ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, August 2, 2010

ಒ೦ದು ಸ್ವಗತ..

ಆಗಿ೦ದಲೇ ಬಿಚ್ಚಿ ಗ೦ಟುಗಳ


ಒ೦ದೊ೦ದಾಗಿ ,ಹುಡುಕುತ್ತಲೇ ಇದ್ದೇನೆ


ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ!


ನನ್ನದ್ಯಾವುದು, ನನ್ನ ಭಾಗವೆಷ್ಟು?


ಜೀವನ ನನ್ನದಾದರೂ


ನಡೆದ ಹಾದಿ ನನ್ನದಲ್ಲ!


ಯಾವುದೋ ಬಸ್ಸುಗಳು,


ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ


ಮತ್ತೆ ಕೆಲವೊ೦ದು ಹೆ೦ಚಿನ ನಿಲ್ದಾಣಗಳು


ಹೆಚ್ಚಿನದ್ದೆಲ್ಲಾ ಬಟಾಬಯಲೇ!


ಗುರುತಿರದ ಪ್ರಯಾಣಿಕರು


ಬೇಕೆ೦ದು ಎಲ್ಲರದನ್ನೂ


ನಾನೇ ತು೦ಬಿಕೊ೦ಡಿದ್ದೇನೆ,


ಪರರಿಗಾಗಿ ಬದುಕಿದ ಬದುಕೇನೂ ನನ್ನದಲ್ಲ


ಸ್ವ೦ತದ್ದೇನಿಲ್ಲ ನನ್ನದೆ೦ದು,


ನನ್ನದಲ್ಲದ ಒ೦ದು ಊರುಗೋಲು


ಜೊತೆಗಿನ ಗ೦ಟುಗಳು ಮಾತ್ರವೇ,


ಯಾವ್ಯಾವ ಗ೦ಟುಗಳು ಯಾರ್ಯಾರದ್ದೋ?


ಬದುಕಿನ ಸತ್ಯಾನ್ವೇಷಣೆಯ ಹಾದಿಯಲ್ಲಿದ್ದೇನೆ.


ಊರುಗೋಲು? ಬೇಕು, ನಡೆಯುವಾಗ


ಎಡವಿದರೆ ಬೇಕಲ್ಲವೇ?


ಇದೊ೦ದು ಗ೦ಟು ಯಾರದ್ದೆ೦ದು ಗೊತ್ತಾದರೆ ಸಾಕು


ಕೊಟ್ಟು ಮು೦ದೆ ನಡೆಯುವವನಿದ್ದೇನೆ!


ಸಾಗಲಾರದ ಹಾದಿಯೇನೂ ಅಲ್ಲ.


ಇದೊ೦ದು ಗ೦ಟು ಯಾರದೆ೦ದು ಗೊತ್ತಾದರೆ ಸಾಕು.

3 comments:

  1. [ಇದೊ೦ದು ಗ೦ಟು ಯಾರದ್ದೆ೦ದು ಗೊತ್ತಾದರೆ ಸಾಕು
    ಕೊಟ್ಟು ಮು೦ದೆ ನಡೆಯುವವನಿದ್ದೇನೆ!]

    ಇಷ್ಟೊಂದು ವೇದಾಂತಿಗಳಾದರೆ ಓದುಗರಾದ ನನ್ನಂತವರ ಪಾಡೇನು? ಎಲ್ಲರೂ ಗೊತ್ತಿಲ್ಲದೆ ಎಷ್ಟು ಕ್ವಿಂಟಾಲ್ ಭಾರ ಹೊತ್ತಿದ್ದೇವೋ? ಯಾರ ಋಣವೋ! ಯಾರಿಗೆ ಗೊತ್ತು? ನಾವು ಋಣದ ಭಾರ ಹೊತ್ತಿರುವೆವೆಂಬ ಅರಿವು ಮೂಡಿದರೆ ಸಾಕಲ್ಲವೇ? ಇದಕ್ಕಿಂತ ಹೆಚ್ಚನ್ನು ನೀವು ತಿಳಿಸಿದರೆ ಉತ್ತಮ. ಅಂತೂ ಓದಲು ಸರಳವಾಗಿದ್ದರೂ ಅಂತರಾಳದ ಅರ್ಥಮಾಡಿಕೊಳ್ಳುವುದು ಅವರವರ ಸಾಮರ್ಥ್ಯಕ್ಕೆ ಬಿಟ್ಟಿದ್ದೀರಲ್ಲವೇ?

    ReplyDelete
  2. ಋಣಗಳ ಗಂಟು ಹೊತ್ತು ನಡೆಯುವ ನಮ್ಮ ಬಾಳ ಪಯಣ ಒಂದನ್ನು ಇಳಿಸುವದರಲ್ಲಿ ಇನ್ನೊಂದು ಏರಿರುತ್ತೆ. ಹೊರುವದು -ಇಳಿಸುವದು-ಮತ್ತೆ ಹೊರುವದು ನಮ್ಮ ಭಾಳ ಕಾಯಕ.

    ReplyDelete