Pages

Wednesday, November 9, 2016

ಹಾಸನ ಪತಂಜಲಿ -ಒಂದು ನೋಟ

ಹಾಸನದಲ್ಲಿ ಪತಂಜಲಿ ಮತ್ತು ವೇದಭಾರತಿಯ ಸಹಯೋಗದಲ್ಲಿ ಹಲವು ಸತ್ಸಂಗಗಳಾಗಿವೆ. ಆದರೆ ಜೂನ್ 21 ರಂದು ನಡೆದ ಯೋಗ ಸಂಬ್ರಮ ಮತ್ತು ಇತ್ತೀಚೆಗೆ ಪತಂಜಲಿ ಸಮಿತಿಯ ರಾಜ್ಯ ಪ್ರಭಾರಿ ಶ್ರೀ ಭವರ್ ಲಾಲ್ ಆರ್ಯರ ಮತ್ತು ದೊಡ್ಡಬಳ್ಳಾಪುರ ಸಮೀಪ ತಪಸಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಪೂಜ್ಯ ದಿವ್ಯ ಜ್ಞಾನಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆದ ಸತ್ಸಂಗಗಳು ಹಾಸನದಲ್ಲಿ ಪತಂಜಲಿ ಯೋಗ ಸಮಿತಿಯ ಚಟುವಟಿಕೆಗಳಿಗೆ ಹಿಡಿದ ಕನ್ನಡಿಯಾಗಿವೆ. ಯೋಗಾಭ್ಯಾಸ ಮಾಡಲು ಬರುವ ಯೋಗ ಸಾಧಕರಿಗೆ ಸಾಕಷ್ಟು ಸ್ಥಳಾವಕಾಶ ಇಲ್ಲವಾಗಿದೆ. ಹಾಸನದಲ್ಲಿ ಯೋಗವನ್ನು ಮನೆ ಮನೆಗೆ ತಲುಪಿಸಲು ಈಗಾಗಲೇ ಇರುವ ಶಿಕ್ಷಕರ ಜೊತೆಗೆ ಇನ್ನೂ 50 ಕ್ಕಿಂತ ಹೆಚ್ಚು ಶಿಕ್ಷಕರು ಸೇರ್ಪಡೆಯಾಗುತ್ತಿದ್ದಾರೆ. ನಗರದ ಎಲ್ಲಾ ವಾರ್ಡ್ ಗಳಲ್ಲಿ ಯೋಗ ತರಗತಿ ನಡೆಸಲು ನಾವು ತಯಾರ್ ಎಂದು ಸಿದ್ಧವಾಗುತ್ತಿದ್ದಾರೆ. ಅದಕ್ಕೆ ಬೇಕಾಗಿರುವುದು ಎಲ್ಲಾ ವಾರ್ಡ್ ಗಳಲ್ಲೂ ಸ್ಥಳಾವಕಾಶ. ಇದನ್ನು ಒದಗಿಸ ಬೇಕಾದವರು ಸ್ಥಳೀಯ ನಗರ ಸಭೆಯವರು ಮತ್ತು ಶಾಲಾ ಕಾಲೇಜು ಮುಖ್ಯಸ್ಥರು. 
ನೀವು ಸ್ಥಳಾವಕಾಶ ಕಲ್ಪಿಸಿ. ನಾವು ಉಚಿತವಾಗಿ ಯೋಗ ಹೇಳಿಕೊಡುತ್ತೇವೆ, ಎಂಬುದು ನಮ್ಮ ಮನವಿ. ಯೋಗವು ಎಲ್ಲರಿಗಾಗಿ. ಇದರಲ್ಲಿ ಜಾತಿ, ಮತ, ಪಂಥ, ರಾಜಕೀಯ ಆಸಕ್ತಿ ಯಾವುದೂ ಇಲ್ಲ. ಹಾಸನವನ್ನು ಯೋಗ ಮಯವನ್ನಾಗಿ ಮಾದಬೇಕೆಂಬುದಷ್ಟೇ ನಮ್ಮ ಇಚ್ಛೆ. ಅದಕ್ಕೆ ಬೇಕಾಗಿದೆ ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಮುಖಂಡರ ಸಹಕಾರ.