Pages

Saturday, March 27, 2010

ಪಾಣಿನಿ

ಒಂದು ಗುರುಕುಲ. ಗುರುಗಳಲ್ಲಿಗೆ ತಾಯಿಯೊಬ್ಬಳು ಬರುತ್ತಾಳೆ.ಜೊತೆಯಲ್ಲಿ ಅವಳ ಮಗು. ಗುರುಗಳಿಗೆ ಕೈ ಮುಗಿದು ಮಗನಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸುತ್ತಾಳೆ. ಮಗುವಿನ ಕೈ ನೋಡಿದ ಗುರುಗಳು ಮಗುವಿನ ಹಸ್ತದಲ್ಲಿ ವಿದ್ಯಾರೇಖೆ ಯಿಲ್ಲವಾದ್ದರಿಂದ ಮಗುವಿಗೆ ವಿದ್ಯೆ ಹತ್ತುವುದಿಲ್ಲವೆಂದು ತಿಳಿಸಿ ಮಗುವನ್ನು ಹಿಂದಿರುಗಿ ಮನೆಗೆ ಕರೆದುಕೊಂಡು ಹೋಗಲು ಹೇಳುತ್ತಾರೆ.ತಾಯಿಯಾದರೋ ಪರಿಪರಿಯಾಗಿ ಬೇಡಿಕೊಂಡರೂ ಗುರುಗಳು ನಿರಾಕರಿಸಿಬಿಡುತ್ತಾರೆ.ದು:ಖದಿಂದ ಹಿಂದಿರುಗಿದ ಬಾಲಕ ಸ್ವಲ್ಪ ಸಮಯದ ಬಳಿಕ ಒಬ್ಬನೇ ಗುರುಗಳ ಹತ್ತಿರ ಪುನ: ಬರುತ್ತಾನೆ. " ಏಕೆ ಬಂದೆ?" ಗುರುಗಳಧ್ವನಿ ಗಡುಸಾಗಿರುತ್ತೆ. " ಗುರುಗಳೇ ವಿದ್ಯಾರೇಖೆ ಹೇಗಿರುತ್ತೆ?"-ಶಾಂತವಾಗಿ ಬಾಲಕ ಕೇಳುತ್ತಾನೆ.
ಬಾಲಕನೊಬ್ಬನನ್ನು ಕರೆದು ಅವನ ಹಸ್ತವನ್ನು ತೋರಿಸಿ "ವಿದ್ಯಾರೇಖೆ ಎಂದರೆ ಇದು, ನಿನಗೆ ಅದರ ಲೇಶ ಮಾತ್ರವೂ ಇಲ್ಲ. ನಿನಗೆಲ್ಲಿ ವಿದ್ಯೆ ಹತ್ತಲು ಸಾಧ್ಯ? ಹೊರಟು ಬಿಡು" ಗುರುಗಳು ಸಿಟ್ಟಿನಿಂದಲೇ ಹೇಳುತ್ತಾರೆ.
ಬಾಲಕ ಆಶ್ರಮದಿಂದ ಹೊರಗೆ ಹೋಗುತ್ತಾನೆ.ಸ್ವಲ್ಪ ಸಮಯದ ಬಳಿಕ ಗುರುಗಳಲ್ಲಿಗೆ ಮತ್ತೆ ಬರುತ್ತಾನೆ.ಗುರುಗಳಿಗೆ ಈಗಂತೂ ಅಸಾಧ್ಯವಾದ ಸಿಟ್ಟು ಬರುತ್ತೆ. ಸುಮ್ಮನೆ ನನ್ನ ಕಾಲ ಹರಣ ಮಾಡುತ್ತಿದ್ದಾನಲ್ಲಾ! ಬಾಲಕ ಶಾಂತವಾಗಿಯೇ ಗುರುಗಳಲ್ಲಿ ನಿವೇದಿಸಿಕೊಳ್ಳುತ್ತಾನೆ-" ಗುರುಗಳೇ, ಈಗ ವಿದ್ಯಾರೇಖೆ ಮೂಡಿದೆ ನೋಡಿ" -ಸುರಿಯುತ್ತಿದ್ದ ರಕ್ತವನ್ನು ಲೆಕ್ಕಿಸದೆ ಗುರುಗಳ ಮುಂದೆ ಕೈ ಚಾಚುತ್ತಾನೆ. ಬೆಣಚುಕಲ್ಲಿನಿಂದ ಬಾಲಕ ಕೈ ಮೇಲೆ ಗೆರೆ ಎಳೆದಿರುತ್ತಾನೆ.ಈ ದೃಶ್ಯವನ್ನು ನೋಡಿದ ಗುರುಗಳು ಬಾಲಕನನ್ನು ತಬ್ಬಿಕೊಂಡು " ಕಣ್ಣೀರಿಡುತ್ತಾ ನಿನ್ನಂತಹ ಛಲ ಇರುವ ವಿದ್ಯಾರ್ಥಿಗಲ್ಲದೆ ಇನ್ಯಾರಿಗೆ ನಾನು ವಿದ್ಯಾದಾನ ಮಾಡಲಿ? ನಿನಗೆ ಖಂಡಿತವಾಗಿಯೂ ಹೇಳಿಕೊಡುತ್ತೇನೆಂದು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಈ ಬಾಲಕನೇ ವ್ಯಾಕರಣವನ್ನು ರಚಿಸಿದ ಮಹಾ ಪಂಡಿತ " ಪಾಣಿನಿ"

5 comments:

  1. ಧನ್ಯವಾದ ಶ್ರೀಧರ್ ಅವರೇ. ಹಲವಾರು ಜನ ತಮ್ಮ ಕೈಯ್ಯಲ್ಲಿ ಬೇಕಾದ ರೇಖೆಗಳು ಇಲ್ಲವೆಂದು ಕೊರಗುತ್ತಾರೆ. ಜ್ಯೋತಿಷ್ಯ/ಭವಿಷ್ಯ ಹೇಳುವವರಿಗೆ ಕೈಯ್ಯನ್ನೋ ಜಾತಕವನ್ನೋ ತೋರಿಸಿ, ತಮ್ಮ ಭವಿಷ್ಯವನ್ನು ಅರಿಯಲು ಹೋಗುವವರಿಗೆ ಇದು ಒಳ್ಳೆಯ ತಿಳುವಳಿಕೆ ಆದೀತು.

    ಇಂತಹ ವಿಷಯಗಳನ್ನು ನಮ್ಮ ಸಮೀಪಕ್ಕೆ ತರುವ ತಮಗೆ ಹೃತ್ಪೂರವಕ ಅಭಿನಂದನೆಗಳು.

    ReplyDelete
  2. ಧನ್ಯವಾದಗಳು ಆತ್ಮೀಯ ರಾಜೀವ್

    ReplyDelete
  3. ನಿಜ ..
    ಈ ಪುರಾಣ ಕಥೆ ಮೂಡನ೦ಬಿಕೆಗಳನ್ನು ರೂಢಿಯಲ್ಲಿಟ್ಟುಕೊ೦ಡವರಿಗೆ ಒ೦ದು ಉತ್ತಮ ಮಾರ್ಗದರ್ಶನ....
    ನಿಮ್ಮ ಪ್ರಯತ್ನ ಮು೦ದುವರೆಯಲಿ...
    ವ೦ದನೆಗಳು.

    ReplyDelete
  4. ಛಲ, ಸಾಧನೆ, ಪುರುಷಾರ್ಥದ (ದುಡಿಮೆ ಮಾಡುವುದು) ಮುಂದೆ ಇಂದು ಹೆಚ್ಚು ರೂಢಿಯಲ್ಲಿರುವ ಜ್ಯೋತಿಷ್ಯ, ಜಾತಕಗಳನ್ನೊಳಗೊಂಡ 'ಫಲಿತ ಜ್ಯೋತಿಷ್ಯ' (Astrology) ಉಸಿರೆತ್ತುವಂತಿಲ್ಲ! Fantastic!!

    ReplyDelete
  5. ಶ್ರೀ ಶರ್ಮಾಜಿ, ನಮಸ್ತೆ,
    ನಿನ್ನೆಯಿನ್ನೂ ಕವಿನಾಗರಾಜರೊಡನೆ ಮಾತನಾಡುತ್ತಾ "ವೇದಸುಧೆ" ಎಂದರೆ ನಿತ್ಯ ಸುದ್ಧಿ ಪತ್ರಿಕೆಯಂತಾಗಬಾರದು, ಅದರಲ್ಲಿ ಯಾವಕಾಲಕ್ಕೂ ಓದಿದರೆ ಒಂದಿಷ್ಟು ಹೊಸದು ಸಿಗುವಂತಾಗಬೇಕೆಂದು ಅಪೇಕ್ಷೆ ವ್ಯಕ್ತಪಡಿಸಿದ್ದೆ.ಇಂದು ವೇದಸುಧೆಯನ್ನು ನೋಡುವಾಗ ನಮ್ಮ ಅಪೇಕ್ಷೆ ಈಡೇರುತ್ತದೆಂಬ ಭರವಸೆ ಮೂಡಿತು. ಕಾರಣ ಏನು ಗೊತ್ತೇ? ಈಗ ನೀವು ಓದಿರುವ ಪುಟ್ಟ ಬರಹ ಪ್ರಕಟವಾಗಿ ಒಂಬತ್ತು ತಿಂಗಳಾಗಿದೆ.ಇಂದು ಬಹುಷ: ನಿಮಗೆ ಸಮಯಾವಕಾಶ ಇದ್ದಿರಬಹುದು. ನೀವು ವೇದಸುಧೆಯನ್ನು ಕೆದಕಿ ಅದರ ಮೌಲ್ಯ ಮಾಪನ ಮಾಡಿದ್ದೀರಿ.ಖುಷಿಯಾಯ್ತು. ವೇದಸುಧೆಯು ಸದಾಕಾಲಕ್ಕೂ ಹೀಗೆಯೇ ನಿತ್ಯನೂತನವಾಗಿರಲೆಂಬ ಬಯಕೆ ನನ್ನದು. ನಿಮ್ಮಂತವರ ಬೆಂಬಲ ಇದ್ದೇ ಇದೆ.

    ReplyDelete