Pages

Wednesday, March 31, 2010

ಆತ್ಮೀಯ ವೇದ ಬಂಧುಗಳೇ,
ವೇದದ ಬಗ್ಗೆ ವೇದಾಧ್ಯಾಯೀ ಸುಧಾಕರ ಶರ್ಮರ ಸರಳವ್ಯಾಖ್ಯಾನವನ್ನು ಜನಸಾಮಾನ್ಯರಿಗೆ ಪ್ರಚುರ ಪಡಿಸಬೇಕೆಂಬ ಉದ್ಧೇಶದಿಂದಆರಂಭಿಸಿರುವ ಈ ಬ್ಲಾಗಿನಲ್ಲಿ ಶರ್ಮರಿಗೆ ಬರೆಯಲು ತಾಂತ್ರಿಕ ಅಡಚಣೆಗಳಾದುದರಿಂದ ಬೇರೆಯ ತಾಣವನ್ನೇ [ವೇದಸುಧೆ ಡಾಟ್ ವೆಬ್ಸ್ ಡಾಟ್ ಕಾಮ್] ಆರಂಭಿಸಿದೆ. ಆದರೆ ಅನೇಕ ಮಿತ್ರರು ವೇದ ಸುಧೆಯ ಬ್ಲಾಗೇ ಸಾಕು, ಬೇರೆ ತಾಣಗಳನ್ನು ನಿರ್ವಹಿಸಲುಕಷ್ಟವಾಗುತ್ತದೆಂಬ ಸಲಹೆ ನೀಡಿದ್ದಾರೆ.ಅವರ ಸಲಹೆಯನ್ನು ಸ್ವೀಕರಿಸಿ ವೇದಸುಧೆಗೇ ಒಂದಿಷ್ಟು ಅಲಂಕಾರ ಮಾಡಿದ್ದೇನೆ. ಎಂದಿನಂತೆವೇದಸುಧೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.ಶರ್ಮರಿಗೆ ಮನವಿಮಾಡಿ ಕೆಲವು ವೇದ ಮಂತ್ರಗಳನ್ನು ಎಲ್ಲರಿಗಾಗಿ ವೇದ ತಾಣದಲ್ಲಿ ಕಲಿಸುವ ಕೃಪೆಮಾಡಬೇಕೆಂದು ಕೋರುವೆ. ಅದರ ಅರ್ಥ ವಿವರಣೆಯನ್ನು ಈ ಬ್ಲಾಗಿನಲ್ಲಿ ಕನ್ನಡದಲ್ಲಿ ಪ್ರಕಟಿಸುವ ಪ್ರಯತ್ನಮಾಡಲಾಗುವುದು.

2 comments:

  1. ಶ್ರೀ ಶ್ರೀಧರ್ರವರೇ ಈ ನಿಮ್ಮ ಬ್ಲಾಗಿನಲ್ಲಿ ನಾನು ನನ್ನ ವಿಚಾರಗಳನ್ನು ಹಾಕಲು ಇದ್ದ ಸಮಸ್ಯೆಗಳು ಪರಿಹಾರವಾಗಿವೆ ಎಂದು ಭಾವಿಸುತ್ತೇನೆ. ಈ ಪ್ರತಿಕ್ರಿಯೆಯೇ ಅದಕ್ಕೆ ಸಾಕ್ಷಿಯೆನ್ನಬಹುದು.
    ಮುಂದೆ ಹೆಚ್ಚು ಹೆಚ್ಚು ನನ್ನ ಭಾಗವಹಿಸುವಿಕೆಯನ್ನು ನಿರೀಕ್ಷಿಸಬಹುದು.
    ನೀವೆಲ್ಲರೂ ನನ್ನ ಮೇಲಿಟ್ಟಿರುವ, ಕ್ಷಮಿಸಿ, ವೇದಗಳ ಮೇಲಿಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆಗಳು, ವಂದನೆಗಳು, ಶುಭಾಶಯಗಳು.
    -ಸುಧಾಕರ ಶರ್ಮಾ, ಬೆಂಗಳೂರು.

    ReplyDelete
  2. ಶ್ರೀ ಶರ್ಮಾಜಿ,
    ಅಂತೂ ವೇದಸುಧೆಯಲ್ಲಿ ನೀವು ಬರೆಯುತ್ತೀರೆಂಬ ಭರವಸೆಯಿಂದಲೇ ಸಂತೋಷವಾಗಿದೆ. ವೇದಸುಧೆಗೆ ಸಿಂಗಾರ ಮಾಡುತ್ತಿರುವವರು ಶ್ರೀ ವಿಷ್ಣುಭಟ್ಟರು.ವೇದಸುಧೆಯಿಂದ http://vedasforall.org/ ಹಾಗೂ ಸಮಾನ ಚಿಂತಕರಾದ ಶ್ರೀ ವಿಷ್ಣು ಭಟ್ಟರ http://nimmodanevrbhat.blogspot.com/
    ಅವರ ಬ್ಲಾಗಿಗೆ ಹೋಗಿಬರಲು ದ್ವಾರವಿದೆ. ವೇದಸುಧೆಯ ಬಲಬದಿಯ ಸೈಡ್ ಬಾರ್ ನಲ್ಲಿ ದ್ವಾರವನ್ನು ಕಾಣಬಹುದು.ವಂದನೆಗಳು
    ಶ್ರೀಧರ್

    ReplyDelete