Pages

Wednesday, January 1, 2014

Sunday, December 8, 2013

ವೇದಭಾರತಿಯ ಮತ್ತೊಂದು ಯಶಸ್ವೀ ಕಾರ್ಯಕ್ರಮ-ಭಕ್ತಿಸಂಗೀತ

ಸಂಗೀತದ ಸವಿಯುಣಲು ಮತ್ತು ಗೋರಕ್ಷಾ ಕುರಿತು ಮಾಹಿತಿಗಾಗಿ  "ಗೀತಗಂಗಾ" ಹೆಸರಿನ ಮೇಲೆ ಕ್ಲಿಕ್ ಮಾಡಿ.
























Friday, December 6, 2013

ಹೆಸರು ಸೂಚಿಸುತ್ತೀರಾ?


ಇಂದಿನ ದಿನಗಳಲ್ಲಿ ಬಿ.ಪಿ. ಅಥವಾ ಸಕ್ಕರೆಖಾಯಿಲೆ ಇಲ್ಲದ ಜನರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ. ಸಾಮಾನ್ಯವಾಗಿ ತಲೆಗೆ ಸ್ವಲ್ಪ ಕೆಲಸ ಕೊಡುವವರಿಗಂತೂ ಇವೆರಡರಲ್ಲಿ ಒಂದಾದರೂ ಕಟ್ಟಿಟ್ಟಬುತ್ತಿ. ಆದರೆ ಇದರೊಟ್ಟಿಗೆ ಬದುಕುವುದನ್ನು ಜನರು ಅಭ್ಯಾಮಾಡಿ ಕೊಂಡುಬಿಟ್ಟಿದ್ದಾರೆ. ಬೆಳಗಿನ ತಿಂಡಿಯಾದ ಕೂಡಲೇ ಒಂದು ಮಾತ್ರೆ ನುಂಗಿದರಾಯ್ತು."ಇದು ಏನು ಮಹಾ ಬಿಡಿ".ಇದು ಸಹಜವಾದ ಪ್ರತಿಕ್ರಿಯೆ. ನಮ್ಮ ಆರೋಗ್ಯವನ್ನು ಆ ಮಾತ್ರೆಯ ನಿಯಂತ್ರಣಕ್ಕೆ ಕೊಟ್ಟಿರುವುದು ನಮಗೆ ಏನೂ ಅನ್ನಿಸುವುದಿಲ್ಲ. ನಮ್ಮ ಬಗ್ಗೆ ಅದೆಷ್ಟು ತಾತ್ಸಾರಮಾಡುತ್ತೇವೆ ನಾವು? ಆದರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಲ್ಲದ ಚರ್ಚೆ ಮಾಡುತ್ತೇವೆ. ಸಮಯ ಅಪವ್ಯಯ ಮಾಡುತ್ತೇವೆ. ನಾನು ಕೆಲವು ಸಾಮಾಜಿಕ ತಾಣಗಳಲ್ಲಿ ಗಮನಿಸಿದ್ದೇನೆ. ಯಾವುದೋ ನನ್ನ ಜೀವನ ಅನುಭವವನ್ನು ಹಂಚಿಕೊಂಡಾಗ ಅದಕ್ಕೆ ಸಿಕ್ಕಿರುವಷ್ಟು ಪ್ರೋತ್ಸಾಹವು ವೇದದ ಬಗ್ಗೆ ಅಧ್ಯಯನ ಮಾಡಿ ಬರೆದ ಲೇಖನಕ್ಕೆ ಸಿಕ್ಕಿಲ್ಲ. ಕಾರಣ ವೇದದ ಹೆಸರು ಕೇಳಿದೊಡನೆ "ಇದು ಜೀವನದ ಅಂತಿಮ ಕಾಲಕ್ಕೆ ಬೇಕಾದ ವಿಷಯ" ಎಂಬುದು ಹಲವರ ಮನದಲ್ಲಿ ಅಚ್ಚೊತ್ತಿದೆ. ಆದರೆ ವೇದವೆಂದರೆ ಕೇವಲ ಪೂಜೆಯ ಮಂತ್ರಗಳೇ? ಖಂಡಿತಾ ಅಲ್ಲ. ನಿಜವಾಗಿ ಆರೋಗ್ಯವಂತ ಬದುಕಿಗಾಗಿ ಅದೆಷ್ಟು ಮಾರ್ಗದರ್ಶನ ಅದರಲ್ಲಿ ಲಭ್ಯವಿದೆ, ಎಂಬುದು ಅದರಲ್ಲಿ ಆಳಕ್ಕೆ ಇಳಿದಾಗ ಗೋಚರವಾಗುತ್ತದೆ. ಸಂಸ್ಕೃತ ಬಾರದ , ಶಾಸ್ತ್ರೋಕ್ತ ವಾಗಿ ವೇದಾಧ್ಯಯನ ಮಾಡದ ನನಗೇ ವೇದಮಂತ್ರಗಳು ಇಷ್ಟು ಪರಿಣಾಮ ಬೀರಿರಬೇಕಾದರೆ ಸಂಸ್ಕೃತ ಮತ್ತು ವೇದಾಧ್ಯನ ಆಗಿದ್ದವರಿಗಂತೂ ಅದೆಷ್ಟು ಮುದನೀಡಿರಬಹುದು! ಅದು ಏನೇ ಇರಲಿ. ನಾನಂತೂ ನಿರ್ಧಾರಮಾಡಿದ್ದಾಗಿದೆ. ನನಗೆ ತಿಳಿದ ವೇದ ಮಂತ್ರಗಳ ಸಾರವನ್ನು ಯಾವುದು ನೆಮ್ಮದಿಯ ಬದುಕಿಗೆ ಮಾರ್ಗದರ್ಶಕವಾಗಿದೆಯೋ ಅವುಗಳನ್ನು ಜನರಲ್ಲಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ತಪ್ಪಾದರೆ ತಿದ್ದಲು ಪಂಡಿತರು ಗಳಿಲ್ಲವೇ? ನಮ್ಮಂತವರನ್ನು ತಿದ್ದುವುದು ಪಂಡಿತರ ಕರ್ತವ್ಯ. ಅವರು ಮಾಡಬೇಕಾದ ಕೆಲಸಕ್ಕೆ ನಮ್ಮಂತ ಸಾಮಾನ್ಯರು ಕೈ ಹಾಕಿರುವಾಗ ದೋಷ ಕಂಡರೆ ಪಂಡಿತರು ತಿದ್ದುತ್ತಾರೆಂಬ ಬರವಸೆಯಿಂದ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದೇನೆ.

ಬರುವ ಜನವರಿ ಮೊದಲವಾರದಿಂದ ಸ್ಥಳೀಯ ಪತ್ರಿಕೆಯಲ್ಲಿ ವೇದವನ್ನು ಆಧರಿಸಿ ಸಾಮಾಜಿಕ ಚಿಂತನೆಗೆ ಪ್ರೇರೇಪಿಸುವ ಲೇಖನ ಮಾಲೆ ಆರಂಭಿಸುವ ಇಚ್ಚೆ ಇದೆ. ಅದಕ್ಕೊಂದು ಹೆಸರು ಸೂಚಿಸುತ್ತೀರಾ?

----------------------------------------------------------------
ನಾನು ಈ ಪ್ರಶ್ನೆಯನ್ನು ಫೇಸ್ ಬುಕ್ ಓದುಗರಿಗೆ ಕೇಳಿದಾಗ ಕೆಲವು ಹೆಸರುಗಳನ್ನು ಸೂಚಿಸಿದ್ದಾರೆ.ನೀವೂ ಕೆಲವು ಹೆಸರು ಸೂಚಿಸಿ.ಅಂತಿಮವಾಗಿ ಒಂದನ್ನು ಆರಿಸಿಕೊಳ್ಲೋಣ.


  • Arpana Deepak Kumar super chikkappa all the best:)
  • Arpana Deepak Kumar vedaratha sara.
  • Jois Mvr "ಜೀವನ"
  • ಅನಂತಕೃಷ್ಣ ಶರ್ಮ nanage innu yavudoo bandilla....
  • Bellur Ramaswamy Keshavamurthy Bahala adbuthavaagi bareddiddiri. ThilidukollabEkaada vishaya.
  • Narasinga Rao Vedaprakasha



  •  ರಾಘವೇಂದ್ರ ಅಡಿಗ ತೀರ್ಥಹಳ್ಳಿ
  • ನಮಸ್ಕಾರ, ನಿಮ್ಮ ಬರಹವನ್ನು ಓದಿದೆ (ವೇದದ ಬಗೆಗಿನ ಲೇಖನದ ಶೀರ್ಷಿಕೆ ಬಗ್ಗೆ), ನನಗೆ ಒಂದೆರೆಡು ಹೆಸರು ನೆನಪಿಗೆ ಬರುತ್ತಿದೆ, ಅವೆಂದರೆ : ೧) 'ವೇದ ವಾಕ್ಯ' ೨) 'ವೇದೋಕ್ತಿ' ೩) 'ನಿತ್ಯ ಜೀವನದಲ್ಲಿ ವೇದ' ೪) 'ವೇದ ವಾಹಿನಿ' ೫) 'ಜೀವನ ವೇದ' ಧನ್ಯವಾದಗಳು.




    lokesh Hassan : 
    Jeevanna Gnana
      
     

     ನಂಜುಂಡರಾಜು:
  •  ಮಾನ್ಯರೇ, ಒಳ್ಳೆಯ ಕಾರ್ಯಕ್ಕೆ ಕೈಹಾಕಿದ್ದೀರಿ. ಎಲ್ಲಾ ವಯೋಮಾನದವರಿಗೆ ಇದು
    ಅತ್ಯಾವಶ್ಯಕ. ಆದರೆ ನಮ್ಮ ಭಾರತೀಯರ ದುರಾದೃಷ್ಟ. ನಮಗೆ ಸಂಸ್ಕ್ರತ  ಓದಲು, ಬರೆಯಲು
    ಮತ್ತು ಮಾತನಾಡಲು ಬಾರದ ಕಾರಣ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಲು
    ಅಸಮರ್ಥರಾಗಿದ್ದೇವೆ. ಕಲಿತಿರುವವರು ತಮ್ಮ ಸ್ವಾರ್ಥಕ್ಕೆ ಹಣ ಸಂಪಾದನೆಗೆ
    ಬಳಸಿಕೊಳ್ಳುತ್ತಿದ್ದಾರೆ. ಸಂಸ್ಕೃತದಲ್ಲಿರುವ ಅದ್ಭುತ ಸಾರವನ್ನು ತಿಳಿದುಕೊಳ್ಳಲು
    ವಿದೇಶಿಯರು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಅವರು ಸಂಸ್ಕೃತ ಕಲಿತು ತಮ್ಮ ಭಾಷೆಗೆ
    ಬಾಷಾಂತರ ಮಾಡುತ್ತಿದ್ದಾರೆ. ಅದೇ ನಾವು ನಿರುಪಯುಕ್ತವಂದು ನಾಶಪಡಿಸುತ್ತಿದ್ದೇವೆ.
    ಆದರೆ ನೀವು,ನಿಮಗೆ ತಿಳಿದಿರುವ ವಿಷಯವನ್ನು ಜನತೆಗೆ ತಿಳಿಸಲು ಉತ್ಸುಕರಾಗಿದ್ದೀರಿ.
    ಇದರಿಂದಲಾದರು ಧಾರ್ಮಿಕವಾಗಿ, ಅದ್ಯಾತ್ಮಿಕವಾಗಿ, ವೈದ್ಯಕೀಯವಾಗಿ ಸಂಸ್ಕೃತ ಭಾಷೆಯಿಂದ
    ಸಂಗ್ರಹಿಸಿ,  ಜನರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ತಿಳಿಸಲು ಕೋರುತ್ತೇನೆ.
            ನೀವು ತಿಳಿಸಿರುವಂತೆ, ಇದಕ್ಕೆ ಶೀರ್ಷಿಕೆ "ವೇದ ಸಾರ " ವೇದ ಆರೋಗ್ಯ ಸಾರ "
    ಸಂಸ್ಕೃತ ಸಾರ " ಎಂಬುದಾಗಿ ಇಡಬಹುದಾಗಿದೆ. ವಂದನೆಗಳು.
  • ಡಾ|| ಕಾರ್ನಾಡ್,ತುಮಕೂರು: idhu nimage  gothhideyee?
  • ವಿಷ್ಣು ಮೂರ್ತಿ ಭಟ್: sir, nanage thilidruvanthe prasakthavada hesaru-  VEDACHINTHANE



Wednesday, December 4, 2013

"ಗೋರಕ್ಷೆಗಾಗಿ ಭಕ್ತಿ ಸಂಗೀತ"

ಕಳೆದ ಎರಡುಮೂರು ದಶಕಗಳ ಹಿಂದೆ ಹಸು-ಎತ್ತುಗಳಿಲ್ಲದ ಕೃಷಿಮಾಡುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ.ರೈತನು ದೇಶದ ಬೆನ್ನೆಲುಬಾದರೆ ಗೋವು ರೈತನ ಬೆನ್ನೆಲುಬಾಗಿತ್ತು. ರೈತನಿಗೂ ಗೋವುಗಳಿಗೂ ಅಂತಹಾ ಅವಿನಾಭಾವ ಸಂಬಂಧ.ಊಟಕ್ಕೆ ಹಾಲು,ಮೊಸರು,ತುಪ್ಪಗಳಿಗಾಗಿ ಹಸುಗಳನ್ನು ಸಾಕಿದ್ದರೆ ಕೃಷಿಕೆಲಸಗಳಿಗಾಗಿ ಎತ್ತುಗಳನ್ನು ರೈತನು ಸಾಕಿದ್ದನು.ನಾಡದನಗಳ ಸಗಣಿ ಗಂಜಲವು ಕೃಷಿಗೆ ಗೊಬ್ಬರವಾಗಿ ಹಸನಾದ ಬೆಳೆಗೆ ಕಾರಣವಾಗಿತ್ತು. ಕಾಲಬದಲಾದಂತೆ ಹೆಚ್ಚು ಹಾಲನ್ನು ಕೊಡುವ ಸೀಮೆ ಹಸುಗಳು ನಾಡಹಸುಗಳ ಜಾಗವನ್ನು ಆಕ್ರಮಿಸಿಕೊಂಡವು. ಎತ್ತುಗಳ ಜಾಗದಲ್ಲಿ ಟ್ರಾಕ್ಟರ್ ಬಂದವು. ಹಾಲುಕೊಡದ ಹಸುಗಳು ಕಟುಕರಪಾಲಾದವು.ನಾಡತಳಿಗಳ ಸಂಖ್ಯೆಯು ವಿಪರೀತವಾಗಿ ಕಡಿಮೆಯಾಯ್ತು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಗಳ ಉಪಯೋಗ ಹೆಚ್ಚಾಯ್ತು. ತಿನ್ನುವ ಆಹಾರ ಧಾನ್ಯಗಳು, ಸೊಪ್ಪು ತರಕಾರಿಗಳು ವಿಷಯುಕ್ತವಾಯ್ತು. ಪರಿಣಾಮವಾಗಿ ಜನರು ಹಲವಾರು ಕಾಣದ ರೋಗಗಳಿಗೆ ತುತ್ತಾದರು. ರಕ್ತದೊತ್ತಡ ಮತ್ತು ಸಕ್ಕರೆಖಾಯಿಲೆ ಎಂಬ ರೋಗಗಳು ಸಹಜವಾದವು. ರೋಗದ ಜೊತೆಗೇ ಬದುಕುವುದನ್ನು ಜನರು ಅಭ್ಯಾಸಮಾಡಿಕೊಂಡರು. ನಾಡದನಗಳ ಗಂಜಲ ಸಗಣಿಯಲ್ಲಿ ರೋಗನಿವಾರಕ ಅಂಶಗಳಿವೆ –ಎಂಬುದು ಹಲವಾರು ವರ್ಷಗಳ ಸಂಶೋಧನೆಯಿಂದ ತಿಳಿಯುತ್ತಾ ಬಂತು. ಆದರೆ ಆ ಹೊತ್ತಿಗಾಗಲೇ ನಾಡತಳಿಯ ಸಂಖ್ಯೆ ಕ್ಷೀಣಿಸಿತ್ತು.ಒಂದು ಲೀಟರ್ ಹಾಲು ಹೆಚ್ಚೆಂದರೆ 40ರೂ ಬೆಲೆಬಾಳಿದರೆ ಒಂದು ಲೀಟರ್ ನಾಡ ಹಸುವಿನ ಗಂಜಲವು 200 ರೂಗಳ ಬೆಲೆ ಉಳ್ಳದ್ದೆಂಬ ಅಂಶವು ತಡವಾಗಿ ಬೆಳಕಿಗೆ ಬಂತು.ಗೋವಿನ ಉತ್ಪನ್ನಗಳ ತಯಾರಿಕಾ ಘಟಕಗಳು ಆರಂಭವಾದವು. ಕ್ಯಾನ್ಸರ್ ಮತ್ತು ಏಡ್ಸ್ ನಂತಹ ಮಹಮ್ಮಾರಿ ರೋಗಗಳಿಗೂ ರಾಮಬಾಣವಾಗುವಂತಹ ಔಷಧಿಯನ್ನು ಗೋವಿನ ಉತ್ಪನ್ನದಿಂದ ತಯಾರುಮಾಡಬಹುದೆಂಬ ಅಂಶವು ಈಗ ಹೊಸ ಬರವಸೆಯನ್ನು ಮೂಡಿಸಲು ಕಾರಣವಾಗಿದೆ. ಎಲ್ಲವನ್ನೂ ಕೊಡುವ ಕಾಮಧೇನುವಾದ ಗೋಮಾತೆಯು ನಮಗೆ ಪ್ರತ್ಯಕ್ಷ ದೇವತೆ. ಇಂದು ಗೋಸಂತತಿಯನ್ನು ಉಳಿಸುವ ಜವಾಬ್ದಾರಿಯು ಪ್ರತಿಯೊಬ್ಬ ಭಾರತೀಯನದಾಗಿದೆ. ಈ ಉದ್ಧೇಶವನ್ನಿಟ್ಟುಕೊಂಡು ಹಾಸನದ ವೇದಭಾರತೀ ಸಂಸ್ಥೆಯು ,ನಗರದ ನಾದಾಮೃತ ಸಂಸ್ಥೆಯ ಮತ್ತು ಹಂಪಾಪುರದ ಸುಭಾಷ್ ಎಂ.ರಾವ್ ಸ್ಮರಣಾರ್ಥ ಟ್ರಸ್ಟ್ ಸಹಕಾರದೊಡನೆ ಒಂದು ಭಕ್ತಿಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ ಸಂಗ್ರಹವಾಗುವ ಹಣವನ್ನು ಅಲ್ಲೇ ಒಂದು ಗೋಶಾಲೆಗೆ ನೀಡಲಾಗುವುದು.ಕಾರ್ಯಕ್ರಮ ವಿವರ ಹೀಗಿದೆ. ಹೆಸರಾಂತ ಗಾಯಕ ಪಂ|| ಅಜಿತ್ ಕುಮಾರ್ ಕಡಕಡೆ ಇವರಿಂದ ಗೋರಕ್ಷೆಗಾಗಿ ಭಕ್ತಿ ಸಂಗೀತ. ಸ್ಥಳ: ಸಪ್ತಪದೀ ಸೌದಾಮಿನಿ ಸಭಾಂಗಣ,ಸೀತಾರಾಂಜನೇಯ ದೇವಾಲಯ, ಹಾಸನ ದಿನಾಂಕ: 7.12.2013 ಶನಿವಾರ ಸಂಜೆ 6:00 ಕ್ಕೆ ಹಾಸನದಲ್ಲಿರುವ ಮಿತ್ರರು ದಯಮಾಡಿ ಕಾರ್ಯಕ್ರಮಕ್ಕೆ ಬನ್ನಿ. ನಿಮ್ಮ ಸ್ನೇಹಿತರು ಹಾಸನದಲ್ಲಿದ್ದರೆ ಅವರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಳಿಸಿ. ಕಾರ್ಯಕ್ರಮದಲ್ಲಿ ಗೋವಿನ ಬಗ್ಗೆ ವಿಶೇಷ ವೀಡಿಯೋ ಪ್ರದರ್ಶನವೂ ಇರುತ್ತದೆ

"ಗೋರಕ್ಷೆಗಾಗಿ ಭಕ್ತಿ ಸಂಗೀತ " ಕಾರ್ಯಕ್ರಮದ ಬಗ್ಗೆ ಸ್ಥಳೀಯ  ಅಮೋಘ್ ವಾಹಿನಿಗೆ ನೀಡಿದ ಸಂದರ್ಶನದ ಚಿತ್ರ. ಹಂಪಾಪುರದ ಗೋಶಾಲೆಯ ಪ್ರಮುಖರಾದ ಶ್ರೀಮತಿ ಸ್ವರೂಪರಾಣಿ ಮತ್ತು 
ವೇದಭಾರತಿಯ ಸಂಯೋಜಕ ಶ್ರೀ ಹರಿಹರಪುರಶ್ರೀಧರ್




ಓಂ

ವೇದಭಾರತೀ, ಹಾಸನ

ಖ್ಯಾತ ಗಾಯಕ
ಪಂ|| ಅಜಿತ್ ಕುಮಾರ್ ಕಡಕಡೆ
ಇವರಿಂದ 
"ಗೋರಕ್ಷೆಗಾಗಿ ಭಕ್ತಿ ಸಂಗೀತ"

ಸ್ಥಳ: ಸಪ್ತಪದಿ ಸಭಾಂಗಣ
ಶ್ರೀ ಸೀತಾರಾಂಜನೇಯ ದೇವಾಲಯ, ಹಾಸನ

ದಿನಾಂಕ: 7.12.2013 ಶನಿವಾರ ಸಂಜೆ 6.00 ಕ್ಕೆ

ಸರ್ವರಿಗೂ ಸ್ವಾಗತ

ಬನ್ನಿ, ಭಾಗವಹಿಸಿ, ಸತ್ಕಾರ್ಯಕ್ಕೆ ಸಹಕರಿಸಿ








ವೇದೋಕ್ತ ಜೀವನ ಶಿಬಿರ-2

ಶಿಬಿರದ ಬಗ್ಗೆ:

ನಿತ್ಯ ಸತ್ಯ ಸಂಸ್ಕೃತಿ ವಿಚಾರಗಳ ಅರಿವಿನಲ್ಲಿ ವ್ಯವಹರಿಸುವುದಕ್ಕೆ ಒತ್ತಡ ರಹಿತ ಸುಲಭ ಸೂತ್ರಗಳ ಪರಿಚಯ.    ವಿಮರ್ಶೆ ಮಾಡಿ  ಸತ್ಯ, ಸತ್ವ ಕಂಡರೆ ಮಾತ್ರ ಸ್ವೀಕರಿಸಿ.ಪುರುಷ-ಮಹಿಳೆಯರು ಎಂಬ ಭೇದವಿಲ್ಲ, ವಯಸ್ಸಿನ ಮಿತಿಯಿಲ್ಲ. ವೇದ ಮಂತ್ರಗಳು ತಿಳಿದಿರಬೇಕೆಂದಿಲ್ಲ. ಕಟುವಾದ ನಿಯಮಗಳಾವುದೂ ಇಲ್ಲ.ಕಾರ್ಯಕ್ರಮದ ಸ್ಥಳದಲ್ಲಿ ವೇದ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಇರುತ್ತದೆ.ವೇದದ ಬಗ್ಗೆ ಸಾಮಾನ್ಯ ಅರಿವು ಮತ್ತು ಆಸಕ್ತಿ ಇರುವ ೫೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಸರಳವಾದ ಊಟೋಪಚಾರದ ವ್ಯವಸ್ಥೆ ಇರುತ್ತದೆ.

ಅರ್ಜಿ ಪಡೆಯಲು ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ:
   
9980813162/9448033813/9448868537
ಇ-ಮೇಲ್: vedasudhe@gmail.com

ಅಂಚೆ ವಿಳಾಸ:
ವ್ಯವಸ್ಥಾಪಕರು
ವೇದಭಾರತೀ ಸಂಪ್ರತಿಷ್ಠಾನ
ಶಾಖೆ, ಚನ್ನರಾಯಪಟ್ಟಣ

------------------------------------------------------
ಪ್ರವೇಶ ಅರ್ಜಿ


ವೇದಭಾರತಿ ಸಂಪ್ರತಿಷ್ಠಾನ
ಜಾಗೃತಿ ಟ್ರಸ್ಟ್ ಕಾರ್ಯಾಲಯ
ಕೋಟೆ, ಚನ್ನರಾಯಪಟ್ಟಣ- 573116

ವೇದೋಕ್ತ ಜೀವನ ಪಥದ
ಶಿಬಿರ

ಮಾನ್ಯರೇ,
ಮುಂಬರುವ ೨೦೧೪ನೇ ಏಪ್ರಿಲ್ ತಿಂಗಳಲ್ಲಿ ಕೈಗೊಂಡಿರುವ ಜೀವನ ಪೋಷಕ ಆದರ್ಶಗಳನ್ನೊಳಗೊಂಡಿರುವ ಕಾರ್ಯಕ್ರಮದ ಧ್ಯೇಯೊದ್ದೇಶಗಳನ್ನು ನಾನು ಮನಸಾರೆ ಒಪ್ಪಿ ಈ ಮೂಲಕ ಸತ್ಯ ಜೀವನ ನಡೆಸಲು ಅದರ ಅರ್ಥ ಮತ್ತು ಉದ್ದೇಶವನ್ನು ಪಡೆಯಲಿಚ್ಚಿಸುತ್ತೇನೆ.  ತಾವು ನನ್ನನ್ನು ಶಿಬಿರಾರ್ಥಿಯಾಗಿ ಸ್ವೀಕರಿಸಬೇಕೆಂದು ಪ್ರಾರ್ಥನೆ.

ಶಿಬಿರ ಶುಲ್ಕ ವಿವರ:

ಪಾವತಿಸಿರುವ ಬ್ಯಾಂಕ್ ಶಾಖೆಯ ಹೆಸರು,ಊರು------------

ಚಲನ್ ನಂಬರ್:----------------

ದಿನಾಂಕ:-------------


ನನ್ನ ವಿಳಾಸ: ದೂರವಾಣಿ ಸಂಖ್ಯೆ:
_________________ ಸ್ಥಿರ : ________________
_________________ ಸಂಚಾರಿ:
_________________

ಸಹಿ/-
-------------------------------------------------------------------------------------------

ವೇದೋಕ್ತ ಜೀವನ ಶಿಬಿರದ ಬಗ್ಗೆ ಇನ್ನೊಂದಿಷ್ಟು ಮಾಹಿತಿ

1.  ಶಿಬಿರ ಶುಲ್ಕ ರೂ 500.00 [ಶಿಬಿರದಿಂದ ಶಿಬಿರಾರ್ಥಿಗಳು ಹಿಂದಿರುಗುವಾಗ ಹಿಂದಿರುಗಿಸಲಾಗುವುದೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ]
2. ಶಿಬಿರಶುಲ್ಕ ಪಾವತಿಸಲು ಕೆನರಾ ಬ್ಯಾಂಕ್  ಉಳಿತಾಯ ಖಾತೆಯ ನಂಬರ್ ಪ್ರಕಟಿಸಲಾಗುವುದು.
3. ಶಿಬಿರಶುಲ್ಕವನ್ನು ಬ್ಯಾಂಕ್ ಖಾತೆಗೆ ಪಾವತಿಸಿ ವಿವರವನ್ನು  ನಮೂದಿಸಿರುವ ಅರ್ಜಿಯನ್ನು ತುಂಬಿ " ವೇದಭಾರತಿ ಸಂಪ್ರತಿಷ್ಠಾನ" ಜಾಗೃತಿ ಟ್ರಸ್ಟ್ ಕಾರ್ಯಾಲಯ, ಕೋಟೆ, ಚನ್ನರಾಯಪಟ್ಟಣ- 573116-ಈ ವಿಳಾಸಕ್ಕೆ ಕಳುಹಿಸಲು ಕೋರಿದೆ.
4. ಕಾಲಕಾಲಕ್ಕೆ ಅವಶ್ಯ ಮಾಹಿತಿಗಳನ್ನು ಪ್ರಕಟಿಸಲಾಗುವುದು.