ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, December 5, 2010

ಸೋಲೇ ಗೆಲುವಿನ ಮೊದಲ ಮೆಟ್ಟಿಲು

ಸೋಲೇ ಗೆಲುವಿನ ಮೊದಲ ಮೆಟ್ಟಿಲು

ದಾಟುವೆನೆಂದೂ ತುಂಬಿದ ನದಿಯ
ತೀರದೆ ಕುಳಿತರೆ ದುರ್ಲಭವೇ
ಅಲ್ಪ ಸ್ವಲ್ಪವೇ ದಿನವೂ ಕಲಿಯೇ
 ಈಜಿ ದಾಟಲು ಸುಲಭವೆ

ಕಲಿಯುವ ಆಸೆ ನಿನ್ನಲಿ ಬಲಿತರೆ
 ಕಷ್ಟವೂ ಇಷ್ಟವೇ ಅನಿಸುವುದೂ
ಆಸೆಯ ನಿಗೃಹ ಬೆಳೆಸುತ ಕಲಿತರೆ
ಸಾರ್ಥಕ ಬದುಕೂ ಹನಿಸುವುದು

ಸೋಲೇ ಗೆಲುವಿನ ಮೊದಲ ಮೆಟ್ಟಿಲು
ಸಾಧಕ ಗುರಿಯನು ಮುಟ್ಟಲು
ಸತತ ಪರಿಶ್ರಮ ಸಾರ್ಥಕ ಬಟ್ಟಲು
ಯಶಸ್ಸು  ಕೀರ್ತಿಯನು ಕಟ್ಟಲು

ಕಲಿವದು ಎಂದಿಗೂ ಮುಗಿಯದ ಆಟ
ಬದುಕಿನ ಅಂತಿಮ ಘಳಿಗೆಗೂ ಪಾಠ
ದಿನದಿನ ಹೊಸತನ ಕಲಿವುದೇ ರೀತಿ
ಪ್ರಕೃತಿಯ ಅಣು ಅಣು ಕಲಿಸದೇ ನೀತಿ

1 comment: