Pages

Tuesday, June 1, 2010

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಜಿಜ್ಞಾಸೆ-೨

ಶ್ರೀ ಶರ್ಮಾಜಿ,
ನಮಸ್ತೆ,

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಒಂದು ಜಿಜ್ಞಾಸೆ ಬರಹಕ್ಕೆ ನೀವು ಬರೆದಿರುವ ಅಭಿಪ್ರಾಯಗಳನ್ನಾದರಿಸಿ ನಿಮಗೆ ಕೆಲವುಪ್ರಶ್ನೆಗಳನ್ನು ಅದೇ ಬರಹದಲ್ಲಿ ಹಾಕಲಾಗಿದೆ. ದಯಮಾಡಿ ಅದಕ್ಕೆ ಉತ್ತರಿಸಿ. ನಿಮ್ಮ ಸಮಯದ ಅಭಾವದ ಅರಿವು ನನಗಿದೆ. ಆದರೂಸಮಯಮಾಡಿಕೊಂಡು ನೀವು ಉತ್ತರಿಸುವುದು ನಮಗೆ ಅನಿವಾರ್ಯವಾಗಿದೆ.

3 comments:

  1. "ಪೂಜಾಕಾಲೆ ಸ್ವರವರ್ಣ ಮಂತ್ರ ತಂತ್ರ ಲೋಪ ದೋಷ ಪರಿಹಾರಾರ್ಥಂ" "ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಂ" "ಕರ ಚರಣ ಕೃತಂ ವಾ ...." ಹೀಗೆ ನಮ್ಮ ತಪ್ಪುಗಳನ್ನು ಮನ್ನಿಸುವಂತೆ ಬೇಡುವ ಅನೇಕ ಪೂಜಾ ವಿಧಿಯ ಮಂತ್ರಗಳು ಬಳಕೆಯಲ್ಲಿವೆ. ಅನೇಕ ಆಚಾರ್ಯರೂ ಕೂಡ ಸ್ತನ, ಕುಚ, ಶಿಶ್ನ ಇತ್ಯಾದಿಗಳನ್ನು ಬಳಸಿ ದೇವತಾರ್ಚನೆ ವಿಧಿಗಳನ್ನು ರಚಿಸಿಕೊಟ್ಟಿದ್ದಾರೆ. ಮೂಲ ಕರ್ತೃಗಳು ವಿವರಿಸಲು ಬದುಕಿಲ್ಲವಾದ್ದರಿಂದ ಯಾವುದೇ ಜಿಜ್ಞಾಸೆ ಚರ್ಚೆ ಕೂಡ ಸಮರ್ಪಕ ಎನ್ನಿಸದು. ಮನಶ್ಶುಧ್ಧಿಗೆ ವ್ಯತ್ಯಯವಾಗುವುದಾದರೆ ಇಂತಹ ಸ್ತೋತ್ರ, ಮಂತ್ರಗಳನ್ನು ಬಳಸದೆ ಇದ್ದರಾಯಿತು. ಹೆಚ್ಚು ಚರ್ಚಿಸಿದಷ್ಟು ಶ್ರಧ್ಧೆಯು ಮಾತ್ರ ಕಡಿಮೆಯಾಗುವುದಲ್ಲದೆ ಸಂಶಯ ವೃಧ್ಧಿಯಾಗುವುದಲ್ಲದೆ ಬೇರೆ ಪ್ರಯೋಜನ ಇಲ್ಲ. ದೇವಸ್ಥಾನದಲ್ಲಿ ಕೂತು ಹೆಂಡದಂಗಡಿಯ ಧ್ಯಾನ ಮಾಡಿದಂತೆ ಶ್ರಧ್ಧಾಳುಗಳು ಇಂತಹ ಕುತರ್ಕಗಳಿಂದ ದೂರವಿದ್ದರೆ ವಾಸಿ.
    "ಪೂಜಾಕಾಲೆ ಸ್ವರವರ್ಣ ಮಂತ್ರ ತಂತ್ರ ಕು-ತಂತ್ರ ಲೋಪ ದೋಷ ಪರಿಹಾರಾರ್ಥಂ" ಎಂದು ಬದಲಿಸಬೇಕಾದೀತು!!

    ReplyDelete
  2. ನೀವು ಈ ಚರ್ಚೆಯನ್ನು ಆರಂಭದಿಂದ ಓದಿದಿರಾ? ವೇದಸುಧೆಯ ಉದ್ಧೇಶವೇ ನಮ್ಮ ಆಚರಣೆಯನ್ನು ಸದುದ್ಧೇಶದಿಂದ ಮಥಿಸಿ ಒಂದು ವೇಳೆ ತಪ್ಪನ್ನು ರೂಢಿಸಿಕೊಂಡುಬಂದಿದ್ದು ದೃಢಪಟ್ಟರೆ ಸರಿಯಾದ ದಾರಿ ಕಂಡರೆ, ಅದು ನಮಗೆ ಒಪ್ಪಿಗೆ ಯಾದರೆ ಅದರಂತೆ ಸಾಗಬಹುದು. ಅಥವಾ ನಾವು ಮಾಡುತ್ತಿರುವುದು ಸರಿಎನಿಸಿದರೆ ಮುಂದುವರೆಸುವುದು.[ದೇವಸ್ಥಾನದಲ್ಲಿ ಕೂತು ಹೆಂಡದಂಗಡಿಯ ಧ್ಯಾನ ಮಾಡಿದಂತೆ] ಈ ಮಾತು ಬೇಡವಾಗಿತ್ತು.ನೀವು ಓದಿರದಿದ್ದರೆ ಜಿಜ್ಞಾಸೆ-೧ ನ್ನು ಓದಿ.

    ReplyDelete
  3. ಬ್ರಾಹ್ಮಣರಿಗೆ ಪಾಂಡಿತ್ಯದ ಅಹಂಕಾರ ಸಲ್ಲದು. ಚರ್ಚೆಯಲ್ಲಿ ಭಟ್ ಅನ್ನುವ ವ್ಯಕ್ತಿ ಉತ್ತಿರಿಸುವ ಭರದಲ್ಲಿ
    ಬೇರೆಯವರ ಮನಸ್ಸು ನೋಯಿಸುವ ರೀತಿಯಲ್ಲಿ ಬರೆದಿದ್ದು ಕಂಡುಬಂತು. ಅಲ್ಲದೆ "ಕಾಲಿಡುವ" ಅನ್ನುವ ಪದ ಪ್ರಯೋಗ ಅಜ್ನಾನದಿಂದ ಅಲಕ್ಷದಿಂದಲೇ ಆಗಿದ್ದರೂ ತಪ್ಪು. ಇಂತಹ ಚಿಕ್ಕ ಸೂಕ್ಷ್ಮಗಳು ಪಂಡಿತರೆಂದು ಉಬ್ಬುವ ಕೆಲವರಿಗೆ ತೋಚದೆ ಹೋಗಬಹುದು. ರಕ್ಷಣೆಯ ಭರದಲ್ಲಿ ಮತ್ತೆ ಅದೇ ಅಹಂಕಾರ! "ಪಂಡಿತಹ ಪಂಡಿತಂ ದೃಸ್ತ್ವಾ ಶ್ವಾನೈವ ಗುರುಗುರಾಯಚ" ಅನ್ನುವoತೆ ಚರ್ಚೆಯಲ್ಲಿ ಪ್ರಬುಧ್ಧತೆಯ ಕೊರತೆ ಎದ್ದುಕಾಣುತ್ತದೆ. ಸಾಮಾನ್ಯಜ್ಞಾನ ಸಂಸ್ಕೃತ ಜ್ಞಾನಕ್ಕಿಂತ ಮಿಗಿಲು. ಸಂಸ್ಕೃತ ಜ್ಞಾನಿಗಳಲ್ಲಿ ಇದರಕೊರತೆ ಇರುವುದರಿಂದಲೇ ಬಹುಜನರನ್ನು ತಲುಪುವಲ್ಲಿ ವಿಫಲವಾಗಿರುವುದು.
    ನಿಮ್ಮ ವಿನಯ ಪೂರ್ವಕ ಉತ್ತರ ಸಂತಸ ತಂದಿದೆ. ಎಲ್ಲವನ್ನು ಸರಿಯಾಗಿ ಓದಿ ಧನಾತ್ಮಕವಾಗಿಯೇ ಸ್ಪಂದಿಸುತ್ತೇನೆ.

    ReplyDelete