Pages

Monday, November 22, 2010

चंदन है इस देश की माटी


चंदन है इस देश की माटी तपोभूमि हर ग्राम है
हर बाला देवी की प्रतिमा बच्चा बच्चा राम है || ध्रु ||

हर शरीर मंदिर सा पावन हर मानव उपकारी है
जहॉं सिंह बन गये खिलौने गाय जहॉं मॉं प्यारी है
जहॉं सवेरा शंख बजाता लोरी गाती शाम है || 1 ||

जहॉं कर्म से भाग्य बदलता श्रम निष्ठा कल्याणी है
त्याग और तप की गाथाऍं गाती कवि की वाणी है
ज्ञान जहॉं का गंगाजल सा निर्मल है अविराम है || 2 ||

जिस के सैनिक समरभूमि मे गाया करते गीता है
जहॉं खेत मे हल के नीचे खेला करती सीता है
जीवन का आदर्श जहॉं पर परमेश्वर का धाम है || 3 ||


 ಕೃಪೆ: ಗೀತ ಗಂಗಾ

ನಾಳೆಗಳು ನಮದೆನಿಸಿವೆ


ಕೃಪೆ:ಗೀತಗಂಗಾ

ಹೂ ಹರೆಯದ ಹೊಂಗನಸುಗಳೆ

ಹೂ ಹರೆಯದ ಹೊಂಗನಸುಗಳೆ 
ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ||


ಕತ್ತಲೆಗಿದು ಸಾವು ಸುತ್ತಲು ಮುಂಜಾವು

ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾದೇವಿ ಮಂಗಳೆ ಸುಮಂಗಳೆ

ಎಚ್ಚರಾಗಿ ಕನಸು ಕಂಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ||

ನೋವಿನಿರುಳು ನರಳಿ ನರಳಿ ಸರಿದಿದೆ
ನಗುವು ನಲಿವಿಗಾಗಿ ಕದವ ತೆರೆದಿದೆ
ಸೂತ್ರಬದ್ಧ್ರ ಕಾರ್ಯ ನಮ್ಮ ಎದುರಿದೆ

ಲೋಕ ನಮ್ಮ ನಿಲುವಿಗಾಗಿ ಕಾದಿದೆ||


ಅಬಲಶಕ್ತರಲ್ಲ ಸಬಲರು ನಾವೆಲ್ಲಾ

ಅಬಲಶಕ್ತರಲ್ಲ ಸಬಲರು ನಾವೆಲ್ಲಾ
ಹಗಲಿಗರಳಬೇಕು ನೈದಿಲೆ, ನೈದಿಲೆ

ಹಗಲಿಗರಳಬೇಕು ನೈದಿಲೆ||

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ|

ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, 

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ|

ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ,
ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ, 
ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಹೊಡೆದ ವೀರ ಹುಡುಗ ಹೊಯ್ಸಳಾ,
ವೀರ ವಾರಸಿಕೆಯೆ ಹಿಂದು ಸಂಕುಲ||


ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ

ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ
ರಾಷ್ಟ್ರಶಕ್ತಿಗದುವೆ ಹಿನ್ನೆಲೆ, ಹಿನ್ನೆಲೆ

ರಾಷ್ಟ್ರಶಕ್ತಿಗದುವೆ ಹಿನ್ನೆಲೆ||
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ,
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ||


ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ,

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ|

ಸೋಲಿನಸುರ ಹೊಂದಬೇಕು ಅವನತಿ,
ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಸೋಲಿನಸುರ ಹೊಂದಬೇಕು ಅವನತಿ,

ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಕಾರ್ಯಕಾಲ ಕಾಯುತಿಹಳು ಭಾರತಿ,

ರಾಷ್ಟ್ರರಥಕೆ ನಮ್ಮ ಶಕ್ತಿ ಸಾರಥಿ|


ಛಲದಲಿ ಓಂದಾಗಿ ಜಗದಲಿ ಮುಂದಾಗಿ,

ಛಲದಲಿ ಓಂದಾಗಿ ಜಗದಲಿ ಮುಂದಾಗಿ
ನಿಲುವುದೊಂದೆ ನಮ್ಮ ಮುನ್ನೆಲೆ, ಮುನ್ನೆಲೆ

ನಿಲುವುದೊಂದೆ ನಮ್ಮ ಮುನ್ನೆಲೆ||

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, 
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ||


ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ,

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ||

ಕತ್ತಲೆಗಿದು ಸಾವು ಸುತ್ತಲು ಮುಂಜಾವು,

ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾ ದೇವಿ ಮಂಗಳೆ ಸುಮಂಗಳೆ,
ಎಚ್ಚರಾಗಿ ಕನಸು ಕಂಗಳೆ, 

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ||



ಕೃಪೆ: ಗೀತ ಗಂಗಾ

ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ

ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ
ನಾಂ ಬರೆಯಬಲ್ಲೆನೆ ನಾನು ಕವಿಯು |
ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು
ನಾನ್ ತಪಿಸುತಿರೆ ಹೇಳಲಾವ ಪರಿಯು | ||ಪ||

ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ
ರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತ
ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ
ಮುರಿವ ಲೇಖನಿ ಬೇಕು ರಕ್ತವದಕೆ ಮಸಿ ||೧||

ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ
ಮೂರಕ್ಷರದೊಳದೇನು ಮಾಟವಿಹುದೋ
ಸ್ವಾತಂತ್ರ್ಯ ಯಜ್ಞದೊಳು ಬಂದೆನ್ನ ಬಂಧುಗಳ
ಮುದಿತ ಲೇಖನಿ ಬೇಕು ರಕ್ತವದಕೆ ಮಸಿ ||೨||

ಎನ್ನ ಹೃದಯದ ಸ್ಪೂರ್ತಿ ಎನ್ನ ಜನತೆಯ ಶಕ್ತಿ
ಎನ್ನ ನಾಡಿನ ಕೀರ್ತಿ ಹೆಚ್ಚಿಸಲ್ಕೆ
ಎಮ್ಮೂಂದಿಗರ ಬದುಕು ಬಾಳಾಗಿ ಬೆಳಗಿಸಲು
ಬಲಿತ ಲೇಖನಿ ಬೇಕು ರಕ್ತವದಕೆ ಮಸಿ ||೩||


ಕೃಪೆ: ಗೀತ ಗಂಗಾ

ವೇದಗಳು ಅಪೌರುಷೇಯವೆ? - ಜಿಜ್ಞಾಸೆ ಮುಂದುವರೆಯಲಿ

             ವೇದಗಳು ಅಪೌರುಷೇಯವೇ ಎಂಬ ವಿಚಾರದಲ್ಲಿ ವೇದಸುಧೆ ಬಳಗದ ಸದಸ್ಯರು ಈಗಾಗಲೇ ವಿಚಾರ ವಿಮರ್ಶೆ ಮಾಡಿದ್ದು ತಮ್ಮಲ್ಲಿನ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ ತಿಳಿದವರ ಅಭಿಪ್ರಾಯಗಳನ್ನೂ ಬಯಸಿದ್ದು ತಮಗೆ ನೆನಪಿರಬಹುದು. ಹಲವರು ತಮ್ಮ ಅಮೂಲ್ಯ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಉತ್ತಮ ವಿಚಾರ ಮಂಥನ ನಡೆದಿತ್ತು. ಅದರ ಮುಂದುವರಿಕೆಯಾಗಿ ಶ್ರೀ ಸ್ವಾಮಿ ರಾಮಸ್ವರೂಪಜೀಯವರು ಏನು ಹೇಳಿದ್ದಾರೆ ಎಂಬುದನ್ನು ತಮ್ಮ ಮುಂದೆ ಇಟ್ಟಿದೆ. ಸತ್ಯ ತಿಳಿಯುವ ಹಾದಿಯಲ್ಲಿ ಮುಕ್ತ ಜಿಜ್ಞಾಸೆ ಮುಂದುವರೆಯಲಿ.

-ಕವಿನಾಗರಾಜ್.
ವಿಷಯದಲ್ಲಿ ಸ್ವಾಮಿ ರಾಮಸ್ವರೂಪಜೀಯವರ ಅಭಿಪ್ರಾಯ
ವೇನು?

     ಸ್ವಾಮಿ ರಾಮಸ್ವರೂಪಜೀಯವರು ಯೋಗಾಚಾರ್ಯರು ಮತ್ತು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಯೋಲ್ ನಲ್ಲಿರುವ ವೇದ ಮಂದಿರದ ಸ್ಥಾಪಕ ಅಧ್ಯಕ್ಷರು. ಅವರು ಜೀವನವನ್ನು ವೇದದ ಮತ್ತು ದೇವರ ಸಂದೇಶಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಮುಡುಪಿಟ್ಟಿದ್ದಾರೆ. ಹರಿಯಾಣದ ರೋಹಟಕ್ ನಲ್ಲಿ ೦೬-೦೬-೧೯೪೦ರಲ್ಲಿ ಜನಿಸಿದ ಅವರು ಎಫ್.ಎಸ್.ಸಿ. ಪೂರ್ಣಗೊಳಿಸಿ ಎಲೆಕ್ಟ್ರಕಲ್ ಇಂಜನಿಯರಿಂಗ್ ಅನ್ನು ಇಂಗ್ಲೆಂಡಿನಲ್ಲಿ ಓದಿದರು. ಮಿಲಿಟರಿ ಇಂಜನಿಯರಿಂಗ್ ಸೇವೆಗೆ ಸೇರಿ ರಕ್ಷಣಾ ವಿಭಾಗದಲ್ಲಿ ೨೬ ವರ್ಷಗಳ ಸೇವೆ ಸಲ್ಲಿಸಿ ೩೧-೦೩-೧೯೮೬ರಲ್ಲಿ ನಿವೃತ್ತಿ ಹೊಂದಿದರು. ಚಿಕ್ಕಂದಿನಿಂದಲೂ ಆಧ್ಯಾತ್ಮದ ಒಲವಿದ್ದ ಅವರು ಸೇವೆಯಲ್ಲಿದ್ದಾಗಲೂ ಪೂಜೆ ಮತ್ತು ಧ್ಯಾನ ಮುಂದುವರೆಸಿದ್ದರು. ಅವರು ಸಂಗೀತ ಮತ್ತು ವಾದ್ಯ ಸಂಗೀತದಲ್ಲೂ ಪ್ರವೀಣರಾಗಿದ್ದು ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಬಿ,ಎ, ಪದವಿ ಪಡೆದಿದ್ದಾರೆ. ತಬಲ, ಹಾರ‍್ಮೋನಿಯಂ ಮತ್ತು ಬಾಂಜೊಗಳ ಅತ್ಯುತ್ತಮ ವಾದಕರಲ್ಲಿ ಒಬ್ಬರು.
     ಸತ್ಯದ ಅನ್ವೇಷಣೆಯಲ್ಲಿ ಅವರು ವೇದಗಳು, ಶಾಸ್ತ್ರಗಳು, ಉಪನಿಷತ್ತುಗಳು, ಮಹಾಭಾರತ (ಭಗವದ್ಗೀತೆ ಸೇರಿದಂತೆ), ವಾಲ್ಮೀಕಿ ಮತ್ತು ತುಲಸಿ ರಾಮಾಯಣ, ಯಾಸ್ಕಾಚಾರ್ಯ, ಶತಪಥ, ಮನುಸ್ಮೃತಿ, ಮುಂತಾದ ಗ್ರಂಥಗಳನ್ನು ಅಭ್ಯಸಿಸಿದ್ದಾರೆ. ಗುರು ಶಿಷ್ಯ ಪರಂಪರೆಯಲ್ಲಿ ಸಾಂಪ್ರದಾಯಿಕವಾಗಿ ಸಂಸ್ಕೃತವನ್ನು ಅಭ್ಯಸಿಸಿದ್ದಾರೆ. ಗುರು ಗ್ರಂಥ ಸಾಹಿಬಾ, ಬೈಬಲ್, ಕುರಾನ್ ಮತ್ತು ಪುರಾಣಗಳನ್ನೂ ಅಧ್ಯಯನ ಮಾಡಿದ್ದಾರೆ. ಹೃಷಿಕೇಶದ ದಟ್ಟ ಗುಹೆಯಲ್ಲಿದ್ದ ಯೋಗಿಯೊಬ್ಬರನ್ನು ಕಂಡ ಅವರು ಅವರ ಆಶೀರ್ವಾದದಿಂದ ಯೋಗ ಶಿಕ್ಷಣ ಪಡೆದರು. ರಕ್ಷಣಾ ಸೇವೆಯಲ್ಲಿದ್ದಾಗಲೇ ಲಡಾಕ್, ಹೃಷಿಕೇಶ, ರಾಜೌರಿ-ಪಾಂಚ್ ಗಡಿಯಲ್ಲಿ ಅಷ್ಟಾಂಗ ಯೋಗದ ಕಠಿಣ ಅಭ್ಯಾಸ ಮಾಡಿದ್ದರು. ೧೯-೦೩-೧೯೭೯ರಲ್ಲಿ ಯೋಗಿಗುರು ದಿ. ಪೂಜ್ಯ ಬಾಬಾ ಬ್ರಹ್ಮದಾಸ ಬಂಖಂದಿಜಿ ಮಹಾರಾಜ್ ರಿಂದ ಜ್ಞಾನದ ಬೆಳಕು ಪಡೆದರು.
     ೧೯೭೧ರಿಂದಲೂ ಅವರು ವೇದ, ಶಾಸ್ತ್ರಗಳು, ಗೀತೆ, ಇತ್ಯಾದಿಗಳ ಬಗ್ಗೆ ಆಧ್ಯಾತ್ಮಿಕ ಪ್ರವಚನಗಳನ್ನು ನೀಡುತ್ತಾ ಬಂದಿದ್ದು ಸಮಾಜದಲ್ಲಿನ ಕೆಡುಕುಗಳನ್ನು ಖಂಡಿಸುತ್ತಾ ಬಂದಿದ್ದಾರೆ. ೧೯೮೭ರಲ್ಲಿ ನವದೆಹಲಿ ಮತ್ತು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಯೋಲ್ ಬಜಾರಿನಲ್ಲಿ ವೇದ ಮತ್ತು ಯೋಗಮಂದಿರಗಳನ್ನು ಪ್ರಾರಂಭಿಸಿದರು. ೨೦ಕ್ಕೂ ಹೆಚ್ಚು ಆಧ್ಯಾತ್ಮಿಕ ಪುಸ್ತಕಗಳನ್ನು ರಚಿಸಿದ್ದಾರೆ. ಹೆಸರಿಸಬೇಕೆಂದರೆ: ಆತ್ಮಿಕ್ ಉದ್ಗಾರ್, ಮಾನವ ಧರ್ಮ ಶಿಕ್ಷಾ, ವೇದಕ್ ಪ್ರವಚನ ಸಂಗ್ರಹ, ವೇದಗಳು - ಎ ಡಿವೈನ್ ಲೈಟ್ - ಭಾಗ -೧,೨,೩, ಇತ್ಯಾದಿ, ಇತ್ಯಾದಿ. ಇವರ ಬಗ್ಗೆ ಹೇಳಲು ಇನ್ನೂ ಬಹಳಷ್ಟು ಸಂಗತಿಗಳು ಇದ್ದು, ಇವರೊಬ್ಬರು ಅದ್ಭುತ ಸಾಧಕರು ಎನ್ನಲು ಅಡ್ಡಿಯಿಲ್ಲ.
      ಸ್ವಾಮಿ ರಾಮಸ್ವರೂಪಜಿಯವರು ವೇದಗಳು ಅಪೌರುಷೇಯವೇ ಎನ್ನುವ ವಿಚಾರದಲ್ಲಿ ಏನು ಹೇಳುತ್ತಾರೆ ಎಂಬುದನ್ನು ಆಸಕ್ತರು ಕೇಳಿದ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳ ರೂಪದಲ್ಲಿ ಇಲ್ಲಿ ಸಾದರಪಡಿಸಿದೆ:


ಪ್ರಶ್ನೆ:    ವೇದವನ್ನು ಮೊದಲು ಯಾರು ಬರೆದರು? ಯಾವಾಗ?

ಉತ್ತರ: ವೇದಗಳನ್ನು ದೇವರು ಬರೆದದ್ದಾಗಲೀ, ಹೇಳಿದ್ದಾಗಲೀ ಅಲ್ಲ. ಪರಮಾತ್ಮನಿಂದ ಈ ಜ್ಞಾನ ಹುಟ್ಟಿಬಂದಿದ್ದು ಈ ಜ್ಞಾನ ನಾಲ್ಕು ಋಷಿಗಳ ಹೃದಯದಲ್ಲಿ ಒಡಮೂಡಿ ಬಂದದ್ದಾಗಿದೆ. ಪರಮಾತ್ಮ ಸರ್ವಶಕ್ತ. ಆತನಿಗೆ ಜಗತ್ತಿನ ಕೆಲಸಗಳನ್ನು ಮಾಡಲು ಯಾರ ಸಹಾಯವೂ ಬೇಕಿಲ್ಲ. ಮಾನವ ದೇಹದಲ್ಲಿ ಜೀವಾತ್ಮ ಇದ್ದು ಜೀವಾತ್ಮಕ್ಕೆ ಕೆಲಸ ಮಾಡಲು ಸಹಾಯದ ಅಗತ್ಯವಿದೆ - ಅದಕ್ಕೆ ಮಾತನಾಡಲು ಬಾಯಿ ಬೇಕು, ನೋಡಲು ಕಣ್ಣು ಬೇಕು, ಬರೆಯಲು ಕೈ ಬೇಕು, ಇತ್ಯಾದಿ, ಆದರೆ ಪರಮಾತ್ಮನಿಗಲ್ಲ. ಪರಮಾತ್ಮನ ಶಕ್ತಿಯಿಂದ ವೇದ ಜ್ಞಾನ ಬರೆಯದೆ, ಹೇಳದೆ ಋಷಿಗಳಿಗೆ ಒಡಮೂಡಿದೆ.
ಪ್ರಶ್ನೆ: ವೇದ ಮೂಲದಲ್ಲಿ ಒಂದೇ ಇತ್ತೆ ಮತ್ತು ನಂತರದಲ್ಲಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಯಿತೆ? ಏಕೆ? ಯಾವಾಗ?
ಉತ್ತರ: ವೇದ ಜ್ಞಾನ ಒಂದೇ; ಆದರೆ ಅದನ್ನು ನಾಲ್ಕು ಋಷಿಗಳಿಗೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದದ ರೂಪದಲ್ಲಿ ಕೊಡಲಾಯಿತು. . .
ಪ್ರಶ್ನೆ: ಇಂದು ಲಭ್ಯವಿರುವ ಅತ್ಯಂತ ಪುರಾತನ ವೇದದ ಪುಸ್ತಕಗಳು ಯಾವುವು? ಎಲ್ಲಿ? ಅದನ್ನು ಯಾರು ಬರೆದರು? ಯಾವಾಗ?

ಉತ್ತರ: ವೇದಗಳು ಯಾರೂ ಬರೆದದ್ದಲ್ಲ. ಆದರೆ ಪರಮಾತ್ಮನಿಂದ ನೇರವಾಗಿ ಮೇಲೆ ತಿಳಿಸಿದಂತೆ ಒಡಮೂಡಿದ್ದಾಗಿದೆ.ಈ ಜ್ಞಾನವನ್ನು ಆಸಕ್ತರಿಗೆ/ಜನರಿಗೆ ಪರಂಪರೆಯಿಂದ ಬಂದ ಋಷಿಮುನಿಗಳು ತಿಳಿಸುತ್ತಾ ಬಂದಿದ್ದಾರೆ. ಅವರಗಳೂ ಸಹ ಅದೇ ರೀತಿ ಅಭ್ಯಸಿಸಿದವರಾಗಿದ್ದಾರೆ. ವೇದ ಜ್ಞಾನ ಹೃದಯದಿಂದ ಹೃದಯಕ್ಕೆ ಈ ರೀತಿ ಸಾಗಿ ಬಂದಿದ್ದಾಗಿದೆ. ೫೦೦೦ ವರ್ಷಗಳಿಗೂ ಹಿಂದೆ ಮಹಾಭಾರತದ ಯುದ್ಧದ ಸಮಯದಲ್ಲಿ ಮಹರ್ಷಿ ವ್ಯಾಸರು -ಅವರೂ ವೇದವನ್ನು ಅದೇ ರೀತಿ ತಿಳಿದುಕೊಂಡವರಾಗಿದ್ದು - ಮೊದಲ ಸಲ ಭೋಜ ಪತ್ರದ ಮೇಲೆ ಬರೆದರು. ೧೮ನೆಯ ಶತಮಾನದಲ್ಲಿ ಮುದ್ರಣಗೊಂಡಿತು. ನಾಲ್ಕು ವೇದಗಳಿಗೆ ಹಿಂದಿಯಲ್ಲಿ ಶ್ರೀ ಸ್ವಾಮಿ ದಯಾನಂದ ಸರಸ್ವತಿಯವರು ಬರೆದ ಭಾಷ್ಯ ಈಗ ಲಭ್ಯವಿದೆ.

ಪ್ರಶ್ನೆ: ಅತ್ಯಂತ ಪುರಾತನ ವೇದದ ಬರಹಗಳು ಯಾವುವು? ಯಾವ ಮ್ಯೂಸಿಯಂ ನಲ್ಲಿದೆ? ಹಲವರು ಅದು ಬ್ರಿಟನ್ ನಲ್ಲಿ, ಜರ್ಮನಿಯಲ್ಲಿ, ಪೆನ್ಸಿಲ್ವೇನಿಯದಲ್ಲಿ, ದಕ್ಷಿಣ ಭಾರತದಲ್ಲಿ ಇದೆಯೆನ್ನುತ್ತಾರೆ. ನಿರ್ದಿಷ್ಟವಾಗಿ ಎಲ್ಲಿದೆ? ಯಾರಾದರೂ ಆ ಹಳೆಯ ಬರಹಗಳ ಅಧಿಕೃತ ದಾಖಲೆಗಳನ್ನು ಹೊಂದಿದ್ದಾರೆಯೇ?
ಉತ್ತರ: ನನಗೆ ಖಚಿತವಾಗಿ ಗೊತ್ತಿಲ್ಲ, ಬ್ರಿಟನ್ ನ ಮ್ಯೂಸಿಯಂನಲ್ಲಿ ಇರಬಹುದು.
ಪ್ರಶ್ನೆ: ವೇದಗಳ ಪ್ರಾರಂಭಿಕ ಸ್ವರೂಪ (version) ಹೇಗೆ ಕಣ್ಮರೆಯಾಯಿತು? ಯಾವಾಗ? ಇಂದು ವೇದಗಳ ಯಾವ ಸ್ವರೂಪವನ್ನು (version) ನಾವು ಅನುಸರಿಸುತ್ತಿದ್ದೇವೆ? ಯಾರು ಎಲ್ಲಾ ಮಂತ್ರಗಳನ್ನು ಸಂಗ್ರಹಿಸಿದರು ಮತ್ತು ವೇದದ ಪುಸ್ತಕಗಳನ್ನು ಪುನಃ ಬರೆದರು? 
ಉತ್ತರ: ಭೂಮಿಯ ಮೇಲೆ ಹಲವಾರು ಯುದ್ಧಗಳಾಗಿವೆ. ನೀವು ಒಂದು ರಾಷ್ಟ್ರವನ್ನು ನಾಶ ಮಾಡಬೇಕೆಂದರೆ ಅಲ್ಲಿನ ಸಂಸ್ಸೃತಿಯನ್ನು ನಾಶ ಮಾಡಿ, ದೇಶ ತನ್ನಿಂದ ತಾನೇ ನಾಶವಾಗುತ್ತದೆ. ಬಹುಷಃ ಜನಾಂಗಗಳು ಇದೇ ಕೆಲಸವನ್ನು ಮಾಡುತ್ತಾ ಬಂದಿರಬೇಕು. ಋಷಿ ಮುನಿಗಳ ಎಲ್ಲಾ ಬರಹಗಳ ಮೂಲ ಪ್ರತಿಗಳು ಮತ್ತು ಇತರ ಕೈಬರಹದ ಪ್ರತಿಗಳನ್ನು ಗೌರವಪೂರ್ವಕವಾಗಿ ತಕ್ಷಶಿಲಾ ಮತ್ತು ನಲಂದದಲ್ಲಿ (ಬಿಹಾರ ವಿಶ್ವವಿದ್ಯಾಲಯದ) ಇಡಲಾಗಿತ್ತು. ಔರಂಗಜೇಬ ಸಂಸ್ಕೃತಿಯ ನಾಶ ಮಾಡುವ ಸಲುವಾಗಿ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಬೆಂಕಿ ಕೊಟ್ಟದ್ದು ಇತಿಹಾಸ. ಕಲ್ಪಿಸಿಕೊಳ್ಳಿ, ಆಗ ಹಚ್ಚಿದ ಬೆಂಕಿ ಸತತವಾಗಿ ಆರು ತಿಂಗಳು ಉರಿಯುತ್ತಿತ್ತು ಎಂದರೆ ಎಷ್ಟು ಅಮೂಲ್ಯ ಸಾಹಿತ್ಯ ನಾಶವಾಗಿರಬೇಕು! ಆದರೆ ಸಾಂಪ್ರದಾಯಿಕವಾಗಿ ವೇದದ ಜ್ಞಾನವನ್ನು ಒಬ್ಬರಿಂದ ಇನ್ನೊಬ್ಬರು ಪಡೆದುಕೊಳ್ಳುತ್ತಿದ್ದಂತೆ ಪಡೆದುಕೊಂಡಿದ್ದ ಭಾರತದ ಬ್ರಾಹ್ಮಣರು (ಬ್ರಹ್ಮಜ್ಞಾನವನ್ನು ಪಡೆದವರು) ಅದನ್ನು ಉಳಿಸಿದರು. ಒಂದು ವೇದವನ್ನು ತಿಳಿದವರು ವೇದಿ, ಎರಡು ವೇದಗಳನ್ನು ಅರಿತವರು ದ್ವಿವೇದಿ, ಮೂರು ವೇದಗಳನ್ನು ಅಭ್ಯಸಿಸಿದವರು ತ್ರಿವೇದಿ ಮತ್ತು ನಾಲ್ಕು ವೇದಗಳನ್ನು ತಿಳಿದುಕೊಂಡವರು ಚತುರ್ವೇದಿ ಎಂತಲೂ ಕರೆಯುತ್ತಾರೆ. ಆದ್ದರಿಂದ ವೇದಗಳು ಇಂದಿಗೂ ಪರಮಾತ್ಮನ ಕೃಪೆಯಿಂದ ಪ್ರಚಲಿತವಾಗಿವೆ ಮತ್ತು ಮುದ್ರಣಗೊಳ್ಳುತ್ತಿವೆ.

ಪ್ರಶ್ನೆ: ವೇದಗಳು ೫೦೦೦-೬೦೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತಿದೆ. ಇದಕ್ಕೆ ಯಾವ ಆಧಾರವಿದೆ? ಏನು ಸಾಕ್ಷಿಯಿದೆ?
ಉತ್ತರ: ನಾನು ಮೊದಲೇ ಹೇಳಿದಂತೆ ವೇದಗಳು ಅತಿ ಪುರಾತನವಾದುದು. ೫೩೦೦ ವರ್ಷಗಳ ಮುಂಚೆ (ಅಂದರೆ ೫೦೦೦-೬೦೦೦ ವರ್ಷಗಳು) ವೇದಸ್ವರವನ್ನು ಮೊದಲು ವ್ಯಾಸಮುನಿ (ಅವರೂ ಸಾಂಪ್ರದಾಯಿಕವಾಗಿ ಕಲಿತದ್ದು) ಬರೆದರು. ವೇದವನ್ನು ಯಾವುದೇ ಋಷಿ, ಮುನಿಯಾಗಲೀ, ಮನುಷ್ಯನಾಗಲೀ, ಮೇಲೆ ತಿಳಿಸಿದಂತೆ, ರಚಿಸಿದ್ದಲ್ಲ.

ಪ್ರಶ್ನೆ: ಭೂಮಿ ರಚನೆಯಾಗುವಾಗ ಸಾಗರ ಮಂಥನದಲ್ಲಿ ವೇದಗಳು ಬಂದವು ಎಂದು ಹೇಳುತ್ತಾರೆ. ಇದರರ್ಥ ಭೂಮಿ ಮಿಲಿಯನ್ ವರ್ಷಗಳಷ್ಟು ಹಳೆಯದು. ವೇದಜ್ಞಾನ ಇಂದಿನವರೆಗೂ ಉಳಿದದ್ದು ಹೇಗೆ? ವೇದವನ್ನು ರಕ್ಷಿಸಿದವರು ಯಾರು?

ಉತ್ತರ: ಈ ಕಥೆ ಸುಳ್ಳು - ಅಸಹಜವಾಗಿರುವುದರಿಂದ ಮತ್ತು ವೇದ ವಿರುದ್ಧವಾಗಿರುವುದರಿಂದ.


ಪ್ರಶ್ನೆ: ಇಂದು ಯಾವ ಆಧಾರದಲ್ಲಿ ಪ್ರಕಾಶಕರು ವೇದದ ಪುಸ್ತಕಗಳನ್ನು ಮುದ್ರಿಸುತ್ತಾರೆ? ಯಾವ ಲೇಖಕ/ಸ್ವರೂಪ (version)ವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ?
ಉತ್ತರ: ವೇದಜ್ಞಾನವನ್ನು ಹರಡಲು ಪ್ರಕಟಿಸುತ್ತಾರೆ. ನಾನೂ ಸಹ ೯ ಪುಸ್ತಕಗಳನ್ನು ವೇದದ ಮೇಲೆ ಬರೆದಿದ್ದೇನೆ, ಉದ್ದೇಶವೆಂದರೆ ಸತ್ಯವನ್ನು ಪ್ರಚುರಪಡಿಸಲು. ಹೆಚ್ಚಿನವು ಶ್ರೀ ಸ್ವಾಮಿ ದಯಾನಂದ ಸರಸ್ವತಿಯವರು ಬರೆದದ್ದಾಗಿವೆ.
     ವೇಧಜ್ಞಾನ ದೈವಿಕವಾದದ್ದು. ಮೂಲಭೂತ ಸಂಗತಿಯೆಂದರೆ ವೇದಗಳು ಬರೆಯಲ್ಪಟ್ಟಿದ್ದಲ್ಲ ಅಥವ ಹೇಳಲ್ಪಟ್ಟಿದ್ದಲ್ಲ. ಈ ಜ್ಞಾನವು ಕೋಟ್ಯಾನುಕೋಟಿ ವರ್ಷಗಳ ಹಿಂದೆ (one Arab 96 crore, 8 lakhs and 53,000 years ago) ಪರಮಾತ್ಮನ ಶಕ್ತಿಯಿಂದ ಉದಯವಾಗಿದೆ. ಮೊದಲಬಾರಿಗೆ ಯೋನಿಜರಲ್ಲದ (unsexual creation) ನಾಲ್ವರು ಋಷಿಗಳು ಪರಮಾತ್ಮನ ಶಕ್ತಿಯಿಂದ ಮಂತ್ರಗಳನ್ನು ಉಚ್ಛರಿಸಲಾರಂಭಿಸಿದರು. ಪರಮಾತ್ಮ ಆ ಮಂತ್ರಗಳ ಪದಗಳ ಅರ್ಥ ಮತ್ತು ಉದ್ದೇಶ ಅವರಿಗೆ ತಿಳಿಯುವಂತೆ ಮಾಡಿದ್ದ. ಅವರು ಆ ಮಂತ್ರಗಳನ್ನು ಇತರ ಜನರಿಗೆ ಕಲಿಸಿದರು. ಇತರ ಋಷಿಗಳು ಅವನ್ನು ಕೇಳಿಯೇ ಹೃದಯಸ್ಥಗೊಳಿಸಿಕೊಂಡರು. ಅಲ್ಲಿ ಕಾಗದ, ಮಸಿ ಅಥವ ಲೇಖನಿ ಇರಲಿಲ್ಲ. ವೇದಗಳು ಬಾಯಿಯಿಂದ ಬಾಯಿಗೆ ಸಾಂಪ್ರದಾಯಿಕವಾಗಿ ಪರಂಪರೆಯಿಂದ ಉಳಿದು ಬೆಳೆದು ಬಂದಿದೆ, ಅದು ಈಗಲೂ ಚಾಲ್ತಿಯಲ್ಲಿದೆ. ಆದರೆ ಈಗ ಹೃದಯಸ್ಥಗೊಳಿಸಿಕೊಂಡು ಅಲ್ಲ, ಮುದ್ರಿತ ಪುಸ್ತಕದ ಸಹಾಯದಿಂದ. ಈ ಮುದ್ರಿತ ಪುಸ್ತಕಗಳು ವೇದಗಳೆಂದು ಅಲ್ಲ, ಸಂಹಿತೆಯೆಂದು ಕರೆಯಲ್ಪಡುತ್ತವೆ. ಸಂಹಿತೆ ಎಂದರೆ ವೇದ ಮಂತ್ರಗಳ ಸಂಗ್ರಹ. ವೇದಗಳು ಇನ್ನೂ ಪುಸ್ತಕಗಳಾಗಿಲ್ಲ ಮತ್ತು ಮುಂದೂ ಸಹ ಆಗುವುದಿಲ್ಲ, ಅದರೆ ಸಂಹಿತೆಗಳು ಆಗುತ್ತವೆ. ಕಪಿಲಮುನಿ ಈ ಅಂಶದ ಮೇಲೆ ತನ್ನ ಸಾಂಖ್ಯಶಾಸ್ತ್ರ (೫/೪೮)ದಲ್ಲಿ ಬೆಳಕು ಚೆಲ್ಲಿದ್ದಾರೆ. ಋಷಿ ತಪಸ್ಸು ಮಾಡಿದಾಗ- ಯಜ್ಞ, ವೇದಾಭ್ಯಾಸ, ಅಷ್ಟಾಂಗಯೋಗದ ಅನುಷ್ಠಾನ ಮಾಡುವ ಮೂಲಕ - ವೇದ ಮಂತ್ರಗಳು ಹೃದಯದಲ್ಲಿ ಮೂಡುತ್ತವೆ (ಈಗಲೂ ಸಹ) ಮತ್ತು ಋಷಿ ಮಂತ್ರಗಳನ್ನು ಉಚ್ಛರಿಸುವರು ಮತ್ತು ಪರಮಾತ್ಮನಿಂದ ನೀಡಲ್ಪಟ್ಟ ಈ ಮಂತ್ರಗಳು ವೇದಗಳೆಂದು ಕರೆಯಲ್ಪಡುತ್ತದೆ. ವೇದಗಳು ಮೊದಲು ಆಚಾರ್ಯ (ವೇದವನ್ನು ಬಲ್ಲ) ಮುಖೇನ ಕೇಳಲ್ಪಡಬೇಕು (ಅಭ್ಯಾಸ). ನಂತರ ವೇದದ ಪುಸ್ತಕಗಳು ಸಹಾಯ ಮಾಡಬಹುದಷ್ಟೆ.

(ಅಂತರ್ಜಾಲದಿಂದ ಪಡೆದ ಮಾಹಿತಿ ಆಧರಿಸಿ ಸಿದ್ಧಪಡಿಸಿದ ಲೇಖನ)
-ಕವಿನಾಗರಾಜ್.

ನಮ್ಮ ಆಚರಣೆಗಳು-೧

 ಇಂದಿನಿಂದ ಒಂದುವಾರಗಳಕಾಲ  ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸವನ್ನು ಕೇಳೋಣ.