ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Saturday, January 15, 2011

ಹೊಸಬೆಳಕುವೇದಾಭಿಮಾನಿಗಳೇ,
ನಿನ್ನೆ ರಾತ್ರಿ [14.01.2011]ಚಂದನ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ ಈ ದಾರಾವಾಹಿಯು ಕಾರಣಾಂತರಗಳಿಂದ  ಎರಡುವಾರಗಳು ಮುಂದೂಡಲ್ಪಟ್ಟಿದೆ. ಬರುವ 28.01.2011 ರಿಂದ ಪ್ರತೀ ಶುಕ್ರವಾರ ರಾತ್ರಿ 8.00 ರಿಂದ 8.30 ರವರಗೆ ಪ್ರಸಾರವಾಗಲಿರುವ ಈ ದಾರಾವಾಹಿಯನ್ನು ನಿಮ್ಮ ಪರಿಚಿತರೆಲ್ಲರಿಗೂ ನೋಡುವಂತೆ ತಿಳಿಸಿ.ನಮ್ಮ ಜೀವನಕ್ಕೆ ಬೆಳಕಾಗಬಲ್ಲ ಈ ದಾರಾವಾಹಿಯು ಇಂದಿನ ದಿನಗಳಲ್ಲಿ ಒಂದು ಅತ್ಯಂತ ವಿನೂತನ ಮತ್ತು ಉತ್ತಮವಾದ ಪ್ರಯತ್ನ. ಸುಮಾರು 30 ಕ್ಕೂ ಹೆಚ್ಚು  ಕಂತುಗಳಲ್ಲಿ ಪ್ರಸಾರವಾಗಲಿರುವ  ಈ ದಾರಾವಾಹಿಯ ಬಗ್ಗೆ ನಿಮ್ಮ ಅನಿಸಿಕೆ  ಅಭಿಪ್ರಾಯಗಳನ್ನು ನೇರವಾಗಿ ಚಂದನ ವಾಹಿನಿಗೂ ಮತ್ತು ವೇದಸುಧೆಗೂ ಬರೆಯಿರಿ. ವೇದಸುಧೆಗೆ ಬರೆದ ನಿಮ್ಮ ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ಪ್ರಕಟಿಸಲಾಗುವುದು. ಅಗತ್ಯವಿದ್ದರೆ ಈ ದಾರಾವಾಹಿಗಾಗಿಯೇ ಒಂದು ಪುಟ ತೆರೆಯಲಾಗುವುದು.

3 comments:

  1. ಉತ್ತಮವಾದ ಕಾರ್ಯತ್ರಮ ವೀಕ್ಷಿಸುವುದರೊಂದಿಗೆ ವಿಷಯದ ಕುರಿತು ವ್ಯಕ್ತವಾಗುವ ಅಭಿಪ್ರಾಯಗಳಿಂದ ಮೌಲಿಕ ಚರ್ಚೆಗಳಿಗೂ ಅವಕಾಶವಾಗುವುದು.

    ReplyDelete
  2. ಕ್ರಿಕೆಟ್ ನ ಕಾರಣದಿಂದ ದಿನ ಮತ್ತೊಮ್ಮೆ ಮುಂದೆ ಹೋಗಿದೆ.
    ಸರಿಯಾದ ದಿನಾಂಕವನ್ನು ಮತ್ತೊಮ್ಮೆ ಪ್ರಕಟಿಸಲಾಗುವುದು.
    ಬದಲಾವಣೆಗೆ ಕ್ಷಮೆ ಇರಲಿ

    ReplyDelete