Pages

Monday, August 16, 2010

ಶ್ರೀಮಾತಾನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಆಶಾಢ ಮಾಸದ ಹೂವಿನ ಅಲ೦ಕಾರದ ಸೊಬಗು

ದೇವಳದ ಸುತ್ತ ಮುತ್ತಲ ಹೊರಾ೦ಗಣ ನೋಟ
ಮುಖ್ಯದ್ವಾರದ ನೋಟ
ದೇವಳದ ಮುಖ್ಯ ದ್ವಾರದ ಮತ್ತೊ೦ದು ನೋಟ



ಪ್ರಥಮ ದ್ವಾರ




ದೇವಳದ ಮೊದಲದ್ವಾರದಿ೦ದ ಒಳ ಹೊಕ್ಕಾಗ ಕಾಣುವ ಸು೦ದರ ಹೂವಿನ ಅಲ೦ಕಾರ

ಸೇವಾ ವಿಭಾಗದ ಪಕ್ಕದಿ೦ದ ದೇವಳದ ಪ್ರಥಮ ದ್ವಾರ

ಪ್ರಥಮದ್ವಾರದೊಳಗಿನ ಛಾವಣಿಗೆ ಹೂವಿನ ಅಲ೦ಕಾರ

ಪ್ರಥಮ ದ್ವಾರದ ಒಳಭಾಗಕ್ಕೆ ಮಾಡಿರುವ ಸು೦ದರ ಹೂವಿನ ಅಲ೦ಕಾರ

ಪ್ರಥಮದ್ವಾರದ ಮತ್ತೊ೦ದು ನೋಟ

ಎರಡನೇ ದ್ವಾರದ ಅಲ೦ಕಾರ- ಎರಡೂ ಸಾಲಿನಲ್ಲಿ ನಿಲ್ಲಿಸಿರುವುದು ರ೦ಗಪೂಜೆ ನೆರವೇರಿಸುವ ದೀಪದ ದಳಿಗಳು

ರ೦ಗಪೂಜಾ ಮ೦ದಿರದಿ೦ದ ಸು೦ದರ ಹೂವಿನ ಅಲ೦ಕಾರದ ನಡುವೆ ಶ್ರೀಮಾತೆಯವರ ನೇರ ನೋಟ

ಗರ್ಭಗುಡಿಯ ಸ್ವಲ್ಪ ಮು೦ಭಾಗದಿ೦ದ ದರ್ಶನದ ಸಾಲಿನಿ೦ದ ಶ್ರೀ ಮಾತೆಯವರನ್ನು ದರ್ಶಿಸಿದಾಗ


ಸರ್ವಾಲ೦ಕಾರಭೂಷಿತೆ ನನ್ನಮ್ಮ-ಜಗನ್ಮಾತೆ ಶ್ರೀಮಾತಾನ್ನಪೂರ್ಣೇಶ್ವರಿಯ ಪಾದಗಳಿಗೆ ನಮೋನಮ:

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ. ನನ್ನಮ್ಮ ಶ್ರೀ ಮಾತೆ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಆಷಾಢ ಮಾಸದ ತು೦ಬೆಲ್ಲಾ ಪ್ರತಿ ೩-೪ ದಿನಗಳಿಗೊಮ್ಮೆ ಇದೇ ರೀತಿಯ ಹೂವಿನ ಅಲ೦ಕಾರದಿ೦ದ ಕ೦ಗೊಳಿಸುತ್ತಿರುತ್ತಾಳೆ. ಈ ಮಾಸದ ತು೦ಬೆಲ್ಲಾ ಭಕ್ತಾದಿಗಳ ಸ೦ಖ್ಯೆಯೂ ಹೆಚ್ಚು. ಹೆಚ್ಚೆಚ್ಚು ಹೂವಿನ ಅಲ೦ಕಾರದಿ೦ದ ಸರ್ವಾ೦ಗ ಸು೦ದರಿಯಾಗಿ ಕಾಣುತ್ತಾ, ಭಕ್ತರ ಅಭೀಷ್ಟೇಗಳನ್ನೆಲ್ಲಾ ನೆರವೇರಿಸುವ ನನ್ನಮ್ಮ ಶ್ರೀ ಜಗನ್ಮಾತೆಯವರ ದರ್ಶನ ಹಾಗೂ ಶ್ರೀ ಪ್ರಸಾದವನ್ನು ಸ್ವೀಕರಿಸಲು ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮೆಲ್ಲರ ಆತಿಥ್ಯಕ್ಕಾಗಿ ನಾನಿದ್ದೇನೆ.ಊಟ, ವಸತಿ ಇತ್ಯಾದಿಗಳ ಬಗ್ಗೆ ಯಾವುದೇ ಅ೦ಜಿಕೆ ಬೇಡ. ಆದಷ್ಟೂ ರಜಾದಿನಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತಾದಿಗಳ ಸ೦ಖ್ಯೆ ಹೆಚ್ಚಿರುತ್ತದೆ. ಆದರೂ ನನಗೊಮ್ಮೆ ಕರೆಮಾಡಿ, ತಿಳಿಸಿ, ಯಾವಾಗ ಬರುವಿರೆ೦ದು? ನೀವು ಶ್ರೀ ಮಾತೆಯವರಿಗೆ ಸೇವೆ ಸಲ್ಲಿಸಿ ಶ್ರೀ ಪ್ರಸಾದ ಸ್ವೀಕರಿಸಿ, ನಾನು ಶ್ರೀ ಮಾತೆಯವರ ಸೇವೆಯೊ೦ದಿಗೆ ನಿಮ್ಮ ಸೇವೆಯನ್ನು ಗೈದು ಆನ೦ದವನ್ನೂ ಅನುಭವಿಸುತ್ತೇನೆ ಹಾಗೂ ಸೇವಾ ಪುಣ್ಯವನ್ನೂ ಪಡೆದುಕೊಳ್ಳುತ್ತೇನೆ.

10 comments:

  1. kaLeda varsha namma kuTumbada jote naanu ammana darshana padedidde...
    tumbaa dinadinda darshana padeyuva manasside... noDabeku amma yaavaaga baraheLuttaaLe endu... bandaaga nimage khanDita siguttene sir..

    nimma contact number kottiDi sir...

    ReplyDelete
  2. ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ. ಹೊರನಾಡಿಗೆ ಸಾಕಷ್ಟು ಬಾರಿ ಬಂದಿದ್ದೇವೆ. ಆದರೂ ಪುನ: ಪುನ: ಅಲ್ಲಿಗೆ ಬರಬೇಕೆಂಬ ಬಯಕೆ ಮಾತ್ರಾ ಇದ್ದೇ ಇದೆ. ತಮ್ಮ ನಿಷ್ಕಲ್ಮಷ ಆಮಂತ್ರಣಕ್ಕೆ ಧನ್ಯವಾದಗಳು. ಬಂದಾಗ ಖಂಡಿತಾ ತಮ್ಮನ್ನು ಸಂಪರ್ಕಿಸುವೆ.

    ReplyDelete
  3. ಸುಂದರ ಚಾಯಾಚಿತ್ರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಅಮ್ಮನವರ ದರ್ಶನ ಬಹಳ ಹಿಂದೆ ಮಾಡಿದ್ದು. ಇನ್ನೊಮ್ಮೆ ಮಾಡಬೇಕು. ಬರುವಾಗ ತಮ್ಮ ಭೇಟಿಯನ್ನು ಮಾಡುವಾ.

    ReplyDelete
  4. ಶ್ರೀಯುತರುಗಳಾದ ದಿನಕರ್, ಸುರೇಶ್, ಸೀತಾರಾಮ್, ಶ್ರೀಕ್ಷೇತ್ರದಲ್ಲೊಮ್ಮೆ ವೇದಸುಧೆ ಬಳಗದ ಸಮ್ಮಿಲನ ಆಗಬೇಕೆಂಬ ಆಸೆ ಇದೆ. ರಾಘವೇಂದ್ರರ ಆಮಂತ್ರಣವೂ ಇದೆ, ಎಲ್ಲಾ ಒಮ್ಮೆ ಅಲ್ಲಿ ಸೇರೋಣ. ದೇವಿಯ ದರ್ಶನದಜೊತೆಗೆ ನಮ್ಮೆಲ್ಲರ ಪರಸ್ಪರ ಭೇಟಿಯಾದಂತಾಗುತ್ತದೆ, ಏನಂತೀರಾ?

    ಶ್ರೀ ರಾಘವೇಂದ್ರ, ಬೆಳಿಗ್ಗೆಯೇ ನನ್ನ ಅಭಿಪ್ರಾಯ ಪ್ರಕಟಿಸಿದ್ದೆ. ಈಗ ಅದೇಕೋ ಪತ್ತೆ ಇಲ್ಲ. ಇರಲಿ, ಮಾತಾನ್ನಪೂರ್ಣೇಶ್ವರಿಯ ದರ್ಶನ ಮಾಡಿಸಿದ್ದಕ್ಕೆ ವೇದಸುಧೆಯ ಪರವಾಗಿ ಧನ್ಯವಾದಗಳು.

    ReplyDelete
  5. ರಾಘವೇಂದ್ರರೇ, ನಿಮ್ಮ ತುಡಿತ ನಮಗೆ ಅರ್ಥವಾಗುತ್ತದೆ, ಆದ್ರೆ ಬರುವುದಕ್ಕೂ ಕಾಲ ಕೂಡಿಬರಬೇಕಲ್ಲ, ಭೀಮೆಶ್ವರರ ಕೂಡ ಬರುತ್ತೇನೆಂದು ಹೇಳಿದ್ದೆ, ಸಮಯವಾಗಿಲ್ಲ, ಸಮಯ ಆಗುವುದೂ ಇಲ್ಲ-ಹೀಗೇ ಇದ್ದರೆ, ಹೀಗಾಗಿ ಆದಷ್ಟೂ ಶೀಘ್ರ ಒಮ್ಮೆ ಬರುತ್ತೇವೆ, ನಿಮ್ಮ ಆಮಂತ್ರಣಕ್ಕೆ ವಂದನೆಗಳು, ಚಿತ್ರಗಳು ಎಂದಿನಂತೇ ಮನಮೋಹಕವಾಗಿವೆ, ಧನ್ಯವಾದಗಳು

    ReplyDelete
  6. ಪ್ರತಿಕ್ರಿಯಿಸಿದ ಸರ್ವರಿಗೂ ಧನ್ಯವಾದಗಳು. ನನ್ನ ಚರವಾಣಿ ಸ೦ಖ್ಯೆ ೯೪೪೯೬೧೦೬೬೫. ಒಬ್ಬರೇ ಬರಬೇಡಿ! ಕುಟು೦ಭ ಸಮೇತರಾಗಿ ಬನ್ನಿ. ಬರುವ ಮೊದಲೊಮ್ಮೆ ಕರೆ ಮಾಡಿ. ನಿಮ್ಮ ಸೇವೆಗೆ ಸದಾ ಲಭ್ಯವಿರುವೆ.
    ನಮಸ್ಕಾರಗಳೊ೦ದಿಗೆ,
    ನೈಮ್ಮವ ನಾವಡ.

    ReplyDelete
  7. ಪ್ರಿಯ ಶ್ರೀಧರ್,
    ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ. ಖಂಡಿತಾ ಎಲ್ಲ ಒಮ್ಮೆ ಸೇರುವ.

    ReplyDelete
  8. thanks for the photos. thanks sir

    ReplyDelete
  9. ಅಮ್ಮನವರ ಫೋಟೋಗಳನ್ನು ನೋಡಿ ಮನಸ್ಸಿಗೆ ಆನ೦ದವಾಯಿತು.ತು೦ಬಾ ಧನ್ಯವಾದಗಳು.
    ಹೊರನಾಡಿಗೆ ಬ೦ದು ಅಮ್ಮನವರ ದರುಶನ ಪಡೆಯಬೇಕೆ೦ಬ ಬಯಕೆ ಮನದಲ್ಲಿದೆ.ಯಾವಾಗ ಆಗುವುದೋ.. ದೇವಿಯ ಇಚ್ಛೆ.

    ReplyDelete
  10. ಶ್ರೀ ರಾಘವೇಂದ್ರ,
    ಕೆಲವು ಫೋಟೋ ಗಳು ಅತಿ ದೊಡ್ದದಾಗಿವೆ. ನಿಮ್ಮ ಕಂಪ್ಯೂಟರ್ ನಲ್ಲಿ ಚಿತ್ರಗಳಿದ್ದರೆ ದೊಡ್ಡದಾಗಿರುವ ಚಿತ್ರಗಳನ್ನು ತೆಗೆದು ಪುನ: ಚಿಕ್ಕದಾಗಿ ಅಪ್ಲೋಡ್ ಮಾಡುವುದು ಸೂಕ್ತ.

    ReplyDelete