Pages

Wednesday, November 30, 2011

ಸತ್ಸಂಗ


 ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ
  ಮಾತಾಜಿ ವಿವೇಕಮಯೀ    
  ಇವರಿಂದ 
 ನಮ್ಮ ಮನೆಯಲ್ಲಿ  ಸತ್ಸಂಗವನ್ನು ಆಯೋಜಿಸಲಾಗಿದೆ. ವಿವರ ಇಲ್ಲಿದೆ.

ಸ್ಥಳ:  ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ,
 ಹೊಯ್ಸಳನಗರ
 ಪೋಲೀಸ್ ಕಾಲೋನಿ, ಹಾಸನ

ಸತ್ಸಂಗ:  ದಿನಾಂಕ: 2.12.2011 ಶುಕ್ರವಾರ ಸಂಜೆ 6.00 ಕ್ಕೆ 
ಧ್ಯಾನ:  ದಿನಾಂಕ 3.12.2011 ಶನಿವಾರ ಬೆಳಿಗ್ಗೆ 6.30 ಕ್ಕೆ 

ವಿ.ಸೂ: ಹೊರ ಊರಿನಿಂದ ಬಂದವರಿಗೆ ಉಳಿಯಲು ವ್ಯವಸ್ಥೆ ಇದೆ.

 ಸರ್ವರಿಗೂ ಸ್ವಾಗತ

-ಹರಿಹರಪುರ ಶ್ರೀಧರ್ 

Tuesday, November 29, 2011

ಯೋಚಿಸಲೊ೦ದಿಷ್ಟು...೪೬

೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು..
೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ.. ಮತ್ತೊಬ್ಬರ ಆರೈಕೆ ಮಾಡುವುದಾಗಲೀ.. “ಆರೈಕೆ“ ಎ೦ಬುದೊ೦ದು ಸು೦ದರ ಅನುಭವ!
೩. ನಮಗೆ ಯಾವುದು ಬೇಡವಾಗಿಲ್ಲವೋ ಅದನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ಕೊಡಬಾರದೆ೦ಬುದೇ ಉಡುಗರೆ ಕೊಡಲು ಅನುಸರಿಸಬೇಕಾದ ಸುವರ್ಣದ೦ತಹ ಸೂತ್ರ!- ವಿಲಿಯ೦ ಆಲನ್ ನೈಟ್
೪. ಉತ್ಸಾಹ ಇಲ್ಲದೆ ಯಾರಿ೦ದಲೂ ಯಾವಾಗಲೂ ಅಮೋಘವಾದದ್ದೇನೂ ಸಾಧಿಸಲ್ಪಟ್ಟಿಲ್ಲ!
೫. ನಾವು ಪರರಿಗೆ ಮಾಡಿದ ಉಪಕಾರವನ್ನು ಅವರಿಗೆ ನೆನಪಿಸುವುದೆ೦ದರೆ ಅವರನ್ನು ಬೈದ೦ತೆಯೇ!!
೬. ಇನ್ನಷ್ಟು ಪಡೆಯುವ ಆಸೆಯಿ೦ದ ಪರರಿಗೆ ಉಪಕರಿಸಬಾರದು!
೭. ನಾವು ಉಪದೇಶಿಸಿದ೦ತೆ ನಡೆಯಬೇಕೆ೦ದು ಎಲ್ಲರೂ ಒಪ್ಪುತ್ತಾರೆ... ಆದರೆ ನಡೆಯುವ೦ತೆಯೇ ಉಪದೇಶಿಸಬೇಕೆ೦ಬುದನ್ನು ಮಾತ್ರ ಎಲ್ಲರೂ ಖ೦ಡಿಸುತ್ತಾರೆ!!
೮. ನಾಳೆ ಎನ್ನುವವರು ಮೂವರು ಮಾತ್ರ – ದರ್ಜಿ,ಅಕ್ಕಸಾಲಿಗ ಮತ್ತು ಅಗಸ- ಬೀ.ಚಿ.
೯. ಕುಟು೦ಬ ಭ್ರಷ್ಟಾಚಾರದಲ್ಲಿ ನಿರತನಾದ ರಾಜಕಾರಣಿ ತನ್ನ ಜಾತಿಯ ಹೆಸರಿನಿ೦ದ ಮು೦ದೆ ಬರಲು ಯತ್ಸಿಸಿ,ಸಫಲನಾದರೂ ಅದರಿ೦ದ ಅವನಿಗೇ ಲಾಭವೇ ಹೊರತು ಅವನ ಜಾತಿಯ ಸಾಮಾನ್ಯ ಜನರಿಗೆ ಏನೂ ಲಾಭವಾಗಲಾರದು!
೧೦. ರೆಕ್ಕೆಗಳಿಲ್ಲದ ಹಕ್ಕಿ, ಹಲ್ಲು ಕಿತ್ತ ಹಾವು, ಒಣಗಿದ ಮರ, ನೀರಿಲ್ಲದ ಸರೋವರ ಮತ್ತು ಬಡವ ಎಲ್ಲರೂ ಒ೦ದೇ!
೧೧. ಉಪದೇಶದಿ೦ದ ಪ್ರಯೋಜನ ಪಡೆಯಬೇಕಾದರೆ, ಅದನ್ನು ಕೊಡಬೇಕಾದ ಬುಧ್ಧಿಗಿ೦ತ ಹೆಚ್ಚಿನ ಬುಧ್ಧಿಶಕ್ತಿ ಬೇಕು!!
೧೨.ಲೋಕೋಧ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ೦ದು ಯಾರೂ ತಿಳಿದುಕೊಳ್ಳಬಾರದು.. ನಮ್ಮ ಪ್ರಯತ್ನ ನಮ್ಮ ಏಳ್ಗೆಗೆ ಹಾಗೂ ಬಾಳಿನ ಸಫಲತೆಗಾಗಿ!!- ಡಿ.ವಿ.ಜಿ.
೧೩. ನಾವು ಪ್ರತಿಯೊಬ್ಬರೂ ಒ೦ದಲ್ಲ ಒ೦ದು ರೀತಿಯ ಋಣವನ್ನು ಹೊತ್ತವರೇ!!
೧೪. ಏಕಾ೦ತವೆ೦ದರೆ ಎಲ್ಲರನ್ನೂ ಬಿಟ್ಟು ಒ೦ಟಿಯಾಗಿರುವುದಲ್ಲ.. ಅದು ಬಾಳಿನ ಏಕಾ೦ತ- ಎಲ್ಲೇ ಇದ್ದರೂ, ಯಾರೊಡನಿದ್ದರೂ ಅದು ಸಾಧ್ಯವಾಗುತ್ತದೆ!!
೧೫.ಇತರರು ನಮಗೇನನ್ನು ಮಾಡಬಾರದೆ೦ದು ನಾವು ಅಪೇಕ್ಷಿಸುತ್ತೇವೆಯೋ ಅದನ್ನು ನಾವೂ ಅವರಿಗೆ ಮಾಡಬಾರದು!!

Monday, November 28, 2011

ವಿವೇಕ ಚೂಡಾಮಣಿ-ಭಾಗ-೧೭


मूलम् - ಮೂಲ
श्रोत्रियोऽवृजिनोऽकामहतो यो ब्र्ह्मवित्तमः ।
ब्रह्मण्युपरतः शान्तो निरिन्धन इवानलः।
अहेतुक-दयासिन्धुः बन्धुरानमतां सताम्॥३४॥

ಶ್ರೋತ್ರಿಯೋಽವೃಜಿನೋಽಕಾಮಹತೋ ಯೋ ಬ್ರಹ್ಮವಿತ್ತಮಃ|
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ |
ಅಹೇತುಕ-ದಯಾಸಿಂಧುರ್ಬಂಧುರಾನಮತಾಂ ಸತಾಮ್ ||೩೪||

ಪ್ರತಿಪದಾರ್ಥ:
(ಯಃ =ಯಾರು, ಶ್ರೋತ್ರಿಯೋ=ಶ್ರೋತ್ರಿಯನೋ(ಶಾಸ್ತ್ರಾರ್ಥಗಳ ವಿವೇಚನೆಯುಳ್ಳವನು), ಅವೃಜಿನಃ=ಪಾಪವಿಲ್ಲದವನು, ಅಕಾಮಹತಃ=ಬಯಕೆಗಳಿಲ್ಲದವನು,  ಬ್ರಹ್ಮವಿತ್ತಮಃ=ಜ್ಞಾನಿಗಳಲ್ಲಿ ಶ್ರೇಷ್ಠನು, ಬ್ರಹ್ಮಣಿ=ಬ್ರಹ್ಮದಲ್ಲಿ, ಉಪರತಃ=ನೆಲಸಿರುವವನು, ನಿರಿಂಧನಃ ಅನಲಃ ಇವ = ಉರುವಲಿಲ್ಲದ ಬೆಂಕಿಯಂತೆ,  ಶಾಂತಃ= ಶಾಂತನೂ, ಅಹೇತುಕ ದಯಾಸಿಂಧುಃ=ಯಾವ ನಿಮಿತ್ತವೂ ಇಲ್ಲದ ದಯಾಸಿಂಧುವೂ, ಆನಮತಾಂ ಸತಾಮ್= ನಮಿಸುತ್ತಿರುವ ಸತ್ಪುರುಷರಿಗೆ, ಬಂಧುಃ = ಬಾಂಧವನೂ..... (ಆಗಿರುವವನು) )

ತಾತ್ಪರ್ಯ :
ಯಾರು ಶ್ರೋತ್ರಿಯನೋ, ಪಾಪರಹಿತನೋ, ಬಯಕೆಗಳೇ ಇಲ್ಲದವನೋ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೋ, ಕೇವಲ ಬ್ರಹ್ಮದಲ್ಲಿ ಮನಸನ್ನು ನೆಟ್ಟಿರುವವನೋ, ಕಟ್ಟಿಗೆಯಲ್ಲಿ ಉರಿದು ಆರಿಹೋದ ಬೆಂಕಿಯಂತೆ (ಉರುವಲೇ ಇಲ್ಲದ) ಶಾಂತನಾಗಿರುವವನೂ, ಯಾವ ನಿಮಿತ್ತವೂ ಇಲ್ಲದೆ ದಯಾಸಿಂಧುವಾಗಿರುವವನೋ, ಶರಣು ಬಂದ ಸಜ್ಜನರಿಗೆ ಬಂಧುವಂತಿರುವವನೋ .....)

ವಿವರಣೆ :
ಜ್ಞಾನಾರ್ಥಿಯಾಗಿ ಗುರುವಿನ ಬಳಿಸಾರಬೇಕು ಎಂದು ತಿಳಿಸಿದ ನಂತರ ಆಚಾರ್ಯರು ಮತ್ತೆ ಗುರೂಪಸತ್ತಿಯನ್ನು ಮುಂದುವರಿಸುತ್ತಾರೆ. ಅಧಿಕಾರಿಯ ಅರ್ಹತೆಯ ನಿರೂಪಣೆಯ ನಂತರ ಜ್ಞಾನಾರ್ಜನೆಯ ಪಾಠವನ್ನು ಆಚಾರ್ಯರು ಆರಂಭಿಸುತ್ತಾರೆ. ಮೇಲಿನ ಶ್ಲೋಕದಲ್ಲಿ ಮೊದಲಿಗೆ ’ಶ್ರೋತ್ರಿಯಃ’ ಎನ್ನುವುದರ ಮೂಲಕ ಗುರುವು ಶಾಸ್ತ್ರಾರ್ಥಗಳನ್ನು ಅನುಭವದಿಂದ ನಿಶ್ಚಯಿಸಿಕೊಂಡವನಾಗಿರಬೇಕು ಎಂದು ಹೇಳುತ್ತಾರೆ. ಕೇವಲ ಪುಸ್ತಕ ಪಾಂಡಿತ್ಯವಲ್ಲದೆ ಸ್ವಾನುಭದಿಂದಲೂ ತಿಳಿದುಕೊಂಡು ತರ್ಕಕ್ಕೆ-ಶಾಸ್ತ್ರಕ್ಕೆ, ಅನುಭವಕ್ಕೆ-ಶಾಸ್ತ್ರಕ್ಕೆ ವಿರೋಧಗಳು ತೋರ್ಗೊಡದಂತೆ (ಅವಿರೋಧವೆನಿಸುವಂತೆ) ಕಡ್ಡಿಮುರಿದಂತೆ ಹೇಳುವವನಾಗಿರಬೇಕು ಅಥವಾ ಹೇಳುವ ತಿಳುವಳಿಕೆಯನ್ನು ಉಳ್ಳವನಾಗಿರಬೇಕು ಎಂಬರ್ಥದಲ್ಲಿ ತಿಳಿಸುತ್ತಾರೆ. ’ಉಪನಿಷತ್ತುಗಳನ್ನು ಅಧ್ಯಯನ ಮಾಡಿ ಅದರ ಅರ್ಥವನ್ನು ವಿಚಾರಮಾಡಿದವನೇ ಶ್ರೋತ್ರಿಯನು’ ಎಂಬ ಪಾಣಿನಿಯ ಸೂತ್ರದ ವಿಚಾರವನ್ನು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನದಲ್ಲಿ ಒಕ್ಕಣಿಸಿರುತ್ತಾರೆ. ’ಅವೃಜಿನಃ’ ಎಂದರೆ ಪಾಪರಹಿತನು ಎಂಬ ಅರ್ಥವಿರುತ್ತದೆ. ಜ್ಞಾನಿಯಾದ ಗುರುವಿನಲ್ಲಿ ನೈತಿಕ ಮೌಲ್ಯಗಳೂ ಇರಬೇಕಾಗುತ್ತದೆ. ಜಗತ್ತಿಗೆ ಮಾದರಿಯಾಗಿ ನಿಲ್ಲಬೇಕಾಗುವ ಗುರುವು ಒಳ್ಳೆಯತನದ ಗುಣಗಳನ್ನು ಇಟ್ಟುಕೊಂಡಿರಬೇಕೇ ಹೊರತು ’ತಾನು ಗುರು ತಾನೇನು ಮಾಡಿದರೂ ಸರಿಯೆ’ ಎನ್ನುವ ಧೋರಣೆಯನ್ನು ಹೊಂದಿರಬಾರದು. ಜಗಕ್ಕೆ ಹಿತಕಾರಿಯಾದ ಕೆಲಸಗಳನ್ನು ಮಾಡುತ್ತಾ ಲೋಕಾನುಗ್ರಹಕ್ಕಾಗಿ ಬದುಕಬೇಕು ಎಂದು ’ಅವೃಜಿನಃ’ ಎನ್ನುವಲ್ಲಿ ಹೇಳಿರುತ್ತಾರೆ. ಮುಂದೆ ’ಅಕಾಮಹತಃ’ ಎಂದು ಹೇಳುತ್ತಾರೆ. ಬಯಕೆಗಳನ್ನೆಲ್ಲಾ ನಾಶಮಾಡಿಕೊಂಡಿರುವವನು ಅಥವಾ ಬಯಕೆಗಳೇ ಏಳದಂತೆ ಸಾಧನೆ ಮಾಡಿಕೊಂಡಿರುವವನನ್ನು ಅಕಾಮಹತಃ ಎಂದು ಹೇಳುತ್ತಾರೆ.  ಮಾನ್ಯ ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಈ ಸಂದರ್ಭವನ್ನು ಸೊಗಸಾಗಿ ನಿರೂಪಿಸುತ್ತಾರೆ..

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ ?|
ಕೈಸೋಕದಿರೆ ಕೈಯ ಸಪ್ಪುಳಾದೀತೆ? ||
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ|
ದೋಷವೊಳಗೋ ಹೊರಗೋ ? - ಮಂಕುತಿಮ್ಮ ||

’ವಾಸನೆ ತಾಯಿ , ಸಂದರ್ಭ ತಂದೆ’ ಎಂದು ಸೊಗಸಾಗಿ ಡಿ.ವಿ.ಜಿ. ಯವರು ಹೇಳುತ್ತಾರೆ. ಗಸಗಸೆ ಪಾಯಸದ ಬಯಕೆಯೇ ಇಲ್ಲದ ಮೇಲೆ ಅದೆಷ್ಟು ಕೊಳಗ ಪಾಯಸ ತಂದಿಟ್ಟರೂ ಪ್ರಯೋಜನವಾಗಲಾರದು !. ಬಯಕೆ ಎಂಬ ದೋಷವು ಒಳಗಿನದೋ ಅಥವಾ ಹೊರಗಿನದೋ ಎಂಬುದನ್ನು ಯೋಚಿಸಿ ನಿರ್ಧರಿಸಬೇಕಾಗುತ್ತದೆ. ಕಾಮಹತಃ ಎಂದರೆ ವಿಷಯದ ಆಸೆಗಳಿಂದ ಕೂಡಿರುವವನು ಅಥವಾ ತನ್ನನ್ನು ತಾನೇ ಅದರೊಳಗೆ ದೂಡಿಕೊಂಡಿರುವವನು ಎಂದು ಅರ್ಥ. ಅಕಾಮಹತಃ ಎಂದರೆ ವಿಷಯಾಸಕ್ತಿಯಿಂದ ದೂರವಿರುವವನು ಎಂದು ಅರ್ಥ. ನಂತರ, ಬ್ರಹ್ಮಜ್ಞಾನಿಗಳಲ್ಲಿ ಉತ್ತಮೋತ್ತನೂ ಮತ್ತು ವಿಷಯಾಸಕ್ತಿಯನ್ನೆಲ್ಲಾ ಕರಗಿಸಿಕೊಂಡು ಕೇವಲ ಬ್ರಹ್ಮನಲ್ಲಿ ಮನಸನ್ನು ಇಟ್ಟಿರುವವನು ಗುರುವು ಎಂದು ಹೇಳುತ್ತಾರೆ. ಮುಂದೆ ’ಶಾಂತಃ ನಿರಿಂಧನ ಇವಾನಲಃ’ ಎಂದು ಹೇಳುತ್ತಾರೆ. ಈ ವಾಕ್ಯಕ್ಕೆ ಮೇಲಿನ ಕಗ್ಗವೇ ಉತ್ತಮ ವಿವರಣೆಯಾಗಿರುತ್ತದೆ. ಹೇಗೆ ಉರುವಲು ಇಲ್ಲದಿದ್ದರೆ ಬೆಂಕಿಯು ತಣ್ಣಗಾಗಿ ಉರಿಯಿಲ್ಲದೆಯೇ ತೋರುವುದೋ (ಹುಲ್ಲಿಲ್ಲದ ಜಾಗದಲ್ಲಿ ಬೆಂಕಿಯು ಹೊತ್ತಿದರೆ ಹೇಗೆ ತಾನೇ ಆರಿ ಹೋಗುವುದೋ) ಹಾಗೆಯೆ, ವಾಸನೆಯೇ ಇಲ್ಲದವರಲ್ಲಿ ಸಂದರ್ಭಗಳೂ ಹುಟ್ಟಲಾರದು ಮತ್ತು ಗುರುವು ಹೀಗೆಯೇ ಇರಬೇಕು ಎಂದು ಹೇಳುತ್ತಾರೆ. ಹೀಗೆ ಹೊರಗಿನ ವಿಷಯಗಳನ್ನು ಅವಲಂಬಿಸದೆ ’ಶಾಂತ’ನಾಗಿದ್ದು ಬ್ರಹ್ಮದಲ್ಲಿ ಗಟ್ಟಿಮನಸುಳ್ಳವನಾಗಿರಬೇಕು ಎಂದು ನಿರೂಪಿಸುತ್ತಾರೆ.
ನಂತರ ’ ಅಹೇತುಕ ದಯಾಸಿಂಧುಃ ಬಂಧುರಾನಮತಾಂಸತಾಮ್’ ಎಂದು ಹೇಳುತ್ತಾರೆ. ಶರಣಾಗಿ ಬರುವ ಸಜ್ಜನರಿಗೆ ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಕರುಣೆಯ ಸಾಗರದಂತೆ ಇದ್ದು ತಿಳುವಳಿಕೆ ಮೂಡಿಸಬಲ್ಲಂತಹ ಬಂಧುವಿನಂತೆ , ಆಪ್ತ ಗೆಳೆಯನಂತೆ ಇರಬೇಕು ಎಂಬರ್ಥದಲ್ಲಿ ಹೇಳಿರುತ್ತಾರೆ. ಗೀತೆಯಲ್ಲಿ ಕೃಷ್ಣನು ಹೇಳುವ ವಾಕ್ಯವೊಂದು ಹೀಗೆ ಬರುತ್ತದೆ ; ’ ನನಗೆ ಈ ಲೋಕದಿಂದ ಯಾವ ಪ್ರಯೋಜನವೂ ಇಲ್ಲ. ಆದರೂ ಈ ಜಗತ್ತಿಗಾಗಿ ನಾನು ಎಲ್ಲವನ್ನೂ ಮಾಡುತ್ತೇನೆ, ಏಕೆಂದರೆ ಈ ಜಗತ್ತನ್ನು ನಾನು ಪ್ರೀತಿಸುತ್ತೇನೆ ಎಂದರೆ ಅನಿಮಿತ್ತವಾಗಿ ಪ್ರೀತಿಸುತ್ತೇನೆ ’ ಎಂದು. ಯಾವ ನಿಮಿತ್ತ ಕಾರಣವೂ ಇಲ್ಲದೆ ಶರಣಾಗಿ ಬಂದವರಿಗೆ ತಿಳಿಸುವ ಕರುಣೆಯನ್ನು ಗುರುವು ಹೊಂದಿರಬೇಕು ಎಂದು ನಿರೂಪಿಸುತ್ತಾರೆ. ವಾಡಿಕೆಯಂತೆ ಶೆಟ್ಟರ ಅಂಗಡಿಯಲ್ಲಿ ದಿನಸಿಯನ್ನು ಕೊಳ್ಳುವುದು ಬಿಟ್ಟು ಅಂದು ಪುಡ್ ಬಜಾರಿನಲ್ಲಿ ದಿನಸಿ ತಂದಿರುತ್ತೇವೆ. ಹೀಗೆ ತಂದಿದ್ದೇನಾದರೂ ಶೆಟ್ಟರಿಗೆ ತಿಳಿಯಿತೆಂದರೆ ಮುಂದೆ ಅವರ ಅಂಗಡಿಯಲ್ಲಿ ನಮಗೆ ಸಿಗುವುದು ಕಳಪೆ ದಿನಸಿ ಅಥವಾ ಬಜಾರಿಗಿಂತಲೂ ದುಪ್ಪಟ್ಟು ಬೆಲೆಯೆ !. ಶೆಟ್ಟರು ಸಹಿಸಿಕೊಳ್ಳುವರೆ ?!. ಗುರುವಿನ ಕತೆಯು ಹೀಗಾಗಬಾರದು ಎನ್ನುವುದು ಮೇಲಿನ ಶ್ಲೋಕದ ಆಶಯ. ಪ್ರವಾಹಣ ಜೈವಲಿಯು ಶ್ವೇತಕೇತುವಿಗೆ ಹೇಳಿದಂತೆ, ಯಾಜ್ಞವಲ್ಕ್ಯರು ಮೈತ್ರಾದೇವಿಗೆ ಹೇಳಿದಂತೆ, ಯಮನು ನಚಿಕೇತನಿಗೆ ತಿಳಿಸಿದಂತೆ  ವಿನಯದಿಂದ ಬಂದು ಕೇಳುವವರಿಗೆ (ಬೇರೆಯವರಿಗೆ ಅಲ್ಲ) ಗುರುವು ತಿಳಿಸಿಕೊಡುವಂತಹವನಾಗಿರಬೇಕು ಎನ್ನುವುದು ಸಾರಾಂಶ. ರಮಣ ಮಹರ್ಷಿಗಳಂತಹ ಮೌನವ್ಯಾಖ್ಯಾನ ಶಿರೋಮಣಿಗಳೂ ಸಹ ವಿನಯದಿಂದ ಬಂದ ಕೆಲವರಿಗೆ ತಿಳುವಳಿಕೆಯ ಪಾಠವನ್ನು ಹೇಳಿರುವುದನ್ನು ಅವರ ಜೀವನ ಚರಿತ್ರೆಯ ಸಾಹಿತ್ಯದಲ್ಲಿ ಓದಿರುತ್ತೇವೆ.

मूलम् = ಮೂಲ
तमाराध्य गुरुं भक्त्या प्रह्वः प्रश्रयसेवनैः ।
प्रसन्नं तमनुप्राप्य पृच्छेद् ज्ञातव्यमात्मनः॥३५॥ 

ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವ-ಪ್ರಶ್ರಯ-ಸೇವನೈಃ|
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇದ್ ಜ್ಞಾತಮಾತ್ಮನಃ ||೩೬||

ಪ್ರತಿಪದಾರ್ಥ :  
(ತಂ ಗುರುಂ= ಅಂತಹ ಗುರುವನ್ನು, ಭಕ್ತ್ಯಾ= ಭಕ್ತಿಯಿಂದ, ಆರಾಧ್ಯ=ಪೂಜಿಸಿ, ಆರಾಧಿಸಿ, ಪ್ರಹ್ವ-ಪ್ರಶ್ರಯ = ನಮ್ರತೆ-ವಿನಯದಿಂದ, ಸೇವನೈಃ= ಸೇವೆ ಮಾಡಿ, ಪ್ರಸನ್ನಂ ತಂ= ತೃಪ್ತನಾದ ಅವನನ್ನು, ಅನುಪ್ರಾಪ್ಯ= ಹೊಂದಿ, ಆತ್ಮನಃ ಜ್ಞಾತವ್ಯಂ= ತಾನು ತಿಳಿದುಕೊಳ್ಳಬೇಕಾದುದನ್ನು, ಪೃಚ್ಛೇತ್ = ಕೇಳಬೇಕು, ಪ್ರಶ್ನಿಸಬೇಕು )

ತಾತ್ಪರ್ಯ:
ಅಂತಹ (೩೪ನೆಯ ಶ್ಲೋಕದಲ್ಲಿ ವಿವರಿಸಿದ) ಗುಣಗಳನ್ನು ಹೊಂದಿರುವ ಗುರುವನ್ನು ಭಕ್ತಿಯಿಂದ ಪೂಜಿಸಿ ನಯ-ವಿನಯಗಳಿಂದ ಸೇವಿಸಿದ ನಂತರ ಶಾಂತನಾದ ಗುರುವಿನ ಸಮೀಪವನ್ನು ಹೊಂದಿ ತಾನು ತಿಳಿದುಕೊಳ್ಳಬೇಕಾಗಿರುವುದರ ವಿಚಾರದ ಬಗೆಗೆ ಕೇಳಬೇಕು ಅಥವಾ ಪ್ರಶ್ನೆ ಮಾಡಬೇಕು.

ವಿವರಣೆ:
ಗುಣಸಂಪನ್ನನಾದ ಗುರುವನ್ನು ನಯ-ವಿನಯಗಳಿಂದ ಪೂಜಿಸಿ ಸೇವೆ ಮಾಡಬೇಕು ಎಂದು ಹೇಳುತ್ತಾರೆ. ಗೀತೆಯಲ್ಲಿ (೧) ಹೇಳುವಂತೆ " ಸಾಷ್ಟಾಂಗ ನಮಸ್ಕಾರದಿಂದಲೂ ಕೇಳುವಿಕೆಯಿಂದಲೂ, ಗುರುಸೇವೆಯಿಂದಲೂ ತಿಳಿದುಕೊಳ್ಳಬೇಕು. ತತ್ವವನ್ನು ಅರಿತ ಜ್ಞಾನಿಗಳು ನಿನಗೆ ಅದನ್ನು ತಿಳಿಸುತ್ತಾರೆ" ಎಂಬ ವಾಕ್ಯವು ಸೊಗಸಾದುದು. ಇಲ್ಲಿ ನಮಸ್ಕಾರ, ಗುರುಸೇವೆ ಎನ್ನುವುದೆಲ್ಲವೂ ನಯ-ವಿನಯಗಳಂತಹ ಸದ್ವಿಚಾರಗಳಿಗೆ ಬೆಂಬಲವಾಗಿ ನಿಲ್ಲುತ್ತದೆ. ಭಕ್ತಿಯಿಂದ-ನಮ್ರತೆಯಿಂದ ಎಂದು ವಿಶೇಷವಾಗಿ ಹೇಳಿರುವುದು ’ಮಾತು-ಮನಸು-ಕೆಲಸ’ (ಕಾಯಾ-ವಾಚಾ-ಮನಸಾ; ತ್ರಿಕರಣ ಶುದ್ಧಿ) ಗಳಲ್ಲಿ  ನಿಯತ್ತನ್ನು ಇಟ್ಟುಕೊಳ್ಳವುದು, ಪಾರದರ್ಶಕ ನಡೆವಳಿಕೆಯನ್ನು ಉಳಿಸಿಕೊಳ್ಳುವುದು ಎನ್ನುವ ಅರ್ಥದಲ್ಲಿ. ಇಂತಹ ಉತ್ತಮ ನಡವಳಿಕೆಗಳಿಂದ ಗುರುವಿನ ಮನಸು ಒಲಿದ ನಂತರ ಆತನ ಸಮೀಪವನ್ನು ಹೊಂದಿ ಯಾವುದು ಆತ್ಮಾರ್ಥ ವಿಚಾರವೋ (ಇನ್ಯಾವುದೋ ವಿಷಯವನ್ನಲ್ಲ) ಅದರ ಬಗೆಗೆ ಕೇಳಿ ತಿಳಿದುಕೊಳ್ಳಬೇಕು ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...
------------------------------------------------

ಟಿಪ್ಪಣಿ :

ಗೀತೆಯ ವಾಕ್ಯ.." ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ವದರ್ಶಿನಃ || ( ೪.೩೪) 

ವಂದನೆಗಳೊಂದಿಗೆ....



Sunday, November 27, 2011

ಹೊಸ ಪ್ರಯೋಗ

ಇಂದು ಮನುಷ್ಯನದು ಧಾವಂತ ಜೀವನ. ಅತಿಯಾದ ಆಧುನಿಕತೆ. ನಮ್ಮತನವನ್ನು ಮರೆತು  ವಿದೇಶೀ ಭೋಗಜೀವನ ಶೈಲಿಯನ್ನು ಅನ್ಧಾನುಕರಿಸುತ್ತಿರುವ ನಮ್ಮ ಯುವ ಪೀಳಿಗೆ.ಯಾವುದು ತಪ್ಪು ? ಯಾವುದು ಸರಿ ಎಂಬ ವಿವೇಚನಾರಹಿತ ಜೀವನ. ಎಲ್ಲವೂ ಆಧುಕತೆಯ ಹೆಸರಲ್ಲಿ. ಸರಿ, ಅದರಲ್ಲಾದರೂ  ದೇಹ, ಮನಸ್ಸು, ಬುದ್ಧಿಯ ಸ್ವಾಸ್ಥ್ಯ ಸರಿ ಇದೆಯೇ? ಖಂಡಿತವಾಗಿಯೂ ಇಲ್ಲ ವೆಂದೆ ಹೇಳಬೇಕಾದ ಅನಿವಾರ್ಯತೆ. ಬೆಳಿಗ್ಗೆ ಏಳುವಾಗಲೇ ಟಿ.ವಿ. ರಿಮೋಟ್ ಹಿಡಿದುಕೊಂಡೆ ಏಳುವ ಪರಿ. ಅದರಲ್ಲಾದರೋ ಸಾಕಷ್ಟು ಸದ್ವಿಚಾರಗಳಿಗೆ ಅವಕಾಶವಿದ್ದರೂ  ಪ್ರತಿಶತ ೯೦ ಕ್ಕಿಂತಲೂ ಹೆಚ್ಚು ಮನಸ್ಸನ್ನು ಕೆಡಸುವ ಕಾರ್ಯಕ್ರಮಗಳು. ಬೆಳಿಗ್ಗೆ ಎದ್ದಾಗ ಆರಂಭವಾದ  ಟಿ .ವಿ. ಪರದೆಯ ಮೇಲೆ ಹೊಡೆದಾಟ ಬಡಿದಾಟ ,ರಕ್ತದ ಹರಿದಾಟ ದೃಶ್ಯಗಳನ್ನು ರಾತ್ರಿ ಮಲಗುವಾಗಲೂ ನೋಡಿ ಮಲಗುವಂತಹ ಪರಿಸ್ಥಿತಿ. ದಾರಾವಾಹಿಗಳ ಬಗ್ಗೆಯಂತೂ ಚರ್ಚಿಸದಿರುವುದೇ ಸೂಕ್ತ. ನಿತ್ಯವೂ ಹತ್ತಾರು ದಾರಾವಾಹಿಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುವ ಗೃಹಿಣಿಯರು. ದಾರಾವಾಹಿಯ ಸಮಯದಲ್ಲಿ  ಮನೆಗೆ ಬೆಂಕಿ ಬಿದ್ದರೂ ಗಮನ ಹರಿಸದಂತಹ ಮನಸ್ಥಿತಿ! 
ಹೌದು, ನಾವೆತ್ತಾ ಸಾಗುತ್ತಿದ್ದೇವೆ?  ನಮ್ಮ  ಇಂತಹ ಜೀವನದಿಂದ ನೆಮ್ಮದಿಯ ಆರೋಗ್ಯ ಪೂರ್ಣ ಬದುಕು ಸಾಧ್ಯವೇ? ಇಂತಹಾ ಧಾವಂತದ ದಿನಗಳಲ್ಲಿ ಸದ್ವಿಚಾರಗಳನ್ನು ಗಂಟೆ ಗಟ್ಟಲೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಆದ್ದರಿಂದ ಇಲ್ಲೊಂದು ಹೊಸ ಪ್ರಯೋಗ. ಸದ್ವಿಚಾರಗಳನ್ನು ಎರಡು ನಿಮಿಷಗಳಲ್ಲಿ ಜನರ ಕಿವಿಗೆ ಬೀಳಿಸುವ ಪ್ರಯತ್ನ. ಅದರಿಂದ ಏನಾದರೂ ಪ್ರಭಾವವಾಗಿ ಬೇಕೆನಿಸಿದವರಿಗೆ  ಸಾಕಷ್ಟು  ವಿಚಾರಗಳಿಗೆ ವೇದಸುಧೆಯಂತಹ ಅನೇಕ ತಾಣಗಳು ಈಗಾಗಲೇ ಇದ್ದೆ ಇವೆ. ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

Saturday, November 26, 2011

ಒಂದೆರಡು ನಿಮಿಷದಲ್ಲಿ ಕೇಳಿದ್ದು ಅದೆಷ್ಟು ಅಮೂಲ್ಯ!

ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕಾ ಗ್ರಂಥದ ಆಯ್ದ ಭಾಗಗಳು
ಧ್ವನಿ: ಶ್ರೀ ಸೂರ್ಯ ಪ್ರಕಾಶ್ ಪಂಡಿತ್



ಪಾಪವನ್ನು ಗುಟ್ಟಾಗಿ ಮಾಡಿದಾಗ!!


ಕುರುಡನಾರು? ಮೂಕನಾರು? ಕಿವುಡನಾರು?


Friday, November 25, 2011

ಜೀವನ ದರ್ಶನ

ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಿರುವ ಅನೇಕ ಸಂಗತಿಗಳ ಬಗ್ಗೆ ಅವನಿಗೆ ಸರಿಯಾದ ಅರಿವೇ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು? ಎನ್ನುವ ವಿವೇಚನಾ ಶಕ್ತಿಯೂ ಅವನಿಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವನಿಗೆ ನೆರವಾಗುವುದು ನಮ್ಮ ದಾರ್ಶನಿಕರ ಮಾತುಗಳು.  ದಾರ್ಶನಿಕರಲ್ಲಿ ಶ್ರೇಷ್ಠ ರಾದ ಶ್ರೀಶಂಕರಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡಿ ಶ್ರೀ ಶಂಕರರ ವಿಚಾರಧಾರೆಯನ್ನು ಅತ್ಯಂತ ಸರಳವಾಗಿ ನಮ್ಮಂತ ಸಾಮಾನ್ಯರಿಗೆ ಉಣಬಡಿಸುವ ಮಹಾನ್ ಕೆಲಸವನ್ನು ಬೆಂಗಳೂರಿನ ಚಿಂತಕರಾದ ಶ್ರೀ ಸೂರ್ಯ ಪ್ರಕಾಶ ಪಂಡಿತರು ನಿರಂತರವಾಗಿ ಮಾಡುತ್ತಿದ್ದಾರೆ. ಶ್ರೀಯುತರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಪ್ರವಚನದಲ್ಲಿನ ಆಯ್ದ ಭಾಗಗಳು ಇಲ್ಲಿವೆ.


ನರಕ ಎಂದರೇನು?


ಸತ್ಯದ ಪರಿಕಲ್ಪನೆ ಏನು?


ಮೋಕ್ಷ ಎಂದರೇನು?

ಕಾಲದ ಮಹಿಮೆ?


ಚಾರ್ವಾಕ ನೀತಿ





Wednesday, November 23, 2011

DHANVANTARI JAYANTI.




WISH YOU A HAPPY DHANVANTARI JAYANTI.

"ಧರ್ಮಾರ್ಥ ಕಾಮ ಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಮ್ ."
"धर्मार्थ काम मोक्षाणां आरोग्यं मूलमुत्तमं ".

For the achievement of the chaturvidha purushaartha viz, Dharma, artha, kaama and moksha, the basic requirement is good health. Without good health nothing can be achieved.

Hence on this occasion(Karthika Bahula trayodashi) of the jayanti of Lord Dhanvantari , the supreme God of Health, I pray him to bestow on you and your near ones good health and prosperity .


image.jpeg
ಸರ್ವಶಕ್ತನಾದ ಭಗವಂತನು ವೇದಸುಧೆಯ ಎಲ್ಲಾ ಅಭಿಮಾನಿಗಳಿಗೂ ಉತ್ತಮ ಆರೋಗ್ಯಭಾಗ್ಯ ಕರುಣಿಸಲೆಂದು  ಪ್ರಾರ್ಥಿಸುವ
-ಡಾ|| ಬಿ.ಎಸ.ಆರ್.ದೀಪಕ್, ಶಿವಮೊಗ್ಗ


ಈ ಜಗತ್ತೇ ಒಂದು ಸಣ್ಣ ಗೂಡು




ನಾವು "ವಸುಧೈವ ಕುಟುಂಬಕಂ " ಎನ್ನುವ ಮಾತು ಕೇಳಿದ್ದೇವೆ. ಇಡೀ ಜಗತ್ತು ಒಂದು ಕುಟುಂಬ ಎನ್ನುವ ಕಲ್ಪನೆ ನಮ್ಮ ಋಷಿಮುನಿಗಳ ಚಿಂತನೆ ಯಾಗಿತ್ತು.  ಇತ್ತೀಚಿಗೆ ವಿಜ್ಞಾನದ ಫಲವಾಗಿ ಇಡೀ ಜಗತ್ತು ಸುಲಭ ಸಂಪರ್ಕವನ್ನು ಸಾಧಿಸಿ ಒಂದು ಪುಟ್ಟ ಹಳ್ಳಿಯಂತೆ ಕಾಣುತ್ತಿರುವುದು ಇಂದಿನ ಅನುಭವದ ಮಾತು. ದೇಶ ದೇಶಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿದ್ದರೂ ಮನುಷ್ಯನ  ಮನ-ಮನಗಳ ನಡುವೆ, ಮನೆ-ಮನೆಗಳ ನಡುವೆ ಅದೆಂತಹ ಅಂತರ ನಿರ್ಮಾಣ ವಾಗಿದೆ!! 
ಹಾಗಾದರೆ ವೇದದ ಕಲ್ಪನೆ ಏನಿತ್ತು? ಈ ಬಗ್ಗೆ ಯಜುರ್ವೇದದ 32 ನೆ ಅಧ್ಯಾಯದ 8 ನೆ ಮಂತ್ರ ಏನು ಹೇಳುತ್ತದೆ?  ಹೊಸಬೆಳಕು ದಾರಾವಾಹಿಯಲ್ಲಿ ಈ ಬಗ್ಗೆ ಶ್ರೀ ಸುಧಾಕರ ಶರ್ಮರ ಎರಡು ನಿಮಿಷದ ಮಾತು ಕೇಳಿ. ಅದ್ಭುತ ವಾಗಿದೆ.


ಈ ಜಗತ್ತೇ ಒಂದು ಸಣ್ಣ ಗೂಡು


ಬಹುಪತ್ನಿತ್ವ ವೇದ ಸಮ್ಮತವೇ?


ಸ್ತ್ರೀಯರು ಮತ್ತು ಶೂದ್ರರು ವೇದವನ್ನು ಓದಬಾರದೆಂಬುದು ಮತಾಚಾರ್ಯರ ಅಭಿಪ್ರಾಯ! ಅಂತಾರಲ್ಲಾ , ಇದು ಸರಿಯೇ?



ಭಗವದ್ಗೀತೆಯನ್ನು  ಪಂಚಮ ವೇದ ಅಂತಾರಲ್ಲಾ?



ವೇದದಲ್ಲಿ ಶೂದ್ರರಿಗೆ ಸ್ಥಾನ?



ಸ್ತ್ರೀಯರು ವೇದಮಂತ್ರವನ್ನು ಓದಿದರೆ ಗರ್ಭಕೋಶಕ್ಕೆ ತೊಂದರೆ ಆಗುತ್ತದಂತೆ?



ವಿಧವಾ ವಿವಾಹದ ಬಗ್ಗೆ ವೇದವು ಏನು ಹೇಳುತ್ತದೆ?




Saturday, November 19, 2011

ಮುಚ್ಚುಮರೆ ಇಲ್ಲದೆಯೇ

ಗಾಯಕರು: ಶ್ರೀ ಹೆಚ್.ಏನ್.ಪ್ರಕಾಶ್

http://vedasudhe.webs.com/apps/podcast/podcast/171131

ಅಹಿಂಸೆ

ಜೀವನ ಮೌಲ್ಯ  "ಅಹಿಂಸೆ" ಬಗೆಗೆ ಪೂಜ್ಯ ಕೃತಾತ್ಮಾ ನಂದರ ಪ್ರವಚನ.

ವೇದಾಂತವನ್ನು ಅಧ್ಯಯನ ಮಾಡುವ ಮುನ್ನ



ಶ್ರೀ ಸೂರ್ಯ ಪ್ರಕಾಶ್ ಪಂಡಿತರು ಇಲ್ಲಿ ಆಡಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು.

Friday, November 18, 2011

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ:
 ನಮ್ಮ ನೆಮ್ಮದಿಯ ಬದುಕಿಗೆ ಪೂರಕವಾಗುವ ಸದ್ವಿಚಾರಗಳನ್ನು ಬಲ್ಲವರ ಮಾತುಗಳಲ್ಲಿ ಆಡಿಯೋ ಮೂಲಕ ಅಥವಾ ಲೇಖನ ಮೂಲಕ ವೇದಸುಧೆಯಲ್ಲಿ ಪ್ರಕಟಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.ಸಾಮಾನ್ಯವಾಗಿ ಬರುವ ಸಂದೇಹಗಳಿಗೆ ಲೇಖಕರಿಂದ ಸಮಾಧಾನಕರ ಉತ್ತರ ಕೊಡಿಸುವ ಪ್ರಯತ್ನವನ್ನೂ ಸಹ ಮಾಡಲಾಗುತ್ತದೆ. ವೇದಸುಧೆಯು ಸ್ನೇಹಮಯ ವಾತವರಣದಲ್ಲಿ ಸಾಗಬೇಕೆಂಬುದೇ  ನಮ್ಮ  ಉದ್ಧೇಶ. ಆದರೆ ಒಮ್ಮೊಮ್ಮೆ ತಮಗೆ ಒಪ್ಪದ ವಿಚಾರಗಳನ್ನು ತೀಕ್ಷ್ಣವಾಗಿ ತಮ್ಮ ಹೆಸರನ್ನೂ ಪ್ರಕಟಿಸದೆ ಪ್ರತಿಕ್ರಿಯಿಸುವ ಉಧಾಹರಣೆಗಳು ಕಾಣಬರುತ್ತಿವೆ. ದಯಮಾಡಿ ಪ್ರತಿಕ್ರಿಯಿಸುವಾಗ ತಮ್ಮ ಹೆಸರು ಮತ್ತು ಈ ಮೇಲ್ ವಿಳಾಸ ಕೊಡುವುದರ ಜೊತೆಗೆ ಸಂದೇಹ ಸಮಾಧಾನಕ್ಕಾಗಿ ಮಾತ್ರ ಬರೆಯಬೇಕೆಂದು ಕೋರುವೆ.

-ಹರಿಹರಪುರ ಶ್ರೀಧರ್
ಸಂಪಾದಕ 

ಸಜ್ಜನರಾರು?

ಸಜ್ಜನರಾರು?  ಎಂಬ ಬಗ್ಗೆ ಬೆಂಗಳೂರಿನ ಚಿಂತಕ ಶ್ರೀ ಸೂರ್ಯ ಪ್ರಕಾಶ ಪಂಡಿತರ   ಮಾತುಗಳು ಇಲ್ಲಿವೆ.







ಕ್ತಾತ್ಮಾನಂದರೊಡನೆ -2

ಕೃತಾತ್ಮಾನಂದರೊಡನೆ ಪ್ರಶ್ನೋತ್ತರ

ಇನ್ನೂ "ಈಶಾವಾಸ್ಯಂ" ಗೃಹ ಪ್ರವೇಶವೇ ಆಗಿರಲಿಲ್ಲ.  ಹಾಸನದ ಶ್ರೀ ಶಂಕರ ಮಠದಲ್ಲಿ ಪೂಜ್ಯ ಕೃತಾತ್ಮಾನಂದರ ಪ್ರವಚನ ವಿತ್ತು. ಅದೇ ಸಂದರ್ಭದಲ್ಲಿ ಪೂಜ್ಯರು ನಮ್ಮ ಮನೆಗೆ ಪದಾರ್ಪಣೆ ಮಾಡಿ ಒಂದು ಸತ್ಸಂಗವನ್ನು ನಡೆಸಿಕೊಟ್ಟರು. ಭಕ್ತರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರ ಉತ್ತರ ಇಲ್ಲಿದೆ.



ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ 



ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆ



ಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?



ಸಮತ್ವ

ಬೆಂಗಳೂರು ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರು ಬಲು ಸರಳ ಯತಿಗಳು. ಜೀವನ ಮೌಲ್ಯಗಳ ಬಗ್ಗೆ  ಬಲು ಸರಳವಾಗಿ ಸಾಮಾನ್ಯ ಜನರಿಗೂ ಮನವರಿಕೆಯಾಗುವಂತೆ ಮಾತನಾಡುತ್ತಾರೆ. "ಸಮತ್ವ" ದ ಬಗ್ಗೆ ಅವರ ಪ್ರವಚನ ಇಲ್ಲಿದೆ.





Thursday, November 17, 2011


ವೇದಸುಧೆಯ ಆತ್ಮೀಯ ಬಂಧುಗಳೇ ,
ನನ್ನ ಮನೆಯ ಗೃಹಪ್ರವೇಶ ಕ್ಕೆ ಆಮಂತ್ರಣ ವನ್ನೇ ಮುದ್ರಿಸದೆ ಕೇವಲ ದೂರವಾಣಿ ಹಾಗೂ ಅಂತರ್ ಜಾಲದ ಮೂಲಕ ಮಿತ್ರರನ್ನು ಆಹ್ವಾನಿಸಿದೆ. ಸಮಯಾವಕಾಶವಿದ್ದ ಸ್ನೇಹಿತರು ಪಾಲ್ಗೊಂಡರು. ಹಲವರು ದೂರವಾಣಿಯ ಮೂಲಕ ಶುಭಕೋರಿದರು. ಹಲವರು ಗೃಹ ಪ್ರವೇಶಾನಂತರ ಶುಭ ಕೋರಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು. ಕೆಳಗಿನ ಕೊಂಡಿಯಲ್ಲಿ ಗೃಹಪ್ರವೇಶದ ಚಿಕ್ಕ ವರದಿ ಇದೆ.

http://vedasudhe.blogspot.com/2011/11/blog-post_09.html

ಯೋಚಿಸಲೊ೦ದಿಷ್ಟು...೪೫

ಯೋಚಿಸಲೊ೦ದಿಷ್ಟು...೪೫


೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣೆಯನ್ನು ಮೀಟುವ೦ತಹ ಕೆಲವೇ ಸ೦ಬ೦ಧಗಳು ಮಾತ್ರವೇ ನಮ್ಮ ವ್ಯಾಪಿಗೆ ನಿಲುಕುವ೦ಥವು!! ಅವುಗಳನ್ನು ಜತನವಾಗಿ ಕಾಪಾಡಿ ಕೊಳ್ಳಬೇಕು!!
೩. ನಾವು ಎರಡನೇ ಪ್ರಯತ್ನವನ್ನು ಮಾಡಿದರೆ ಮಾತ್ರವೇ.. ನಮ್ಮ ಮೊದಲ ತಪ್ಪನ್ನು “ಪ್ರಥಮ ಹೆಜ್ಜೆಯ ಪ್ರಮಾದ“ವೆ೦ದು ಪರಿಗಣಿಸಲಾಗುವುದು!!
೪. ಕತ್ತಲೆ ಕುರಿತು ಇನ್ನೊಂದು ದೃಷ್ಟಿ: ಕತ್ತಲೆಯೆಂದರೆ ಅತ್ಯಂತ. . ಅತ್ಯಂತ . . ಕಡಿಮೆ ಬೆಳಕು!- ಕವಿನಾಗರಾಜರು
೫. ನಮ್ಮಲ್ಲಿ ಸಾಮರ್ಥ್ಯವಿದೆಯೆ೦ದ ಮೇಲೆ ಅದನ್ನು ಸ೦ಪೂರ್ಣವಾಗಿ ಪ್ರಯತ್ನದೆಡೆ ತೊಡಗಿಸಬೇಕು.ಕೇವಲ ಅದೃಷ್ಟವನ್ನು ನ೦ಬಿ ಕುಳಿತುಕೊ೦ಡಾಗ ಕಣ್ಣೆದುರು ಬ೦ದ ಎಷ್ಟೋ ಅವಕಾಶಗಳನ್ನು ಕೈಬಿಡಬೇಕಾಗುತ್ತದೆ.
೬. ನಮ್ಮ ಎದುರು ನಮ್ಮ ಬಗ್ಗೆ ಗೌರವ ತೋರಿಸುವುದರಲ್ಲಿಲ್ಲ...ಬದಲಾಗಿ ನಮ್ಮ ಗೈರುಹಾಜರಿಯಲ್ಲಿ ಜನರು ನಮ್ಮ ಬಗ್ಗೆ ಮಾತಾಡಿ ಕೊಳ್ಳುವುದರಲ್ಲಿಯೇ ನಮಗಿರುವ ಗೌರವದ ಬಗ್ಗೆ ನಾವು ಅರಿಯುವುದು!!
೭. ಏಕಾ೦ಗಿತನವೆ೦ದರೆ ಕೇವಲ ಒ೦ಟಿಯಾಗಿರುವುದಲ್ಲ.. ಎಲ್ಲರೂ ನಮ್ಮನ್ನು ಸುತ್ತುವರಿದೂ ನಾವು ಬಯಸುವವರು ನಮ್ಮೊ೦ದಿಗಿರ ದಿದ್ದರು ಅದೂ ಕೂಡ ಏಕಾ೦ಗಿತನವೇ!!
೮. ಸ್ವಚ್ಛವಾದ ಮನಸ್ಸು ಮತ್ತು ಹೃದಯಗಳೆರಡೂ ಸು೦ದರ ಬದುಕಿನ ರಹದಾರಿಗಳು!!
೯. ಪ್ರತಿದಿನವೂ ನಾವು ಕನ್ನಡಿಯ ಮು೦ದೆ ನಿ೦ತಾಗ ಕನ್ನಡಿಯಲ್ಲಿ ಕಾಣುವ ವ್ಯಕ್ತಿಯನ್ನು ಸದಾ ಸ೦ತಸವನ್ನು ನೀಡಲು ಪ್ರಯತ್ನಿ ಸೋಣ!!
೧೦. ನೋವು ಮತ್ತು ನಲಿವುಗಳೆರಡನ್ನೂ ಸಮಾನವಾಗಿ ಕಾಣುವವನಿಗೆ ಬದುಕು ಯಾವತ್ತೂ ಸು೦ದರವೇ!!
೧೧. ಮನಸ್ಸೆ೦ಬುದು ಪ್ರಪ೦ಚದಲ್ಲಿಯೇ ಅತಿ ಶಕ್ತಿಯುತವಾದದ್ದು..ಅದನ್ನು ನಿಯ೦ತ್ರಿಸಲು ಅರಿತವನು ಜಗತ್ತಿನ ಯಾವುದೇ ಶಕ್ತಿಯ ನ್ನಾದರೂ ನಿಯ೦ತ್ರಿಸಬಲ್ಲ!!-ಸ್ವಾಮಿ ವಿವೇಕಾನ೦ದ
೧೨. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಆತ್ಮಶುಧ್ಧಿಯ ಪೂಜೆ ಅಗತ್ಯ. ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೩. ಕಾರ್ಯ ಕಾರಣಗಳು ನಶಿಸಿದಾಗ ಬುಧ್ಧಿವ೦ತಿಕೆಯ ಜನನವಾಗುತ್ತದೆ! ಅದರ ಸ್ವಾತ೦ತ್ರ್ಯವು ಕಡಿದುಹೋಗುವವರೆಗೂ ಅದೊ೦ದು ತಿಳುವಳಿಕೆ ಮಾತ್ರ. ( ವಿಮರ್ಶೆ ಅಗತ್ಯವಿದೆ) (when reason dies, the wisdom is born: till that time of liberation, it is only knowledge.
೧೪. ಸತತ ಸ೦ಪರ್ಕವೇ ಸ೦ಬ೦ಧಗಳಿಗೆ ಆಮ್ಲಜನಕ.. ನಾವು ಸ೦ಪರ್ಕಿಸುವುದನ್ನು ನಿಲ್ಲಿಸಿದಾಗ ಸ೦ಬ೦ಧಗಳು ಸಾಯುತ್ತವೆ!!
೧೫. ನಮ್ಮ ಖಾಲಿ ಜೇಬು ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿಸಿದರೆ, ಬುಧ್ಧಿವ೦ತಿಕೆಯಿರದಿದ್ದಲ್ಲಿ ತು೦ಬಿದ ಕಿಸೆಯು ನಮ್ಮನ್ನು ಹಲವಾರು ವಿಧಗಳಲ್ಲಿ ನಾಶಗೊಳಿಸುತ್ತದೆ!!

Tuesday, November 15, 2011

ವಿನಯ


ಇತ್ತೀಚಿಗೆ ಹಾಸನದ ಶ್ರೀ ಶಂಕರ ಮಠ ದಲ್ಲಿ ಬೆಂಗಳೂರು ಚಿನ್ಮಯ ಮಿಷನ್ನಿನ ಸ್ವಾಮೀಜಿ ಪೂಜ್ಯ ಕೃತಾತ್ಮಾ ನಂದ ರಿಂದ ಪ್ರವಚನವನ್ನು ಏರ್ಪಡಿಸಲಾಗಿತ್ತು.ಪೂಜ್ಯರು ಮಾನವೀಯ ಮೌಲ್ಯಗಳ ಬಗೆಗೆ ಪ್ರವಚನಗಳನ್ನು ನೀಡಿದರು. ವಿನಯ ಎಂಬ ವಿಷಯದಲ್ಲಿ ಪೂಜ್ಯರು ಮಾಡಿದ ಪ್ರವಚನ ಇಲ್ಲಿದೆ.

Saturday, November 12, 2011

ಮಂತ್ರಪುಷ್ಪ


'ಹೊಸಬೆಳಕು' ಮೂಡಲಿದೆ!



ವೇದಗಳ ಬಗ್ಗೆ 'ಹೊಸಬೆಳಕು' ಮೂಡಲಿದೆ!
     ಪುರಾತನವಾದ ವೇದದ ಕುರಿತು ಸಾಕಷ್ಟು ಆರೋಪ, ಅಪವಾದಗಳಿವೆ. ಅಪದ್ಧವಾಗಿ ಮಾತನಾಡುವ ಕೆಲವರು ವಿದ್ವಾಂಸರೆನಿಸಿಕೊಂಡವರು, ಕೆಲವರು ಕಾವಿಧಾರಿಗಳಿಂದಲೇ ವೇದಕ್ಕೆ ಕೆಟ್ಟ ಹೆಸರು ಬಂದಿದೆಯೆಂದರೆ ತಪ್ಪಾಗುವುದಿಲ್ಲ. ರೂಢಿಗತ ಕಲ್ಪನೆಗಳಿಗೆ ಹೊರತಾದ, ವೇದದ ನಿಜಮುಖವನ್ನು ಪರಿಚಯಿಸುವ ಒಂದು ವಿನೂತನ ಕಾರ್ಯಕ್ರಮ ದೂರದರ್ಶನದ ಚಂದನವಾಹಿನಿಯಲ್ಲಿ ಮೂಡಿಬರಲಿದೆ. ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರು ಮತ್ತು ವೇದಗಳ ಬಗ್ಗೆ ಸಾಕಷ್ಟು ಓದಿಕೊಂಡಿರುವ ಶ್ರೀಮತಿ ವಿನಯಾಪ್ರಸಾದ್ ರವರು ನಡೆಸಿಕೊಡಲಿರುವ ಈ ಕಾರ್ಯಕ್ರಮ ಸೋದರ-ಸೋದರಿಯರ ಸಂವಾದರೂಪದಲ್ಲಿದ್ದು ಇದೇ ದಿನಾಂಕ ೧೩-೧೧-೨೦೧೧ರಿಂದ ಪ್ರತಿ ಭಾನುವಾರ ಬೆಳಿಗ್ಗೆ ೯-೩೦ರಿಂದ ೧೦-೦೦ರವರೆಗೆ ೧೩ ಕಂತುಗಳಲ್ಲಿ ಮೂಡಿಬರಲಿದೆ. ಮೊದಲ ಕಂತಿನಲ್ಲಿ ವೇದವಿಜ್ಞಾನ ಮತ್ತು ಷೋಡಶೋಪಚಾರಗಳ ಕುರಿತು ಮಾಹಿತಿ ಕೊಡಲಿದ್ದಾರೆ. ಬ್ರೋಂಜ್ ಕಮ್ಯೂನಿಕೇಷನ್ಸ್ ಎಂಬ ಜಾಹಿರಾತು ಸಂಬಂಧಿ ಸಂಸ್ಥೆ ನಡೆಸುತ್ತಿರುವ ಶ್ರೀಯುತ ರಮೇಶ್ ಮತ್ತು ಸುರೇಶ್ ನಿರ್ಮಾಪಕರಾಗಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರಾಯೋಜಕತ್ವ ಇಲ್ಲ. ವೇದಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಬೇಕು, ವಿಶೇಷವಾಗಿ ಯುವ ಪೀಳಿಗೆಗೆ ಸರಳವಾಗಿ ವೇದಗಳ ಮಹತ್ವ ತಿಳಿಸಿಕೊಡಬೇಕು ಎಂಬುದಷ್ಟೇ ಅವರ ಆಶಯವಾಗಿದೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಹಲವಾರು ಉಪನ್ಯಾಸಗಳನ್ನು ಕೇಳಿರುವ ನಾನು ಅವರಿಂದ ಪ್ರಭಾವಿತನಾದವರಲ್ಲಿ ಒಬ್ಬನಾಗಿದ್ದೇನೆ. ಈ ಕಾರ್ಯಕ್ರಮ ವಿನೂತನ ಹಾಗೂ ಚಿಂತನೀಯವಾಗಿರುವುದರಲ್ಲಿ ನನಗೆ ಅನುಮಾನವಿಲ್ಲ. ತಾವು ಈ ಕಾರ್ಯಕ್ರಮ ವೀಕ್ಷಿಸಬಹುದು. ಸಂದೇಹಗಳು, ಪ್ರಶ್ನೆಗಳು ಇದ್ದಲ್ಲಿ ಶ್ರೀ ಸುಧಾಕರಶರ್ಮರವರು ಉತ್ತರಿಸಲು ಸಿದ್ಧರಾಗಿದ್ದಾರೆ.


Wednesday, November 9, 2011

"ಈಶಾವಾಸ್ಯಮ್" ಗೃಹಪ್ರವೇಶ

" ಈಶಾವಾಸ್ಯಂ " ಗೃಹಪ್ರವೇಶದ ಚಿತ್ರಗಳನ್ನು ವೇದಸುಧೆಯಲ್ಲಿ ಪ್ರಕಟಿಸುವುದು ಉಚಿತವೆ? ಹೀಗೆ ನಾಲ್ಕೈದು ದಿನಗಳಿಂದ ಯೋಚಿಸುತ್ತಿದ್ದೆ. ಕೊನೆಗೊಮ್ಮೆ ಗಟ್ಟಿ ನಿರ್ಧಾರಕ್ಕೆ ಬಂದೆ." ಪ್ರಕಟಿಸಬೇಕು" .ಕಾರಣ ನನ್ನ ವಾಸ್ತವ್ಯದ  ಜೊತೆ ಜೊತೆಗೆ ಸಮಾಜಕ್ಕಾಗಿಯೂ ಸ್ವಲ್ಪ ಚಿಂತನೆ ನನ್ನ ಯೋಜನೆಯಲ್ಲಿರ ಬೇಕಾದರೆ ,ಪ್ರಕಟಿಸುವುದು ತಪ್ಪಾಗುವುದಿಲ್ಲ.ಸರಿ ಪ್ರಕಟಿಸುವ ನಿರ್ಧಾರ ಮಾಡಿದೆ.
ಈಶಾವಾಸ್ಯಮ್ ನಲ್ಲಿ ಏನೇನಿದೆ?
* ಸತ್ಸಂಗ ಕ್ಕಾಗಿಯೇ ಸುಮಾರು ೮೦ ಜನರು ಕುಳಿತುಕೊಳ್ಳಲು ಅನುಕೂಲವಾಗಿರುವ ಸಭಾಂಗಣ.
* ಉಪನ್ಯಾಸಕಾರಿಗೆ ವಿಶ್ರಾಂತಿ ಕೊಠಡಿ
*ಸಭಾಂಗಣದಲ್ಲಿ ಶಾಶ್ವತ ಧ್ವನಿ ವರ್ಧಕ
* ಅನಿವಾರ್ಯವಾದವರಿಗೆ ಖುರ್ಚಿ
* ಶೌಚಾಲಯ
*ಅಡಿಗೆ ಸಿದ್ಧಪಡಿಸಲು ಪ್ರತ್ಯೇಕ ವ್ಯವಸ್ಥೆ
*ತಡೆರಹಿತ ವಿದ್ಯುತ್
ಉದ್ಧೇ ಶಿತ ಕಾರ್ಯ ಕ್ರಮಗಳು 
*ವರ್ಷದಲ್ಲಿ ಹತ್ತಾರು ಅಧ್ಯಾತ್ಮ ಶಿಬಿರಗಳು
*ಮಾಸಿಕ ಸತ್ಸಂಗ
*ನಿತ್ಯ ಅಗ್ನಿಹೋತ್ರ \ಧ್ಯಾನ\ಪ್ರಾಣಾಯಾಮ ಅಭ್ಯಾಸ 
-------------------------------------------------------
ಕಳೆದ ಎರಡರಂದು ನಮ್ಮ ಮನೆ ವು ಸಾಂಗವಾಗಿ ನೆರವೇರಿತು. ಮುದ್ರಿತ ಆಮಂತ್ರಣವಿಲ್ಲದ ,ಕೇವಲ ಈ ಮೇಲ್ ಮತ್ತು ದೂರವಾಣಿಯ ಮೂಲಕ ಮಾಡಿದ ಮನವಿಗೆ ಸ್ನೇಹಿತರು ಮತ್ತು ಬಂಧುಗಳು ಬಂದು ಶುಭ ಕೋರಿದರು.ವರ್ಕಿಂಗ್ ಡೇ ಆದ್ದರಿಂದ ಹಲವರಿಗೆ ಬರಲಾಗಲಿಲ್ಲ. ಆದರೂ ಭಾವನಾತ್ಮಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಹಲವು ವರ್ಷಗಳ ಕನಸಾದ " ಸತ್ಸಂಗ ಸಭಾಂಗಣ" ತುಂಬಿತ್ತು. ನನ್ನ ಜೀವನದಲ್ಲಿ ನನ್ನನ್ನು ಕೈ ಹಿಡಿದು ನಡೆಸಿದವರನ್ನು ಸ್ಮರಿಸುವ ಕಾರ್ಯಕ್ರಮ " ಸಮಾಜ ಸ್ಮರಣೆ "  ಹಲವರಿಗೆ ಸಂತಸ ನೀಡಿತು. ನನ್ನ ಅಧ್ಯಾತ್ಮ ಕ್ಷೇತ್ರದಲ್ಲಿ ಮಾರ್ಗದರ್ಶಿಗಳಾಗಿರುವ ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯೀ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ರಾ. ಸ್ವ.ಸಂಘದ  ಹಿರಿಯ ಪ್ರಚರಕರೂ " ಕುಟುಂಬ ಪ್ರಭೋದನ್"  ಪರಿವಾರದ ಅಖಿಲ ಭಾರತ ಪ್ರಮುಖರೂ ಆದ ಮಾನ್ಯ ಶ್ರೀ ಸು.ರಾಮಣ್ಣ  ನವರು ಉಪಸ್ಥಿತರಿದ್ದು  ನಮ್ಮನ್ನು ಹಾರೈಸಿದರು. ನಮ್ಮ ಕುಟುಂಬದ ಹಿರಿಯರೂ ಅಂದೇ 86 ನೇ ವರ್ಷಕ್ಕೆ ಕಾಲಿಟ್ಟ ಶ್ರೀ ಹೆಚ್.ಆರ್. ಶ್ರೀಕಂಠಯ್ಯನವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಹಲವರಿಗೆ  ವಿಶೇಷ ವೆನಿಸಿತು.ಸಭೆಯಲ್ಲಿ ಉಪಷ್ಟಿತರಿದ್ದ ನನ್ನ ಗುರುಗಳಾದ ಶ್ರೀ ಹನುಮೇ ಗೌಡರನ್ನೂ, ನನಗೆ ತುತ್ತಿಕ್ಕಿ ಬೆಳಸಿದ ನೂರಾರು ಅನ್ನದಾತರ ಪರವಾಗಿ ಶ್ರೀ ಬೆಳವಾಡಿ ಕೃಷ್ಣ ಮೂರ್ತಿಗಳನ್ನೂ, ಸಮಾಜದಲ್ಲಿ ನನ್ನನ್ನು  ತಿದ್ದಿ ತೀಡಿ ಬೆಳಸಿದ ಶ್ರೀ ಸು.ರಾಮಣ್ಣ ನವರನ್ನೂ ಗೌರವಿಸಲಾಯ್ತು. ನನ್ನ ಕನಸಿನ ಮನೆ " ಈಶಾವಾಸ್ಯಮ್" ನಿರ್ಮಾಣದಲ್ಲಿ ಹಗಲಿರುಳು ದುಡಿದ ಕಾರ್ಮಿಕ ವರ್ಗವನ್ನೂ, ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ  ಅಕ್ಕ ಪಕ್ಕದ ಮನೆಯವರನ್ನೂ ಸಹ ಗೌರವಿಸಲಾಯ್ತು. ಮಿತ್ರ ಚಿನ್ನಪ್ಪ ಸೆರೆ ಹಿಡಿದಿರುವ ಕೆಲವು ದೃಶ್ಯಗಳು ಇಲ್ಲಿವೆ.




ಶ್ರೀಮತಿ ಲಲಿತಾ ರಮೇಶ್  ಹಾಡಿದ್ದು " ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ"

ವೇದಿಕೆಯಲ್ಲಿ ಮಾನ್ಯ ಶ್ರೀ ಸು.ರಾಮಣ್ಣ,ಶ್ರೀ ಹೆಚ್.ಆರ್.ಶ್ರೀಕಂಠಯ್ಯಮತ್ತು ಮಾತಾಜಿ ವಿವೇಕ ಮಯೀ  

ಶ್ರೀ ಸು.ರಾಮಣ್ಣ ನವರಿಂದ ನಮ್ಮ ಮನೆ ಹೇಗಿರ ಬೇಕು? ಮಾರ್ಗದರ್ಶನ 



ಕೈ ಹಿಡಿದು ನಡೆಸಿದವರಿಗೆ ಗೌರವಾರ್ಪಣೆ 

ಪೂಜ್ಯ ಗುರುಗಳಿಗೆ ಗೌರವಾರ್ಪಣೆ 

ತುತ್ತಿಕ್ಕಿ ಬೆಳಸಿದ ಬೆಳವಾಡಿ ಕೃಷ್ಣಮೂರ್ತಿಗಳು 
 ಆದಿ
ಕಟ್ಟಡ ನಿರ್ಮಿಸಿಕೊಟ್ಟ ಶ್ರೀ ದ್ಯಾವಪ್ಪ 


ಮರಳು ಇಟ್ಟಿಗೆ ಹೊತ್ತ ಸಂದೀಪ 


ಕುಟುಂಬದ ಹಿರಿಯರಾದ ಶ್ರೀಕಂಠಯ್ಯ 

ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ ತಾತ್ಕಾಲಿಕ ಉದ್ಯೋಗ ಕೊಡಿಸಿದ ಭಾವ ಕೃಷ್ಣ ಮೂರ್ತಿ 


ಹೊಳೆ ನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಅಧ್ವಯಾ ನಂದೇಂದ್ರ ಸರಸ್ವತೀ 




ಶ್ರೀ ಅನಂತನಾರಾಯಣ ರಿಂದ ಕಾರ್ಯಕ್ರಮ  ನಿರ್ವಹಣೆ 



Tuesday, November 8, 2011

ಡಿಡಿ ಚಂದನದಲ್ಲಿ ಹೊಸ ದಾರಾವಾಹಿ "ಹೊಸಬೆಳಕು"

ವೇದ ಆಧಾರಿತ ಸತ್ಯ ಸಂಪ್ರದಾಯಗಳತ್ತ ಬೆಳಕನ್ನು ಚಲ್ಲುವ ನೂತನ ದಾರಾವಾಹಿ " ಹೊಸಬೆಳಕು" ಇದೇ 13 ರಿಂದ  ಪ್ರತೀ ಭಾನುವಾರ ಬೆಳಿಗ್ಗೆ 9.30 ರಿಂದ 10.00ರ ವರಗೆ ಡಿಡಿ ಚಂದನದಲ್ಲಿ ಮೂಡಿಬರಲಿದೆ. ಅಣ್ಣ ತಂಗಿಯರ ಸಂವಾದ ರೂಪದ ಈ ದಾರಾವಾಹಿಯಲ್ಲಿ ಚಿತ್ರ ನಟಿ ವಿನಯ ಪ್ರಸಾದ್ ತಂಗಿಯ ಪಾತ್ರದಲ್ಲಿಯೂ ಹಾಗೂ ವೇದಾಧ್ಯಾಯೀ ಶ್ರೀ  ಸುಧಾಕರ ಶರ್ಮರು ಅಣ್ಣನ ಪಾತ್ರದಲ್ಲೂ ನಟಿಸಿದ್ದು ವೇದಕಾಲದ ಹಲವು ಸಂಪ್ರದಾಯಗಳನ್ನು ಪರಿಚಯಿಸಿ ಕೊಡಲಿದ್ದಾರೆ. ನೀವು ನಿಮ್ಮ ಬಂಧು ಮಿತ್ರರೊಡಗೂಡಿ ಈ ದಾರಾವಾಹಿಯನ್ನು ನೋಡಿ ,ನಿಮ್ಮ ಅಭಿಪ್ರಾಯಗಳನ್ನು\ಸಂದೇಹಗಳನ್ನು ವೇದಸುಧೆಗೆ  ಬರೆಯಿರಿ. ಶ್ರೀ ಶರ್ಮರು ನಿಮ್ಮ ಸಂದೇಹಗಳಿಗೆ ಉತ್ತರಿಸಲಿದ್ದಾರೆ.ನಿಮ್ಮ ಅಭಿಪ್ರಾಯಗಳ ಜೊತೆಗೆ ಶರ್ಮರ ಉತ್ತರವನ್ನೂ ಸಹ ವೇದಸುಧೆಯಲ್ಲಿ ಪ್ರಕಟಿಸಲಾಗುವುದು.

Monday, November 7, 2011

ಯೋಚಿಸಲೊ೦ದಿಷ್ಟು...೪೪

೧. ಧರ್ಮದ ಸದ್ಬಳಕೆಯಾದಾಗ ಮಾನವ ಶ್ರೇಷ್ಟನಾಗುತ್ತಾನೆ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ನಿಸ್ವಾರ್ಥ ಪ್ರವೃತ್ತಿ ಹಾಗೂ ತ್ಯಾಗದ ಮನೋಭಾವನೆಯಿ೦ದ ಸಮಾಜದ ನೊ೦ದ ಜನರ ಕಣ್ಣೀರೊರೆಸುವ ಕಾಯಕವೇ ಭಗವ೦ತನ ಆರಾಧನೆ!-ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ತನ್ನನ್ನು ತಾನು ಏಕಾ೦ಗಿಯನ್ನಾಗಿಸಿಕೊಳ್ಳುವವನು, ಒ೦ಟಿತನವನ್ನು ಇಷ್ಟಪಟ್ಟರೂ, ಅದೇ ತನ್ನ ಸ್ವರ್ಗವೆ೦ದು ಕರೆದುಕೊ೦ಡ ರೂ, ಕ್ರಮೇಣವಾಗಿ ತನ್ನ ಮನಸ್ಸನ್ನು ಗೊ೦ದಲಗಳ ಗೂಡಾಗಿ ಪರಿವರ್ತಿಸಿಕೊಳ್ಳುತ್ತಾನೆ!
೪. ಜೀವನವೆ೦ಬುದು ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಕ೦ಡರೂ, ಆ ಅನಿರೀಕ್ಷಿತ ತಿರುವುಗಳೇ ಒಮ್ಮೊಮ್ಮೆ ನಮ್ಮನ್ನು ಯಾರೂ ಮುಟ್ಟದ, ಪ್ರಪ೦ಚದ ಅತ್ಯ೦ತ ಉನ್ನತ ಸ್ಥಾನಕ್ಕೆ ಮುಟ್ಟಿಸುತ್ತವೆ!!
೫. ನಮ್ಮ ನಿಲುವನ್ನು ಅನುಮೋದಿಸದ, ನಮ್ಮ ಮನಸ್ಸಿಗೆ ಬೇಸರನೀಡುವ ಇತರರ ಕೆಲವು ಅಭಿಪ್ರಾಯಗಳಲ್ಲಿ ಸತ್ಯವು ಹುದುಗಿರ ಬಹುದು! ಅ೦ತೆಯೇ ಮನಸ್ಸಿಗೆ ನೆಮ್ಮದಿ ನೀಡುವ ಕೆಲವು ಅಭಿಪ್ರಾಯಗಳು ಸುಳ್ಳನ್ನು ತಮ್ಮೊಳಗೆ ಬಚ್ಚಿಟ್ಟುಕೊ೦ಡಿರಬಹುದು!!
೬. ವ್ಯಕ್ತಪಡಿಸದ ನಮ್ಮಲ್ಲಿನ ಭಾವನೆಗಳು ಒಮ್ಮೊಮ್ಮೆ ನಾವು ಗಳಿಸಿಯೂ ಖರ್ಚುಮಾಡದ ಧನದ೦ತೆ!!
೭. ಪ್ರತಿಯೊಬ್ಬರಿಗೂ ದೇವರು ಎಲ್ಲವನ್ನೂ ಕೊಟ್ಟಿರುತ್ತಾನೆ.. ಆದರೂ ಮಾನವನೊಬ್ಬನನ್ನು ಬಿಟ್ಟು ಮತ್ಯಾವ ಪ್ರಾಣಿಗಳೂ ಮತ್ತೊಬ್ಬ ರಿ೦ದ ಭಿಕ್ಷೆ ಬೇಡುವುದಿಲ್ಲ!! ಮತ್ತೂ ಅನುಮೋದಿಸಲೇ ಬೇಕಾದ ಸತ್ಯವೇನೆ೦ದರೆ , ಜಗತ್ತಿನ ಇತರೆ ಜೀವರಾಶಿಗಳು ಮಾನವನಿ೦ದ ಏನನ್ನೂ ಬಯಸುವುದಿಲ್ಲ!!
೮. ನಮ್ಮನ್ನು ನಾವು ಸ೦ತೈಸಿಕೊಳ್ಳುವುದೇ ನಮ್ಮೆಲ್ಲಾ ದು:ಖಗಳಿ೦ದ ಹಾಗೂ ಚಿ೦ತೆಗಳಿ೦ದ ಹೊರಬರಲು ಸಮರ್ಥವಾದ ಮಾರ್ಗ!!
೯. ಬೇರೆಯವರ ತಪ್ಪುಗಳನ್ನು ಹುಡುಕಿ ನಮ್ಮ ಮನಸ್ಸನ್ನು ಕಹಿ ಮಾಡಿಕೊಳ್ಳಬಾರದು!!- ಭಗವಾನ್ ಬುಧ್ಧ
೧೦. ನಾವು ಇತರ ಪುರುಷರೊ೦ದಿಗೆ ಚೆನ್ನಾಗಿ ಬಾಳಬೇಕಾದರೆ ಅವರನ್ನು ಕಡಿಮೆ ಪ್ರೀತಿಸಬೇಕು..ಹೆಚ್ಚು ಅರ್ಥೈಸಿಕೊಳ್ಳಬೇಕು.. ವಿಲಿಯ೦ ಶೇಕ್ಸ್ ಪಿಯರ್
೧೧. ನಮ್ಮಲ್ಲಿನ ತಾಳ್ಮೆಯೆ೦ಬುದು ಒಬ್ಬನು ನಮ್ಮನ್ನು ಕಾಯುವುದರಲ್ಲಿಲ್ಲ.. ಆದರೆ ಅವರು ಕಾಯುವಾಗ ನಾವು ತೋರಿಸಬಹುದಾದ ನಮ್ಮ ನಡತೆಯಲ್ಲಿದೆ..!!
೧೨. ಒಬ್ಬರನ್ನು ಅತಿಯಾಗಿ ನ೦ಬುವುದು ಎಷ್ಟು ಅಪಾಯವೋ ಅಷ್ಟೇ ಅಪಾಯವೆ೦ಬುದು ಯಾರನ್ನೂ ನ೦ಬದಿರುವುದರಲ್ಲಿದೆ... ಯಾರಿ೦ದಲೂ ನ೦ಬಲ್ಪಡದೇ ಇರುವುದರಲ್ಲಿ ನಮ್ಮ ಬದುಕಿನ ಅತ್ಯ೦ತ ಕೆಟ್ಟ ದಿನಗಳು ಅಡಗಿವೆ!!
೧೩. ನಮ್ಮ ಕಣ್ಣಿಗೆ ಕಾಣುವ ನಮ್ಮ ಹೆತ್ತು-ಹೊತ್ತು ಸಲಹಿದ ಮಾತಾ ಪಿತರ ಹಾಗೂ ಜೀವನದ ನಿಖರ ಗುರಿಯನ್ನು ಹಾಕಿಕೊಟ್ಟ ಗುರುಗಳಿ೦ದ ಆಶೀರ್ವಾದ ಪಡೆಯದಿದ್ದರೆ ಕಣ್ಣಿಗೆ ಕಾಣದ ಆ ದೇವರಿ೦ದಲೂ ಏನನ್ನೂ ಪಡೆಯಲಾರೆವು!!
೧೪. ಸದಾ ಗೊ೦ದಲಗಳ ಹಾಗೂ ಹೆಚ್ಚೆಚ್ಚು ಚಿ೦ತಿಸುವ ಮನುಷ್ಯನಿಗೆ ಈ ಜಗತ್ತು ನೋವಿನ ಕ೦ದರವಾಗಿ ಗೋಚರಿಸಿದರೆ, ಸದಾ ಸ೦ತಸದಿ೦ದಿರುವವರಿಗೆ ಈ ಜಗತ್ತೊ೦ದು ಉದ್ಯಾನವನವಾಗಿ, ಹಚ್ಚ ಹಸಿರಾಗಿ, ಸದಾ ನಗುವಿನ ಮ೦ಟಪವಾಗಿ ಗೋಚರಿಸುತ್ತದೆ!! ಸ೦ತೋಷವನ್ನು ಹುಡುಕಿಕೊಳ್ಳುವುದು ನಮ್ಮ ಕರ್ತವ್ಯ.. ಅದು ನಮ್ಮೊಳಗೇ ಇದೆ!!
೧೫. ಬುಧ್ಧಿವ೦ತರೆದುರು ಹಾಗೂ ಮೂರ್ಖರೆದುರು ನಮ್ಮ ದೊಡ್ಡತನದ ಬಗ್ಗೆ ಹಲುಬಿ ಏನೂ ಪ್ರಯೋಜನವಿಲ್ಲ.. ಬುಧ್ಧಿವ೦ತರು ತಾವಾಗೇ ನಮ್ಮಲ್ಲಿರುವ ದೊಡ್ಡತನವನ್ನು ಅರ್ಥೈಸಿಕೊ೦ಡರೆ, ಮೂರ್ಖರಿಗೆ೦ದಿಗೂ ಅದು ಅರ್ಥವಾಗದು!!

ತುಲಸೀ-ಜಲಂಧರ



ತುಲಸೀ-ಜಲಂಧರ


ಚಿಕ್ಕವನಿರುವಾಗ ನಾನು ಮೊದಲಾಗಿ ಈ ಹೆಸರನ್ನು ಕೇಳಿದಾಗ ಆಶ್ಚರ್ಯವಾಗಿತ್ತು. ಆದರೆ ಜಲಂಧರನ ಬಗ್ಗೆ ಬಹಳ ವಿವರ ಸಿಕ್ಕಿರಲಿಲ್ಲ. ಮನದತುಂಬಾ ಸಂದೇಹಗಳಿದ್ದವು. ಕೆರೆಮನೆ ಶಂಭು ಹೆಗಡೆಯವರು ’ತುಲಸೀ-ಜಲಂಧರ’ ಎಂಬ ಯಕ್ಷಗಾನವನ್ನು ಕವಲಕ್ಕಿಯಲ್ಲಿ ನಡೆಸಿದ್ದರು. ಅದು ಆಗ ಪ್ರಚಲಿತದಲ್ಲಿರದ ಅಪರೂಪದ ಪೌರಾಣಿಕ ಪ್ರಸಂಗ. ಅದನ್ನು ನೋಡಿದಮೇಲೆ ಕಥೆಯ ಹಂದರ ಅರ್ಥವಾಗಿತ್ತು. ಹಿಂದೂ ಮೈಥಾಲಜಿ ಎಂದು ವಿಜ್ಞಾನಿಗಳು ಇಂದು ಕರೆಯುತ್ತಾರೋ ಅಂತಹ ಮೈಥಾಲಜಿಯ ಹಿಂದೆ ಅಳವಾದ ಅನುಭವ ಜನ್ಯ ಸಂಶೋಧನಾ ಫಲವಿದೆ, ನಿಜವಾಗಿ ಅದೇ ವಿಜ್ಞಾನ, ತಾವು ಪುನಃ ಸಂಶೋಧನೆ[ರಿಸರ್ಚ್]ಮಾಡುತ್ತಿದ್ದೇವೆಂಬುದು ನಮ್ಮ ವಿಜ್ಞಾನಿಗಳೇನಕರಿಗೆ ಇಂದೂ ಗೊತ್ತಿಲ್ಲ. ಅನುಭವ ಇರುವಲ್ಲಿ ಅಮೃತತ್ವ ಇರುತ್ತದೆ, ಅದು ಪ್ರೂವನ್ ಟ್ರ್ಯಾಕ್. ಅಂಥದ್ದನ್ನೂ ಕೂಡ ನಮ್ಮ ವಿಜ್ಞಾನಿಗಳೆಂಬ ಅಜ್ಞಾನಿಗಳು ಕೆಲವೊಮ್ಮೆ ಅಲ್ಲಗಳೆಯುವುದು ಬೇಸರದ ಸಂಗತಿ.

ಒಪ್ಪಿಕೊಳ್ಳೋಣ, ಹಲವನ್ನು ಕಂಡುಹಿಡಿದಿದ್ದಾರೆ, ಹಲವಷ್ಟು ಸಾಧಿಸಿದ್ದಾರೆ, ಆದರೆ ಮಜವೇನೆಂದರೆ ಇವತ್ತು ನಮ್ಮ ವಿಜ್ಞಾನಿಗಳು ಕಂಡುಹಿಡಿದಿದ್ದೆಲ್ಲಾ ಮೊದಲೊಮ್ಮೆ ಬಳಕೆಯಲ್ಲಿದ್ದ ಸೂತ್ರಗಳನ್ನೇ! ಮಾನವ ಜೀವನದ ಮಧ್ಯಂತರದಲ್ಲಿ ಆ ಸೂತ್ರಗಳೂ ಸಂಶೋಧನೆಗಳೂ ಮರೆತು ಕೈತಪ್ಪಿ ಯಾರಿಗೂ ಸಿಗದಂತಾಗಿದ್ದವು. ಪ್ರಾಯಶಃ ಅದು ಪ್ರಳಯಗಳಂತಹ ಅನಾಹುತಗಳ ಪರಿಣಾಮವಾಗಿ ಆಗಿದ್ದಿರಬಹುದು. ಉದಾಹರಣೆಗೆ ವಿಮಾನ ಕಂಡು ಹಿಡಿದೆವೆಂದರು--ಪುಷ್ಪಕವಿಮಾನ ರಾಮಾಯಣ ಕಾಲದಲ್ಲೇ ಇತ್ತು! ಚರ್ಮದಲ್ಲಿ ಏಳುಪದರಗಳಿರುವುದನ್ನು ಇತ್ತೀಚೆಗೆ ಕಂಡರು-- ಈ ವಿಷಯ ವೇದಮಂತ್ರಗಳಲ್ಲಿ ಮೊದಲೇ ಉಲ್ಲೇಖವಾಗಿದೆ! ಇರಲಿ ಜಲಂಧರನ ಕಥೆ ತಿಳಿಯೋಣ.

ಜಲಂಧರನೊಬ್ಬ ರಕ್ಕಸ. ಶಿವನ ಕುರಿತು ಘೋರ ತಪಸ್ಸು ಮಾಡಿದ. ತಪಸ್ಸಿಗೆ ಒಲಿಯುವ ಬೋಲೇನಾಥ ನಮ್ಮ ಕನ್ನಡದಲ್ಲಿ ಬೋಳೇಶಂಕ್ರ ಹಾಗೆ ಹೇಳಿಸಿಕೊಳ್ಳಲು ಕಾರಣ, ಭಕ್ತನ ತಪಸ್ಸಿಗೆ ಮೆಚ್ಚಿ ಒಲಿದಾಗ ಕೇಳಿದ ವರಗಳನ್ನೆಲ್ಲಾ ಹಿಂದೆಮುಂದೆ ನೋಡದೇ ಕೊಟ್ಟುಬಿಡುವಾತ! ಆತ ಭಕ್ತಪರಾಧೀನ. ತನ್ನ ಅಥವಾ ದೇವತೆಗಳ ಆಗುಹೋಗುಗಳಿಗಿಂತ ಭಕ್ತರು ತೃಪ್ತಿಪಡುವುದನ್ನು ನೋಡಲು ಬಯಸುವ ಮುಗ್ಧ. ಸಾಕ್ಷಾತ್ ಮೃತ್ಯುಂಜಯನೇ ಆದರೂ ತಾನು ಕೊಡುವ ವರದಿಂದ ತನಗೇ ಕಂಟಕಗಳನ್ನು ತಂದುಕೊಳ್ಳುತ್ತಿದ್ದ. ಹೀಗಿದ್ದ ಸಮಯ ಜಲಂಧರನ ಕಠಿಣ ತಪಸ್ಸಿಗೆ ಒಲಿದ ವಿರೂಪಾಕ್ಷ ಆತನಿಗಷ್ಟು ವರಗಳನ್ನು ಕೊಟ್ಟುಬಿಟ್ಟ. ಅವುಗಳಲ್ಲಿ ಒಂದು ಆತನ ಪತ್ನಿ ಪತಿವೃತೆಯಾಗಿರುವವರೆಗೂ ಯಾರಿಂದಲೂ ಜಲಂಧರನಿಗೆ ಸಾವಿಲ್ಲ ಎಂಬುದು.

ಜಲಂಧರನ ಸ್ಫುರದ್ರೂಪಿ ಪತ್ನಿ ವೃಂದಾ [ಮಂದಾ ಅಂತಲೂ ಕರೆಯುತ್ತಾರೆ] ಆಕೆ ಮಹಾಪತಿವೃತೆ. ಪತಿಯನ್ನುಳಿದು ಯಾವ ಗಂಡಸನ್ನೂ ಕಣ್ಣೆತ್ತಿ ನೋಡದ ಸಾಧ್ವಿ. ವರಪಡೆದ ಜಲಂಧರ ಇನ್ನು ತಾನು ಯಾರಿಗೂ ಹೆದರಬೇಕಿಲ್ಲ ಎಂಬುದನ್ನು ಅರ್ಥೈಸಿಕೊಂಡು ದೇವತೆಗಳಮೇಲೇ ಯುದ್ಧಕ್ಕೆ ಹೊರಟ. ದೇವತೆಗಳಿಗೆ ಹಲವು ಥರದಲ್ಲಿ ಯಮಯಾತನೆ ಕೊಡಹತ್ತಿದ. ನಿಂತಲ್ಲಿ ಕುಂತಲ್ಲಿ ದೇವತೆಗಳು ಬೆಚ್ಚಿಬೀಳುವಂತೇ ಮಾಡಹತ್ತಿದ. ಇದೆಲ್ಲಾ ಪುಕಾರು ತೆಗೆದುಕೊಂಡು ದೇವತೆಗಳು ಮಹಾವಿಷ್ಣುವನ್ನು ಕಂಡರು. " ಸ್ವಾಮೀ ನೀನೇ ಕಾಪಾಡಬೇಕು " ಎಂದರು. ಆ ಕಡೆ ಶಿವನಲ್ಲಿಗೆ ತೆರಳಿದ ಜಲಂಧರ " ಹೇ ಶಿವನೇ ನಿನಗಾಗಲೇ ಬ್ರಹ್ಮಕಪಾಲ ಹಿಡಿದಿದೆ, ನೀನು ಭಿಕ್ಷಾಪಾತ್ರೆ ಹಿಡಿದು ಭಿಕ್ಷೆಗೆ ತೆರಳು, ತ್ರಿಪುರಸುಂದರಿಯಾದ ಪಾರ್ವತಿಯನ್ನು ನನಗೆ ಕೊಡು " ಎಂದು ಪೀಡಿಸಹತ್ತಿದ.

ವಿಷ್ಣು ಮನದಲ್ಲಿ ಎಲ್ಲವನ್ನೂ ಯೋಚಿಸಿದ. ವೃಂದಾ ಪತಿವೃತೆಯಾಗಿರುವವರೆಗೂ ಜಲಂಧರನ ವಧೆ ಸಾಧ್ಯವಿಲ್ಲ ಎಂಬುದು ಮನದಟ್ಟಾಯ್ತು. ನಿರ್ವಾಹವಿಲ್ಲದೇ ಜಗತ್ಕಲ್ಯಾಣಕ್ಕಾಗಿ ದುಷ್ಟಶಿಕ್ಷಣಕ್ಕಾಗಿ ತಾನು ಜಲಂಧರನಾಗಿ ರೂಪತಳೆದು ಜಲಂಧರ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತನ ಮನೆಗೆ ಬಂದ. ಬಂದ ಜಲಂಧರವೇಷಧಾರಿಯನ್ನು ಕಂಡ ವೃಂದಾ ದಿನನಿತ್ಯದಂತೇ ಪತಿಸೇವೆಗೈದಳು. ಜಲಂಧರರೂಪಿ ಆಕೆಯ ಶೀಲಹರಣಮಾಡಿದ! ತಕ್ಷಣಕ್ಕೆ ಅದು ಆಕೆಗೆ ಗೊತ್ತಾಗಲಿಲ್ಲ. ಯಾವಾಗ ಆಕೆಯ ಪತಿ ಜಲಂಧರ ಜಲಂಧರಪಾತ್ರಧಾರಿಯ ಎದುರಿಗೆ ಬಂದನೋ ಆಗ ಆಕೆ ತಬ್ಬಿಬ್ಬಾದಳು. ಅರೇ ಇದೇನಿದು ತಾನು ನೋಡುತ್ತಿರುವುದು ಎಂದು ಭಯವಿಹ್ವಲಳಾಗಿಯೂ ಆಶ್ಚರ್ಯಚಕಿತಳಾಗಿಯೂ ನೋಡುತ್ತಿರುವಂತೆಯೇ ಜಲಂಧರರಿಬ್ಬರಲ್ಲೂ ಯುದ್ಧ ಘಟಿಸಿತು. ನಿಜವಾದ ಜಲಂಧರ ಸತ್ತು ಧರೆಗುರುಳಿದ. ಅದನ್ನು ಕಂಡು ವೃಂದಾ ಬಹಳೇ ಗೋಳಿಟ್ಟಳು. ತನ್ನ ಪತಿಯನ್ನು ವಧಿಸುವ ಸಲುವಾಗಿ ದೇವರು ತನಗೆ ಮೋಸಮಾಡಿದನೆಂದು ರಂಪಮಾಡಿದಳು.

ಪತಿವೃತಾ ಶಿರೋಮಣಿಯಾಗಿದ್ದ ವೃಂದಾ ಮಾಡಿದ ತಪ್ಪೇನೂ ಇರಲಿಲ್ಲ. ಆಕೆಯ ನೋವನ್ನೂ ಕಣ್ಣೀರನ್ನೂ ನೋಡಿ ಮಹಾವಿಷ್ಣುವಿನ ಅಂತಃಕರಣ ಕರಗಿತು. ಆಕೆ ಸತ್ತಮೇಲೆ ಆಕೆಯ ಸಮಾಧಿಸ್ಥಳದಲ್ಲಿ ಆಕೆ ’ತುಳಸಿ’ ಎಂಬ ಗಿಡವಾಗಿ ಜನಿಸುವಂತೆಯೂ ತಾನು ನೆಲ್ಲಿಯ ಗಿಡದರೂಪದಲ್ಲಿ ಬಂದು ವರಿಸುವುದಾಗಿಯೂ ಭರವಸೆಯಿತ್ತನಲ್ಲದೇ ಯುಗಭೇದವಿಲ್ಲದೇ ಸುರರು-ಭೂಸುರರಾದಿಯಾಗಿ ಎಲ್ಲರೂ ಪೂಜೆಯಲ್ಲಿ ತನಗೆ ಪ್ರಥಮ ಆದ್ಯತೆಯಾಗಿ ತುಳಸೀ ದಳಗಳ ಸಮರ್ಪಣೆಮಾಡಲೆಂದೂ ವರವನ್ನಿತ್ತ. ವೃಂದಾ ತುಳಸೀಗಿಡವಾಗಿ ನಿಂತ ಆ ಜಾಗ ವೃಂದಾವನವಾಯ್ತು. ವೃಂದಾವನ ಮಹಾವಿಷ್ಣುವಿಗೆ ಪರಮಪ್ರಿಯ ಜಾಗವೆನಿಸಿತು. ಉತ್ಥಾನದ್ವಾದಶಿಯಂದು ಈ ನೆನಪಿನಲ್ಲಿ ಮಹಾವಿಷ್ಣುವನ್ನು ವೆಂಕಟೇಶ ಅಥವಾ ನಾರಾಯಣ ಎಂತಲೂ ತುಳಸಿಯನ್ನು ಪದ್ಮಾವತಿ ಅಥವಾ ಲಕ್ಷ್ಮೀ ಎಂತಲೂ ಪರಿಗಣಿಸಿ ಅವರೀರ್ವರಿಗೂ ಸಾಂಕೇತಿಕ ಕಲ್ಯಾಣೋತ್ಸವ ನಡೆಸುವುದು ರೂಢಿಗೆ ಬಂತು.

ಮಹಾಭಾರತದಲ್ಲಿ ಶ್ರೀಕೃಷ್ಣ ತುಲಾಭಾರವೆಂಬ ಸನ್ನಿವೇಶವನ್ನು ನಾರದರು ಸಿದ್ಧಮಾಡಿದ್ದರು. ನಾರದರು ಎಂದರೆ ತಮಗೆಲ್ಲಾ ಗೊತ್ತೇ ಇದೆ. ಮನೆ-ಮನೆಗಳಲ್ಲಿ ಜಗಳ ತಂದಿಡುವ ಜನರಿಗೆ ನಮ್ಮ ತೋಂಡೀ ಶಬ್ದ " ಓ ಅಂವ ಮಾರಾಯ ನಾರದ " ಎನ್ನುವುದು ಅಭ್ಯಾಸ. ಇಂತಹ ನಾರದರು ಒಮ್ಮೆ ಹಾಗೆ ಕೃಷ್ಣನನ್ನೂ ಅವನ ಹೆಂಡತಿಯರನ್ನೂ ಮಾತಿಗಿಳಿಸಿ ತುಲಾಭಾರಕ್ಕೆ ಅಣಿಗೊಳಿಸೇಬಿಟ್ಟರು. ತಕ್ಕಡಿಯ ಒಂದು ತಟ್ಟೆಯಲ್ಲಿ ಶ್ರೀಕೃಷ್ಣ ಕುಳಿತ. ಇನ್ನೊಂದರಲ್ಲಿ ಬಂಗಾರದ ನಗ-ನಾಣ್ಯಗಳನ್ನು ಹಾಕುತ್ತಾ ನಡೆದಳು ಸತ್ಯಭಾಮೆ. ಅವಳಿಗೋ ಎಲ್ಲಿಲ್ಲದ ಗರ್ವ! ಗಂಡ ಪರಮಾತ್ಮನಲ್ಲವೇ ಅದಕ್ಕೇ ಹಾಗಿತ್ತೇನೋ. ಸುರಿದಳು ಸುರಿದಳು ಇದ್ದಬದ್ದ ಬಂಗಾರವನ್ನೆಲ್ಲಾ ಸುರಿದಳು. ಊಹುಂ.....ತಕ್ಕಡಿ ಮೇಲೇಳಲೇ ಇಲ್ಲ. ಕೃಷ್ಣ ಕುಳಿತ ತಕ್ಕಡಿ ತಟ್ಟೆ ಕೆಳಗೇ ಇತ್ತು. ಕೊನೆಗೆ ನಾರದರೇ ಮುಂದಾಗಿ ಮದ್ಯಸ್ಥಕೆ ಮಾಡಿ ರುಕ್ಮಿಣಿಗೆ ತಿಳಿಸಿ ಒಂದು ದಳ ತುಳಸಿಯನ್ನು ತಂದು ಬಂಗಾರದ ಸಮಾನುಗಳನ್ನು ಇಟ್ಟ ತಕ್ಕಡಿಗೆ ಹಾಕಲು ಹೇಳಿದರು. ರುಕ್ಮಿಣಿ ನಾರದರಿಗೆ ಕೆಲಸವಿಲ್ಲ, ಇದೇನು ಮಹಾ ಜಾದೂ ಎಂಬ ಮನಸ್ಸಿನಲ್ಲೇ ಅಂತೂ ತುಳಸೀದಳವೊಂದನ್ನು ತಂದು ಹಾಕಿದಳು. ತಕಳಿ, ತಕ್ಕಡಿ ಮೇಲೆದ್ದು ಸಮನಾಗಿ ತೂಗಿತು; ತುಲಾಭಾರ ಸಂಪನ್ನವಾಯ್ತು. ಕೃಷ್ಣನ ಇಬ್ಬರೂ ಹೆಂಡಿರಿಗೆ ನಿಮ್ಮೆಲ್ಲರಿಗಿಂತಾ ತುಳಸಿಯೇ ಶ್ರೇಷ್ಠ ಎಂಬುದನ್ನು ಪರೋಕ್ಷವಾಗಿ ಶ್ರೀಕೃಷ್ಣ ತೋರಿಸಿಕೊಟ್ಟ.

ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ
ಇಂದಿರಾರಮಣಗರ್ಪಿತವೆನ್ನಲು
ಒಂದೇಮನದಲಿ ಸಿಂಧುಶಯನ ಮುಕುಂದನೆನೆ
ಎಂದೆಂದೂ ವಾಸಿಪನು ಮಂದಿರದೊಳಗೇ

ಹೂವ ತರುವರ ಮನೆಗೆ ಹುಲ್ಲ ತರುವಾ ....
ಅವ ಲಕುಮೀ ರಮಣ ಇವಗಿಲ್ಲ ಗರುವಾ .....

ಎಂದು ಪುರಂದರ ದಾಸರು ಹಾಡಿದ್ದಾರೆ. [ಇಲ್ಲಿ ಕರ್ನಾಟಕ ಸಂಗೀತ ಮತ್ತು ದೇವರನಾಮ ಹಾಡುವವರು ಗಮನಿಸಬೇಕು- ಅವ ಲಕುಮೀ ಎಂದರೆ ಅವಲಕ್ಷಣದ ಲಕ್ಷೀರಮಣ ಎಂದಲ್ಲ. ಅವ ಎಂಬುದು ಆತ ಎಂಬುದಕ್ಕೆ ಪರ್ಯಾಯ ಪದ. ಹಾಡುವಾಗ ಬಹಳ ಜೋಪಾನ !]

ಹೀಗೇ ಪುರಾಣೋಕ್ತವಾಗಿ, ಇತಿಹಾಸೋಕ್ತವಾಗಿ ತುಳಸಿ ಬೆಳಕಿಗೆ ಬಂತು. ಸಸ್ಯಶಾಸ್ತ್ರದಲ್ಲಿ ಅತಿ ವಿಶಿಷ್ಟ ಗಿಡವೆಂದು ಪರಿಗಣಿಸಲ್ಪಟ್ಟ ಶ್ರೀತುಳಸಿ ಹಲವು ಪ್ರಭೇದಗಳಲ್ಲಿ ಸಿಗುತ್ತಾಳೆ! ಸಮಾನ್ಯವಾಗಿ ನಾವು ಕೃಷ್ಣತುಳಸಿ, ಬಿಳಿತುಳಸಿ ಇವೆರಡನ್ನು ನೋಡಿರುತ್ತೇವೆ. ಇದಲ್ಲದೇ ಕರ್ಪೂರ ತುಳಸಿ, ನಿಂಬೂ ತುಳಸಿ ಹೀಗೇ ಹದಿನೈದು ಪ್ರಭೇದಗಳನ್ನು ನೋಡಬಯಸುವವರು ಕಾರವಾರಕ್ಕೆ ಹತ್ತಿರವಿರುವ ಕದ್ರಾ ಅಣೆಕಟ್ಟಿನ ಪ್ರದೇಶದಲ್ಲಿ ಹಿಂದೆ ಅಲ್ಲಿ ಎಂಜಿನೀಯರ್ ಆಗಿದ್ದ ಕೇಶವರಾವ್ ಎಂಬವರು ರೂಪಿಸಿದ ವಿಶಿಷ್ಟ ಸಸ್ಯೋದ್ಯಾನದಲ್ಲಿ ಕಾಣಬಹುದು. ಇದರ ಸಸ್ಯಶಾಸ್ತ್ರೀಯ ಹೆಸರು Ocimum tenuiflorum. ಇದು ಜಗತ್ತಿನ ಎಲ್ಲಾಭಾಗಗಳಲ್ಲೂ ಪಸರಿಸಿರುವ Lamiaceae ಎಂಬ ಸಸ್ಯಕುಟುಂಬಕ್ಕೆ ಸೇರಿದ್ದಾಗಿದೆ.

ಆಷಾಢ ಶುಕ್ಲ ಏಕಾದಶಿಯಂದು ವಿಶ್ರಾಂತಿ ಪಡೆಯಲು ತೆರಳಿ ಮಲಗಿದ ಮಹಾವಿಷ್ಣುವನ್ನು ಕಾರ್ತಿಕ ಶುದ್ಧ ದ್ವಾದಶಿಯಂದು ಎಬ್ಬಿಸು[ಉತ್ಥಾನ]ವ ವಾಡಿಕೆ ಶ್ರೀವೈಷ್ಣವರಲ್ಲಿದೆ. ತಿರುಮಲ ತಿರುಪತಿಯಲ್ಲೂ ಸಹ ಈ ಸೇವೆ ನಡೆಯುತ್ತದೆ. ಭಗವಂತನನ್ನು ಎಬ್ಬಿಸುವ ಈ ದ್ವಾದಶಿಯ ವಿಶೇಷವನ್ನು ಹಿಂದಿನವರು ಕೈಶಿಕ ಪುರಾಣವೆಂಬ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ವಿವರಣೆ ಸಂಸ್ಕೃತ-ತಮಿಳು-ಕೊಂಚ ತೆಲುಗು ಭಾಷೆಗಳ ಸಂಗಮರೂಪದಲ್ಲಿದೆ. ದೇವರನ್ನು ಎಬ್ಬಿಸುವಾಗ ಹಾಡುವ ಹಾಡಿನ ಕೊನೆಯ ಭಾಗದಲ್ಲಿ ಬರುವ ಈ ರಾಗವನ್ನು ಮೊದಲಾಗಿ ಚಾಂಡಾಲ ಭಕ್ತ ನಂಬದುವನ್ ಎಂಬಾತ ಹಾಡಿದ ಎಂಬುದು ಇತಿಹಾಸ. ಈ ದೃಷ್ಟಿಯಿಂದ ಉತ್ಥಾನದ್ವಾದಶಿಗೆ ಶ್ರೀವೈಷ್ಣವರು ಕೈಶಿಕ ದ್ವಾದಶಿ ಎಂದೂ ಕರೆಯುತ್ತಾರೆ. ಎದ್ದ ಮಹಾವಿಷ್ಣುವಿಗೆ ಮಿಕ್ಕ ಸಮಾಜ ತುಳಸೀಲಕ್ಷ್ಮಿಯನ್ನು ಮದುವೆಮಾಡಿಕೊಡುವುದನ್ನು ಈ ದಿನ ಕಾಣುತ್ತೇವೆ. ಕರ್ನಾಟಕದ ಕೆಲವು ಭಾಗಗಳಲ್ಲಂತೂ ಹಳೇಕಾಲದ ಕಟ್ಟಾ ಮದುವೆ ಸಂಪ್ರದಾಯದಂತೇ ಮದುವೆಯಿಂದ ಹಿಡಿದು ಚತುರ್ಥೆ [ಮದುವೆ ಮುಗಿದು ಬೀಗರ ದಿಬ್ಬಣ ಹೊರಡುವ ದಿನ ಇರಬಹುದೇ ? ]ಯ ವರೆಗೂ ನಿತ್ಯ ಸಾಯಂಕಾಲ ಪೂಜೆ, ದೀಪೋತ್ಸವ ನಡೆಯುತ್ತದೆ. ಕೆಲವು ಪ್ರದೇಶಗಳಲ್ಲಿ ತುಳಸೀಕಟ್ಟೆಗೆ ಕಬ್ಬಿನಿಂದ ಸುತ್ತ ಮಂಟಪಕಟ್ಟಿ, ಚಂಡುಹೂವು, ಸೇವಂತಿಗೆ ಮುಂತಾದವುಗಳಿಂದ ಅಲಂಕರಿಸುತ್ತಾರೆ. ನಮ್ಮೂರಲ್ಲಿ ತುಳಸಿಗೆ ಕಬ್ಬಿನ ಜೊತೆಗೆ ಅಡಕೆ ದಬ್ಬೆಯಿಂದ ಮಂಟಪ ನಿರ್ಮಿಸಿ, ವಿಧವಿಧದ ಹೂವು, ಹಣ್ಣಡಕೆ[ಗೋಟಡಕೆ]ಯ ಹಾರ, ಅಡಕೆ ಶಿಂಗಾರ, ಮಾವಿನಎಲೆಗಳ ಸರ ಹೀಗೆ ಬಹುವಿಧ ಸಾಮಗ್ರಿಗಳಿಂದ ಅಲಂಕರಿಸುತ್ತಾರೆ. ಈ ಅಲಂಕಾರ ತುಳಸೀ ವಿವಾಹ ಮುಗಿದು ವಾರದ ಕಾಲ ಹಾಗೇ ಇರುತ್ತದೆ. ಪ್ರತೀ ವರ್ಷ ತನ್ನ ವಿವಾಹವನ್ನು ಮಹಾವಿಷ್ಣುನೊಟ್ಟಿಗೆ ಜನ ನಡೆಸಿಕೊಡುವ ಭಾಗ್ಯವನ್ನು ಪಡೆದ ವೃಂದಾ[ವನ] ನಿಜಕ್ಕೂ ಧನ್ಯ.

ಆಯುರ್ವೇದದಲ್ಲಿ ತುಳಸಿಯ ಬಳಕೆ ಬಹಳ ಹೆಚ್ಚಾಗಿ ಕಾಣುತ್ತದೆ. ತುಳಸಿ ಕ್ರಿಮಿನಾಶಕವಾಗಿ ಕೆಲಸಮಾಡುವುದರಿಂದಲೂ ನೆಗಡಿ ಅಥವಾ ತಂಡಿ, ಸೀತ ಎನಿಸಿಕೊಳ್ಳುವ ಬಾಧೆಗೆ ಪರಿಹಾರಕೊಡುವುದರಿಂದಲೂ ಅದನ್ನು ಮನೆಯಮುಂದೆ ದೇವರೆಂದು ಕರೆದು ಪೂಜಿಸಬೇಕು ಎಂಬ ತತ್ವವನ್ನು ನಮ್ಮ ಪೂರ್ವಜರು ಸಾರಿದರು. ಪ್ರತಿನಿತ್ಯ ತೀರ್ಥವೆಂದು ನಾವು ಕುಡಿಯಬೇಕಾದ್ದು ಹೇಗೆಂದರೆ ತುಳಸಿಯನ್ನು ತೇಯ್ದ ಶ್ರೀಗಂಧದ ಜೊತೆಗೆ ತಾಮ್ರದ ’ಸೋಮಸೂತ್ರ’ವೆಂಬ ಪಾತ್ರೆಯಲ್ಲಿಡುವ ಸಾಲಿಗ್ರಾಮಕ್ಕೆ ಪೂಸಿ, ಅದಕ್ಕೆ ಶಂಖದಿಂದ ಪುರುಷಸೂಕ್ತ ಪಠಿಸುತ್ತಾ ಶುದ್ಧಜಲವನ್ನು ಅಭಿಷೇಚಿಸಿದಾಗ, ಸೋಮಸೂತ್ರದಿಂದ ಕೆಳಗೆ ಬಸಿಯುವ ಆ ನೀರೇ ತೀರ್ಥವಾಗಿರುತ್ತದೆ. ಅದು ಶ್ರೀಗಂಧ-ತುಳಸೀ ಪರಿಮಳ ಭರಿತವೂ ಮತ್ತು ಶರೀರದೊಳಗೆ ಕ್ರಿಮಿನಾಶಕವಾಗಿ ಕೆಲಸಮಾಡಲು ಸಾಮರ್ಥ್ಯವಿರುವ ದ್ರವವೂ ಆಗಿರುತ್ತದೆ. ತುಳಸಿ ಮತ್ತು ನೆಲ್ಲಿಯ ಸಂಗಮ ಈ ಕಾಲದಲ್ಲಿ[ಚಳಿಗಾಲ] ಆರೋಗ್ಯಕ್ಕೆ ಹೇಳಿಮಾಡಿಸಿದ್ದು. ಪೂರ್ವಜರು ಇದನ್ನೆಲ್ಲಾ ಹೇಗೆ ಅರಿತರು ಎಂಬುದು ನಮಗೆ ವಿದಿತವಲ್ಲ; ಆದರೆ ಅವರು ಮಾಡಿಟ್ಟುಹೋದ ಎಲ್ಲಾ ಸೂತ್ರಗಳ ಎಲ್ಲಾ ಶಾಸ್ತ್ರಗಳ ಹಿಂದೆ ಅಪ್ರತಿಮ ವಿಜ್ಞಾನ ಅಡಗಿದೆ. ನಮಗೆ ಕಾರಣ ಗೊತ್ತಿಲ್ಲದೇ ನಾವು ತುಳಸಿಕಟ್ಟೆಗೆ ವೃಂದಾವನ ಎನ್ನುತ್ತಿದ್ದೇವೆ. " ತುಳಸಿಯಂತೆ ತುಳಸಿ ನಮಗೇ ಜಾಗವಿಲ್ಲ ಇಲ್ಲಿ" ಎಂದು ಅರಚುವ ನಗರವಾಸಿಗಳೂ ಇದ್ದಾರೆ. ಆದರೆ ಎಷ್ಟೇ ರೋಗಗಳು-ಖಾಯಿಲೆ ಕಸಾಲೆಗಳು ಜನರಿಗೆ ಬಂದರೂ ತುಳಸಿಮಾತ್ರ ಮೂಕವಾಗಿ ಮನೆಗಳ ಮುಂದೆ ನಿಂತು ತನ್ನತನವನ್ನು ಕಾಪಾಡಿಕೊಂಡಿದೆ; ಮಾತನಾಡದ ದೇವರು ಮನೆಯ ಮುಂದೆ ಪ್ರತ್ಯಕ್ಷವಿರುವಾಗ ಬಳಕೆಮಾಡದ ಮಂದಿಮಾತ್ರ ಮೆಡಿಕಲ್ ಶಾಪಿನಿಂದ ಕೆಮಿಕಲ್ ಖರೀದಿ ಮಾಡುತ್ತಾ ತಮ್ಮ ಶರೀರದ ಸ್ವಾಸ್ಥ್ಯಕ್ಕೆ ವಿರುದ್ಧ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ತುಳಸಿಯ ಬಳಕೆ ಹೆಚ್ಚಾಗಲಿ, ತುಳಸಿ ಎಲ್ಲರನ್ನೂ ಕಾಪಾಡಲಿ ಎಂಬ ಸದಾಶಯದೊಂದಿಗೆ ತುಲಸೀಹಬ್ಬದ ಶುಭಾಶಯಗಳ್ನೂ ಕೋರುತ್ತಿದ್ದೇನೆ, ನಮಸ್ಕಾರ.

----ವಿ.ಆರ್.ಭಟ್