Pages

Sunday, April 11, 2010

ಅಮೃತರೂಪಿ ನೀರನ್ನು ಕಾಪಾಡಿ


ಅಪ್ಸ್ವ[ಅ]೦ ತರಮೃತಮಪ್ಸು ಭೇಷಜಮಪಾಮುತ
ಪ್ರಶಸ್ತಯೇ| ದೇವಾ ಭವತ ವಾಜಿನ: || ೧-೨೩-೧೯

ಅರ್ಥ:
ಮಾನವರೇ ನೀರಿನಲ್ಲಿ ಅಮೃತವಿದೆ.ನೀರಿನಲ್ಲಿ ಔಷಧಿಗಳಿವೆ. ನೀರು ಅತ್ಯಂತ ಪ್ರಶಸ್ತವಾದುದು. ಇದನ್ನು ಕಾಪಾಡಿ.ಈ ನೀರು ಮಾನವರನ್ನು ದೈವತ್ವದತ್ತ ಕೊಂಡೊಯ್ಯುತ್ತದೆ.ದೇವತೆಗಳ ಸುಖವನ್ನು ನೀರು ನೀಡುತ್ತದೆ.



ವೇದದ ಧ್ವನಿ ನಮಗೆ ಕೇಳೀತೆ?
ಅಭಿವೃದ್ಧಿಯ ಹೆಸರಿನಲ್ಲಿ ನದಿಗಳನ್ನು, ತೀರ್ಥಗಳನ್ನು, ಸರೋವರಗಳನ್ನು, ಜಲಪಾತಗಳನ್ನು,ಕೆರೆಗಳನ್ನು, ಕೊಳಗಳನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಿರುವ ನಮ್ಮ ಕಣ್ತೆತೆರೆಯುವುದು ಯಾವಾಗ? ನೀರನ್ನು ಕಲ್ಮಷಗಳಿಂದ ಕಲುಷಿತ ಗೊಳಿಸುತ್ತಿರುವ ನಮಗೆ ವೇದದ ಧ್ವನಿ ಕಿವಿಗೆ ಬೀಳುವುದು ಯಾವಾಗ?

ಭೂಮಿಯನ್ನು ಕೊರೆದು ನೀರು ತೆಗೆದು ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ನಾವು ಇನ್ನೂ ಎಚ್ಛೆತ್ತುಗೊಳ್ಳದಿದ್ದರೆ ಯಾವ ದೇವರು ತಾನೇ ನಮ್ಮನ್ನು ಕಾಪಾಡಬಲ್ಲ?

ಕೃಪೆ: ಶ್ರೀ ತಿ.ನಾ.ರಾಘವೇಂದ್ರರ ಋಗ್ವೇದ ಸಾರ ಗ್ರಂಥ


ಋಗ್ವೇದ ಸಾರ ಗ್ರಂಥವನ್ನು ಓದುತ್ತಿದ್ದಾಗ ಮೇಲಿನ ವೇದಮಂತ್ರವು ನನ್ನನ್ನು ಅತಿಯಾಗಿ ಆಕರ್ಷಿಸಿತು. ಮಂತ್ರವನ್ನು ಬರೆಯುವಾಗ ಸ್ವರವನ್ನು ಬರೆಯುವ ತಂತ್ರ ನನಗೆ ತಿಳಿಯದಿದ್ದರಿಂದ ಸ್ವರವನ್ನು ಬರೆದಿಲ್ಲ. ವೇದ ವಿದ್ವಾಂಸರು ಮನ್ನಿಸಬೇಕೆಂದು ವಿನಂತಿಸುವೆ. ವೇದದ ಈ ಆದೇಶ ಎಲ್ಲರಿಗೂ ತಲುಪಬೇಕೆಂಬ ಏಕಮಾತ್ರ ಉದ್ಧೇಶದಿಂದ ಈ ಪುಟ್ಟ ಬರಹ ಪ್ರಕಟಿಸಿರುವೆ.
-ಹರಿಹರಪುರಶ್ರೀಧರ್

2 comments:

  1. ವೇದದಲ್ಲೂ ಪರಿಸರ ಪ್ರಜ್ಞೆಯ ಸಾಲುಗಳು!!!! ಧನ್ಯವಾದಗಳು.

    ReplyDelete
  2. ಶ್ರೀಧರ ಅವರೇ ವಂದನೆಗಳು ! ಈ ಸಾಲುಗಳನ್ನು ನೋಡಿ ಬಹಳ ಖುಷಿಯಾಯಿತು ! ಇದನ್ನು ನಾನು facebook ನಲ್ಲಿ ಬಳಸಬಹುದೇ ?

    ReplyDelete