Pages

Thursday, August 28, 2014

ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ



ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಂ|
ತಸ್ಮೈ ಬ್ರಹ್ಮ ಚ ಬ್ರಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ ||
[ಅಥರ್ವ ೧೦.೨.೨೯]
ಅನ್ವಯ :
ಯಃ = ಯಾವನು
ಅಮೃತೇನ ಆವೃತಾಂ = ಅಮರನಾದ ಭಗವಂತನಿಂದ ಆವೃತವಾಗಿರುವ
ಬ್ರಹ್ಮಣಃ ತಾಂ ಪುರಂ = ಆ ಭಗವಂತನ ಪುರವಾದ ಈ ದೇಹವನ್ನು
ವೈ ವೇದ = ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ
ತಸ್ಮೈ = ಅವನಿಗೆ
ಬ್ರಹ್ಮ ಚ = ಪರಮಾತ್ಮನು ಮತ್ತು
ಬ್ರಹ್ಮಾಶ್ಚ = ಪರಮಾತ್ಮನ ಮಕ್ಕಳಾದ ಜೀವಾತ್ಮರು
ಚಕ್ಷು = ಸತ್ಯ ದರ್ಶನ ಶಕ್ತಿಯನ್ನೂ
ಪ್ರಾಣಂ = ಜೀವನ ಶಕ್ತಿಯನ್ನೂ
ಪ್ರಜಾಂ = ಸತ್ ಸಂತತಿಯನ್ನೂ
ದದುಃ = ನೀಡುತ್ತಾರೆ
ಅರ್ಥ :
ಯಾವನು ಅಮರನಾದ ಭಗವಂತನಿಂದ ಆವೃತವಾಗಿರುವ ಆ ಭಗವಂತನ ಪುರವಾದ ಈ ದೇಹವನ್ನು ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ ಅವನಿಗೆ ಪರಮಾತ್ಮನು  ಸತ್ಯ ದರ್ಶನ ಶಕ್ತಿಯನ್ನೂ ಜೀವನ ಶಕ್ತಿಯನ್ನೂ ಸತ್ ಸಂತತಿಯನ್ನೂ ನೀಡುತ್ತಾನೆ.
ಅನೇಕ ಪುರೋಹಿತರು ಈ  ಮಂತ್ರವನ್ನು ಆಶೀರ್ವಾದ ರೂಪದಲ್ಲಿ ಪಠಿಸುವುದನ್ನು ನಾನು ಕೇಳಿದ್ದೇನೆ.ಕಿವಿಗೆ ಹಿತವಾಗುತ್ತಿತ್ತು.ಅರ್ಥ ತಿಳಿಯುತ್ತಿರಲಿಲ್ಲ. ಅರ್ಥ ತಿಳಿಯುವ ಪ್ರಯತ್ನ ಮಾಡಿದಾಗ ಸಂತೋಷವಾಯ್ತು. ಈ ಮಂತ್ರದ ಬಗ್ಗೆ ವಿಚಾರ ಮಾಡೋಣ.
ಈ ದೇಹವನ್ನು ಹಲವರು ತಮ್ಮ ವಯಸ್ಸಾದ ಕಾಲದಲ್ಲಿ, ಅಥವಾ ರೋಗಪೀಡಿತವಾದಾಗ ಈ ಪಾಪಿದೇಹ ಎಂದು ಜರಿಯುವುದನ್ನು ಕಂಡಿದ್ದೇವೆ. ಈ ದೇಹವನ್ನು ಪೋಷಿಸಬೇಕಾಗಿದೆಯಲ್ಲಾ! ಎಂದು ತೊಳಲಾಡುವವರಿಗೇನೂ ಕಮ್ಮಿ ಇಲ್ಲ. ಆದರೆ ವೇದವು ಏನು ಹೇಳುತ್ತದೆ? ಈ ದೇಹವು  ಭಗವಂತನಿಂದ ಆವೃತವಾಗಿವಾಗಿದೆ, ಎಂದು ಹೇಳುತ್ತದೆ. ಇಂತಾ ದೇಹವನ್ನು ನಾನು ಹೇಗೆ ಕಾಪಾಡಬೇಕು? ಭಗವಂತನ ಆವಾಸ ಸ್ಥಾನವಾಗಿರುವ ದೇಹವನ್ನು ದೇವಾಲಯವೆಂದು ಭಾವಿಸಿದಾಗ ನಮ್ಮ ಶರೀರದ ಬಗ್ಗೆ ನಮಗೆ ಹೇಗೆನಿಸುತ್ತದೆ?
ಈ ದೇಹವನ್ನು ದೇವಾಲಯವೆಂದು ಭಾವಿಸಿದಾಗ ಅದನ್ನು ಅಡ್ಡಾದಿಡ್ಡಿ ಬೆಳೆಸುತ್ತೇವೆಯೇ? ಸುಂದರವಾಗಿ .ಪವಿತ್ರಭಾವನೆಯಿಂದ ಬೆಳೆಸಬೇಕಾಗುತ್ತದೆ. ನಾವು ಈ ದೇಹಕ್ಕಾಗಿ ಮಾಡುವ ಪ್ರತಿಯೊಂದು ಕರ್ಮವೂ ಯಜ್ಞಭಾವನೆಯಿಂದ ಮಾಡಬೇಕಾಗುತ್ತದೆ.ನಾವು ಈಗ ಸಧ್ಯದ ಪರಿಸ್ಥಿತಿಯಲ್ಲಿ ಹೇಗಿದ್ದೇವೆಂದು ಸ್ವಲ್ಪ ವಿಚಾರ ಮಾಡಿದರೆ ನಮಗೆ ಹೇಗೆನ್ನಿಸೀತು!
ಪ್ರಾತಃಕಾಲದಲ್ಲಿ ಏಳುವಾಗಲೇ ಕಾಫಿ ಕೊಡಮ್ಮಾಎಂದು ಕೇಳುತ್ತಲೇ ಹಾಸಿಗೆಯಿಂದ ಏಳುವ      ಮಗ ಕಾಫಿ ಆಗಿದೆಯಾ? ಎಂದು ಹಾಸಿಗೆಯಿಂದಲೇ ಕೇಳುವ  ಮನೆಯ ಯಜಮಾನ, ಮುಖಕ್ಕೆ ನೀರೆರಚಿ ದರ್ಶಿನಿ ಗೆ ಧಾವಿಸುವ ಜನರು!! ಇದೆಲ್ಲಾ ನಿತ್ಯ ದೃಶ್ಯವಲ್ಲವೇ? ಸಾಮಾನ್ಯವಾಗಿ ನಮ್ಮ ದೇಹವನ್ನು ನಾವು ಯಂತ್ರವೆಂದು ಭಾವಿಸಿಲ್ಲವೇ? ಹಲವರು ಹೇಳುವುದುಂಟು  ಪೆಟ್ರೋಲ್ [ಕಾಫಿ] ಹಾಕದೆ ತಲೆಯೇ ಓಡುವುದಿಲ್ಲ  ಈ ಯಂತ್ರವನ್ನು ಚಾಲನೆಯಲ್ಲಿರಿಸಲು ಇಂಧನ ಬೇಕಾಗಿದೆ, ಅದಕ್ಕಾಗಿ ಸಿಕ್ಕಿದ ಬಂಕ್‌ಗಳಲ್ಲಿ [ಹೊಟೆಲ್] ಇಂಧನ ತುಂಬಿಸಿಕೊಂಡರಾಯ್ತು. ನಮ್ಮ ಜೀವನ ಇಷ್ಟು ಯಾಂತ್ರಿಕವಾಗಿಲ್ಲವೇ?
ಈ ದೇಹದ ಬಗ್ಗೆ ಇನ್ನೂ ಹಲವು ವೇದ ಮಂತ್ರಗಳಲ್ಲಿ ಅದ್ಭುತವಾಗಿ ಬಣ್ಣಿಸಲಾಗಿದೆ. ಇನ್ನೊಂದು ವೇದಮಂತ್ರವನ್ನು ತಿಳಿಯೋಣ.

ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ|
ತಸ್ಯಾಂ ಹಿರಣ್ಯಃ ಕೋಶಃ ಸ್ವರ್ಗೋ ಜ್ಯೋತಿಷಾವೃತಃ ||
 [ಅಥರ್ವ ೧೦.೨.೩೧]
ಅನ್ವಯ :
ಅಷ್ಟಾಚಕ್ರಾ ನವದ್ವಾರಾ = ಎಂಟು ಚಕ್ರಗಳು ಒಂಬತ್ತು ದ್ವಾರಗಳಿಂದ ಯುಕ್ತವಾದ
ದೇವಾನಾಂ ಅಯೋಧ್ಯಾ = ದೇವತೆಗಳಿಂದ ಜಯಿಸಲಾಗದ
ಪೂಃ = ಪುರ [ಪುರ ಒಂದಿದೆ.ಅದೇ ಶರೀರ]
ತಸ್ಯಾಂ ಹಿರಣ್ಯಃ ಕೋಶಃ = ಅದರಲ್ಲಿರುವ ಕೋಶವು ಹಿತಕರವೂ ರಮಣೀಯವಾದವೂ ಆದ [ಹೃದಯ]
ಸ್ವರ್ಗಃ = ಸುಖಮಯವಾದುದೂ
ಜ್ಯೋತಿಷಾ ಆವೃತಃ = ಪರಮಜ್ಯೋತಿಯಿಂದ ಆವೃತವಾಗಿದೆ.

ಅರ್ಥ :
ಎಂಟು ಚಕ್ರಗಳಿಂದ ನವದ್ವಾರಗಳಿಂದ ಯುಕ್ತವಾದ ಈ ದೇಹವೆಂಬ ನಗರಿಯನ್ನು  ಜಯಿಸಲು ದಿವ್ಯಶಕ್ತಿಗಳಿಂದಲೂ ಸಾಧ್ಯವಿಲ್ಲ. ಈ ನಗರಿಯಲ್ಲಿ ಪರಮ ಚಿನ್ಮಯನಾದ ಆತ್ಮನು ದಿವ್ಯ ಜ್ಯೋತಿಯಿಂದ ಸಮಲಂಕೃತನಾಗಿ ವಾಸಿಸುತ್ತಾನೆ.
ಈಗೊಮ್ಮೆ ನಮ್ಮ ದೇಹದ ವ್ಯವಸ್ಥೆಯನ್ನು ಮನದಲ್ಲಿಯೇ ವೀಕ್ಷಿಸೋಣ.ಎಷ್ಟು ಅದ್ಭುತ! ಎಂಟು ಚಕ್ರಗಳು! ನವದ್ವಾರಗಳು!! ಇವುಗಳ ಬಗ್ಗೆ ನಾನಿಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡುವುದಿಲ್ಲ.ಯೋಗಾಭ್ಯಾಸದಲ್ಲಿ ಇವೆಲ್ಲದರ ಸರಿಯಾದ ಪರಿಚಯವಾಗುತ್ತದೆ. ನಾವು ಕೇವಲ ಹೊರನೋಟದಿಂದಲೇ ಗಮನಿಸಿದರೂ ಅದೆಂತಹ ಅದ್ಭುತ ವ್ಯ್ವಸ್ಥೆಯಲ್ಲವೇ , ಈ ಶರೀರ!! ಆ ಭಗವಂತನ ವ್ಯವಸ್ಥೆಯ ಮುಂದೆ ಮನುಷ್ಯರು ಕಂಡು ಹಿಡಿದಿರುವ ಯಾವುದೇ ಯಂತ್ರವೂ ಸಾಟಿಯಿಲ್ಲ! ಅಲ್ಲವೇ?
ಸ್ವಾಮೀಜಿಯೊಬ್ಬರ ಮಾತು ನೆನಪಾಗುತ್ತದೆ  ನಾನು ಕೋಟ್ಯಾಧಿಪತಿ, ಆದರೆ ನನ್ನ ಕಿಸೆಯಲ್ಲಿ ನೂರು ರೂಪಾಯಿ ಇಲ್ಲ!! ಆದರೆ ನನ್ನೆರಡು ಕೈಗಳು ಎರಡು ಕೋಟಿಗಿಂತ ಹೆಚ್ಚಿನ ಬೆಲೆಯವು! ನನ್ನೆರಡು ಕಾಲುಗಳು ಮತ್ತೆರಡು ಕೋಟಿ! ನನ್ನ ತಲೆಗೆ ಬೆಲೆಯನ್ನು ಕಟ್ಟುವುದಾದರೂ ಹೇಗೆ?
ಯೋಚಿಸಿ ನೋಡಿ ,ಕೈಗಳೇ ಇಲ್ಲದೆ ಹುಟ್ಟಿದ ಹೆಣ್ಣು ಮಗಳೊಬ್ಬಳು ಪಾದದಿಂದಲೇ ಚಿತ್ರ ಬಿಡಿಸುವುದನ್ನು ಕಂಡಿದ್ದೇವೆ. ಕಾಲುಗಳೇ ಇಲ್ಲದೆ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ಕೈಗಳಿಂದಲೇ ನಡೆದು ಜೀವಿಸುತ್ತಾನೆ ! ಆದರೆ ನಮಗೆಲ್ಲವೂ ಇವೆಯಲ್ಲಾ! ಆದರೂ ನಾವು ಬಡವರು!! - ಈ ಯೋಚನೆಯೇ ನಮ್ಮ ದಾರಿದ್ರ್ಯವಲ್ಲವೇ? ಭಗವಂತನು ಕೊಟ್ಟಿರುವ ಈ ಅದ್ದ್ಭುತ ಶರೀರ ಪಡೆದ ನಾವು ಶ್ರೀಮಂತರಲ್ಲವೇ?
ಈ ಶ್ರೀಮಂತದೇಹವನ್ನು ಸುಂದರವಾಗಿ ಕಾಪಾಡಿಕೊಳ್ಳಬೇಕಾದವರು ನಾವೇ ಅಲ್ಲವೇ? ನಾವು ಈ ದೇಹವನ್ನು ದೇವಾಲಯದಂತ ಪವಿತ್ರಭಾವದಿಂದ ಕಂಡಿದ್ದೇವೆಯೇ? ಒಮ್ಮೊಮ್ಮೆ ನನಗೆ ಅನ್ನಿಸುತ್ತದೆ ಈ ದೇಹವನ್ನು ಲೊಡಾಸ್ ಗಾಡಿಯನ್ನಾಗಿ [ ಕೆಟ್ಟು ನಿಂತಿರುವ ವಾಹನ] ಮಾಡಿ ಅದರ ದುರಸ್ತಿಗಾಗಿ ಅದೆಷ್ಟು ವರ್ಕ್ ಶಾಪ್ ಗಳು! [ಆಸ್ಪತ್ರೆಗಳು! ] ನಮ್ಮ ಶರೀರದ ಬಗ್ಗೆ ಸ್ವಲ್ಪ ಚಿಂತನೆ ಮಾಡಬೇಕಲ್ಲವೇ? ಒಮ್ಮೊಮ್ಮೆ ಹೀಗೂ ಆಗುವುದುಂಟು. ನಮ್ಮ ಶರೀರಕ್ಕೆ ಲಾಲನೆ ಪೋಷಣೆ ಹೆಚ್ಚಾಗಿ ಆಗಲೂ ಯಂತ್ರ ಕೆಡುವ ಅವಕಾಶಗಳು!  ನಮ್ಮ ಶರೀರಕ್ಕೆ ಗಮನ ಕೊಡುವುದೆಂದರೆ ಅದು ಭೋಗ ಭಾವದಿಂದಲ್ಲ. ನಮ್ಮ ಶರೀರವು ಸುಂದರ ದೇವಾಲಯದಂತಿರಬೇಕಾದರೆ ನಮ್ಮ ಪರಂಪರೆಯಂತೆ ನಮ್ಮ ನಿತ್ಯ ಜೀವನ ಶಿಸ್ತು ಬದ್ಧವಾಗಿ ಸಾಗಬೇಕು. ಕಾಲಕಾಲಕ್ಕೆ ಶರೀರಕ್ಕೆ ವ್ಯಾಯಾಮ,     ನಿಯಮಿತವಾಗಿ ಧ್ಯಾನ,ಪ್ರಾಣಾಯಾಮ,ಕಾಲಕಾಲಕ್ಕೆ ಆಹಾರ-ವಿಹಾರ, ಸಚ್ಚಿಂತನೆ, ಸದ್ವ್ಯವಹಾರ, ಸನ್ನಡೆ, ಸತ್ಕರ್ಮಾಚರಣೆ, ಇನ್ನೊಬ್ಬರಿಗೆ ನೋವು ಕೊಡದ ಮಾತು ಎ॒ಲ್ಲವೂ ಗಣನೆಗೆ ಬರುತ್ತದೆ. ನಮ್ಮ ದೇಹವನ್ನು ದೇವಾಲವನ್ನಾಗಿ ಉಳಿಸಿಕೊಳ್ಳುವುದು ನಮ್ಮದೇ ಹೊಣೆ ಅಲ್ಲವೇ?


Wednesday, August 27, 2014

Thursday, August 21, 2014

ಹಾಸನದಲ್ಲಿ ವೇದಭಾರತಿಯಿಂದ ಗೀತಾಜ್ಞಾನ ಯಜ್ಞದ ಯಶಸ್ವೀ ಆರಂಭ

ಹಾಸನದಲ್ಲಿ ವೇದಭಾರತಿಯಿಂದ ನಡೆಯುತ್ತಿರುವ  ಗೀತಾಜ್ಞಾನ ಯಜ್ಞದಲ್ಲಿ   ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮಿಗಳು ಬೆಳಿಗ್ಗೆ ಈಶಾವಾಸ್ಯಮ್ ನಲ್ಲಿ ಉಪನಿಷತ್ ಪಾಠವನ್ನೂ ಸಂಜೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ಭಗವದ್ಗೀತೆಯ ಬಗ್ಗೆ ಉಪನ್ಯಾಸವನ್ನೂ ಮಾಡುತ್ತಿದ್ದಾರೆ. ದಿನಾಂಕ 20.8.2014 ರಂದು ಆರಂಭವಾದ ಈ ಕಾರ್ಯಕ್ರಮವು ದಿನಾಂಕ 24.8.2014 ರವರಗೆ ನಡೆಯುತ್ತದೆ.




















Tuesday, August 19, 2014

ವೇದಭಾರತೀ ದ್ವಿತೀಯ ವಾರ್ಷಿಕೋತ್ಸವದ ಕೆಲವು ದೃಶ್ಯಗಳು

ವೇದತರಂಗ ಸಂಪಾದಕರಾದ ಶ್ರೀ ಶ್ರುತಿಪ್ರಿಯರಿಗೆ ಶ್ರೀ ಜ.ಹೋ.ನಾರಾಯಣ ಸ್ವಾಮಿಯವರಿಂದ ಮಾಲಾರ್ಪಣೆ



ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯನ್ನು ನಿರ್ವಹಿಸುತ್ತಿರುವ ಶ್ರೀ ಬೈರಪ್ಪ

ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯಲ್ಲಿ ಶ್ರೀ ಶಂಕರಪ್ಪನವರು

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್,ಅಧ್ಯಕ್ಷರಾದ ಶ್ರೀ ರಾಕೇಶ್ ಮತ್ತು ವೇದಭಾರತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಶ್ರೀ ಸು.ರಾಮಣ್ಣನವರು

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏ॑ಕಲ್ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ರಾಕೇಶ್

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏ॑ಕಲ್ ವಿದ್ಯಾಲಯದ ಕಾರ್ಯದರ್ಶಿ ನಂದಕುಮಾರ್

ಸಮಾಜ ಮತ್ತು ನಾನು ಘೋಷ್ಠಿಯ ನಿರ್ವಹಣೆ ಶ್ರೀಮತಿ ಪ್ರೇಮಾಭಗಿನಿಯವರಿಂದ

ಸಮಾಜ ಮತ್ತು ನಾನು ಘೋಷ್ಠಿಯಲ್ಲಿ ಶ್ರೀ ಸು.ರಾಮಣ್ಣ ಮತ್ತು ಶ್ರೀಮತಿ ಲೀಲಾವತಿ


ಮಹಿಳೆ ಮತ್ತು ವೇದ ಘೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವಿಜಯಕುಮಾರಿ ಶ್ರೀ ಕುಶಲ ಮತ್ತು ಶ್ರೀಮತಿ ರೇಣುಕಾ ಪ್ರಭು

ಕು|| ಅಕ್ಷತಾ ರಾಮಕೃಷ್ಣ ರಿಂದ ಭರತನಾಟ್ಯ



ನಮ್ಮ ಮನೆ ಗೋಷ್ಠಿಯಲ್ಲಿ  ಶ್ರೀ ಜಜಗಧೀಶ್, ಶ್ರೀ ಸು.ರಾಮಣ್ಣ ಮತ್ತು ಶ್ರೀ ಕೆ.ಪಿ.ಎಸ್.ಪ್ರಮೋದ್



ಸತ್ಸಂಗ ಗೋಷ್ಠಿಯಲ್ಲಿ  ಶ್ರೀ ವೆಂಕಟೆಶಮೂರ್ತಿ. ಶ್ರೀ ವಿ.ನಾ.ಶರ್ಮ ಮತ್ತು ಶ್ರೀ ಪ್ರಕಾಶ್.ಎಸ್.ಯಾಜಿ


ಚಿಂತನ ಗೋಷ್ಠಿಯಲ್ಲಿ ಶ್ರೀ ಕವಿನಾಗರಾಜ್, ಶ್ರೀ ಶ್ರೀನಿವಾಸ, ಶ್ರೀ ವಸಂತ್ ಕುಮಾರ್ ಪೆರ್ಲಾ ಮತ್ತು ಶ್ರೀ ಅಶೋಕ್ ಕುಮಾರ್

ಕು|| ಸಹನಾ ವೃಂದದವರಿಂದ ವೀಣಾ-ವೇಣುವಾದನ ಕಛೇರಿ.


ಸಮಾರೋಪ ಸಮಾರಂಭದಲ್ಲಿ ಡಾ. ಪ್ರಸನ್ನ ಎನ್.ರಾವ್


ಸಮಾರೋಪ ಸಮಾರಂಭದಲ್ಲಿ ಶ್ರೀ ಸಿ.ಎಸ್.ಕೃಷ್ಣಸ್ವಾಮಿ


ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ


     

ಹಾಸನದಲ್ಲಿ ದಿನಾಂಕ 16.8.2014 ರಂದು ಉದ್ಘಾಟನೆಗೊಂಡ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಅಧ್ಯಕ್ಷರೂ, ವಿ.ಹಿಂ.ಪರಿಷತ್ತಿನ ರಾಜ್ಯ ಉಪಾಧ್ಯಕ್ಷರೂ ಆದ ಶ್ರೀ ಶಂಕರಪ್ಪನವರ ಹೃದಯಾಂತರಾಳದ ಮಾತುಗಳು ಇಲ್ಲಿವೆ. 
----------------------------------------------------------------------------
ಹಿಂದು ಧರ್ಮ ನನ್ನ ತಾಯಿ.ಹಿಂದೂ ಧರ್ಮವನ್ನು ನಾಶಪಡಿಸಲು ವೈರಿಗಳು ಕಾದಿದ್ದಾರೆ. ಪರಕೀಯರು ನಮ್ಮ ದೇಶವನ್ನು ಆಳಿದ ಕಾಲಕ್ಕಿಂತಲೂ ಇಂದು ಹಿಂದೂ ಧರ್ಮಕ್ಕೆ ಹೆಚ್ಚು ಗಂಡಾಂತರವಿದೆ. ನಮ್ಮ ನಮ್ಮಲ್ಲಿ ಶತೃತ್ವ ಬೆಳೆಸುತ್ತ  ತನ್ಮೂಲಕ ನಮ್ಮ ಧರ್ಮವನ್ನು ನಾಶಮಾಡುವ  ಶಡ್ಯಂತ್ರವನ್ನು ಅನ್ಯ ಮತೀಯರು ಹೆಣಿದಿದ್ದಾರೆ. ಆದ್ದರಿಂದ ಈಗ ಹಿಂದೆಂದಿಗಿಂತಲೂ ನಾವು ಎಚ್ಚರವಾಗಿರುವುದು ಅನಿವಾರ್ಯವಾಗಿದೆ.
          ಭಾರತಮಾತೆಯ ಮಕ್ಕಳಾದ ನಮ್ಮಲ್ಲಿ ಪರಸ್ಪರಾನ್ಯೋನ್ಯತೆ, ಸಾಮರಸ್ಯ, ಪ್ರೀತಿ ಉಳಿಯದಿದ್ದರೆ ಮುಂದಿನ ದಿನಗಳಲ್ಲಿ  ನಮ್ಮ ಧರ್ಮಕ್ಕೆ ದುರಂತ ಕಾದಿದೆ. ಈ ಧರ್ಮವನ್ನು ಉಳಿಸಲು  ರಾ.ಸ್ವ.ಸಂಘದ ಸಾವಿರಾರು ಕಾರ್ಯಕರ್ತರು ತಮ್ಮ ಜೀವನವನ್ನು  ಮುಡಿ[ಪಾಗಿಟ್ಟಿರುವುದು ನಿಜ. ಆದರೆ ಧರ್ಮರಕ್ಷಣೆಯ ಈ ಕೆಲಸದ ಪ್ರಮಾನ ಸಾಲದು. ಇನ್ನೂ ಹೆಚ್ಚು ರಬಸದಿಂದ ಧರ್ಮವನ್ನು ಉಳಿಸುವ ಕೆಲಸ ನಡೆಯಬೇಕಾಗಿದೆ. ಇಲ್ಲಿಯವರಗೆ ರಾ.ಸ್ವ.ಸಂಘದ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ದೇಶದ  ಜನರ  ಪ್ರತಿಶತ ಒಂದಕ್ಕಿಂತ ಕಮ್ಮಿ ಇರಬಹುದು.ಇನ್ನೂ ಪ್ರತಿಶತ 99 ಜನರಿಗೆ ಈ ಜ್ಞಾನವನ್ನು ಮುಟ್ಟಿಸಬೇಕಾಗಿದೆ. ಆದ್ದರಿಂದ ನಮ್ಮ ಸ್ವಂತ ಜೀವನದ ಜೊತೆಗೆ ಭಾರತಮಾತೆಗಾಗಿ ನಾವೆಲ್ಲರೂ ನಮ್ಮ ಸ್ವಲ್ಪ ಸಮಯವನ್ನು ಕೊಟ್ಟರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ.ನಾವು ಕುಳಿತಲ್ಲೇ  ದೇಶದ ಮಾತನಾಡಿದರೆ ಸಾಲದು, ಮಹಾಪುರುಷರನ್ನು ಹೊಗಳಿದರೆ ಸಾಲದು.
          ನಮಗೆ ಒಂದು ನಂಬಿಕೆ ಇದೆ. ಧರ್ಮದ ಅಧಃಪಥನವಾಗುವ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ಧರೆಗಿಳಿದುಬಂದು ಧರ್ಮದ ಪುನರುತ್ಥಾನ ಮಾಡುತ್ತಾನೆಂದು. ಆದರೆ ಪ್ರಪಂಚದಲ್ಲಿ ನಾವು 160 ಕೋಟಿಗಿಂತಲೂ ಹೆಚ್ಚು ಹಿಂದುಗಳಿದ್ದೇವೆ.ನಾವೆಲ್ಲಾ ಕಣ್ಮುಚ್ಚು ಕುಳಿತು ನಾರಾಯಣನನ್ನು ಎದುರು ನೋಡುತ್ತಿದ್ದೇವೆ. ಭಗವಂತನ ಅಂಶವೇ ಆದ ನಾವು  ನಾರಾಯಣನು ಮಾಡುವ ಕಾರ್ಯದಲ್ಲಿ ಪ್ರತಿಶತ ಒಂದನ್ನು ನಾವೆಲ್ಲಾ ಮಾಡಿದರೂ ಪ್ರತಿಶತ 160 ಕೋಟಿಗಿಂತಲೂ ಹೆಚ್ಚು ಕಾರ್ಯವನ್ನು ನಾವು ಮಾಡಲು ಸಾಧ್ಯವಿಲ್ಲವೇ?

ಕ್ರೈಸ್ತ ಮತ್ತು ಮುಸಲ್ಮಾನರು ಅವರ ಧರ್ಮ ಉಳಿಸಲು ಬದುಕುತ್ತಾರೆ

ಆದರೆ ಕ್ರೈಸ್ತ ಮತ್ತು ಮುಸಲ್ಮಾನರ ಚಿಂತನೆ ಇದಕ್ಕೆ ವಿರುದ್ಧವಾದುದು. ಅವರಾದರೋ  ತಮ್ಮ ಧರ್ಮದ ರಕ್ಷಣೆಗಾಗಿಯೇ  ಏಸು ಅಥವಾ ಪಗಂಬರ್ ಈ ಭೂಮಿಗೆ ತಮ್ಮನ್ನು ಕಳಿಸಿಕೊಟ್ಟಿದ್ದಾರೆಂದು ಭಾವಿಸುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬರೂ ಅವರ ಧರ್ಮಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ಅವರ ಧರ್ಮದ ಉಳಿವಿಗಾಗಿ ಅವರು ಬದುಕುತ್ತಾರೆ. ಆದ್ದರಿಂದ ಅವರ ಧರ್ಮಗಳು ಬೆಳೆಯುತ್ತಿವೆ.
ನಾವೂ ಕೂಡ ನಮ್ಮ ಧರ್ಮಕ್ಕಾಗಿ ಬದುಕುವುದನ್ನು ಪರಧರ್ಮೀಯರಿಂದ ಕಲಿಯಬಾರದೇ?  ಹೀಗೆ ಮಾಡಿದರೆ ಪರ ಧರ್ಮೀಯರು ನಮ್ಮ ಮೇಲೆ ಅವರ ವಕ್ರ ದೃಷ್ಟಿ ಹರಿಸುವ ಧೈರ್ಯಮಾಡಿಯಾರೇ?

ನಮ್ಮ ಮಠಾಧಿಪತಿಗಳು ಜನರನ್ನು ತಲುಪಬೇಕು
        ನಮ್ಮಲ್ಲಿ ಸಾವಿರಾರು ಮಠಾಧಿಪತಿಗಳು, ಸ್ವಾಮೀಜಿಗಳು ಇದ್ದಾರಲ್ಲವೇ? ಆದರೂ ನಮ್ಮ ಧರ್ಮ ನಶಿಸುತ್ತಿರುವುದೇಕೇ? ಎಲ್ಲೋ ಏನೋ ಲೋಪವಿರಬೇಕಲ್ಲವೇ! ಆದ್ದರಿಂದ ನನ್ನ ಕಳಕಳಿಯ ಮನವಿ ಏನೆಂದರೆ ಪೂಜ್ಯ ಸ್ವಾಮೀಜಿಗಳು ಜನರ ಹತ್ತಿರ ಬರಬೇಕು. ಅವರಲ್ಲಿ ಧರ್ಮ ಜಾಗೃತಿ ಉಂಟುಮಾಡಬೇಕು.ನನ್ನ ಸಮಾಜದ ಜನರನ್ನು ವೇದಭಾರತಿಯಂತಹ ಸಂಸ್ಥೆಗಳ ಹತ್ತಿರ ತರಲು ನಾನೂ ಸಹ ಸರ್ವ ಪ್ರಯತ್ನವನ್ನು ಮಾಡುತ್ತೇನೆ. ಈ ನನ್ನ ಪ್ರಯತ್ನವನ್ನು ನೋಡಿದ ನಮ್ಮ ಜನಾಂಗದ ಜನರು ನನ್ನನ್ನು ಠೀಕಿಸುತ್ತಿದ್ದಾರೆ.ಸಾವಿರಾರು ವರ್ಷಗಳು ನಮ್ಮ ಜನಾಂಗವನ್ನು ಮೂಲೆಗುಂಪು ಮಾಡಿದ್ದ ಜನರೊಡನೆ ಸೇರಿದ್ದೇನೆಂದು ನಮ್ಮ ಸಮಾಜದ ಬುದ್ಧಿಜೀವಿಗಳು ನನಗೆ ಕೇಳುತ್ತಿದ್ದಾರೆ. ಅವರಿಗೆ ನಾನು ಕೇಳುತ್ತಿದ್ದೇನೆ " ರಾ.ಸ್ವ.ಸಂಘವು ಈ ದೇಶದಲ್ಲಿ ಹಿಂದು ಧರ್ಮವನ್ನು ಉಳಿಸಲು ಕೆಲಸಮಾಡುತ್ತಿರುವ ಸಂಘಟನೆ. ನಾನು ಅವರೊಡನೆ ಹೋಗದೆ ಅಮೆರಿಕೆಯ ಒಬಾಮರ ಹತ್ತಿರ ಹೋಗಬೇಕೇ? ಸದ್ದಾಂ ಹುಸೇನನ ಹತ್ತಿರ ಹೋಗಬೇಕೇ?
       ನಾನೊಬ್ಬ ಹಿಂದುವಾಗಿ ಹಿಂದು ಸಂಘಟನೆಗಳ  ಜೊತೆ ಕೈ ಜೋಡಿಸದೆ ಮುಸಲ್ಮಾನ, ಕ್ರೈಸ್ತ ಸಂಘಟನೆಗಳ ಜೊತೆ ಕೈ  ಜೋಡಿಸಬೇಕೆ? ನಮ್ಮ ಪೂರ್ವಜರಲ್ಲಿ ಯಾರಿಂದಲೋ ಯಾವಾಗಲೋ  ತಪ್ಪಾಗಿದೆ ನಿಜ, ಆದರೆನಾವೀಗ ಬುದ್ಧಿವಂತರಾಗಿಲ್ಲವೇ? ನಾವು ತಪ್ಪನ್ನು ಸರಿಪಡಿಸಿಕೊಳ್ಳಬಾರದೇ?

ಹಿಂದಿನ ವರ್ಣಾಶ್ರಮ ಧರ್ಮ ಈಗ ಉಳಿದಿದೆಯೇ?

        ನಮ್ಮ ಸಮಾಜದವರ ಹತ್ತಿರ ನಾನು ಕೇಳುತ್ತಿದ್ದೇನೆ." ಹಿಂದಿನ ವರ್ಣಾಶ್ರಮದಂತೆ ಈಗ ಸಮಾಜ ಇದೆಯೇ? ನಾವು ಬುದ್ಧಿವಂತರಾಗಿ ಕ್ಷತ್ರಿಯರಂತೆ ದೇಶವಾಳುತ್ತಿಲ್ಲವೇ?  ವೈಶ್ಯರಂತೆ ವ್ಯಾಪಾರ ಮಾಡುತ್ತಿಲ್ಲವೇ? ಬ್ರಾಹ್ಮಣರಂತೆ ವಿದ್ಯೆ ಹೇಳಿಕೊಡುವ ಅಧ್ಯಾಪಕ ಕೆಲಸ ಮಾಡುತ್ತಿಲ್ಲವೇ?ಶೂದ್ರರಂತೆ ವ್ಯವಸಾಯ ಮಾಡುತ್ತಿಲ್ಲವೇ? ಇಂತಹ ಸಂದರ್ಭದಲ್ಲಿ ನಾವ್ಯಾಕೆ ಈಗಿನ ಬ್ರಾಹ್ಮಣ ಪಂಗಡದವರೊಡನೆ ಬೆರೆತು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಾರದು? ಅದರಿಂದ ನಮ್ಮ ಸಮಾಜ ಉದ್ಧಾರವಾಗುವುದಿಲ್ಲವೇ? ಹಾಗೆ ಮಾಡದೆ ನಾವು ಕ್ರೈಸ್ತರೊಡನೆಯೋ, ಮುಸಲ್ಮಾನರೊಡನೆಯೋ ಸೇರಿ ಪಾಪಿಗಳಾಗಿ ಬದುಕುವುದಕ್ಕಿಂತ ಸ್ವಧರ್ಮದಲ್ಲಿದ್ದುಕೊಂಡು ಅದನ್ನೂ ಶುದ್ಧಮಾಡುತ್ತಾ ನಾವು ಯಾಕೆ ಬಲಿಷ್ಠರಾಗಬಾರದು!" -ಈ ನನ್ನ ಮಾತಿನಿಂದ ಯಾರು ಕ್ರಿಶ್ಚಿಯನ್ ಮಿಶನರಿಗಳಿಂದ ಸಹಾಯ ಪಡೆಯುತ್ತಿದ್ದಾರೋ ಅವರು ನನ್ನನ್ನು ದ್ವೇಶಿಸುತ್ತಿದ್ದಾರೆ. ಆದ್ದರಿಂದ ನನ್ನ ಸಮಾಜದ ಮತ್ತು ಉಳಿದೆಲ್ಲಾ ಹಿಂದೂ ಮಠಾಧಿಪತಿಗಳನ್ನು ನಾನು ದಲಿತ ಕಾಲೊನಿಗಳಿಗೆ ಪದಾರ್ಪಣೆ ಮಾಡಿ ಅಲ್ಲಿ ಧ್ರಮ ಜಾಗೃತಿ ಮಾಡಬೇಕೆಂದು  ಪ್ರಾರ್ಥಿಸುತ್ತಿದ್ದೇನೆ. ಮಠಾಧಿಪತಿಗಳು ದಲಿತ ಕಾಲೊನಿಗಳಿಗೆ ಕಾಲಿಟ್ಟರೆ  ಅನ್ಯ ಮತೀಯರು ಅಲ್ಲಿ ಪ್ರವೇಶಿಸಿ ಮತಾಂತರ ಮಾಡಲು ಹೆದರುತ್ತಾರೆ.

ನದಿಗಳು ಸಾಗರಸೇರಿದಂತೆ ಎಲ್ಲಾ ಜಾತಿಗಳೂ ಹಿಂದೂ ಧರ್ಮದಲ್ಲಿ ಐಕ್ಯವಾಗಬೇಕು.
     ಮೇಲ್ಜಾತಿಯವರು ದಯಮಾಡಿ ಕೆಳ ಜಾತಿಯವರ ಸಮೀಪ ಬರುವ ಕೆಲಸ ಆಗಬೇಕು. ಹಾಗೆಯೇ ಕೆಳಜಾತಿಯವರೂ ಮೇಲ್ಜಾತಿಯವರ ಹತ್ತಿರ ಬರುವ ಪ್ರಯತ್ನ ಮಾಡಿ, ಬರುಬರುತ್ತಾ  ಎರಡೂ ಪಂಗಡಗಳ ನಡುವೆ ಅಂತರ ಕಡಿಮೆಯಾಗುತ್ತಾ ಬಂದರೆ ಒಂದು ದಿನ ಹಿಂದು ಸಮಾಜವು ಇನ್ನೂ ಸದೃಢವಾಗಿ ನಿಲ್ಲುವುದರಲ್ಲಿ ಸಂಶಯವಿಲ್ಲ.

ಧರ್ಮ ಜಾಗೃತಿಯ ಕೆಲಸ ಆರಂಭವಾದ ಮೇಲೆ ನಿಲ್ಲಬಾರದು. ನದಿಯಂತೆ ಹರಿಯುತ್ತಿರಬೇಕು
         ಮೈಸೂರಿನಲ್ಲಿ ಒಂದು ಪ್ರಯತ್ನ ನಡೆಯಿತು. ನಮ್ಮ ಸಮಾಜದ ಪೂಜ್ಯರಾದ ಮಾದಾರಚೆನ್ನಯ್ಯ ಸ್ವಾಮೀಜಿಯವರು ಒಂದು ದಿನ  ಬ್ರಾಹ್ಮಣ ಕೇರಿಯಲ್ಲಿ ಪಾದಯಾತ್ರೆ ಮಾಡಿದರು. ಉಡುಪಿಯ ಪೂಜ್ಯ ಪೇಜಾವರ ಶ್ರೀಗಳು ದಲಿತ ಕಾಲೊನಿಯಲ್ಲಿ ಒಂದು ದಿನ  ಪಾದಯಾತ್ರೆ ಮಾಡಿದರು.ಆದರೆ ಅದರ ಪರಿಣಾಮ ಹಿಂದು ಸಮಾಜಕ್ಕಿಂತಲೂ ಅನ್ಯ ಮತೀಯರ ಮೇಲೆ ಹೆಚ್ಚಾಯ್ತು. ಅವರು ಜಾಗೃತರಾದರು. ಅವರ ಕೆಲಸ ಇನ್ನೂ  ರಬಸಗೊಂಡಿತು.ಅನ್ಯಮತೀಯರು ದಲಿತರಿಗೆ ಹೆಚ್ಚು ಹೆಚ್ಚು ಆಮಿಶಗಳನ್ನು ತೋರಿಸಿ ಮತಾಂತರದ ಸಂಖ್ಯೆ ಹೆಚ್ಚು ಮಾಡಿದರು. ಕಾರಣ ಏನೆಂದರೆ ನಮ್ಮ ಸ್ವಾಮೀಜಿಗಳು ಒಂದು ದಿನ ದಲಿತ /ಬ್ರಾಹ್ಮನ ಕೇರಿಯಲ್ಲಿ ಪಾದಯಾತ್ರೆ ಮಾಡಿ ತಮ್ಮ ಈ ಕೆಲಸವನ್ನು ನಿಲ್ಲಿಸಿಬಿಟ್ಟರು.ಅದು ಮುಂದುವರೆದಿದ್ದರೆ ಅನ್ಯಮತೀಯರು ತಮ್ಮ ದುಸ್ಸಾಹಸಕ್ಕೆ ಕೈ ಹಾಕಲು ಹೆದರುತ್ತಿದ್ದರು.ಇಂತಹ ಧರ್ಮ ಜಾಗೃತಿಯ ಕೆಲಸ ಆರಂಭವಾದಮೆಲೆ ನಿಲ್ಲಬಾರದು. ನದಿಯಂತೆ ಹರುತ್ತಿರಬೇಕು.ಅದು ನಿಂತರೆ ಅನ್ಯಮತೀಯರಿಂದ ದಲಿತರಿಗೆ ಆಮಿಷ ತೋರಿಸಿ ಮತಾಂತರ ಮಾಡುವ ಕೆಲಸವು ನಡೆಯುತ್ತದೆ. ಆದ್ದರಿಂದ ನಮ್ಮ ಹಿಂದೂ ಧರ್ಮದ ಸ್ವಾಮೀಜಿಗಳು ದಿನದಲ್ಲಿ ಒಂದು ಗಂಟೆಯಾದರೂ ದಲಿತ ಕಾಲೊನಿಗಳಿಗೆ ಹೋಗಿ ಧರ್ಮ ಜಾಗೃತಿಯ ಪವಿತ್ರ ಕೆಲಸವನ್ನು ಮಾಡಬೇಕು- ಎಂಬುದು ಸ್ವಾಮೀಜಿಗಳಲ್ಲಿ ನನ್ನ ಕಳಕಳಿಯ ಮನವಿ.

ಅನ್ಯಮತಕ್ಕೆ ಒಬ್ಬ ಮತಾಂತರನಾದನೆಂದರೆ ನಮ್ಮ ಮನೆಯೊಳಗೆ ಒಂದು ಹಾವು ಬಂದಂತೆ.
     ಅನ್ಯಮತಕ್ಕೆ ಒಬ್ಬ ಮತಾಂತರನಾದನೆಂದರೆ ನಮ್ಮ ಮನೆಯೊಳಗೆ ಒಂದು ಹಾವು ಬಂದಂತೆ.ಅದು ಕಚ್ಚುವುದು ಕಟ್ಟಿಟ್ಟಬುತ್ತಿ. ಆದ್ದರಿಂದ ಅದನ್ನು ಅಪಾಯವಿಲ್ಲದಂತೆ ಹಿಡಿದು ಕಾಡಿಗೆ ಬಿಡಬೇಕು ಅಥವಾ ಆಗದಿದ್ದರೆ ಕೊಲ್ಲಬೇಕು. ಇಲ್ಲದಿದ್ದರೆ ಅದು ನಮ್ಮನ್ನು ಕಚ್ಚಿ ಸಾಯಿಸುವುದು ಖಚಿತ. ವೇದದ  ಅರಿವಿನ     ಕೆಲಸವು ದಲಿತ ಕಾಲೊನಿಗಳಲ್ಲೂ ಆಗಬೇಕು. ಕ್ರೈಸ್ತರಲ್ಲಿ ಒಂದು ಯೋಜನೆ ಇದೆ. ಒಬ್ಬ ಕ್ರೈಸ್ತ ಒಂದು ತಿಂಗಳಲ್ಲಿ ಒಂದು ಹಿಂದು ಕುಟುಂಬವನ್ನು ತನ್ನ ಮತಕ್ಕೆ ಮತಾಂತರ ಮಾಡಲೇ ಬೇಕು.ಅಂದರೆ ಒಬ್ಬ ಕ್ರೈಸ್ತ ಒಂದು ವರ್ಷಕ್ಕೆ 12 ಹಿಂದು ಕುಟುಂಬಗಳನ್ನು ಮತಾಂತರ ಮಾಡಬೇಕು.ಗುಡ್ದಗಾಡು ಪ್ರದೇಶಗಳಲ್ಲಿ, ಅಲೆಮಾರಿ ಜನಾಂಗಗಳಲ್ಲಿ, ದಲಿತ ಕಾಲೊನಿಗಳಲ್ಲಿ ಈ ಮತಾ೦ತರದ ಕೆಲಸ ನಡೆಯುತ್ತಿದೆ. 

ದಲಿತರಿಗೆ ಸಾಮಾಜಿಕ ಭಹಿಷ್ಕಾರ ಹಾಕಿದ ಜಾಗದಲ್ಲೆಲ್ಲಾ ಮತಾಂತರ ಹೆಚ್ಚಾಗಿ ನಡೆದಿದೆ.
ಯಾವ ಯಾವ ಹಳ್ಳಿಗಳಲ್ಲಿ ಸಾರ್ವಜನಿಕ ಭಾವಿಗಳಲ್ಲಿ ನೀರು ಸೇದಲು ದಲಿತರನ್ನು ಬಿಡುವುದಿಲ್ಲವೋ, ಎಲ್ಲೆಲ್ಲಿ ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿರಾಕರಿಸಲಾಗುತ್ತದೋ, ಎಲ್ಲೆಲ್ಲಿ  ದಲಿತರಿಗೆ ಕ್ಷೌರ ಮಾದಲು ನಿರಾಕರಿಸುತ್ತಾರೋ, ಅಲ್ಲೆಲ್ಲಾ ಮತಾಂತರದ ಚಟುವಟಿಕೆಗಳು ಹೆಚ್ಚಾಗಿವೆ, ಎಂಬುದನ್ನು ನಾವು ಮನಗಾಣಬೇಕು. ಯಾವ ಯಾವ ಊರುಗಳಲ್ಲಿ ದಲಿತರು ಸಾಮಾಜಿಕ ಭಹಿಷ್ಕಾರಕ್ಕೆ ಒಳಗಾಗಿದ್ದಾರೆ, ಅಲ್ಲೆಲ್ಲಾ ಅದರ ಮರುವರ್ಷವೇ ಪ್ರತಿಶತ 25 ಭಾಗ ದಲಿತರು ಅನ್ಯಮತಕ್ಕೆ ಮತಾಂತರವಾಗಿರುತ್ತಾರೆ!! ಎಂಬ ವಿಷಯವು ಎಲ್ಲರಿಗೂ ತಿಳಿಯುವುದಿಲ್ಲ. ನೀವೆಲ್ಲಾ ಪತ್ರಿಕೆಗಳಲ್ಲಿ ಅಂತಾ ಸುದ್ಧಿಯನ್ನು ಓದಿದರೆ ನಾನು ಅದೇ ಸಮಾಜದ ಮಧ್ಯ ಇದ್ದುಕೊಂಡು  ಪ್ರತ್ಯಕ್ಷ ನೋಡುತ್ತಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ  ದಲಿತರು ಯಾರ ಹತ್ತಿರ ಹೋಗಬೇಕು, ನೀವೇ ಹೇಳಿ. ನಾನು ನನ್ನ ಸಮಾಜದ ಸಂಕತವನ್ನು ಸಪಡಿಸಲು ಅನ್ಯಮತೀರನ್ನು ಕೇಳಬೇಕೋ, ಅಥವಾ ನಮ್ಮ ಧರ್ಮದ ಮೇಲ್ವರ್ಗದವರನ್ನು ಕೇಳಬೇಕೋ .ನೀವೇ ಹೇಳಿ.ನಾವೇ ಈ ಸಂಕಟವನ್ನು ಬರದಂತೆ ಎಚ್ಚರ ವಹಿಸಬೇಕು.ಇಲ್ಲದಿದ್ದರೆ ನಮ್ಮ ಹಿಂದು ಧರ್ಮಕ್ಕೆ  ದುರಂತ ತಪ್ಪಿದ್ದಲ್ಲ.

Monday, August 18, 2014

ಯಶಸ್ಸನ್ನು ಕಂಡ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ

ಭಜನ್-೧


ಭಜನ್-೨


ಶ್ರೀ ಸು.ರಾಮಣ್ಣನವರಿಂದ ಉದ್ಘಾಟನಾ ಭಾಷಣ





























Thursday, August 14, 2014

ಹೇ ಪರಮಾತ್ಮ, ನಮ್ಮನ್ನು ಹರ್ಷಗೊಳಿಸು



ವೇದಮಂತ್ರಗಳು  ಒಂದೊಂದೂ ಅದ್ಭುತ!

ಮೂಷೋ ನ ಶಿಶ್ನಾ ವ್ಯದಂತಿ ಮಾಧ್ಯಃ ಸ್ತೋತಾರಂ ತೇ ಶತಕ್ರತೋ |
ಸಕೃತ್ಸು ನೋ ಮಘವನ್ನಿಂದ್ರ ಮೃಳಯಾಧಾ ಪಿತೇವ ನೋ ಭವ ||
[ ಋಗ್ವೇದ ಮಂಡಲ-೧೦, ಸೂಕ್ತ-೩೩, ಮಂತ್ರ ೩]

ಅರ್ಥ :
ಶತಕೃತೋ ಇಂದ್ರ = ಹೇ ಬಹುಪ್ರಜ್ಞಾವಾನ್ ಇಂದ್ರನೇ, ಪರಮೇಶ್ವರನೇ,
ತೇ = ನಿನ್ನನ್ನು
ಸ್ತೋತಾರಂ = ಸ್ತುತಿಗೈಯ್ಯುವ
ಮಾ = ನನ್ನನ್ನು
ಆಧ್ಯಃ = ಮಾನಸಿಕ ಚಿಂತೆಗಳು
ಮೂಷಃ ನ ಶಿಶ್ನಾ = ಇಲಿಗಳು ಎಣ್ಣೆ ಸವರಿದ ದಾರವನ್ನು ತಿನ್ನುವಂತೆ
ವಿ ಅದಂತಿ = ಬಗೆ ಬಗೆಯಾಗಿ ಕುಕ್ಕಿ ತಿನ್ನುತ್ತಿವೆ
ಮಘವನ್ = ಹೇ ಐಶ್ವರ್ಯಶಾಲಿಯಾದ ಪರಮೇಶ್ವರನೇ
ನಃ = ನಮ್ಮನ್ನು
ಸಕೃತ್ = ಒಂದು ಸಾರಿ
ಸಮೃಳಯ = ಹರ್ಷಗೊಳಿಸಿಬಿಡು
ಅಥಾ = ಹೀಗೆ
ನಃ ಪಿತಾ ಇವ ಭವ = ನೀನು ನಮಗೆ ತಂದೆಯಂತೆ ಆಗು.
ಭಾವಾರ್ಥ :

ಹೇ ಪರಮೇಶ್ವರ, ನಿನ್ನನ್ನು  ಸ್ತುತಿಗೈಯ್ಯುವ ನನ್ನನ್ನು ನನ್ನ  ಮಾನಸಿಕ ಚಿಂತೆಗಳು  ಇಲಿಗಳು ಎಣ್ಣೆ ಸವರಿದ ದಾರವನ್ನು ತಿನ್ನುವಂತೆ ಬಗೆ ಬಗೆಯಾಗಿ ಕುಕ್ಕಿ ತಿನ್ನುತ್ತಿವೆ, ಹೇ ಐಶ್ವರ್ಯಶಾಲಿಯಾದ ಪರಮೇಶ್ವರನೇ ನಮ್ಮನ್ನು  ಒಂದು ಸಾರಿ  ಹರ್ಷಗೊಳಿಸಿಬಿಡು,   ಹೀಗೆ  ನೀನು ನಮಗೆ ತಂದೆಯಂತೆ ಆಗು.
ಎಂತಹಾ ವಾಸ್ತವ ಸತ್ಯ ಸಂಗತಿಗಳು! ಇದರಿಂದಲೇ ವೇದವನ್ನು ಸಾರ್ವಕಾಲಿಕ ಎನ್ನುವುದು. ಭಗವಂತನ ಸ್ಮರಣೆಯಲ್ಲಿದ್ದರೂ ಸಹ ನಮ್ಮ ಮಾನಸಿಕ ಚಿಂತೆಗಳು ನಮ್ಮನ್ನು ಕಾದದೆ ಬಿಡದು. ಇಲ್ಲಿ ಹೋಲಿಕೆ ಹೇಗಿದೆ ನೋಡಿ, ಇಲಿಗಳು ಎಣ್ಣೆ ಸವರಿದ ದಾರವನ್ನೋ, ಹಗ್ಗವನ್ನೋ ಅಥವಾ ಮತ್ತಿನ್ನೇನನ್ನೋ ಅದರ ವಾಸನೆಹಿಡಿದು ಅಲ್ಲಿ ಧಾವಿಸಿ ಎಣ್ನೆ ಸವರಿದ ವಸ್ತುವನ್ನು ಕುಕ್ಕಿ ಕುಕ್ಕಿ ತಿನ್ನುವುದು ನಮಗೆ ಗೊತ್ತಿರುವ ಸಂಗತಿಯೇ ಅಲ್ಲವೇ! ಅದರಂತೆಯೇ ನಮ್ಮ ಮಾನಾಸಿಕ ಚಿಂತೆಗಳು ನಮ್ಮನ್ನು ಕುಕ್ಕಿ ಕುಕ್ಕಿ ತಿನ್ನುತ್ತವೆ. ಎಂತಹಾ ಅದ್ಭುತ ಹೋಲಿಕೆ! ಹೌದಲ್ಲವೇ? ಭಗವಂತನ ಸ್ಮರಣೆಯನ್ನು ನಿತ್ಯವೂ ಮಾಡುವ, ನಿತ್ಯವೂ ಅವನ ಅರ್ಚನೆಮಾಡುವ , ಅವನದೇ ಧ್ಯಾನದಲ್ಲಿರುವವನನ್ನೂ ಕೂಡ ಮಾನಸಿಕ ಚಿಂತೆಗಳು ಸುಮ್ಮನೆ ಬಿಡುವುದಿಲ್ಲವಲ್ಲ. ನಮ್ಮ  ಮೇಲೆ ದಾಳಿಮಾಡಿ ನಮ್ಮ ಚಿತ್ತವನ್ನು ಹಾಳುಮಾಡುವುದಿಲ್ಲವೇ? ಇಂತಹಾ ನನ್ನ ಮಾನಸಿಕ ಅವಸ್ಥೆಯು ದೂರವಾಗಲು ನೀನು ಒಮ್ಮೆ ನನ್ನತ್ತ ನೋಡಿಬಿಡು. ನನ್ನನ್ನು ಒಮ್ಮೆ ಹರ್ಷಗೊಳಿಸಿಬಿಡು- ಎಂದು ಆ      ಶತಕೃತನಾದ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುವ ವೇದ ಮಂತ್ರವಿದು.
  ವೇದಮಂತ್ರಗಳ ಒಂದೊಂದು ಪದವನ್ನೂ ಪಂಡಿತ್ ಸುಧಾಕರ ಚತುರ್ವೇದಿಗಳು  ನಮಗೆ ವಿವರಿಸುವ ರೀತು ಬಲು ಚೆನ್ನ. ಶತಕೃತೋ-ಎನ್ನುವ ಒಂದು ಪದದ ಅರ್ಥ ಬಲು ವಿಸ್ತಾರ. ಸರ್ವಶಕ್ತ  ಆ ಭಗವಂತನನ್ನು ಒಂದೊಂದು ಮಂತ್ರದಲ್ಲಿ ಒಂದೊಂದು ಬಗೆಯಲ್ಲಿ ಸ್ತುತಿಸುವುದನ್ನು ವೇದಮಂತ್ರಗಳಲ್ಲಿ ಕಾಣಬಹುದು. ಶತಕೃತೋ ಎಂದರೆ ನೂರಾರು ಕೆಲಸಗಳನ್ನು ಸರಾಗವಾಗಿ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಉಳ್ಳ ಪ್ರಭುವೇ! -ಎ೦ದು. ಅಂದರೆ ಆ ಭಗವಚ್ಛಕ್ತಿಯಿಂದ ಯಾವ ಕೆಲಸ ಸಾಧ್ಯವಿಲ್ಲ! ಬ್ರಹ್ಮಾಂಡವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವ ಆ ಶಕ್ತಿಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಆ ಪರಮಾತ್ನನನ್ನು ಬಣ್ಣಿಸುವಾಗ ನಿನ್ನ ಐಶ್ವರ್ಯಕ್ಕೆ ಮಿತಿಯಿಲ್ಲ, ನಿನ್ನ ಕರುಣೆಗೆ ಕೊರತೆ ಇಲ್ಲ, ನಿನ್ನ ದಾನಕ್ಕೂ ಮಿತಿಯಿಲ್ಲ, ನಾನಾದರೋ ನಿನ್ನ ಸ್ತುತಿಯನ್ನು ಮಾಡುತ್ತಿದ್ದರೂ ನನ್ನಲ್ಲಿ ಕೊರಗು ಕಡಿಮೆಯಾಗಲಿಲ್ಲ, ನನ್ನಲ್ಲಿ ಹೊಟ್ಟೆಕಿಚ್ಚು,ಅಹಂಕಾರ,ಕೋಪ, ದುರಾಸೆ,ಕಾಮ, ಮೋಹ-ಇವುಗಳು ನನ್ನನ್ನು ಕುಕ್ಕಿ ಕುಕ್ಕಿ ತಿನ್ನುತ್ತಿವೆ. ಮನಸ್ಸಿಗೆ ನೆಮ್ಮದಿ ಇಲ್ಲ.
ಇವೆಲ್ಲವನ್ನೂ ನೀನು ಒಂದು ಸಾರಿ ಪರಿಹರಿಸಿಬಿಡು, ನಮಗೆ ಸತ್ಯದ ಅರಿವು ಮಾಡಿಬಿಡು. ಹೀಗೆ ಪ್ರಾರ್ಥಿಸುತ್ತಾ ಮಂತ್ರದ ಕೊನೆಯಲ್ಲಿ ನಃ ಪಿತಾ ಇವ ಭವ = ನೀನು ನಮಗೆ ತಂದೆಯಂತೆ ಆಗು ಎಂಬ ಭಾಗವನ್ನು ಗಮನಿಸಿವುದು ಮುಖ್ಯ. ಭಗವಂತನಲ್ಲಿ ಪ್ರಾರ್ಥಿಸುವಾಗ ನನ್ನ ಅವಸ್ಥೆಗಳನ್ನು ಪರಿಹರಿಸು, ಎಂದು ಮಾತ್ರ ಕೋರಲಿಲ್ಲ, ಬದಲಿಗೆ ನಮಗೆ ನೀನು ತಂದೆಯಂತೆ ಇದ್ದು ನಮ್ಮೆಲ್ಲರ ಮಾನಸಿಕ ದು:ಖವನ್ನು ಪರಿಹರಿಸು, ಎಂದು ಪ್ರಾರ್ಥಿಸಲಾಗಿದೆ. ಇದು ವೇದದ ಶ್ರೇಷ್ಠತೆಯಲ್ಲವೇ! ಕೇವಲ ನನಗಾಗಿ ನನ್ನ ಪ್ರಾರ್ಥನೆಯಲ್ಲ, ನನ್ನ ಪ್ರಾರ್ಥನೆ ನಮಗಾಗಿ ಎಂದರೆ ಇಡೀ ಸಮಾಜಕ್ಕಾಗಿ.ಅಲ್ಲವೇ?

Tuesday, August 5, 2014

ವೇದಭಾರತಿಯ ವಾರ್ಷಿಕೋತ್ಸವಕ್ಕೆ ಬನ್ನಿ

ಓಂ
ವೇದಭಾರತೀ, ಹಾಸನ

ದ್ವಿತೀಯ ವಾರ್ಷಿಕೋತ್ಸವ

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಭವನ , ಹಾಸನ

     ದಿನಾಂಕ: ಆಗಸ್ಟ್ 16 ಶನಿವಾರ ಮತ್ತು 17ಭಾನುವಾರ


16.8.2014 ಶನಿವಾರ ಬೆಳಿಗ್ಗೆ: 9.00ಕ್ಕೆ
ಉದ್ಘಾಟನೆ: ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ
ಆದಿಚುಂಚನಗಿರಿ ಹಾಸನ ಶಾಖಾ ಮಠ, ಹಾಸನ  ಇವರಿಂದ


ಎರಡೂ ದಿನಗಳಂದು ಸಂಜೆ 5.00 ಕ್ಕೆ ಸಾರ್ವಜನಿಕರಿಗಾಗಿ
ಉಪನ್ಯಾಸ: ಜಗದ್ಗುರು ಭಾರತ

ಉಪನ್ಯಾಸಕರು: 
ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮ. ಬೆಂಗಳೂರು
ಶ್ರೀ ಸು. ರಾಮಣ್ಣ, ರಾ.ಸ್ವ.ಸಂಘದ ಜೇಷ್ಠ ಪ್ರಚಾರಕರು

[ನೋಂದಾಯಿಸಿಕೊಂಡ ಪ್ರತಿನಿಧಿಗಳಿಗಾಗಿ ಎರಡು ದಿನಗಳೂ ಕಾರ್ಯಾಗಾರವಿರುತ್ತದೆ]

ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು   ಇಚ್ಛಿಸುವವರು     vedasudhe@gmail.com  ಈ ಮೇಲ್ ವಿಳಾಸಕ್ಕೆ  ದಿನಾಂಕ 12.8.2014 ಕ್ಕೆ ಮುಂಚೆ    ಒಂದು ಮೇಲ್ ಕಳುಹಿಸಿದರೆ ಅವರ ಉಳಿಯುವ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು 





Monday, August 4, 2014

ಅನ್ಯಾಯದ ವಿರುದ್ಧ ಧ್ವನಿ ಎತ್ತೋಣ

ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     ಎಲ್ಲಿ ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ. 
     ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
     ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ವೈದಿಕ ಭಜನೆಯ ಈ ಸಾಲುಗಳು ಅನುಕರಣೀಯವಾಗಿವೆ.
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
     ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಮನಸ್ಸಿರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಯಾರಿಗೆ ಯಾವ ರೀತಿಯಲ್ಲಿ ಉತ್ತರಿಸಬೇಕೋ ಆ ರೀತಿ ಉತ್ತರಿಸಬೇಕಾಗುತ್ತದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?