Pages

Sunday, June 24, 2012

ಯೇಗ್ ದಾಗೆಲ್ಲಾ ಐತೆ -ಬೆನ್ನು ಹತ್ತಿಹೊರಟಾಗ. ಭಾಗ-1

ಈಗ್ಗೆ ಐದಾರು ವರ್ಷಗಳ ಹಿಂದೆ  ನಮ್ಮ ಇಲಾಖೆಯ[ಕೆ.ಪಿ.ಟಿಸಿಎಲ್] ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ವೈ.ವಿ.ವೆಂಕಟಕೃಷ್ಣ ನನ್ನೊಡನೆ ಮಾತನಾಡುತ್ತಾ "ನೀವು ಯೇಗ್ ದಾಗೆಲ್ಲಾ ಐತೆ "ಪುಸ್ತಕ ಓದಿದ್ದೀರಾ? " ನಿಮ್ಮಂತವರು ಆ ಪುಸ್ತಕ ಓದಬೇಕು ಅಂತಾ ತಮ್ಮೊಡನಿದ್ದ   ಪುಸ್ತಕ [ಅದು ಮೊದಲ ಮುದ್ರಣವಿರಬೇಕು] ವನ್ನು ತೋರಿಸಿದರು. ಸರಿ "ಕೊಡಿ ಓದಿ ಕೊಡ್ತೀನೆಂದೆ. ಒಂದೆರಡು ದಿನಗಳಲ್ಲಿ ಕೊಟ್ಟುಬಿಡಬೇಕೆಂದು ಕೊಡುವಾಗಲೇ ಹೇಳಿ ಕೊಟ್ಟರು. ನನ್ನ ಕೆಲಸಗಳ ಒತ್ತಡದಲ್ಲಿ ಎರಡು ದಿನಗಳಲ್ಲಿ  ಆ ಪುಸ್ತಕವನ್ನು ಪೂರ್ಣವಾಗಿ ಓದಲಾಗಲಿಲ್ಲ. ಅಲ್ಲಲ್ಲಿ ಕೆಲವು ಪುಟ ಓದಿ ಕುತೂಹಲ ಮೂಡಿಸಿಕೊಂಡಿದ್ದೆ. ಅಷ್ಟರಲ್ಲಿ ಅವರಿಗೆ ಆ ಪುಸ್ತಕ ಹಿಂದಿರುಗಿಸಬೇಕಾಗಿ ಬಂತು. ಆನಂತರ ಒಂದೆರಡು ವರ್ಷಗಳು ಆ ಪುಸ್ತಕ ನೋಡಲಿಲ್ಲ. ಪುನ: ನನ್ನ ಅಂತರ್ಜಾಲದ ಚಟುವಟಿಕೆ ಆರಂಭವಾದಮೇಲೆ ಕಳೆದ ಎರಡು ಮೂರು ವರ್ಷಗಳಲ್ಲಿ ಮಿತ್ರರಾದ ಎಂ.ಡಿ.ಎನ್. ಪ್ರಭಾಕರ್  ಕೃಪೆಯಿಂದ  ಯೋಗ ಕೂಡಿ ಬಂತು" ಹೊಸ ಮುದ್ರಣವಾದ "ಯೇಗ್ದಾಗೆಲ್ಲಾ ಐತೆ" ನನ್ನ ಕೈ ತಲುಪಿತು. ಒಂದೆರಡು ಭಾರಿ ಓದಿದೆ. ಕುತೂಹಲ ಇಮ್ಮಡಿ ಯಾಗ್ತಾಹೋಯ್ತು. ನನ್ನ ಬ್ಲಾಗ್ ನಲ್ಲಿ  ಕೆಲವು ಪುಟ ಬರೆದೆ. ಪುನ: ಒಂದೆರಡು ವರ್ಷ ಬಿಡುವು. ಮೊನ್ನೆ ಯಾಕೋ ಮತ್ತೆ ನೆನಪಾಯ್ತು.  ಮುಕುಂದೂರು ಸ್ವಾಮಿಗಳ ಬಗ್ಗೆ  ಬರೆಯ ಬೇಕೆನಿಸಿತು. ಆರಂಭಮಾಡಿದ್ದು  ಸ್ವಾಮೀಜಿಯವರು ಶರೀರ ತ್ಯಜಿಸಿದ ದಿನ  ಶ್ರೀ ಬೆಳೆಗೆರೆ        ಕೃಷ್ಣ ಶಾಸ್ತ್ರಿಗಳಿಗೆ ಆದ  ದಿವ್ಯಾನುಭವ ಘಟನೆಯಿಂದ. 

ಯಾಕೋ ನನ್ನ ಮನದಲ್ಲಿ ಸ್ವಾಮಿಗಳ ಸ್ಮರಣೆ ತುಂಬಿತ್ತು." ಮುಕುಂದೂರು ಎಂಬ ಹಳ್ಳಿ ನಮ್ಮೂರಿನ ಸಮೀಪದಲ್ಲಿದೆ. ಅಲ್ಲಿನ ಸಿದ್ಧ ಪುರುಷರ ಬಗ್ಗೆಯೇ  ನನಗೆ ಅರಿವಿಲ್ಲವಲ್ಲಾ! " ನಾನು ಬರೆಯುವುದಕ್ಕಿಂತ ಮೊದಲು ಮುಕುಂದೂರು ಸ್ವಾಮೀಜಿ ಇದ್ದ ಜಾಗವನ್ನು ನೋಡಿ ಬರಬೇಕು " ಎಂದುಕೊಂಡೆ. ರಾತ್ರಿ  ಹನ್ನೆರಡವರೆಗೂ " ಯೇಗ್ ದಾಗೆಲ್ಲಾ ಐತೆ" ಪುಸ್ತಕದ ಕೆಲವು ಪುಟ ಓದಿದೆ. ಆಗಲೇ ನಿರ್ಧರಿಸಿದೆ. ಬೆಳಗಾಗೆದ್ದರೆ ಭಾನುವಾರ ಹೋಗಿಬಂದು ಬಿಡೋಣ..ಅವರಿದ್ದುದು ಅರಸೀಕೆರೆಯ ತಾಲ್ಲೂಕು ಬಾಣಾವರದ ಸುತ್ತಮುತ್ತ. ಅವರು ದೇಹತ್ಯಾಗ ಮಾಡಿರುವುದೂ ಅಲ್ಲೇ ಎಂದು ಪುಸ್ತಕದಿಂದ ಗೊತ್ತಾಗಿದೆ. ಸರಿ ಅರಸೀಕೆರೆರೆ ಮೂಲಕ ಬಾಣಾವರಕ್ಕೆ ಹೋದರೆ ಅಲ್ಲಿ ಯಾರನ್ನಾದರೂ ಕೇಳಿಕೊಂಡು ಹೋದರಾಯ್ತು.ಎಂದು  ಕೊಂಡೆ. ನನ್ನ ಮೇಜಿನ ಮೇಲಿದ್ದ  ರೈಲ್ವೆ ವೇಳಾಪಟ್ಟಿ ಕಣ್ಣಿನೆ ಬಿತ್ತು. ಅರಸೀಕೆರೆಗೆ ಬಸ್ ನಲ್ಲಿ ಹೋಗಬೇಕೆಂದರೆ ಹರಮ ಸಂಕಟ. ಟ್ರೈನ್ ನಲ್ಲಿ ಹೋದರಾಯ್ತು, ಎಂದು                           ವೇಳಾಪಟ್ಟಿ ನೋಡಿದೆ. ಬೆಳೆಗ್ಗೆ 8.00ಕ್ಕೆ ಟ್ರೈನ್ ಇದೆ. ಹೊರಡುವ ನಿರ್ಧಾರ ಮಾಡಿ ಮಲಗಿದೆ. ಬೆಳಿಗ್ಗೆ ಎದ್ದವನೇ ಮೊದಲ್ಯು ಮಾಡಿದ ಕೆಲಸವೆಂದರೆ  ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರಿಗೆ ಫೋನ್ ಮಾಡಿದ್ದು. ಅವರಾದರೋ ಮೊಬೈಲ್ ನೂ ಮನೆಯಲ್ಲಿಯೇ ಬಿಟ್ಟು ವಾಕಿಂಗ್ ಹೋಗಿದ್ದರು. ಪತ್ನಿ ಭಾರತಿ ಹಲೋ ಎಂದರು.ವಾಕಿಂಗ್ ಹೋಗಿರುವ ವಿಷಯ ತಿಳಿಸಿದರು. ಅವರಿಗೆ ವಿಷಯ ತಿಳಿಸಿ ವಾಕಿಂಗ್ ನಿಂದ ಬಂದ ಕೂಡಲೇ ಮಾತನಾಡಲು ಹೇಳಿದೆ. ನಂತರ  ಬಾಣಾವರದ ಸಮೀಪ  ಎಲ್ಲಿ ಅಂಬುದನ್ನು  ಗೊತ್ತು ಮಾಡಿಕೊಳ್ಳಲು ಅರಸೀಕೆರೆಯ ಮಿತ್ರ ಸುಬ್ಬಣ್ಣನಿಗೆ ಫೋನ್ ಮಾಡಿದೆ. ಅವರು ಸರಿಯಾಗಿ ಗುರುತು ಹೇಳಿದರು..................ಮುಂದೇನಾಯ್ತು ಎಂಬುದನ್ನು ನಾಳೆ ಬರೆಯುವೆ.

 
                       


                      


ಸ್ವಾಮಿಗಳ ಅಮೃತಶಿಲಾ ಮೂರ್ತಿ ಇರುವ ಆಶ್ರಮ

ಆಶ್ರಮದ ಮುಂಭಾಗದ ಗೋಪುರದಲ್ಲಿ ಸ್ವಾಮಿಗಳ ವಿಗ್ರಹ

ಇಲ್ಲಿ ಕಾಣುವ   ಮಂಗಳೂರು ಹಂಚಿನ ಮನೆಯೊಳಗೆ ಇರುವ ನೆಲಮಾಳಿಗೆಯೇ  ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಪುಣ್ಯಸ್ಥಳ.

ನೆಲಮಾಳಿಗೆಯಲ್ಲಿ ಸ್ವಾಮಿಗಳು ಪ್ತಪಸ್ಸು ಮಾಡುತ್ತಿದ್ದ ಸ್ಥಳದ ಜೀರ್ಣೋದ್ಧಾರವಾಗಿದ್ದು ಅಲ್ಲಿ ಸ್ವಾಮಿಗಳ ಫೋಟೋ ಇಟ್ಟು ಅದರೆದುರು ಕೃಷ್ಣಾಜಿನ  ಹಾಸಲಾಗಿದೆ.

ಆಶ್ರಮದ ದೇವಾಲಯದಲ್ಲಿ ಈಶ್ವರ ವಿಗ್ರಹ


ಆಶ್ರಮದಲ್ಲಿರುವ  ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಮತ್ತು ಸಿದ್ದಗಂಗಾ ಶ್ರೀಗಳ ಆಳೆತ್ತರದ ಚಿತ್ರ.





ಶರಣೆಯರಾದ ಶರಣಮ್ಮ ಮತ್ತು ಕಲ್ಯಾಣಮ್ಮ ಇವರ ಸಮಾಧಿ ಇಲ್ಲಿದೆ

ಶರಣೆಯರ ಸಮಾಧಿ

ಶರಣೆಯರ ಸಮಾಧಿ

ಶರಣೆಯರ ಸಮಾಧಿ
ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ


ಸ್ವಾಮೀಜಿಯರಕಾಲದ    ಜೊಂಬು ನೇರಲೆ ಮರ

ಬನ್ನಿ ಮಂಟಪ

ಸ್ವಾಮೀಜಿ ಉಪಯೋಗಿಸುತ್ತಿದ್ದ ಭಾವಿ

ಸ್ವಾಮೀಜಿಯವರ ಪೂರ್ವಾಶ್ರಮದ ಮರಿಮಗ ಪರಮೇಶ್ವರಪ್ಪನವರ ಮನೆಯಲ್ಲಿ ಸಾಹಿತಿ ಸಂಶೋದಕ ಡಾ. ಶ್ರೀವತ್ಸ ವಟಿಯವರೊಡನೆ

ಆಶ್ರಮದ ಚಟುವಟಿಗಳಿಗೆ ಸಾಕ್ಶಿ

ಈಗಿನ ಶ್ರೀ ಬಸವಲಿಂಗ ಸ್ವಾಮೀಜಿಯವರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಸಂಶೋಧಕ  ದಾ.ಶ್ರೀವತ್ಸ ಎಸ್.ವಟಿ

 ಶ್ರೀ ಬಸವಲಿಂಗ ಸ್ವಾಮೀಜಿಯವರು

ಶ್ರೀ ಬಸವಲಿಂಗ ಸ್ವಾಮೀಜಿಯವರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಸಂಪಾದಕ ಹರಿಹರಪುರಶ್ರೀಧರ್

ಯಾರು ನಿಜವಾದ ಮಿತ್ರರು?

 ಆಪತ್ಸು ಮಿತ್ರಂ ಜಾನೀಯಾತ್ ಯುದ್ಧೆ ಶೂರಂ ಧನೇ ಶುಚಿಂ |
 ಭಾರ್ಯಾಂ ಕ್ಷೀನೆಷು ವಿತ್ತೆಶು ವ್ಯಸನೆಶು ಚ ಬಾಂಧವಾನ್ ||

ತಾನು ಕಷ್ಟದಲ್ಲಿದ್ದಾಗ ಸ್ನೇಹಿತನನ್ನೂ, ಯುದ್ಧ ಸಂದರ್ಭದಲ್ಲಿ ಶೂರನನ್ನು, ಶ್ರೀಮಂತಿಕೆ ಬಂದಾಗ ಪ್ರಾಮಾಣಿಕತೆಯನ್ನು, ಬಡತನ ಬಂದಾಗ ಹೆಂಡತಿಯನ್ನು, ಕಷ್ಟ ಬಂದಾಗ ಬಂಧುಗಳನ್ನು ಪರೀಕ್ಷಿಸಿ ತಿಳಿಯ ಬೇಕು. ಈ ಸಂದರ್ಭಗಳಲ್ಲಿ ಯಾರು ಸಹಕಾರಿಗಲಾಗಿರುತ್ತಾರೋ ಅವರೇ ಮಿತ್ರರು ಬಾಂಧವರು ಎಲ್ಲರು.

-Sadyojata Bhatta