Pages

Wednesday, July 31, 2013

ಯಶಸ್ಸು ಕಂಡ ಗೀತಾಜ್ಞಾನಯಜ್ಞ











       ಹಾಸನದಲ್ಲಿ ಹದಿನೈದು ದಿನಗಳಿಂದ ಹಿಡಿದ ಮಳೆ ನಿಂತಿಲ್ಲ. ಆದರೂ ಪೂಜ್ಯ ಶ್ರೀ ಚಿದ್ರೂಪಾನಂದರು ನಡೆಸಿಕೊಟ್ಟ ಗೀತಾಜ್ಞಾನಯಜ್ಞಕ್ಕೆ ಜನರು ಛತ್ರಿಹಿಡಿದೇ ಬಂದರು. ಛಳಿ-ಮಳೆಯನ್ನು ಲೆಕ್ಕಿಸಲೇ ಇಲ್ಲ. ವೇದಭಾರತಿಯ ಕಾರ್ಯಕರ್ತರ ಮನಸ್ಸಿನಲ್ಲಿ ಸಂದೇಹವಿತ್ತು. ಈ ಬಿಡದ  ಮಳೆಯಲ್ಲಿ ಜನರು ಹೇಗಾದರೂ ಬರುತ್ತಾರೆ?! ಆದರೆ ಪೂಜ್ಯ ಚಿದ್ರೂಪಾನಂದರ ಮಾತನ್ನು ಒಮ್ಮೆ ಕೇಳಿದ ಮೇಲೆ  ರುಚಿಯರಿತವರು  ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಹಾಗೇ ಆಯ್ತು. ಆರು  ದಿನಗಳು ನಡೆದ  ಗೀತಾಜ್ಞಾನಯಜ್ಞವು ಅತ್ಯಂತ  ಯಶಸ್ವಿಯಾಗಿ  ನಿನ್ನೆ ಸಮಾರೋಪ ಗೊಂಡಿತು.
             ಹಾಸನದ ಜನರಿಗೆ ಪೂಜ್ಯ ಶ್ರೀ ಚಿದ್ರೂಪಾನಂದರು ಹೊಸಬರಲ್ಲ. ಆದರೆ ಈ ಭಾರಿ ನಡೆದ ಗೀತಾಜ್ಞಾನಯಜ್ಞವು  ಹೊಸ ಸಂಪ್ರದಾಯವನ್ನು ಹಾಡಿತು.  ಸರಿಯಾಗಿ ಸಂಜೆ  6.00 ಗಂಟೆಗೆ  ಓಂಕಾರದೊಡನೆ ಆರಂಭವಾಗುತ್ತಿದ್ದ ಕಾರ್ಯಕ್ರಮದಲ್ಲಿ ಮೊದಲು ವೇದಭಾರತಿಯ ಸದಸ್ಯರಿಂದ ಅಗ್ನಿಹೋತ್ರ.  ಮಹಿಳಾ ವೇದಾಭ್ಯಾಸಿಗಳು, ಪುರುಷರು, ಕಿಶೋರರು ಸಾಮೂಹಿಕವಾಗಿ   ಸುಶ್ರಾವ್ಯವಾಗಿ ಪಠಿಸುತ್ತಿದ್ದ ವೇದ ಮಂತ್ರಗಳೊಂದಿಗೆ ನಡೆಯುತ್ತಿದ್ದ ಅಗ್ನಿಹೋತ್ರವು ಜನರ ಆಕರ್ಷಣೆಗೆ ಕಾರಣವಾಯ್ತು. ವೇದಭಾರತಿಯು ಆರಂಭವಾದದ್ದೇ "ಎಲ್ಲರಿಗಾಗಿ ವೇದ" ಎಂಬ ಉದ್ದೇಶದಿಂದ. ಕೇವಲ ಒಂದು   ತಿಂಗಳ  ಅಭ್ಯಾಸದಲ್ಲಿ  ನಡೆಸಿಕೊಟ್ಟ     ಅಗ್ನಿಹೋತ್ರವು ವೇದಾಧ್ಯಾಯಿಗಳಲ್ಲೂ ಭರವಸೆಯ ಭಾವವನ್ನು ತಂದರೆ ಜನರ ಆಕರ್ಷಣೆಗೂ ಕಾರಣವಾಯ್ತು. ಪೂಜ್ಯ ಸ್ವಾಮೀಜಿಯವರಂತೂ ವೇದವನ್ನು ಜನಸಾಮಾನ್ಯರೆಡೆಗೆ ತೆಗೆದುಕೊಂಡು ಹೋಗಲೇ ಬೇಕಾದ ಅನಿವಾರ್ಯತೆಯ ಬಗ್ಗೆ  ಒತ್ತುಕೊಟ್ಟು ಜನರಿಗೆ ಕೊಟ್ಟ ಕರೆಯು ಎಲ್ಲರ ಸಂತಸಕ್ಕೆ ಕಾರಣವಾಯ್ತು. ಪೂಜ್ಯರ ಆಡಿಯೋ ಗಳನ್ನು ಒಂದೆರಡು ದಿನಗಳಲ್ಲಿ ಇಲ್ಲಿ ಪ್ರಕಟಿಸಲಾಗುವುದು.

ತಪ್ಪದೆ ನೋಡಿ, ನಿಜವ ತಿಳಿಯಿರಿ!