ವೇದಸುಧೆಯ ವಾರ್ಷಿಕೋತ್ಸವವನ್ನು ಮಾಡಬೇಕೆಂದು ಕೊಂಡಿದ್ದು ವೇದಸುಧೆಯ ಗೌರವ ಸಂಪಾದಕರಾದ ಕವಿ ನಾಗರಾಜರು,ಶ್ರೀ ಪ್ರಭಾಕರ್ ಮತ್ತು ನಾನು ಮಾತ್ರ . ಬೆಂಗಳೂರಿನ ಶ್ರೀ ಸುಧಾಕರಶರ್ಮರ ಮನೆಯಲ್ಲಿ ನಂತರದ ಬೈಠಕ್ ಮಾಡಿದರೂ ಉಳಿದದ್ದೆಲ್ಲಾ ನಾಗರಾಜರೊಡನೆ ಕುಳಿತು ಹಾಸನದಲ್ಲಿ ಮಾತುಕತೆ ಮಾಡಿ ವಾರ್ಷಿಕೋತ್ಸವದ  ಖರ್ಚನ್ನು ನಾವಿಬ್ಬರೂ ಭರಿಸುವುದೆಂದು ನಿರ್ಧರಿಸಿದೆವು. ಶ್ರೀ ಶಂಕರ ಮಠದಲ್ಲಿ  ಸ್ಥಳಾವಕಾಶದ  ಅನುಮತಿ ಪಡೆದನಂತರ ನಮ್ಮೊಡನೆ ಮಿತ್ರ ಕೆ.ವಿ.ರಾಮಸ್ವಾಮಿ ಸೇರಿಕೊಂಡರು.ಸಾರ್ ನನ್ನದೊಂದು ಚಿಕ್ಕ ಕಾಣಿಕೆ ನೀವು ಪಡೆಯಲೇ ಬೇಕೆಂದರು.ಅವರು ನೀಡಿದ 505.00 ರೂ ಪಾಯಿಗಳು ಐವತ್ತು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನದು. ಕಾರಣ ಅವರ ಮನೆಯ ಸಧ್ಯದ ಪರಿಸ್ಥಿತಿ ಹಾಗಿದೆ. ನಂತರ  ಭೇಟಿಯಾಗಿದ್ದು ಹಾಸನದ ಶಿಕ್ಷಣ ತಜ್ಞರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರನ್ನು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಅವರನ್ನು ಕೇಳಿಕೊಂಡಾಗ ಕಾರ್ಯಕ್ರಮದ ಸಂಪೂರ್ಣ ವಿವರ ಪಡೆದು 150 ಜನರಿಗೆ ಊಟದ ವ್ಯವಸ್ಥೆಯಾಗಬೇಕಲ್ಲಾ![ಆಗಿನ ನಮ್ಮ ಅಂದಾಜು ಅಷ್ಟೇ ಇತ್ತು ]ನನ್ನ ಪಾಲು 10 ಸಾವಿರ ರೂಪಾಯಿ ಇರಲಿ, ಎಂದು ಹಣವನ್ನು ಕೈಲಿಟ್ಟು , ಕ್ಯಾರಿ ಆನ್, ದೇವರು ಒಳ್ಳೆಯದು ಮಾಡ್ತಾನೆ, ಅಂದರು. ಸರಿ, ನಮಗೆ ಆಗ ಅನ್ನಿಸ್ತು, ಈ ಕಾರ್ಯಕ್ರಮ ನಮ್ಮಿಬ್ಬರದ್ದಲ್ಲ. ಇದು ವೇದಾಭಿಮಾನಿಗಳದ್ದು. ಆ ಹೊತ್ತಿಗಾಗಲೇ ಶ್ರೀ ವಿಶಾಲ್ ರನ್ನು ಸಂಪರ್ಕಿಸಿ  ಈ ಹಿಂದೆ ಹಾಸನದಲ್ಲಿ ಶ್ರೀ ಶರ್ಮರು ನೀಡಿದ್ದ ಅದ್ಭುತವಾದ ಉಪನ್ಯಾಸಗಳ ಸಿ.ಡಿ ಮಾಡಲು ತಯಾರಿ ನಡೆದಿತ್ತು.  ಒಂದು ಸಾವಿರ ಸಿ.ಡಿ ಮಾಡಲು ಸುಮಾರು ಹದಿನೈದು ಸಹಸ್ರರೂಪಾಯಿ ಅಂದಾಜು ಮಾಡಲಾಗಿತ್ತು. ಅದನ್ನು ವೈಯಕ್ತಿಕವಾಗಿ ನಾನು ಭರಿಸುವುದಾಗಿ ತಿಳಿಸಿದ್ದೆ. ಆತ್ಮೀಯರಾದ ಶ್ರೀ ಪ್ರಕಾಶ್ ಎಸ್.ಯಾಜಿಯವರಿಗೆ ಈ ವಿಷಯ ತಿಳಿದಾಗ ಹಾಸನದ ಪ್ರಖ್ಯಾತ ದಾನಿಗಳೂ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಗೋವಿಂದರಾಜ ಶ್ರೇಷ್ಠಿಯವರು ಹಾಗೂ ಶ್ರೀ ಗೋಪಾಲಕೃಷ್ಣ ಪ್ರಭುಗಳೊಡನೆ ಸೇರಿ ನಾವು ಮೂವರು ಭರಿಸುವುದಾಗಿ ತಿಳಿಸಿದರು.  ವಿಷಯ ತಿಳಿದ ಶ್ರೀ ಗೋವಿಂದರಾಜಶ್ರೇಷ್ಠಿಯವರು ಅವರನ್ನು ಭೇಟಿಯಾಗುತ್ತಿದ್ದಂತೆ ನಾವು ಬರುವ ಮುಂಚೆಯೇ, ಅವರೊಡನೆ ಪ್ರಸ್ತಾಪಮಾಡುವ ಮುಂಚೆಯೇ ಹನ್ನೊಂದುಸಾವಿರದ ಒಂದುನೂರ ಹನ್ನೊಂದು ರೂಪಾಯಿಗಳನ್ನು ನಮ್ಮ ಕೈಲಿಟ್ಟು ಶುಭ ಕೋರಿದರು. ಶ್ರೀ ನಿಟ್ಟೂರು ಜಯರಾಮ್ ವೀಡಿಯೋ ನನ್ನ ಪಾಲಿಗಿರಲಿ, ಎಂದರು. ಮಿತ್ರ ಶ್ರೀ ರಂಗೇಗೌಡರು ಆಕಾಶವಾಣಿಯ ರೆಕಾರ್ಡಿಂಗ್ ಮಾಡಿಸಿ ಬಿಡಿ, ಅದರ ಖರ್ಚು ನನಗಿರಲಿ, ಎಂದರು. ಸೆಸ್ಕ್ ಅಧಿಕಾರಿ ಶ್ರೀಮತಿ ಲತಾ, ಮಿತ್ರ ಶ್ರೀ ಪಾರಸ್ ಮಲ್, ಶ್ರೀ ಕೇಶವ ಪ್ರಕಾಶ್ ,ಇವರುಗಳು ಬ್ಯಾನರ್ ಮಾಡಿಸಲು, ಆಹ್ವಾನಪತ್ರಿಕೆ ಮಾಡಿಸಲು ಮುಂದೆ ಬಂದರು. ನಾವಿಬ್ಬರು ಎಲ್ಲಾ ಖರ್ಚನ್ನೂ ಭರಿಸಬೇಕೆಂದು ನಿಶ್ಚಯಿಸಿದ್ದಾಗ ಮಿತ್ರರಾದ ಕವಿ ಸುರೇಶ್, ನನ್ನ ಪಾಲೂ ಇರಲಿ, ಎಂದರು. ಮಗಳನ್ನು ಕರೆದುಕೊಂಡು ಬಂದು ಸುಶ್ರಾವ್ಯವಾದ ವಯೋಲಿನ ಕಛೇರಿ ವ್ಯವಸ್ಥೆ ಮಾಡಿಯೇ ಬಿಟ್ಟರು.
ಸಹೃದಯಿಗಳು ಹೀಗೆ ಮುಂದೆ ಬಂದಾಗ ಎಂತಹಾ ಸ್ಪೂರ್ಥಿ ಸಿಕ್ಕೀತು! ಲೋಕಲ್ ಚಾನೆಲ್ ಅಮೋಘ ದವರು ಕಾರ್ಯಕ್ರಮದ ಮುಂಚೆಯೇ ಸಂದರ್ಶನ ನಡೆಸಿ ಪ್ರಚಾರಕ್ಕೆ ಚಾಲನೆ ಕೊಟ್ಟರೆ, ಸ್ಥಳೀಯ ಪತ್ರಿಕೆ"ಹಾಸನವಾಣಿ" ಯ ಸಂಪಾದಕರಾದ ಶ್ರೀಮತೀ ಲೀಲಾವತಿಯವರು ಪತ್ರಿಕೆಯಲ್ಲಿ ಸುದ್ಧಿ ಪ್ರಕಟಿಸುವುದೇ ಅಲ್ಲದೆ ನಮ್ಮೊಡನೆ ಉಳಿದ ಕೆಲಸಗಳಲ್ಲೂ ಕೈ ಜೋಡಿಸಿದರು. ಇಷ್ಟೆಲ್ಲಾ ಸಹಕಾರ ಸಿಕ್ಕಿದಮೇಲೆ ನಮ್ಮನಿರೀಕ್ಷೆಗೂ ಮೀರಿ ಸುಮಾರು ೩೫೦-೪೦೦ ಜನ ವೇದಾಭಿಮಾನಿಗಳು ವೇದಸುಧೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಯುವ ವರೆಗೂ ಶಾಂತ ಭಾವದಿಂದ ಕುಳಿತು ಕಾರ್ಯಕ್ರಮದಲ್ಲಿ ತಮ್ಮನು ತಾವು ಮರೆತಿದ್ದರು. ಎಲ್ಲರ ಮನಸೆಳೆದ "ಅಗ್ನಿಹೋತ್ರ ಕಾರ್ಯಕ್ರಮ " ಹಾಗೂ ವೇದಾಧ್ಯಾಯೀ ಸುಧಾಕರ ಶರ್ಮರ ಅದ್ಭುತವಾದ ಉಪನ್ಯಾಸ , ವಿಚಾರ ಸಂಕಿರಣ, ಪುಟಾಣಿ ಸಹನಳ ದೀಪ ನೃತ್ಯ, ಮಧ್ಯೆ ಮಧ್ಯೆ ಸ್ವಾತಿ , ಸಹನ ಹಾಗೂ ಶ್ರೀಮತಿ ಲಲಿತಾ ರಮೇಶ ರ ಗೀತ ಗಾಯನ, ಎಲ್ಲವೂ ವೇದಾಭಿಮಾನಿಗಳ ಮನ ಗೆದ್ದವು.
ವಾರ್ಷಿಕೋತ್ಸವ ಮುಗಿದ ಮಾರನೆಯ ದಿನವೇ ಅದರ ಲೆಕ್ಖಾಚಾರ ಮುಗಿದಿತ್ತು. ಶ್ರೀ ಕವಿ ನಾಗರಾಜ್ ಮತ್ತು ನನ್ನ ಪಾಲಿಗೆ ಬಂದಿದ್ದು ಅತ್ಯಲ್ಪ ಮಾತ್ರ. ಹಾಸನದ ಸಹೃದಯಿಗಳ ಮನ: ಪೂರ್ವಕ ಸಹಕಾರವನ್ನು ನಾವು ಮರೆಯುವುದಾದರೂ ಹೇಗೆ?

ಕಾರ್ಯಕ್ರಮದ ಜಮಾ -ಖರ್ಚು ಎಲ್ಲರಿಗೂ ತಿಳಿದಿರಲಿ, ಎಂದು ಪ್ರಕಟಿಸಿರುವೆ. ಸಿಡಿ ಮಾರಾಟದಿಂದ ಬರುವ ಉತ್ಪತ್ತಿಯನ್ನು ಶ್ರೀ ಶರ್ಮರು ವೇದಸಾಹಿತ್ಯ ಪ್ರಕಟಣೆಗೆ ಸದ್ವಿನಿಯೋಗ ಮಾಡಿಕೊಳ್ಳುವರು. 
ವೇದಸುಧೆ ಅಂತರ್ಜಾಲದ ಪ್ರಥಮ ವಾರ್ಷಿಕೋತ್ಸವದ ಜಮಾ ಖರ್ಚು ವಿವರ
ವೇದಸುಧೆ ಅಂತರ್ಜಾಲದ ಪ್ರಥಮ ವಾರ್ಷಿಕೋತ್ಸವದ ಜಮಾ ಖರ್ಚು ವಿವರ
ಜಮಾ ಖರ್ಚು
1  |    ಶ್ರೀ ಕೆ.ವಿ.ರಾಮಸ್ವಾಮಿ  |    505.00  |    ಬ್ಯಾನರ್  |    750.00  |   
2  |    ಶ್ರೀ ಸಿ.ಎಸ್.ಕೃಷ್ಣಸ್ವಾಮಿ  |    10000.00  |    ಊಟೋಪಚಾರ  |    18000.00  |   
3  |    ಶ್ರೀ ಗೋವಿಂದರಾಜ   ಶ್ರೇಷ್ಠಿ  |    11111.00  |    ಸಿ.ಡಿ. ತಯಾರಿ  |    6700.00  |   
4  |    ಶ್ರೀ ಗೋಪಾಲಕೃಷ್ಣ   ಪ್ರಭು  ಶ್ರೀ ಪ್ರಕಾಶ್ ಎಸ್.ಯಾಜಿ  |    5000.00  |    ಆಕಾಶವಾಣಿ   |    6254.00  |   
| 5 | ಶ್ರೀ ದಿನಮಣಿ | 200.00 | ||
6  |    ಶ್ರೀ ಜಯರಾಮ್ ನಿಟ್ಟೂರು  |    5000.00  |    ವೀಡಿಯೋ   |    5000.00  |   
7  |    ಶ್ರೀ ಪಾರಸ್ ಮಲ್  |    1000.00  |    ಧ್ವನಿ ವರ್ಧಕ  |    1000.00  |   
8  |    ಶ್ರೀಮತಿ ಬಿ.ಟಿ.ಲತಾ  |    1000.00  |    ಆಹ್ವಾನ ಪತ್ರಿಕೆ   ಮುದ್ರಣ  |    1200.00  |   
9  |    ಶ್ರೀ ಕೇಶವ ಪ್ರಕಾಶ್  |    1000.00  |    ಅತಿಥಿಗಳಿಗೆ ವಸತಿ     |    500.00  |   
10  |    ಶ್ರೀ ಎಂ.ಬಿ. ರಂಗೇಗೌಡ  |    5000.00  |    ಇತರೆ [ಹೋಮದ ತಯಾರಿ,ಕೆಲಸದವರಿಗೆ,   ಇತ್ಯಾದಿ]  |    1000.00  |   
11  |    ಶ್ರೀ ನಾಗರಾಜ್ ನಿಟ್ಟೂರು  |    110.00  |    ಛತ್ರಕ್ಕೆ[ಸ್ವಚ್ಚತೆ,ವಿದ್ಯುತ್,   ಚಪ್ಪರ,ಇತ್ಯಾದಿ]  |    2450.00  |   
| 12 | ಕವಿ ನಾಗರಾಜ್ | 1464.00 | ||
13  |    ಹರಿಹರಪುರಶ್ರೀಧರ್     |    1464.00  |    ||
14  |    ಒಟ್ಟು  |    42854.00  |    42854.00  |   |