Pages

Wednesday, March 21, 2018

ವೇದಭಾರತಿ ಬೇರೆ, ಪತಂಜಲಿ ಯೋಗಪೀಠದ ಕಾರ್ಯಚಟುವಟಿಕೆ ಬೇರೆ ಎನಿಸುವುದೇ ಇಲ್ಲ.

ನನಗೆ ವೇದಭಾರತಿ ಬೇರೆ, ಪತಂಜಲಿ ಯೋಗಪೀಠದ ಕಾರ್ಯಚಟುವಟಿಕೆ ಬೇರೆ ಎನಿಸುವುದೇ ಇಲ್ಲ. ಕಾರಣ ಪೂಜ್ಯ ಬಾಬಾ ರಾಮದೇವ್ ಜಿ ಆಶಯದಂತೆ ಮತ್ತೊಮ್ಮೆ ಋಷಿಸಂಸ್ಕೃತಿಯನ್ನು ಪುನರುತ್ಥಾನ ಗೊಳಿಸಬೇಕೆಂಬ ಪೂಜ್ಯ ಸ್ವಾಮೀಜಿಯವರ ಕನಸೇ ವೇದಭಾರತಿಯದೂ ಕೂಡ.
 ವೇದಭಾರತಿಯ ಕಾರ್ಯಾಲಯ ಈಶಾವಾಸ್ಯಮ್ ನಲ್ಲಿ ನಡೆಯುತ್ತಿರುವ ಯೋಗ ಕೇಂದ್ರದಲ್ಲಿ ನಿತ್ಯವೂ 15 ನಿಮಿಷಗಳು ಅಗ್ನಿಹೋತ್ರವನ್ನು  ಕೂಡ ಪ್ರಾಯೋಗಿಕವಾಗಿ ಕಳೆದ ಒಂದು ತಿಂಗಳಿನಿಂದ ನಡೆಸುತ್ತಿದ್ದು, ಯೋಗಾಭ್ಯಾಸಿಗಳು ಸಂತೋಷದಿಂದ ಅಗ್ನಿಹೋತ್ರದಲ್ಲೂ ಸಹ ಪಾಲ್ಗೊಳ್ಳುತ್ತಿದ್ದಾರೆ. ಮತ್ತೊಂದು ಕೇಂದ್ರವಾದ ಗಹನ ಯೋಗ ಕೇಂದ್ರದಲ್ಲಿ ವಾರಕ್ಕೊಮ್ಮೆ ಬುಧವಾರ ಅಗ್ನಿಹೋತ್ರವು ನಡೆಯುತ್ತಿದೆ.