೆಯುತ್ತಿದೆ. ರಾ.ಸ್ವ. ಸಂಘ , ಪತಂಜಲಿ ಯೋಗ ಪೀಠ, ರಾಮಕೃಷ್ಣ ಮಿಷನ್, ಮುಂತಾದ ಸಂಘಟನೆಗಳು ಮಾಡುತ್ತಿವೆ. ಆದರೂ ಸಾಲದು. ನಮ್ಮ ಜನಸಂಖ್ಯೆಗೆ ಹೋಲಿಸಿದಾಗ ಕೆಲಸದ ವೇಗ ಇನ್ನೂ ಹೆಚ್ಚಬೇಕು.
ನಾರಾಯಣಾಚಾರ್ಯರು ತಮ್ಮ ಲೇಖನದಲ್ಲಿ  ದೇಶವನ್ನು ಕಾಡುತ್ತಿರುವ ಹಲಾವಾರು ಸಮಸ್ಯೆಗಳ ಬಗ್ಗೆ ಓದುಗರ ಕಣ್ ತೆರೆಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಂದು ವಿಷಯಗಳೂ ಒಂದು ಲೇಖನ ಬರೆಯುವಷ್ಟು ಮಹತ್ವ ಉಳ್ಳ ವಿಷಯಗಳೇ ಆಗಿವೆ. ಕೊನೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅವರ ಒಂದು ಸಲಹೆ ಗಮನಾರ್ಹ.  ಸಾಮಾಜಿಕ ಸಾಮರಸ್ಯಕ್ಕಾಗಿ ನಾವು ಹಳಬರ ಮಾರ್ಗದರ್ಶನಕ್ಕೆ ಮೊರೆ ಹೋಗಬೇಕು. ಶ್ರೀರಾಮಕೃಷ್ಣ, ವಿವೇಕಾನಂದ,ನಾರಾಯಣಗುರು, ಫುಲೆ, ಅಮೃತಾನಂದಮಯೀ. ಚಿನ್ಮಯಾನಂದ, ದಯಾನಂದರ ವಿಚಾರಧಾರೆಗಳು ಒಟ್ಟಾಗಿ ಇತ್ತ ಶ್ರಮಿಸಬೇಕು
ಈ ಮೇಲಿನ ಸಲಹೆಯಿಂದ ನನಗೆಷ್ಟು ಸಮಾಧಾನವಾಗಿದೆ ಎಂದರೆ ನಾವೀಗ ವೇದಭಾರತಿ ಮತ್ತು ಪತಂಜಲಿ ಯೋಗ ಪೀಠ ಒಂದು ವೇದಿಕೆಯಲ್ಲಿ ಎಲ್ಲರಿಗಾಗಿ ವೇದ, ಎಲ್ಲರಿಗಾಗಿ ಯೋಗ ಎಂಬ ಉದ್ದೇಶದೊಡನೆ ಚಟುವಟಿಕೆಯನ್ನು ಈ ವರ್ಷ ವಿಶ್ವ ಯೋಗದಿನದಿಂದ ಆರಂಭಿಸಿದ್ದೇವೆ. ಈಗಾಗಲೇ ನೂರಾರು ಜನರಿಗೆ ಯೋಗದ ತರಬೇತಿ, ವೇದದ ಅರಿವು ಮೂಡಿಸುವ ಕೆಲಸ ಸಾಗಿದೆ  ವೇದ-ಯೋಗ ಸಂಗಮದ ಹೆಸರಲ್ಲಿ. ಜನರ ಸಹಕಾರ ಪಡೆದು ನಮ್ಮ ಕಾರ್ಯವೇಗವನ್ನು ಹೆಚ್ಚಿಸಬೇಕೆಂಬ ಉದ್ದೇಶವೂ ಇದೆ.
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ

Monday, October 12, 2015

ವೈದಿಕ ಧರ್ಮಾಭಿಮಾನೀ ಮಿತ್ರರೇ, ನಿಮ್ಮಲ್ಲೊಂದು ಮನವಿ.

ವೈದಿಕ ಧರ್ಮಾಭಿಮಾನೀ  ಮಿತ್ರರೇ,
ನಿಮ್ಮಲ್ಲೊಂದು ಮನವಿ.
ವೈದಿಕ ಧರ್ಮವು ನಿಂತ ನೀರಲ್ಲ. ಅದು ಗಂಗೆ. ಯಾವಾಗಲೂ ಹರಿಯುತ್ತಿದ್ದು ಅದರ ಸಂಪರ್ಕಕ್ಕೆ ಬಂದದ್ದನ್ನೆಲ್ಲಾ ಪಾವನ ಗೊಳಿಸುತ್ತಾ ತನ್ನನ್ನೂ ಕಾಲಕಾಲಕ್ಕೆ ಪವಿತ್ರಗೊಳಿಸಿಕೊಳ್ಳುತ್ತಾ ಸದಾಕಾಲ ಜಗತ್ತಿಗೆ ಹಿತವನ್ನುಂಟುಮಾಡುವುದೇ ವೈದಿಕ ಧರ್ಮದ ವೈಶಿಷ್ಠ್ಯ.
ವೇದವೇ ನಮಗೆ ಆಧಾರ. ಆದರೆ ವೇದಕ್ಕೆ ವಿರುದ್ಧವಾದ ಹಲವು ಆಚರಣೆಗಳೂ ಸಹ ಕಾಲಗತಿಯಲ್ಲಿ ರೂಢಿಯಲ್ಲಿ  ಸೇರಿಹೋಗಿರುವುದು ಸುಳ್ಳಲ್ಲ. ಅವುಗಳಲ್ಲಿ ಕೆಲವು ಯಾರಿಗೂ ಹಾನಿಮಾಡದೆ ಆಚರಿಸುವವನಿಗೆ ನೆಮ್ಮದಿ ಕೊಟ್ಟಿದ್ದರೆ  ಇನ್ನು ಕೆಲವು ಮಾನವೀಯತೆಗೇ ಕೊಡಲಿ ಪೆಟ್ಟು ಕೊಡುವಂತಹ ಆಚರಣೆಗಳು !
ಉದಾಹರಣೆಗೆ ವಿಗ್ರಹಾರಾಧನೆ. ಎಲ್ಲಿಯವರಗೆ ಇದು ವ್ಯಕ್ತಿಯ ನಿತ್ಯಬದುಕಿನಲ್ಲಿ ಮನಸ್ಸಿನ ನೆಮ್ಮದಿಗೆ ಅಗತ್ಯವೆನಿಸಿ ಆಚರಿಸಲ್ಪಡುತ್ತದೋ ಅಲ್ಲಿಯ ವರಗೆ ಈ ಬಗ್ಗೆ ಚರ್ಚೆ ಅನಗತ್ಯ. ಯಾವಾಗ ದೇವಾಲಯಗಳಲ್ಲಿ ವ್ಯಾಪಾರೀ ಮನೋಭಾವವಾಗಿ ಮಾರ್ಪಡುತ್ತದೋ ಆಗ ಅದು ಚರ್ಚೆಯ ವಿಷಯವಾಗುತ್ತದೆ. ಅಲ್ಲದೆ  ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ  ಕೆಲವರಿಗೆ ದೇವಾಲಯ ಪ್ರವೇಷವನ್ನೇ ನಿರ್ಬಂಧಿಸುವ ಪದ್ದತಿಯು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಕಾರಣ ವಾಗುತ್ತದೆ

ಮೇಲು-ಕೀಳು ಭಾವನೆ :
 ಎಲ್ಲರನ್ನೂ ಸಮಾನವಾಗಿ ಕಾಣುವ ಹಲವು ವೇದ ಮಂತ್ರಗಳಿದ್ದರೂ ಸಮಾಜದಲ್ಲಿ ಮೇಲು-ಕೀಳು ಭಾವನೆ ಪೂರ್ಣವಾಗಿ ಮಾಯವಾಗಿಲ್ಲ.

ವ್ರತ-ಕತೆಗಳು :

ಹಿಂದಿನಿಂದ ನಡೆದುಬಂದಿರುವ ಕೆಲವು ವ್ರತಕತೆಗಳಿವೆ. ಉದಾಹರಣೆಗೆ ವರಮಹಾಲಕ್ಷ್ಮೀ ವ್ರತ, ಗೌರಿ-ಗಣೇಶ ವ್ರತ, ಅನಂತ ಪದ್ಮನಾಭವ್ರತ. ಇವುಗಳನ್ನು ಕೆಲವರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿದ್ದಾರೆ. ಅದು ಅವರ ನಂಬಿಕೆ. ಆದರೆ ಇತ್ತೀಚೆಗೆ ಸಂಕಷ್ಟಹರ ಗಣಪತಿ ವ್ರತದಂತಾ ಕೆಲವು ಸಾಮೂಹಿಕ ವ್ರತಗಳು ಆರಂಭವಾಗಿವೆ. ಇವು ಸಹ ಚರ್ಚೆ ಮಾಡಲು ಅರ್ಹವಾಗಿವೆ

ಮಡೆಉರುಳು :
ಇಂತಾ ಅವೈದಿಕ ಆಚರಣೆಯ ಬಗ್ಗೆ ಚರಿಚಿಸಬಾರದೇ?

ಇವಲ್ಲದೆ ಮನುಷ್ಯ-ಮನುಷ್ಯನಲ್ಲಿ ಭೇದಮಾಡುವ ಹಲವು ಆಚರಣೆಗಳು ಇನ್ನೂ ಜೀವಂತವಾಗಿವೆ. ಈ ಬಗ್ಗೆ ಆರೋಗ್ಯಕರವಾದ ಚರ್ಚೆಯಾಗಬಾರದೇ?

ಸಮಾಜದ ಎಲ್ಲಾ ಸಮಸ್ಯೆಗಳಿಗೂ ವೇದವಿರೋಧಿಗಳದ್ದು ಒಂದೇ ಪ್ರಹಾರ " ವೇದವೇ ಶೋಷಣೆಗೆ ಮೂಲ"

ಹೀಗೆ ಹೇಳುವಾಗ ಅವರಿಗೆ ವೇದದ ಸರಿಯಾದ ಅರಿವಿಲ್ಲವೆಂಬುದು ಸತ್ಯವಾದರೂ  ವೇದದ ಹೆಸರಿನಲ್ಲಿ ನಡೆದಿರುವ ಅವೈದಿಕ ಆಚರಣೆಗಳೇ ಅವರಿಗೆ ಆಹಾರವಾಗಿರುವ ಪರಮ ಸತ್ಯ.  ವೇದಕ್ಕೆ ವಿರುದ್ಧವಾಗಿ ಮಾನವೀಯತೆಗೆ ಧಕ್ಕೆ ತರುವ ಆಚರಣೆಗಳನ್ನು "ಮೌಢ್ಯ" ಎಂದರೆ ತಪ್ಪಾಗಲಾರದು. ಇಂತಹ ಮೌಢ್ಯಗಳನ್ನು ವೇದಾಭಿಮಾನಿಗಳೇ ವಿರೋಧಿಸಿ ಶುದ್ಧ ವೈದಿಕಾಚರಣೆಗಳನ್ನು ರೂಢಿಗೆ ತಂದರೆ ವೇದ ವಿರೋಧಿಗಳಿಗೆ ವಿರೋಧಿಸಲು ವಿಷಯವೇ ಸಿಗಲಾರದು, ಜೊತೆಗೆ ಸಮಾಜದಲ್ಲಿ ಸಮರಸದಿಂದ , ನೆಮ್ಮದಿಯಾಗಿ ಬಾಳಲು ದಾರಿ ತೆರೆದುಕೊಳ್ಳುತ್ತದೆ.
ಈ ದಾರಿಯಲ್ಲಿ ಚರ್ಚೆ ಮಾಡಲು ಬರುವಿರಾ?

ಈ ಸಂಧಿಕಾಲದಲ್ಲಿ ನಾವಿಂತಾ ಚರ್ಚೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಇನ್ನೂ ದೊಡ್ದ ಪೆಟ್ಟು ಬೀಳಬಹುದು.
ಹೀಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ "ಚಿಂತನ-ಮಂಥನ " ನಡೆಸಬೇಕೆಂಬ ಇಚ್ಛೆ ನನ್ನದು. ಹತ್ತಾರುಜನರ ಸಹಮತ ಸಿಕ್ಕರೆ ಅದಕ್ಕೆ ಸರಿಯಾದ ರೂಪು ರೇಶ ಕೊಟ್ಟು, ಅದಕ್ಕೊಂದು ಸ್ಥಳ, ದಿನ ಎಲ್ಲವನ್ನೂ ಅಂತಿಮಗೊಳಿಸಿದರಾಯ್ತು.

ನಾಲ್ಕೈದು ಗಂಟೆಗಳ ಕಾರ್ಯಕ್ರಮವಾದರೂ ಆಗಬೇಕು. ಅದನ್ನು ಯಾವ ಬ್ಯಾನರ್ ನಲ್ಲಿ ಮಾಡ ಬೇಕೆಂಬುದನ್ನು ಮುಂದೆ ತೀರ್ಮಾನಿಸಬಹುದು. ಇಂದಿನ ಸಮಾಜಕ್ಕೆ ಒಪ್ಪುವಂತೆ ಮಾರ್ಗದರ್ಶನ ಮಾಡಲು ಯಾರನ್ನಾದರೂ ಸ್ವಾಮೀಜಿಯವರನ್ನೋ, ಸಾಮಾಜಿಕ ಚಿಂತಕರನ್ನೋ ಮಾರ್ಗದರ್ಶನಕ್ಕೆ ಕರೆಸಬಹುದು

  ಹಾಸನದಲ್ಲಿ ಮಾಡಲು ಒಮ್ಮತ ದೊರೆತರೆ        ನೂರು  ಜನ ಅಭಿಮಾನಿಗಳು ಪಾಲ್ಗೊಂಡ ರೂ ಅವರಿಗೆ ಉಚಿತ    ಊಟೋಪಚಾರದ ಭಾಗ ನನಗಿರಲಿ.ಬೆಂಗಳೂರಿನಲ್ಲೂ  ಆಗಬಹುದು. ಅಲ್ಲಿ ಮಾಡಿದರೂ ವ್ಯವಸ್ಥೆಗೆ ನನ್ನ ಪ್ರಯತ್ನ ಇದ್ದೇ ಇರುತ್ತೆ.
ನಿಮ್ಮ ಅಭಿಪ್ರಾಯ ತಿಳಿಸುವಿರಾ?

Friday, October 2, 2015

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!!

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!! ಮನೆಯಲ್ಲೆಲ್ಲಾ  ರಕ್ತ ಸಂಪ್ರೋಕ್ಷಣೆ!!!!
ಆಂದ್ರದ ಪ್ರಕಾಶಮ್ ಜಿಲ್ಲೆಯ ಪೋಕೂರಿನಲ್ಲಿ ನಡೆದಿರುವ ಬರ್ಬರ ಕೃತ್ಯ. ಬರ್ಬರವಾಗಿ ಮಗುವನ್ನು ಕೊಂದ ರಾಕ್ಷಸನ ಹೆಸರು ತಿರುಮಲರಾವ್. ಮಂತ್ರವಾದಿಯಂತೆ.
ಕಾಳಿಗೆ ಆಹುತಿಯಂತೆ!!!!

ಈ ರಕ್ಕಸನನ್ನು ಆ ಊರಿನ ಜನರು ಮರಕ್ಕೆ ಕಟ್ಟಿ   ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟರು. ಪೋಲೀಸರು ಬಂದು ಇವನ ಪ್ರಾಣ  ಉಳಿಸಿದರು.
ಗಾಂಧಿ ಜಯಂತಿಯ ಹೆಸರಲ್ಲಿ ಇಂದು ಪ್ರಾಣಿ ವಧೆ ನಿಷೇಧ! ಮನುಷ್ಯಹತ್ಯೆ ನಡೆಯಿತು!!

ಇಂದಿಗೂ "ಅಶ್ವಮೇಧ" ಎಂದರೆ ಯಜ್ಞಕ್ಕೆ ಕುದುರೆಯನ್ನು ಬಲಿ ಕೊಡಲೇ ಬೇಕೆನ್ನುವ ಪಂಡಿತೋತ್ತಮರೆನ್ನುವವರು ಈಗಲೂ ಇದ್ದಾರೆ!! ಹಾಸನದಲ್ಲಿ ನಡೆದ ಅಶ್ವಮೇಧಯಾಗ ನಡೆಸಲು ಬಂದಿದ್ದ    ಐದು ಜನ ಪಂಡಿತರೊಡನೆ ನಾನು ಅಶ್ಚಮೇಧದ ಅಹಿಂಸಾ  ವಿವರಣೆಯನ್ನು ವೇದದ ಆಧಾರದಲ್ಲಿ ವಿವರಿಸಿದಾಗ ಅದನ್ನು ಸ್ವೀಕರಿಸುವ ಮಾನಸಿಕತೆ ಇಲ್ಲದ ಪಂಡಿತೋತ್ತಮರು ವಿತಂಡವಾದಮಾಡಲು ಹೊರಟಾಗ ನಾನು ಅವರಿಗೆ ಕೇಳಿದ್ದು ಒಂದೇ ಪ್ರಶ್ನೆ ....

ಪ್ರಾಣಿ ಕೊಲೆಮಾಡಕೂಡದೆಂಬುದಕ್ಕೆ ನಾನು ನಾಲ್ಕಾರು ವೇದಮಂತ್ರಗಳ ಆಧಾರ ಕೊಟ್ಟಿದ್ದೇನೆ. ಕುದುರೆಯನ್ನಾಗಲೀ, ಹಸುವನ್ನಾಗಲೀ ಕೊಂದು ಅಶ್ವಮೇಧ/ಗೋ ಮೇಧ ಯಾಗಗಳನ್ನು ಮಾಡಲು ಯಾವ ವೇದ ಮಂತ್ರದಲ್ಲಿ ಹೇಳಿದೆ? ಆಧಾರ ಕೊಡಿ- ಎಂದಾಗ ನಾನು ನಿಮಗೆ ಅಂಚೆ ಮೂಲಕ ಕಳಿಸುವೆ ಅಥವಾ ಮೇಲ್ ಮಾಡುವೆ ಎಂದವರು ಇನ್ನೂ ಆ ಕೆಲಸ ಮಾಡಲೇ ಇಲ್ಲ!!!!!

ಮೌಢ್ಯವಿರೋಧೀ ಕಾನೂನು ಮಾಡಬೇಕೆಂದಾಗ ಸಾರಾಸಗಟಾಗಿ ವಿರೋಧಿಸುವ ಬದಲು  ಮೌಢ್ಯವಿರೋಧಿ ಶಾಸನದ ವಿರುದ್ಧ ಮಾತನಾಡುವವರು ಯಾಕೆ  ಯಾವುದು ಮಾನವೀಯತೆಗೆ ವಿರೋಧವಾಗಿದೆ ಅವನ್ನು ನಿಶೇಧಿಸಿ ! ಎಂದು ಪಟ್ಟಿ ಮಾಡಿ ಸಲಹೆ ಕೊಡಬಾರದು?

ಹೌದು, ನಾನೂ ಒಪ್ಪುತ್ತೇನೆ. ಮೌಢ್ಯವಿರೋಧೀ ಶಾಸನಕ್ಕೆ ಬೆಂಬಲ ಕೊಡುವವರು ಹಿಂದು ಧರ್ಮವನ್ನೇ ಸಾರಾಸಗಟಾಗಿ ವಿರೋಧಿಸುವ ಗುಂಪು. ಆದರೆ ಹಿಂದು ಪರ ಸಂಘಟನೆಗಳ ಕರ್ತವ್ಯವೂ ಇದೆಯಲ್ಲವೇ? ಯಾವುದು ಮಾನವ ವಿರೋಧಿ ಎನ್ನಿಸುತ್ತದೆ-ಅದನ್ನು ಮೊದಲು ಹಿಂದು ಪರ ಸಂಘಟನೆಗಳೇ    ವಿರೋಧಿಸಿ ಹಿಂದುಗಳಲ್ಲಿ ಜಾಗೃತಿಯನ್ನೇಕೆ ಉಂಟುಮಾಡಬಾರದು?

ಯಾವುದೋ ತಾತನ ಕಾಲದಲ್ಲಿ  ಯಾವುದನ್ನೋ ಆ ಕಾಲಕ್ಕೆ ತಕ್ಕಂತೆ ಆಚರಣೆಗೆ ತಂದಿರಬಹುದು. ಇಂದಿಗೆ ಅದು ಎಷ್ಟು ಸರಿ! ಎಂಬ  ಚಿಂತನ-ಮಂಥನ ನಡೆಯಬೇಡವೇ?

RSS ನ ಪೂಜ್ಯ ಸರಸಂಘಚಾಲಕರು ಕೊಟ್ಟಿರುವ ಕರೆಯ ಬಗ್ಗೆ ಹಿಂದು ಪರ ಸಂಘಟನೆಗಳು ಚಿಂತನ-ಮಂಥನ ಆರಂಭಿಸಬೇಕಲ್ಲವೇ?

ಈಗ ಕಾಲ ಪಕ್ವವಾಗಿದೆ. ಹಿಂದು ವಿರೋಧಿಗಳ ಬಾಯಿ  ಮುಚ್ಚಿಸಬೇಕಾದರೆ ಅವರಿಗೆ ಮಾತನಾಡಲು ಸರಕು ಸಿಗದಂತೆ ಆಮೂಲಾಗ್ರವಾಗಿ ಶುದ್ಧೀಕರಣ ಕೆಲಸವನ್ನು ಹಿಂದು ಸಂಘಟನೆಗಳೇ ಮಾಡಬೇಕು. ನಮ್ಮ ಋಷಿಮುನಿಗಳ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಯಾವುದು ಮಾನವೀಯತೆಗೆ ವಿರುದ್ಧವಾಗಿದೆ ಅದನ್ನು ಬಿಡಲೇ ಬೇಕು.ಮಾನವೀಯತೆಗೆ ಪೂರಕ ವಾಗಿರುವ , ನೈತಿಕ ಮೌಲ್ಯಗಳನ್ನು ಹೆಚ್ಚಿಸುವ , ಮನುಷ್ಯನನ್ನು ಆತ್ಮೋನ್ನತಿಯತ್ತ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇ ಬೇಕು.
ಇದು ಕಾಲದ ಕರೆ.

Thursday, October 1, 2015

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ!

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ! ಶತಮಾನಗಳು ಎನ್ನುವುದಿಲ್ಲ.ಕಾರಣ ಸತ್ಯ ಗೋಚರ ಆಗುತ್ತಿದೆ.ಆದರೆ ನಿಧಾನವಾಗಿ ಆಗುತ್ತಿದೆ.ಹಲವು ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯಗಳು ಎಷ್ಟು ಆಳವಾಗಿ ಬೇರು ಬಿಟ್ಟಿವೆ! ಎಂದರೆ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದು ಮಹಾ ಪಾಪ! ಎಂದು ಮನಸ್ಸು ಭಯಭೀತವಾಗುತ್ತದೆ!! ಆದರೆ ವೇದವು ಹೇಳುತ್ತದೆ-ಸತ್ಯವನ್ನು ಆವಿಷ್ಕಾರ ಮಾಡು! ಸತ್ಯವು ಗೋಚರವಾದರೆ ಅದೆಷ್ಟು ನಿರ್ಭೀತರಾಗಿರಬಹುದು!

ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
 
ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ ||
[ಋಕ್-೧.೮೬.೯]

ಸತ್ಯಶವಸಃ = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷಃ = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.

ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                        
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವಃ ಅಂದರೆ ನಾಳೆ. ಅಶ್ವಃ ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲವಾಗುವವರು ನಾವು ನೀವು.
ಇನ್ನು "ಮೇಧೃ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

Tuesday, September 29, 2015

ಅಗ್ನಿಹೋತ್ರ ಕಲಿಸಿ- ಮುಸ್ಲಿಮ್ ಸೋದರಿಯ ಕೋರಿಕೆ

ಒಬ್ಬ ಮುಸ್ಲಿಮ್ ಸೋದರಿ ನನಗೆ ಬರೆದಿರುವ ಪತ್ರ ನೋಡಿ. ಪತ್ರದಲ್ಲಿನ ಅಕ್ಷರಗಳ ತಪ್ಪನ್ನು ನೋಡಬೇಡಿ. ಭಾವನೆಯನ್ನು ನೋಡಿ.
---------------------------
ಧನ್ಯವಾದಗಳು ಸರ್, ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನಲ್ಲಿ ನಿಮ್ಮಿಂದ ಅಗ್ನಿಹೋತ್ರ ಹೋಮವನ್ನು ಅಪೇಕ್ಷಿಸುತ್ತೇನೆ. ಅಗ್ನಿಹೋತ್ರದಿಂದ ಆಗುವ ಉಪಯೋಗವನ್ನು ಜನಸಾಮ್ಯರಿಗೂ ಅರಿವಾಗಬೇಕಾಗಿದೆ.
- Reehana Firdose 
     --------------------------------------------
ನಮಸ್ತೆ,
ಹಾಸನ ವೇದಭಾರತೀ ಟೀಮ್ ಸಾಗರಕ್ಕೂ ಬಂದು ಅಗ್ನಿಹೋತ್ರಮಾಡಿಸಿ ಅದರ ಪರಿಚಯ ಮಾಡಿಸಲು ತೊಂದರೆಯೇನಿಲ್ಲ. ಅಲ್ಲಿ ಆರ್ಗನೈಸ್ ಮಾಡುವ ವ್ಯಕ್ತಿಗಳು ಬೇಕು. ನಿಮ್ಮಿಂದ ಸಾಧ್ಯವೇ ತಿಳಿಸಿ. ಅದಕ್ಕೆ ನೀವು ವೇದಭಾರತಿ ಕಾರ್ಯಕರ್ತರಿಗೆ ಯಾವ ಶುಲ್ಕ ಕೊಡಬೇಕಾಗಿಲ್ಲ. ಅಗ್ನಿಹೋತ್ರದ ಪೂರ್ಣ ವ್ಯವಸ್ಥೆ ನಾವೇ ಉಚಿತಮಾಡುತ್ತೇವೆ. ಜನರನ್ನು ಸೇರಿಸುವ ಜವಾಬ್ದಾರಿ ಸ್ಥಳೀಯರದ್ದು
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ​
------------------------------------------------
ನಮಸ್ತೆ ಸರ್,
ನಾನು ಒಬ್ಬ ಮುಸ್ಲಿಂ ಹುಡಗಿಯಾಗಿದ್ದು, ಪ್ರಸ್ತುತವಾಗಿ ಸಾಗರದಲ್ಲಿ ಕಂಪ್ಯೂಟರ್ ಆಫ್ ರೇಟರ್ ಆಗಿ ಕೆಲಸ ಮಾಡುತ್ತಿದ್ದೆನೇ ಬಿ.ಎ. ಡಿಗ್ರಿ ಆಗಿದೆ. ನನ್ನಗೆ ಹಿಂದೂ ಧರ್ಮದ ಮೇಲೆ ಅಪಾರವಾದ ಪ್ರೀತಿ ಹಾಗೂ ಅಭಿಮಾನವಿದೆ. ಹಾಗಾಗಿ ಅನೇಹ ಪುಸ್ತಕಗಳನ್ನು ಓದುತ್ತಿರುತ್ತೇನೆ. ಹಿಂದಿನ ಸಂಪ್ರಧಾಯಗಳು ನಮಗೆ ಎಷ್ಟು ಆರೋಗ್ಯ ಹಾಗೂ ಒಳೆಯ ಜೀವನವನ್ನು ನೀಡುತ್ತವೆ ಎಂಬ ಬಗ್ಗೆ ಸ್ವಲ್ಪಮಟ್ಟಿಗೆ ಅರಿತಿರುತ್ತೇನೆ. ಇಗಿನ ಕಾಲದಲ್ಲಿ ಆನೇಕರು ಆನರೋಗ್ಯದಿಂದ ಬಳಲುತ್ತಿರುತ್ತಾರೆ. ವಿವಿಧ ವಿವಿಧವಾದ ಕಾಯಿಲೆಗಳು, ಮಾನಸಿಕ ನೆಮ್ಮದಿ ಇಲ್ಲದೇ ಮನ್ಸ್ ಶಾಂತಿಯಿಲ್ಲದೆ ಸುಂದರವಾದ ಜೀವನವನ್ನು ಅನುಭವಿಸುವುದು ಜೀವನವನ್ನು ಕಳೆಯುವುದು ಕಷ್ಟಸಾಧ್ಯವಾಗಿದೆ. ನಾನು ಒಬ್ಬ ಸಾಮನ್ಯ ಹೆಣ್ಣಾಗಿರುವ ಕಾರಣ ನನ್ನಿಂದ ನಮ್ಮ ಜನರಿಗೆ ಏನು ಸಹಾಯ ಮಾಡಲು ಆಗದೆ ಇರುವುದರಿಂದ ನಿಮ್ಮಿಂದ ಏನಾದರು ನಮ್ಮ ಊರಿನ ಜನರಿಗೂ ಉಪಯೋಗವಗಬಹುದೇನೋ? ಎಂಬ ವಿಶ್ವಾಸದಿಂದ ನಿಮ್ಮಲ್ಲಿ ಮನವಿ ಮಾಡಿರುತ್ತೇನೆ. 

ಇಂತಿ ನಿಮ್ಮ ವಿಶ್ವಾಸಿ,

ರಿಹಾನ ಫೀರ್ಧೋಸ್,
ಸಾಗರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ.
------------------------------------------------------
 ನಮಸ್ತೆ,
ಸಾಗರದಲ್ಲಿನ ಯಾರಾದರೂ ಮಿತ್ರರ ಸಹಕಾರ ಪಡೆದು ಅಗ್ನಿಹೋತ್ರ ಶಿಬಿರ ಒಂದನ್ನು ನಡೆಸೋಣ ಭಗಿನೀ. ನಿಮ್ಮ ಆಪೇಕ್ಷೆಗೆ ಬಹಳ ಸಂತೋಷವಾಗಿದೆ. ನಿಜವಾಗಿ ಅಗ್ನಿಹೋತ್ರವು ಮಾನವೆಲ್ಲರೂ   ಮಾಡಬೇಕಾದ ದೈನಂದಿನ ವಿಧಿ
-ಹರಿಹರಪುರಶ್ರೀಧರ್

Wednesday, September 23, 2015

ಮಿತ್ರರೊಬ್ಬರ ಪತ್ರ

ಎಷ್ಟಾದರೂ ಶ್ರಮವಾಗಲಿ, ನಮ್ಮ ಶ್ರಮದಿಂದ ಇಂತಾ ಒಬ್ಬರಿಗೆ ಉಪಕಾರವಾಗಿದ್ದರೆ ನಿಜವಾಗಿ ನಮ್ಮ ಶ್ರಮ ಸಾರ್ಥಕವಲ್ಲವೇ? ನೋಡಿ ಮಿತ್ರ ಹರೀಶ್ ಬಂಡ್ಸಾಲೆ ಯವರ ಸಂದೇಶ.


ನಮಸ್ತೆ... ನಾನು ಕಳೆದ ಕೆಲವು ವರ್ಷಗಳಿಂದ ವೇದಸುಧೆ blog ನ್ನು ಓದುತ್ತಿದ್ದೆನೆ. ನಿಮ್ಮ ಹಾಗೂ ಶರ್ಮರ ಮಾತುಗಳು ಬಹಳ ಚೆನ್ನಾಗಿ ಇರುತ್ತದೆ.

ಅನೇಕ ಸಂದರ್ಭಗಳಲ್ಲಿ ಬದುಕಿನ ಜಂಜಾಟಗಳಿಂದ ಪಾರಾಗಲು, ಜೀವನವನ್ನು ಒಳ್ಳೆಯ ತೆರನಾಗಿ ಬದುಕಲು ನಿಮ್ಮ ಮಾತುಗಳು ನನಗೆ ಸಹಕಾರಿ ಯಾಗದೆ.

Infact, the talks and articles posted at your blog has helped me to think from most straight point than from left wing or right wing assumptions. Veda has enlightened my vision towards our relegion and rich heritage .. thank you for that

ಹೃದಯ ಹೃದಯಗಳ ಬೆಸೆಯೋಣ

RSS ಸರಸಂಘಚಾಲಕರು ಏನು ಹೇಳಿದರೆಂಬುದು ನಮ್ಮ ಮುಖ್ಯ ಮಂತ್ರಿಗಳಿಗೆ ಅರ್ಥವಾಗಲಿಲ್ಲವೇ? ಅಥವಾ ಅದರಲ್ಲೂ ರಾಜಕೀಯವೇ? ಎಷ್ಟುದಿನ ನೀವು ಒಂದು ವರ್ಗವನ್ನು ಪ್ರತ್ಯೇಕವಾಗಿಟ್ಟುಕೊಂಡೇ ರಾಜಕಾರಣ  ಮಾಡಲು ಬಯಸುತ್ತೀರಿ ರಾಜಕೀಯ ಮುಖಂಡರೇ? ಸಾಮಾಜಿಕವಾಗಿ ಹಿಂದುಳಿದಿದ್ದ ವ್ಯಕ್ತಿಯನ್ನು ಮೇಲೇಳಲು ಬಿಡುವುದೇ ಇಲ್ಲವಲ್ಲಾ ನೀವು! ಇಷ್ಟಕ್ಕೂ  RSS ಸರಸಂಘಚಾಲಕರು ಹೇಳಿದ್ದೇನು?  ಒಂದು ವರ್ಗಕ್ಕೆ  ಶಾಶ್ವತವಾಗಿ ಮೀಸಲಾತಿಯನ್ನು ಕೊಡುತ್ತಾ ಆ ವರ್ಗವನ್ನು ಪ್ರತ್ಯೇಕವಾಗಿಟ್ಟು  ರಾಜಕಾರಣ ಮಾಡಬೇಕೋ, ಅಥವಾ ಮುಖ್ಯವಾಹಿನಿಯಲ್ಲಿ ಒಂದಾಗುವಂತೆ  ಸ್ವಾಭಿಮಾನದಿಂದ ಗೌರವದಿಂದ ಬಾಳುವಂತೆ ಮಾಡಬೇಕೋ? ಒಂದು ಕಡೆ ಮೀಸಲಾತಿಯ ಕೂಗು! ಮತ್ತೊಂದೆಡೆ ಅದನ್ನು  ವೈಭವೀಕರಿಸುತ್ತಾ ಹಿಂದುಳಿದ ವರ್ಗಕ್ಕೆ ಮಾಡುವ ಅವಮಾನ! ಮೀಸಲಾತಿ ಯಿಂದ ಶಿಕ್ಷಣ  ಪಡೆದು ಸರ್ಕಾರದಲ್ಲಿ ಒಂದು ಉನ್ನತ ಹುದ್ಧೆಯನ್ನು ಪಡೆದು ವೈದ್ಯನೋ, ಇಂಜಿನಿಯರೋ ಆದ ಮೇಲೆ ಆಕುಟುಂಬ ಸ್ವಾಭಿಮಾನದಿಂದ ಬಾಳುತ್ತಾ ಮೀಸಲಾತಿಯಿಂದ ಹೊರಬರಬಾರದೇ? ಕೇವಲ ಆ ಒಂದು ಜಾತಿಯಲ್ಲಿ ಹುಟ್ಟಿದನೆಂಬ ಕಾರಣಕ್ಕೆ ಶ್ರೀಮಂತಿಕೆ ಬಂದಮೇಲೂ ಮೀಸಲಾತಿ ಇರಲಿ, ಎಂಬುದು ಆ ವ್ಯಕ್ತಿಗೆ ಮಾಡುವ ಅವಮಾನ.ಅಷ್ಟೇ ಅಲ್ಲ  ಸರ್ಕಾರದಿಂದ ಸವಲತ್ತು ಸಿಗುತ್ತದೆಂದಾದರೆ ಎಂತಾ ಶ್ರೀಮಂತನೂ "ಬರುವುದು ಬರಲಿ" ಎನ್ನುವ ಸ್ವಭಾವ ಹೊಂದಿರುತ್ತಾನೆ. ಆದರೆ ನಾನೊಬ್ಬ ಈ ದೇಶದ ಮತ್ತು ಈ ಸಮಾಜದ ಜವಾಬ್ದಾರಿಯುತ ಪ್ರಜೆ ಎಂಬ ಭಾವನೆಯನ್ನು ಬೆಳೆಸುವುದು ಯಾವಾಗ?
ಈಗಲಾದರೂ ಮೀಸಲಾತಿಯ ಬಗ್ಗೆ ಒಂದು ಅಧ್ಯಯನ ಯಾಕೆ ನಡೆಯ ಬಾರದು? ಮೀಸಲಾತಿಯಿಂದ ಒಂದು ಉತ್ತಮ ಹುದ್ಧೆ ಪಡೆದಿರುವವರ ಶೇಕಡಾ ಎಷ್ಟು ಮಂದಿ  ಎಂಬ ಅಂಕಿ ಅಂಶ ಸಿಗಬಾರದೇ? ಹಾಗೆಯೇ ಇನ್ನೂ ಎಷ್ಟು  ಜನ ಹಿಂದುಳಿದ ಸ್ಥಿತಿಯಲ್ಲೇ ಇದ್ದಾರೆ? ಯಾಕೆ ಮುಂದುವರೆಯಲಿಲ್ಲ? ಅದಕ್ಕೆ ಕಾರಣವೇನು? ನಿಜವಾಗಿ ಮೀಸಲಾತಿಯ ಸೌಲಭ್ಯ ಎಷ್ಟು ಪಡೆದರು? ಅಥವಾ ಮೀಸಲಾತಿಯ ಹೆಸರಲ್ಲಿ ಬೇರೆ ಉಳ್ಳವರು ಸೌಲಭ್ಯ ಲಪಟಾಯಿಸಿದರೇ? ಒಂದು ಅಧ್ಯಯನ ಆಗಬಾರದೇ?
ಅಂತೆಯೇ ಮುಂದುವರೆದ ಜಾತಿಯಲ್ಲಿ ಹುಟ್ಟಿದವರಾದ ಮಾತ್ರಕ್ಕೆ ನರಕದಲ್ಲಿ ನೆರಳಬೇಕೆ? ಅವರ ಆರ್ಥಿಕ ಸ್ಥಿತಿಯ ನೈಜ ಅಧ್ಯಯನ ಆಗಬಾರದೇ?
ಸರಸಂಘಚಾಲಕರ ಮಾತಿನಲ್ಲಿ ಇದಕ್ಕಿಂತ ಹೆಚ್ಚು ಹೃದಯದ ಭಾವನೆಗಳಿದೆ. ಈ ದೇಶದ ಕಟ್ಟ ಕಡೆಯ ವ್ಯಕ್ತಿಯ  ಬದುಕಿನ ಮಟ್ಟ ಸುಧಾರಿಸಬೇಕೆಂಬ ಕಾಳಜಿ ಇದೆ. ಅದೇಕೆ ನಮ್ಮ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ?
ಬೇಕಾಗಿರುವುದು ಹೃದಯ ಹೃದಯಗಳ ಸಂಬಂಧ! ಸಾಮಾಜಿಕ ಸಾಮರಸ್ಯ! ಕೇವಲ ಸಂಘರ್ಷವಲ್ಲ. ಬಲವಂತದಿಂದ ಕಸಿದುಕೊಳ್ಳುವ ಪ್ರವೃತ್ತಿಯಿಂದ ಸಮಾಜದಲ್ಲಿ ಶಾಶ್ವತವಾಗಿ ವೈರತ್ವ ಉಳಿಯುತ್ತದೆ. ಆದರೆ ಹೃದಯ ಪರಿವರ್ತನೆ ಮಾಡಿ ಸಮಾನ ಬದುಕು ಎಲ್ಲರಿಗೂ ಸಿಗುವಂತಾಗಬೇಕು. ಎಲ್ಲಾ ಸಾಮಾಜಿಕ ಸಂಘಟನೆಗಳೂ ಹೃದಯವಂತಿಕೆಗೆ ಗಮನ ಕೊಟ್ಟಿದ್ದೇ ಆದರೆ ಇಂದಲ್ಲಾ ಇನ್ನು ಹತ್ತು ವರ್ಷದಲ್ಲಾದರೂ ಭಾರತದ ಎಲ್ಲರೂ ಗೌರವದಿಂದ ಬದುಕು ನಡೆಸುವಂತಾಗುತ್ತದೆ. ಇಲ್ಲವಾದರೆ  ಮೇಲು-ಕೀಳನ್ನು ಶಾಶ್ವತವಾಗಿ ಸಮಾಜದಿಂದ ದೂರಮಾಡುವುದು ಮರೀಚಿಕೆಯಾಗುತ್ತದೆ.

Those values that do not conform to scientific standards should be given up-RSS Chief



ಸಂಘದ ಸ್ವಯಂ ಸೇವಕರದು ಪ್ರಾಂಜಲ ಮನೋಭಾವ. ಹೃದಯದಲ್ಲಿರುವುದು ಮಾತಿನಲ್ಲಿ, ಮಾತಿನಂತೆ ನಡೆ. ಇದು ಸಂಘದ ಸ್ವಯಂ ಸೇವಕನ ಸಾಮಾನ್ಯ ಮನೋಭಾವ. ಯಾರೋ ಸಂಘವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳದ ವ್ಯಕ್ತಿಯ ಮಾತನ್ನು ಹಿಡಿದು ಕೋಲಾಹಲ ಮಾಡುವುದು ನಮ್ಮ ಮಾಧ್ಯಮಗಳ ಸ್ವಭಾವ. ಆದರೆ ಸಂಘದ ಅಗ್ರ ನಾಯಕರ ಅತ್ಯಂತ ಮುಖ್ಯವಾದ ಹೇಳಿಕೆಗಳಿಗೆ ಮಹತ್ವವನ್ನೇ ಕೊಡುವುದಿಲ್ಲ. ಕಳೆದ ನಾಲ್ಕಾರು ವರ್ಷಗಳಿಂದ ವೇದಭಾರತಿಯು ಯಾವ ದಿಕ್ಕಿನಲ್ಲಿ ಕೆಲಸಮಾಡುತ್ತಿದೆಯೋ ಅದನ್ನೇ ಸಂಘದ ಪೂಜ್ಯ ಸರಸಂಘಚಾಲಕರು ಒತ್ತಿ ಹೇಳಿದ್ದಾರೆ. ಸಂಘದ ನಿಷ್ಠಾವಂತ ಸ್ವಯಂ ಸೇವಕರೆಲ್ಲರ ಮನೋಭೂಮಿಕೆಯೂ ಇದೇ ಆಗಿದೆ. ಮಾನ್ಯ ಮೋಹನ್ ಜಿ ಭಾಗವತ್ ಅವರ ಮಾತನ್ನು ನೇರವಾಗಿ ನೀವೇ ಓದಿ..
RSS Chief Mohan Bhagwat (PTI Photo) RSS sarsanghachalak Mohan Bhagwat on Sunday called for a reassessment of Hindu religious values, saying that values that did not conform to scientific bases should be given up. Bhagwat, who was here to participate in a columnists’ conference on “Indian perspectives on women’s issues”, said, “There is a need to assess the prevalent Hindu religion along scientific lines. Those values that do not conform to scientific standards should be given up.” Indian society, he said, had maintained a tradition of rejecting redundant traditions and accepting “good things from all over the world” based on eternal life values. All issues and problems should be viewed through the Hindu life philosophy, Bhagwat also said. “The Hindu life view looks at men and women as two expressions of a single element. It therefore lays stress on unity instead of equality.” The values and significance of the Indian family system, Bhagwat said, stood strong despite numerous challenges, which was a testimony to the power of the Hindu society. “Recognising our roots and strengthening them will empower the society to combat westernisation and numerous such attacks,” Bhagwat said. The RSS chief said only the Hindu religion had the ability to move “creation” forward in a balanced way. Bhagwat is on a nine-day tour of the desert state. The two-day columnists’ conference, that concluded on Sunday, was part of his Jaipur itinerary. He will now head to Jodhpur for the remainder of his tour, participating in Sangh meetings till September 20. - See more at: http://indianexpress.com/article/india/gujarat/hindu-values-that-have-no-scientific-bases-should-be-given-up-rss-chief-mohan-bhagwat/#sthash.C9iykhng.Yniwbsnz.dpuf

Tuesday, September 22, 2015

ವೇದಭಾರತಿಯ ಚಟುವಟಿಕೆಗಳು ಜನರ ಪ್ರಶಂಸೆಗೆ ಪಾತ್ರವಾಗಿದೆ

ಸ್ನೇಹಿತರೇ,
ಹಲವು ದಿನಗಳಿಂದ ವೇದಸುಧೆಯಲ್ಲಿ ಬರೆಯಲಾಗಿರಲಿಲ್ಲ.ಕ್ಷಮೆ ಇರಲಿ. ಇತ್ತೀಚೆಗೆ ವೇದಭಾರತಿಯ ಚಟುವಟಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ವಿಶ್ವಹಿಂದು ಪರಿಷತ್ತಿನಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಸಾಮರಸ್ಯ ಪ್ರಮುಖ್ -ಹೊಣೆಯೂ      ನನ್ನ ಹೆಗಲಿಗೇರಿದೆ.
                   ನಾನು ವಿಶ್ವಹಿಂದು ಪರಿಷತ್ತಿನ ಚಟುವಟಿಕೆಗಳಿಗೆ ಮತ್ತೊಮ್ಮೆ ಕಾಲಿಟ್ಟಾಗ  " ವಿಶ್ವಹಿಂದು ಪರಿಷತ್ತಿನಲ್ಲಿ ವೇದಕ್ಕೆಲ್ಲಿ ಆಧ್ಯತೆ ಕೊಡುತ್ತಾರೆ! " ಎನ್ನುವ ಅನುಮಾನ ಮಿತ್ರರಾದ ವಾಸುದೇವರಾಯರಿಗೆ! ಅವರ ಮೂಲಕ ನಿಮಗೂ ಅನುಮಾನ ಪರಿಹರಿಸಬೇಕಾದ್ದು ನನ್ನ ಕರ್ತವ್ಯ ಅಲ್ಲವೇ? 
                 ಹಲವರಿಗೆ ನನ್ನ ಪೂರ್ವಾಪರ ಗೊತ್ತಿದೆ, ಎಂದು ಭಾವಿಸುವೆ. ಮೂಲತಃ RSS ಕಾರ್ಯಕರ್ತನಾದ ನಾನು ತಾರುಣ್ಯದಲ್ಲಿ ನೇರವಾಗಿ ಸಂಘಕಾರ್ಯದಲ್ಲಿ ತೊಡಗಿಸಿಕೊಂಡಿದ್ದವನು ನಂತರ ವಿಶ್ವಹಿಂದು ಪರಿಷತ್ತಿನ ಹಾಸನ ಜಿಲ್ಲಾ ಕಾರ್ಯದರ್ಶಿಯಾಗಿ ಐದಾರು ವರ್ಷಗಳು ಜವಾಬ್ದಾರಿ ನಿರ್ವಹಿಸಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಅಧ್ಯಾತ್ಮದತ್ತ ಒಲವು ಬಂದಿದ್ದರಿಂದ ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್ ಗೆ ಸೇರಿದ ಹಲವಾರು ಸ್ವಾಮೀಜಿಗಳಿಂದ ಆಗಿಂದಾಗ್ಗೆ ಉಪನ್ಯಾಸವನ್ನು ಏರ್ಪಾಡು ಮಾಡಿ ,ಈ ಕೆಲಸಗಳಲ್ಲಿ ನಾಲ್ಕಾರು ವರ್ಷ ಕಳೆಯುವಾಗ ಸಂಪರ್ಕಕ್ಕೆ ಬಂದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರ ನೇರವಾದ ಮಾತು ನನ್ನನ್ನು ಕಟ್ಟಿ ಹಾಕಿದ್ದಾಯ್ತು. ಆದರೂ ಸಂಘದಲ್ಲಿ ಪಡೆದಿದ್ದ ಸಂಸ್ಕಾರದ ಫಲವಾಗಿ ಶರ್ಮರೊಡನೆ ಸಾಕಷ್ಟು ಚರ್ಚೆಮಾಡುತ್ತಿದ್ದರೂ ಗೊತ್ತಿಲ್ಲದೆ ಅವರನ್ನು ಅನುಸರಿಸಲು ಶುರುವಾದೆ. ಅವರ ವಿಚಾರಗಳ ಪ್ರಚಾರಕ್ಕೆಂದು ಶುರುಮಾಡಿದ್ದು "ವೇದಸುಧೆ"
                 ವೇದಸುಧೆಯಲ್ಲಿ ಶರ್ಮರ ವಿಚಾರದ ಜೊತೆಗೆ ನನ್ನ ಅಂತರಾಳದ ವಿಚಾರವನ್ನೂ ಬಿಚ್ಚಿಡುತ್ತಾ ಸಾಗಿದ್ದಾಯ್ತು. ನಂತರ "ಎಲ್ಲರಿಗಾಗಿ ವೇದ"  ಎಂಬ ಉದ್ದೇಶವನ್ನಿಟ್ಟುಕೊಂಡು ಆರಂಭವಾದದ್ದು "ವೇದಭಾರತೀ" ಅದರ ಚಟುವಟಿಕೆ ಹೆಚ್ಚಾದಾಗ ಸಹಜವಾಗಿ ಬ್ಲಾಗ್ ನಲ್ಲಿ ಬರೆಯಲು ಸಮಯವೇ ಸಿಗಲಿಲ್ಲ.
                   ಯಾವಾಗ ವೇದಭಾರತಿಯ ಚಟುವಟಿಕೆಗಳು ಹೆಚ್ಚಾಯ್ತು ಸಹಜವಾಗಿ RSS ಹಿರಿಯರಿಗೂ ವೇದಭಾರತಿಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿ ಹಿರಿಯರ ಗೌರವಕ್ಕೆ ಪಾತ್ರವಾಯ್ತು. ಯಾವಾಗಲೂ ಸಂಘದ ಸಂಪರ್ಕ ಬಿಡದ ನನ್ನನ್ನು ಒಂದಲ್ಲಾ ಒಂದು ಸಂಘದ ಕಾರ್ಯಕ್ರಮಗಳಲ್ಲಿ ಬೌದ್ಧಿಕ್ [ಭಾಷಣ] ಮಾಡಲು  ಕರೆಯುವುದು ಹೆಚ್ಚಾಯ್ತು.  ಸಂಘದ ಹಿರಿಯರ ಸಂಪರ್ಕ ಹೆಚ್ಚಾದ ಪರಿಣಾಮ ವಿ.ಹಿಂ.ಪ ದ ಹೆಚ್ಚಿನ ಹೊಣೆಯನ್ನು ನಿರ್ವಹಿಸಬೇಕೆಂಬ ಸಲಹೆ ಬಂದಾಗ ನಿರಾಕರಿಸಲಿಲ್ಲ.
ಯಾಕೆ ಗೊತ್ತಾ?
ಅದಾಗಲೇ ವಿ.ಹಿಂ.ಪ  ಪ್ರಾಂತ ಭೈಠಕ್ ಹಾಸನದಲ್ಲಾದಾಗ   ವೇದಭಾರತಿಯವರು ನಡೆಸಿಕೊಟ್ಟ ಅಗ್ನಿಹೋತ್ರದಿಂದ ಅದರ ಉದ್ಘಾಟನೆಯಾಯ್ತು. ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು.ರಾಮಣ್ಣನವರಂತೂ "ಎಲ್ಲರಿಗಾಗಿ ವೇದ" ಎಂಬ ವೇದಭಾರತಿಯ ಫಲಕವನ್ನು ನೋಡಿ ಆನಂದ ಫುಲಕಿತರಾದರು. ಅವರ ಪ್ರವಾಸದಲ್ಲೆಲ್ಲಾ ವೇದಭಾರತಿಯ ಚಟುವಟಿಕೆಗಳನ್ನು ಹೆಮ್ಮೆಯಿಂದಲೇ ಹೇಳುತ್ತಾ ಹೋದರು.
               ಇದೆಲ್ಲಾ  ಚಟುವಟಿಕೆಗಳಿಂದ ವೈಯಕ್ತಿಕವಾಗಿ ನನಗೂ  "ಎಲ್ಲರಿಗಾಗಿ ವೇದ" ಎಂಬ ವೇದಭಾರತಿಯ ಉದ್ದೇಶವನ್ನು ವಿ.ಹಿಂ.ಪ ಮೂಲಕ ರಾಜ್ಯದಲ್ಲಿ ಪರಿಚಯಿಸಬೇಕೆಂಬ ಆಸೆ ಇತ್ತು. ಅದರಂತೆ ಕಳೆದ ತಿಂಗಳು ಶ್ರೀರಂಗಪಟ್ಟಣದಲ್ಲಿ ನಡೆದ  ರಾಜ್ಯಮಟ್ಟದ   ವಾನಪ್ರಸ್ಥೀ ಶಿಬಿರದಲ್ಲಿ  ಅಗ್ನಿಹೋತ್ರ ಮಾಡಿ ವೇದದ ಪರಿಚಯ ಮಾಡಿಕೊಟ್ಟಿದ್ದೇವೆ. ಬರುವ ಶುಕ್ರವಾರ ಬೇಲೂರಿನಲ್ಲಿ ನಡೆಯುವ " ಗ್ರಾಮ ವಿಕಾಸ ಕಾರ್ಯಕ್ರಮದ ರಾಜ್ಯ ಮಟ್ಟದ ಶಿಬಿರದಲ್ಲಿ ಸಾಮೂಹಿಕ ಅಗ್ನಿಹೋತ್ರ ಮಾಡುತ್ತಿದ್ದೇವೆ.
ಇಷ್ಟೆಲ್ಲಾ ಬರೆಯಲು ಕಾರಣವನ್ನು  ಮೊದಲೇ ತಿಳಿಸಿರುವೆ.
 ಹಿಂದೂಗಳನ್ನು ಸಂಘಟಿಸಲು ಹೊರಟಿರುವ  ವಿ.ಹಿಂ.ಪ ಸಹಜವಾಗಿ ನಮ್ಮ ಸಂಪ್ರದಾಯಗಳನ್ನು ಪೋಷಿಸಿಕೊಂಡೇ ನಡೆಯಬೇಕು. ಕೆಲವು ವೇದಕ್ಕೆ ಪೂರಕವಾದರೆ ಕೆಲವು ಪೂರಕವಲ್ಲ. ಆದರೂ ಮಾನವೀಯತೆಗೆ ಮಾರಕವಾಗದೆ ಸಮಾಜದಲ್ಲಿ ಸಾಮರಸ್ಯ ಉಳಿಸುವ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಾ   ಅಗ್ನಿಹೋತ್ರವನ್ನು ಹೆಚ್ಚು ಜನರು ಮಾಡುವಂತಾಗಬೇಕು, ವೇದದಲ್ಲಿನ ಮಾನವೀಯ ಮೌಲ್ಯಗಳಿಗೆ ಒತ್ತುಕೊಡುವ ಮಂತ್ರಗಳನ್ನು ಜನರಿಗೆ ಪರಿಚಯಿಸಬೇಕೆಂಬುದು ನನ್ನ ಅಂತರಾಳದ ಬಯಕೆ. ನನ್ನಾಸೆಗೆ ಭಗವಂತನ ಬೆಂಬಲವಿದೆ.ಅದರಿಂದಲೇ ವಿ.ಹಿಂ.ಪದಲ್ಲಿ ಹೆಚ್ಚಿನ ಹೊಣೆಯನ್ನು ಒಪ್ಪಿ ಕ್ರಿಯಾಶೀಲನಾಗಿರುವೆ.

ಮತ್ತೊಮ್ಮೆ ಭಾರತವು ಜಗದ್ಗುರುವಾಗಲು

ನೀವು ಬಲಪಂಥೀಯರಾದರೇನು, ಎಡಪಂಥೀಯರಾದರೇನು, ಮಧ್ಯ ಪಂಥೀಯರಾದರೇನು   ನಿಮಗೆ ಸಮಾಜದಲ್ಲಿ  ಸಮರಸತೆ ಬೇಕೋ ಅಥವಾ ನಿಮ್ಮ ಪಂಥ   ಬೆಳೆಯಬೇಕೋ?  ದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದಾಗ ಯಾರಿಗಾದರೂ ಹೀಗೆ ಅನ್ನಿಸದೇ ಇರದು.ದೇಶದಲ್ಲಿನ ಸಮಸ್ಯೆಗಳನ್ನು ಇನ್ನಷ್ಟು ಜಟಿಲಮಾಡಲು ಎಲ್ಲಾ ಪಂಥಗಳೂ ಸಾಕಷ್ಟು ಹೆಣಗುತ್ತಿವೆ. ಕಾರಣ ಮುಂದಿನ ಚುನಾವಣೆಯಲ್ಲಿ ಅದೇ ಸಮಸ್ಯೆಯೇ ಒಂದು ಪಕ್ಷಕ್ಕೆ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಯಾಗಬೇಕೆಂಬ ಇಚ್ಛೆ ಎಲ್ಲಾ ಪಕ್ಷಗಳಿಗೂ!  ಒಂದೊಂದು ಚಟುವಟಿಕೆಯ ಹಿಂದೆ ಒಂದೊಂದು ರಾಜಕಾರಣ!! ನಿಜವಾಗಿ ದೇಶದ ಜನರಲ್ಲಿ ಸಮರಸತೆಯನ್ನು ಬಯಸುವ ಜನರಿಗೆ ಕಿಮ್ಮತ್ತು ಸಿಗುವುದೇ ಇಲ್ಲ. ನಿಮ್ಮ ಪ್ರಾಮಾಣಿಕ ಸಮಾಜಸೇವೆ ಯಾರಿಗೆ ಬೇಕಿದೆ!!

            ರಾಷ್ಟ್ರದ ಸಮಗ್ರತೆಯ ಬಗ್ಗೆ , ಜನರ ಸಾಮರಸ್ಯದ ಬಗ್ಗೆ, ನೆಮ್ಮದಿಯ ಬಗ್ಗೆ ಕಿಂಚಿತ್ ಕಾಳಜಿಯಿಲ್ಲದ ಪಕ್ಷದ ಚಟುವಟಿಕೆಗಳ  ಬಗ್ಗೆ ಜನರು ಸೂಕ್ಷ್ಮವಾಗಿ ಗಮನಿಸಬೇಕು. ಜನರನ್ನು ಒಡೆದು ರಾಜಕಾರಣ ಮಾಡುತ್ತಾ ದೇಶವನ್ನಾಳುವ ಕನಸು ಕಾಣುವವರ ಬಗ್ಗೆ  ಜನರು ಎಚ್ಚರ ವಹಿಸಬೇಕು. ಭಾರತದಲ್ಲಿರುವ ಎಲ್ಲರೂ ಸೋದದರೆಂಬ ಭಾವನೆಗೆ ಇಂಬು ಕೊಡುವಂತಾಗಬೇಕು. ಈ ಮಣ್ಣಿನಲ್ಲಿ ಹುಟ್ಟಿ, ಇಲ್ಲಿಯ ನೀರು ಕುಡಿದು, ಇಲ್ಲಿಯೇ ಬದುಕಬೇಕಾಗಿರುವ ಎಲ್ಲರೂ ತಾಯಿ ಭಾರತಿಯ ಮಕ್ಕಳೆಂಬ ಒಂದೇ ಮಂತ್ರವನ್ನು ಹೃದಯಲ್ಲಿಟ್ಟುಕೊಂಡು, ಪರಸ್ಪರ ಸೌಹಾರ್ಧಯುತವಾಗಿ ಬಾಳಬೇಕು. ಇದಕ್ಕೆ ಬೇಕಾಗಿರುವುದು ಸ್ಥಳೀಯವಾಗಿ ಕುಳಿತು ಸೌಹಾರ್ಧತೆಯಿಂದ ಚರ್ಚಿಸಿ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ನಡೆಯುವ ಸ್ವಭಾವ. ಜಗತ್ತು   ವಿಜ್ಞಾನದ ಯುಗದಲ್ಲಿ ದಾಪುಗಾಲು ಹಾಕುತ್ತಾ ಸಾಗಿದೆ.ಆದರೂ ಜನರ ನೆಮ್ಮದಿ ಹಾಳಾಗಿದೆ.  ಪ್ರಪಂಚವು ಭಾರತದತ್ತ ನೆಮ್ಮದಿಗಾಗಿ ನೋಡುತ್ತಿದೆ! ನಮ್ಮ ಋಷಿಮುನಿಗಳ ಮಾತಿಗೆ ಮಾನ್ಯತೆ ಸಿಗುತ್ತಿದೆ.

ನಾನು ಭಗವಂತನ ಸ್ವರೂಪ|
ನೀನೂ ಅದೇ ಆಗಿದ್ದೀಯೆ|

ಇದು ನಮ್ಮ ಋಷಿ ಮುನಿಗಳ ಮಹಾ ವಾಕ್ಯ. ಈ ಒಂದು ಸರಳ ಮಾತುಗಳು ಜೀವನದಲ್ಲಿ ಕಾರ್ಯರೂಪಕ್ಕೆ ಬಂದರೆ ಜಗತ್ತಿನಲ್ಲಿ  ಸಾಮರಸ್ಯದ   ಕ್ರಾಂತಿಯಾದೀತು!! ತಾಯಿ ಭಾರತಿಯ ಗೌರವವು ಜಗತ್ತಿನಲ್ಲಿ ಹೆಚ್ಚಿ ಮತ್ತೊಮ್ಮೆ ಭಾರತವು ಜಗದ್ಗುರುವಾಗಲು ಈ ಸರಳ ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಭೇದ ಭಾವಕ್ಕೆ ಆಸ್ಪದವೇ ಇಲ್ಲ...

ಸರ್ವೇ ಭವಂತು ಸುಖಿನಃ
ಸರ್ವೇ  ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖ ಭಾಗ್ಭವೇತ್ ||

ಓಂ ಶಾಂತಿಃ ಶಾಂತಿಃ ಶಾಂತಿಃ

Thursday, July 9, 2015

ವೇದಭಾರತೀ ಸತ್ಸಂಗದಲ್ಲಿ ನಡೆಯುತ್ತಿರುವ ವೇದಪಾಠದ ಒಂದು ಕ್ಲಿಪ್







ಹಾಸನದ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗವು ಹಲವರನ್ನು ಹತ್ತಿರ ತಂದಿದೆ. ಅಂತವರಲ್ಲಿ ನಿನ್ನೆ ಬಂದು ತಮ್ಮ ಮೆಚ್ಚುಗೆ ವ್ಯಕ್ತಪಟಿಸಿದ ನಿವೃತ್ತ  ಅಧೀಕ್ಷಕ ಇಂಜಿನಿಯರ್ [KUWSS] ಶ್ರೀ ರಂಗಸ್ವಾಮಿಯವರು. ಅವರು ಬೆಳಗಾಮ್ ನಿಂದ ತಮ್ಮ ತಂಗಿಮನೆಗೆ ಬಂದಿದ್ದರು. ನಮ್ಮ ಚಟುವಟಿಗೆ ಅವರಿಗೆ ಎಷ್ಟು ಇಷ್ಟವಾಯಿತೆಂದರೆ ನಮ್ಮನ್ನು ಬೆಳಗಾಮ್ ಗೆ ಆಹ್ವಾನಿಸಿದ್ದಾರೆ. ಅಲ್ಲೊಂದು ಅಗ್ನಿಹೋತ್ರ ಶಿಬಿರ ನಡೆಯಲಿದೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅವರ ಮಿತ್ರರಾದ ಕೆ.ಆರ್.ನಗರದ ಡಾ|| ಶಿವಲಿಂಗಪ್ಪನವರಿಗೆ ಕರೆಮಾಡಿ ಅವರನ್ನು ಪರಿಚಯ ಮಾಡಿಸಿ ಕೆ.ಆರ್.ನಗರದಲ್ಲಿ ಅವರು ನಡೆಸುವ ಯೋಗ ತರಬೇತಿ ಶಿರದಲ್ಲಿ ಅಗ್ನಿಹೋತ್ರ ನಡೆಸಿಕೊಡಲು ಆಹ್ವಾನಿಸಿದ್ದಾರೆ. ಇಂದು ಅವರ ತಂಗಿಯಮನೆಯಲ್ಲೇ ಅಗ್ನಿಹೋತ್ರ ಏರ್ಪಡಿಸಿ ಸ್ವತಃ ಮಾಡಿ ಸಂತೋಷಪಟ್ಟರು.

ಹೌದು, ನಮ್ಮ ಸತ್ಸಂಗ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ನಮ್ಮ ಕೈಲಾದಷ್ಟು ಸ್ಥಳಗಳಿಗೆ ಈ ವಿಚಾರವನ್ನು ತಲುಪಿಸಿಸುವ ಕೆಲಸವನ್ನು ಮಾಡಲು ನಾವೂ ಕಟಿಬದ್ಧರಾಗಿದ್ದೇವೆ.

Friday, April 10, 2015

ಇವರು ರಾಮನ ಸಂತಾನವೋ? ರಾವಣನ ಸಂತಾನವೋ?

ಬುದ್ಧಿಜೀವಿಗಳೆನಿಸಿಕೊಂಡವರು ನಿಜವಾಗಿ ಬುದ್ಧಿ ಜೀವಿಗಳೇ? ಹಲವರು ಹಲವು ಶಬ್ದಗಳಿಂದ ಇವರನ್ನು ಕರೆಯುತ್ತಾರೆ. ನಾನು ಇವರನ್ನು ಬೇರೆ ಯಾವ ಹೆಸರಿನಿಂದಲೂ ಕರೆಯುವುದಿಲ್ಲ. ಆದರೆ ಈ ಒಂದು ಗುಂಪಿನ ಉದ್ಧೇಶ ಏನು?
ನಮ್ಮ ಸಂಸ್ಕೃತಿ   ಪರಂಪರೆಗೆ ಮಾರಿಹೋಗಿ ಇಡೀ ವಿಶ್ವವು ನಮ್ಮ ದೇಶದತ್ತ ನೋಡುತ್ತಿರುವಾಗ ಇವರೇಕೇ ಹೀಗೆ ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದಾರೆ? ಇವರಿಗೆ ಇದರಿಂದ ಏನು ಪ್ರಯೋಜನ? ಜೊತೆಗೆ ಇವರು ಮಾಡುತ್ತಿರುವ ಡ್ಯಾಮೇಜ್ ಅವರ ವಿರೋಧಿಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಕಾರಣ ಅವರ ವಿರೋಧಿಗಳ ಪಾಸ್ಸಿಟೀವ್ ಎನೆರ್ಜಿ ಜಾಸ್ತಿ ಇದೆ. ನಡೆಯುತ್ತಿರುವ ಮಹಾನ್ ಯಜ್ಞದಲ್ಲಿ ಒಂದು ಮೆಣಸಿನಕಾಯಿ ಹಾಕಿ ಬಿಟ್ಟರೆ  ಅದನ್ನು ಜೀರ್ಣಿಸಿಕೊಳ್ಳುವಷ್ಟು ತಾಕತ್ತು ಆ ಯಜ್ಞಕ್ಕಿದೆ. ಆದರೆ ಇವರ ಈ ನಡೆಯಿಂದ ನೇರ ದುಷ್ಪರಿಣಾಮ ಆಗುವುದು ಮೊದಲು ಇವರ ಕುಟುಂಬದ ಮೆಲೆಯೇ !! ಆನಂತರ ಮುಂದಿನ ವಿಚಾರ. ಇವರ ಮಕ್ಕಳು ಮೊಮ್ಮಕ್ಕಳು ರಾಕ್ಶಸರಾಗಿ ಬೆಳೆಯ ಬೇಕೆ? ಇವರು ರಾಮನ ಸಂತಾನವೋ? ರಾವಣನ ಸಂತಾನವೋ?

ಪಾಶ್ಚಾತ್ಯರಲ್ಲಿ ಅದೆಷ್ಟು ಜನ ಪ್ರಾಣಿಗಳನ್ನು ಪ್ರೀತಿಸುತ್ತಾರೆ!  ಅಂತಾ  ಅದೆಷ್ಟು ವೀಡಿಯೋ ಕ್ಲಿಪ್ ಗಳು FB ಯಲ್ಲಿ ಪ್ರಕಟವಾಗುತ್ತವೆ!!

ಮಾಂಸಾಹಾರಿಗಳನೇಕರು ಸಸ್ಯಾಹರಕ್ಕೆ ಬದಲಾವಣೆಯಾಗುತ್ತಿರುವ ಕಾಲದಲ್ಲಿ ಇವರೆಲ್ಲಾ  ಆಹಾರ ವೈವಿದ್ಯತೆಯ ಹೆಸರಲ್ಲಿ   ಮಾಂಸಾಹಾರದ ಪ್ರಚಾರ ಮಾಡುತ್ತಿದ್ದಾರಲ್ಲಾ! ವೇದವನ್ನು ,ರಾಮಾಯಣ  ಮತ್ತು ಭಗವದ್ಗೀತೆಯನ್ನು ಪಾಶ್ಚಿಮಾತ್ಯರು ಗುಣಗಾನ ಮಾಡುತ್ತಿರುವಾಗ ಇದನ್ನೆಲ್ಲಾ ಸುಡ ಬೇಕೆನ್ನುವ ಇವರಿಗೆ ಅದೆಂತಹ ಹುಚ್ಚು ಹಿಡಿದಿದೆ!!?

ನಮ್ಮ ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳಸಬೇಕೆನ್ನುವ ಸ್ನೇಹಿತರು ಈ ವಿರೋಧೀ ಭಾವನೆಯ ಜನರ ಮಾತಿಗೆ ಮಹತ್ವ ಕೊಡಬೇಡಿ. ದುರ್ನಾತದಿಂದ ದೂರ ಇರುವುದೇ ಮೇಲು. ಅದರ ಕೆಟ್ಟಪರಿಣಾಮವು ಅವರಮೇಲೆಯೇ ಆಗಲಿ.

ಒಂದು ಮಾತು ನೆನಪಿರಲಿ. ನಮ್ಮ ಪರಂಪರೆಯಲ್ಲಿ ಯಾವುದಾದರೂ ಅಂಶಗಳು ಮಾನವೀಯತೆಗೆ ವಿರೋಧಿಯಾಗಿ ಕಂಡರೆ ಅದನ್ನು ಮೊದಲು ಕಿತ್ತು ಬಿಸಾಕುವ ಕ್ರಮಕ್ಕೆ ಕೈ ಹಾಕಿ. ಇಡೀ ಜಗತ್ತಿನ ನೆಮ್ಮದಿಗೆ ಅಗತ್ಯವಾದ ಮಾರ್ಗದರ್ಶನ ನಮ್ಮ ವೇದ-ಉಪನಿಷತ್ತುಗಳಲ್ಲಿ, ರಾಮಾಯಣ  ಮಹಾಭಾರತ ಭಗವದ್ಗೀತೆಯಲ್ಲಿ ಹೇರಳವಾಗಿ ಲಭ್ಯವಿದೆ. ಅಂತಾ ಮಾನವೀಯ ಮೌಲ್ಯಗಳನ್ನು ಉಳಿಸೋಣ. ಕೆಸರಿನ ಮೇಲೆ ಕಲ್ಲು ಹಾಕುವುದು ಬೇಡ.

Wednesday, April 1, 2015

ನಮ್ಮ ಹೊಣೆ ಏನು?

ನಿತ್ಯವೂ ಕೆಲವರ ಮಾತು ಕೇಳಿದಂತೆಲ್ಲಾ ಹಲವು ಚಿಂತನೆಗಳು ಕಣ್ಮುಂದೆ ಬರುತ್ತವೆ. ಕೆಲವು ದಿನಗಳ ಮುಂಚೆ ಒಬ್ಬ ಕಿರಿಯ ಸ್ನೇಹಿತೆ ಒಂದು ಗುಡಿಸಲಿನ ಮುಂದೆ ಮುದ್ದಾದ ಮೂರು ಮಕ್ಕಳು ನಿಂತಿರುವ ಚಿತ್ರ ಹಾಕಿದ್ದರು. ಅದನ್ನು ಶೇರ್ ಮಾಡಿದ ನಾನು ಅದರ ವಿವರ ತಿಳಿದು ಪ್ರಕಟಿಸುವುದಾಗಿ ಪೋಸ್ಟ್ ಬರೆದಿದ್ದೆ.ಅಂತೆಯೇ ಅವರನ್ನು ವಿವರ ಕೇಳಿದೆ. ಆಕೆಗೆ ನನ್ನ ಮೇಲೆ ಎಲ್ಲಿಲ್ಲದ ಸಿಟ್ಟು   ಬಂತು. ಇಂತಾ ನೂರಾರು ಕುಟುಂಬಗಳು ಆ ಜಾಗದಲ್ಲಿ ಬಡತನ ಅನುಭವಿಸ್ತಾ ಇದಾರೆ.ಮಾಡುವುದಾದದರೆ ಅಲ್ಲಿ ಹೋಗಿ ಸಹಾಯ ಮಾಡ್ರೀ, ಅಂತಾ ಸಿಟ್ಟಾಗಿಯೇ ಹೇಳಿದ್ದರು. ಆಕೆಯ ಸಿಟ್ಟಿನಿಂದ ನನಗೇನೂ ಬೇಸರವಾಗಲಿಲ್ಲ. ನಾಟಕವಾಡುವ ಜನರನ್ನು ನೋಡಿ ನೋಡಿ ರೋಸಿಹೋಗಿ ಈ ಮಾತು ಹೇಳಿರಬಹುದು.ಇರಲಿ.
                      ಹೀಗೆಯೇ Facebook ನಲ್ಲಿ ಹಲವರು ತಾವು ಕಂಡ ದಾರಿದ್ರ್ಯ ದೃಶ್ಯಗಳನ್ನು ಬರೆಯುತ್ತಾ ಇರುತ್ತಾರೆ.ಹಲವರು ತಮ್ಮ ಮನೆಯ ಮಕ್ಕಳ ಹುಟ್ಟುಹಬ್ಬವನ್ನು ಸ್ಲಮ್ ನಲ್ಲಿ ಆಚರಿಸಿ ಅಲ್ಲಿನ ಮಕ್ಕಳಿಗೆ ಸಿಹಿ ಹಂಚಿ ಬಂದೆವೆಂದು ಬರೆಯುತ್ತಿರುತ್ತಾರೆ.
ಇವೆಲ್ಲವೂ ಸತ್ಯವೇ ಹೌದು. ಆದರೂ ಒಂದು ಚಿಂತೆ ನನ್ನನ್ನು ಕಾಡುತ್ತದೆ. ಸರ್ಕಾರದ " ಭಾಗ್ಯ ಯೋಜನೆ" ಗಳಿವೆಯಲ್ಲಾ ! ಅವು ಯಾರನ್ನು ತಲಪುತ್ತಿವೆ? ಕೆಲವರಿಗೆ 400.00 ರೂ ಕೆಲವರಿಗೆ 1000.00 ರೂ, ಕೆಲವರಿಗೆ ಒಂದು ರೂಪಾಯಿಗೆ ಅಕ್ಕಿ !!

ಈ ಎಲ್ಲದರ ಪ್ರಯೋಜನ ಯಾರು ಪಡೆಯುತ್ತಾರೆ?

ಈ ಎಲ್ಲಾ ಯೋಜನೆಗಳಿಗಿಂತ ಅತ್ಯಂತ ಹಳೆಯ ಯೋಜನೆಯೊಂದಿತ್ತು. ಅದು ಇಂದಿನ ಯುವಕರಿಗೆ ಗೊತ್ತಿರಲಾರದು. ಅದು " ಗರೀಬೀ ಹಾಟಾವ್ " ಯೋಜನೆ. ಇಂದಿರಾಗಾಂಧಿಯವರ ಕನಸು. ಅದರ ಹಿಂದಿನ ಚಿಂತನೆ ಕಾಂಗ್ರೆಸ್ಸರಿಗೇ ಅರ್ಥವಾಗಲಿಲ್ಲ. ವಿರೋಧಪಕ್ಷದವರು " ಅದು ಬಡತನ ನಿರ್ಮೂಲನೆಯಲ್ಲಾ! ಅದು ಬಡವರ ನಿರ್ಮೂಲನೆ!! ಎಂದು ಗೇಲಿ ಮಾಡಿದರು. ಆ ಯೋಜನೆ ಹಾಳಾಗಿ ಹೋಯ್ತು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಈ ಏಳು ದಶಕಗಳು ಬೇಕಾಗಿತ್ತಾ-ಈ ಬಡತನ ಹೋಗಲಾಡಿಸಲು.ದೇಶದ ಸಂಪತ್ತನ್ನು ಲೂಟಿ ಹೊಡೆದಿರುವ ರಾಜಕಾರಣಿಗಳ ಸಂಪತ್ತನ್ನು ಸರ್ಕಾರ ಕಿತ್ತುಕೊಂಡು ಯೋಗ್ಯರಿಗೆ ಹಂಚುವ ದಿಟ್ಟತನ ತೋರಿಸಲಿ. ಆಗ ಇನ್ನೂ ಹತ್ತು ಕೋಟಿ ಜನ ಬಡವರಿಗೆ ಬದುಕಲು ಇಲ್ಲಿಯೇ ಶ್ರೀಮಂತರ ಹತ್ತಿರ ಕೊಳೆಯುತ್ತಿರುವ ಸಂಪತ್ತು ಸಾಕಾಗುತ್ತೆ.

ಇದಕ್ಕೆ ವೇದದ ಆಧಾರ ಇಲ್ಲಿದೆ ನೋಡಿ.........

ಸಾಮಾನ್ಯವಾಗಿ   ಬಳಕೆಯಲ್ಲಿರುವ  ಗಣೇಶ ಸೂಕ್ತದ ಎರಡು ಮಂತ್ರಗಳಲ್ಲಿ ಏನು ಹೇಳುತ್ತೆ ಗೊತ್ತೇ?

ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೭

ಉಪ ಕ್ರಮಸ್ವಾ ಭರ ಧೃಷತಾ ಧೃಷ್ಣೋ ಜನಾನಾಮ್ |
ಅದಾಶೂಷ್ಟರಸ್ಯ ವೇದಃ ||
 ಅರ್ಥ:-
ಜನಾನಾಮ್ ಧೃಷ್ಣೋ = ಮಾನವರ ವಶೀಕರ್ತನಾದವನೇ
ಧೃಷತಾ = ದಮನಬಲದಿಂದ
ಅದಾಶೂಷ್ಟರಸ್ಯ = ಕೊಡದವನ
ವೇದಃ = ಧನವನ್ನು
ಆಭರ = ತುಂಬಿಸಿಕೊಡು
ಉಪಕ್ರಮಸ್ವ = ಕಾರ್ಯ ನಿರತನಾಗು
ಭಾವಾರ್ಥ:-
ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ಆ ಹಣವು ಜನರ ಹಿತಕ್ಕಾಗಿ ಬಳಸಲ್ಪಡುವುದಿಲ್ಲ. ಆದ್ದರಿಂದ ಅಂತವರ ಧನವನ್ನು ಶಾಸಕನು ದಮನಶಕ್ತಿಯಿಂದ ಕಿತ್ತುಕೊಂಡು ಉದಾರಾತ್ಮರಿಗೆ ನೀಡಬೇಕು, ಅಂತೆಯೇ ಕ್ರಿಯಾಶೀಲರಾಗಬೇಕು.
ಸಾಮಾನ್ಯವಾಗಿ ವೇದಮಂತ್ರಗಳು ಕೇಳಲು -ಹೇಳಲು ಹಿತವಾಗಿರುತ್ತವೆ, ಹಾಗಾಗಿ ಬಹಳ ಜನರು ವೇದ ಮಂತ್ರವನ್ನು ಇಷ್ಟಪಡುತ್ತಾರೆ. ಆದರೆ ಅದರ ಅರ್ಥ ತಿಳಿದುಕೊಂಡರೆ ನಮಗೆ ಆಶ್ಚರ್ಯವಾಗದೇ ಇರದು. ನಾವು ಹೇಳುವ ಹಲವು ಮಂತ್ರಗಳು ನಮ್ಮ ಜೀವನಕ್ಕೆ ಮಾರ್ಗದರ್ಶೀ ಸೂತ್ರಗಳಷ್ಟೇ ಅಲ್ಲ, ಭಗವಂತನ  ಆದೇಶವಾಗಿರುತ್ತವೆ.
ಈ ಮಂತ್ರವಂತೂ ಗಟ್ಟಿಯ ಧ್ವನಿಯಲ್ಲಿ ಹೇಳುತ್ತದೆ ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ನಮ್ಮನ್ನಾಳುವ ರಾಜನು ಅಥವಾ ಸರ್ಕಾರ ತನ್ನ  ದಮನಶಕ್ತಿಯಿಂದ ಸ್ವಾರ್ಥಿಗಳ ಐಶ್ವರ್ಯವನ್ನು ಕಿತ್ತುಕೊಂಡು ಉದಾರಾತ್ಮರಿಗೆ ಹಂಚಬೇಕು
  ನಾವು ಈಗ ಹೇಳುತ್ತಿರುವ ಸರ್ವರಿಗೂ ಸಮಪಾಲು, ಸಮ ಬಾಳು ಈ ಎಲ್ಲವನ್ನೂ ವೇದವು ಅದಾಗಲೇ ಸಾವಿರಾರು ವರ್ಷಗಳ ಹಿಂದೆಯೇ ಹೇಳಿಯಾಗಿದೆ. ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ನಮಗೆ ಅದು ಸ್ಪಷ್ಟವಾಗದೇ ಇರದು. ವೇದಮಂತ್ರವು ಬಳಸಿರುವ ಪದದ ಗಟ್ಟಿತನವು ನಮಗೆ ಅರ್ಥವಾಗಬೇಕು. ಧೃಷತಾ ಎಂಬ ಪದದ ಬಳಕೆಯಾಗಿದೆ ಅಂದರೆ ದಮನಬಲದಿಂದ ಸ್ವಾರ್ಥಿಗಳ ಸಂಪತ್ತನ್ನು ಕಿತ್ತುಕೊಂಡು ಅಗತ್ಯವಿದ್ದ ಜನರಿಗೆ ಹಂಚು-ಎಂಬುದು ವೇದದ ಕರೆ. ಅಂದರೆ ಎಷ್ಟು ಸಮಾಜಮುಖಿಯಾಗಿ ಚಿಂತನೆ ನಡೆದಿದೆ! ಎಂಬುದು ನಮಗೆ ಅರ್ಥವಾಗಬೇಕು.
ಅದಾಶೂಷ್ಟರಸ್ಯ ವೇದಃ ಎಂಬ ಮಂತ್ರಭಾಗಕ್ಕೆ ಕೊಡದವನ ಸಂಪತ್ತನ್ನು ಎಂಬ ವಿವರಣೆಯನ್ನು ನೀಡಿದ್ದಾರೆ. ವೇದದಲ್ಲಿ ಒಂದೊಂದು ಪದಕ್ಕೂ ಸಂದರ್ಭಾನುಸಾರ ಮತ್ತು ಸ್ವರದ ಆಧಾರದಲ್ಲಿ ಹಲವಾರು ಅರ್ಥಗಳು. ಈ ಮಂತ್ರದಲ್ಲಿ ವೇದಃ ಎಂಬ ಪದಕ್ಕೆ ಧನವನ್ನು/ಸಂಪತ್ತನ್ನು ಎಂದು ಅರ್ಥೈಸಲಾಗಿದೆ.
ದೇಶದ ಹಣವನ್ನು ಲೂಟಿಮಾಡಿ ಕಪ್ಪುಹಣವನ್ನು ಹೊಂದಿರುವವರಿಗೆ ಈ ಮಾತು ನೇರವಾಗಿ ಅನ್ವಯವಾಗಲಾರದೆ? ಇಂತವರ ಹಣವನ್ನು ತನ್ನ ರಾಜಬಲದಿಂದ        ವಶಪಡಿಸಿಕೊಂಡು ದೇಶದ ಉತ್ತಮ ಕೆಲಸಗಳಿಗೆ ಸದ್ವಿನಿಯೋಗ ಮಾಡಬೇಕೆಂಬುದೇ ಈ ಮಂತ್ರದ ಕರೆ.
ಈ ಮಂತ್ರವನ್ನು ಬಹುಪಾಲು ಜನರು ನಿತ್ಯವೂ ಪಠಿಸುತ್ತಾರೆ. ಆದರೆ ಈ ಮಂತ್ರದ ಅರ್ಥ ಯಾರ ಕಿವಿಗೆ ಬೀಳಬೇಕೋ ಅವರ ಕಿವಿಗೆ ಬೀಳುತ್ತಿದೆಯೇ? ಇಂತಹ ವೇದದ ಆದೇಶವನ್ನು ಆಡಳಿತಮಾಡುವವರ ಕಿವಿಗೆ ಮುಟ್ಟಿಸುವುದು ವೇದ ವಿದ್ವಾಂಸರ ಕರ್ತವ್ಯವಲ್ಲವೇ?

ಮತ್ತೊಂದು ಮಂತ್ರವು ಇನ್ನೂ ಅದ್ಭುತವಾಗಿ ಇದೇ ವಿಚಾರವನ್ನು ಹೇಳುತ್ತದೆ. . . . . . .
ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೮

ಇಂದ್ರ ಯ ಉ ನು ತೇ ಅಸ್ತಿ ವಾಜೋ ವಿಪ್ರೇಭಿಃ ಸನಿತ್ವಃ |
ಅಸ್ಮಾಭಿಃ ಸು ತಂ ಸನುಹಿ ||

ಅರ್ಥ:-
ಇಂದ್ರ = ಸರ್ವೇಶ್ವರನೇ
ತೇ = ನಿನ್ನ
ಯಃ = ಯಾವ
ಸನಿvಃ = ಹಂಚಿಕೊಳ್ಳಲರ್ಹವಾದ
ವಾಜಃ ಅಸ್ತಿ = ಸಂಪತ್ತಿದೆಯೋ
ತಮ್ = ಅದನ್ನು
ಅಸ್ಮಾಭಿಃ ವಿಪ್ರೇಭಿಃ =  ಮೇಧಾವಿಗಳಾದ ನಮ್ಮೊಂದಿಗೆ ಸೇರಿ
ಸು ಉ ನು ಸನುಹಿ = ಚೆನ್ನಾಗಿ ನಿಶ್ಚಯವಾಗಿ ಹಂಚಿಕೊಡು

ಭಾವಾರ್ಥ:-
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು, ಆ ಸಂಪತ್ತು ದಾನಮಾಡುವುದಕ್ಕಾಗಿಯೇ ಇದೆ ಹೊರತೂ ಸ್ವಾರ್ಥಕ್ಕಾಗಿ ಅಲ್ಲ,  ಆ ಸಂಪತ್ತನ್ನು ಭಗವಂತನ ಪ್ರೇರಣೆಯಿಂದ ಮೇಧಾವಿಗಳು ಪಾತ್ರರಿಗೆ ನೀಡಲಿ.
ನಿಜವಾದ ಕಮ್ಯೂನಿಸ್ಟ್ ವಿಚಾರಧಾರೆಯಲ್ಲವೇ, ಇದು! ಈಗಿನ ಕಮ್ಯೂನಿಸ್ಟ್ ವಿಚಾರವು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಆದರೆ ವೇದಮಂತ್ರವು ಸಾರುತ್ತದೆ                 ಜಗತ್ತಿನಲ್ಲಿರುವುದೆಲ್ಲವೂ ಪರಮಾತ್ಮನಿಗೆ ಸೇರಿದ್ದು. ಅದರ ಮೇಲೆ ನನ್ನ ಹಕ್ಕು ಏನೂ ಇಲ್ಲ. ನನಗೇನಾದರೂ ಒಂದಿಷ್ಟು ಸಂಪತ್ತು ಇದೆ ಎಂದಾದರೆ ನಾನು ಅದಕ್ಕೆ ಒಬ್ಬ ವಿಶ್ವಸ್ಥನೇ ಹೊರತೂ ಯಜಮಾನನಲ್ಲ.

ಇಂದಿನ ಸರ್ಕಾರದ ನೀತಿಯಲ್ಲೂ ಸಹ ಇಲ್ಲದವನಿಗೆ ಸರಕಾರ ಸವಲತ್ತನ್ನು ಒದಗಿಸುವುದೇ ಆಗಿದೆ. ಆದರೆ ಯಾರು ರಾಜಕಾರಣಿಗಳ ಹಿಂಬಾಲಕರಿರುತ್ತಾರೋ ಅವರಿಗೆ ಸರ್ಕಾರದ ಸವಲತ್ತುಗಳು ಸೇರುತ್ತವೆ. ನಿಜವಾದ ಬಡವನು ಎಲ್ಲಾ ಸೌಕರ್ಯಗಳಿಂದಲೂ ವಂಚಿತನಾಗುತ್ತಾನೆ. ಈ ವಿಚಾರದಲ್ಲಿ ವೇದವು ಸ್ಪಷ್ಟ ಆದೇಶವನ್ನು ಕೊಡುತ್ತದೆ ಮೇಧಾವಿಗಳೊಂದಿಗೆ, ಚಿಂತಕರೊಂದಿಗೆ ಸೇರಿ ಸಮಾಲೋಚನೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸವಲತ್ತುಗಳನ್ನು ನೀಡಿ
ಆದರೆ ಈಗ ನಡೆದಿರುವುದೇನು? ಎಲ್ಲವೂ ವೇದಕ್ಕೆ ವಿರೋಧವಾಗಿಯೇ. ಅಂದರೆ ಸತ್ಯಕ್ಕೆ ವಿರೋಧವಾಗಿಯೇ. ಅಸತ್ಯ, ಅಧರ್ಮ,ಅನ್ಯಾಯವನ್ನು ಕೇಳುವಷ್ಟು ಗುಂಡಿಗೆ ಜನರಲ್ಲಿಲ್ಲ. ಮತ್ತೊಂದು ಮಂತ್ರದ ಬಗ್ಗೆ ತಿಳಿಯೋಣ

ಸದ್ಯೋಜುವಸ್ತೇ ವಾಜಾ ಅಸ್ಮಭ್ಯಂ ವಿಶ್ವಶ್ಚಂದ್ರಾಃ |
ವಶೈಶ್ಚ ಮಕ್ಷೂ ಜರಂತೇ || [ ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೯]

ಅರ್ಥ
ಸರ್ವೇಶ್ವರನೇ
ತೇ ವಾಜಾಃ = ನಿನ್ನ ಸಂಪತ್ತು
ವಿಶ್ವಶ್ಚಂದ್ರಾಃ = ಎಲ್ಲರಿಗೂ ಆಹ್ಲಾದವನ್ನು ಕೊಡತಕ್ಕದ್ದು
ಅಸ್ಮಭ್ಯಂ = ನಮಗೆ
ಸದ್ಯೋಜುವಃ = ಬೇಗನೇ ಪ್ರಾಪ್ತವಾಗಲಿ
ವಶೈಃ  ಚ =ಕಾಮನೆಗಳಿಂದ
ಮಕ್ಷೋ = ಬಾರಿಬಾರಿ
ಜರಂತೇ = ಜನರು ಅರ್ಚಿಸುತ್ತಾರೆ

ಭಾವಾರ್ಥ
ಭಗವಂತನ ಐಶ್ವರ್ಯವು ಎಲ್ಲರಿಗೂ ಆಹ್ಲಾದವನ್ನು ಉಂಟುಮಾಡುವಂತಹದಾಗಿದೆ. ಅಂತಹ ಐಶ್ವರ್ಯವು ಎಲ್ಲರಿಗೂ ಶೀಘ್ರವಾಗಿ ದೊರಕಲಿ. ಆಗ ಅನೇಕವಿಧವಾದ ಕಾಮನೆಗಳಿಂದ ಕೂಡಿದ ಜನರು ಭಗವಂತನನ್ನು ಸ್ತುತಿಸುತ್ತಾರೆ.
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು ಎಂಬುದನ್ನು ಈ ಹಿಂದಿನ ಮಂತ್ರವು ತಿಳಿಸಿದರೆ ಈ ಮಂತ್ರವಾದರೂ ಅದರ ಉಪಯೋಗ ಮತ್ತು ಹಂಚಿಕೆಯ ಬಗ್ಗೆ ತಿಳಿಸುತ್ತದೆ. ನಮ್ಮನ್ನು ಆಳುವವರಿಗೆ ಸರಿಯಾದ ಮಾರ್ಗದರ್ಶನವಲ್ಲವೇ ಈ ಮಂತ್ರ?  ಜನರಿಗೆ ಹಲವು ಕಾಮನೆಗಳಿರುತ್ತವೆ, ಅಲ್ಲವೇ! ಅದನ್ನು ಭಗವಂತನೇ ನೇರವಾಗಿ ಪೂರೈಸಲು ಸಾಧ್ಯವೇನು? ಪ್ರಜೆಗಳ ಅವಶ್ಯಕತೆಗೆ ಮತ್ತು ಅರ್ಹತೆಗೆ ತಕ್ಕಂತೆ ದೇಶದ ಸಂಪತ್ತು ಅವರಿಗೆ ಪ್ರಾಪ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕೆಂಬುದು ವೇದದ ಆದೇಶ.
ಗಣೆಶಸೂಕ್ತಗಳನ್ನು ಗಟ್ಟಿಯಾಗಿ ನಮ್ಮ ಸಂತೋಶಕ್ಕೆ ಹೇಳಿದರೆ ಸಾಲದು. ಅದರ ಅರ್ಥವನ್ನು   ತಿಳಿದುಕೊಂಡು ಅದರಂತೆ ನಡೆದಾಗ ಸಾರ್ಥಕವಾಗುತ್ತದೆ.
----------------------------------------------------------------------------------------

ಇದೆಲ್ಲಾ ಓದಿದಮೇಲೆ ಹೇಳಿ " ನಾವು ಸ್ಲಮ್ ಏರಿಯಾ ಗೆ ಹೋಗಿ ನಮ್ಮ ಮಕ್ಕಳ ಹುಟ್ಟುಹಬ್ಬ ಆಚರಿಸಿ ಬಂದೆವೆಂದು "  ಸಂತೋಷ ಪಡ್ತೀವಲ್ಲಾ! ಅದರ ಇನ್ನೊಂದು ಮುಖ ಹೇಳುತ್ತೆ " ಎಷ್ಟೊಂದು ಜನ ಬದುಕಲು ಆಶ್ರಯ ಇಲ್ಲದೆ ನರಳುತ್ತಿದ್ದಾರೆಂದು"ಅಲ್ಲವೇ? ದೇಶದಲ್ಲಿರುವ ಇಂತಾ ಅವಸ್ತೆಯನ್ನು ಉಳಿಸಿಕೊಂಡು ,ಆಗಿಂದಾಗ್ಗೆ  ಅಲ್ಲಿ ಹೋಗಿ ಸಂತೋಷ ಹಂಚಿಕೊಳ್ಳಬೇಕೋ? ಅಥವಾ ಇಂತಾ ಪರಿಸ್ಥಿತಿಯೇ ಇರದಂತಾ ಯೋಜನೆಗಲನ್ನು ರೂಪಿಸಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯ ಮಾಡಬೇಕೋ!  ನಮ್ಮ ಜವಾಬ್ದಾರಿ ಏನು?

ಅದೆಲ್ಲಾ ಸರ್ಕಾರ ಮಾಡುತ್ತೆ. ನಮ್ಮ ಜವಾಬ್ದಾರಿ ಅಲ್ಲಾ,ಅನ್ನೋ ಮಾತೂ ಸರಿ ಇರಬಹುದು. ಸರ್ಕಾರ ಅಂದರೆ ಯಾರು? ನಾವೇ ಆರಿಸಿದ್ದು ತಾನೇ? ನಾವೇ ಅದರ ಮೇಲೆ ಒತ್ತದ ಹಾಕಬೇಕಲ್ಲವೇ?  ಈ ನನ್ನ ಪ್ರಯತ್ನವೂ ಅದರ ಒಂದು ಭಾಗವೇ, ಆಗಿದೆ. ಈ ವಿಚಾರವನ್ನು ನಮ್ಮ ನಮ್ಮ ಶಾಸಕರಿಗೆ ಪತ್ರ ಬರೆದು ಯಾಕೆ ಒಂದು Face book ಮೂಲಕವೇ ಒಂದು ಆಂದೋಲನ ಮಾದಬಾರದು. ಇನ್ನೂ ಒಂದು ದಾರಿ ಈಗ ತೆರೆದಿದೆ. Change.org  ಮೂಲಕ ಕೋರ್ಟ್ ಗೆ ಅರ್ಜಿ ಹಾಕಿ ಸಾವಿರಾರು ಜನರ ಸಹಿ ಪಡೆದು ಒತ್ತಾಯಿಸುವ ಪ್ರಕ್ರಿಯೆ ಒಂದಿದೆ. ಕಾನೂನು ತಜ್ಞರು ಆ ಪ್ರಯತ್ನವನ್ನೂ ಮಾಡಬಹುದು ಅಲ್ಲವೇ?

Saturday, March 28, 2015

ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು

ಯುವ ಮಿತ್ರರು ಕೆಲವರು ಎಲ್ಲೆಲ್ಲೋ ಹುಡುಕಿ ವೇದಕ್ಕೆ ಅಪಚಾರವಾಗುವ ಸಂಗತಿಗಳನ್ನು ತಮ್ಮ ಬರಹಗಳಲ್ಲಿ ಕೋಟ್ ಮಾಡುತ್ತಿದ್ದಾರೆ. ಅವರಿಗೆ ಪುಷ್ಠಿ ಕೊಡುವ ವಿಚಾರ ಎಂದರೆ ಆ ಮಾತು ವಿವೇಕಾನಂದರೇ ಹೇಳಿದ್ದು, ಶಂಕರಾಚಾರ್ಯರೇ ಹೇಳಿದ್ದು .ಅಂತಾ ಮಹಾಮಹಿಮರೇ ಹೇಳಿದಮೇಲೆ ವೇದವು ಗೋಹತ್ಯೆಗೆ ಅವಕಾಶ ಮಾಡಿಕೊಟ್ಟಿದೆ, ವೇದದಲ್ಲಿ ಅಸಮಾನತೆಗೆ ಅವಕಾಶವಿದೆ.....ಹೀಗೆಲ್ಲಾ ಬರೆಯುತ್ತಿದ್ದಾರೆ. ಅಂತಾ ಮಿತ್ರರಲ್ಲಿ ನನ್ನದು ಒಂದು ಪ್ರಶ್ನೆ ಇದೆ. ಯಾಕೆ ನಿಮಗೆ ವೇದದಲ್ಲಿ ಸದ್ವಿಚಾರಗಳು ಕಾಣಲೇ ಇಲ್ಲವೇ?-ಇದು ಮೊದಲನೆಯದು. ಎರಡನೆಯದೆಂದರೆ ಒಂದು ವೇಳೆ  ವೇದಕ್ಕೆ ಅಪಚಾರವಾಗುವಂತಾ ಸಂಗತಿಗಳು ವೇದಲ್ಲಿವೆ ಎಂದು ಯಾರೇ ಬರೆದಿದ್ದರೂ ಅದು ಸ್ವೀಕಾರಾರ್ಹವಲ್ಲ. ಮೂರನೆಯ ಮತ್ತು ಕಟ್ಟಕಡೆಯ ಸಂಗತಿ ಎಂದರೆ ಮೂಲ ವೇದದಲ್ಲಿ ಇಂತಾ ಮಾನವ ವಿರೋಧಿ ಸಂಗತಿಗಳಿವೆ ಎಂದು ಯಾರಾದರೂ  ಪ್ರೂವ್ ಮಾಡಿದರೆ ಅಂತಾ ವೇದದಿಂದ ಆಗಬೇಕಾದ್ದೇನಿದೆ? ಅದನ್ನು ಅಧ್ಯಯನ ಮಾಡಬೇಕೇಕೇ?

ಮತ್ತೆ ಮತ್ತೆ ಹೇಳುವೆ. ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳು ತಪಸ್ಸು ಮಾಡಿ ಕಂಡುಕೊಂಡ  ಸತ್ಯವೇ ವೇದ. ಅದು ಮಾನವತೆಯನ್ನು ಉಳಿಸಲು, ನೆಮ್ಮದಿಯ ಜೀವನ ಮಾಡಲು, ಸಾಮಾಜಿಕ ಸದ್ಭಾವನೆಗೆ ಇರುವ ಸೂತ್ರಗಳು. ಅದನ್ನು ವಿರೋಧಿಸುವುದೆಂದರೆ ಮಾನವೀಯ ಮೌಲ್ಯಗಳನ್ನು ವಿರೋಧಿಸಿದಂತೆಯೇ. ಯಾರೋ ಸ್ವಾರ್ಥಕ್ಕಾಗಿ ಬರೆದುಕೊಂಡಿರುವ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವ,  ಮೇಲು-ಕೀಳು ಭಾವನೆಯನ್ನು ಬಿತ್ತುವ  ಸಾಹಿತ್ಯವನ್ನು ಹುಡುಕಿ ಹುಡುಕಿ ಓದುವಿರೇಕೇ? ಇದರಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವೇ? ನಾನು ಬರೆದಿರುವ ಪುಸ್ತಕದ ಬಗ್ಗೆ ನಾನೇ ಹೇಳುವುದು ಉಚಿತವಲ್ಲ. ಆದರೂ ಸಾಮಾಜಿಕ ಸದ್ಭಾವನೆಯನ್ನು ಅರಳಿಸುವ ಅದೆಷ್ಟು ಮಂತ್ರಗಳಿವೆ-ಎಂಬುದನ್ನು ನನ್ನ  " ಜೀವನವೇದ " ಪುಸ್ತಕವನ್ನು ಓದಿ, ನಂತರ ಹೇಳಿ.

ನಾನೇನೂ ವೇದವನ್ನು ಅರೆದು ಕುಡಿದಿಲ್ಲ. ಆದರೆ ಮಾನವೀಯ ಮೌಲ್ಯಗಳನ್ನು ಬಿತ್ತುವ ನೂರಾರು ಮಂತ್ರಗಳ ಅರ್ಥವನ್ನು  ಪಂಡಿತ್ ಸುಧಾಕರ ಚತುರ್ವೇದಿಗಳು, ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ ತಿಳಿದುಕೊಂಡಿದ್ದೇನೆ. ಸಾಮಾಜಿಕ ಸದ್ಭಾವನೆಯನ್ನು ಕಾಪಾಡುವ ಇಂತಾ ವಿಚಾರಗಳನ್ನು ಪಡೆಯುವ ಬದಲು ಯಾರೋ ಸ್ವಾರ್ಥಪರರು ಬರೆದಿರುವ ಮಾನವವಿರೋಧೀ ಅಂಶಗಳನ್ನು ಹುಡುಕುವಿರೇಕೇ?

ವೇದದ ಪರ ವಕಾಲತ್ತು ವಹಿಸುವ ಮಿತ್ರರಲ್ಲೂ ನನ್ನ ನಿವೇದನೆ ಇದೆ. ಅದೇನೆಂದರೆ ಈ ಗೊಂದಲಗಳಿಗೆಲ್ಲಾ ಕಾರಣ ಅರಿವಿನ ಕೊರತೆ, ಅಷ್ಟೆ. ಇದನ್ನು ಯಾವುದೇ ಜಾತಿಯ ಪರ-ವಿರುದ್ಧ ಎಂದು ಭಾವಿಸಬೇಕಾಗಿಲ್ಲ. ವೇದದಲ್ಲಿ ಜಾತಿಯೆಂಬುದೇ ಇಲ್ಲ. ಇಷ್ಟೆಲ್ಲಾ ಗೊಂದಲಕ್ಕೆ ಕೆಲವೇ ಶತಮಾನಗಳಿಂದ ಆಚರಣೆಯಲ್ಲಿರುವ ಜಾತಿ ಪದ್ದತಿಯೇ ಕಾರಣ. ಜಾತಿ-ಜಾತಿ ನಡುವಿನ ದ್ವೇಷವು ಜನರನ್ನು ಹುಚ್ಚರನ್ನಾಗಿಸಿದೆ. ಮಾನವಕೋಟಿ ಒಂದೇ ಎಂಬ ಭಾವನೆ ಇಂದಿನ ಪರಿಸ್ಥಿತಿಯಲ್ಲಿ ಮೂಡುವುದು ಕಷ್ಟವಾದರೂ ವೇದದ ಅಭಿಮಾನಿಗಳು ಜಾತಿ-ಜಾತಿ ನಡುವೆ ಸದ್ಭಾವನೆಯನ್ನು ಅರಳಿಸುವ ಕೆಲಸವನ್ನು ಮಾಡಬೇಕೇ ಹೊರತೂ ಕಂದಕವನ್ನು ಹಿರಿದು ಮಾಡುವ ಕೆಲಸವನ್ನು ಮಾಡಲೇ    ಬಾರದು. ವೇದದ ಅರಿವಿಲ್ಲದಿದ್ದವರಿಗೆ ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು.ಇದಕ್ಕೆ ಬಲು ತಾಳ್ಮೆ ಬೇಕು.

Tuesday, March 24, 2015

ಜನರಿಗೆ ಸತ್ಯ ತಿಳಿಸುವವರಾರು?

ಜನರಿಗೆ ಸತ್ಯ ತಿಳಿಸುವವರಾರು?   ಹಲವು ಸಂದರ್ಭದಲ್ಲಿ ನನ್ನ ಕಣ್ಮುಂದೆ ಈ ಪ್ರಶ್ನೆ ಹೆಮ್ಮರವಾಗಿ ನಿಲ್ಲುತ್ತದೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ  ಅಸತ್ಯ-ಅಧರ್ಮ-ದಬ್ಬಾಳಿಕೆ-ಬೂಟಾಟಿಕೆ-ಭಯದ ವಾತಾವರಣ ಎದ್ದು ಕಾಣುತ್ತದೆ. ಬ್ರಷ್ಟಾಚಾರದ ವಿರುದ್ಧ ಹೋರಾಟಮಾಡುವ ಹೆಸರಲ್ಲಿ ಜನರಿಂದ ಸುಲಿಗೆ ಮಾಡುವವರಿಗೇನೂ ಕಮ್ಮಿ ಇಲ್ಲ. ಧರ್ಮದ ಹೆಸರಲ್ಲೂ ಸುಲಿಗೆ. ರಾಜಕಾರಣವಂತೂ ಹೊಲಸೆದ್ದು ಹೋಗಿದೆ, ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾದ ಪ್ರಾಮಾಣಿಕ ಸೇವಾಮನೋಭಾವನೆಯ ವ್ಯಕ್ತಿಯು ರಾಜಕೀಯ ಪ್ರವೇಶಮಾಡಿ ಒಂದು ನಗರಸಭೆಗೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಅಲ್ಲೂ ಹಣದ,ಜಾತಿಯ ಪ್ರಭಾವ. ಇನ್ನು ದೇವಾಲಯಗಳಲ್ಲಿ ಭಕ್ತರಲ್ಲಿಯೇ ತಾರತಮ್ಯ. ಶ್ರೇಣೀಕೃತ ಭಕ್ತರು!  ಮಠಮಂದಿರಗಳಲ್ಲೂ ತಾರತಮ್ಯ. ಜಾತಿಗೆ ಪ್ರಾಶಸ್ತ್ಯ!

ಇದಕ್ಕೆಲ್ಲಾ ಕಾರಣ ಏನು ಗೊತ್ತೇ? ನಮಗೆ ಸತ್ಯದರ್ಶನವಾಗಿಲ್ಲ. ಸತ್ಯ ತಿಳಿದಿಲ್ಲ. ಭಗವಂತನ ಅಸ್ತಿತ್ವದ ಬಗ್ಗೆಯೇ ಸರಿಯಾದ ಅರಿವಿಲ್ಲ. ಭಗವಂತನು ನಿರಾಕಾರಿ, ಸರ್ವವ್ಯಾಪಿ, ಸರ್ವಶಕ್ತ ಎಂಬ ನಿಜದ ಅರಿವು ನಮಗುಂಟಾದರೆ,  ಬದುಕಿನ ಉದ್ದೇಶ ತಿಳಿದರೆ  ಮುಂದೆ ಯಾವಕ್ಷೇತ್ರವೂ ನಮಗೆ ಸಮಸ್ಯೆ ಎನಿಸುವುದೇ ಇಲ್ಲ.  ಹಲವು ವೇಳೆ ನಾವು ಭಯದ ನೆರಳಲ್ಲೇ ಬದುಕು ಸಾಗಿಸುತ್ತೇವೆ. ಕಾರಣ ಬೇರೆ ಏನೂ ಅಲ್ಲ. ಸತ್ಯದ ಅರಿವಿರುವುದಿಲ್ಲ. ನಮ್ಮಲ್ಲಿ  ಮನೆ ಮಾಡಿರುವ ಭಯ ಮತ್ತು ಮೌಢ್ಯ ಎರಡು ಸಂಗತಿಗಳು ದೂರವಾದರೆ ನಮ್ಮನ್ನು ಧರ್ಮದ ಹೆಸರಲ್ಲಿ ,ದೇವರಹೆಸರಲ್ಲಿ, ಕಾನೂನಿನ ಹೆಸರಲ್ಲಿ  ಶೋಷಿಸುವ, ವಂಚಿಸುವ ಜನರನ್ನು ಮೆಟ್ಟಿ ನಿಲ್ಲಲು ಸಾಮರ್ಥ್ಯ ತಾನೇ ತಾನಾಗಿ ಬರುತ್ತದೆ.

ಸ್ವತಂತ್ರ ಭಾರತದಲ್ಲಿ ಆಗಬೇಕಾಗಿರುವುದು ಜನರಿಗೆ ಸತ್ಯವನ್ನು ತಿಳಿಸುವ ಕೆಲಸ. ವೇದದ ನಿಜವಾದ ಅರಿವಿದ್ದರೆ ಸತ್ಯವು ಮನವರಿಕೆಯಾಗುತ್ತದೆ. ವೇದದ ಹೆಸರಿನಲ್ಲಿಯೇ ನಡೆಯುತ್ತಿರುವ ಬೂಟಾಟಿಕೆಗಳೆಲ್ಲಾ ದೂರವಾಗ ಬೇಕಾದರೆ ವೇದದ ನಿಜ ಅರಿವು ಮೂಡಬೇಕು

ವೇದದ ಅರಿವು ಮೂಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆಂದು ಹೇಗೆ ಹೇಳುವಿರಿ-ಎಂಬುದು ತಾನೇ ನಿಮ್ಮ ಪ್ರಶ್ನೆ.ಅದಕ್ಕೆ ವೇದದಲ್ಲಿಯೇ ಉತ್ತರವಿದೆ.

ನಾವು ಬಹುಪಾಲು ಭಯದಿಂದ ಬದುಕಿರುವುದು ದೇವರ ಹೆಸರಲ್ಲಿ. ಆ ದೇವರ ಬಗ್ಗೆ ಸ್ಪಷ್ಟ    ಕಲ್ಪನೆ ವೇದದಲ್ಲಿ ದೊರೆಯುತ್ತದೆ. ಅದೊಂದು ಶಕ್ತಿ .ಇಡೀ ಬ್ರಹ್ಮಾಂಡದ ಎಲ್ಲಾ ಚಲನವಲನ-ಚಟುವಟಿಕೆಗಳ ನಿಯಂತ್ರಣ  ಶಕ್ತಿ. ಅದನ್ನು ನೋಡಲು ಸಾಧ್ಯವೇ ಇಲ್ಲ.ಅನುಭವಿಸಬಹುದು ಅಷ್ಟೆ. ಆಶಕ್ತಿಯ ಸರಿಯಾದ ಅರಿವಿಲ್ಲದೆ ದೇವರವಾರಸುದಾರರೆಂದು ಬೀಗುವ ದಳ್ಳಾಳಿಗಳ ಆಟಾಟೋಪಕ್ಕೆ  ನಾವೆಲ್ಲಾ ಬಲಿಯಾಗಿದ್ದೇವೆಂದರೆ ನನಗೆಲ್ಲೋ ತಲೆಕೆಟ್ಟಿದೆ-ಎನಿಸಬಹುದು.ಆದರೆ ಅದೇ ಸತ್ಯ.

ಭಗವಂತನು ನಿಮ್ಮಲ್ಲಿ, ನನ್ನಲ್ಲಿ, ಒಂದು ಹುಳುವಿನಲ್ಲೂ ಇದ್ದಾನೆ.ಎಲ್ಲವನ್ನೂ ನಡೆಸುತ್ತಿದ್ದಾನೆ.ಅವನು ಒಬ್ಬನೇ.ಅವನ ಹೆಸರಲ್ಲಿ ಕಿತ್ತಾಟ ನಡೆಯುತ್ತಿಲ್ಲವೇ? ಬೇಕೇ?

ಇನ್ನು ಜಾತಿಯ ಬಗ್ಗೆ ಸಂಘರ್ಷ. ವೇದದಲ್ಲಿ ಜಾತಿಯ ಸುಳಿವೂ ಇಲ್ಲ. ಮಾನವರೆಲ್ಲರೂ ಒಬ್ಬ ತಾಯಿಯ ಮಕ್ಕಳೆಂದು ವೇದವು ಸಾರುತ್ತದೆ. ಆದರೂ ವೇದದ ಹೆಸರಲ್ಲೇ ಜಾತೀಯತೆ ನಡೆಯುತ್ತದೆ.ಈ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವವರಾರು?

ಸ್ವಾತಂತ್ರ್ಯ ಬಂದು ಏಳು ದಶಕಗಳು ಮುಗಿಯುತ್ತಾ ಬಂತು. ಯಾವ ಋಷಿಮುನಿಗಳ ತಪಸ್ಸಿನಿಂದ ನಮಗೆ "ವೇದವೆಂಬ" ಒಂದು ಜ್ಞಾನ ಭಂಡಾರ ಲಭ್ಯವಾಗಿದೆಯೋ ಅದರ ಸೂತ್ರಗಳ ಮೇಲೆ ನಮ್ಮ ವ್ಯವಸ್ಥೆಯನ್ನು ಬಲಪಡಿಸುತ್ತಾ ಹೋಗಿದ್ದರೆ ನಮ್ಮ ದೇಶವು ಇಂದಿನ ಕೆಟ್ಟಸ್ಥಿತಿಯಲ್ಲಿರಬೇಕಾಗಿರಲಿಲ್ಲ. ಇನ್ನೂ ಕಾಲಮಿಂಚಿಲ್ಲ. ನಮ್ಮ ದೇಶವನ್ನು ಮುನ್ನಡೆಸುವುದಕ್ಕೆ    ಹೊರಗಿನಿಂದ ಶಿಕ್ಷಣ ಪಡೆಯಬೇಕಾಗಿಲ್ಲ. ವೇದವೆಂಬ ಜ್ಞಾನ ಭಂಡಾರದ ವ್ಯಾಪಕ ಅಧ್ಯಯನ ಆಗಬೇಕು. ಇಲ್ಲಿ ಒಂದು ತಪ್ಪು ಭಾವನೆ ಕೂಡ ಇದೆ. ವೇದವೆಂದರೆ ಹೋಮಹವನಗಳನ್ನು    ಮಾಡಿಸಲು ಬೇಕಾದ ಮಂತ್ರಗಳನ್ನು ಕಲಿಯುವುದು! ಈ ಭಾವನೆ ದೂರವಾಗಬೇಕು. ವೇದವೆಂದರೆ ಸಮಸ್ತ ಬದುಕಿನ ಜ್ಞಾನ ಭಂಡಾರ. ಅದರ ಆಮೂಲಾಗ್ರ ಅಧ್ಯಯನ ಆದರೆ ನಮ್ಮ  ಸಾಮಾಜಿಕ ಬದುಕಿನ, ವೈಯಕ್ತಿಕ ಬದುಕಿನ, ರಾಷ್ಟ್ರದ ಅಭಿವೃದ್ಧಿಯ ಎಲ್ಲಾ ವಿಚಾರಕ್ಕೂ  ಮಾರ್ಗದರ್ಶನ ಸಾಧ್ಯ. ಈ ಬಗ್ಗೆ ಒತ್ತಾಯ ಮಾಡುವ ಶಕ್ತಿ ವೃದ್ಧಿಯಾಗಬೇಕಾಗಿದೆ.

Sunday, January 25, 2015

ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ.

ಮನದ ಮಾತನ್ನು ಹೇಳಿಬಿಡುವೆ.ನನ್ನ ಬಗ್ಗೆ ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ. ನಿತ್ಯವೂ ಬೆಳಿಗ್ಗೆ ಟಿ.ವಿ. ಆನ್ ಮಾಡಿದರೆ ಸಾಕು ಜ್ಯೋತಿಷಿಗಳ ದರ್ಶನ! ಪಾಪ! ಜನ ಕಾಯುತ್ತಿರುತ್ತಾರೆ. ಕೆಲವರು ಅವತ್ತಿನ ಜೀವನವನ್ನು ನಿರ್ಧಾರ ಮಾಡುವುದೇ ಜ್ಯೋತಿಷಿಗಳ ಸಲಹೆ ಪಡೆದು! ಕೆಲವು ರಾಶಿಯವರಿಗೆ ಜ್ಯೋತಿಷಿಗಳು ಸಲಹೆ ಕೊಟ್ಟು ಬಿಡ್ತಾರೆ “ ಇವತ್ತು ನಿಮಗೆ ಕ್ರೂರವಾಗಿದೆ. ನೀವು ಗಣೇಶನ ಅಥವಾ ಮತ್ಯಾವುದೋ ದೇವರ ನಾಮಜಪಮಾಡಿ.ನಿಮಗೆ ಕಾರ್ಯ ಸಿದ್ಧಿಯಾಗುತ್ತೆ! ಸರಿ ಹಲವರು ಅದರಂತೆಯೇ ನಡೆದುಕೊಳ್ಳುತ್ತಾರೆ.ಇರಲಿ.ಅದು ಅವರ ಸ್ವಾತಂತ್ರ್ಯ.ನಾನ್ಯಾರು ಆ ಮಾತು ಹೇಳಲು?
ಇನ್ನು ದೇವಾಲಯಗಳ ಬಗ್ಗೆ ನೋಡುವಾಗ. ಕೆಲವಂತೂ ಅಕ್ಷರಷಃ ವ್ಯಾಪಾರಕೇಂದ್ರಗಳು! ಅದಕ್ಕೆ ಮುಗಿಲು ಬಿದ್ದ ಭಕ್ತರು!! ದಿನಗಟ್ಟಲೆ ಸಾಲಿನಲ್ಲಿ ಕ್ಯೂ ನಿಂತು ಅಂತೂ ದರ್ಶನ ಪಡೆದವೆಂದು ನಿಟ್ಟುಸಿರು ಬಿಡುವ ಭಕ್ತರು! ಇನ್ನು ಸಾವಿರಾರು ರೂಪಾಯಿ ಟಿಕೆಟ್ ಕೊಂಡು ವಿಶೇಷ ದರ್ಶನ ಪಡೆಯುವ ಶ್ರೀಮಂತ ಭಕ್ತರು!!
ಒಬ್ಬ ಸ್ವಾಮಿಗಳು ಹೀಗೆ ಹೇಳಿದರು “ ಕ್ಲಬ್ ಗಳಿಗೆ ಹೋಗಿ ಹೆಂಡ ಕುಡಿದು ಜೂಜು ಆಡಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರ ಬಗ್ಗೆ,ವೇಶ್ಯಾಗೃಹಗಳಿಗೆ ಹೋಗಿ ಬರಿದಾಗುವವರ ಬಗ್ಗೆ ಮಾತಾಡುವುದಿಲ್ಲ, ದೇವಸ್ಥಾನಗಳ ಬಗ್ಗೆ ಮಾತಾಡ್ತಾರೆ! ಇದು ತಪ್ಪು!
ಅಯ್ಯೋ ರಾಮ –ಕೆಟ್ಟ ಚಟಗಳ ಬಗ್ಗೆ ಅದೆಷ್ಟು ಜಾಗೃತಿ ಸಭೆಗಳು ನಡೆಯುವುದಿಲ್ಲ! ಇವರಿಗೆ ಅದು ಗೊತ್ತಿಲ್ಲ. ಕೆಟ್ಟ ಚಟಗಳು ಮನುಷ್ಯನ ದೌರ್ಬಲ್ಯ. ಆದರೆ ದೇವಾಲಯಗಳಿಗೆ ಹೋಗುವುದು ಮನುಷ್ಯನ ದೌರ್ಬಲ್ಯವಾಗಬಾರದು. ದೇವಾಲಯಗಳಲ್ಲಿ ಮನುಷ್ಯನ ಆತ್ಮೋನ್ನತಿ ಯಾಗಬೇಕು. ಸಾವಿರ ಸಾವಿರ ಜನ ಕ್ಯೂನಲ್ಲಿ ನಿಂತು ದೇವರ ದರ್ಶನ ಮಾಡುವ ದೇವಾಲಯಗಳು ಇಂತಾ ಆತ್ಮೋನ್ನತಿಯ ಕೇಂದ್ರವಾಗಲು ಸಾಧ್ಯವೇ ಹೇಳಿ. ದಿನಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡುವುದೂ ಕೂಡ ಒಂದು ರೀತಿಯ ದೌರ್ಬಲ್ಯವೇ ಸರಿ. ಮನೆಯಲ್ಲೇನೋ ತಾಪತ್ರಯಗಳು! ಗಂಡ ಹೆಂಡಿರ ಜಗಳ. ಮಕ್ಕಳಲ್ಲಿ ಮನಸ್ಥಾಪ.ಯಾರಿಗೋ ಖಾಯಿಲೆ. ಇವೆಲ್ಲವನ್ನೂ ಆ ದೇವರು ಸರಿಪಡಿಸಬೇಕು, ಆ ಬೇಡಿಕೆಯ ಪಟ್ಟಿ ಹಿಡಿದು ದೇವರ ಮುಂದೆ ಉದ್ದುದ್ದ ಕ್ಯೂ.
ಜ್ಯೋತಿಷಿಗಳಿಗೂ ಡಿಮ್ಯಾಂಡ್!!
ಯಾಕೆ ಇದನ್ನೆಲ್ಲಾ ಬರೆದೆ, ಎಂದರೆ ನಾವು ನಮ್ಮ ವಿವೇಕದಿಂದ ಸರಿಮಾಡಿಕೊಳ್ಳ ಬೇಕಾದ್ದನ್ನು ದೇವರು ಸರಿ ಮಾಡ್ತಾನೆ, ಅಂತಾ ತೆಗೆದುಕೊಂಡು ಹೋಗ್ತೀವಲ್ಲಾ! ಅಂತಾ ಚಿಂತೆಯಾಯ್ತು.
ದೇವರು ಇಲ್ವಾ? ಖಂಡಿತಾ ಇದಾನೆ. ಅವನಿಲ್ಲದಿದ್ದರೆ ಈ ಜಗತ್ತು ನಡೆಯುತ್ತಲೇ ಇರಲಿಲ್ಲ. ಅವನು ಒಂದು ದಿವ್ಯ ಶಕ್ತಿ. ಅವನು ಅಗೋಚರ. ಅವನ ನೆರವು ಬೇಡವೇ? ಖಂಡಿತಾ ಬೇಕು. ನಮ್ಮ ಸಂಕಲ್ಪ ಸರಿಯಾಗಿದ್ದರೆ, ಅದಕ್ಕೆ ತಕ್ಕಂತೆ ನಾವು ನಡೆದುಕೊಂಡರೆ [ಹರಕೆ ತೀರಿಸುವುದಲ್ಲ] ಅಂದರೆ ಮಾಡಬೇಕಾದ್ದನ್ನು ಮಾಡಿದರೆ ಆಗಬೇಕಾದ್ದು ಆಗೇ ತೀರುತ್ತದೆ. ಅವನಿಗೆ ಇಡೀ ಬ್ರಹ್ಮಾಂಡವನ್ನು ನಡೆಸುವ ಹೊಣೆ ಇದೆ.ನಮ್ಮ ಗಂಡ-ಹೆಂಡಿರ ಮನಸ್ಥಾಪ ಬಿಡಿಸಲು ಅವನು ಬರಬೇಕೆ?
ನಿಜವಾಗಿ ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗವನ್ನು ಪಕ್ಕಕ್ಕಿಟ್ಟು ಜನರನ್ನು ದಾರಿತಪ್ಪಿಸುವವರಿಗೇ ಹೆಚ್ಚು ಪ್ರಾಮುಖ್ಯತೆ ಯಾಗಿದೆಯಲ್ಲಾ! ಇದು ಅತ್ಯಂತ ನೋವಿನ ಸಂಗತಿ.
ಸತ್ಯವನ್ನು ಹೂತು ಹಾಕಿ ಸುಳ್ಳಿನ ಮಹಲುಗಳನ್ನು ಕಟ್ಟಿ ದೊಡ್ದ ನಾಟಕದ ಕಂಪನಿಗಳು ನಡೆಯಿತ್ತಿವೆ. ಜನರು ನೋಡುತ್ತಿದ್ದಾರೆ. ಅದನ್ನೇ ಸತ್ಯವೆಂದು ನಂಬಿದ್ದಾರೆ. ಇದಕ್ಕಿಂತ ಆತ್ಮವಂಚನೆ ಬೇರೆ ಇಲ್ಲ.
ನಮಗೆ ಜೀವನದ ನಿಜವಾದ ಅರಿವು ಮೂಡುವುದು ವೇದಜ್ಞಾನದಿಂದ ಮಾತ್ರ.ಆದರೆ ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಅಮೂಲ್ಯ ಜ್ಞಾನಭಂಡಾರವಿದೆ, ಎಂದು ತಿಳಿಸಿಕೊಡುವವರ ಸಂಖ್ಯೆ ಬಹಳ ಕಡಿಮೆ ಇದೆ.


[ ಈ ಪೋಸ್ಟ್ ಗೆ ಆಧಾರವಾದ ಒಂದು ವೇದ ಮಂತ್ರವನ್ನು ನೋಡಿ]

ಸ್ವಯಂ ವಾಜಿನ್ಸ್ತನ್ವಂ ಕಲ್ಪಯಸ್ವ ಸ್ವಯಂ ಯಜಸ್ವ|

ಸ್ವಯಂ ಜುಷಸ್ವ ಮಹಿಮಾ ತೇ ಅನ್ಯೇನ ನಸನ್ನಶೇ ||

[ಯಜುರ್ವೇದ ೨೩ನೇ ಅಧ್ಯಾಯ ೧೫ ನೇ ಮಂತ್ರ]

ಸ್ವಯಂ = ತಾನೇ ಸ್ವತ:

ವಾಜಿನ್ = ಹೇ ಬಲಶಾಲಿಯೇ,

ತನ್ವಂ = ಶರೀರವನ್ನು

ಕಲ್ಪಯಸ್ವ = ಸಮರ್ಥಗೊಳಿಸಿಕೊ

ಸ್ವಯಂ ಯಜಸ್ವ = ತಾನೇ ಸ್ವತ: ಸತ್ಕರ್ಮ ಮಾಡು

ಸ್ವಯಂ ಜುಷಸ್ವ = ತಾನೇ ಸ್ವತ: ಪ್ರೀತಿಯಿಂದ ಮಾಡು

ತೇ ಮಹಿಮಾ = ಸಾಮರ್ಥ್ಯವು ನಿನ್ನದೇ

ಅನ್ಯೇನ ನ ಸನ್ನಶೇ = ಬೇರೆಯವರೊಂದಿಗೆ ನಷ್ಟವಾಗದಿರಲಿ.

ನನ್ನ ಕೈಲಿ ಈ ಕೆಲಸ ಮಾಡಲು ಸಾಧ್ಯವೇ? ನಾನು ಸಮರ್ಥನೇ? ನನಗೆ ಶಕ್ತಿ ಇದೆಯೇ? ಎಂದು ತಲ್ಲಣಿಸುವ ಕೀಳರಿಮೆಯ ಜನರು ಈ ವೇದ ಮಂತ್ರವನ್ನು ಕೇಳಬೇಕು.

ವೇದ ಮಂತ್ರವು ಸಾರುತ್ತಿದೆ ಹೇ ಅಣುಚೇತನರೇ ನೀನು ಬಲಶಾಲಿ ನೀನು ಕುಸಿದು ಕೂರುವ ಅಗತ್ಯವಿಲ್ಲ. ನಿನಗೆ ಸಾಮರ್ಥ್ಯವಿದೆ! ನಿನ್ನಲ್ಲಿ ಅಂತ:ಸತ್ವ ಇದೆ. ಕುಸಿದು ಕೂರಬೇಡ. ಯಾರಿಗೂ ನಿನ್ನನ್ನು ಹೋಲಿಸಿಕೊಳ್ಳುವ ಅಗತ್ಯವಿಲ್ಲ. ನಿನಗೆ ಎಷ್ಟು ಸಾಮರ್ಥ್ಯವಿದೆಯೋ ಅಷ್ಟನ್ನು ನೀನು ಮಾಡು. ತನ್ವಂ ಕಲ್ಪಯಸ್ವ ಅಂದರೆ ನಿನ್ನ ಶರೀರವನ್ನು ನೀನೇ ಸಮರ್ಥಗೊಳಿಸಿಕೊ. ನಮ್ಮ ಹೊಟ್ಟೆ ತುಂಬಲು ನಾವೇ ಊಟ ಮಾಡಬೇಕು,ನಮ್ಮ ಶರೀರ ಸದೃಢವಾಗಿರಲು ನಾವೇ ವ್ಯಾಯಾಮ ಮಾಡಬೇಕು, ನಾವೇ ವಿಶ್ರಾಂತಿ ತೆಗೆದುಕೊಳ್ಳಬೇಕು ತಾನೇ. ಹಾಗೆಯೇ ನಿನ್ನ ಶರೀರವನ್ನು ನೀನೇ ಸದೃಢ ಗೊಳಿಸಿಕೊ. ಸ್ವಯಂ ಯಜಸ್ವ ಅಂದರೆ ನೀನೇ ಸ್ವತ: ಸತ್ಕರ್ಮಗಳನ್ನು ಮಾಡು. ನಿನ್ನ ಪರವಾಗಿ ಬೇರೆ ಯಾರೋ ಸತ್ಕರ್ಮವನ್ನು ಮಾಡಿದರೆ ಅದರ ಫಲ ಅವರಿಗೇ ಹೊರತೂ ನಿನಗಲ್ಲ. ಸ್ವಯಂ ಜುಷಸ್ವ ಅಂದರೆ ನೀನೇ ಸ್ವತ: ಪ್ರೀತಿಯಿಂದ ಕರ್ಮವನ್ನು ಮಾಡು. ಮಾಡುವ ಕೆಲಸವನ್ನು ಬೇಸರದಿಂದ ಮಾಡಬೇಡ. ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ನಿನ್ನ ಅಂತರಂಗದಲ್ಲಿರುವ ಪಾತ್ರೆಯಲ್ಲಿ ಸತ್ಕರ್ಮ ಫಲವೇ ಜಾಸ್ತಿಯಾಗುತ್ತದಲ್ಲಾ! ಮಾಡುವ ಕೆಲಸವನ್ನು ಅಯ್ಯೋ ಮಾಡಬೇಕಲ್ಲಾ! ಎಂದು ಮಾಡುವ ಬದಲು ಸಂತೋಷವಾಗಿ ಮಾಡು. ಅದರಿಂದ ನಿನಗೇ ಲಾಭ. ಎಷ್ಟು ಕಷ್ಟಪಟ್ಟು ಜೀವನ ಮಾಡುತ್ತಿದ್ದೇನೆ, ಗೊತ್ತಾ? ಎಂದು ಯಾರೋ ಕನಿಕರ ಪಡುವಂತೆ ವರ್ತಿಸಬೇಡಿ.ಇದರಿಂದ ನಿಮ್ಮ ಅಂತರಂಗವು ಮಲಿನವಾಗುತ್ತದೆ.

"ತೇ ಮಹಿಮಾ ಅನ್ಯೇನ ನಸನ್ನಶೇ" ಅಂದರೆ ಯಾರೋ ಮಾಡುವ ಸಾಧನೆಯಿಂದ ನಿನ್ನ ಮಹಿಮೆಯು ಸಿದ್ಧಿಸುವುದಿಲ್ಲ. ನೀನು ಒಳ್ಳೆಯ ಅಡುಗೆ ಮಾಡಬೇಕೆಂದರೆ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀನೇ ಹೊಂದಿಸಿಕೊಳ್ಳ ಬೇಕು. ಬೇಕಾಗುವ ಸಾಮಗ್ರಿಗಳೇನು ? ನಿನ್ನ ಮಾತು, ನಿನ್ನ ನಡೆ, ನಿನ್ನ ವ್ಯವಹಾರ.ಅಷ್ಟೆ. ಯಾರೋ ಸಾಧನೆ ಮಾಡಿದ್ದರೆ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನೀನು ಅವರನ್ನು ಹೊಗಳ ಬಹುದಷ್ಟೆ. ಆದರೆ ನೀನು ಸಾಧನೆ ಮಾಡಬೇಕಾದರೆ ಅದು ನಿನ್ನ ನಡೆ, ನುಡಿ, ವ್ಯವಹಾರಗಳಿಂದ ಮಾತ್ರ ಸಾಧ್ಯ.

Wednesday, January 7, 2015

ವಿಶ್ವದ ಅಭ್ಯುದಯಕ್ಕಾಗಿ ವೇದ"

ಇಷ್ಟಂತೂ ಸತ್ಯ. ನಮ್ಮ ದೇಶದಲ್ಲಿ ವೇದವನ್ನು ಎಲ್ಲದಕ್ಕೂ ಆಧಾರವೆಂದು ಹೇಳುತ್ತಲೇ ನೂರಾರು ದಾರ್ಶನಿಕರು ಅವರು ಕಂಡ   ಸತ್ಯವನ್ನು ಪ್ರತಿಪಾದಿಸುತ್ತಾ ಅಂತೂ ಇಂತೂ ವೇದದ ಸುತ್ತ ಮುತ್ತವೇ ಸುತ್ತುತ್ತಾ,  ವೇದದ ವಿರುದ್ಧವಾಗಿಯೂ ನಡೆಯುತ್ತಾ ನಮ್ಮ ಋಷಿಮುನಿಗಳು ಕೊಟ್ಟ   ವಿಚಾರವನ್ನು ಅವರಿಗೆ ತೋಚಿದ  ರೀತಿಯಲ್ಲಿ ಉಳಿಸಿದರು.  ಉಳಿಸಿದರೆನ್ನುವುದಕ್ಕಿಂತಲೂ  ವೇದವು ಅದರ ಗಟ್ಟಿತನದಿಂದ ಉಳಿದಿದೆ. ಇನ್ನು ಮುಂದೆಯೂ ಉಳಿಯುತ್ತದೆ.ಕಾರಣ  ಅದು ಸಾರ್ವಕಾಲಿಕ ಸತ್ಯ. ಶಂಕರ,ಮಧ್ವ,ರಾಮಾನುಜ,ಬಸವಣ್ಣ, ಬುದ್ಧ,ಮಹಾವೀರ, ಗುರುನಾನಕ್ ಅಲ್ಲದೆ ಇತ್ತೀಚಿನ ವಿವೇಕಾನಂದ, ಡಾ.ಅಂಬೇಡ್ಕರ್ ವರಗೆ ಎಲ್ಲರೂ ಕೊಟ್ಟ ವಿಚಾರಗಳು ನಶಿಸಿದರೂ ವೇದವು  ನಶಿಸಲು ಸಾಧ್ಯವೇ ಇಲ್ಲ.ಕಾರಣ ಅದು ಸಾರ್ವಕಾಲಿಕ, ಸಾರ್ವಭೌಮ, ಸಾರ್ವತ್ರಿಕ ಮತ್ತು ಸಾರ್ವದೇಶಿಕ. ಹಿಂದುಗಳಿಗೆ ಮಾತ್ರ ವೇದ ಸಂಬಂಧಿಸಿದ್ದೆಂಬ ತಪ್ಪು ಕಲ್ಪನೆ ಇದೆ. ಆದರೆ ವೇದವು ಸಕಲ ಮಾನವರಿಗಾಗಿ ಇದೆ.ಅದನ್ನು ಮರೆತಿರುವ ಪರಿಣಾಮವೇ ಈಗಿನ ಭಯೋತ್ಪಾದನೆ, ಮತೀಯ ಕಲಹ...ಎಲ್ಲವೂ ಕೂಡ. ಇವೆಲ್ಲ ಸಂಘರ್ಷಗಳಿಗೂ ಪರಿಹಾರ ಸಿಗಲು  ಮತ್ತೆ ವೇದವೇ ಗತಿ. ನಮ್ಮ ವೇದ ಪಂಡಿತರು ಕೇವಲ ಪೂಜೆ-ಪುನಸ್ಕಾರಗಳು, ಹವನ ಹೋಮಗಳು, ಶ್ರಾದ್ಧಕರ್ಮಗಳು, ವ್ರತ ಕತೆಗಳಿಗೆ ಸೀಮಿತವಾಗದೆ ವೇದದ ಒಳಹೊಕ್ಕಿ ನೋಡುವ ಕಾಲ ಬಂದಿದೆ. ಆ ಕೆಲಸ ಎಷ್ಟು ಬೇಗ ಶುರುವಾಗುತ್ತದೋ ಅಷ್ಟು ಬೇಗ ಇಡೀ ವಿಶ್ವದ ಅಭ್ಯುದಯಕ್ಕೆ     ಅಗತ್ಯವಾದ ಎಲ್ಲಾ ಮಾರ್ಗದರ್ಶನವೂ ಸಿಗುವುದರಲ್ಲಿ ಸಂಶಯವಿಲ್ಲ. ಈಗ ವೇದ ವಿದ್ವಾಂಸರನ್ನು ಎಚ್ಚರಿಸುವವರು ಬೇಕಾಗಿದ್ದಾರೆ. ಮೋದಿಯವರ ಸರ್ಕಾರವೂ ಕೂಡ  ಈ ಬಗ್ಗೆ ಚಿಂತನೆ ನಡೆಸಬೇಕು." ವಿಶ್ವದ ಅಭ್ಯುದಯಕ್ಕಾಗಿ ವೇದ"  ಗುರಿಯೊಡನೆ  ರಭಸದ ಕೆಲಸವಾಗಬೇಕು. ನನಗೆಲ್ಲೋ ಹುಚ್ಚು ಅಂತೀರಾ? ಪರವಾಗಿಲ್ಲ. ಈ ಹುಚ್ಚನ್ನು ವಿದ್ವಾಂಸರಿಗೆ ಹಿಡಿಸುವ ಕೆಲಸವನ್ನು ಮಾಡಿ.