ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, June 9, 2010

ಅನೌಪಚಾರಿಕ ಚರ್ಚೆ

ದಿನಾಂಕ ೬.೬.೨೦೧೦ ರಂದು ಬೆಂಗಳೂರಿನ ವಿಜಯನಗರದಲ್ಲಿ ನಡೆದ ಸತ್ಸಂಗದಲ್ಲಿ ಸುಧಾಕರ ಶರ್ಮರು ಪ್ರವಚನ ಮಾಡಿದನಂತರ ಅನೌಪಚಾರಿಕ ಚರ್ಚೆ ನಡೆಯಿತು. ಚರ್ಚೆಯಲ್ಲಿ ಭಾಗವಹಿಸಿದ್ದ ಹಲವರಲ್ಲಿ " ತಮ್ಮ ವಿಚಾರಧಾರೆಯನ್ನು ತಮ್ಮ ಮನೆಗಳಲ್ಲಿಒಪ್ಪಿಲ್ಲವೆಂಬ ಬೇಸರ ಅವರ ಮಾತುಗಳಿಂದಲೇ ವ್ಯಕ್ತವಾಗುತ್ತಿತ್ತು. " ಇನ್ನೂ ಮೂರ್ತಿ ಪೂಜೆ ಮಾಡುತ್ತಾರಲ್ಲಾ!!" ಎಂಬುದುಅವರಿಗೆ ಸಹಿಸಲು ಅಸಾಧ್ಯವಾದ ಸಂಗತಿಯಾಗಿತ್ತು. ಈ ಬಗ್ಗೆ ಸ್ವಲ್ಪ ನಿಷ್ಟುರವಾಗಿಯೇ ಚರ್ಚೆಗಿಳಿದ ನನ್ನಿಂದ ಸತ್ಸಂಗಿಗಳಿಗೆ ಸ್ವಲ್ಪಬೇಸರವೂ ಆಗಿರಬಹುದು. ಯಾರಿಗದರೂ ಬೇಸರವಾಗಿದ್ದರೆ ಈ ಮೂಲಕ ನಾನು ಅವರ ಕ್ಷಮೆಕೋರುತ್ತಾ ಆನಂತರ ಶರ್ಮರೊಡನೆಹಾಗೂ ವಿಶಾಲ್ ಇವರೊಡನೆ ಈ ಮೇಲ್ ಮೂಲಕ ಮಾಡಿದ ಮಾತುಕತೆಯನ್ನು ಎಲ್ಲರ ಗಮನಕ್ಕೆ ತರಬಯಸುವೆ.
--------------------------------------------------------
I wanted to thankyou for yesterday's invitation,I really enjoyed
the discussion as it brought out so many new things.

Please express my thanks to your sister & family also and yea
the food was superb.

Regards,


ವಿಶಾಲ್
----------------------------------------------------
ನಿಜ ಹೇಳುವೆ ವಿಶಾಲ್, ನಿನ್ನೆಯ ಚರ್ಚೆಯಿಂದ ನನಗೆ ಬಹಳ ಸಮಾಧಾನವಾಯ್ತು-ಎಂದೇನೂ ಇಲ್ಲ. ನನ್ನ ಸ್ವಭಾವ ವಿಚಿತ್ರ. ಚರ್ಚೆಶುಷ್ಕವೆನಿಸಿತು.ಅಲ್ಲಿದ್ದವರಿಗೆ ಮೂರ್ತಿ ಪೂಜೆ ಮಾಡುವವರ ಬಗೆಗೆ ಇರುವ ಆಕ್ರೋಶವನ್ನು ಕಂಡು ನನಗೆ ಹಿತವೆನಿಸಲಿಲ್ಲ. ಸಮಾಜದಲ್ಲಿ ಹೆಂಡ ಸಾರಾಯಿ ಕುಡಿದು ತೂರಾಡುವವರನ್ನು ಕಾಣುವಂತೆಯೇ ಮೂರ್ತಿ ಪೂಜಕರನ್ನೂ ಕಾಣುವ ಪರಿ ನನಗೆಇಷ್ಟವಾಗಲಿಲ್ಲ. ನಾನು ನಿತ್ಯವೂ ವಿಗ್ರಹ ಪೂಜೆ ಮಾಡುತ್ತಿದ್ದೀನಾ? ಎಂದರೆ ಖಂಡಿತಾ ಇಲ್ಲ. ಆದರೆ ಅದರಲ್ಲಿ ಹಲವಾರು ವರ್ಷಸಂತೋಷ ಅನುಭವಿಸಿರುವೆ. ಅದು ಒಂದು ಹಂತವೆಂದು ಭಾವಿಸುವೆ.ಅದಕ್ಕಿಂತ ಹೆಚ್ಚೇನೂ ಹೇಳಲಾರೆ.
ಶರ್ಮರ "ಎಲ್ಲರಿಗಾಗಿ ವೇದ " ಪ್ರವಚನದಿಂದ ಆಕರ್ಶಿತನಾದ ನಾನು ಅವರ ಜೀವನ ಶೈಲಿಯನ್ನು ಮೆಚ್ಚುತ್ತೇನೆ. ಆದರೆ......
ಅರಿಶಿನ-ಕುಂಕುಮ,ಹೂವು, ಬಳೆ ಇತ್ಯಾದಿ ವಸ್ತುಗಳನ್ನು ಹೆಣ್ಣಿನ ಅಲಂಕಾರ ಸಾಮಗ್ರಿಗಳ ಪಟ್ಟಿಗೆ ಸೇರಿಸುವೆ. ಅವುಗಳು ಅವಳಿಗೆಪ್ರಿಯವಾದ ವಸ್ತುಗಳು. ಅವುಗಳಿಂದ ಅವಳು ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸುತ್ತಾಳೆ. ಅವುಗಳಿಲ್ಲದ ಹೆಣ್ಣು ನನ್ನ ಕಣ್ಣಿಗೆಶುಷ್ಕಳಾಗಿ, ನಿಸ್ತೇಜಳಾಗಿ ಕಾಣುತ್ತಾಳೆ. ಇದು ನನ್ನ ಕಣ್ಣಿನ ದೋಶವೆಂದರೆ ನಾನೇನೂ ಪ್ರತಿಭಟಿಸುವುದಿಲ್ಲ.ಈ ಬಗ್ಗೆಯೂ ಹೆಚ್ಚುಹೇಳಲಾರೆ.
ಶರ್ಮರಿಗೆ ಇದರ ಪ್ರತಿಯನ್ನು ಕಳಿಸುತ್ತಿರುವೆ. ಅವರೇ ಸಮಾಧಾನ ಹೇಳಬೇಕು.
ಶ್ರೀಧರ್
----------------------------------------------


ಪ್ರೀತಿಯ ಶ್ರೀಧರ್ ಜೀ!
ಯಾವುದೇ ವಿಚಾರವಿರಬಹುದು, ವ್ಯಕ್ತಿ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯವನ್ನು ನಾನು ಸದಾ ಗೌರವಿಸುತ್ತೇನೆ.
ಭಿನ್ನಾಭಿಪ್ರಾಯವಿದ್ದರೆ ಇರಲಿ. ಅದು ದ್ವೇಷವೂ ಆಗಬಾರದು, ಅಸಹ್ಯವೂ ಆಗಬಾರದು.
ಸಮಾಧಾನದಿಂದ ಸತ್ಯದ ಅನ್ವೇಷಣೆ ಮಾಡುತ್ತಾ, ಅದರಂತೆ ನಡೆಯುತ್ತಾ ಸಾಗಿದಾಗ ಒಂದು ದಿನ ಅವರಿಗೂ ಅಥವಾ ನಮಗೂಸತ್ಯದ ಸಾಕ್ಷಾತ್ಕಾರವಾದಾಗ ಎಲ್ಲರಿಗೂ ಹಿತವಾಗುತ್ತದೆ.
ಪ್ರತಿಯೊಂದು ಮಂಡನೆಯೂ ಹಿಂದಿನದರ ಖಂಡನೆಯೇ!
ಹಿಂದಿನದನ್ನು ಖಂಡಿಸುವ ವಿಚಾರಗಳಿಲ್ಲದಿದ್ದರೆ ಹೊಸ ಸಿದ್ಧಾಂತಕ್ಕೆ ಅರ್ಥವೇನು?!!
ಇರಲಿ. ಆದರೆ Let all our criticisms be
1. without malice
2. in good faith
3. constructive
4. without prejudice.
ಬಹುಶಃ ಇದೊಂದೊ ಸಮನ್ವಯ ಸೂತ್ರವಾಗಬಹುದು.
ಹೆಚ್ಚಿನ ವಿಚಾರಗಳನ್ನು ಮತ್ತೊಮ್ಮೆ ವಿವರವಾಗಿ ಚರ್ಚಿಸೋಣ.


ಜ್ಞಾನಾರ್ಜನೆ, ಬೆಳವಣಿಗೆಯ ಹಂತ, ಅನುಭವದ ಕೊರತೆ, ಆತ್ಮಪರಿಶೀಲನೆಯ ಅಗತ್ಯಗಳು ಇನ್ನೂ ಇರುವಾಗ
ಮಾತಿನಲ್ಲಿ ಸ್ವಲ್ಪ ಜೋರೂ, ಇತರರ ಬಗ್ಗೆ ಸ್ವಲ್ಪ ಅಸಹನೆಯೂ ಕಾಣುತ್ತದೆ.
ಕ್ರಮೇಣ ಸರಿಹೋಗುತ್ತದೆ!
-------------------------------------


ಶರ್ಮಾಜಿ
ನಮಸ್ತೆ,
ಇಷ್ಟುಬೇಗ ನಿಮ್ಮಿಂದ ಉತ್ತರ ನಿರೀಕ್ಷಿಸಿರಲಿಲ್ಲ. ವೇದಸುಧೆಯಲ್ಲಿ ನಿನ್ನೆಯ ಆಡಿಯೋ ಕೇಳಿ. ಅಂತೆಯೇ ಹಿಂದಿನ ಪ್ರಶ್ನೆಗಳಿಗೆವೇದಸುಧೆಯಲ್ಲಿ ಉತ್ತರ ನಿರೀಕ್ಷಿಸುವೆ.ಬಹಳ ದಿನಗಳಿಂದ ನಾನು ಅಪೇಕ್ಷಿಸುತ್ತಿರುವ ಅಗ್ನಿಹೋತ್ರ ದ ಬಗ್ಗೆ ಒಂದು ಲೇಖನದಯಮಾಡಿ ಕಳುಹಿಸಿಕೊಡಿ.
ಶ್ರೀಧರ್
-----------------------------------
I can understand your concerns sir.


But if you ask me I am in between your thoughts and the people who
were present yesterday.To be frank I feel you want to be in a feel good
position where in you dont want to get away with some traditions at the
same time you want to bring in few logical/rational thoughts what sharmaji
expresses.Ideally your thoughts are perfect blend and need of the hour.


Having said that, I ll also say that it leads to lots of unanswerable questions.
Sharmaji goes to the ultimate level goes deep into the issue and we know that
it cant be proven wrong.But so many things looks awkward and are unacceptable
for the current society.So instead of looking at brighter part, people go away by
looking at the awkward part.


What I feel awkward may not be for many,I feel awkward when its said,
Girls should go through upanayana(logically it may be right but I cant imagine)
Separate food serving at religious places like Udupi,dharmastala,shringeri,mantralaya etc.


And similar things....


But most of the things we have to agree and I agree as they are logical and rational
and helps people come out of the fear.


Regards,


Vishal
---------------------------------------------------
ಸೀತಾರಾಮ. ಕೆ.

ಚೆ೦ದದ ಮಥನವೊ೦ದರ ಸಾರಾ೦ಶದಿ೦ದ ಮಥನ ಎಷ್ಟು ರೋಚಕವಾಗಿರಬೇಕೆ೦ದು ಕುತೂಹಲವಾಯಿತು. ಸಮನ್ವಯಸೂತ್ರಗಳು ಚೆನ್ನಾಗಿವೆ. ಆದರೇ ವಾದ-ವಿವಾದದಲ್ಲಿ ಅಹ೦-ಗಳು ಇಳಿದಾಗ ಅಳವಡಿಕೆ ಕಷ್ಟ. ಅಹ೦-ಗಳಿಲ್ಲದ ವಾದಗಳುನೀರಸವಲ್ಲವೇ!?
June 11, 2010 3:59 PM

--------------------------------------------------------

ಶ್ರೀ ಸೀತಾರಾಮ್,
ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಧನ್ಯವಾದಗಳು.


[ಅಹ೦-ಗಳಿಲ್ಲದ ವಾದಗಳುನೀರಸವಲ್ಲವೇ!?]
ಇಲ್ಲಿ ಅಹಂ ನುಸುಳುವುದಿಲ್ಲ. ಕಾರಣ ಎಲ್ಲರೂ ಸೇರಿ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು.ಕೆಲವರು ಗ್ರಂಥಾಧ್ಯಯನಮಾಡಿ ತಮ್ಮ ವಿಚಾರ ತಿಳಿಸಿದರೆ, ಕೆಲವರು ಜೀವನಾನುಭವ ವ್ಯಕ್ತಪಡಿಸುವರು.ಅಂತೂ ಮಂಥನದಿಂದ ಪ್ರಯೋಜನವಿದೆ ಎಂಬಅನುಭವ ಕಾಣುತ್ತಿದೆ. ಕೇವಲ ಚರ್ಚೆಗಾಗಿ ಚರ್ಚೆ ಮಾಡುವಂತಹ ಬುದ್ಧಿವಂತರು ಇಲ್ಲಿ ಇಣುಕುವುದು ವಿರಳ.
-ಹರಿಹರಪುರಶ್ರೀಧರ್


June 12, 2010 7:07 AM

6 comments:

 1. ಚೆ೦ದದ ಮಥನವೊ೦ದರ ಸಾರಾ೦ಶದಿ೦ದ ಮಥನ ಎಷ್ಟು ರೋಚಕವಾಗಿರಬೇಕೆ೦ದು ಕುತೂಹಲವಾಯಿತು. ಸಮನ್ವಯ ಸೂತ್ರಗಳು ಚೆನ್ನಗಿವೆ. ಆದರೇ ವಾದ-ವಿವಾದದಲ್ಲಿ ಅಹ೦-ಗಳು ಇಳಿದಾಗ ಅಳವಡಿಕೆ ಕಷ್ಟ. ಅಹ೦-ಗಳಿಲ್ಲದ ವಾದಗಳು ನೀರಸವಲ್ಲವೇ!?

  ReplyDelete
 2. nAnu I carceyalli BAgavahisilla, kUDa idannu sariyAgi follow mADilla. Adare nanna eraDu paisegaLannu illi hAkuve:

  mUrti pUje sariyalla eMdu Eke hELuvaru? mUrti pUje mADuvavaru (heccAgi) mUrti illade pUje sariyallaveMdu hELuvudaMtu nAnu kELilla. aMtAgi mUrti pUje mEle I kILnOTavEke? mUrti pUjeya dhATi ivarige tiLidiruvudE? prANa praitShThApane, visarjanegala vicAra aritiddAreyE? mUrtiyu I eraDu kriyagaLa madhye biTTare kalleMdE BAvisalAguvudeMdu tiLididdreyE? aShTakkU mUrtipUjeyalli asahyavEnu? mUrtiyillada pUje yAva lekkadalli mUrtipUjegiMta mElu? yAva paMgaDadavaru mUrti pUje mADuvudilla? Christian? Muslim? bauddha? ellarU oMdalla oMdu rIti mUrti pUje mADiyE mADuttAre.

  iShTara mEle nanna manadALada pUje iShTe: sAmAjikavAgiyU, vaij~JAnikavAgiyU, vaiyaktikavAgiyU, kaNNige kANuva prapaMcakkiMta mElAda oMdu Sakti ide. idannu manadalli, manasAre gurutisidare adE pUje - adakke maMtra-taMtragaLilla. idu kEvala nanna dRuShTikOna. idannu yArU naMbabEku, aLavaDisikoLLabEkeMba ASayavilla.

  ReplyDelete
 3. ಶ್ರೀ ಸೀತಾರಾಮ್,
  ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಧನ್ಯವಾದಗಳು.

  [ಅಹ೦-ಗಳಿಲ್ಲದ ವಾದಗಳುನೀರಸವಲ್ಲವೇ!?]
  ಇಲ್ಲಿ ಅಹಂ ನುಸುಳುವುದಿಲ್ಲ. ಕಾರಣ ಎಲ್ಲರೂ ಸೇರಿ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು.ಕೆಲವರು ಗ್ರಂಥಾಧ್ಯಯನ ಮಾಡಿ ತಮ್ಮ ವಿಚಾರ ತಿಳಿಸಿದರೆ, ಕೆಲವರು ಜೀವನಾನುಭವ ವ್ಯಕ್ತಪಡಿಸುವರು.ಅಂತೂ ಮಂಥನದಿಂದ ಪ್ರಯೋಜನವಿದೆ ಎಂಬ ಅನುಭವ ಕಾಣುತ್ತಿದೆ. ಕೇವಲ ಚರ್ಚೆಗಾಗಿ ಚರ್ಚೆ ಮಾಡುವಂತಹ ಬುದ್ಧಿವಂತರು ಇಲ್ಲಿ ಇಣುಕುವುದು ವಿರಳ.

  ReplyDelete
 4. ಶ್ರೀ ರವಿಯವರೇ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಇಂಗ್ಲೀಶ್ ನಲ್ಲೇ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಿತ್ತು.ಕನ್ನಡವನ್ನು ಇಂಗ್ಲೀಶ್ ಅಕ್ಷರದಲ್ಲಿ ಓದುವುದು ಸ್ವಲ್ಪ ಕಷ್ಟ.ಇಲ್ಲಿ ಸಾಮಾನ್ಯವಾಗಿ ಪ್ರಕಟವಾದ ಅಭಿಪ್ರಾಯಗಳನ್ನು ಲೇಖನದ ಜೊತೆಗೆ ಮುಖ್ಯಪುಟದಲ್ಲೇ ಪ್ರಕಟಿಸಲಾಗುವುದು.

  ReplyDelete