ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, November 22, 2010

ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ

ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ
ನಾಂ ಬರೆಯಬಲ್ಲೆನೆ ನಾನು ಕವಿಯು |
ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು
ನಾನ್ ತಪಿಸುತಿರೆ ಹೇಳಲಾವ ಪರಿಯು | ||ಪ||

ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ
ರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತ
ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ
ಮುರಿವ ಲೇಖನಿ ಬೇಕು ರಕ್ತವದಕೆ ಮಸಿ ||೧||

ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ
ಮೂರಕ್ಷರದೊಳದೇನು ಮಾಟವಿಹುದೋ
ಸ್ವಾತಂತ್ರ್ಯ ಯಜ್ಞದೊಳು ಬಂದೆನ್ನ ಬಂಧುಗಳ
ಮುದಿತ ಲೇಖನಿ ಬೇಕು ರಕ್ತವದಕೆ ಮಸಿ ||೨||

ಎನ್ನ ಹೃದಯದ ಸ್ಪೂರ್ತಿ ಎನ್ನ ಜನತೆಯ ಶಕ್ತಿ
ಎನ್ನ ನಾಡಿನ ಕೀರ್ತಿ ಹೆಚ್ಚಿಸಲ್ಕೆ
ಎಮ್ಮೂಂದಿಗರ ಬದುಕು ಬಾಳಾಗಿ ಬೆಳಗಿಸಲು
ಬಲಿತ ಲೇಖನಿ ಬೇಕು ರಕ್ತವದಕೆ ಮಸಿ ||೩||


ಕೃಪೆ: ಗೀತ ಗಂಗಾ

1 comment: