Pages

Saturday, June 23, 2012

ಮುಕುಂದೂರು ಸ್ವಾಮಿಗಳ ನೆನಪು


1966 ನೇ ಇಸವಿ. ಶಾಸ್ತ್ರಿಗಳು ಬೆಳೆಗೆರೆಯಲ್ಲಿ ಇದ್ದಾರೆ.ನಿತ್ಯವೂ ಬೆಳಿಗ್ಗೆ ಸಮಯ ಸ್ವಲ್ಪ ಹೊತ್ತು ಧ್ಯಾನಮಾಡುವ ಪದ್ದತಿ. ಅಂದು ಧ್ಯಾನದಲ್ಲಿ ಕುಳಿತಿದ್ದ    ಸ್ವಲ್ಪಹೊತ್ತಿನಲ್ಲೇ .........     . ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಆಶ್ರಮದ ಬಾಗಿಲಲ್ಲಿ ನಿಂತಂತೆ..... ಕೌಪೀನವನ್ನು ಮಾತ್ರ ಧರಿಸಿದ್ದ ಸ್ವಾಮಿಗಳು.ಆಶ್ರಮದ ಒಳಗಿನಿಂದ ಛಂಗನೆ ನೆಗೆದು ಹೊರಬಂದು ಇವರ ಮುಂದೆ ನಿಂತಂತೆ ದೃಷ್ಯವನ್ನು ಕಂಡು ಶಾಸ್ತ್ರಿಗಳು ಚಕಿತರಾಗುತ್ತಾರೆ. ಪೈಲ್ವಾನರಂತೆ ತೊಡೆತಟ್ಟಿ "ಕರೆಯೋ ಅದ್ಯಾರು ಬರ್ತಾರೆ ಕುಸ್ತೀಗೆ" ...ಅಂತ ಹಸನ್ಮುಖರಾಗಿ ನಿಲ್ಲುತ್ತಾರೆ.
"ಏನ್ ಸ್ವಾಮಿ ,ನೀವು ಎಷ್ಟು ವರ್ಷಗಳಿಂದ ಒಂದೇ ತರ ಇದ್ದೀರಲ್ಲಾ! ಸ್ವಲ್ಪ ನಾದ್ರೂ ಏರು ಪೇರು ಕಾಣುವುದಿಲ್ಲವಲ್ಲಾ!!" ಅಂತಾ ಶಾಸ್ತ್ರಿಗಳು ಸ್ವಾಮಿಗಳಲ್ಲಿ ಹೇಳ್ತಾರೆ. ..." ಇವನೆಲ್ಲಿ ಬದಲಾಗ್ತಾನೆ..ಇದ್ ಹಂಗೇ ಇರ್ತಾನೆ...ಅಂತಾ ಹೇಳ್ತಾ ಆಶ್ರಮದ ಒಳ ಹೋಗುತ್ತಾರೆ......ಶಾಸ್ತ್ರಿಗಳಿಗೆ ಎಚ್ಚರವಾಗಿ ಕಣ್ ಬಿಡುತ್ತಾರೆ.ಮನದ ತುಂಬೆಲ್ಲಾ ಮುಕುಂದೂರು ಸ್ವಾಮಿಗಳೇ ತುಂಬಿಹೋಗಿದ್ದಾರೆ. ಧ್ಯಾನ ಸ್ಥಿತಿಯಲ್ಲಿದ್ದಾಗ  ಸ್ವಾಮಿಗಳ  ಅಂತಹಾ ಅದ್ಭುತ ದರ್ಶನ!!
ಒಂದು ದಿನ ಕಳೆಯುತ್ತೆ. ಅದರ ಮಾರನೆಯ ದಿನದ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ "ಮುಕುಂದೂರು ಸ್ವಾಮಿಗಳ  ನಿಧನ ವಾರ್ತೆ ಪ್ರಕಟವಾಗಿರುತ್ತೆ....... ಶಾಸ್ತ್ರಿಗಳಿಗೆ ಅಂದು ದರ್ಶನ ಕೊಟ್ಟ    ಅದೇ ಸಮಯಕ್ಕೆ  ಸ್ವಾಮಿಗಳು ಶರೀರವನ್ನು ತ್ಯಜಿಸಿರುತ್ತಾರೆ........


        ಯಾಕೋ ಇವತ್ತು ಮುಕುಂದೂರು ಸ್ವಾಮಿಗಳ ನೆನಪು ಬಹಳವಾಗಿ ಆಗ್ತಿದೆ. ಶಾಲೆಗೆ ಹೋಗಿಯೇ ಇಲ್ಲ. ತನ್ನ ಪೂರ್ವಾಶ್ರಮದ ಬಗ್ಗೆ ಎಲ್ಲೂ ಹೇಳಿಕೊಂಡೇ ಇಲ್ಲ.ಇವರ ವಯಸ್ಸಿನ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ.ಯಾವ ಗುರುವಿನ ಹತ್ತಿರ ಏನು ಉಪದೇಶ ಪಡೆದರೋ ಗೊತ್ತಿಲ್ಲ. ಪಕ್ಕಾ ಹಳ್ಳೀ ಮಾತು. ಯೋಗ ಅನ್ನೋದಕ್ಕೆ ಯೇಗ ಅಂತಾಲೇ ಹೇಳ್ತಿದ್ರಂತೆ.ಆದರೆ ಪ್ರತಿಯೊಂದು ಮಾತಲ್ಲೂ ಅಧ್ಯಾತ್ಮ ಅಡಗಿರುತ್ತಿತ್ತು. ಸ್ವಾಮಿಗಳು ಶರೀರರವನ್ನು ತ್ಯಜಿಸಿದಾಗ ನಡೆದ ಪವಾಡವನ್ನು  ಕಂಡ ಜನ ಇನ್ನೂ ಬದುಕಿರುವುದರಿಂದ ಇದೊಂದು  ಕತೆಯಲ್ಲ. ನಡೆದ ಘಟನೆ.  ಮೊದಲಭಾಗದಲ್ಲಿ  ಆ ಘಟನೆಯನ್ನು ತಿಳಿಸಿ ನಂತರ  ಸ್ವಾಮೀಜಿಯವರನ್ನು ಕುರಿತಾದ ಬಿಳಿಗೆರೆ ಕೃಷ್ಣಶಾಸ್ತ್ರಿಗಳ  "ಯೇಗದಾಗೆಲ್ಲಾ ಐತೆ" ಪುಸ್ತಕದಿಂದ ಆಯ್ದ ಕೆಲವು ಘಟನೆಗಳನ್ನು ಮುಂದಿನ ದಾರಾವಾಹಿಯಾಗಿ    ಓದುಗರಲ್ಲಿ ಹಂಚಿಕೊಳ್ಳುತ್ತೇನೆ.


ಮರಳಿ ಮಾತೃಧರ್ಮಕ್ಕೆ 2000 ಮುಸಲ್ಮಾನರು!

25-12-2011ರಂದು ಉತ್ತರ ಪ್ರದೇಶದ ಆಲಿಘರ್ ನಲ್ಲಿ 2000 ಮುಸಲ್ಮಾನರು ಮಾತೃಧರ್ಮಕ್ಕೆ ಮರಳಿದ ಸಂದರ್ಭದ ವಿಡಿಯೋ:

ಅಭ್ಯಾಸ ಮಾಡದಿದ್ದರೆ ವಿದ್ಯೆಯು ವಿಷ


ಅನಭ್ಯಾಸೆ ವಿಷಂ ವಿದ್ಯಾ ಅಜೀರ್ಣೆ ಭೋಜನಂ ವಿಷಂ |...





5:57am Jun 23








ಅನಭ್ಯಾಸೆ ವಿಷಂ ವಿದ್ಯಾ ಅಜೀರ್ಣೆ ಭೋಜನಂ ವಿಷಂ |
ಮೂರ್ಖಸ್ಯಚ ವಿಷಂ ಗೋಷ್ಠಿ ವ್ರುದ್ಧಸ್ಯ ತರುಣಿ ವಿಷಂ ||


ಅಭ್ಯಾಸ ಮಾಡದಿದ್ದರೆ ವಿದ್ಯೆಯು ವಿಷ (ಅಭ್ಯಾಸ ಮಾಡದೆ ಇದ್ದರೆ ವಿದ್ಯೆಯ ಪರಿಪೂರ್ಣತೆ ಇಲ್ಲ), ಹೊಟ್ಟೆ ತುಂಬಿಕೊಂಡಾಗ ಬಾಯಿ ಚಪಲಕ್ಕೆ ಪುನಃ ತಿಂದರೆ ಅದು ಆರೋಗ್ಯದ ದೃಷ್ಟಿಯಿಂದ ವಿಷವಾಗುತ್ತದೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.ವಿದ್ವತ್ ನಿಂದ   ಕೂಡಿದ ಗಂಭೀರವಾದ ಸಭೆಯು ಮೂರ್ಖಜನರಿಗೆ ರುಚಿಸುವುದಿಲ್ಲ. ಅದು ಅವರಿಗೆ ವಿಷ.  ವೃದ್ಧ ರೆದುರು ಹುಡುಗಿಯರು ಬಂದಾಗ ಅದು ಅವರಿಗೆ ವಿಷವು. -

-Sadyojata Bhatta