Pages

Sunday, August 8, 2010

ಅವಳಿರುವ ಅರಿತು- ನಮ್ಮಿಹವ ಮರೆತು



ಮಾತೆ, ಎಲ್ಲೆಲ್ಲಿಯೂ ನೀನಿರುವೆ ಎ೦ಬುದೇ


ಮನಕೊ೦ದು ಸಾ೦ತ್ವನವಾಗಿ


ಬಿದ್ದಾಗಲೆಲ್ಲಾ ಕೈಹಿಡಿದು ನಡೆಸುವೆ ಎ೦ಬುದು


ಜೀವಕ್ಕೊ೦ದು ಸಮಾಧಾನವಾಗಿ,


ನಿನ್ನಿರುವೇ ನನ್ನ ಮನಕ್ಕೊ೦ದು ಆನ೦ದ


ಕ್ಷಣ-ಕ್ಷಣಕೂ ನೆನೆವೆ ನಿನ್ನ ಚಿದಾನ೦ದ






ಸ೦ಗೀತದಿ೦ದಾಗಲೀ, ಸಲ್ಲಾಪದಿ೦ದಾಗಲೀ


ನೋವನ್ನೂ ನಲಿವಾಗಿಸುವ


ನಾದಾನುಸ೦ಧಾನದಿ೦ದಾಗಲೀ


ಗರಿಕೆ,ದಾಸವಾಳ ಬಿಲ್ವಪತ್ರೆಯಿ೦ದಾಗಲೀ


ಕದಳೀ ನಾರಿಕೇಳ,ಗೂಢ ಪರಮಾನ್ನದಿ೦ದಾಗಲೀ


ಮೆಚ್ಚಿಸುವೆನೆ೦ಬುದು ಕ್ಷಣಿಕ ಸತ್ಯವಷ್ಟೇ!






ಹೃದಯದಲ್ಲಿ ನಿನ್ನನ್ನಿಟ್ಟು, ಮಾತುಗಳ ಮ೦ತ್ರದಿ೦ದ

ಅಮ್ಮಾ ಎ೦ದು ಬಾಯ್ತು೦ಬಾ ಕರೆಯಲು


ಬರದೇ ಇರುವೆಯೇ ನೀನು?


ನನ್ನ ಬಿಟ್ಟಾದರೂ ನಿನಗೆ ಯಾರಿಹರು?


ನಿನ್ನ ಮರೆತಾದರೂ ಬಾಳುವ೦ಥಹವರಾರಿಹರು?


ಅರಿತು ನಿನ್ನ ಇರುವ,ಮರೆತು ಎನ್ನ ಇಹವ


ಕ್ಷಣ-ಕ್ಷಣಕೂ ನೆನೆವೆ ನಿನ್ನ ಚಿದಾನ೦ದ.

6 comments:

  1. [[ನನ್ನ ಬಿಟ್ಟಾದರೂ ನಿನಗೆ ಯಾರಿಹರು?]]*
    ತಾಯಿ ಜಗನ್ಮಾತೆಯನ್ನು ಉದ್ದೇಶಿಸಿ ಬರೆದಿರುವ ಈ ರಚನೆಯಲ್ಲಿ ಅರ್ಪಣಾಭಾವ ಎದ್ದುಕಾಣುತ್ತದೆ. *ಲೋಕದ ಸಮಸ್ತರ ಪರವಾಗಿ ಆದರೆ ಈ ಮಾತು ಒಪ್ಪಬಹುದು.

    ReplyDelete
  2. ಹೌದು, ಕವಿನಾಗರಾಜರೇ, ಮಕ್ಕಳಿಗೆ ತಾಯಿಯೇ ಸರ್ವಸ್ವ, ಹಾಗೆಯೇ ತಾಯಿಗೇ ಮಕ್ಕಳೇ ಎಲ್ಲಾ. ನನ್ನ ಪದವನ್ನು ಸಮಸ್ತ ಎ೦ಬರ್ಥದಲ್ಲಿಯೇ ತೆಗೆದುಕೊಳ್ಳಬೇಕು.ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

    ReplyDelete
  3. ಚೆನ್ನಾಗಿದೆ, ಸಾಗಲಿ.

    ReplyDelete
  4. ಮಾತೇ ಇಲ್ಲದೇ ಯಾರೂ ಇರುವುದಿಲ್ಲ, ವಾಸ್ತವದಲ್ಲಿ ಈ ಜಗನ್ನಿಯಾಮಕ ಶಕ್ತಿ ಅಪ್ಪ-ಅಮ್ಮ ಎರಡೂ ಪಾತ್ರ ನಿರ್ವಹಿಸುತ್ತದೆ, ತನ್ನ ಅಹಂ ತೊರೆದ ವ್ಯಕ್ತಿಗೆ ಇದೆಲ್ಲದರ ಅನುಭವ ಸಾಧ್ಯ, ಚೆನ್ನಾಗಿದೆ

    ReplyDelete
  5. ಧನ್ಯವಾದಗಳು ಸೀತಾರಾಮರಿಗೆ, ಶ್ರೀಧರರಿಗೆ, ಹಾಗೂ ಭಟ್ಟರಿಗೆ, ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete