Pages

Sunday, September 26, 2010

ನಿಮ್ಮ ಸಲಹೆ ನಮಗೆ ಬೇಕು.


ಸ್ನೇಹಿತರೇ,
ಬ್ಲಾಗ್ ಓದುವವರಿಗೆ ಸುಲಭವಾಗಿ ಮಾಹಿತಿ ದೊರೆಯುವಂತಿರಬೇಕೆಂಬ ಉದ್ಧೇಶದಿಂದ ಬ್ಲಾಗ್ ಸುಧಾರಿಸುವ ಪ್ರಯತ್ನದಲ್ಲಿ ಬ್ಲಾಗ್ರೂಪ ಸ್ವಲ್ಪ ಬದಲಾಗಿದೆ ,ಸಾಧ್ಯವಾದಷ್ಟೂ ವೇದದ ಬಗೆಗೆ ಹೆಚ್ಚು ಮಾಹಿತಿ ಕೊಡುವ ಪ್ರಯತ್ನವು ಮುಂದುವರೆಯುವುದು. ವೇದಸುಧೆಯ ಅಭಿಮಾನಿಗಳು ವೇದಸುಧೆಯನ್ನು ಓದುತ್ತಿರುವುದು ವೇದಸುಧೆಯನ್ನು ಭೇಟಿಮಾಡುವವರ ಸಂಖ್ಯೆಯಿಂದ ಸ್ವಲ್ಪಮಟ್ಟಿಗೆ ತಿಳಿಯುತ್ತಿದೆಯಾದರೂ ವೇದಸುಧೆಗೆ ಸಲಹೆಗಳು ಬರುತ್ತಿಲ್ಲ. ಆದ್ದರಿಂದ ನಮಗೆ ಲಭ್ಯವಿರುವ ಮಾಹಿತಿಗಳನ್ನು ವೇದಸುಧೆಯಅಭಿಮಾನಿಗಳಿಗೆ ನೀಡುತ್ತಾ ಮುಂದುವರೆಯುತ್ತೇವಾದರೂ ನಿಮ್ಮ ಸಲಹೆ ನಮಗೆ ಬೇಕು.

-ಹರಿಹರಪುರ ಶ್ರೀಧರ್

4 comments:

  1. ಕಾಮೆಂಟ್ ಸೆಟ್ಟಿಂಗ್ ಬದಲಾಗಿತ್ತು. ಈಗ ಸರಿಪಡಿಸಲಾಗಿದೆ. ಇನ್ನು ನಿಮ್ಮ ಅನಿಸಿಕೆಗಳನ್ನು ತಿಳಿಸಲು ಕಷ್ಟವಾಗಲಾರದೆಂದು ಭಾವಿಸುವೆ.

    ReplyDelete
  2. ಆತ್ಮೀಯ ಶ್ರೀಧರ್,
    ವೇದ ಸುಧೆಗೆ ತಾವು ಬೆವರು ಸುರಿಸುತ್ತಿರುವ ಪ್ರಯತ್ನಗಳು ಸ್ತುತ್ಯಾರ್ಹ. ಆದರೂ ಈ ನಿಟ್ಟಿನಲ್ಲಿ ಮಾನವ ಜೀವನಕ್ಕೆ ಉನ್ನತಿಯಾಗುವ, ಬದುಕನ್ನು ಹಸನು ಮಾಡುವ ಪ್ರತಿ ಸಾಹಿತ್ಯ ಪ್ರಾಕಾರಗಳನ್ನೂ ವೇದಸುಧೆ ಸ್ವೀಕರಿಸಲಿ ಎ೦ಬ ನನ್ನ ಪುಟ್ಟ ಸಲಹೆ. ಕಾರಣ ವೇದಗಳನ್ನು ಸಮಗ್ರ ಅಧ್ಯಯನ ಮಾಡದೇ ಅದರ ಬಗ್ಗೆ ಅಧಿಕೃತವಾಗಿ ಬರೆಯಲು ತುಸು ಕಷ್ಟ ಸಮಯದ ಅಭಾವ. ಹೀಗಾಗಿ ವೇದ ವಿದ್ವಾ೦ಸರು ಈ ಬ್ಲಾಗಿನಲ್ಲಿ ಪಾಲ್ಗೊಳ್ಳಲಿ. ಹಾಗೆಯೇ ವೇದಗಳ ಬಗ್ಗೆ ಅ೦ತರ್ಜಾಲದಲ್ಲಿ ಲಭ್ಯವಿರುವ ಉಪಯುಕ್ತ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ವೇದಸುಧೆಗೆ ಹಾಕಬೇಕು. ನಾನು ಈ ಹಿ೦ದೆ ಇದರ ಬಗ್ಗೆ ಹೇಳಿದ್ದೆ. ಸಮಯದ ಅಭಾವ ಹೀಗಾಗಿ ಈ ಕೆಲಸಕ್ಕೆ ಸ್ವಲ್ಪ ಹಿನ್ನೆಡೆಯಾಗುತ್ತಿದೆ. ಮು೦ದೆ ಪ್ರಯತ್ನ ಮಾಡುತ್ತೇನೆ. ನಿಮ್ಮ Total involvement ಗೆ ನಾನು ಬೆರಗಾಗಿದ್ದೇನೆ.
    ವಿಶ್ವಾಸ ಪ್ರೇಮದಿ೦ದ
    ನಿಮ್ಮ,

    ReplyDelete
  3. ಆತ್ಮೀಯ ಜ್ಞಾನದೇವ್,
    ನಿಮ್ಮ ಪ್ರೀತಿಪೂರ್ವಕ ನುಡಿಗಳು ವೇದಸುಧೆ ಮುನ್ನಡೆಯಲು ಪ್ರೇರಕ ವಾಗಿವೆ. ಮಾನವನ ಬದುಕಿಗೆ ಬೆಳಕು ನೀಡುವ ಯಾವುದೇ ಸಾಹಿತ್ಯ ಪ್ರಾಕಾರಗಳನ್ನೂ ಗೌರವಿಸಿ ಅವನ್ನು ವೇದಸುಧೆಯು ಪ್ರಕಟಿಸುತ್ತಲೇ ಬಂದಿದೆ.ಆದರೆ ವೇದದ ವಿಚಾರವೆಂದರೆ ನಾವು ಸಾಮಾನ್ಯವಾಗಿ ಆಚರಿಸುವ ಯಜ್ಞಯಾಗಾದಿಗಳು, ವ್ರತಕಥೆಗಳು, ಪೂಜೆ ಪುನಸ್ಕಾರಗಳು, ಆಡಂಬರದ ಧಾರ್ಮಿಕ ಆಚರಣೆಗಳು, ಎಂಬ ಸಾಮಾನ್ಯ ಕಲ್ಪನೆ ಹಲವರಿಗೆ ಇದೆ.ಅಲ್ಲದೆ ವೇದವು ಬ್ರಾಹ್ಮಣರ ಸ್ವತ್ತೆಂಬ ಕಲ್ಪನೆ ಕೂಡ ಇದೆ.ಈ ಜ್ಞಾನವು ಮಾನವನ ಉನ್ನತ ಬದುಕಿಗಾಗಿ ಎಂಬ ಸಾಮಾನ್ಯ ತಿಳುವಳಿಕೆಯನ್ನು ಗಟ್ಟಿಯಾಗಿ ಹೇಳುವುದೇ ವೇದಸುಧೆಯ ಪ್ರಮುಖ ಉದ್ಧೇಶವೆಂದು ಹೇಳಿದರೆ ತಪ್ಪಾಗಲಾರದು. ಅದಕ್ಕಾಗಿ ಸ್ವಲ್ಪ ವೇದದ ವಿಚಾರಕ್ಕೆ ಪ್ರಾಶಸ್ಥ್ಯ. ಈಗಾಗಲೇ ಪ್ರಕಟಿಸಿರುವಂತೆ ವಾರದಲ್ಲಿ ಐದು ದಿನಗಳು ವೇದದ ಹೊರತಾಗಿಯೂ ಸಮಾಜಕ್ಕೆ ಕೊಡಬಹುದಾದ ಉತ್ತಮ ಬರಹಗಳಿಗಾಗಿ. ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಸಧ್ಯಕ್ಕೆ ನಮ್ಮ ಸಂಪರ್ಕದಲ್ಲಿರುವ ಶ್ರೀ ಸುಧಾಕರಶರ್ಮರಿಂದ ವೇದದ ಬಗ್ಗೆ ಒಂದಿಷ್ಟು ವಿಚಾರ ಮಂಥನ.ಈ ಬಗ್ಗೆ ತಮ್ಮಲ್ಲಿ ಒಂದು ಮನವಿ ಇದೆ. ಉಪನ್ಯಾಸಗಳ ಆಡಿಯೋ ಕೇಳಿಸದರೆ ಸಾಲದು ಅವುಗಳ ಬರಹ ರೂಪವನ್ನು ಪ್ರಕಟಿಸಬೇಕೆಂದು ಹಲವರ ಬೇಡಿಕೆ ಇದೆ. ತಾವು ದಯಮಾಡಿ ಇದಕ್ಕಾಗಿ ವಾರದಲ್ಲಿ ೨-೩ ಗಂಟೆ ಬಿಡುವು ಮಾಡಿಕೊಳ್ಳ ಬಹುದೇ? ಮಂಗಳವಾರ ಮತ್ತು ಶುಕ್ರವಾರ ಪ್ರಕಟವಾಗುವ ಆಡಿಯೋ ಕೇಳಿ ಅವುಗಳನ್ನು ಬರಹರೂಪಕ್ಕೆ ತಂದು ಪ್ರಕಟಿಸ ಬಹುದೇ?
    ವೇದಸುಧೆಯ ಹಲವಾರು ಅಭಿಮಾನಿಗಳನ್ನು ಹೀಗೆ ಯಾವುದಾದರೂ ರೂಪದಲ್ಲಿ ಸಹಕಾರ ಕೊಡಿ ಎಂದು ಮನ ಬಿಚ್ಚಿ ಕೇಳಿ ಬಿಡುತ್ತೇನೆ. ಹೀಗೆ ನನ್ನ ಕೋರಿಕೆಯನ್ನು ಮನ್ನಿಸಿ ಶ್ರೀ ಕವಿ ನಾಗರಾಜ್ ಇವರು ವೇದೋಕ್ತ ಜೀವನಪಥ ವಿಶೇಷ ಲೇಖನ ಮಾಲೆಯನ್ನು ಪ್ರಕಟಿಸುತ್ತಾ ಇದ್ದಾರೆ.ತಾವು ವೈದ್ಯರು. ನಿಮ್ಮ ಸಮಯವು ಬಹಳ ಅಮೂಲ್ಯವಾದುದು.ಆದರೂ ತಮ್ಮ ಅಭಿರುಚಿ ಕಂಡು ಕೋರಿಕೆ ಸಲ್ಲಿಸಿರುವೆ. ನಿಮಗೆ ಸಮಯ ದೊರಕದಿದ್ದರೆ ನಾನು ಬೇಸರಿಸುವುದಿಲ್ಲ. ನೀವು ಎಂದಿದ್ದರೂ ವೇದಸುಧೆಯ ಬಳಗದ ಒಬ್ಬ ಮಾನ್ಯ ಸದಸ್ಯರೇ ಆಗಿರುತ್ತೀರಿ.
    ನಮಸ್ತೆ
    -ಶ್ರೀಧರ್

    ReplyDelete
  4. This comment has been removed by the author.

    ReplyDelete