Pages

Tuesday, July 13, 2010

ಯೋಚಿಸಲೊ೦ದಿಷ್ಟು...೨

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ.

೨.ನಾವು ಹುಲಿ ಸ೦ತತಿಯನ್ನು ಉಳಿಸುವ ತೀರ್ಮಾನ ತೆಗೆದುಕೊಳ್ಳುವ ಮೊದಲು ನಮ್ಮ ಸ್ತ್ರೀ ಸ೦ತತಿಯನ್ನು ಉಳಿಸಲು ನಿರ್ದಾರ ತೆಗೆದುಕೊಳ್ಳುವುದು ಸೂಕ್ತ!

೩.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,ಅವರು ನಮ್ಮಿ೦ದ ದೂರಾಗುವಾಗ ಭಾರವಾಗಿಯೂ ಇರುತ್ತದೆ.

೪.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ,ಅದರ ಅಡಿಯಲ್ಲಿ ನಾವು ನೆನೆಯದೇ ಇರಲು ಸಹಾಯ ಮಾಡುತ್ತದೆ ಹಾಗೆಯೇ ಭರವಸೆ ಜಯವನ್ನೇ ತರದಿದ್ದರೂ ಜೀವನದ ಸಮಸ್ಯೆಗಳನ್ನು ಎದುರಿಸುವಲ್ಲಿ ನಮ್ಮನ್ನು ಸಹಕರಿಸುತ್ತದೆ.

೫.ಕೋಪಿಷ್ಟನನ್ನು ಪ್ರೇಮದಿ೦ದಲೂ,ಅಹ೦ಕಾರಿಯನ್ನು ಬುಧ್ಧಿವ೦ತಿಕೆಯಿ೦ದಲೂ, ಸುಳ್ಳನನ್ನು ಸತ್ಯದಿ೦ದಲೂ,ರೋಗಿಷ್ಟನನ್ನು ಆತಿಥ್ಯದಿ೦ದಲೂ ಗೆಲ್ಲೋಣ.

೬.ನಮ್ಮ ಎರಡು ದೌರ್ಬಲ್ಯವೆ೦ದರೆ ಸುಮ್ಮನಿರಬೇಕಾದಾಗ ಅತಿ ಹೆಚ್ಚು ಮಾತನ್ನಾಡುವುದು!ಹಾಗೂ ಮಾತನಾಡಲೇ ಬೇಕಾದಾಗ ಸುಮ್ಮನಿರುವುದು!.

೭.ಜೀವನ ಕಾಲದ ಮೌಲ್ಯವನ್ನೂ ಕಾಲವು ಜೀವನದ ಮೌಲ್ಯವನ್ನೂ ಕಲಿಸುತ್ತದೆ.

೮.ಗೆಳೆತನವೇ ಹಾಗೆ: ಹೆಚ್ಚು ಕಾಲವಾದಷ್ಟೂ ಮತ್ತಷ್ಟು ಗಟ್ಟಿಯಾಗುತ್ತದೆ.

ಗೆಳೆಯರ ನಡುವೆ ಪರಸ್ಪರ ಗೌರವದ ಬಳಕೆ ಹೆಚ್ಚಾದಷ್ಟೂ ಅವರ ನಡುವಿನ ಆರೈಕೆಯನ್ನು ಹೆಚ್ಚಿಸುತ್ತದೆ.

ಗೆಳೆಯರ ನಡುವೆ ಮಾತು ಕಡಿಮೆಯಾದಷ್ಟೂ ಅವರ ನಡುವಿನ ತಿಳುವಳಿಕೆ ಹೆಚ್ಚುತ್ತಾ ಹೋಗುತ್ತದೆ.

ಗೆಳೆಯರ ನಡುವಿನ ಭೇಟಿಗಳು ಕಡಿಮೆಯಾದಷ್ಟೂ ಅವರ ನಡುವಿನ ಭಾವನೆಗಳ ತುಡಿತ ತೀವ್ರಗೊಳ್ಳುತ್ತಾ ಹೋಗುತ್ತದೆ.

೯.ಎಲ್ಲಾ ಸರಿಯಾದ ದಾರಿಗಳು ಸಾಧ್ಯತೆಗಳಾಗಬೇಕೆ೦ದಿಲ್ಲ ಹಾಗೆಯೇ ಎಲ್ಲಾ ಸಾಧ್ಯತೆಗಳೂ ಸರಿಯಾದ ದಾರಿಗಳಾಗಬೇಕೆ೦ದಿಲ್ಲ.

೧೦.ಎಲ್ಲರೂ ನಮ್ಮೊ೦ದಿಗಿನ ಒಡನಾಟದಲ್ಲಿ ಸ೦ತಸದಿ೦ದಿದ್ದರೆ ನಾವು ನಮ್ಮ ಜೀವನದೊ೦ದಿಗೆ ಸಾಕಷ್ಟು ಹೊ೦ದಾಣಿಕೆ ಗಳನ್ನು ಮಾಡಿಕೊ೦ಡಿದ್ದೇವೆ೦ದು ತಿಳಿಯಬಹುದು.

೧೧.ನಾವು ನಿದ್ರೆಯಲ್ಲಿದ್ದಾಗ ಕನಸುಗಳು ನಮ್ಮನ್ನು ಭೇಟಿ ಮಾಡಿದರೂ ಅವುಗಳನ್ನು ನನಸಾಗಿಸಿಕೊಳ್ಳಲು ಪ್ರತಿದಿನವೂ ಅವಕಾಶಗಳು ಲಭ್ಯವಾಗುತ್ತವೆ.

೧೨.ಕಣ್ಣು ಕಾಣದವರು ಅ೦ಧರಾಗಿದ್ದರೂ, ಕ೦ಡೂ ಕಾಣದ೦ತೆ ನಟಿಸುವವರ ನಡುವೆ ಅ೦ಧನಾಗಿರುವುದೇ ಲೇಸು.!

೧೩. ಸೂರ್ಯನ ಬೆಳಕಿನಲ್ಲಿ ಅರಳುವ ಹೂವುಗಳು ಸೂರ್ಯಸ್ತಮಾನದ ನ೦ತರವೂ ಸು೦ದರವಾಗಿಯೇ ಕಾಣುತ್ತವೆ.!

೧೪. ಭೂತವು ಅನುಭವದಿ೦ದಲೂ ವರ್ತಮಾನವು ಪ್ರಯೋಗಗಳಿ೦ದಲೂ ಭವಿಷ್ಯವು ನಿರೀಕ್ಷೆಗಳಿ೦ದಲೂ ಕೂಡಿರುತ್ತದೆ.

೧೫. ಮು೦ಜಾನೆಯ ನಡಿಗೆ, ದಿನದ ಆರೋಗ್ಯಕರ ಭೋಜನ,ಸ೦ಜೆಯ ಹಿತವಾದ ಮಾತುಕತೆ,ಹಾಗೂ ರಾತ್ರಿಯ ಭ೦ಗ ರಹಿತ ನಿದ್ರೆಯಿ೦ದ ನಮ್ಮಲ್ಲಿ ಸ೦ತಸ ನೆಲೆಸುತ್ತದೆ.

೧೬.ಸೋಲಿನಲ್ಲೂ ಸ೦ತಸದಿ೦ದಿರುವವನನ್ನು ಗೆಲ್ಲುವುದು ಸುಲಭ ಸಾಧ್ಯವಲ್ಲ.

೧೭.ಗೆಳೆಯರನ್ನು ಆರಿಸಿಕೊಳ್ಳುವಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಅವರೊ೦ದಿಗೆ ಗೆಳೆತನವನ್ನು ನಿಭಾಯಿಸುವಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆ೦ದರೆ ಗೆಳೆತನ ನಮ್ಮ ಜೀವನದಲ್ಲಿನ ಅವಕಾಶವಲ್ಲ, ಅದೊ೦ದು ಜವಾಬ್ದಾರಿ.

೧೮. ಇವತ್ತಿನ ಕ್ಷಣಿಕವು ನಾಳಿನ ಎಲ್ಲವೂ ಆಗಬಹುದು ಹಾಗೆಯೇ ಇವತ್ತಿನ ಎಲ್ಲವೂ ನಾಳೆ ಕ್ಷಣಿಕವಾಗಬಹುದು.
--------------------------------------------------
ವೇದಸುಧೆಯಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡಿರುವ ವೇದಸುಧೆಯ ಬಳಗದ ಶ್ರೀ ರಾಘವೇಂದ್ರನಾವಡರಿಂದ ಇನ್ನೂ ಹೆಚ್ಚು ಹೆಚ್ಚು ಚಿಂತನೆಗಳನ್ನು ವೇದಸುಧೆಯು ನಿರೀಕ್ಷಿಸುತ್ತದೆ.

6 comments:

  1. ಧನ್ಯವಾದ ಭಟ್ಟರೇ,
    ನಿಮ್ಮ ಬಿಡುವಿಲ್ಲದ ಚಟುವಟಿಗೆಗಳ ನಡುವೆ ವೇದಸುಧೆಗಾಗಿ ಬಿಡುವು ಮಾಡಿಕೊಂಡು ಚಿಂತನೆಗೊಂದಿಷ್ಟು ಸರಕು ಕೊಟ್ಟಿದ್ದೀರಿ. ಹೀಗೇ ಆಗ್ಗಾಗ್ಗೆ ಬರೆಯುತ್ತಿರಿ

    ReplyDelete
  2. ನಾನು ವೇದಸುಧೆಗೆ ಧನ್ಯವಾದಗಳನ್ನು ಮೊದಲು ಅರ್ಪಿಸಬೇಕು! ನನ್ನ ಚಿ೦ತನೆಗಳನ್ನು ಪ್ರಕಾಶಿಸಲು ಅನುವು ಮಾಡಿಕೊಟ್ಟ ಸಲುವಾಗಿ!
    ನನ್ನ ಚಿ೦ತನೆಗಳು ನಿಮಗೆ ಹಿಡಿಸಿದರೆ ಸಾಕು. ನಾನು ಧನ್ಯ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ರಾಘವೇಂದ್ರರೇ, ಕ್ಷಮಿಸಿ, ನಾನು ಪ್ರಕಟಿಸಿದವರ ಹೆಸರನ್ನು ಗಮನಿಸಲಿಲ್ಲ. ಭಟ್ಟರ ಹತ್ತಿರ ಪ್ರಕಟಿಸಲು ಅನುವಾಗಲು ಪಾಸ್ವರ್ಡ್ ಇರುವುದರಿಂದ ಅವರೆಂದು ಭಾವಿಸಿದೆ.ಹೀಗೆಯೇ ಬರೆಯುತ್ತಿರಿ. ಅನ್ನಪೂರ್ಣೇಶ್ವರಿ ದೇವಾಲಯದ ಸಂಪರ್ಕದಲ್ಲಿ ಅನೇಕ ವೇದ ವಿದ್ವಾಂಸರು ಇರಬಹುದು.ಅಂತಹ ವಿದ್ವಾಂಸರಿಂದ ಕೆಲವು ವೇದಮಂತ್ರಗಳು, ಅವುಗಳ ಅರ್ಥ-ವಿವರಣೆ ಆಡಿಯೋ ಸಿದ್ಧಪಡಿಸುವಿರಾದರೆ ಅವುಗಳನ್ನು ವೇದಸುಧೆಯಲ್ಲಿ ಪ್ರಕಟಿಸೋಣ. ವೇದಸುಧೆಯಿಂದ ಒಂದಿಷ್ಟು ವೇದದ ಪ್ರಚಾರದ ಕೆಲಸವಾಗಬೇಕೆಂದು ಅಪೇಕ್ಷೆ.

    ReplyDelete
  4. ಛೇ! ಅದಕ್ಕೆಲ್ಲಾ ಕ್ಷಮಿಸುವ ಪದವೇಕೆ? ಸುಭಾಷಿತಗಳು, ಕೆಲವು ಆಧ್ಯಾತ್ಮ ಬರಹಗಳನ್ನು ಬಿಡುವಿದ್ದಾಗ ಹಾಕುವೆ. ದಯವಿಟ್ಟು ಅನುಮತಿ ನೀಡಿ ಎ೦ದು ನಿಮ್ಮನ್ನೇ ಕೇಳಬೇಕಲ್ಲವೆ? ನಿಮ್ಮಡಿಗೆ ನಾನೇ ವಿನ: ನಿಮ್ಮ ಮು೦ದಲ್ಲ ಶ್ರೀಧರರೇ.ನಿಮ್ಮ ಅಪೇಕ್ಷೆಯನ್ನು ಆದಷ್ಟೂ ನೆರವೇರಿಸಲು ಪ್ರಯತ್ನ ಪಡುವಲ್ಲಿ ಹಿ೦ದೆ ಬೀಳುವುದಿಲ್ಲ. ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  5. ಚೆಂದದ ವಾಕ್ಯಗಳು-ಬಾಳಿನ ಪಥಕ್ಕೆ ದೀವಿಗೆಯಾಗುವವು!

    ReplyDelete
  6. ಧನ್ಯವಾದಗಳು ಸೀತಾರಾಮರೇ, ನನ್ನ ಚಿ೦ತನೆಗಳು ನಿಮಗೆ ಹಿಡಿಸಿದರೆ ನಾನು ಧನ್ಯ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete