ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Saturday, December 4, 2010

ವೇದಪಾಠ-೧

ನನ್ನ ಮಿತ್ರರಾದ ಬೇಲೂರಿನ ವೇದಾಧ್ಯಾಯೀವಿಶ್ವನಾಥಶರ್ಮರು ವೇದಸುಧೆಯ ಆರಂಭಕ್ಕೆ ಕಾರಣಕರ್ತರೆಂದರೆ ಅಚ್ಚರಿಯುಂಟಾಗಬಹುದು. ಸುಧಾಕರಶರ್ಮರು ಬೇಲೂರಿನಲ್ಲಿ ಮಾಡಿದ ಉಪನ್ಯಾಸವನ್ನು ವಿಶ್ವನಾಥರು ನನಗೆ ಕೇಳಿಸಿದ್ದರ ಪರಿಣಾಮವಾಗಿ ಉಪನ್ಯಾಸದಿಂದ ನಾನು ಆಕರ್ಷಿತನಾಗಿ ಉಪನ್ಯಾಸವನ್ನು ಎಂ.ಪಿ.-೩ ಕ್ಕೆ ಕನ್ವರ್ಟ್ ಮಾಡಿ ಅಂತರ್ಜಾಲದ ಮೂಲಕ ನೂರಾರು ಜನರಿಗೆ ತಲುಪಿಸಬೇಕೆಂಬ ಉದ್ಧೇಶದಿಂದ ವೇದಸುಧೆಯನ್ನು ಆರಂಭಿಸಿದ್ದಾಯ್ತು. ವೇದಸುಧೆಯ ಆರಂಭವಾಗಿ ಹತ್ತು ತಿಂಗಳ ನಂತರ ವಿಶ್ವನಾಥಶರ್ಮರು ವೇದಸುಧೆಯಲ್ಲಿ ವೇದಪಾಠವನ್ನು ಆರಂಭಿಸಿರುವುದು ಸಂತೋಷದ ವಿಷಯವಾಗಿದೆ.
ಶರ್ಮರು ಹಾಸನದಲ್ಲಿ ಕಳೆದ ತಿಂಗಳಿನಿಂದ ತಿಂಗಳಿಗೊಮ್ಮೆ ವೇದಾರ್ಥವಿವರಣೆಯ ಹೆಸರಿನಲ್ಲಿ ವೇದಪಾಠವನ್ನು ಆರಂಭಿಸಿದ್ದಾರೆ. ವೇದಮಂತ್ರಗಳಿಗೆ ಬಹಳ ಸರಳವಾಗಿ ಮನಮುಟ್ಟುವಂತೆ ಅರ್ಥ ವಿವರಣೆಯೊಡನೆ ಸ್ವರಬದ್ಧವಾಗಿ ಮಂತ್ರವನ್ನು ಕಲಿಸುತ್ತಾ ಆರಂಭಿಸಿರುವ ಪಾಠವನ್ನು ವೇದಸುಧೆಯಲ್ಲಿ ಪ್ರಕಟಿಸಲಾಗುತ್ತಿದೆ. ಮಂತ್ರದ ಅರ್ಥವನ್ನು ತಿಳಿದುಕೊಂಡು ವೇದಮಂತ್ರಗಳನ್ನು ಕಲಿಯಬೇಕೆನ್ನುವವರಿಗೆ ಶರ್ಮರ ವೇದಪಾಠವು ರುಚಿಸುತ್ತದೆ.
ವಿ.ಸೂ: ಇಲ್ಲಿರುವ ಧ್ವನಿಸುರುಳಿಯನ್ನು ಕೇಳುತ್ತಾ ಮಂತ್ರವನ್ನು ಕಲಿಯಬಹುದಾಗಿದೆ. ಒಂದು ವೇಳೆ ಇದು ಅರ್ಥವಾಗುತ್ತಿಲ್ಲವೆಂಬ ಅಭಿಪ್ರಾಯವು ಬಂದರೆ ,ನಿಮ್ಮ ಸಂದೇಹಗಳನ್ನು ವೇದಸುಧೆಗೆ ಮೇಲ್ ಮಾಡಿದರೆ ಶರ್ಮರು ಉತ್ತರಿಸುವರು. ಇಲ್ಲಿ ಕಲಿಯುತ್ತಿರುವವರ ಧ್ವನಿಯೂ ಇರುವುದರಿಂದ ಕಲಿಯಲು ಸೂಕ್ತವಾಗಿಲ್ಲವೆನ್ನುವ ಅಭಿಪ್ರಾಯವು ಬಂದರೆ ಇದೇ ಪಾಠವನ್ನು ಕೇವಲ ವಿಶ್ವನಾಥ ಶರ್ಮರ ಧ್ವನಿಯಲ್ಲಿ ಪ್ರತ್ಯೇಕ ರೆಕಾರ್ಡ್ ಮಾಡಿ ಪ್ರಕಟಿಸಲಾಗುವುದು. ಪಾಠವನ್ನು ಕಲಿಯಲಿಚ್ಛಿಸುವವರು ದಯಮಾಡಿ ವೇದಸುಧೆಗೆ ನಿಮ್ಮ ಹೆಸರು ಮತ್ತು ಚರವಾಣಿ ಸಂಖ್ಯೆಯನ್ನು ತಿಳಿಸಬೇಕಾಗಿ ಕೋರುವೆ.
ಭಾಗ-೧


ಭಾಗ-೨


ಭಾಗ-೩


12 comments:

 1. ಸಹಜವಾಗಿ ಚೆನ್ನಾಗಿವೆ, ಧನ್ಯವಾದಗಳು

  ReplyDelete
 2. ಧನ್ಯವಾದಗಳು ಭಟ್ಟರೇ, ವೇದಸುಧೆಯ ಮೂಲ ಆಶಯ ಒಂದೊಂದಾಗಿ ಕಾರ್ಯಗತವಾಗುತ್ತಿರುವ ಸೂಚನೆಗಳು ಕಾಣುತ್ತಿವೆ.

  ReplyDelete
 3. ವೇದಮಂತ್ರಗಳ ಕಲಿಕೆಗೆ ನಿಮ್ಮ ಪ್ರೋತ್ಸಾಹ ಶ್ಲಾಘನೀಯ. ಆದರೆ ಇಲ್ಲಿಯ ವೇದ ಪಾಠ ಮಂತ್ರದಲ್ಲಿ "ವಿಶ್ವಾನಿ ದೇವ" ಅಂತ ಬರೆದಿದೆ. ಆದರೆ ಧ್ವನಿ ಮುದ್ರಿಕೆಯಲ್ಲಿ ಮಂತ್ರವನ್ನು (ಭಾಗ-೧) ಹೇಳಿಕೊಡುವಾಗ "ವಿಸ್ವಾನಿ ದೇವ" ಎಂದು ಹೇಳಿಕೊಟ್ಟಂತೆ ('ಶ್ವಾ' ಬದಲಿಗೆ 'ಸ್ವಾ') ಭಾಸವಾಗುತ್ತದೆ. ಇದು ನಿಜವೇ?

  ReplyDelete
 4. "ವಿಶ್ವಾನಿ ದೇವ" ಸರಿ. ಪಾಠ ಕೇಳುವಾಗ ನನಗೂ ಇದೇ ಅನುಮಾನ ಬಂತು.ಮೂರೂ ಭಾಗಗಳನ್ನು ಕೇಳಿ, ಅದರಲ್ಲಿ ಉತ್ತರವಿದೆ.

  ReplyDelete
 5. ವೇದಸುಧೆಯ ಪ್ರಾರಂಭಕ್ಕೆ ಕಾರಣರಾದವರ ಪರಿಚಯ ಹಾಗೂ ವೇದಪಾಠದ ಪ್ರಾರಂಭ ಚೆನ್ನಾಗಿದೆ, ಆಸಕ್ತರಿಗೆ ಉಪಯುಕ್ತವಾಗಿದೆ, ಆಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

  ReplyDelete
 6. "ವಿಸ್ವಾನಿ" ಮತ್ತು "ಈಸ್ವರ" ಎರಡೂ ತಪ್ಪಾಗಿ ಕೇಳಿಸುತ್ತಿದೆ ಅಲ್ಲವೇ? ತ್ರಿಸುಪರ್ಣದ ಮಧ್ಯದ ಈ ಸಾಲುಗಳು ತುಂಬಾ ಪರಿಚಿತ.
  ಮಂತ್ರ ಪಾಠ ಶಾಂತಿ ಮಂತ್ರದಿಂದ ಪ್ರಾರಂಭವಾಗಿ ನಂತರ ಒಂದು ಸಂಪೂರ್ಣ ಕಾಲೋಚಿತದ ಆರಂಭದಿಂದ ಕ್ರಮಬಧ್ಧವಾಗಿದ್ದರೆ ಕಲಿಕೆಗೆ ಇನ್ನೂ ಅನುಕೂಲ.

  ReplyDelete
 7. Anonymous said...

  ನಿಮ್ಮನ್ನು ಸಂಪರ್ಕಿಸುವುದು ಹೇಗೆ? ದಯಮಾಡಿ ನಿಮ್ಮ ಹೆಸರು-ಮೇಲ್ ವಿಳಾಸವನ್ನಾದರೂ ವೇದಸುಧೆಗೆ ಕಳಿಸಿಕೊಡಿ.ನಿಮ್ಮಂತವರು ನಮ್ಮೊಡನಿರಬೇಕು.

  vedasudhe@gmail.com

  ReplyDelete
 8. ವೇದಸುಧೆಗೆ ಪ್ರಣಾಮಗಳು.
  ನನ್ನ ಭಾವಚಿತ್ರ ಈ ಬ್ಲಾಗ್ ನಲ್ಲಿ ಬೇಡ.ದಯವಿಟ್ಟು....
  ವಿಶ್ವನಾಥ ಶರ್ಮಾ, ಬೇಲೂರು.
  purohithvsharma@gmail.com

  ReplyDelete
 9. 1] ವೇದಮಂತ್ರಗಳ ಕಲಿಕೆಗೆ ನಿಮ್ಮ ಪ್ರೋತ್ಸಾಹ ಶ್ಲಾಘನೀಯ. ಆದರೆ ಇಲ್ಲಿಯ ವೇದ ಪಾಠ ಮಂತ್ರದಲ್ಲಿ "ವಿಶ್ವಾನಿ ದೇವ" ಅಂತ ಬರೆದಿದೆ. ಆದರೆ ಧ್ವನಿ ಮುದ್ರಿಕೆಯಲ್ಲಿ ಮಂತ್ರವನ್ನು (ಭಾಗ-೧) ಹೇಳಿಕೊಡುವಾಗ "ವಿಸ್ವಾನಿ ದೇವ" ಎಂದು ಹೇಳಿಕೊಟ್ಟಂತೆ ('ಶ್ವಾ' ಬದಲಿಗೆ 'ಸ್ವಾ') ಭಾಸವಾಗುತ್ತದೆ. ಇದು ನಿಜವೇ?
  2] "ವಿಸ್ವಾನಿ" ಮತ್ತು "ಈಸ್ವರ" ಎರಡೂ ತಪ್ಪಾಗಿ ಕೇಳಿಸುತ್ತಿದೆ ಅಲ್ಲವೇ? ತ್ರಿಸುಪರ್ಣದ ಮಧ್ಯದ ಈ ಸಾಲುಗಳು ತುಂಬಾ ಪರಿಚಿತ.
  ಮಂತ್ರ ಪಾಠ ಶಾಂತಿ ಮಂತ್ರದಿಂದ ಪ್ರಾರಂಭವಾಗಿ ನಂತರ ಒಂದು ಸಂಪೂರ್ಣ ಕಾಲೋಚಿತದ ಆರಂಭದಿಂದ ಕ್ರಮಬಧ್ಧವಾಗಿದ್ದರೆ ಕಲಿಕೆಗೆ ಇನ್ನೂ ಅನುಕೂಲ.
  ---------------------------------
  ಶ್ರೀ ವಿಶ್ವನಾಥ ಶರ್ಮರೇ,ನಮಸ್ತೆ.
  ಮೇಲಿನ ಎರಡು ಕಾಮೆಂಟ್ ಗಳಿಗೆ ನಿಮ್ಮ ಸಮಾಧಾನ ಬೇಕಲ್ಲವೇ?
  ನಿಮ್ಮ ಕೋರಿಕೆಯಂತೆ ಭಾವಚಿತ್ರ ತೆಗೆದಿರುವೆ. ಮುಂದಿನ ಪಾಠದ ದಿನವನ್ನು ಪ್ರಕಟಿಸುವುದು ಸೂಕ್ತ.

  ReplyDelete
 10. ನಿಮ್ಮನ್ನು ಸಂಪರ್ಕಿಸುವುದು ಹೇಗೆ?...ಎಂದು ಹರಿಹರಪುರ ಶ್ರೀಧರ್ ಅವರನ್ನು ಕೇಳಿದವರೇ Anonymous ಆಗಿದ್ದರೆ ಹೇಗೆ?...

  ReplyDelete
 11. download ಮಾಡುವುದು ಹೇಗೆ, ದಯವಿಟ್ಟು ಡೌನ್ ಲೋಡ್ ಲಿಂಕ್ ಕೊಡಿ.

  ReplyDelete
 12. Great work HariharaPura Sridhara ji.....

  ReplyDelete