Pages

Thursday, April 22, 2010

ಎಲ್ಲಿ ಹುಡುಕಲಿ ನಿನ್ನ

ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ?
ಯಾವ ಮಂತ್ರವಹೇಳಿ
ನಿನ್ನ ಮೆಚ್ಚಿಸಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ಕಣ್ಮುಚ್ಚಿ ಕುಳಿತಿರುವ
ನಿನ್ನ ದೇಗುಲದಿ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ|
ಅಹುದೇ ದೇವ ತೋರು
ನಿನ್ನ ರೂಪ|

ನನ್ನೊಳಗೆ ಇರುವಾ
ನಿನ್ನ ಮರೆತು ನಾನು
ಎಲ್ಲಿ ಕಾಣಲಿ ನಿನ್ನ
ನಿಜದ ರೂಪ?||

9 comments:

  1. Dear Sir,

    Outstanding lyrics and wonderful composition.
    And yea singer also has done complete justice to the song.

    Expressing thoughts in the form of a song is a difficult task
    but sir you have made it.

    Hope to see more of these in coming days.

    Thanks for sharing and congratulations.

    Regards,

    Vishal Tatti

    ReplyDelete
  2. ಶ್ರೀಧರ್ ಸರ್, ಅಧ್ಬುತವಾಗಿದೆ
    Raghavendra Navada

    ReplyDelete
  3. ಶ್ರೀ ವಿಶಾಲ್ ಮತ್ತು ರಾಘವೇಂದ್ರ
    ನಮಸ್ತೆ,
    ಹಾಡು ಕೇಳಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹಾಡಿಗೆ ಭಾವತುಂಬುವ ಕೆಲಸವನ್ನು ಶ್ರೀಮತಿ ಲಲಿತಾ ರಮೇಶ್ ಮಾಡಿದ್ದಾರೆ. ಅವರಿಗೆ ಭಗವಂತನು ಶ್ರೇಯಸ್ಸನ್ನು ಕೊಡಲೆಂದು ಪ್ರಾರ್ಥಿಸುವೆ.

    ReplyDelete
  4. Sridhar
    This is very nice and meaningful. Also the way the singer has rendered is also very nice. I presume it is your sister in law sang this. Sri Ganesh bhat also listened and apreciated

    Thanks
    YVV

    ReplyDelete
  5. ಕವಿ ನಾಗರಾಜ್ said...

    'ಅಹಂಬ್ರಹ್ಮಾಸ್ಮಿ '

    ReplyDelete
  6. Bellala Gopinatha Rao said...

    Aತ್ಮೀಯ ಶ್ರೀಧರ್
    ಒಳಗಣ್ಣು ತೆರೆದೇ ನೋಡ ಬೇಕು ನಿನ್ನ
    ಚೆನ್ನಾಗಿದೆ ನಿಮ್ಮ ಕವನ

    Please ಇದನ್ನು ನೋಡಿ
    http://sampada.net/article/6295

    ReplyDelete
  7. ಸೀತಾರಾಮ. ಕೆ. said...

    nice one

    ReplyDelete
  8. very nice song,liked much,in between had no net and hence took time to read & listen,thanks a lot

    ReplyDelete