///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Tuesday, August 23, 2022
Saturday, June 25, 2022
Monday, June 13, 2022
Friday, April 30, 2021
Friday, April 23, 2021
Thursday, April 22, 2021
ಮನವಿ
ಎಲ್ಲಾ ವೇದಬಂಧುಗಳಿಗೂ, ಅಗ್ನಿಹೋತ್ರ ಸಾಧಕರಿಗೂ ನಮಸ್ಕಾರ.
"ಎಲ್ಲರಿಗಾಗಿ ವೇದ" ಎಂಬ ಉದ್ದೇಶದೊಡನೆ " ವೇದಸುಧೆ" ಬ್ಲಾಗ್ ಶುರುವಾಗಿ ಹನ್ನೊಂದು ವರ್ಷಗಳಾಯ್ತು. ಆದರೆ ಇತ್ತೀಚಿನ ದಿನಗಳಲ್ಲಿ Facebook ನಲ್ಲಿ ಹೆಚ್ಚು ಬರೆಯುತ್ತಿದ್ದರಿಂದ ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದೆ. ಆದರೆ ಇನ್ನುಮುಂದೆ ನನ್ನ ಚಟುವಟಿಕೆಗಳನ್ನು ವೇದಸುಧೆ ಬ್ಲಾಗ್ ಮೂಲಕವೇ ಮಾಡಲು ಉದ್ದೇಶಿಸಿರುವೆ. ನನ್ನ Facebook ಸ್ನೇಹಿತರೂ ಕೂಡ ನನ್ನ ಈ ಬ್ಲಾಗ್ ನಲ್ಲಿ ನನ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಲಬಹುದು ಎಂದು ವಿನಂತಿಸುತ್ತಿದ್ದೇನೆ.
ನಿಮ್ಮ ಮಿತ್ರ
ಹರಿಹರಪುರಶ್ರೀಧರ್
Thursday, January 7, 2021
ಒಂದು ಹೊಸ ವಿಚಾರವನ್ನು ತಿಳಿದುಕೊಂಡಮೇಲೆ ಅದು ಒಪ್ಪಿಗೆ ಯಾಗಿದ್ದರೆ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ಅನುಷ್ಠಾನದಿಂದ ನಮಗೆ ಲಾಭವಾಗಿದ್ದರೆ ಮುಂದುವರೆಸಬೇಕು. ಈಗಂತೂ ಗೂಗಲ್ ನಲ್ಲಿ ಎಲ್ಲವೂ ಲಭ್ಯ. ನಾವೇನು ಮಾಡುತ್ತೇವೆ, ನಾವು ಯಾವ ವಿಚಾರವನ್ನು ಅನುಷ್ಠಾನಕ್ಕೆ ತಂದು ಪ್ರಯೋಜನ ಪಡೆಯುತ್ತಿದ್ದೇವೋ ಅದರ ಬಗ್ಗೆ ಹೆಚ್ಚು ತಿಳಿಯಲು ಹೊರಡುತ್ತೇವೆ. ಅದಕ್ಕೆ ಗೂಗಲ್ ಸರ್ಚ್ ಶುರುವಾಗುತ್ತೆ. ಈಗಾಗಲೇ ನಾವು ಲಾಭ ಪಡೆಯುತ್ತಿದ್ದರೂ, ನಮಗೆ ಅದರಿಂದ ತೊಂದರೆ ಆಗದಿದ್ದರೂ ನಮ್ಮ ಗೂಗಲ್ ಸರ್ಚ್ ನಿಂದ ಸಿಗುವ ಮಾಹಿತಿಗಳಿಂದ ಚಿಂತೆಗೆ ಒಳಗಾಗುತ್ತೇವೆ. ಅನುಮಾನ ಶುರುವಾಗುತ್ತೆ. ಇದರ ಅಡ್ಡ ಪರಿಣಾಮ ಹೀಗಾಗುತ್ತದಂತಲ್ಲಾ!!ನಮ್ಮ ಸಂಶೋಧನೆ ನಮ್ಮನ್ನು ದಾರಿ ತಪ್ಪಿಸುತ್ತದೆ. ನಾವು ನಂಬಿ ಅನುಷ್ಠಾನಕ್ಕೆ ತಂದ ವಿಚಾರದ ಬಗ್ಗೆ ಯಾಕೋ ಸರಿಹೋಗುತ್ತಿಲ್ಲ ಎನಿಸುತ್ತೆ. ಕ್ರಮೇಣ ಯಾವ ವಿಚಾರ ನಮಗೆ ಆರಂಭದಲ್ಲಿ ಆಪ್ಯಾಯಮಾನವಾಗಿತ್ತೋ ಅದರಿಂದ ಕ್ರಮೇಣ ದೂರವಾಗುತ್ತೇವೆ. ನಮ್ಮ ವಿವೇಚನೆಗಿಂತ ದೊಡ್ದದು ಬೇರೆ ಇದೆಯೇ? ಎಲ್ಲದಕ್ಕೂ ಗೂಗಲ್ ಸರ್ಚ್ ಬೇಕೇ?. ಗೂಗಲ್ ನಲ್ಲಿ ಮಾಹಿತಿ ತುಂಬಿರುವವರು ಅವರ ಚಿಂತನೆಗೆ ತಕ್ಕಂತೆ ತುಂಬಿರುತ್ತಾರಲ್ಲವೇ? ನಾವು ನಮ್ಮ ನೆಮ್ಮದಿಯ ಜೀವನಕ್ಕಾಗಿ ಏನನ್ನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವ ಮುಂಚೆ ನಮ್ಮ ಜೀವನ ಕ್ರಮ, ಆಹಾರ, ವಿಹಾರ, ಪರಿಸರ ಎಲ್ಲವಕ್ಕೂ ಹೊಂದುವಂತೆ ನಮ್ಮ ಸಂಶೋಧನೆ ಇರಬೇಕು. ಅದಕ್ಕಿಂತ ಹೆಚ್ಚಾಗಿ ನಮ್ಮ ವಿವೇಕವನ್ನೂ ಉಪಯೋಗಿಸೋಣ. ಅಲ್ಲವೇ?
Saturday, August 22, 2020
ಹತ್ತು ವರ್ಷಗಳ ಹಿಂದೆ ೯. ೨. ೨೦೧೦ ರಂದು ಆರಂಭಿಸಿದ ವೇದಸುಧೆ ಬ್ಲಾಗ್ ನಲ್ಲಿ ನನ್ನ ಜೊತೆಗೆ ಕವಿ ನಾಗರಾಜ್ ಕೂಡ ಹಲವಾರು ವರ್ಷಗಳು ಬರೆದರೂ.ಒಟ್ಟಾಗಿ ಆರೇಳು ವರ್ಷ ನಡೆಸಿದೆವು . ಆನಂತರ ಅವರದೇ ಪ್ರತ್ಯೇಕ ಬ್ಲಾಕ್ ವೇದ ಜೀವನ ಆರಂಭವಾದಮೇಲೆ ಅವರೂ ಸಹ ಈ ಬ್ಲಾಗ್ ನಲ್ಲಿ ಬರೆಯುವುದನ್ನು ನಿಲ್ಲಿಸಿದರು. ಫೇಸ್ ಬುಕ್ ಆರಂಭವಾದಮೇಲೆ ನಾನೂ ನಿಲ್ಲಿಸಿದೆ. ಇದೀಗ ಈ ಬ್ಲಾಗ್ ಗೆ ದಶಮಾನೋತ್ಸವ . ಒಂದು ನಿರ್ಧಿಷ್ಟ ವಿಕಾರಕ್ಕೆ ಸೀಮಿತ ಗೊಳಿಸಿಕೊಳ್ಳುವುದಾದರೆ ಬ್ಲಾಗಿಂಗ್ ಉತ್ತಮ ಮಾಧ್ಯಮ. ಇಲ್ಲಿ ಬರೆಯುವುದನ್ನು ನಿಲ್ಲಿಸಿದಮೇಲೆ ಇಂದು ಪುನಃ ತೆರೆದಾಗ ಬ್ಲಾಗ್ ಬರೆಯುವ ಪ್ರಿಯೆ ಮರೆತು ಹೋಗಿತ್ತು. ಇನ್ನಾದರೂ ಇಲ್ಲಿ ಬರೆಯಬೇಕು.
Thursday, October 3, 2019
ಕುಸುಮ-೧ - ಸಖೇ ಸಪ್ತಪದೀ ಭವ
ಸಾಮಾನ್ಯ ಜನರಲ್ಲಿ ವೇದದ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಬೇಕೆಂದು ಋಷಿಪರಂಪರೆ ವಾಟ್ಸಪ್ ಗುಂಪನ್ನು ಆರಂಭಿಸಲಾಗಿದೆ. ವೇದ ಅಂದರೆ ಕೇವಲ ಮಂತ್ರಪಾಠವೆಂದೇ ಹಲವರ ಅಭಿಪ್ರಾಯ. ಅಲ್ಲದೆ ಇದು ಎಲ್ಲರಿಗೂ ಸಾಧ್ಯವಿಲ್ಲ, ಸಂಸ್ಕೃತ ಜ್ಞಾನ ಇರುವ ಪಂಡಿತರುಗಳು ಮಾತ್ರವೇ ವೇದಾಧ್ಯಯನ ಮಾಡಲು ಅರ್ಹರೆಂಬ ವಾದ ಕೂಡ ಇದೆ. ಆ ಬಗ್ಗೆ ಇಲ್ಲಿ ಚರ್ಚಿಸುವುದು ಈ ಗುಂಪಿನ ಉದ್ದೇಶವಲ್ಲ. ನಮ್ಮ ನೆಮ್ಮದಿ ಬದುಕಿಗಾಗಿ ನಮ್ಮಂತವರೂ ಸಹ ವೇದದಲ್ಲಿ ಏನಾದರೂ ಅರ್ಥಮಾಡಿಕೊಳ್ಳಲು ಸಾಧ್ಯವೇ ನೋಡೋಣ.
----------------------------------------
ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅಂತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ ಬರಬೇಕೇ? ಅಧ್ಯಾತ್ಮ ಚಿಂತನೆ ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ?
ಸ್ವರ್ಗ ಎಲ್ಲಿದೆ?
ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು ನಿತ್ಯ ನರಕವಾಗಿ ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ? ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು ಕೆಲವು ಜೀವನ ಸೂತ್ರಗಳನ್ನು ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ.
ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ವಿಧಿ ಇರುತ್ತದೆ. ಪುರೋಹಿತರು ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.
ಸಖೇ ಸಪ್ತಪದೀ ಭವ
ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತು? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ.
ಸಖೇ ಸಪ್ತಪದೀ ಭವ ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ ನೂರಾರು ಜನರು ಸಾಕ್ಷಿಯಾಗಿದ್ದಾರೆ, ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ:ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ?
ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳು ಟಿ.ವಿ. ಮಾಧ್ಯಮಗಳಲ್ಲಿ ನಡೆಯುತ್ತವೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ?
ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು , ಅಲ್ಲವೇ? ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ?
ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕಕ್ಕೆ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆ ಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ. ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.
ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ|
[ಕಾಂಡ ೧೪ ಸೂಕ್ತ ೨ ಮಂತ್ರ ೬೪]
ಅರ್ಥ:- ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ.
ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು.
ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು ಹೇಗೆ ಜೀವನವನ್ನು ನಿರ್ವಹಿಸಬೇಕೆಂಬ ಸರಿಯಾದ ಮಾರ್ಗದರ್ಶನವನ್ನು ವೇದವು ನಮಗೆ ನೀಡುತ್ತದೆ.
Monday, September 23, 2019
Thursday, August 29, 2019
Tuesday, February 26, 2019
Monday, February 25, 2019

8 ಅಡಿ X 8 ಅಡಿ ಅಳತೆಯ ನಾಲ್ಕು ಕಂಬಗಳ ಈ ಮಂಟಪಗಳ ಸಾಲು ದೇವಾಲಯದ ಸುತ್ತ ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ ಕೋಟೆಯಂತಿತ್ತು!! ಎಂಬುದನ್ನು ಊಹಿಸಿದರೆ ಸಾಕು ಕಾಶಿಪುರ ದೇವಾಲಯವು ಹೇಗೆ ವಿಜೃಂಭಿಸಿತ್ತು!! ಎಂದು ಕಲ್ಪಿಸಿ ಕೊಳ್ಳುವಿರಾ?
ಇಂತಾ ವೈಭವವನ್ನು ಉಳಿಸುವ ಪ್ರಯತ್ನವೇ 3.3.2019 ರಂದು ನಡೆಯಲಿರುವ ಕಾಶಿಪುರ ಜಾಗೃತಿ ಉತ್ಸವ.

ಅಡಗೂರು ಲಕ್ಷ್ಮೀ ನಾರಾಯಣ ದೇವಾಲಯ
ಮಾಹಿತಿ : ಶ್ರೀ ನಟರಾಜ ಪಂಡಿತ್.
Friday, December 7, 2018
"ಆನೋಭದ್ರಾಃ ಕ್ರತವೋಯಂತು ವಿಶ್ವತಃ"
ನಮ್ಮೆದುರು ಹೊಸ ವಿಚಾರಗಳು ಬಂದಾಗ ನಾವು ಅದನ್ನು ಸ್ವೀಕರಿಸಿ ವಿಮರ್ಷೆ ಮಾಡುತ್ತೇವೆ. ಅಹಂಕಾರದಿಂದ ತಿರಸ್ಕರಿಸುವುದಿಲ್ಲ. ವಿಮರ್ಷೆಮಾಡಿ ಅಗತ್ಯ ಕಂಡರೆ ಪರಿಷ್ಕಾರವನ್ನೂ ಮಾಡುತ್ತೇವೆ. ಹೀಗೆ ಯಾವುದೇ ಹೊಸ ವಿಷಯವನ್ನು ಸ್ವೀಕಾರ ಮಾಡಿ , ಯಾವ ಪೂರ್ವಾಗ್ರಹವಿಲ್ಲದೆ ಪರಿಷ್ಕಾರ ಮಾಡುತ್ತೇವೆ. ಆಗ ನಿಜವಾದ ಆವಿಷ್ಕಾರ ವಾಗುತ್ತದೆ. ಆವಿಷ್ಕಾರದಿಂದ ಸಾಕ್ಷಾತ್ಕಾರವಾಗುತ್ತದೆ.











