Pages

Friday, August 31, 2012

ಬ್ರಹ್ಮಸೂತ್ರಗಳು

          ಬ್ರಹ್ಮ(ಪರಿಪೂರ್ಣ ಭಗವಂತ)ನಿಗೆ ಸಂಭಂದಪಟ್ಟ ವಿಷಯದ ಕುರಿತಾಗಿ ಸರ್ವ ರೀತಿಯಿಂದಲೂ ಸಂಪೂರ್ಣವಾಗಿ ಚರ್ಚಿಸುವುದರಿಂದ ಈ ಕೃತಿಗೆ ಆ ಹೆಸರು ಬರಲು ಮೂಲ ಕಾರಣ. ಅದನ್ನು ನಾನಾ ವಿಧವಾದ ಹೆಸರುಗಳಿಂದಲೂ ಕರೆಯುತ್ತಾರೆ, ಅವು ಈ ರೀತಿಯಾಗಿ ಇವೆ:
೧) ವೇದಾಂತ ಸೂತ್ರಾ - ಇದು ವೇದಾಂತ ಅಥವಾ ಉಪನಿಷತ್ತಿನ ವಿಷಯಕ್ಕೆ ಸಂಭಂದಿಸಿದ್ದರಿಂದ,
೨) ಶಾರೀರಿಕ ಸೂತ್ರಾ - ಏಕೆಂದರೆ ಇದು ಶರೀರದಲ್ಲಿ ನೆಲೆಸಿರುವ ಆತ್ಮನ ವಿಚಾರವಾಗಿ ಚರ್ಚಿಸುವುದರಿಂದ,
೩) ಉತ್ತರ ಮೀಮಾಂಸ ಸೂತ್ರಾ - ಪೂರ್ವ ಮೀಮಾಂಸಕ್ಕೆ ವಿರುದ್ಧವಾಗಿ; ಏಕೆಂದರೆ ಇದು ವೇದಗಳ ಉತ್ತರ ಅಥವಾ ಅಂತಿಮ ಭಾಗಗಳ ಕುರಿತಾಗಿ ಮೀಮಾಂಸ ಅಥವಾ ಜಿಜ್ಞಾಸೆ ಮಾಡುವುದರಿಂದ.(ಜಿಜ್ಞಾಸೆ ಎಂದರೆ ಸಾಮಾನ್ಯ ಅರ್ಥದಲ್ಲಿ ವಿಚಾರಣೆ),
೪) ಭಿಕ್ಷುಸೂತ್ರಾ - ಏಕೆಂದರೆ ಈ ದರ್ಶನವು ವಿಶೇಷವಾಗಿ ’ಭಿಕ್ಷು’ಗಳು ಅಥವಾ ’ಸನ್ಯಾಸಿ’ಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದರಿಂದ.

ರಚನಕಾರ ಬಾದರಾಯಣ
         
          ಈ ಮಹತ್ತರ ಕೃತಿಯ ರಚನಕಾರನಾದ ಬಾದರಾಯಣನ ಬಗ್ಗೆ ಹೆಚ್ಚೇನೂ ತಿಳಿದು ಬಂದಿಲ್ಲ. ಸಂಪ್ರದಾಯವಾದಿಗಳು ಇವನನ್ನು ಮಹಾಭಾರತ ಮತ್ತು ಪುರಾಣಗಳ ಕರ್ತೃವಾದ ವ್ಯಾಸನೊಂದಿಗೆ ಏಕೀಭವಿಸುತ್ತಾರೆ; ಏಕೆಂದರೆ ಕೆಲವು ಭಾರತೀಯ ಹಾಗೂ ಪಾಶ್ಚಿಮಾತ್ಯ ಪಂಡಿತರ ಅಭಿಮತದಂತೆ ಈ ಕೃತಿಯು ಕ್ರಿ.ಪೂ. ೫೦೦ ರಿಂದ ಕ್ರಿ. ಪೂ. ೨೦೦ರ ಮಧ್ಯಕಾಲದಲ್ಲಿ ರಚಿತವಾಗಿದೆ. ಅದರೆ ಇನ್ನಿತರ ವಿದ್ವಾಂಸರು ಈ ಮಹಾಭಾರತದ ವ್ಯಾಸ ಮತ್ತು ವೇದಾಂತಸೂತ್ರಗಳ ವ್ಯಾಸ ಇಬ್ಬರೂ ಬೇರೆಯೆಂದು ಪ್ರತಿಪಾದಿಸಿ ಬಾದರಾಯಣನ ಕಾಲವನ್ನು ಕ್ರಿ. ಶ. ೨೦೦ಕ್ಕೆ ಮುಂದೂಡುತ್ತಾರೆ. 

ಕೃತಿಯ ಬಗ್ಗೆ

          ಬ್ರಹ್ಮಸೂತ್ರವು ನಾಲ್ಕು ಅಧ್ಯಾಯ ಅಥವಾ ವಿಭಾಗಗಳನ್ನು ಒಳಗೊಂಡಿದೆ. ಪ್ರತಿಯೊಂದು ಅಧ್ಯಾಯವು ನಾಲ್ಕು ಪಾದಗಳಾಗಿ ಉಪವಿಭಾಗಗೊಂಡಿದೆ. ಪಾದಗಳು ಅಧಿಕರಣ ಅಥವಾ ವಿಷಯಗಳನ್ನು ಒಳಗೊಂಡಿವೆ ಮತ್ತು ಆ ವಿಷಯಗಳು ಸೂತ್ರರೂಪದಲ್ಲಿವೆ.

          ಆದಿ ಭಾಷ್ಯಕಾರರಾದ ಶಂಕರರು ಬ್ರಹ್ಮಸೂತ್ರವು ಒಟ್ಟು ೧೯೧ ಅಧಿಕರಣಗಳನ್ನು ಹೊಂದಿದ್ದು; ೫೫೫ ಸೂತ್ರಗಳನ್ನು ಒಳಗೊಂಡಿದೆ ಎಂದು ಉಲ್ಲೇಖಿಸಿದ್ದಾರೆ. ಒಂದೇ ಕೃತಿಯ ವಿವಿಧ ಆವೃತ್ತಿಗಳಲ್ಲಿ ಮತ್ತು ಬೇರೆ ಬೇರೆ ಕೃತಿಗಳಲ್ಲಿ ಈ ಸಂಖ್ಯೆಯ ಬಗ್ಗೆ ಹಲವಾರು ವ್ಯತ್ಯಾಸಗಳು ಕಂಡು ಬರುತ್ತದೆ. ಒಂದು ಸೂತ್ರವನ್ನು ಎರಡಾಗಿ ವಿಭಾಗಿಸುವುದು, ಅಥವಾ ಎರಡು ಸೂತ್ರಗಳನ್ನು ಒಂದೇ ಆಗಿ ಪರಿಗಣಿಸುವುದು ಅಥವಾ ಒಂದು ಸೂತ್ರದ ಕಡೆಯ ಶಬ್ದವನ್ನು ಇನ್ನೊಂದು ಸೂತ್ರದ ಮೊದಲನೆಯ ಪದವನ್ನಾಗಿ ಓದಿಕೊಳ್ಳುವುದು, ಮುಂತಾದವುಗಳಿಂದ ಈ ರೀತಿಯ ವ್ಯತ್ಯಾಸ ಉಂಟಾಗಿದೆ. ಈ ರೀತಿಯ ವ್ಯತ್ಯಾಸಗೊಂಡ ಸೂತ್ರಗಳಿಂದಾಗಿ ಹಲವಾರು ವೈವಿಧ್ಯಮಯ ವ್ಯಾಖ್ಯೆಗಳು ಕೂಡ ಹುಟ್ಟಿಕೊಂಡಿವೆ. ಈ ರೀತಿ ವ್ಯತ್ಯಾಸಗೊಂಡ ಸೂತ್ರಗಳನ್ನೇ ’ಪೂರ್ವಪಕ್ಷ’ (ಎದುರಾಳಿಯ ಅಭಿಪ್ರಾಯ)ವೆಂದು ತಿಳಿದು ಕೆಲವೊಂದು ಶಾಖೆಗಳು, ಅವನ್ನು ಸಂಶಯ ಅಥವಾ ಆಕ್ಷೇಪಣೆಯನ್ನು ವ್ಯಕ್ತಪಡಿಸಲು ಉಪಯೋಗಿಸಿಕೊಂಡರೆ; ಇತರೇ ಕೃತಿಕಾರರು ಅವುಗಳನ್ನೇ ತಮ್ಮ ಸಿದ್ಧಾಂತವನ್ನು ಸ್ಥಾಪಿಸಲು ಪೂರಕವಾಗಿ ಬಳಸಿಕೊಂಡಿದ್ದಾರೆ.
         
ಈ ಹಿಂದೆ ತಿಳಿಸಿದಂತೆ ಪ್ರತಿಯೊಂದು ಪಾದವೂ ಹಲವಾರು ಅಧ್ಯಾಯಗಳನ್ನೊಳಗೊಂಡು, ಹಲವಾರು ಅಧಿಕರಣ ಅಥವಾ ವಿಷಯಗಳನ್ನು ಹೊಂದಿದೆ. ಒಂದು ಅಧಿಕರಣವು ನಿಯಮದಂತೆ ಅನುಕ್ರಮವಾಗಿ ಐದು ಹಂತಗಳನ್ನು ಒಳಗೊಂಡಿರಬೇಕು, ಅವೆಂದರೆ:
೧) ವಿಷಯ ೨) ವಿಶಯ ಅಥವಾ ಸಂಶಯ (ಶಂಖೆ), ೩) ಪೂರ್ವಪಕ್ಷ ಅಥವಾ ಎದುರಾಳಿಯ ಅಭಿಪ್ರಾಯ, ೪) ಸಿದ್ಧಾಂತ ಅಥವಾ ದೃಢಪಡಿಸಿಕೊಂಡ ವಿಷಯ ಅಥವಾ ತೀರ್ಮಾನಗೊಂಡ ವಿಷಯ, ೫) ಸಂಗತಿ ಅಥವಾ ವಿವಿಧ ವಿಭಾಗಗಳೊಂದಿಗಿನ ಸಂಭಂದ.

          ಯಾವುದೇ ಅಧಿಕರಣದಲ್ಲಿ ಇರುವ ಸೂತ್ರಗಳ ಸಂಖ್ಯೆಯು ಅಧಿಕರಣದ ವಿಷಯದ ಮೇಲೆ ಆಧಾರಿತವಾಗಿರುತ್ತದೆ. ಸೂತ್ರಗಳಲ್ಲಿ ಇರುವ ದ್ವಂದ್ವದ ಪರಿಣಾಮದಿಂದಾಗಿ ಮತ್ತು ಅಧಿಕರಣದ ಶೀರ್ಷಿಕೆಗಳಿಂದಾಗಿ ಸೂತ್ರಗಳ ಸಂಖ್ಯೆಯು ವ್ಯಾಖ್ಯಾನಕಾರನಿಂದ ವ್ಯಾಖ್ಯಾನಕಾರನಿಗೆ ವ್ಯತ್ಯಾಸಗೊಂಡಿದೆ. ನಿಂಬಾರ್ಕರು (ಕ್ರಿ. ಪೂ. ೧೩ನೇ ಶತಮಾನ) ಕನಿಷ್ಟ ಅಧಿಕರಣಗಳನ್ನು (೧೫೧) ಪ್ರತಿಪಾದಿಸಿದರೆ ಮಧ್ವರು (ಕ್ರಿ. ಪೂ. ೧೨೩೮-೧೩೧೭) ಗರಿಷ್ಟ ಸಂಖ್ಯೆಯ (೨೨೩) ಅಧಿಕರಣಗಳನ್ನು ಪ್ರತಿಪಾದಿಸುತ್ತಾರೆ.

          ಸೂತ್ರದ ಆಶಯವು ’ಷಡ್ವಿಧಲಿಂಗ’ಗಳು ಅಥವಾ ಆರು ಸಂಕೇತಗಳ ತತ್ವಗಳಿಗನುಸಾರವಾಗಿ ವ್ಯಾಖ್ಯಾನಕಾರನಿಂದ ರೂಪಿಸಲ್ಪಡುತ್ತದೆ. ಅವುಗಳೆಂದರೆ: ’ಉಪಕ್ರಮ’ ಮತ್ತು ’ಉಪಸಂಹಾರ’ (ಪ್ರಾರಂಭ ಮತ್ತು ಅಂತ್ಯ), ’ಅಭ್ಯಾಸ’ (ಪುನರಾವರ್ತನೆ ಅಥವಾ ಪುನರುಕ್ತಿ), ’ಅಪೂರ್ವತಾ’ (ಹಿಂದೆ ಇಲ್ಲದ್ದು ಅಥವಾ ಹೊಸತು), ’ಫಲ’ (ಉದ್ದೇಶ),”ಅರ್ಥವಾದ’ (ಸ್ತುತಿ ಅಥವಾ ಗುಣಗಾನ), ಮತ್ತು ’ಉಪಪತ್ತಿ’ (ತರ್ಕಬದ್ಧತೆ).

          ಹೆಸರೇ ಸೂಚಿಸುವಂತೆ ಬ್ರಹ್ಮಸೂತ್ರವು ಮೂಲತಃ ಅತ್ಯುನ್ನತ ಸತ್ಯವಾದ ಬ್ರಹ್ಮದ ಬಗ್ಗೆ ಚರ್ಚಿಸುತ್ತದೆ, ಬ್ರಹ್ಮವೊಂದೇ ಸತ್ಯವಾಗಿದ್ದು, ಅದನ್ನು ಅರಿತುಕೊಂಡವರಿಗೆ ಜನನ ಮರಣಗಳ ಚಕ್ರದಿಂದ ಬಿಡುಗಡೆಯುಂಟಾಗುತ್ತದೆ.  ಬ್ರಹ್ಮನ ಇರುವಿಕೆಯ ಬಗ್ಗೆ ಅಧಿಕಾರಯುತವಾಗಿ ತಿಳಿಸುವುದು ಮತ್ತು ಅದರ ಸ್ವರೂಪವನ್ನು ತಿಳಿಸಿಕೊಡುವುದು ನಮಗೆ ಶ್ರುತಿಗಳು ಅಥವಾ ವೇದಗಳ ಭಾಗವಾದ ಜ್ಞಾನಕಾಂಡದಲ್ಲಿ (ಬ್ರಹ್ಮ ಮತ್ತು ಆತ್ಮನ ಸ್ವರೂಪವನ್ನು ತಿಳಿಸಿಕೊಡುವ ಭಾಗಗಳು) ಬರುವ ಉಪನಿಷತ್ತುಗಳು. ಮನುಷ್ಯನ ಬುದ್ಧಿವಂತಿಕೆ ಅಥವಾ ಅರಿವು ಇಂದ್ರಿಯಗಳ ಮೂಲಕ ಅನುಭವಕ್ಕೆ ಬರುವುದರಿಂದ ಬ್ರಹ್ಮನನ್ನು ಅದರಿಂದ ಅರಿಯುವುದು ಸಾಧ್ಯವಿಲ್ಲ; ಏಕೆಂದರೆ ಬ್ರಹ್ಮವು ಶುದ್ಧ ಚೈತನ್ಯವಾಗಿದ್ದು, ಅದು ಇಂದ್ರಿಯಗಳಿಗೆ ಗೋಚರವಾಗದು. ಅದಕಾರಣ ದ್ರಷ್ಟ್ರಾರರಾದ ಋಷಿಗಳಿಂದ ಗ್ರಹಿಸಲ್ಪಟ್ಟ ಶ್ರುತಿಗಳು ಮಾತ್ರವೇ ನಮಗೆ ಬ್ರಹ್ಮನ ಸ್ವರೂಪವನ್ನು ತಿಳಿಸಿಕೊಡಬಲ್ಲ ಏಕೈಕ ಸಾಧನ.  ಆದ್ದರಿಂದ ಬ್ರಹ್ಮಸೂತ್ರವು ಶ್ರುತಿಗಳ (ಉಪನಿಷತ್ತುಗಳ) ಆಧಾರದ ಮೇಲೆ ರಚಿಸಲ್ಪಟ್ಟಿದೆ.

          ಈಗ ಬ್ರಹ್ಮಸೂತ್ರಕ್ಕೆ ಮೂಲ ವಸ್ತುವಾದ ಉಪನಿಷತ್ತುಗಳ ವಾಕ್ಯಗಳ ಬಗ್ಗೆ ಚಿಂತಿಸೋಣ. ಇವುಗಳು ಒಂದಕ್ಕೊಂದು ವೈರುದ್ಧತೆಯಿಂದ ಕೂಡಿದ ನುಡಿಗಟ್ಟುಗಳಾಗಿ ಕಂಡುಬಂದದ್ದರಂದ ಬಾದರಾಯಣನು ಅವನ್ನೆಲ್ಲಾ ಸಮನ್ವಯಗೊಳಿಸಿ ಎಲ್ಲರೂ ಒಪ್ಪಿಕೊಳ್ಳಬಹುದಾದಂತಹ ಹೊಸ ತತ್ವವೊಂದನ್ನು ರೂಪಿಸಿದ. ಈ ರೀತಿ ಮಾಡುವಾಗ ಬಾದರಾಯಣನು ಸಹಜವಾಗಿಯೇ ಸನಾತನವಾದ ಉಪನಿಷತ್ತುಗಳನ್ನು ಆಯ್ಕೆ ಮಾಡಿಕೊಂಡ. ಬಾದರಾಯಣನು ತನ್ನ ಸೂತ್ರಗಳಲ್ಲಿ ಉಲ್ಲೇಖಿಸಿರುವ ಈ ಉಪನಿಷತ್ತುಗಳು ಮತ್ತು ಅವುಗಳಲ್ಲಿ ಆಯ್ದುಕೊಂಡ ವಾಕ್ಯಗಳಾದರೂ ಯಾವುವು? ಸೂತ್ರಗಳು ಬಹಳ ಸಂಕ್ಷಿಪ್ತವಾಗಿರುವುದರಿಂದ ಅವುಗಳ ಮೂಲ ಉಪನಿಷತ್ತಿನ ಬಗ್ಗೆ ಸೂಚನೆಗಳು ದೊರೆಯುವುದಿಲ್ಲ. ಆ ಉಪನಿಷತ್ತುಗಳ ಮೂಲಕ್ಕಾಗಿ ನಾವು ಭಾಷ್ಯಕಾರರು ಅಥವಾ ವ್ಯಾಖ್ಯಾನಕಾರರ ಮೇಲೆ ಅವಲಂಭಿಸಬೇಕಾಗುತ್ತದೆ; ಅದೃಷ್ಟವಶಾತ್ ಎಲ್ಲಾ ವ್ಯಾಖ್ಯಾನಕಾರರು ಅವುಗಳ ಬಗ್ಗೆ ಏಕರೂಪವಾದ ಸುಳಿವುಗಳನ್ನು ಕೊಡುತ್ತಾರೆ.

          ಆದಿಶಂಕರರ ಭಾಷ್ಯದ ಪ್ರಕಾರ ಮೊದಲ ೩೧ ಅಧಿಕರಣಗಳಲ್ಲಿ ವಿಷಯ ಅಥವಾ ವಿಷಯವಾಕ್ಯಗಳಿಗೆ ಸಂಭಂದಪಟ್ಟ ಪ್ರಮುಖವಾದ ನುಡಿಗಟ್ಟುಗಳು ಅಥವಾ ವಾಕ್ಯಗಳನ್ನು ಒದಗಿಸುವ ಉಪನಿಷತ್ತುಗಳು ಆವರಣದಲ್ಲಿ ನಮೂದಿಸಿರುವ ಸಂಖ್ಯೆಗನುಗುಣವಾಗಿ ಈ ರೀತಿ ಇವೆ.
         
ಛಾಂದೋಗ್ಯ (೧೪), ಬೃಹದಾರಣ್ಯಕ (೫), ಕಠಾ (೪), ತೈತ್ತರೀಯ (೨), ಮುಂಡಕ (೩), ಪ್ರಶ್ನ (೧) ಮತ್ತು ಕೌಶೀತಕಿ (೨),

          ಉಳಿದ ದರ್ಶನಕಾರರ ಅಭಿಪ್ರಾಯಗಳನ್ನು ಮತ್ತು ಅವರು ಬೇರೆ ಬೇರೆ ಉಪನಿಷತ್ತುಗಳ ವಾಕ್ಯ ಪಂಕ್ತಿಗಳನ್ನು ಬಳಸಿಕೊಳ್ಳುವುದರ ಔಚಿತ್ಯವನ್ನು ಬಾದರಾಯಣನು ತನ್ನ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದಾನೆ. ಹೀಗೆ ಉಲ್ಲೇಖಿಸಲ್ಪಟ್ಟಿರುವ ಇತರ ದರ್ಶನಕಾರರೆಂದರೆ; ಆತ್ರೇಯ, ಆಶ್ಮರಾಥ್ಯ, ಔದುಲೋಮಿ, ಕಾರ್ಷ್ಣಾಜನಿ, ಕಾಶಕೃತ್ಸ್ನ, ಜೈಮಿನಿ ಮತ್ತು ಬಾದರಿ. ಸ್ವಲ್ಪ ಹೆಚ್ಚು ಕಡಿಮೆ ಈ ಎಲ್ಲಾ ಹೆಸರುಗಳು ಪುರಾತನ ಕೃತಿಗಳಾದ ಶ್ರೌತಸೂತ್ರ ಮತ್ತು ಗೃಹ್ಯಸೂತ್ರಗಳಲ್ಲಿ ಕಂಡುಬರುತ್ತವೆ. ಕೆಲವು ಕೃತಿಕಾರರು ಬಾದರಾಯಣನ ಕಾಲಕ್ಕಿಂತಲೂ ಹಿಂದಿನವರಾದರೆ ಜೈಮಿನಿ ಮೊದಲಾದವರು ಅವನ ಸಮಕಾಲೀನರೆಂದು ತೋರುತ್ತದೆ. ಬಾದರಾಯಣನು ಅವರೊಂದಿಗೆ ಅಭಿಪ್ರಾಯಭೇದವನ್ನು ಹೊಂದಿದ್ದರೂ ಕೂಡ ಅವರ ಅಭಿಪ್ರಾಯಗಳನ್ನು ಖಂಡಿಸಿಲ್ಲ; ಬಹುಶಃ ಅವರು ಉಪನಿಷತ್ತುಗಳು ಅತ್ಯುನ್ನತ ಸತ್ಯವಾದ ಬ್ರಹ್ಮವನ್ನು ಅರಿಯುವಲ್ಲಿ ಅಧಿಕಾರಯುತವಾದ ಮೂಲಗ್ರಂಥಗಳೆಂದು ಒಪ್ಪಿಕೊಂಡಿದ್ದರೆನ್ನುವುದು ಒಂದು ಕಾರಣವಾದರೆ ಮತ್ತೊಂದು ಕಾರಣ ಅವರು ಕೂಡ  ಖ್ಯಾತಿವೆತ್ತ ವೇದಾಂತಿಗಳಾಗಿದ್ದರು ಎನ್ನುವುದು. 

ಗುಣ ಮತ್ತು ಸ್ವಭಾವ

ಸರ್ವಸ್ಯ ಹಿ ಪರೀಕ್ಷ್ಯಂತೇ ಸ್ವಭಾವಾ ನೇತರೇ ಗುಣಾಃ ।
ಅತೀತ್ಯ ಹಿ ಗುಣಾನ್ ಸರ್ವಾನ್ ಸ್ವಭಾವೋ ಮೂರ್ಧ್ನಿ ವರ್ತತೇ ॥ 

ಎಲ್ಲರೂ (ಎಲ್ಲರ) ಮನುಷ್ಯರ ಸ್ವಭಾವವನ್ನು ಪರೀಕ್ಷಿಸುತ್ತಾರೆ; ಇತರ ಗುಣಗಳನ್ನಲ್ಲ. ಏಕೆಂದರೆ ಎಲ್ಲಗುಣಗಳನ್ನೂ ಮೀರಿಸಿ ಸ್ವಭಾವವು ಎಲ್ಲವುದಕ್ಕೂ ಮೇಲಿರುತ್ತದೆ. ಗುಣ ಮತ್ತು ಸ್ವಭಾವ ಪ್ರತ್ಯೇಕವಾಗಿರುತ್ತವೆ

Thursday, August 30, 2012

ಹೊಸಬೆಳಕು


WE CONTINUE TO DISCUSS THE TRUTH AND MYTH ABOUT JYOTHISA IN THE NEXT EPISODE AND FOLLOWING THAT AN INTERESTING EPISODE ON MISCONCEPTIONS ABOUT VAASTU. THIS ARTICLE IN SUDHA MAGAZINE IS A RECOGNITION FOR OUR EFFORTS. DONT MISS HOSABELAKU EVERY SUNDAY MORNING 9.30 AM ON DD CHANDANA.
ಇದೇ ಭಾನುವಾರ  ಬೆಳಿಗ್ಗೆ 9.30ಕ್ಕೆ  ಚಂದನ ದೂರದರ್ಶನದಲ್ಲಿ ’ಹೊಸಬೆಳಕು "ದಾರಾವಾಹಿ ನೋಡಿ,  ವೇದ ವಿವರಣೆಯನ್ನು     ಶ್ರೀಸುಧಾಕರಶರ್ಮರ ಸರಳ ಮಾತುಗಳಲ್ಲಿ ಕೇಳಿ.

ಈ ಲೇಖನ ಓದಲು  ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ದದು ಮಾಡಿಕೊಂಡು ಓದಿ.



Wednesday, August 29, 2012

ಈಶಾವಾಸ್ಯೋಪನಿಷದ್





ಈಶಾವಾಸ್ಯೋಪನಿಷದ್ 

ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತ:|
ತತ್ರ ಕೋ ಮೋಹ: ಕ: ಶೋಕ ಏಕತ್ವಮನುಪಶ್ಯತ:|| 7||

ಅರ್ಥ:
ಯಸ್ಮಿನ್ ಸರ್ವಾಣಿ ಭೂತಾನಿ= ಯಾವನಲ್ಲಿ ಎಲ್ಲಾ ಜೀವರಾಶಿಗಳೂ 
ಆತ್ಮ ಏವ ಅಭೂತ್= ಆತ್ಮ ಮಾತ್ರವೇ ಆಗಿರುತ್ತವೆಯೋ
ವಿಜಾನತ:= ತಿಳಿದವನಿಗೆ
ತತ್ರ= ಆ ಅವಸ್ಥೆಯಲ್ಲಿ
ಏಕತ್ವಮ್= ಆತ್ಮೈಕತ್ವವನ್ನು
ಅನುಪಶ್ಯತ:=ಅವಲೋಕಿಸುವವನಿಗೆ
ಕ: ಮೋಹ:= ಯಾವ ಮೋಹವು?
ಕ: ಶೋಕ:= ಯಾವ ದು:ಖವು?

ಸಪರ್ತಗಾತ್ ಶುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಪಾಪವಿದ್ಧಮ್|
ಕವಿರ್ಮನೀಷೀ ಪರಿಭೂ: ಸ್ವಯಂಭೂ:  ಯಥಾತರ್ಥ್ಯತೋsರ್ಥಾನ್
ವ್ಯವಧಾತ್ ಶಾಶ್ವತೀಭ್ಯ: ಸಮಾಭ್ಯ:||8||

ಅರ್ಥ:
ಸ= ಯಥೋಕ್ತ ಆತ್ಮನು
ಪರ್ಯಗಾತ್= ಎಲ್ಲಾ ಕಡೆಗೂ ವ್ಯಾಪಿಸಿದವನು
ಶುಕ್ರಂ=ಶುಭ್ರವಾಗಿರುವವನು
ಅಕಾಯಂ= ಅಶರೀರಿಯು
ಅವ್ರಣಂ= ಗಾಯಗಳಿಲ್ಲದವನು
ಅಸ್ನಾವಿರಂ= ನರಗಳಿಲ್ಲದವನು 
ಶುದ್ಧಂ= ಅವಿದ್ಯಾಮಲರಹಿತನು
ಕವಿ:=ದೃಷ್ಟಾರನು
ಮನೀಷೀ=ಮನಸ್ಸನ್ನು ಆಳುವವನು
ಪರಿಭೂ:=ಎಲ್ಲರಲ್ಲೂ ಇರುವವನು
ಸ್ವಯಂಭೂ:=ತನ್ನ ತಾನೇ ಇರುವವನೂ
ಶಾಶ್ವತೀಭ್ಯ: ಸಮಾಭ್ಯ:ಅರ್ಥಾನ್ ಯಥಾತಥ್ಯತ: ವ್ಯವಧಾತ್= ಶಾಶ್ವತವಾದ ಸಂವತ್ಸರ ಎಂಬ ಹೆಸರುಳ್ಳ  ಪ್ರಜಾಪತಿಗಳಿಗೆ ಸತ್ಯವಾಗಿ ಕರ್ತವ್ಯಾದಿಗಳನ್ನು ವಿಭಾಗ ಮಾಡಿಕೊಟ್ಟನು.

ಈ ಮಂತ್ರಗಳಿಗೆ ಭಾವಾರ್ಥವನ್ನೂ ಸಹ  "ಉಪನಿಷದಾಮೃತ" ದಲ್ಲಿ ಕೊಡಲಾಗಿದೆ. ಆದರೆ ವೇದಸುಧೆಯ  ಅಭಿಮಾನೀ  ವಿದ್ವಾಂಸರು  ಸರಳವಾಗಿ ಈ ಮಂತ್ರಗಳ ಸಾರವನ್ನು  ನಮ್ಮೊಡನೆ ಹಂಚಿಕೊಳ್ಳಲು ವಿನಂತಿಸುವೆ.

ಆಧಾರ:
ಆಡಿಯೋ ಕೃಪೆ: ಯೂಟ್ಯೂಬ್

ಮಂತ್ರ-ಅರ್ಥ:
"ಉಪನಿಷದಾಮೃತ"
ಸಂಪಾದಕರು: ರತ್ನಾಕರ ಹ. ಕುಲಕರ್ಣಿ
ಅಧ್ಯಾತ್ಮ ಭಂಡಾರ, ಶಾಂತಿಕುಟೀರ, ಕನ್ನೂರ
ವಿಜಾಪುರ-ಜಿಲ್ಲೆ


ಯೋಚಿಸಲೊ೦ದಿಷ್ಟು... ೫೭



೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ!
೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ!
೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು ಹಾಳು ಮಾಡುವುದಕ್ಕಿ೦ತಲೂ ನಮ್ಮನ್ನೇ ಹೆಚ್ಚು ಹಾನಿಗೊಳಿಸುತ್ತವೆ!
೪. ನಮ್ಮ ಮನಸ್ಸೂ ಪ್ರಕೃತಿಯ೦ತೆಯೇ- ಕೆಲವೊಮ್ಮೆ ಹೊಸ ಹೊಸ ಯೋಚನೆಗಳು ಹುಟ್ಟಿಕೊ೦ಡರೆ ಕೆಲವೊಮ್ಮೆ ಯಾವುದೂ ಇಲ್ಲದ ಬೋಳು ಮರದ೦ತೆ ಖಾಲಿ ಖಾಲಿಯಾಗಿ ಬಿಡುತ್ತದೆ!
೫. ಬೇರೊಬ್ಬರನ್ನು ನೋಯಿಸಿ ನಾವು ಪಡುವ ಸ೦ತಸ ಕ್ಷಣಿಕವಾದದ್ದು!
೬. ಸತತ ಸ೦ಪರ್ಕವೇ ಸ್ನೇಹದ ಭದ್ರ ಬುನಾದಿ.
 . ಜೀವನವೊ೦ದು ಏಕಮುಖವಾದ ಹಾದಿಯಿದ್ದ೦ತೆ! ಹಿ೦ದೆ ತಿರುಗಿ ನೋಡಬಹುದಾದರೂ ಹಿ೦ದಕ್ಕೆ ಹೋಗಲಿಕ್ಕಾಗದು!
. ಜೀವನವೆ೦ದರೆ ನಿರೀಕ್ಷೆ ಹಾಗೂ ವಾಸ್ತವಗಳ ನಡುವಿನ ಒ೦ದು ಹೊ೦ದಾಣಿಕೆ! ಪ್ರತಿಯೊ೦ದೂ ಹ೦ತದಲ್ಲಿಯೂ ನಿರೀಕ್ಷೆ ಹುಸಿಯಾದಾಗ, ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ!
೯. ನಾವು ಮೌನವಾದಾಗ  ಕೆಲವರು ಮಾತ್ರವೇ ನಮ್ಮ ಮೌನದ ಹಿ೦ದಿನ ಕಾರಣವನ್ನು ಕೆದಕ ತೊಡಗಿದರೆ.. ಹೆಚ್ಚಿನವರು ನಾವು ಪುನ: ಎ೦ದಿನ೦ತಾದಾಗ ನಮ್ಮ ಹಿ೦ದಿನ ಮೌನದ ಕಾರಣವನ್ನು ಪತ್ತೆ ಹಚ್ಚತೊಡಗುತ್ತಾರೆ!
೧೦. ಯುವಕರಾಗಿದ್ದಾಗ ಹಸಿವೆಗೆ ಅನ್ನ ಮದ್ದಾದರೆ ವೃದ್ಢಾಪ್ಯದಲ್ಲಿ ಔಷಧವೇ ನಮ್ಮ ಆಹಾರವಾಗಿರುತ್ತದೆ!
೧೧. ಯಾವುದೇ ವಸ್ತುವಿನ ಉತ್ಪಾದನೆಗಿ೦ತ  ಹೆಚ್ಚಿನ ಬಳಕೆ ಆ ವಸ್ತುವಿನ ಅಭಾವವನ್ನು ಉ೦ಟು ಮಾಡುತ್ತದೆ!
೧೨.  ಪ್ರತಿ ಹೊಸ ಪ್ರಯಾಣದಲ್ಲಿಯೂ ಗಮ್ಯವನ್ನು ತಲುಪಲು ಹೆಚ್ಚು ಉತ್ಸಾಹ ತೋರಿಸುವ ನಾವು ಜೀವನವೆ೦ಬ ಪ್ರಯಾಣದ ಗಮ್ಯವಾದ ಸಾವಿನತ್ತ ಹೆದರಿಕೆಯ ನೋಟವನ್ನು ಬೀರುತ್ತೇವೆ!
೧೩. ನಮ್ಮ ವೈರಿಯೊಬ್ಬ ನಮ್ಮ  ಸ್ನೇಹಿತನಾಗಿ ಬದಲಾಗಬಹುದು.. ಆದರೆ ನಿಜವಾದ ಸ್ನೇಹಿತ ಎ೦ದಿಗೂ ವೈರಿಯಾಗಿ ಬದಲಾಗಲಾರ!
೧೪. ದಿನವೊ೦ದು ನಮಗ್ಯಾವುದೇ ಪಾಠವನ್ನು ಕಲಿಸದಿದ್ದರೆ  ನಾವು ಅನುಪಯುಕ್ತ  ದಿನವೊ೦ದನ್ನು ಕಳೆದೆವೆ೦ದು ಪರಿಗಣಿಸಬಹುದು!
೧೫.  ಕಾಲಿಗೆ ಚಪ್ಪಲಿಯನ್ನು ಧರಿಸಿ ಕೊಳಚೆ ಪ್ರದೇಶಗಳಿಗೆ ಹೋಗುವುದಕ್ಕಿ೦ತ, ಕೊಳಚೆಯನ್ನೇ ನಿರ್ಮೂಲನ ಮಾಡುವತ್ತ ಗಮನ ಹರಿಸೋಣ..!

ಬುದ್ಧಿವಂತರ ಸಮಯ


ಕಾವ್ಯ ಶಾಸ್ತ್ರ ವಿನೋದೇನ ಕಾಲೋ ಗಚ್ಚತಿ ಧೀಮತಾಂ |
ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನವಾ ॥

ಕಾವ್ಯ, ಶಾಸ್ತ್ರ, ಸಾಹಿತ್ಯ ಇವುಗಳನ್ನು ಓದಿ ಅದರಲ್ಲಿ ಸಂತೋಷಪಡುವುದರಲ್ಲಿ ಬುದ್ಧಿವಂತರ ಸಮಯ ಕಳೆಯುತ್ತದೆ. ಆದರೆ ಮೂರ್ಖನ ಸಮಯವು ಜೂಜು, ನಿದ್ರೆ, ಅಥವಾ ಜಗಳಗಳಲ್ಲಿ ಕಳೆದು ಹೋಗುತ್ತದೆ 

Tuesday, August 28, 2012

'ಮೀಮಾಂಸಾ' ದರ್ಶನ


ಪರಿಚಯ

          ಹಿಂದೂ ತತ್ವಶಾಸ್ತ್ರದಲ್ಲಿ ಯಾವುದಾದರೂ ಪದ್ದತಿಯಲ್ಲಿ ಗ್ರಂಥ ಕರ್ತೃವಿಗಿಂತ ಆ ಗ್ರಂಥವೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ಅದು 'ಮೀಮಾಂಸಾ' ದರ್ಶನ ಮಾತ್ರವೇ. ಇದನ್ನು 'ಪೂರ್ವಮೀಮಾಂಸ ದರ್ಶನ'ವೆಂದೂ ಕರೆದಿದ್ದಾರೆ; ಇದು ಪ್ರಾಥಮಿಕವಾಗಿ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಕ್ಲಿಷ್ಟವಾದ ಯಜ್ಞ-ಯಾಗಾದಿಗಳ ವಿಧಿ-ವಿಧಾನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದನ್ನು ಕ್ರಮಬದ್ಧವಾಗಿ ತಿಳಿಸಿಕೊಡುತ್ತದೆ.

ವೈದಿಕ ವಿಧಿ-ವಿಧಾನಗಳು ನಂಬುವುದೇನೆಂದರೆ:
(೧) 'ಆತ್ಮ' ಎನ್ನುವ ವಸ್ತುವೊಂದು ಇದ್ದು; ಅದು ದೇಹದ ಮರಣವನ್ನು ಅಧಿಗಮಿಸಿ ನಾವು ಮಾಡಿದ ಯಜ್ಞಯಾಗಾದಿಗಳ ಫಲವನ್ನು ಸ್ವರ್ಗದಲ್ಲಿ ಅನುಭವಿಸುತ್ತದೆ.
(೨) ಅಗೋಚರ ಶಕ್ತಿಯೆನ್ನುವುದೊಂದಿದ್ದು ಅದು ಯಜ್ಞಯಾಗಾದಿಗಳ ಪರಿಣಾಮವನ್ನು ಜೋಪಾನವಾಗಿ ಭದ್ರಪಡಿಸುತ್ತದೆ.
(೩) ವೇದಗಳು 'ಅಸತ್ಯ'ವಲ್ಲ
(೪) ಈ ಪ್ರಪಂಚವು ನಿಜವಾದುದು;
(೫) ನಮ್ಮ ಜೀವನ ಮತ್ತು ನಾವು ಇಲ್ಲಿ ಕೈಗೊಂಡ ಕಾರ್ಯಗಳು ನಿಜ ಅವು ಕೇವಲ ಸ್ವಪ್ನದಂತಲ್ಲ.

ಮೂಲ ಕೃತಿಗಳು

          ಜೈಮಿನಿ (ಕ್ರಿ.ಶ. ೨೦೦) ವಿರಚಿತ 'ಮೀಮಾಂಸಾಸೂತ್ರಾ' ಗ್ರಂಥವೇ ಈ ಪದ್ಧತಿಗೆ ಮೂಲ ಗ್ರಂಥ. ಅದು ಒಂದು ಬೃಹದ್ಗ್ರಂಥವಾಗಿದ್ದು ಅದರಲ್ಲಿ ೨೫೦೦ ಸೂತ್ರಗಳನ್ನೊಳಗೊಂಡ ೧೨ ಅಧ್ಯಾಯಗಳು ಮತ್ತು ೬೦ ಉಪವಿಭಾಗಗಳು ಇವೆ. ಶಬರ ಸ್ವಾಮಿನ್ (ಕ್ರಿ.ಶ.೪೦೦) ಬರೆದ 'ಭಾಷ್ಯ'ವೇ ಮೀಮಾಂಸ ಸೂತ್ರಗಳಿಗೆ ಅಧಿಕೃತ ವ್ಯಾಖ್ಯಾನವನ್ನು ಕೊಡುತ್ತದೆ. ಶಬರ ಭಾಷ್ಯಕ್ಕೆ ಎರಡು ಟೀಕಾಗ್ರಂಥಗಳಿವೆ - ಪ್ರಭಾಕರ(ಕ್ರಿ.ಶ. ೬೫೦) ವಿರಚಿತ ಇನ್ನೂ ಕೈಬರಹದ ರೂಪದಲ್ಲಿ ಲಭ್ಯವಿರುವ 'ಬೃಹತಿ' ಗ್ರಂಥವು ಮೊದಲನೆಯದು ಹಾಗೂ ಕುಮಾರಿಲ ಭಟ್ಟ(ಕ್ರಿ.ಶ. ೭೦೦)ನು ಮೂರು ಭಾಗಗಳಲ್ಲಿ ಬರೆದ; 'ಶ್ಲೋಕವಾರ್ತಿಕ', 'ತಂತ್ರವಾರ್ತಿಕ' ಮತ್ತು 'ಟಪ್ಟೀಕಾ' ಎರಡೆನೆಯದು. ಶಾಲಿಕನಾಥ(ಪ್ರಭಾಕರನ ಶಿಷ್ಯ)ನ 'ಪ್ರಕರಣಪಂಚಿಕ', ಪಾರ್ಥಸಾರಥಿ(ಕ್ರಿ.ಶ. ೯೦೦)ಯ 'ಶಾಸ್ತ್ರದೀಪಿಕ', ಮಾಧ್ವ ವಿದ್ಯಾರಣ್ಯ(ಕ್ರಿ.ಶ. ೧೩೫೦) ವಿರಚಿತ 'ನ್ಯಾಯಮಾಲಾವಿಸ್ತಾರ' ಮತ್ತು ಲೌಗಾಕ್ಷಿ ಭಾಸ್ಕರ(೧೭ನೇ ಶತಮಾನ)ನ  'ಅರ್ಥಸಂಗ್ರಹ' ಈ ದರ್ಶನದ ಬಗ್ಗೆ ಲಭ್ಯವಿರುವ ಇತರೇ ಕೃತಿಗಳು.
         
ಜ್ಞಾನದ ಬಗೆಗಿನ ಸಿದ್ಧಾಂತ

          ವೇದಗಳ ಅಂತಿಮ ಪ್ರಭುತ್ವವನ್ನು ಸ್ಥಾಪಿಸಲು 'ಮೀಮಾಂಸ ದರ್ಶನ'ವು ಒಂದು ವಿವರವಾದ ಪದ್ಧತಿಯನ್ನು ಅಭಿವೃದ್ಧಿ ಪಡಿಸಿದೆ ಮತ್ತು ಇದನ್ನು ಇತರೇ ದರ್ಶನಗಳ ಪ್ರತಿಪಾದಕರು; ಅದರಲ್ಲೂ ವಿಶೇಷವಾಗಿ 'ವೇದಾಂತ ದರ್ಶನ'ಕಾರರು ಕೂಡ ಒಪ್ಪಿಕೊಂಡಿದ್ದಾರೆ.

          ಯಾವುದೇ ಒಂದು ಜ್ಞಾನವು ಮಾನ್ಯತೆಯನ್ನು ಗಳಿಸಬೇಕಾದರೆ ಅದು ಮೂರು ನಿಯಮಗಳನ್ನು ಪೂರೈಸಬೇಕಾಗುತ್ತದೆ. ಅವೆಂದರೆ:
೧) ಅದು ಪೂರ್ವದಲ್ಲಿ ಗೊತ್ತಿಲ್ಲದ ಹೊಸದೊಂದು ಮಾಹಿತಿಯನ್ನು ಹೊರಹಾಕಬೇಕು.
೨) ಅದು ಪ್ರಚಲಿತವಿರುವ ಯಾವುದಾದರೂ ಜ್ಞಾನದಿಂದ ಸುಳ್ಳೆಂದು ನಿರೂಪಿತವಾಗಬಾರದು.
೩) ಆ ಜ್ಞಾನವನ್ನು ಉಂಟು ಮಾಡುವ ಪರಿಸ್ಥಿತಿಗಳು ದೋಷಮುಕ್ತವಾಗಿರಬೇಕು.  

          'ಮೀಮಾಂಸ'ವು ಎರಡು ವಿಧವಾದ ಜ್ಞಾನವನ್ನು ಒಪ್ಪಿಕೊಳ್ಳುತ್ತವೆ: 'ಪ್ರತ್ಯಕ್ಷ' (ತಕ್ಷಣದ್ದು) ಮತ್ತು 'ಪರೋಕ್ಷ'(ತದನಂತರದ್ದು). 'ಪರೋಕ್ಷ ಜ್ಞಾನ'ವು ಐದು ಬಗೆಯದಾಗಿರುತ್ತದೆ; 'ಅನುಮಾನ'(ನಿಷ್ಕರ್ಷೆ/ಕ್ರಮಬದ್ಧ ಜ್ಞಾನ), 'ಉಪಮಾನ'(ಹೋಲಿಕೆ), 'ಶಬ್ದ'(ನುಡಿ ಪ್ರಮಾಣ) - ಇದನ್ನು 'ಆಪ್ತವಾಕ್ಯ'(ನಂಬಲರ್ಹ ವ್ಯಕ್ತಿಯ ಹೇಳಿಕೆ)ವೆಂದೂ ಕರೆದಿದ್ದಾರೆ, 'ಅರ್ಥಾಪತ್ತಿ' (ಸಮರ್ಥನೆ ಅಥವಾ ಅನಿಸಿಕೆ) ಮತ್ತು 'ಅನುಪಲಬ್ಧಿ'(ಮನಗಾಣದೇ ಇರುವುದು/ಗ್ರಹಿಸಲಾಗದ್ದು). ಇವುಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು:

          'ಪ್ರತ್ಯಕ್ಷ' (ನೇರವಾದ ಅಥವಾ ತಕ್ಷಣದ ಗ್ರಹಿಕೆ/ತಿಳಿವು/ಅನುಭವ)ವು ಎರಡು ವಿಧವಾದ ಹಂತಗಳಲ್ಲಿ ಅಭಿವೃದ್ಧಿಯಾಗುತ್ತದೆ. ಜ್ಞಾನೇಂದ್ರಿಯವೊಂದು ಯಾವುದಾದರೂ ಒಂದು ವಸ್ತುವಿನ ಸಂಪರ್ಕಕ್ಕೆ ಬಂದ ಕೂಡಲೇ, ಏನೋ ಇದೆ ಎನ್ನುವುದರ ಬಗ್ಗೆ ಸಾಮಾನ್ಯ ತಿಳುವಳಿಕೆ ಉಂಟಾಗುತ್ತದೆ. ಇದನ್ನು 'ನಿರ್ವಿಕಲ್ಪಪಕ-ಪ್ರತ್ಯಕ್ಷ' ಎಂದು ಕರೆಯುತ್ತಾರೆ. ಮುಂದಿನ ಹಂತದಲ್ಲಿ, ಆ ವಸ್ತುವಿನ ಎಲ್ಲಾ ವಿವರಗಳು ಪೂರ್ವಾನುಭವದ ಜ್ಞಾನದಿಂದ ತಿಳಿಯಲ್ಪಡುತ್ತದೆ. ಇದನ್ನು 'ಸವಿಕಲ್ಪಕ-ಪ್ರತ್ಯಕ್ಷ' ಎನ್ನುತ್ತಾರೆ.

          ನಾವು ಮೂಲ ವಸ್ತುವಿಗೆ ಸಂಭಂದಿಸಿದ 'ಲಿಂಗ' ಅಥವಾ 'ಸಂಕೇತ'ವನ್ನು ನೋಡಿದಾಗ, 'ಅನುಮಾನ'(ಕ್ರಮಬದ್ಧ ಜ್ಞಾನ)ವು ಆ ವಸ್ತುವಿನ ತಿಳುವಳಿಕೆಯನ್ನು ಪರೋಕ್ಷವಾಗಿ ಒದಗಿಸುತ್ತದೆ. ಉದಾಹರಣೆಗೆ, ದೂರದ ಬೆಟ್ಟದ ಮೇಲೆ ಹೊಗೆಯನ್ನು ನೋಡಿ ಅಲ್ಲಿ ಬೆಂಕಿಯಿದೆಯೆಂದು ತೀರ್ಮಾನಿಸುತ್ತೇವೆ (ಬೆಂಕಿಯನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ ಕೂಡ); ಏಕೆಂದರೆ ನಮ್ಮ ಪೂರ್ವ ಅನುಭವದಲ್ಲಿ ಹೊಗೆಯು ಅವಿನಾಭಾವವಾಗಿ ಬೆಂಕಿಯ ಜೊತೆಯಲ್ಲಿರುವುದನ್ನು ಗಮನಿಸಿರುತ್ತೇವಾದ್ದರಿಂದ.

          'ಉಪಮಾನ'(ಹೋಲಿಕೆ)ವು ಇನ್ನೊಂದು ಜ್ಞಾನದ ಮೂಲ. ಒಂದು ಮೂಗಿಲಿಯನ್ನು ನೋಡಿದ ನಂತರ ಅದು ತಾನು ಹಿಂದೆ ನೋಡಿದ ಇಲಿಯಂತೆ ಇರುವುದನ್ನು ವ್ಯಕ್ತಿಯು ನೆನೆಪಿಸಿಕೊಳ್ಳುತ್ತಾನೆ. ಅಗ ಅವನ ಅರಿವಿಗೆ ತಾನು ಗ್ರಹಿಸಿದ ಮೂಗಿಲಿಯು, ಇಲಿಯಂತಿರುವುದು ಕಂಡುಬರುವುದು. ಈ ರೀತಿಯ ಜ್ಞಾನವು ನಮಗೆ ಉಪಮಾನದಿಂದ ಲಭ್ಯವಾಗುತ್ತದೆ.

          ’ಶಬ್ದ'(ನುಡಿ/ವಾಕ್ಯ ಸಾಕ್ಷ್ಯ)ವು ಮುಂದಿನ ಜ್ಞಾನದ ಮೂಲ. 'ಮೀಮಾಂಸ ದರ್ಶನ'ವು ವೇದಗಳ ನಿರ್ವಿವಾದಿತ ಪ್ರಾಮಾಣ್ಯವನ್ನು ನಿರೂಪಿಸ ಬೇಕಾದುದರಿಂದ; ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಿದೆ.

          ನಂಬಲರ್ಹ ವ್ಯಕ್ತಿಯ ನುಡಿಗಳು ಸತ್ಯವೆಂದು ಗಣಿಸಲ್ಪಡುತ್ತವೆ, ಇದನ್ನೇ 'ಆಪ್ತವಾಕ್ಯ'ವೆಂದಿದ್ದಾರೆ.

          'ಶಬ್ದ' ಪ್ರಮಾಣವು ಎರಡು ರೀತಿಯದಾಗಿರುತ್ತದೆ; ಪೌರುಷೇಯ (ವ್ಯಕ್ತಿಗತ ಅಥವಾ ಆಪ್ತವಾಕ್ಯ) ಮತ್ತು ಅಪೌರುಷೇಯ (ಮಾನವಾತೀತ). ಎರಡನೆಯದು  ವೇದಗಳನ್ನು ಸೂಚಿಸುತ್ತದೆ ಏಕೆಂದರೆ ಅವು ಮಾನವ  ಮಾತ್ರರಿಂದ ಸೃಷ್ಟಿಸಲ್ಪಟ್ಟಿಲ್ಲ. ವೇದಗಳು ಅಂತಿಮ ಪ್ರಮಾಣಗಳಾಗಿದ್ದು ಅವು ಕಟ್ಟಳೆಗಳನ್ನು ನಿರ್ದೇಶಿಸುವ ಗ್ರಂಥಗಳಾಗಿವೆ ಮತ್ತು ಅವು ನಮಗೆ ಅಗೋಚರವಾದ ವಿಷಯಗಳನ್ನು ತಿಳಿಸುತ್ತವೆ ಮತ್ತು ಅಜ್ಞಾನವನ್ನು ಪರಿಹರಿಸುತ್ತವೆ. ಮತ್ತು ಅವುಗಳ ಮೂಲ ಉದ್ದೇಶ ಮತ್ತು ಗುರಿ ಯಜ್ಞಯಾಗಾದಿಗಳ ಕ್ರಿಯೆಯನ್ನು ಪ್ರಚುರಪಡಿಸುವುದೇ ಆಗಿದೆ.

          ವೇದಗಳು ನಿತ್ಯವಾಗಿದ್ದು, ಮುದ್ರಿತ ಪುಸ್ತಕ ಅಥವಾ ಬಾಯಿಂದ ಬಾಯಿಗೆ ಹರಿದ ಮಂತ್ರಗಳಾಗಿರದೆ ಅವುಗಳಲ್ಲಿ ನಿತ್ಯ ಸತ್ಯವಾದ ಬೋಧನೆಗಳಿವೆ. ಈ ಬೋಧನೆಗಳನ್ನು ಋಷಿ ಮುನಿಗಳು ಪ್ರತಿ ಯುಗದಲ್ಲಿಯೂ ನಮಗೆ ತಿಳಿಸಿ ಕೊಡುತ್ತಾರೆ.

          ವೇದಗಳು ಮುಖ್ಯವಾಗಿ ಯಜ್ಞ-ಯಾಗಾದಿಗಳು ಮತ್ತು ಅವಕ್ಕೆ ಸಂಭಂದಪಟ್ಟ ವಿಧಾನಗಳನ್ನು ಆದೇಶಿಸುವುದರಿಂದ ('ವಿಧಿ'ಸುವುದರಿಂದ); ಯಾವ ವಾಕ್ಯಗಳಲ್ಲಿ ಆದೇಶಾತ್ಮಕ ಕ್ರಿಯಾಪದಗಳು - 'ವಿಧಿಲಿನ್' ಅಡಕವಾಗಿಯೋ (ಉದಾಹರಣೆಗೆ; "ಸ್ವರ್ಗಕಾಮೋ ಯಜೇತ" - ಸ್ವರ್ಗವನ್ನು ಭಯಸುವವನು ಯಾಗವನ್ನು ಮಾಡಬೇಕು ಎನ್ನುವ ಆದೇಶಾತ್ಮಕ ಭಾವನೆ) ಅಂತಹವುಗಳನ್ನು ಮಾತ್ರ 'ವಿಧಿ'ಗಳೆಂದು ಅಥವಾ 'ಅಧಿಕಾರಯುತ'ವಾದವುಗಳೆಂದು ಪರಿಗಣಿಸಿ ಉಳಿದವುಗಳನ್ನು ಅವಕ್ಕೆ ಪೂರಕವಾಗಿರುವ ವಾಕ್ಯಗಳೆಂದು ಪರಿಗಣಿಸ ಬೇಕು. ಈ ರೀತಿಯ ಕ್ರಿಯಾಪದಗಳು ಕೇಳುಗರಲ್ಲಿ ತಾವು ಯಾಗವನ್ನು ಮಾಡಬೇಕು ಎನ್ನುವ  ಬಯಕೆಯನ್ನುಂಟು ಮಾಡುವ ಅಂತಃಶಕ್ತಿಯಿಂದ ಕೂಡಿರುತ್ತವೆ. ಇದನ್ನೇ 'ಭಾವನಾ' ಎಂದು ಹೇಳುತ್ತಾರೆ. ಬಯಕೆಯನ್ನು ಅಡಕವಾಗಿಸಿಕೊಂಡ ವೇದದ ನುಡಿಗಳನ್ನು 'ಶಬ್ದಿಭಾವನ' (ಶಬ್ದ=ನುಡಿ) ಎನ್ನುತ್ತಾರೆ. ಈ ರೀತಿಯ ನುಡಿಗಳನ್ನು ಕೇಳಿದಾಕ್ಷಣ, ಕೇಳಿದವನಿಗೆ ಅದರಿಂದ ಪ್ರಯೋಜನವನ್ನು ಪಡೆಯುವ ಉತ್ಕಟ ಬಯಕೆಯೂ ಉಂಟಾಗುತ್ತದೆ. ಈ ರೀತಿಯ ಬಯಕೆಯುಂಟಾದಾಗ ಅದನ್ನು 'ಅರ್ಥಿಭಾವನ' (ಅರ್ಥಿ=ಉಪಯೋಗ/ಪ್ರಯೋಜನ) ಎಂದು ಕರೆಯಲಾಗಿದೆ.

          ಮೇಲೆ ಹೇಳಿರುವ ವಿಷಯವನ್ನು ಸ್ಪಷ್ಟವಾಗಿ ಅರಿಯಬೇಕೆಂದರೆ ವೇದದಲ್ಲಿನ ವಾಕ್ಯಗಳನ್ನು ಸರಿಯಾದ ಅರ್ಥ ಮತ್ತು ವಿಶ್ಲೇಷಣೆಗಳ ಮೂಲಕ ತಿಳಿದುಕೊಳ್ಳಬೇಕು. ಇದಕ್ಕಾಗಿ ಮೀಮಾಂಸವು ಆರು ಹಂತಗಳನ್ನು ಸೂಚಿಸುತ್ತದೆ; 1) ಉಪಾಕರ್ಮ(ಪ್ರಾರಂಭ), 2) ಉಪಸಂಹಾರ(ತೀರ್ಮಾನ), 3) ಅಭ್ಯಾಸ(ಒತ್ತುಕೊಡುವುದಕ್ಕಾಗಿ ಪುನರುಚ್ಛಾರ), 4) ಅಪೂರ್ವತ (ಹಿಂದೆ ಬೇರೆ ಯಾವುದೇ ರೀತಿಯಿಂದ ತಿಳಿಯಲಾಗದ್ದು), 5) ಫಲ (ಪ್ರಯೋಜನ)  ಅಥವಾ ಅರ್ಥವಾದ (ಕೇವಲ ಪ್ರಶಂಸೆ) 6)  ಮತ್ತು ಉಪಪತ್ತಿ (ತರ್ಕ ಮತ್ತು ಕಾರಣ).
         
          ಒಮ್ಮೆ ಸರಿಯಾದ ಅರ್ಥವು ಸ್ಥಿರವಾದಲ್ಲಿ, ವಿಧಿಗಳನ್ನು ಕೈಗೊಳ್ಳಬಹುದು.

          'ಅರ್ಥಾಪತ್ತಿ'(ಸಮರ್ಥನೆ ಅಥವಾ ಅನಿಸಿಕೆ)ಯು, ಸಾಮಾನ್ಯವಾಗಿ ಅಸಮಂಜಸವೆನಿಸುವ ಒಂದು ಅರ್ಥೈಸಲಾಗದ ಸಂಗತಿಯನ್ನು ವಿವರಿಸಲು ಅನಿವಾರ್ಯ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಹಗಲಿನಲ್ಲಿ ಏನನ್ನೂ ತಿನ್ನದೇ ಇದ್ದರೂ ಕೂಡ ದಪ್ಪನಾಗುತ್ತಿರುವುದು ಕಂಡುಬಂದರೆ, ನಾವು ಅವನು ರಾತ್ರಿಯಲ್ಲಿ ರಹಸ್ಯವಾಗಿ ತಿನ್ನುತ್ತಿರಬೇಕೆಂದು ಊಹಿಸಿ ನಿರ್ಭಯವಾಗಿ ಸಮರ್ಥಿಸಬಹುದು. 'ಅರ್ಥಾಪತ್ತಿ'ಯಿಂದ ಲಭ್ಯವಾದ ಜ್ಞಾನವು ಪ್ರತ್ಯೇಕವಾಗಿರುವುದು ಏಕೆಂದರೆ ಈ ರೀತಿಯ ತಿಳುವಳಿಕೆಯು ನಮಗೆ ಬೇರೆ ಯಾವುದೇ ವಿಧಾನದಿಂದ ಉಂಟಾಗುವುದಿಲ್ಲ.

          'ಅನುಪಲಬ್ಧಿ'(ಗ್ರಹಿಸಲಾಗದ್ದು) ಕೂಡ ಜ್ಞಾನವನ್ನು ಪಡೆಯುವ ಮೂಲವೆಂದು ಒಪ್ಪಲಾಗಿದೆ; ಏಕೆಂದರೆ ಅದು ತಕ್ಷಣವೇ ನಮಗೆ ಇಲ್ಲದಿರುವ ವಸ್ತುವಿನ ಬಗ್ಗೆ ತಿಳುವಳಿಕೆಯನ್ನುಂಟು ಮಾಡುತ್ತದೆ. ಮೇಜಿನ ಮೇಲೆ ಈ ಮುಂಚೆ ಇದ್ದ ಒಂದು ಜಾಡಿಯ ಇಲ್ಲದಿರುವುದು ಕಂಡು ಬಂದರೆ; ಅದರ ಇಲ್ಲದಿರುವಿಕೆಯು ಗೋಚರವಾಗುತ್ತದೆ.

          ಪ್ರಾಸಂಗಿಕವಾಗಿ, ಮೀಮಾಂಸ ದರ್ಶನಕಾರರು ದೋಷಗಳು ಹೇಗೆ ಒಳನುಸುಳತ್ತವೆಂದು ತಮ್ಮದೇ ಆದ ವಿವರಣೆಗಳನ್ನು ಮತ್ತು ಸಿದ್ಧಾಂತಗಳನ್ನು ಕೊಡುತ್ತಾರೆ. ಇದು ಎರಡು ರೀತಿಯ ಅಭಿಪ್ರಾಯಗಳಿಗೆ ಎಡೆ ಮಾಡಿ ಕೊಟ್ಟಿದೆ.

          ಮಸುಕಾದ ಬೆಳಕಿನಲ್ಲಿ ಹಗ್ಗವನ್ನು ಹಾವೆಂದು ಗ್ರಹಿಸಿದಾಗ; ಈಗ ನೋಡುತ್ತಿರುವ ಹಗ್ಗ ಮತ್ತು ಈ ಹಿಂದೆ ನೋಡಿದ ಹಾವು ಎರಡೂ ನಿಜವಾದವು; ಇಲ್ಲಿ  ನೆನಪಿನ ಶಕ್ತಿಯ ಅಚಾತುರ್ಯದಿಂದ (ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ) ಎರಡು ವಸ್ತುಗಳ ಬಗೆಗಿನ ಜ್ಞಾನದ ಮಿಶ್ರಣವಾಗಿ ಅದು ಭಯದ ಪ್ರಕ್ರಿಯೆಗೆ ಕಾರಣವಾಯಿತು. ಇದನ್ನು 'ಅಖ್ಯಾತಿವಾದ'(ಮಿಥ್ಯಾ ಜ್ಞಾನದ ಅಲ್ಲಗಳೆಯುವಿಕೆ ಅಥವಾ ಭ್ರಮೆಯಿಂದುಂಟಾದ ತಿಳುವಳಿಕೆಯನ್ನು ನಿರಾಕರಿಸುವುದು) ಎಂದು ಕರೆಯುತ್ತಾರೆ.

          ಎರಡನೆಯದಾದ 'ವಿಪರೀತಖ್ಯಾತಿವಾದ'ವು, ದೋಷವು ಎರಡು ನಿಜವಾದ ಆದರೆ ಪ್ರತ್ಯೇಕವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು ಕಲ್ಪಿಸುವುದರಲ್ಲಿದೆ ಎಂದು ಪ್ರತಿಪಾದಿಸುತ್ತದೆ. (ಎರಡು ಬೇರೆ ಬೇರೆಯಾದ ಆದರೆ ನಿಜವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು ಕಲ್ಪಿಸುವುದರಲ್ಲಿ ದೋಷವು ಅಡಗಿದೆ ಎಂದು ಎರಡನೆಯದಾದ 'ವಿಪರೀತಖ್ಯಾತಿ'ವಾದವು ಪ್ರತಿಪಾದಿಸುತ್ತದೆ.)

ಅಭೌತಿಕತೆ ಅಥವಾ ಅಧ್ಯಾತ್ಮ
(ಅ)  ಪ್ರಪಂಚ

          ಅದ್ವೈತ ಮೊದಲಾದ ಸಿದ್ಧಾಂತಗಳಿಗೆ ಹೊರತಾಗಿ ಮೀಮಾಂಸ ದರ್ಶನವು ಅಸಂಖ್ಯಾತ ವಸ್ತುಗಳಿಂದ ಕೂಡಿರುವ ಈ ವಿಶ್ವವು ಸತ್ಯವೆಂದು ನಂಬುತ್ತದೆ.  ಮೀಮಾಂಸ ದರ್ಶನದ ಪ್ರಕಾರ ಈ ಪ್ರಪಂಚವು, ಗ್ರಹಣೇಂದ್ರಿಯಗಳಿಂದ ಕೂಡಿದ ಜೀವಿಗಳನ್ನು ಒಳಗೊಂಡಿದ್ದು; ಅದರಲ್ಲಿ ಜೀವಿಗಳು ತಾತ್ಕಾಲಿಕವಾಗಿ ವಾಸಿಸಿ ತಮ್ಮ ಕರ್ಮಕ್ಕನುಸಾರವಾಗಿ ಒಳ್ಳೆಯ ಅಥವಾ ಕೆಟ್ಟ ಫಲಗಳನ್ನು ಅನುಭವಿಸುತ್ತವೆ. ವಿವಿಧ ಪ್ರಾಪಂಚಿಕ ವಸ್ತುಗಳು ಜೀವಿಗಳು ಒಳ್ಳೆಯ ಅಥವಾ ಕೆಟ್ಟ ಫಲವನ್ನು ಅನುಭವಿಸಲು ಪೂರಕ ಸಾಧನಗಳಾಗಿವೆ.

(ಬ) ಆತ್ಮ

        ಪ್ರಪಂಚದಲ್ಲಿ ಅಸಂಖ್ಯಾತವಾದ ಜೀವಾತ್ಮಗಳಿವೆ. ಅವುಗಳು ಶಾಶ್ವತವಾದರೂ ಕೂಡ ಅವು ನಿಜವಾದ ದೇಹವನ್ನು ಹೊಂದಿದ್ದಾಗ ತಾವು ನಿಜವಾದ ಪ್ರಪಂಚದಲ್ಲಿ ಕೈಗೊಂಡ ಸುಕರ್ಮ ಅಥವಾ ಕುಕರ್ಮಗಳಿಗನುಸಾರವಾಗಿ ಜನ್ಮಾಂತರಗಳನ್ನು/ಪುನರ್ಜನ್ಮವನ್ನು ಹೊಂದುತ್ತವೆ.

          ಆತ್ಮಕ್ಕೆ ತನ್ನದೇ ಆದ ಅರಿವೆನ್ನುವುದು ಇರುವುದಿಲ್ಲ. ಅದರಲ್ಲಿ ಅರಿವು ಅಥವಾ ತಿಳುವಳಿಕೆಯು ಅದು ಮನಸ್ಸು, ಜ್ಞಾನೇಂದ್ರಿಯಗಳು ಮತ್ತು ವಿಷಯ ವಸ್ತುಗಳೊಂದಿಗೆ ಸಹಯೋಗ ಹೊಂದಿದಾಗ ಉದ್ಭವವಾಗುತ್ತದೆ. ಇದು ವಿಶೇಷವಾಗಿ ಜ್ಞಾನೇಂದ್ರಿಯಗಳು ಅಥವಾ ಗ್ರಹಣೇಂದ್ರಿಯಗಳು ತಮಗೆ ಸಂಭಂದಪಟ್ಟ ವಿಷಯ ವಸ್ತುಗಳೊಂದಿಗೆ ಸಂಪರ್ಕವೇರ್ಪಡಿಸಿಕೊಂಡಾಗ ಉಂಟಾಗುತ್ತದೆ. ಗಾಢ ನಿದ್ರೆಯಲ್ಲಿ ಸ್ಪೃಹೆಯಿಲ್ಲದಿರುವುದು/ಅರಿವು ಇಲ್ಲದಿರುವುದು ಆತ್ಮಕ್ಕೆ ತನ್ನದೇ ಆದ ಅರಿವು ಇರುವುದಿಲ್ಲವೆನ್ನುವುದನ್ನು ನಿರೂಪಿಸುತ್ತದೆ.

          ವ್ಯಕ್ತಿಯೊಬ್ಬನು ಸ್ವರ್ಗವನ್ನು ಪಡೆಯಲು 'ಜ್ಯೋತಿಸ್ತೋಮ' ಯಜ್ಞವನ್ನು ಕೈಗೊಂಡನೆಂದುಕೊಳ್ಳಿ; ಆಗ ಅದರ ಸುಪ್ತ ಪ್ರಭಾವವು ಸೂಕ್ಷ್ಮ ರೂಪದಲ್ಲಿ ಆತ್ಮದಲ್ಲಿ ನೆಲೆಸಿದ್ದು; ಆ ವ್ಯಕ್ತಿಯ ಮರಣಾನಂತರ ಅದರ ಫಲವು ಉಂಟಾಗುತ್ತದೆ. ಹೀಗೆ ಸುಪ್ತವಾಗಿರುವ ಮತ್ತು ಅಗೋಚರವಾದ ಶಕ್ತಿ ಅಥವಾ ಸತ್ವವನ್ನು 'ಅಪೂರ್ವ'ವೆನ್ನುತ್ತಾರೆ.

          ವೇದಗಳು ಪೂರ್ಣವಾಗಿ ಮನುಷ್ಯನನ್ನು ಕರ್ಮ(ಯಜ್ಞ-ಯಾಗಗಳು) ಮಾಡಲು ಆದೇಶಿಸುವುದರಿಂದ, ಪ್ರತಿಯೊಬ್ಬ ಮನುಷ್ಯನು ಕರ್ತವ್ಯಕ್ಕಾಗಿ ಕರ್ತವ್ಯ ಮಾಡಲು ಬದ್ಧನಾಗಿರುತ್ತಾನೆ. ಯಜ್ಞಕ್ರಿಯೆಯು ಮಾಡತಕ್ಕದ್ದು; ಏಕೆಂದರೆ ವೇದಗಳು ಹಾಗೆ ಮಾಡೆಂದು ಆದೇಶಿಸುತ್ತವೆಯಾದ್ದರಿಂದ; ಅವನ್ನು ಮಾಡಲಾರೆನೆಂದು ಅಥವಾ ಅವನ್ನು ಬೇರೆ ವಿಧಾನದಿಂದ ಮಾಡುತ್ತೇನೆನ್ನದೆ ಅನಿವಾರ್ಯವಾಗಿ ಅವನ್ನು ಮಾಡದೇ ವಿಧಿಯಿಲ್ಲ!

          ಈ ರೀತಿಯ ಕರ್ತವ್ಯಗಳನ್ನು ಎರಡು ವಿಶಾಲವಾದ ಗುಂಪುಗಳಾಗಿ ವಿಂಗಡಿಸಿದ್ದಾರೆ; ಅವೆಂದರೆ 'ನಿತ್ಯ' ಅಥವಾ ದಿನನಿತ್ಯ ಕೈಗೊಳ್ಳಲೇ ಬೇಕಾದ ಕರ್ಮಗಳು ಮತ್ತು 'ನೈಮಿತ್ತಿಕ' ಅಥವಾ ಸಾಂದರ್ಭಿಕವಾದ (ಆದರೆ ಕೈಗೊಳ್ಳಲೇ ಬೇಕಾದ) ಕರ್ಮಗಳು. ಇವು ಆತ್ಮನ ನೈತಿಕತೆಯನ್ನು ಉತ್ತಮಪಡಿಸಿ ಅದನ್ನು ಪರಿಶುದ್ಧಗೊಳಿಸುತ್ತವೆ.

(ಕ) ಮೋಕ್ಷ ಅಥವಾ ಮುಕ್ತಿ

          ಒಬ್ಬ ವ್ಯಕ್ತಿ ಹೊಂದಬಹುದಾದ ಅತ್ಯುನ್ನತ ಒಳಿತೆಂದರೆ (ನಿಃಶ್ರೇಯಸವೆಂದರೆ), ಜನ್ಮಾಂತರಗಳ ಸರಪಳಿಯಿಂದ ಸಂಪೂರ್ಣ ಬಿಡುಗಡೆ. ಈ ಸ್ಥಿತಿಯಲ್ಲಿ ಆತ್ಮನು ಸಂಪೂರ್ಣವಾಗಿ ಯಾತನೆ ಮತ್ತು ದುಃಖಗಳಿಂದ ಮುಕ್ತನಾಗಿರುತ್ತಾನೆ ಆದರೆ ಆ ಸ್ಥಿತಿಯಲ್ಲಿ ಆತ್ಮನಿಗೆ ಅರಿವು ಮತ್ತು ಆನಂದವಿರುವುದಿಲ್ಲ!

          ಬಹುಶಃ ಜೀವನದ ಅಂತಿಮ ಗುರಿಯು ಸ್ವರ್ಗದಲ್ಲಿ 'ನಿತ್ಯಾನಂದ'ವನ್ನು ಪಡೆಯುವುದು ಮೀಮಾಂಸ ದರ್ಶನದ ಗುರಿಯಾಗಿತ್ತೆಂದು ತೋರುತ್ತದೆ; ಆದರೆ ಈಗ ಲಭ್ಯವಿರುವ ಸಾಹಿತ್ಯವು ಅದನ್ನು ಅನುಮೋದಿಸುವುದಿಲ್ಲ.

          ಮೋಕ್ಷವನ್ನು ಹೊಂದುವುದು ಹೇಗೆ? ಎನ್ನುವುದನ್ನು ಬಹುಶಃ ಬಹಳ ಸರಳವಾಗಿ ಮೀಮಾಂಸ ದರ್ಶನದಲ್ಲಿ ಉತ್ತರಿಸಿದ್ದಾರೆನಿಸುತ್ತದೆ. 'ಕಾಮ್ಯಕರ್ಮ'ಗಳನ್ನು ಅಥವಾ ಆಸೆಯಿಂದೊಡಗೂಡಿದ ಕರ್ಮಗಳನ್ನು ಮಾಡದೇ ಇರುವುದರಿಂದ ಪುನರ್ಜನ್ಮವು ಉಂಟಾಗುವುದಿಲ್ಲ. ಇಷ್ಟವಿಲ್ಲದೆ ಮಾಡಿದ ಪಾಪಕಾರ್ಯಗಳ ಫಲವನ್ನು ವಿವಿಧ ರೀತಿಯ 'ಪ್ರಾಯಶ್ಚಿತ್ತ'ವನ್ನು ಮಾಡಿಕೊಳ್ಳುವುದರ (ಪಾಪಗಳಿಂದ ಮುಕ್ತಿಹೊಂದುವ ಯಜ್ಞಕರ್ಮಗಳನ್ನು ಮಾಡುವುದರಿಂದ) ಮೂಲಕ ತೊಡೆದುಹಾಕಬಹುದು. 'ನಿತ್ಯ' ಮತ್ತು 'ನೈಮಿತ್ತಿಕ' ಕರ್ಮಗಳನ್ನು ಮಾಡುವುದರಿಂದ 'ಚಿತ್ತಶುದ್ಧಿ' ಅಥವಾ ಮನಸ್ಸಿನ ಶುದ್ಧತೆ ಉಂಟಾಗುತ್ತದೆ; ಒಂದು ವೇಳೆ ಈ ಕರ್ಮಗಳನ್ನು ಕೈಗೊಳ್ಳದಿದ್ದರೆ 'ಪ್ರತ್ಯವಾಯದೋಷ' ಅಥವಾ 'ಕರ್ಮರಾಹಿತ್ಯ ದೋಷ'ವುಂಟಾಗಿ ಅದು ಮೋಕ್ಷದ ಹಾದಿಯಲ್ಲಿ ತೊಡಕಾಗಿ ಪರಿಣಮಿಸುತ್ತದೆ. ಪ್ರಾರಬ್ಧಕರ್ಮವು (ಈ ಜನ್ಮಕ್ಕೆ ಕಾರಣವಾದ ಕರ್ಮವು) ಅದನ್ನು ಈ ಜನ್ಮದಲ್ಲಿ ಅನುಭವಿಸುವುದರಿಂದ ಕರಗಿಹೋಗುತ್ತದೆ. ಆದ್ದರಿಂದ ಈ ದೇಹವು ಬಿದ್ದುಹೋದ ನಂತರ ಯಾವುದೇ ಶೇಷವು ಉಳಿಯದಿರುವುದರಿಂದ ಆತ್ಮವು ಈ ಲೋಕಕ್ಕೆ ಮತ್ತೆ ಹಿಂತಿರುಗುವುದಿಲ್ಲ. ಮೇಲೆ ತಿಳಿಸಿರುವ ಕರ್ಮಗಳನ್ನು ಕೈಗೊಳ್ಳುವುದರ ಪರಿಣಾಮವಾಗಿ ಮುಕ್ತಿಯು ತನ್ನಷ್ಟಕ್ಕೇ ತಾನೇ ಉಂಟಾಗುತ್ತದೆ.

(ಡ) ಈಶ್ವರ ಅಥವಾ ಭಗವಂತ

          ಮೀಮಾಂಸ ದರ್ಶನದ ಮತ್ತೊಂದು ಪ್ರಶ್ನೆಯೆಂದರೆ ಅದು ದೇವರು ಅಥವಾ ಈಶ್ವರನು ಇದ್ದಾನೋ ಇಲ್ಲವೋ ಎನ್ನುವುದನ್ನು ಚರ್ಚಿಸಿ; ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು. ಈ ಭೌತಿಕ ಜಗತ್ತನ್ನು ಉಂಟು ಮಾಡುವ ವಸ್ತುಗಳು ಯಾವಾಗಲೂ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದರಿಂದ ಮತ್ತು ಜೀವಾತ್ಮರ ಅದೃಷ್ಟ ಅಥವಾ ಕರ್ಮಗಳಿಗನುಸಾರವಾಗಿ ಈ ವಸ್ತುಗಳು ಪ್ರಚೋದನೆಗೊಳಪಟ್ಟು ಸೃಷ್ಟಿ ಕ್ರಿಯೆಯನ್ನು ಉಂಟು ಮಾಡುತ್ತವೆಯಾದ್ದರಿಂದ, ಸೃಷ್ಟಿಯನ್ನು ರಚಿಸಲು ಯಾವುದೇ ವ್ಯಕ್ತಿಗತ ಭಗವಂತ ಅಥವಾ ಕರ್ತೃವಿನ ಅವಶ್ಯಕತೆಯನ್ನು ಒಪ್ಪಿಕೊಳ್ಳುವ ಪ್ರಮೇಯವಿಲ್ಲ. (ವಿಶ್ವದಲ್ಲಿರುವ ವಸ್ತುಗಳು ಶಾಶ್ವತ ಮತ್ತು ಜೀವ ಅಥವಾ ಆತ್ಮಗಳ ಕರ್ಮಕ್ಕನುಸಾರವಾಗಿ ಈ ಸೃಷ್ಟಿ ಕ್ರಿಯೆಯು ಸಹಜವಾಗಿ ಜರುಗುತ್ತದೆಯಾದ್ದರಿಂದ ಇದನ್ನು ನಿಯಂತ್ರಿಸುವ ಅಥವಾ ಅದಕ್ಕೆ ದಿಶೆಯನ್ನು ಕೊಡುವ ಇನ್ನೊಬ್ಬ ವ್ಯಕ್ತಿ ಅಥವಾ ಭಗವಂತನ ಅವಶ್ಯಕತೆಯಿಲ್ಲ; ಆದ್ದರಿಂದ ಅವನ ಇರುವಿಕೆಯನ್ನು ಮೀಮಾಂಸ ದರ್ಶನವು ಅಲ್ಲಗಳೆಯುತ್ತದೆ.)

ಉಪಸಂಹಾರ

          ಒಂದು ಸೋಜಿಗದ ಸಂಗತಿಯೆಂದರೆ ವೇದಗಳ ಪ್ರಭುತ್ವವನ್ನು ಎತ್ತಿಹಿಡಿಯಲು ಹೋದ ಪದ್ಧತಿಯು ಆ ಗ್ರಂಥವನ್ನೇ ಭಗವಂತನನ್ನಾಗಿಸಿ ಅದನ್ನು ಸೃಜಿಸಿದ ವ್ಯಕ್ತಿಯನ್ನೇ  (ಭಗವಂತನನ್ನೇ) ಬಹಿಷ್ಕರಿಸುತ್ತವೆ! ಭಗವಂತನ ಸಂಗತಿ ಒತ್ತಟ್ಟಿಗಿರಲಿ, ವೈದಿಕ ಕ್ರಿಯೆಗಳಲ್ಲಿ ತಮ್ಮ ಆಹುತಿಗಳನ್ನು ಸ್ವೀಕರಿಸಲು ಮೊರೆಯಿಡುವ ಇಂದ್ರ, ಮಿತ್ರ, ವರುಣ ಮೊದಲಾದವರನ್ನೂ ಕೂಡ ಕಟ್ಟು ಕಥೆಗಳಲ್ಲಿನ ಅಥವಾ ನಾಟಕಗಳಲ್ಲಿನ 'ಕಾಲ್ಪನಿಕ ಪಾತ್ರ'ಗಳೆಂದು ಮೀಮಾಂಸ ದರ್ಶನದ ಪ್ರತಿಪಾದಕರು ಪರಿಗಣಿಸುತ್ತಾರೆ.

          ಅಂತಿಮ ಕೇಡನ್ನು ಹೋಗಲಾಡಿಸಿಕೊಳ್ಳಲು (ಮೋಕ್ಷದ ಹಾದಿಯನ್ನು ಸುಗುಮಗೊಳಿಸಿಕೊಳ್ಳಲು); ಕರ್ಮ(ಯಾಗ, ಯಜ್ಞ ಅಥವಾ ವೈದಿಕ ಕ್ರಿಯೆ)ಗಳನ್ನು ಮಾಡುವುದನ್ನು ಅತಿಯಾಗಿ ಹೇರಿದ್ದರಿಂದ ಅಥವಾ ವಿಪರೀತವಾಗಿ ಪ್ರತಿಪಾದಿಸಿದ್ದರಿಂದ ಮೀಮಾಂಸ ದರ್ಶನವು ತನ್ನ ಸಮಾಧಿಯನ್ನು ತಾನೇ ತೋಡಿಕೊಂಡು, ಅದರ ಜೀವಂತ ಅಸ್ತಿತ್ವವನ್ನು ಕಳೆದುಕೊಂಡಿತೆಂದು ಘಂಟಾಘೋಷವಾಗಿ ಹೇಳಿದರೆ ತಪ್ಪಿಲ್ಲವೆನಿಸುತ್ತದೆ. 

          ಆದರೂ ಕೂಡ, ಮೀಮಾಂಸ ದರ್ಶನದ 'ಜ್ಞಾನ ಸಿದ್ಧಾಂತ' ಮತ್ತು ಅದು ವೈದಿಕ ನುಡಿಗಟ್ಟುಗಳು ಅಥವಾ 'ಸೂತ್ರ'ಗಳನ್ನು ವಿಶ್ಲೇಷಿಸುವ ವಿಧಾನಗಳನ್ನು ಶ್ರದ್ಧೆಯಿಂದ ಅಭ್ಯಸಿಸಿದರೆ ಅವು ನಮಗೆ ವೇದಾಂತ ಪದ್ಧತಿಗಳನ್ನು ಚೆನ್ನಾಗಿ ಅರಿತುಕೊಳ್ಳುವುದರಲ್ಲಿ ಸಹಾಯಕವಾಗುತ್ತವೆ.

*******







ಮೊದಲು ಚಂಚಲವಾದ ಮನಸ್ಸಿನ ಹತೋಟಿ

ಏಕಸ್ಯಾಪಿ ನ ಯಃ ಶಕ್ತೋ ಮನಸಃ ಸಂನಿಬರ್ಹಣೇ ।
ಮಹೀಂ ಸಾಗರ ಪರ್ಯಂತಾಂ ಸ ಕಥಂ ವಿಜಿಗೀಷತೇ ॥

ಮನಸ್ಸೆಂಬ ಒಂದನ್ನು ಚೆನ್ನಾಗಿ ಅಡಗಿಸಲು ಯಾವನು ಸಮರ್ಥನಲ್ಲವೋ ಅವನು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಭೂಮಿಯನ್ನು ಹೇಗೆ ಗೆಲ್ಲಬಹುದು ? ಮೊದಲು    ಚಂಚಲವಾದ  ಮನಸ್ಸಿನ ಹತೋಟಿ ಮಾಡಿಕೊಂಡರೆ ಇಡೀ     ವಿಶ್ವವನ್ನೆ ಗೆಲ್ಲುವುದಕ್ಕೆ ಸಮರ್ಥನಾಗುತ್ತಾನೆ.

Monday, August 27, 2012

ಇರಬಾರದ ಕೆಟ್ಟಏಳು ಗುಣಗಳು

ಪಾನಂ ಸ್ತ್ರೀ ಮೃಗಯಾ ದ್ಯೂತಂ ಅರ್ಥದೂಷಣಮೇವ ಚ ।
ವಾಗ್ದಂಡಯೋಶ್ಚ ಪಾರುಷ್ಯಂ ವ್ಯಸನಾನಿ ಮಹೀಭುಜಾಮ್ ॥


ಕುಡಿತ, ಸ್ತ್ರೀಯರಲ್ಲಿ ಅತ್ಯಾಸಕ್ತಿ, ಬೇಟೆ, ಜೂಜು, ಹಣವನ್ನು ಅತಿಯಾಗಿದುರುಪಯೋಗ ಮಾಡುವುದು, ಒರಟಾದ ಮಾತು, ಔಚಿತ್ಯ ಮೀರಿದ ದಂಡ, ಇವು ಏಳು ರಾಜರಲ್ಲಿ ಇರಬಾರದ ಕೆಟ್ಟ ಗುಣಗಳು. ಇವು 
 ರಾಜರಲ್ಲಿ   ಮಾತ್ರವೇ ಅಲ್ಲ ಯಾರಲ್ಲಿಯೂ ಇರಬಾರದು. 

Saturday, August 25, 2012

"ಅಹಂ"ಮತ್ತು "ದುರಹಂಕಾರ"

ಶುದ್ಧ ಅರಿವು ಎಲ್ಲಿ ಇರುತ್ತದೋ ಅಲ್ಲಿ ದುರಹಂಕಾರ ಇರುವುದಿಲ್ಲ.ಅಜ್ಞಾನ ಇರುವಲ್ಲಿ ಮಾತ್ರ ದುರಹಂಕಾರ ಇರುತ್ತದೆ.ಅಹಂಕಾರ ಇನ್ನೊದು ಅರ್ಥದಲ್ಲಿ ಲೌಕಿಕ ಅನುಭೂತಿ ಎಂತಲೂ ಆಗುತ್ತದೆ. ಅದರಲ್ಲೇ ಮುಳುಗಿ ಅದೇ ಸತ್ಯವೆಂಬ ತೀವ್ರವಾದ ನಂಬಿಕೆಯೇ ದುರ-ಅಹಂಕಾರ ಯೆನ್ನಲ್ಪಡುವುವುದು.ಅಲ್ಲಿ ಯಾವುದೇ ಬೇರೆಯ ಅಸ್ತಿತ್ವದ ಬಗ್ಗೆ ವಿಚಾರವಿಲ್ಲದಂತೆ ಕಡಿವಾಣ ಹಾಕಿಕೊಂಡಿರಲಾಗುತ್ತದೆ ಮನಸ್ಸು ಬೇರೆಯದಕ್ಕೆ ತೆರೆದಿರುವುದಿಲ್ಲ. ತಾನು ನಂಬಿರುವುದೇ ಸತ್ಯ ಎಂಬ ಪ್ರಭಲವಾದ ನಂಬಿಕೆಯೇ ದುರ-ಅಹಂಕಾರ ಎಂದು ಕರೆಯಲ್ಪಟ್ಟಿದೆ. 

"ಬದುಕಿನುದ್ದಕ್ಕೂ ಜಂಜಾಟ"

ಬದುಕಿನುದ್ದಕ್ಕೂ ಜಂಜಾಟ ಎನ್ನುವುದು ನಮ್ಮ ಭಾವನೆಗಳಿಗೆ ಸಂಬಂಧಪಟ್ಟದ್ದು.ಇನ್ನು ಬದುಕಬೇಕು ಎನ್ನುವುದು, ಮನಸ್ಸಿನ ಭಾವ. ಎಂಥಹ ಕುರುಡರು, ಕುಂಟರೂ, ಅಂಗವಿಕಲರು, ರೋಗಿಗಳೂ, ಕೂಡ ಬದುಕಬೇಕು ಎಂದು ಬಯಸುವುದು ಅದೇ ಭಾವದಿಂದಾ ಆಗಿರುತ್ತದೆ. ವೈರಾಗ್ಯ ಎನ್ನುವುದು ಬುದ್ಧಿಯ ಭಾವ.ಜೀವ ಎನ್ನುವುದು ವಿಧಿಯ ಸಂಕಲ್ಪ "ವಿಧಿ" ಎಂದರೆ "ಪರಮಾತ್ಮ" ಅಥವ ಪ್ರಕೃತಿ ನಿಯಮ ಎಂದು ಬೇಕಾದರೂ ಕರೆಯಬಹುದು. 

ರಾಜ ಧರ್ಮ.

ನ್ಯಾಯೇನಾರ್ಜನಮರ್ಥಸ್ಯ ವರ್ಧನಂ ಪಾಲನಂ ತಥಾ ।
ಸತ್ಪಾತ್ರೇ ಪ್ರತಿಪತ್ತಿಶ್ಚ ರಾಜವೃತ್ತಂ ಚತುರ್ವಿಧಮ್ ॥

ನ್ಯಾಯವಾದ ಮಾರ್ಗದಲ್ಲಿ ಹಣಸಂಪಾದಿಸುವುದು, ಸಂಪಾದಿಸಿದ ಹಣವನ್ನು ವರ್ಧಿಸುವುದು, ವರ್ಧಿಸಿದ ಹಣವನ್ನು ಕಾಪಾಡುವುದು, ಹಾಗೆಯೆ ರಾಜ್ಯನಿರ್ವಹಣೆಗೆ ಅರ್ಹರಾದವರಲ್ಲಿ ಆ ಹಣವನ್ನು ಕೊಡುವುದು. ಇವು ನಾಲ್ಕು ರಾಜನು ನಿರ್ವಹಿಸಬೇಕಾದ ಧರ್ಮ. 

ಪಂಡಿತ್ ಜಿ ಬಗ್ಗೆ ಅಮೆರಿಕರ ಒಲವು



ಇಲ್ಲಿ ನೋಡಿ ಅಮೆರಿಕೆಯ ವ್ಯಕ್ತಿ ಡಾ.ಜೆಸ್ಸೀ ಪಂಡಿತ್ ಸುಧಾಕರ ಚತುರ್ವೇದಿಯವರ ಫೋಟೋ ವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ವೇದಸುಧೆಯ ಪರಿಚಯ ಮಾಡಿಕೊಂಡ ಡಾ.ಜೆಸ್ಸೀ ವೇದಸುಧೆಯನ್ನು ಸಂಪರ್ಕಿಸಿ ನನ್ನೊಡನೆ ಶ್ರೀ ಸುಧಾಕರ್ ಶರ್ಮ ಮತ್ತು ಚತುರ್ವೇದಿಯವರನ್ನು ಭೇಟಿ ಮಾಡಿದ್ದರು. ವೇದಸುಧೆಯೊಡನೆ ಸದಾ ಸಂಪರ್ಕದಲ್ಲಿರುವ ಡಾ.ಜೆಸ್ಸೀ ಇಲ್ಲಿನ ಹಲವು ಆಡಿಯೋಗಳನ್ನು ಕೇಳಿಸಿಕೊಂಡು ತಮ್ಮ ಬೆಂಗಳೂರಿನ ಶಿಷ್ಯೆ ಯಿಂದ ಅರ್ಥವನ್ನು ತಿಳಿದುಕೊಳ್ಳುತ್ತಾರೆ.

Jessie Mercay
February 6 via mobile 
121 year old vedic scholar.

This is a photo of an amazing vedic scholar whom i met in Bangalore India. He has memorized the content and meaning of all the vedas. He says that the vedas are not written on sanskrit. They were written in a special language he calls vedic language from which sanskrit was derived. I would ask him to recite a specific verse at random and he could without a pause. Christina Brennon is with me.
 — with Christina Brennan.