ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Saturday, November 13, 2010

" ನಿಮಗೂ ಗೊತ್ತಾಗೋಲ್ಲ ಬಿಡಿ ಅಂಕಲ್"

 ನನ್ನ ಮಿತ್ರನೊನ್ನ ನಿದ್ದಾನೆ., ಅವನ ಮೊಬೈಲ್ ಗೆ ಫೋನ್ ಮಾಡಿ ಮಿತ್ರನೊಬ್ಬನ ಫೋನ್ ನಂಬರ್ ಕೇಳಿದರೆ " ಅವನ ನಂಬರ್ ನನ್ನ ಮೊಬೈಲ್ ನಲ್ಲಿದೆ, ನನಗೆ ನೋಡಲು ಗೊತ್ತಾಗುವುದಿಲ್ಲ , ಸ್ವಲ್ಪ ನಿಧಾನಿಸು ,ನನ್ನ ಮೊಮ್ಮಗ[ಅವನಿಗೆ ೫ ವರ್ಷ] ನಿಗೆ ಕೊಡ್ತೀನಿ" ಅಂತಾ ಪಕ್ಕದಲ್ಲಿರುವ ಮಗುವಿಗೆ ಕೊಡ್ತಾನೆ. ಮಗು ಮಾತು ಶುರು ಮಾಡುತ್ತೆ" ಏನ್ ಅಂಕಲ್ ನಿಮಗೆ ಯಾವ ಅಂಕಲ್ ಫೋನ್ ನಂಬರ್ ಬೇಕು, ನಮ್ಮ ತಾತನಿಗೆ ಏನೂ ಗೊತ್ತಾಗುಲ್ಲ, ನಮ್ಮಪ್ಪನೇ ವಾಸಿ [ಈ ಚೋಟ ಅವನಿಗಿಂತ ವಾಸಿ] ಅಂತಾ ಹೆಸರು ಕೇಳಿ ನಂಬರ್ ಹುಡುಕಿ ಹೇಳುತ್ತೆ "  ನೈನ್ ಡಬ್ಬಲ್ ಫೋರ್ ಯೈಟ್ ಡಬ್ಬಲ್ ನೈನ್ ಯೈಟ್ ಝೀರೋ ವನ್ ಫೈವ್" ಕೇಳ್ತಾ? ಒಂದ್ಸಲ ಹೇಳಿ ನೋಡೋಣ. ನಾನೇನಾದರೂ ತಪ್ಪು ಹೇಳಿದರೆ " ನಿಮಗೂ ಗೊತ್ತಾಗೋಲ್ಲ ಬಿಡಿ ಅಂಕಲ್" ಅಂದೇ ಅನ್ನುತ್ತೆ. ಇದು ಯುವ ಪೀಳಿಗೆ ಕಾಲ ಅಂತಾಲೂ ಹೇಳುವುದಕ್ಕಾಗುಲ್ಲ. ಮಕ್ಕಳ ಕಾಲ ಅನ್ ಬಹುದೇನೋ .ಯಾಕೆ ಇಷ್ಟೆಲ್ಲಾ ಹೇಳಿದೆ ಅಂದ್ರ, ವೇದಸುಧೆಗೆ ಒಬ್ಬ ಯುವ ಮಿತ್ರ ಸಿಕ್ಕಿದ್ದಾನೆ,ನಾನು  ಈ ಒಂಬತ್ತು ತಿಂಗಳು ಹೆಣಗಾಡಿ ತಾಂತ್ರಿಕ ನೈಪುಣ್ಯತೆ ಇಲ್ಲದೆ ಒದ್ದಾಡುತ್ತಿದ್ದರೆ, ಈತ ಏನು ಕೇಳಿದರೂ ಪಟ್ ಅಂತಾ ಪರಿಹಾರ ಹೇಳಿಬಿಡ್ತಾನೆ.[ನನ್ನ ಮಗನಿಗಿಂತ ಚಿಕ್ಕವನಾದುದರಿಂದ ಏಕವಚನವನ್ನು ಬಳಸಿದ್ದೇನೆ, ತಪ್ಪಾಗಿ ಭಾವಿಸಬಾರದೆಂದು ವಿನಂತಿಸುವೆ]  ಫೀಡರ್ ಬರ್ನರ್ ವಿಚಾರ ಕೇಳಿದೆ. ಇಲ್ಲಿ ಕೊಂಡಿ ಕೊಟ್ಟಿದ್ದಾನೆ. ಅದರ ಮೂಲಕ ಇಣುಕಿ ನಮ್ಮ "ಪ್ರಸನ್ನನ " ಪರಿಚಯ  ಚೆನ್ನಾಗಿ ಆಗುತ್ತೆ.
http://prasannakannada.blogspot.com/2010/09/email-subscription.html

6 comments:

 1. ಪ್ರಸನ್ನರವರ ಬ್ಲಾಗ್ ಚೆನ್ನಾಗಿದೆ. ಅವರ ಹಾಗೆ ಕನ್ನಡದಲ್ಲಿ ಬರೆಯುವವರ ಅವಶ್ಯಕತೆ ತುಂಬಾ ಇದೆ. ಹೌದು, ವಿಜ್ಞಾನ, ತಂತ್ರಜ್ಞಾನಕ್ಕೆ ಯುವ ಶಕ್ತಿ ಅವಶ್ಯ. ನ್ಯೂಟನ್, ಐನ್ಸ್ಟೈನ್, ಚಂದ್ರಶೇಖರ್, ರಾಮನ್ ಸೇರಿಸಿ ಬಹಳಷ್ಟು ವಿಜ್ಞಾನಿಗಳು ತಮ್ಮ ಸರ್ವಶ್ರೇಷ್ಠ ಸಿದ್ಧಾಂತಗಳನ್ನು ಕಂಡುಹಿಡಿದಾಗ ಅವರ ವಯಸ್ಸು 25 ರ ಆಸು ಪಾಸಿನಲ್ಲಿಯೇ ಇತ್ತು.

  ReplyDelete
 2. ನಾನೂ ಒಬ್ಬ ಪ್ರಸನ್ನನನ್ನು ಮೆಚ್ಚುವವನು.

  ReplyDelete
 3. ಅಲ್ಲಾ, ನಿಮ್ಮ ನಂಬರ್‍ನ್ನು ನೀವೇ ಪಡೆಯಲು ಸ್ನೇಹಿತನಿಗೆ ಫೋನ್ ಮಾಡಬೇಕೇ? :-) :)

  @ಹರಿಹರಪುರ ಶ್ರೀಧರ್‍, ಮಹೇಶ್, ಕವಿ ನಾಗರಾಜ್-- ಧನ್ಯವಾದಗಳು, :-)

  ReplyDelete
 4. ಹೀಗಾದ್ರೂ ಪ್ರಚಾರ ಗಿಟ್ಟಿಸೋಣಾ ಅಂತ!

  ReplyDelete