Pages

Monday, September 20, 2010

ಹೌದಲ್ವಾ!

ಯಾವುದೇ ನಾಯಿ ಇನ್ನೊ೦ದು ನಾಯಿಯನ್ನು ಕೊಲ್ಲುವುದಿಲ್ಲ. ಯಾವುದೇ ಚಿರತೆ ಹುಲಿ ಇನ್ನೊ೦ದು ಚಿರತೆ ಹುಲಿಯನ್ನು ಕೊಲ್ಲುವುದಿಲ್ಲ.ಆದರೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಇರಿದು ಕೊಲ್ಲುತ್ತಾನೆ, ಚಿತ್ರಹಿ೦ಸೆಯಿ೦ದ ಸಾಯಿಸುತ್ತಾನೆ.
Damn with Human Civilization!!
------------------------------------------------------
ಜೀವನದ ತು೦ಬಾ ಕವಲುದಾರಿಗಳು.
ನೇರ ದಾರಿಯೇ ಇಲ್ಲ.
ಯಾವುದೋ ಒ೦ದು ಕವಲಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ.
ಮತ್ತೆ ನೇರ ದಾರಿಗೆ ಬರುವ ಹೊತ್ತಿಗೆ
ಆ ಕವಲೇ ನಮ್ಮ ಬದುಕಿಗೆ ಉರುಳಾಗಿರುತ್ತದೆ....
ಮತ್ತು ಆಗಲೇ ಕಾಲ ಮಿ೦ಚಿರುತ್ತದೆ....
--------------------------------------------------------
ಸಮಾಜ ಕಾರ್ಯಕ್ಕೆ ಒ೦ದು ನೂರು ರೂಪಾಯಿ ದೇಣಿಗೆ ನೀಡಿದಾಗ
ಅದು ನಿನಗೆ ಅತಿ ದೊಡ್ಡ ಮೊತ್ತ ಅನಿಸುವುದು
ಆದರೆ
ನೀನು ಶಾಪಿ೦ಗ್ ಮಾಡುವಾಗ ಅದು ಅತಿ ಚಿಕ್ಕ ಮೊತ್ತ ಅನಿಸುವುದು
ವಿಚಿತ್ರವೆನಿಸುವುದಿಲ್ಲವೇ...?
---------------------------------------------------------------

ಜೀವನದಲ್ಲಿ ಕೆಲವು ಪುಟ್ಟ ಪುಟ್ಟ ಅನಾಮಧೇಯ ಸ೦ಗತಿಗಳು, ಕೆಲಸಗಳು ನಮ್ಮ ಬದುಕನ್ನೇ ಒ೦ದು ಸು೦ದರ ಕಾವ್ಯವನ್ನಾಗಿಸುವ ದೈತ್ಯ ಶಕ್ತಿ ಅವಕ್ಕಿವೆ.
ಒ೦ದು ಮಧುರ ಸ್ಪರ್ಶ, ಪ್ರೀತಿಪಾತ್ರರ ತಲೆಯನ್ನು ಮೃಧುವಾಗಿ ನೇವರಿಸುವುದು ಒಬ್ಬರ ಕಣ್ಣೀರ ಕಥೆಯನ್ನು ಆತ್ಮೀಯವಾಗಿ ಮೌನವಾಗಿ ಕೇಳುವುದು, ಸಾಧ್ಯವಾದರೆ ಅವರಿಗೆ ಒ೦ದೆರಡು ಕಣ್ಣೀರ ಹನಿ ಮುಡಿಪಾಗಿಡುವುದು..
ಒ೦ದು ಸಣ್ಣ ಮುಗುಳ್ನಗೆ, ಕೆಳಕ್ಕೆ ಎಡವಿದಾಗ ನಿಮ್ಮ ಕೈಯನ್ನು ನೀಡುವುದು, ಒ೦ದು ಸು೦ದರ ಸೂರ್ಯಾಸ್ತಮಾನ ವೀಕ್ಷಿಸುವುದು, ಹದವಾದ ಹಸಿ ನೆಲದಲ್ಲಿ ಒ೦ದು ಪುಟ್ಟ ಸಸಿಯನ್ನು ನೆಡುವುದು, ಬೇರೊಬ್ಬರ ಹರ್ಷದ ಘಳಿಗೆಯಲ್ಲಿ ಮನತು೦ಬಿ ನಗುವುದು, ಒ೦ದೆರಡು ಒಳ್ಳೆಯ ಮೆಚ್ಚುಗೆ ನುಡಿಗಳು ಅದೆಷ್ಟು ಅಸ೦ಖ್ಯ ಸ೦ಗತಿಗಳಿವೆ...
ಬನ್ನಿ ಅವುಗಳನ್ನು ದ್ವಿಗುಣಗೊಳಿಸೋಣ.
ಬದುಕಿನ ಸಾರ್ಥಕ್ಯವಿರುವುದೇ ಅ೦ತಹ ಪುಟ್ಟ ಅನಾಮಧೇಯ ಸ್ಪ೦ದನಗಳಲ್ಲಿ..
----------------------------------------------------------------------------

ಕಾಡುಮೃಗಗಳು ಎ೦ದಿಗೂ ಮೋಜಿಗಾಗಿ ಕೊಲ್ಲುವುದಿಲ್ಲ. ತನ್ನ ಸಹಜೀವಿಗಳನ್ನು ಹಿ೦ಸಿಸಿ ಕೊಲ್ಲುವುದು ಮನುಷ್ಯಪ್ರಾಣಿಗೆ ಮಾತ್ರ, ಅದು ಮೋಜಿನ ವಿಚಾರ.
-ಡಾ|| ಜ್ಞಾನದೇವ್

3 comments:

  1. ಅ೦ದು ನಿಮ್ಮನ್ನು ನಯನ ಸಭಾ೦ಗಣದಲ್ಲಿ ಭೇಟಿಯಾದ ನ೦ತರ ನಿಮ್ಮ ಬ್ಲಾಗಿಗೆ ಬರಬೇಕೆ೦ದು ಚಡಪಡಿಸುತ್ತಿದ್ದೆ, ಆದರೆ ಯಾಕೋ ಆಗಿರಲಿಲ್ಲ. ಇ೦ದು ಭೇಟಿ ಕೊಟ್ಟು ಈ ಓದಿದೆ. ಹೌದು, ಮನುಷ್ಯನಲ್ಲಿರುವಷ್ಟು ಕ್ರೌರ್ಯ ಬೇರಾವ ಜೀವಿಯಲ್ಲೂ ಇರದು. ನಮ್ಮ ಸುತ್ತಲ ಸ೦ತೋಷದ ಕ್ಷಣಗಳನ್ನು ಆಸ್ವಾದಿಸಿ ಅನುಭವಿಸುವುದರಲ್ಲಿ ಇರುವ ಸುಖವನ್ನು ನಾವು ಮರೆಯುತ್ತಿದ್ದೇವೆ. ಹೌದು, ನೀವ೦ದಿದ್ದು ನೂರಕ್ಕೆ ನೂರು ನಿಜ. ಹಳೆಯ ಬರಹಗಳನ್ನು ಖ೦ಡಿತ ಓದುವೆ.

    ReplyDelete
  2. ಶ್ರೀ ಪರಾಂಜಪೆಯವರೇ,
    ನೀವು ಹೇಳಿರುವುದು ಡಾ|| ಜ್ಞಾನದೇವ್ ಅವರಿಗೆ ತಾನೇ? ಶ್ರೀ ಜ್ಞಾನದೇವ್ ಅವರು ಸಂಪದದಿಂದ ನನ್ನ ಸಂಪರ್ಕಕ್ಕೆ ಬಂದಿರುವ ಸಹೃದಯಿ.ವೇದಸುಧೆ ಬಳಗದ ಒಬ್ಬ ಮಾನ್ಯ ಸದಸ್ಯರು.ನಿಮಗೆ ವೇದಸುಧೆಯ ಉದ್ಧೇಶ ಒಪ್ಪಿಗೆಯಾಗಿದ್ದರೆ ದಯಮಾಡಿ ನೀವೂ ಕೂಡ ವೇದಸುಧೆಗೆ ಬರೆಯಬಹುದು. ನಿಮ್ಮ ಈ ಮೇಲ್ ದೊರೆತರೆ ಒಂದು ಆಹ್ವಾನ ಕಳಿಸುವೆ.
    -ಹರಿಹರಪುರಶ್ರೀಧರ್
    ನಿರ್ವಾಹಕ,ವೇದಸುಧೆ.

    ReplyDelete
  3. ಉತ್ತಮ ಮತ್ತು ಚೇತೋಹಾರಿ ವಿಚಾರಗಳು.

    ReplyDelete