Pages

Tuesday, October 19, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 5

ಋಗ್ವೇದ ಒಂದು ಕಡೆ ಹೇಳುತ್ತಲಿದೆ:


ಯ ಏಕ ಇತ್ ತಮು ಷ್ಟುಹಿ ಕೃಷ್ಟೀನಾಂ ವಿಚರ್ಷಣಿಃ|
ಪತಿರ್ಜಜ್ಞೇ ವೃಷಕ್ರತುಃ||  (ಋಕ್. 6.45.16)


[ಯಃ] ಯಾವ, [ಕೃಷ್ಟೀನಾಮ್] ಪ್ರಜಾಮಾತ್ರರ, [ವಿಚರ್ಷಣಿಃ] ನಿರೀಕ್ಷಕನಾಗಿ, [ಏಕ ಇತ್] ಒಬ್ಬನೇ ಇದ್ದಾನೋ, [ತಂ ಉ ಸ್ತುಹಿ] ಅವನನ್ನು ಮಾತ್ರ ಸ್ತುತಿಸು. [ವೃಷಕ್ರತುಃ] ಪ್ರಬಲ ಜ್ಞಾತಿಯು, ಅದ್ಭುತ ಕರ್ತೃವೂ, [ಪತಿ] ಎಲ್ಲರ ಸ್ವಾಮಿಯೂ, ಪಾಲಕನೂ ಆಗಿ [ಜಜ್ಞೇ] ಅವನು ಪ್ರಸಿದ್ಧನಾಗಿದ್ದಾನೆ.


ಇಂತಹ ಸ್ಫುಟವಾದ ಪ್ರಮಾಣಗಳಿದ್ದರೂ ಕೂಡ, ಅನೇಕ ಪಾಶ್ಚಾತ್ಯ ವಿದ್ವಾಂಸರೂ, "ಗೌರಾಂಗ ಪ್ರಭುಗಳು ಹೇಳಿರುವುದೇ ಸತ್ಯ" ಎಂದು ನಂಬುವ ಕೆಲವು ಭಾರತೀಯ ವಿದ್ವಾಂಸರೂ ಸಹ "ವೇದಗಳಲ್ಲಿ ಅನೇಕೇಶ್ವರವಾದವಿದೆ, ಆರ್ಯರು ಇಂದ್ರ, ಅಗ್ನಿ, ವರುಣ ಮೊದಲಾದ ಅದೆಷ್ಟೋ ದೇವರನ್ನು ಪೂಜಿಸುತ್ತಿದ್ದರು. 'ದೇವರೊಬ್ಬನೇ' ಎಂಬ ಸಿದ್ಧಾಂತ ಇತ್ತೀಚಿನದು. ಅದು ವೈದಿಕ ಋಷಿಮುನಿಗಳಿಗೆ ಗೊತ್ತಿರಲಿಲ್ಲ" ಎಂದು ವಾದಿಸುತ್ತಾರೆ. ವೇದಗಳಲ್ಲಿ ಒಬ್ಬನೇ ಭಗವಂತನನ್ನು ನಾನಾ ಹೆಸರುಗಳಿಂದ ಸಂಬೋಧಿಸಿರುವುದನ್ನು ಕಂಡು ಅವರು ಮುಗ್ಗರಿಸಿದ್ದಾರೆ. ವೇದಗಳಲ್ಲಿ ಅನೇಕ ದೇವತಾವಾದವಿದೆ ಎಂಬುದನ್ನಂತೂ ಯಾರೂ ತಿರಸ್ಕರಿಸಲಾರರು. ಪದಾರ್ಥ ಜಡವಾಗಲಿ, ಚೇತನವಾಗಲಿ, ಯಾವುದಾದರೊಂದು ದಿವ್ಯಶಕ್ತಿ ಅದರಲ್ಲಿದ್ದರೆ, ವೇದಗಳು ಅದನ್ನು 'ದೇವತೆ' ಅಥವಾ 'ದೇವ' ಎಂದು ನಿರ್ದೇಶಿಸುತ್ತವೆ.
                                                                                                                              ..ಮುಂದುವರೆಯುವುದು.

4 comments:

  1. ನಾಗರಾಜ್,
    ಅದ್ಭುತವಾಗಿದೆ, ಮುಂದುವರೆಸಿ. ಶರ್ಮರ ಉಪನ್ಯಾಸಗಳ ಆಡಿಯೋ ಕ್ಲಿಪ್ ಪ್ರಕಟಿಸಲು ಆರಂಭಿಸಿರುವೆ.ಬರಹ ರೂಪಕ್ಕೆ ಸಮಯ ಸಾಕಾಗುತ್ತಿಲ್ಲ. ಆದರೂ ಪ್ರಯತ್ನ ಶುರುವಾಗಿದೆ.ಆತುರದಲ್ಲಿ ವ್ಯಾಕರಣ ದೋಷಗಳು ಕಂಡರೆ ನನಗೆ ತಿಳಿಸಿ. ತಿದ್ದುವೆ.

    ReplyDelete
  2. ನಮ್ಮ ಮಹಾ ಮಹಾ ವಿದ್ವಾ೦ಸರ ಕಥೆಯೆಲ್ಲಾ ಇಷ್ಟೇ! “ಅರ್ಧ ಕಲಿತವನಿಗೆ ಅಬ್ಬರ ಹೆಚ್ಚು“ ಎನ್ನುವ ಗಾದೆಯಿಲ್ಲವೇ? ಹಾಗೆ ನಾನು ಕ೦ಡಿದ್ದು ಹಾಗೂ ಓದಿದ್ದೇ ಸತ್ಯ ಎನ್ನುವವರಿಗೆ ಏನೆನ್ನೋಣ? ಮು೦ದುವರೆಯಲಿ ವೇದೋಕ್ತ ಜೀವನ ಪಥ. ಇನ್ನಾದರೂ ನಮ್ಮ ವಿದ್ವಾ೦ಸರುಗಳು ಸರಿಯಾಗಿ ಗಮನಹರಿಸಿ, ಮಥಿಸಿ,ಬಡ ಪಾಮರರರಿಗೆ ತಿಳಿ ಹೇಳುವರೇ, ಕಾಯಬೇಕು!
    ಅಧ್ಬುತವಾದ ಸತ್ಯ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ಧನ್ಯವಾದ ಶ್ರೀಧರ್ ಮತ್ತು ರಾಘವೇಂದ್ರರಿಗೆ. ಶ್ರೀ ಶರ್ಮರ ಉಪನ್ಯಾಸಗಳ
    ಅಡಿಯೋ ಕ್ಲಿಪ್ ಗಳ ತಯಾರಿ ಮತ್ತು ಪ್ರಕಟಣೆ ಶ್ರಮದ,ಅದರೆ ಒಳ್ಳೆಯ, ಕೆಲಸ.ನನ್ನ ಸಹಕಾರವಿದೆ.

    ReplyDelete
  4. ವೇದಸುಧೆಯ ಕೆಲಸ ಮತ್ತು ಆಡಿಯೋ ಸಿ.ಡಿ ಮಾಡುವ ಕೆಲಸ ಒಟ್ಟೊಟ್ಟಿಗೆ ಆಗಬೇಕಾಗಿರುವುದರಿಂದ ಸ್ವಲ್ಪ ತಡವಾಗಬಹುದು.ಆದರೂ ಬೇಸರಪಡದೆ ನಿಮ್ಮ ಸಕಾರದೊಡನೆ ಮಾಡೋಣ.

    ReplyDelete