ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Monday, July 5, 2010

ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ಆಚರಣೆಗಳು, ನಂಬಿಕೆಗಳನ್ನು ಅಲುಗಿಸುವ ಕೆಲಸ ?

-->
ಶ್ರೀ ಕವಿ ನಾಗರಾಜ್ ಇವರು ವೇದೋಕ್ತ ಜೀವನ ಪಥ ಮಾಲಿಕೆಯಲ್ಲಿ ಪಂ. ಸುಧಾಕರ ಚತುರ್ವೇದಿಗಳ ಬರಹಗಳನ್ನು ವೇದಸುಧೆಯಲ್ಲಿ ಬರೆಯುತ್ತಿದ್ದಾರೆ. ಅದನ್ನು ಓದುತ್ತಿರುವ ನಾನು ಅಲ್ಲಿ ಬರೆದ ನನ್ನ ಅನಿಸಿಕೆಯನ್ನು ಇಲ್ಲಿ ಮುಖ್ಯ ಲೇಖನವಾಗಿ ಪ್ರಕಟಿಸುತ್ತಿರುವೆ. ಸುಧಾಕರ ಶರ್ಮರು ಇದಕ್ಕೆ ಉತ್ತರಿಸಬೇಕೆಂಬುದು ಅಪೇಕ್ಷೆ.
ವೇದ ಜ್ಞಾನವು ಎಲ್ಲರಿಗಾಗಿ ಎಂದು ವೇದವು ಸಾರಿ ಹೇಳುತ್ತಿದ್ದರೂ ಅದು ಎಲ್ಲರಿಗೆ ತಲುಪಲಿಲ್ಲ. ಹೀಗೂ ಹೇಳಬಹುದು ಎಲ್ಲಾ ಜನಾಂಗಕ್ಕೂ ಕಲಿಯುವ ಆಸೆಯೂ ಇಲ್ಲ.ಆರ್ಯಸಮಾಜವು ಎಲ್ಲರಿಗಾಗಿ ವೇದವೆನ್ನುವ ಮಾತನ್ನು ಹೇಳುತ್ತಿದ್ದರೂ ಅದರ ಕಾರ್ಯ ಚಟುವಟಿಕೆಯು ಸಮಾಜದ ಉದ್ದಗಲಕ್ಕೂ ಮುಟ್ಟುವ ಸಾಮರ್ಥ್ಯ ಅದಕ್ಕಿಲ್ಲ. ಆರ್ಯ ಸಮಾಜವು ಮಾಡುತ್ತಿರುವ ಒಂದು ಕೆಲಸವೆಂದರೆ ಅದರ ಹತ್ತಿರ ಬಂದವರಲ್ಲಿ ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ವಿಗ್ರಹಾರಾಧನೆ, ಹಬ್ಬ ಹರಿದಿನಗಳ ಆಚರಣೆ, ವ್ರತ ಕಥೆಗಳು, ಪುರಾಣ, ಇತ್ಯಾದಿಯ ಬಗ್ಗೆ ಶ್ರಧ್ಧೆಯನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನ ವಾಗಿದೆ. [ಇಲ್ಲಿ ನಾನು ಶ್ರದ್ಧೆ ಎಂಬ ಪದವನ್ನು ನಂಬಿಕೆ ಎಂಬ ಅರ್ಥದಲ್ಲಿ ಉಪಯೋಗಿಸಿರುವೆ] ಹಿಂದು ಸಮಾಜಕ್ಕೆ ಅಂಟಿರುವ ಅಂಧಾಚರಣೆಗೆ ವಿರೋಧವಿರಲಿ, ಆದರೆ ಎಲ್ಲಾ ಆಚರಣೆಗಳಿಗೂ ವಿರೋಧವಿರುವುದರಿಂದ ಹಿಂದುಸಮಾಜವು ಆರ್ಯಸಮಾಜಿಗಳನ್ನು ಒಪ್ಪುವುದಾದರೂ ಹೇಗೆ? ಆರ್ಯಸಮಾಜಿಗಳು ಮಾಡುತ್ತಿರುವ ಕೆಲಸವು ಕೇವಲ ಹಿಂದು ಸಮಾಜಕ್ಕಲ್ಲ, ಇಡೀ ಮಾನವ ಸಮಾಜಕ್ಕೆ ಎಂದು ಅವರು ಹೇಳಿದರೂ ಅದರ ಬೇರು ಹಿಂದು ಸಮಾಜದಲ್ಲಿದೆ, ಎಂಬುದನ್ನು ಮರೆಯಬಾರದಲ್ಲವೇ? ಈ ದೃಷ್ಟಿಯಿಂದ ವೇದಾಧ್ಯಾಯೀ ಸುಧಾಕರ ಶರ್ಮರಂತಹ ವಿಚಾರಶೀಲರು ತಮ್ಮ ಚಟುವಟಿಕೆಗಳ ಬಗ್ಗೆ ಒಂದಿಷ್ಟು ಚಿಂತನೆ ಮಾಡುವುದು ಒಳ್ಳೆಯದು, ಎಂಬುದು ನನ್ನ ಅಭಿಪ್ರಾಯ.
-ಹರಿಹರಪುರ ಶ್ರೀಧರ್
--------------------------------------------------
Dr Gnanadev said...
ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ.
ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ.
--ಡಾ| ಜ್ಞಾನದೇವ್ ಮೊಳಕಾಲ್ಮುರು
-------------------------------------------------
ಆತ್ಮೀಯರಾದ ಡಾ| ಜ್ಞಾನದೇವ್,
ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.
-ಹರಿಹರಪುರಶ್ರೀಧರ್

11 comments:

 1. ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ.
  ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ.
  --ಡಾ| ಜ್ಞಾನದೇವ್ ಮೊಳಕಾಲ್ಮುರು

  ReplyDelete
 2. ಆತ್ಮೀಯರಾದ ಡಾ| ಜ್ಞಾನದೇವ್,
  ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.

  ReplyDelete
 3. ನಿಜ ಶ್ರೀಧರ್ , ಯಾವುದೇ ಪೂರ್ವಾಗ್ರಹಗಳಿಲ್ಲದೆ ಮುಕ್ತ ಪ್ರಾ೦ಜಲ ಮನಸ್ಸಿನಿ೦ದ ಭಾರತೀಯ ಸ೦ಸ್ಕೃತಿಯ ಎಲ್ಲ ಚಹರೆಗಳನ್ನು , ಎಲ್ಲ ಇತಿಹಾಸವನ್ನು ,ಗುರುತಿಸುವ ಗೌರವಿಸುವ ವಿಮರ್ಶಿಸುವ ವಿಶ್ಲೇಷಿಸುವ ಸುಧಾರಿಸುವ ಪ್ರಾಮಾಣಿಕ ಪ್ರಯತ್ನಗಳು ನಮ್ಮೆಲ್ಲರ ನಡುವೆ ಮೂಡಲಿ. ಆ ಮೂಲಕ ವಿಶ್ವಶಾ೦ತಿಯನ್ನು ಸದಾ ಕೋರುವ ಭಾರತೀಯ ಸ೦ಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ಪಾಲ್ಗೊಳ್ಳೋಣ. ಶ್ರೀಧರ್ ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನನ್ನ ಹ್ಯಾಟ್ಸ್ ಆಫ್!

  ReplyDelete
 4. ಶ್ರೀ ಸೀತಾರಾಮ್,
  ನಿಮ್ಮ ಅಭಿಪ್ರಾಯ ತಿಳಿಸಿ.ಚರ್ಚೆಯಲ್ಲಿ ಎಲ್ಲರೂ ಪಾಲ್ಗೊಂಡಾಗ ಒಂದಿಷ್ಟು ಬದಲಾವಣೆ ಸಾಧ್ಯ.ನಮ್ಮ ಮನದಲ್ಲಿ ಮೂಡಿದ್ದೆಲ್ಲಾ ಸರಿಯಾಗಿರಬೇಕೆಂದೇನೂ ಇಲ್ಲ.ಆದರೆ ಹಿಂದುಸಮಾಜದಲ್ಲಿನ ಜೊಳ್ಳನ್ನು ಬೇರ್ಪಡಿಸಿ ಸ್ವೀಕರಿಸಬೇಕಾದುದಕ್ಕೆ ಪುಷ್ಟಿಕೊಡುವ ಪಾತ್ರದಲ್ಲಿ ನಮ್ಮೆಲ್ಲರ ಹೊಣೆ ಇದೆ , ಅಲ್ಲವೇ?

  ReplyDelete
 5. ಮೊದಲಿಗೆ ಒಂದು ಸ್ಪಷ್ಟನೆ.
  ಸುಧಾಕರ ಶರ್ಮಾ ಆರ್ಯಸಮಾಜಿಯಲ್ಲ, Repeat ಆರ್ಯಸಮಾಜಿಯಲ್ಲ.
  ವೇದಗಳನ್ನು ಅಧ್ಯಯನ ಮಾಡುತ್ತಿರುವ ಒಬ್ಬ ಸತ್ಯಾನ್ವೇಷಕ ಅಷ್ಟೇ.
  ಆರ್ಯಸಮಾಜದ ಲೋಪ-ದೋಷಗಳಿಗೆ, ಇತಿ-ಮಿತಿಗಳಿಗೆ ಖಂಡಿತವಾಗಿ ನಾನು ಹೊಣೆಗಾರನಲ್ಲ.
  ವೇದಗಳ ಪ್ರಚಾರವೊಂದೇ ಆರ್ಯಸಮಾಜದ ಉದ್ದೇಶವಾಗಿರುವುದರಿಂದ ಒಟ್ಟಿಗೆ ಕೆಲಸ ಮಾಡುವುದು ಅನಿವಾರ್ಯ. ಅಷ್ಟೇ ನನ್ನ ಆರ್ಯಸಮಾಜದ ಸಂಬಂಧ.
  ಇನ್ನು 'ಹಿಂದೂ' ಎಂಬ ಪದ ತೀರಾ ಇತ್ತೀಚಿನದು. ಪ್ರಾಚೀನ ಸಾಹಿತ್ಯಗಳಲ್ಲಿ ಈ ಪದದ ಪ್ರಯೋಗವೇ ಇಲ್ಲ. ಇದರ ಬಗ್ಗೆ ಇನ್ನೂ ದೀರ್ಘವಾದ ಪ್ರತಿಕ್ರಿಯೆ ನೀಡುವವನಿದ್ದೇನೆ.
  - ಸುಧಾಕರ ಶರ್ಮಾ

  ReplyDelete
 6. ಶ್ರೀ ಶರ್ಮಾಜಿ,
  ನಮಸ್ತೆ,
  ಹಿಂದು ಪದದ ಬಗೆಗೆ ನೀವು ನಿಮ್ಮ ಸುಧೀರ್ಘ ಚರ್ಚೆಯನ್ನು ಆರಂಭಿಸುವ ಮುಂಚೆಯೇ ನನ್ನ ಅಭಿಪ್ರಾಯವನ್ನು ತಿಳಿಸಿ ಬಿಡುತ್ತೇನೆ. ವಿಶ್ವದಲ್ಲಿ ನಮ್ಮ ದೇಶವನ್ನು "ಹಿಂದು ದೇಶ" ಎಂದು ಒಪ್ಪಿಯಾಗಿದೆ. ವೇದದಲ್ಲಿ ಹಿಂದು ಎಂಬ ಪದವು ಇಲ್ಲದಿದ್ದರೂ ಹಿಂದು ಸಮಾಜಕ್ಕೆ ವೇದವೇ ಮೂಲ. ವೇದದಬಗ್ಗೆ ಅಪಾರ ಶ್ರಧ್ಧೆ,ಗೌರವ,ಭಕ್ತಿ ಹಿಂದು ಸಮಾಕ್ಕಿದೆ.ನಮ್ಮನ್ನು ಆರ್ಯರೆಂದರೂ, ಸನಾತನಿಗಳೆಂದರೂ ಹಿಂದುಗಳಿಗೇನೂ ಬೇಸರವಿಲ್ಲ.ಅದೇನೇ ಇರಲಿ, ನಾವೆಲ್ಲಾ ಮಾಡಬೇಕಾದ ಮೊದಲ ಕರ್ತವ್ಯವೆಂದರೆ ನಮ್ಮ ಸಮಾಜದಲ್ಲಿರುವ ಮಾನವವಿರೋಧಿ ಆಚರಣೆಗಳನ್ನು ಕಿತ್ತುಹಾಕುವ ಕೆಲಸ.
  ಎರಡನೆಯ ಸಂಗತಿಯೆಂದರೆ ಪ್ರತಿಯೊಬ್ಬ ಮನುಷ್ಯನೂ ಅಂತಿಮವಾಗಿ ಬಯಸುವುದು ನೆಮ್ಮದಿಯ ಜೀವನ, ಆನಂದಮಯ ಜೀವನ.ಯಾವ ಜೀವನಮಾರ್ಗದಿಂದ ಮನುಷ್ಯನಿಗೆ ನೆಮ್ಮದಿ ಸಿಗುತ್ತದೋ ಆ ಮಾರ್ಗವನ್ನು ಅವನು ಹುಡುಕಿಕೊಳ್ಳುತ್ತಾನೆ.ಇನ್ನೊಬ್ಬರಿಗೆ ನೋವುಂಟಾಗದಂತೆ ಬದುಕಿದರಾಯ್ತು, ಅಲ್ಲವೇ?

  ReplyDelete
 7. ಆತ್ಮೀಯರೇ!
  ವಿಶ್ವದಲ್ಲಿ ನಮ್ಮ ದೇಶವನ್ನು `ಹಿಂದೂ ದೇಶ' ಎಂದು ಒಪ್ಪಿಯಾಗಿದೆ ಎಂದಿರೆ.
  ನಾವು ಭಾರತೀಯರೇ ಅದನ್ನು ಒಪ್ಪಿಲ್ಲವಲ್ಲ!
  ಭಾರತದ ಸಂವಿಧಾನದ ಪ್ರಕಾರ ನಮ್ಮದು ಹಿಂದೂ ರಾಷ್ಟ್ರವೇ ಅಲ್ಲ!!
  This is a Secular Country you know?!
  ಮೊದಲಿಗೆ ನಮ್ಮ ಭಾರತ ಆರ್ಯಾವರ್ತ.
  ನಾವು ಮೊದಲಿಗೆ ಆರ್ಯರು.
  ಈ ಆರ್ಯ ಜಾತಿ, ಜನಾಂಗವಲ್ಲ, ಜೀವನಪದ್ಧತಿ, ಸಂಕ್ಷಿಪ್ತವಾಗಿ ಹೇಳುವುದಾದರೆ,
  Gentrleman.
  ಪ್ರಗತಿಶೀಲ, Progressive, ಎಂಬ ಅರ್ಥವೂ ಇದೆ.
  ಪ್ರಾಚೀನತೆ ಇದೆ.
  ಇದಕ್ಕೆ ಹೋಲಿಸಿದರೆ ಹಿಂದೂ ಶಬ್ದಕ್ಕೆ ರೂಢಿಯ ಬಲ ಬಿಟ್ಟರೆ ಮಿಕ್ಕಾವ ಬಲವೂ ಇಲ್ಲ.
  ಅಷ್ಟೇ ಅಲ್ಲ ಅರಾಬಿಕ್/ಪಾರ್ಸಿ ಭಾಷೆಗಳಲ್ಲಿ ಕಳ್ಳ, ದರೋಡೆಕೋರ ಎಂಬರ್ಥಗಳೂ ಇವೆ. ಇಲ್ಲಿಯ ಜನರನ್ನು ಹೀನಾಯವಾಗಿ ಗುರುತಿಸಲು ಬಳಸಿದ ಪದವಿದ್ದಂತೆ ಕಾಣುತ್ತದೆ.
  ಪದದ ಬಳಕೆಗಿಂತ, ಯಾವ ಪದವು ನಮ್ಮ ಅಂತರಂಗದ ಭಾವನೆಗಳನ್ನು ಚೆನ್ನಾಗಿ, ವೈಜ್ಞಾನಿಕವಾಗಿ ಪ್ರತಿಬಿಂಬಿಸಬಲ್ಲದೋ ಅದು ಸೂಕ್ತವಲ್ಲವೇ?
  ಆರ್ಯ = ಆರ್ಯಾ ಜ್ಯೋತಿರಗ್ರಾಃ - ಬೆಳಕನ್ನು, ಜ್ಞಾನದ ಬೆಳಕನ್ನು ಮುಂದಿಟ್ಟುಕೊಂಡು ಸಾಗುವ ಸಭ್ಯನೇ ಆರ್ಯ. ಹಿಂದೂ ಎನ್ನುವಾಗಲೂ ನಮ್ಮ ಭಾವನೇ ಇದೇ ಆಗಿದೆಯಲ್ಲವೇ?!
  ಅಂತಿಮವಾಗಿ, ಪದ ಯಾವುದೇ ಆಗಿರಲಿ, ಮುಕ್ತ ಮನಸ್ಸಿನಿಂದ ಸತ್ಯವನ್ನು ಹುಡುಕುತ್ತಾ, ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾ, ಪ್ರಗತಿಶೀಲರಾಗಿ, ಜ್ಞಾನದ ಬೆಳಕಿನಲ್ಲಿ ಮುನ್ನಡೆಯುದೇ ಮುಖ್ಯವಲ್ಲವೇ?!

  ReplyDelete
 8. ಗೌರವಾನ್ವಿತ ಶರ್ಮಾಜಿ,
  ಬೃಹಸ್ಪತಿ ಆಗಮದಲ್ಲಿ ಈ ಸಾಲುಗಳಿವೆಯಲ್ಲಾ?

  ಹಿಮಾಲಯಮ್ ಸಮಾರಭ್ಯ ಯಾವದಿಂಧು ಸರೋವರಮ್|
  ತಂ ದೇವನಿರ್ಮಿತಮ್ ದೇಶಮ್ ಹಿಂದುಸ್ಥಾನಂ ಪ್ರಚಕ್ಷ್ಯತೇ||

  ಈ ಬಗ್ಗೆ ನಿಮ್ಮೊಡನೆ ವಾದ ಮಾಡುವುದಿಲ್ಲ, ಆದರೆ ನನ್ನ ಭಾವನೆಗಳನ್ನು ವಿವರವಾಗಿ ಪ್ರತ್ಯೇಕ ಬರೆಯುವೆ.

  [ಭಾರತದ ಸಂವಿಧಾನದ ಪ್ರಕಾರ ನಮ್ಮದು ಹಿಂದೂ ರಾಷ್ಟ್ರವೇ ಅಲ್ಲ!!
  This is a Secular Country you know?!]

  ಈ ಬಗ್ಗೆಯೂ ನನ್ನ ಭಾವನೆಗಳನ್ನು ಹಂಚಿಕೊಳ್ಳುವೆ.
  ನಮಸ್ಕಾರಗಳೊಡನೆ
  -ಶ್ರೀಧರ್

  ReplyDelete
 9. ಪೂಜ್ಯ ಶರ್ಮರೆ ಮತ್ತು ಶ್ರೀಧರರೆ,

  "ನಮ್ಮದು ಆರ್ಯಾವರ್ತ" ಎನ್ನಲು ಆರ್ಯರು ಬರುವ ಮುನ್ನ ಇಲ್ಲಿ ಯಾರೂ ಇರಲೇ ಇಲ್ಲವೆ ?. ದ್ರಾವಿಡರೂ ಇದ್ದರಲ್ಲವೆ ಅಥವಾ ಬೇರೆ ಮೂಲನಿವಾಸಿಗಳು ?!. ಇರಲಿ, ಯಾವುದು mejorityಗೆ ಬಂದಿತೋ ಅದಕ್ಕೆ ಹೆಚ್ಚಿನ ಮಾನ್ಯತೆ ಸಿಗುವುದು ಸಹಜ. ಇನ್ನು "ಹಿಂದೂ ದೇಶ' ಎನ್ನುವುದಕ್ಕೆ ಮೂಲ ವೇದಪ್ರಮಾಣಗಳಿವೆ ಎಂದು ನನಗೂ ಅನಿಸುತ್ತಿಲ್ಲ ಅಥವಾ ಗೊತ್ತಿಲ್ಲ. ಶ್ರೀಧರರು ಕೊಟ್ಟಿರುವ "ಹಿಮಾಲಯ...ಪ್ರಚಕ್ಷ್ಯತೆ" ಎಂಬ ವಾಕ್ಯದಲ್ಲಿ ದೋಷಗಳಿರುವಂತಿದೆ (ಯಾವದಿಂಧು=?) . ಈ ಸಾಲುಗಳು ಯಾವಾಗ ಹೇಳಲ್ಪಟ್ಟಿವೆ ಎನ್ನುವುದೂ ಮುಖ್ಯವಾಗುತ್ತದೆ. ಭರತ ವರ್ಷೇ, ಭರತ ಖಂಡೇ, ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿರುವುದರಿಂದ 'ಹಿಂದೂ' ಎನ್ನುವುದು ಎಲ್ಲಿಂದ ಯಾವಾಗ ಬಂದಿತು ಎನ್ನುವುದರ ಬಗೆಗೆ ಚರ್ಚೆಯಾದರೆ ಒಳಿತು.

  ReplyDelete