Pages

Wednesday, July 4, 2012

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ

ರಚನೆ: ಹರಿಹರಪುರಶ್ರೀಧರ್ ಗಾಯನ: ಶ್ರೀಮತಿ ಲಲಿತಾ ರಮೇಶ್

ಫೀಡ್ ಬ್ಯಾಕ್


 ವೇದಸುಧೆಯ ಆತ್ಮೀಯ ಬಂಧುಗಳೇ,
            ಸಾಧ್ಯವಾದಷ್ಟೂ  ಸದ್ವಿಚಾರಗಳನ್ನು ಓದುಗರಿಗೆ ತಲುಪಿಸಬೇಕೆಂಬ ಉದ್ಧೇಶದಿಂದ ವೇದಸುಧೆಯ ಬಳಗವು ತನ್ನ  ಪ್ರಯತ್ನದಲ್ಲಿ  ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. ಸಾಮಾನ್ಯವಾಗಿ ನಿತ್ಯವೂ ನಲವತ್ತ ರಿಂದ ಐವತ್ತು ಜನ ನೇರವಾಗಿಯೂ ಸುಮಾರು ಇನ್ನೂರು ಜನ ಈ ಮೇಲ್ ಮೂಲಕವೂ ಓದುತ್ತಿರುವುದು ಅಂಕಿಅಂಶಗಳಿಂದ ದೃಢಪಟ್ಟಿದೆ. ಇದು ಸಂತಸದ ಸಂಗತಿಯೇ ಆದರೂ  ಸಾಕಷ್ಟು ಆಡಿಯೋ /ವೀಡಿಯೋ ಗಳನ್ನು  ವೇದಸುಧೆಯಲ್ಲಿ ಪ್ರಕಟಿಸುವುದರಿಂದ  ಅವುಗಳ ಗುಣಮಟ್ಟದ ಬಗ್ಗೆ  ವೇದಸುಧೆಗೆ  ಫೀಡ್ ಬ್ಯಾಕ್ ಬೇಕಾಗುತ್ತದೆ. ಕಾರಣ  ಆಡಿಯೋ /ವೀಡಿಯೋ ಅಳವಡಿಸುವಾಗ  ಸಾಕಷ್ಟು ಸಮಯವನ್ನು ಕೊಡಬೇಕಾಗುತ್ತದೆ.  ಹಾಗೆ ಸಮಯ ಕೊಟ್ಟಮೇಲೆ ಅದರ ಉಪಯೋಗವಾದರೆ  ಸಾರ್ಥಕ ವಾಗುತ್ತದೆ. ಇಲ್ಲದಿದ್ದರೆ ನೀರಿನಲ್ಲಿ ಹೋಮ ಮಾಡಿದಂತೆ. ಓದುಗ ಮಿತ್ರರಲ್ಲಿ ಮನವಿ ಏನೆಂದರೆ  ಪ್ರಕಟವಾಗುವ ಆಡಿಯೋ /ವೀಡಿಯೋ  ಗುಣಮ ಟ್ಟ ದ ಬಗ್ಗೆ ದಯಮಾಡಿ ತಿಳಿಸಿ. ವೀಡಿಯೋ  ಗುಣಮ ಟ್ಟ ದಲ್ಲಿ ದೋಷ ಇರಬಹುದು. ಈ ತಾಂತ್ರಿಕ ದೋಷವನ್ನು ಸರಿಪಡಿಸುವ ಕುಶಲತೆ ನಮ್ಮಲ್ಲಿಲ್ಲ. ಆಡಿಯೋ  ತೊಂದರೆ ಇಲ್ಲದೆ ಕೇಳಬಹುದು, ಎಂಬುದು ನಮ್ಮ ಅನಿಸಿಕೆ. ಅಂತೂ ಫೀಡ್ ಬ್ಯಾಕ್ ಸಿಕ್ಕರೆ  ಅನುಕೂಲ.

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರಿಂದ ಗುರುಪೂರ್ಣಿಮಾ ಸಂದೇಶ



ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರೊಡನೆ ವಿಚಾರ ವಿನಿಮಯ


ನಿನ್ನೆ ಗುರುಪೂರ್ಣಿಮೆ.ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ನಾನು ಒಂದಿಷ್ಟು ವಿಚಾರ ವಿನಿಮಯ ಮಾಡಿಕೊಂಡೆವು. ಅನೌಪಚಾರಿಕ ಮಾತುಕತೆಯಲ್ಲಿ ಶ್ರೀಶರ್ಮರು ವೇದದವಿಚಾರದಲ್ಲಿ ನಮ್ಮೊಡನೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.ವೇದಸುಧೆಯ ಅಭಿಮಾನಿಗಳಿಗಾಗಿಯೇ ನಡೆದ ಈ ಒಂದು ರೆಕಾರ್ಡಿಂಗ್ ನ್ನು ಇಲ್ಲಿ ಪ್ರಕಟಮಾಡಿದ್ದೇವೆ.

ಬ್ರಾಹ್ಮಣ ಯಾರು?




ಜನ್ಮದಿಂದ ಎಲ್ಲರೂ ಜಂತುಗಳೇ! ಆದರೆ ಅವರವರು ಮಾಡುವ ಕರ್ಮದಿಂದ ಅವರು  ಬದುಕಿರುವಾಗಲೇ  ಎರಡನೆಯ  ಒಳ್ಳೆಯ ಜನ್ಮವನ್ನು ಪಡೆಯುತ್ತಾನೆ. ಜ್ಞಾನ ವನ್ನು ಪಡೆದು ವಿಪ್ರನಾಗಿ[ವಿಶೇಷ ಪ್ರಜ್ಞಾವಾನ್] ಬ್ರಹ್ಮಜ್ಞಾನವನ್ನು ಪಡೆದು ಬ್ರಾಹ್ಮಣನಾಗುತ್ತಾನೆ
[ನಿನ್ನೆ ಹಾಸನಕ್ಕೆ ಆಗಮಿಸಿದ್ದ ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರೊಡನೆ ನಡೆದ ಚರ್ಚೆಯಲ್ಲಿ ಬಂದ ವಿಚಾರ]