ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, January 6, 2011

ಮೊರೆ

ರಚನೆ: ಕವಿ ನಾಗರಾಜ್
ಗಾಯಕಿ: ಶ್ರೀಮತಿ ಲಲಿತಾರಮೇಶ್


ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿರಲಾಗಿ
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿ ಕೇಳಿ ನೇರಮಾರ್ಗದಿ ನಡೆದೆ
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ|
ಅರಿಗಳಾರರ ಬಂದಿ ದಿಕ್ಕೆಟ್ಟು ಕುಸಿದಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂದಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||2 comments:

  1. ಸುಶ್ರಾವ್ಯವಾಗಿ ಹಾಡಿದ ಶ್ರೀಮತಿ ಲಲಿತಾ ರಮೇಶರಿಗೆ ಮತ್ತು ಅವರಿಂದ ಹಾಡಿಸಿದ ಶ್ರೀ ಶ್ರೀಧರರಿಗೆ ವಂದನೆಗಳು.

    ReplyDelete
  2. ಚೆನ್ನಾಗಿದೆ ಮಿತ್ರರೇ, ಬರೆದ ಶ್ರೀನಾಗರಾಜರೇ, ಪ್ರಸ್ತುತಪಡಿಸಿದ ಶ್ರೀ ಶ್ರೀಧರರೇ ಹಾಗೂ ಹಾಡಿದ ಶ್ರೀಮತಿ ಲಲಿತಾ ರಮೇಶ್ ಅವರೇ ತಮಗೆಲ್ಲಾ ನನ್ನ ಅಭಿನಂದನೆಗಳು.

    ReplyDelete