Pages

Sunday, April 18, 2010

ಸನ್ಯಾಸಿಗಳಿಗೆ ಶಾಂತಿಯೇ ಅಮೃತ

ಕಾವ್ಯಂ ಸುಧಾ ರಸಜ್ಞಾನಾಂ ಕಾಮಿನಾಂ ಕಾಮಿನೀ ಸುಧಾ|
ಧನಂ ಸುಧಾ ಸಲೋಭಾನಾಂ ಶಾಂತಿ: ಸಂನ್ಯಾಸಿನಾಂ ಸುಧಾ||

ರಸವನ್ನು ಬಲ್ಲವರಿಗೆ ಕಾವ್ಯಗಳೇ ಅಮೃತ
ಕಾಮಿಗಳಿಗೆ ಕಾಮಿನಿಯೇ ಅಮೃತ
ಲೋಭಿಗಳಿಗೆ ಹಣವೇ ಅಮೃತ
ಆದರೆ ಸನ್ಯಾಸಿಗಳಿಗೆ ಶಾಂತಿಯೇ ಅಮೃತ.

ಶೃಂಗಾರ, ವೀರ, ಕರುಣ ಮುಂತಾದ ನವರಸಗಳನ್ನು ಆಸ್ವಾದನೆ ಮಾಡುವ ಕವಿ-ವಿದ್ವಾಂಸರಿಗೆ ಕಾವ್ಯಗಳೇ ಅಮೃತವಲ್ಲವೇ? ಕಾವ್ಯವನ್ನೇ ಅವರು ಆಸ್ವಾದಿಸುತಾರೆ. ಕಾಮುಕರಿಗೆ ಸದಾ ಕಾಮಿನಿಯ ಚಿಂತೆ, ಅದೇ ಅವರಿಗೆ ಅಮೃತ. ಸದಾ ಹಣ-ಹಣ ವೆಂದು ಹೆಣಗಾಡುವ ಲೋಭಿಗೆ ಹಣವೇ ಅಮೃತ. ಸರ್ವಸಂಗಪರಿತ್ಯಾಗಿಗಳಾದ ಸಂನ್ಯಾಸಿಗೆ ಸದಾ ಆತ್ಮಜ್ಞಾನದ ಸಾಧನೆ ಮಾಡುತ್ತಾ ಅವನಿಗೆ ಶಾಂತಿಯೇ ಅಮೃತವು.

2 comments:

  1. ಚೆನ್ನಾಗಿದೆ, ಸನ್ಯಾಸಿಗಳು ಅದಕ್ಕೆ ಶಾಂತಿಯಿರಲಿ ಎಂಬ ಕಾರಣಕ್ಕೆ ಪ್ರಶಾಂತವಾದ ನದೀತೀರ, ಕಾಡಿನ ಮಧ್ಯದ ಸಮತಟ್ಟು ಜಾಗ ಇವುಗಳನ್ನೆಲ್ಲ ಆಯ್ದುಕೊಳ್ಳುತ್ತಿದ್ದರು, ಆದರೆ ಇಂದು ಅನೇಕರು ನಮ್ಮ ಮಧ್ಯೆಯೇ ಇದ್ದು ಶಾಂತಿಗಾಗಿ ಪರಿತಪಿಸುತ್ತಾರೆ,ಕೇವಲ ಹಿಮಾಲಯದ ಕೆಲವರನ್ನು ಬಿಟ್ಟರೆ ಮಿಕ್ಕೆಲ್ಲಾ ಕಡೆ ಇಂದು ಶಾಂತಿ ರಹಿತ ಸನ್ಯಾಸ ಜೀವನವೇ ಆಗಿದೆ, ತಮ್ಮೊಳಗೇ ಶಾಂತಿ ಕಂಡುಕೊಳ್ಳಬೇಕೇ ಹೊರತು ಪರಿಸರದಲ್ಲಿ ಅವರಿಗೆ ಶಾಂತ ವಾತಾವರಣ ಸಿಗುವುದು ಕಷ್ಟ.

    ReplyDelete