Pages

Monday, November 19, 2012

ದಿನಾಂಕ 18.11.2012 ರಂದು ನಡೆದ ವೇದಪಾಠ







ದಿನಾಂಕ 18.11.2012 ರಂದು ನಡೆದ ವೇದಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ. ಮೇಲ್ ಮೂಲಕ ವಿಳಾಸ ನೀಡಿರುವ    ಎಲ್ಲರಿಗೂ ಪಾಠವನ್ನು ಕಳಿಸಲಾಗಿದೆ. ತಲುಪದಿದ್ದವರು ತಿಳಿಸಿದರೆ ಪುನ: ಕಳಿಸಿಕೊಡಲಾಗುವುದು. ಹೊಸದಾಗಿ  ಸಾಪ್ತಾಹಿಕ ವೇದ ಪಾಠವನ್ನು ವೆಬ್ ಸೈಟ್ ಮೂಲಕ ಕಲಿಯಬಯಸುವವರು " ವೇದಪಾಠ" ಲೇಬಲ್ ಮೇಲೆ ಕ್ಲಿಕ್ ಮಾಡಿ ಮೊದಲ ಪಾಠದಿಂದ ಅನುಸರಿಸಬಹುದು. ಆರಂಭದಲ್ಲಿರುವ ಪರಿಚಯ ಉಪನ್ಯಾಸವನ್ನು ಕೇಳಿ ವೇದಪಾಠವನ್ನು ಆರಂಭಿಸುವುದು ಸೂಕ್ತ. ಹಾಸನದಲ್ಲಿ ನಡೆಯುತ್ತಿರುವ "ಎಲ್ಲರಿಗಾಗಿ ವೇದ ಪಾಠವು" ಪೂರ್ಣ ಉಚಿತವಾಗಿದ್ದು ಹಾಸನಕ್ಕೆ ಸಮೀಪ ಇರುವ ನಿಮ್ಮ ಮಿತ್ರರನ್ನು  ಪ್ರತ್ಯಕ್ಷ ವೇದಪಾಠದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ನಮ್ಮ ವಿಳಾಸ:

ಈಶಾವಾಸ್ಯಮ್
ಶಕ್ತಿ ಗಣಪತಿ ದೇವಾಲಯ ರಸ್ತೆ
ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ
ಸಂಪರ್ಕ ದೂರವಾಣಿ: 08172-250566/9663572406


ಅಪತ್ಯಂ ಮೇ ಕಳತ್ರಂ ಮೇ ಧನಂ ಮೇ ಬಾಂಧವಾಷ್ಚ ಮೇ |
ಜಲ್ಪಂತಮ್ ಇತಿ ಮರ್ತ್ಯಾಜಂ ಹಂತಿ ಕಾಲವೃಕೋ ಬಲಾತ್ ||

ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಹಣ, ನನ್ನ ನೆಂಟರು, ಎಂದು ಒದರುತ್ತಾ ಇರುವ ಮನುಷ್ಯ ಎನ್ನುವ ಆಡನ್ನು ಕಾಲ ಎನ್ನುವ ತೋಳವು ಬಲಾತ್ಕಾರವಾಗಿ ಕೊಲ್ಲುತ್ತದೆ.

-ಸದ್ಯೋಜಾತಭಟ್ಟ

Friday, November 16, 2012

ಯೋಚಿಸಲೊ೦ದಿಷ್ಟು... ೬೨

೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು
೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು
೩. ಪ್ರಾಣಿಗಳೇ ಮಾನವನ ಅತ್ಯುತ್ತಮ ಸ೦ಗಾತಿಗಳು. ಅವು ಪ್ರಶ್ನೆಯನ್ನೂ ಕೇಳುವುದಿಲ್ಲ.. ಟೀಕೆಗಳನ್ನೂ ಮಾಡುವುದಿಲ್ಲ!- ಜಾನ್ ಏಲಿಯೇಟ್
೪. ಜೀವನವೂ ಒ೦ದು ತರಗತಿ ಇದ್ದ೦ತೆ! ಆದರೂ ಇದರಲ್ಲಿ ಯಾವ ಪರೀಕ್ಷೆ? ಯಾವ ರೀತಿಯ ಪ್ರಶ್ನೆಗಳೆ೦ಬುದನ್ನು ಅರಿಯಲಾಗದು! ಎಲ್ಲದ್ದಕ್ಕಿ೦ತಲೂ ಹೆಚ್ಚಿನದಾಗಿ ಶಾಲಾ ಪರೀಕ್ಷೆಗಳಲ್ಲಿ ನಕಲು ಮಾಡಿದ೦ತೆ ಜೀವನವೆ೦ಬ ತರಗತಿಯ ಯಾವುದೇ ಪರೀಕ್ಷೆಗಳಲ್ಲಿ ನಕಲು ಮಾಡಲಾಗದು!
೫. ನಾಳೆ ಎ೦ಬುದಿದೆ!   ಪ್ರತಿದಿನವೂ “ ನಾಳೆ “ಯೆ೦ಬ ನಿರೀಕ್ಷೆಯೊ೦ದಿಗೇ ಮುಕ್ತಾಯವಾಗುವುದು! ಆದರೆ ನಾಳೆ ಎ೦ಬ ನಿರೀಕ್ಷೆಯಲ್ಲಿ ಈ ದಿನವನ್ನು ಹಾಳುಮಾಡಿಕೊಳ್ಳದಿರೋಣ!
೬. “ ವಿಜಯ “ ವೆ೦ಬುದು ನಮ್ಮ ತಲೆಯಲ್ಲಿನ ಮೆದುಳಿನ ಗಾತ್ರವನ್ನು ಅವಲ೦ಬಿಸಿರುವುದಿಲ್ಲ! ಬದಲಾಗಿ ಅದು ಅವಲ೦ಬಿಸಿರುವುದು ನಮ್ಮ ಚಿ೦ತನೆಗಳ/ಆಲೋಚನೆಗಳ ಮೌಲ್ಯವನ್ನು!
೭. ಜೀವನದಲ್ಲಿ ಕನ್ನಡಿಯ೦ತಹ ವ್ಯಕ್ತಿಗಳನ್ನೇ  ನಮ್ಮ ಮಿತ್ರರನ್ನಾಗಿ ಆರಿಸಿಕೊಳ್ಳೋಣ.. ಏಕೆ೦ದರೆ ನಾವು ಅತ್ತಾಗಲೂ ಕನ್ನಡಿ ನಮ್ಮ ಅಳುವಿನ ಮುಖವನ್ನೇ ತೋರಿಸುತ್ತದೆ!
೮. ಕೆಡುಕು ಬಯಸುವವರು ಇರುವ೦ತೆ ನಮ್ಮ ಒಳಿತನ್ನು ಬಯಸುವವರೂ ಇರುತ್ತಾರೆ. ನಾವು ಸ್ವಲ್ಪ ಶ್ರಮವಹಿಸಿ ಹುಡುಕಬೇಕಷ್ಟೇ!
೯. ವಿಪತ್ತು ಬರುವ ಮೊದಲೇ ಪ್ರತಿಕ್ರಿಯಿಸುವವನು ಹಾಗೂ ಸಮಯೋಚಿತ ಬುಧ್ಧಿಯನ್ನು ಪ್ರದರ್ಶಿಸುವವನು ಇಬ್ಬರೂ ಸುಖ ಹೊ೦ದುತ್ತಾರೆ- ಪ೦ಚತ೦ತ್ರ
೧೦. ಬೇರೊಬ್ಬರ ಗುಲಾಮನಾದ ಕೂಡಲೇ ಅರ್ಧಧಷ್ಟು ಗುಣಗಳು ದೂರವಾಗುತ್ತವೆ!
೧೧. ದೊಡ್ಡ ಮನುಷ್ಯರು ಯಾವಾಗಲೂ ಯಾವುದೇ ಕರ್ತವ್ಯವನ್ನೂ ಸಣ್ಣದೆ೦ದು ಭಾವಿಸುವುದಿಲ್ಲ!
೧೨. ನಿಜವಾದ ಗೆಳೆಯನೆ೦ದರೆ ಒ೦ದು ದರ್ಪಣವಿದ್ದ೦ತೆ! ನಮ್ಮ ಒಳಿತು ಹಾಗೂ ಕೆಡುಕುಗಳೆರಡನ್ನೂ ಆತ ನಿಸ್ಸ೦ಕೋಚವಾಗಿ ತಿಳಿಸಿಬಿಡುತ್ತಾನೆ!
೧೩. ಪಾ೦ಡಿತ್ಯ ಉಳ್ಳವರು ಹೆಚ್ಚಾದರೆ ವಿವೇಕವುಳ್ಳವರು ಕಡಿಮೆ!
೧೪. ವ್ಯರ್ಥ ಕಾಲಹರಣ ಮಾಡುವವರು ಅಪಾಯಕಾರಿಗಳು! ಅವರ ಬಗ್ಗೆ ಸಾಕಷ್ಟು ಎಚ್ಚರದಿ೦ದಿರಬೇಕು!
೧೫. ಖಾಲಿ ಮನಸ್ಸು ಭೂತದ ಬ೦ಗಲೆಯ೦ತೆ!

Monday, November 12, 2012

ನಮಸ್ಕಾರ


ನಾಸ್ತಿ ಸತ್ಯಾತ್ ಪರೋ ಧರ್ಮಃ ಸಂತುಷ್ಟಿರ್ ನಾತ್ಮಜಾತ್ ಪರಾ ।
ನಾನ್ನದಾನಾತ್ ಪರಂ ದಾನಂ ವಂದನಾನ್ನೋಪಚಾರಕಮ್ ॥

ಸತ್ಯಕ್ಕಿಂತಲೂ ಮಿಗಿಲಾದ ಧರ್ಮ ಇಲ್ಲ, ಪುತ್ರ ಜನನಕ್ಕಿಂತ ಹೆಚ್ಚಿನ ಆನಂದ ಬೇರೊಂದಿಲ್ಲ, ಅನ್ನದಾನಕ್ಕಿಂತ ಉತ್ತಮವಾದ ದಾನವಿಲ್ಲ, ನಮಸ್ಕಾರಕ್ಕಿಂತಲೂ ಉತ್ತಮವಾದ ಉಪಚಾರ ಇನ್ನೊಂದಿಲ್ಲ.

-ಸದ್ಯೋಜಾತ ಭಟ್ಟ

ವ್ಯಾಪ್ತಿ:

* ಪುತ್ರ ನೆಂದರೆ ಗಂಡುಮಗು ಅಂತಾ ತಿಳಿಯ ಬಾರದು ಪುತ್ರಿ ಜನನ ವಾದರೂ ಅಷ್ಟೇ ಸಂತೋಷವಾಗುತ್ತದೆ.
* ನಮಸ್ಕಾರ ಎಂದರೆ....ಕೇವಲ ನಮಸ್ಕರಿಸುವುದೇ? ನಮ್ಮ ಉತ್ತಮ ನಡವಳಿಕೆ, ಮಧುರವಾದ ಮಾತು. ಒಳ್ಳೆಯ ಮಾತಿಲ್ಲದೆ ನಮಸ್ಕರಿಸಿದರೂ ಅದಕ್ಕೆ ಬೆಲೆಇಲ್ಲ. ಕೋಪ ಮಾಡಿಕೊಂಡು "ನಮಸ್ಕಾರ" ಎಂದರೆ.....ಅಥವಾ ಮಧುರವಾದ ಮಾತಿಲ್ಲದೆ  ಮನೆಗೆ ಬಂದ ಅತಿಥಿ ಗಳಿಗೆ ಏನು ಸತ್ಕರಿಸಿದರೇನು ಪ್ರಯೋಜನ? ಅಲ್ಲವೇ?

Saturday, November 10, 2012

ನಾನು ನನ್ನದು ಎಂಬ ಅಭಿಮಾನ


ಅಹಂಮಮಾಭಿಮಾನೋತ್ಥೈಃ ಕಾಮ ಲೋಭಾದಿಭಿರ್ಮಲೈಃ ।
ವೀತಂ ಯದಾ ಮನಃ ಶುದ್ಢಮದುಃಖಮಸುಖಂ ಸಮಮ್ ॥

ನಾನು ನನ್ನದು ಎಂಬ ಅಭಿಮಾನದಿಂದ ಉಂಟಾದ, ಕಾಮ, ದುರಾಸೆ, ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು ಶುದ್ಧವಾಗುತ್ತದೋ ಆಗ ಸುಖವಾಗಲೀ ದುಃಖವಾಗಲೀ, ಸಮಾನವೆನಿಸುತ್ತದೆ

-ಸದ್ಯೋಜಾತ ಭಟ್ಟ

ಭಾರತ ಪರಿಕ್ರಮ ಯಾತ್ರೆ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ನಮಸ್ತೆ, ಶ್ರೀ ಸೀತಾರಾಮ ಕೆದಿಯಾಯರು  ಆರಂಭಿಸಿರುವ ಭಾರತ ಪರಿಕ್ರಮ ಯಾತ್ರೆಯು ಯಶಸ್ವೀ 94 ನೇ ದಿನಕ್ಕೆ ಕಾಲಿಟ್ಟಿದೆ. ನಿತ್ಯವೂ ಭಾರತ ಪರಿಕ್ರಮದ ಸುದ್ಧಿಯನ್ನು ಅಪೇಕ್ಷಿಸುತ್ತಿದ್ದ ಅಭಿಮಾನಿಗಳಿಗಾಗಿ ವೇದಸುಧೆಯು ಸಚಿತ್ರ ವರದಿಯನ್ನು ಪ್ರಕಟಿಸುತ್ತಿದೆ. ಆದರೆ ಯಾತ್ರೆಯು ಇನ್ನೂ ಐದು ವರ್ಷಗಳು ಸತತವಾಗಿ ನಡೆಯುವುದರಿಂದ ಭಾರತಪರಿಕ್ರಮ ಯಾತ್ರೆಗಾಗಿಯೇ ಒಂದು ಬ್ಲಾಗ್ ಆರಂಭಿಸಿ ಅದರ ಕೊಂಡಿಯನ್ನು  ವೇದಸುಧೆಯ ಬಲತುದಿಯಲ್ಲಿರುವ ಬ್ಲಾಗ್ ಪಟ್ಟಿಯಲ್ಲಿ ಕೊಟ್ಟಿದೆ. ಅಭಿಮಾನಿಗಳು ಅದರ  ಉಪಯೋಗ ಪಡೆಯಬಹುದು.