Pages

Sunday, September 12, 2010

ನನ್ನ೦ತೆ ನನ್ನ ಜಗತ್ತು.... ಇದೇ ನನ್ನ ದರ್ಶನ..

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ
ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ
ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ
ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ
ನಾನು ನಕ್ಕಾಗಲೆಲ್ಲಾ ಸ್ವರ್ಗ ನನ್ನ ಬಳಿ ಬ೦ದಿದೆ
ನಾನು ಕಣ್ಣೀರಿಟ್ಟಾಗಲೆಲ್ಲ ಒ೦ದು ಸಾ೦ತ್ವನದ ಸ್ಪರ್ಶ ನನ್ನನ್ನು ಹಗುರಾಗಿಸಿದೆ
ನಾನು ಗೊಣಗಿದಾಗ ಈ ಜಗತ್ತು ಕರ್ಕಶವಾಗಿ ಕ೦ಡಿದೆ
ನಾನು ಪೂಜಿಸಿದಾಗ ದೇವರು ನನ್ನೊಳಗೇ ನುಸುಳಿದ್ದಾನೆ..
ನಾನು ಮೌನಕ್ಕೆ ಮೊರೆಹೋದಾಗಲೆಲ್ಲ ಪ್ರಕೃತಿಯ ನಾದ ಕೇಳಿದ್ದೇನೆ..
ನನ್ನ೦ತೆ ನನ್ನ ಜಗತ್ತು.... ಇದೇ ನನ್ನ ದರ್ಶನ..

- ಡಾ|| ಜ್ಞಾನದೇವ್ ಮೊಳಕಾಲ್ಮೂರು

3 comments:

  1. 'ಯದ್ಭಾವಂ ತದ್ಭವತಿ' ಎಂಬಂತೆ. ಬಾಳೇ ಹಾಗೆ. ಬಾಳುವ ರೀತಿ-ನೀತಿಗಳು ನಮ್ಮ ಹಿಡಿತದಲ್ಲಿರಬೇಕು ಅಷ್ಟೆ. ಆದರೆ ಅದು ಅನೇಕ ಸಾರಿ ಮರೀಚಿಕೆಯಾಗಿ ಸಂಕಷ್ಟಗಳು ಎದುರಾಗುತ್ತವೆ. ಯಾವಾಗ ನಾವು ನಿಜವಾದ ನಾವಾಗಿ - ನಮ್ಮ ಅಂತ:ಸತ್ವ ನಿರ್ದೇಶಿಸಿದಂತೆ, ಆತ್ಮ ಸಾಕ್ಷಿಯಂತೆ - ಬಾಳುವೆವೋ ಆಗ ಖಂಡಿತ ಮೇಲಿನಂತೆ 'ನನ್ನ' ದರ್ಶನ ಆಗಿಯೇ ಆಗುತ್ತದೆ. ಚಿಂತನೆ ಚೆನ್ನಾಗಿದೆ.ಅಭಿನಂದನೆಗಳು.

    ReplyDelete
  2. ನಿಜ, ಜಗತ್ತು ಕನ್ನಡಿಯಿದ್ದಂತೆ.

    ReplyDelete
  3. ವ೦ದನೆಗಳು ಕವಿ ಸುರೇಶ್, ಕವಿ ನಾಗರಾಜ್ ರವರಿಗೆ ಹಾಗೂ ನಮ್ಮ ನೆಚ್ಚಿನ ಶ್ರೀಧರ್ ಗೂ.

    ReplyDelete