ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, November 12, 2010

ಮೃದುತ್ವವು ಮನುಷ್ಯನ ದೌರ್ಬಲ್ಯವಲ್ಲ.

 ಸ್ನೇಹಿತರೇ,
 ಇದೊಂದು ವಿನೂತನ ಪ್ರಯೋಗ. ಇದು SMS ಕಾಲ.ದೊಡ್ದ ದೊಡ್ದ ಗ್ರಂಥವನ್ನು ಓದಿ ಪಡೆಯಬೇಕಾದ ಜ್ಞಾನವನ್ನು ಒಂದು ಚುಟುಕು ಸಂದೇಶ ಕೊಡಬಹುದಾದರೆ........ಅನೇಕ ಸ್ನೇಹಿತರು ನನಗೆ  ನಿತ್ಯವೂ SMS ಕಳಿಸುತ್ತಾರೆ. ಎಲ್ಲವೂ ಅದ್ಭುತವೇ. ಮೊಬೈಲ್ ನಲ್ಲಿ ಅದರ ಹೊರೆ ಹೆಚ್ಚಾದಾಗ ಓದಿದ  SMS ನ್ನು ಡಿಲೀಟ್ ಮಾಡುವುದು ಸಾಮಾನ್ಯ ಸಂಗತಿ. ಆದರೆ  ಡಿಲೀಟ್ ಮಾಡಿದ ನಂತರ ಅದರ ತಿರುಳನ್ನು ಬೇರೆ ಸ್ನೇಹಿತರಿಗೆ ಹೇಳಿದಾಗ ನನಗೂ ಫಾರ್ವರ್ಡ್ ಮಾಡಿ ಎನ್ನುವವರು ಹಲವರು. ಅದಾಗಲೇ ಡಿಲೀಟ್ ಮಾಡಿದೆ ಎಂದರೆ ಪೇಚಾಟ.  ಹೀಗೆ ನಿಮಗೂ ಹಲವು ಉತ್ತಮವಾದ S M S ಬಂದಿರಬಹುದು. ಅವುಗಳನ್ನು ವೇದಸುಧೆಯಲ್ಲಿ ಹಂಚಿಕೊಳ್ಳುವಿರಾ? ನಿಮ್ಮ  SMS ನ್ನು  ಈ ಬರಹದಡಿ ಕಾಮೆಂಟ್ ಕಾಲಮ್ ನಲ್ಲೂ ಬರೆಯಬಹುದು. ವೇದಸುಧೆಯ ಲೇಖಕರು ಪ್ರತ್ಯೇಕವಾಗಿಯೂ ಬರೆದು SMS ಲೇಬಲ್ ನಲ್ಲಿ ಪೋಸ್ಟ್ ಮಾಡಿದರಾಯ್ತು. ಅಂತೂ SMS ನಲ್ಲಿ  ಒಂದು ಉತ್ತಮ ಸಂದೇಶವಂತೂ ಇರಬೇಕು.
--------------------------------------------------------------
ಇಂದಿನ S M S
A soft nature of a person does not mean weakness.Remember nothing is softer than water ,but its force can break the strongest of the rocks.

4 comments:

 1. ನನ್ನ ಮೊಬೈಲಿಗೆ ಬರುವ ಇಂತಹ ಒಳ್ಳೆಯ ಸಮೊಸ(ಸರಳ ಮೊಬೈಲ್ ಸಂದೇಶ)ಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

  ಹಾಗೆಯೇ ನನ್ನ ಈ ಬ್ಲಾಗನ್ನೂ ನೋಡಿ, ಇಲ್ಲಿಯೂ ಅಂತಹ ಒಳ್ಳೆಯ SMSಗಳಿವೆ. http://samosagalu.blogspot.com

  ಅಥವಾ http://prasannakannada.blogspot.com/p/sms.html

  ReplyDelete
 2. ಪ್ರಸನ್ನ, ನಿತ್ಯವೂ ಒಂದು ಸಂದೇಶವನ್ನು ಹಾಕಿ. ನನ್ನ ಮಿತ್ರರುಗಳ ಒತ್ತಾಸೆಗಾಗಿಯೇ ಈ ಮಾಲಿಕೆ ತೆರೆದೆ. ಇಂದು ನಿಮ್ಮ ಒಂದು ಸಂದೇಶವನ್ನು ನಾನು ೋಸ್ಟ್ ಮಾಡಿರುವೆ. ಅದನ್ನು ತೆಗೆದು ಅದರಜೊತೆಗೆ ಇನ್ನೂ ನಾಲ್ಕಾರು ಸಂದೇಶಗಳೊಡನೆ ನೀವೇ ಪೋಸ್ಟ್ ಮಾಡಿ.
  ನಮಸ್ತೆ

  ReplyDelete
 3. ಪ್ರಸನ್ನ,
  ನಿಮ್ಮ ಹೆಸರು ತೆಗೆಯಲು ಹೇಳಲಲ್ಲ. ನಿಮ್ಮ ಸಂದೇಶವನ್ನು ನಾನು ಪೋಸ್ಟ್ ಮಾಡುವುದು ಸರಿಯೇ, ಇನ್ನೂ ನಾಲ್ಕಾರು ಸಂದೇಶಗಳೊಡನೆ ನೀವೇ ಪೋಸ್ಟ್ ಮಾಡಿ.

  ReplyDelete
 4. ನಾನು ನನ್ನ ಹೆಸರು ತೆಗೆದದ್ದು ಬೇರೆ ಕಾರಣಕ್ಕೆ, ಆ ಮಾತನ್ನು (A few people are like street lights. They.....) ಹೇಳಿರುವುದು ನಾನಂತೂ ಅಲ್ಲ. ಹಾಗಾಗಿ ಅದರ ಕೆಳಗೆ ನನ್ನ ಹೆಸರಿದ್ದರೆ ಅದರ ಕರ್ತೃವಿಗೆ ಮಾಡುವ ಅವಮಾನ ಎಂದು ಭಾವಿಸಿ ತೆಗೆದು ಹಾಕಿದೆ ಅಷ್ಟೆ, :)

  ಇನ್ನು ಆ ಸಂದೇಶಗಳು ನನ್ನದು ಖಂಡಿತ ಅಲ್ಲ. ನನ್ನ ಶ್ರಮ ಏನಿದ್ದರೂ ಅದನ್ನು ಟೈಪಿಸುವ ಕೆಲಸ ಮಾತ್ರ. ಹಾಗಾಗಿ ಅವುಗಳನ್ನು ನೀವೇ ಪೋಸ್ಟ್ ಮಾಡಬಹುದು.

  ReplyDelete