Pages

Friday, April 3, 2015

ಬೆಂಗಳೂರಿನಲ್ಲಿ ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿ ವೇದ" ಪರಿಚಯ ಕಾರ್ಯಕ್ರಮ

  ಹಾಸನದ ವೇದಭಾರತಿಯ ಸಹಕಾರದಲ್ಲಿ  ಬೆಂಗಳೂರಿನಲ್ಲಿ ಒಂದು ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿ ವೇದ" ಪರಿಚಯ ಕಾರ್ಯಕ್ರಮ ನಡೆಸಬೇಕೆಂಬ ವಿಷಯವನ್ನು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಪ್ರಸ್ತಾಪಿಸಿದಾಗ      ಆದಷ್ಟೂ ಬೇಗ ಏರ್ಪಾಡು ಮಾಡಿ ನಾನು ವಿಚಾರ ತಿಳಿಸುತ್ತೇನೆಂದು ಹೇಳಿದ್ದಾರೆ. ಅವರ ಅನಾರೋಗ್ಯದ ಸ್ಥಿತಿಯಲ್ಲಿ ಅವರಿಗೆ ಅನುಕೂಲವಾಗುವ ಸ್ಥಳದ ಸಲಹೆ ಕೂಡ  ಕೊಟ್ಟಿದ್ದಾರೆ. ರಾಜಾಜಿನಗರದಲ್ಲಿ ಇಸ್ಕಾನ್ ಸಮೀಪ ಇರುವ "ವಂದೇಮಾತರಮ್ " ಹೋಟೆಲಿನ ಕಾನ್ಫೆರೆನ್ಸ್ ಹಾಲ್ ಆದರೆ ಸೂಕ್ತ ಎಂಬುದು ಅವರ ಅಭಿಪ್ರಾಯ[ ಅಲ್ಲಿ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಕಲ್ಪಿಸುತ್ತಾರೆ]. ಅಲ್ಲಿ ಧ್ವನಿ ವರ್ಧಕ ಸಹಿತ ಎಲ್ಲಾ ವ್ಯವಸ್ಥೆ ಇದೆ. ಸಂಖ್ಯೆ ಐವತ್ತಾದರೆ ಉತ್ತಮ.[ ಅಲ್ಲಿ ನೂರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಅವಕಾಶವಿದೆ] ಅಗ್ನಿಹೋತ್ರವನ್ನೂ ಮಾಡಲು ಅವಕಾಶವಿದೆ. ಅಲ್ಲಿ ನಾವು ತೆಗೆದುಕೊಳ್ಳುವ ಆಹಾರಕ್ಕೆ ಮಾತ್ರ ಛಾರ್ಜ್ ಮಾಡುತ್ತಾರೆ. ಕಾನ್ಫರೆನ್ಸ್ ಹಾಲ್ ಉಚಿತ-ಎಂದು ತಿಳಿಸಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ಒಂದು ಭಾನುವಾರವನ್ನು ನಿಶ್ಚಯಿಸಿದರಾಯ್ತು. ಆಸಕ್ತರು vedasudhe@gmail.com ಗೆ ನಿಮ್ಮ ಫೋನ್ ನಂಬರ್ ಸಹಿತ ಮೇಲ್ ಮಾಡಿ. ಬೆಂಗಳೂರಿನ ಅಭಿಮಾನಿಗಳಷ್ಟೇ  ಅಲ್ಲ. ಹೊರಗಿನವರೂ ಪಾಲ್ಗೊಳ್ಳಬಹುದು.

ಹಾಸನ ವೇದಭಾರತಿಯಿಂದ ಬೆಂಗಳೂರಿನಲ್ಲೊಂದು ಕಾರ್ಯಕ್ರಮ

ಹಾಸನದ ವೇದಭಾರತಿಯ ಸಹಕಾರದಿಂದ  ಬೆಂಗಳೂರಿನಲ್ಲಿ ಒಂದು "ಅಗ್ನಿಹೋತ್ರ" ಮತ್ತು  "ಎಲ್ಲರಿಗಾಗಿವೇದ" ಪರಿಚಯ ಕಾರ್ಯಕ್ರಮವನ್ನು ನಡೆಸಿ  -   ಹೀಗೊಂದು ಸಲಹೆ ಬಂದಿದೆ. ಮಾಡೋಣ ಎಂದಿದ್ದೇನೆ. ಈಗ ಅದಕ್ಕಾಗಿ ಪೂರ್ವಭಾವಿ ಕೆಲಸ ಶುರುವಾಗಬೇಕಲ್ಲಾ! ಹಾಗೊಂದು ವೇಳೆ ಯಾವುದಾದರೂ ರಜೆಯ ದಿನ ಬೆಂಗಳೂರಿನಲ್ಲಿ ಯಾವುದಾದರೂ ಪರಿಚಿತ ಸ್ಥಳದಲ್ಲಿ ಇಂತಾ ಒಂದು ಕಾರ್ಯಕ್ರಮವನ್ನು ಜೂನ್ ತಿಂಗಳಲ್ಲಿ ಒಂದು ಭಾನುವಾರ ಹಮ್ಮಿಕೊಂಡರೆ ಅದರಲ್ಲಿ ಮಿತ್ರರೊಡನೆ  ನೀವು ಪಾಲ್ಗೊಳ್ಳುವಿರಾ?  ಸಮ್ಮತಿ ಇದ್ದವರು ತಮ್ಮ ಫೋನ್ ನಂಬರ್ ನ್ನು vedasudhe@gmail.com ಗೆ ಮೇಲ್ ಮಾಡುವಿರಾ?

ವೇದಭಾರತಿಯು ಹಾಸನದಲ್ಲಿ ಪ್ರತಿದಿನ ಸಂಜೆ 6.00 ರಿಂದ 7.00 ರವರಗೆ  ನಡೆಸುವ  ನಿತ್ಯ ಸತ್ಸಂಗದ ಮತ್ತು  ಹಾವೇರಿ ಸಮೀಪ ಮಲಗುಂದದ ಪೂಜ್ಯ ಚಿದ್ರೂಪಾನಂದ ಸ್ವಾಮೀಜಿಯವರ ಆಶ್ರಮದಲ್ಲಿ ಹಾಸನ ವೇದಭಾರತಿಯ ಸಹಕಾರದೊಂದಿಗೆ ನಡೆದ ಸಾಮೂಹಿಕ ಅಗ್ನಿಹೋತ್ರದ ಚಿತ್ರ ಜೊತೆಗಿದೆ. ಹಾಸನದ ಕೆ.ಇ.ಬಿಯಲ್ಲಿ ನಡೆಸಿದ ಸಾಮೂಹಿಕ ಅಗ್ನಿಹೋತ್ರದ  ವೀಡಿಯೋ ಕ್ಲಿಪ್ ಕೂಡ ಜೊತೆಗಿದೆ.
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ