ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, February 1, 2011

ವೇದಸುಧೆ ವಾರ್ಷಿಕೋತ್ಸವ - ಕವಿ ಸುರೇಶರ ಅನಿಸಿಕೆ

ಪ್ರಿಯ ಶ್ರೀದರ್ ರವರೇ,

    ವೇದಸುಧೆ ಅಂತರ್ಜಾಲ ತಾಣದ ವಾರ್ಷಿಕೋತ್ಸವ ಒಂದು ವಿನೂತನ ಕಾರ್ಯಕ್ರಮ, ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು. ಅದಕ್ಕಾಗಿ ನೀವು ಮತ್ತು ನನ್ನಣ್ಣ ನಾಗರಾಜ್ ಸಾಕಷ್ಟು ಶ್ರಮ ವಹಿಸಿದ್ದೀರಿ. ನಿಮ್ಮ ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ನಿಮ್ಮಿಬ್ಬರಿಗೂ ನನ್ನ ಹಾರ್ದಿಕ ಧನ್ಯವಾದಗಳು. ವೇದಗಳನ್ನು ಹೊಸ ರೀತಿಯಲ್ಲಿ ನೋಡುವಂತಹ ಮತ್ತು ಹೊಸ ರೀತಿಯಲ್ಲಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಬಹಳಷ್ಟು ಜನರಿಗೆ ಪ್ರೇರಕವಾಯಿತೆಂಬುದು ನನ್ನನಿಸಿಕೆ. ಸದುದ್ದೇಶದಿಂದ ಮಾಡಿದ ಯಾವುದೇ ಕಾರ್ಯ ಸಫಲವಾಗಲೇ ಬೇಕು. ಹಾಗೆಯೇ ಈ ಕಾರ್ಯಕ್ರಮ ಕೂಡ ಜರುಗಿದೆ.
ಮತ್ತೊಮ್ಮೆ ನಿಮ್ಮಿಬ್ಬರಿಗೂ ನನ್ನ ಅಭಿನಂದನೆಗಳು. ಸಂಪರ್ಕದಲ್ಲಿರುವೆ...

ನಿಮ್ಮವ,
ಕವಿ ಸುರೇಶ್.

1 comment:

  1. ಶ್ರೀಧರ್ ಅವರೆ,

    ಒಂದು ಒಳ್ಳೇ ಕೆಲಸಕ್ಕೆ ನಾಲ್ಕು ಜನರನ್ನ ಸೇರಿಸೋದು ಸುಲಭದ ಮಾತಲ್ಲ. ನೀವು ಇದನ್ನ ಚೆನ್ನಾಗಿ ಮಾಡ್ತಿದೀರಿ. ಹೀಗೇ ಮುಂದುವರೆಯಲಿ.

    ನೀವು ನನ್ನೂರಿನವರು ಅನ್ನೋದು ನನಗೆ ಬಹಳ ಹೆಮ್ಮೆಯ ವಿಷಯ :-). ಕಾರ್ಯಕ್ರಮದಲ್ಲಿ ನಡೆದ ಮಾತುಕತೆಕಳನ್ನ ಕೇಳಲು ಕಾತುರವಾಗಿದ್ದೇನೆ.

    -ಹಂಸಾನಂದಿ

    ReplyDelete