Pages

Tuesday, March 1, 2011

ವಸುಧೈವ ಕುಟುಂಬಕಮ್


ವಸುಧೈವ ಕುಟುಂಬಕಮ್

ಹೃದಯವರಿತಮೇಲೆ ನಮ್ಮ ನಿಮ್ಮ ನಡುವೆ ಭೇದವೇ?
ಅದುವೆ ಮಂತ್ರವಾಗಲೊಮ್ಮೆ ಜಗದ ತುಂಬಾ ನಾದವೇ

ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದ ಮರಿಗಳು
ತಿಂದು ಬೆಳೆದು ತಿಳಿಯದಾಗ ಜಗಳಮಾಳ್ಪ ಕುರಿಗಳು !

ಗರುವದಿಂದ ಹರಿದು ದೇಶ ಕೋಶ ರಾಜ್ಯಂಗಳ
ಮೆರೆದರೆಲ್ಲ ಮಣ್ಣಾದರು ಕರಗುತ ವ್ಯಾಜ್ಯಂಗಳ

ನಡೆವ ನಡತೆ ನುಡಿವ ನುಡಿಯು ಉತ್ತಮವಿರೆ ಯೋಗವ
ಒಡವೆ ವಸ್ತ್ರ ಕಡೆಗೆ ಕೀರ್ತಿ ಪಡೆವರೆಲ್ಲ ಭೋಗವ


ಹುಂಡು ಹೆಚ್ಚು-ಕಮ್ಮಿ ಇರಲು ಸಹಿಸಿ ನಡೆಯೆ ಮಾನವ
ತಂಡ ಕಟ್ಟಿ ಭುಜವ ತಟ್ಟಿ ಹೋರಲಾತ ದಾನವ

ಮುಂದೆ ನಮ್ಮ ಅಂತ್ಯವೆಂತೋ ಯಾರು ಅದನು ಬಲ್ಲರು ?
ಇಂದು ಇರುವ ಜಾಗದಲ್ಲಿ ಸುಖದಿ ಬದುಕಲೆಲ್ಲರು
---- ವಿ.ಆರ್ ಭಟ್

6 comments:

  1. [ಇಂದು ಇರುವ ಜಾಗದಲ್ಲಿ ಸುಖದಿ ಬದುಕಲೆಲ್ಲರು]
    ಇದು ನಮ್ಮ ಪೂರ್ವಜರೆಲ್ಲರ ನಿತ್ಯಸಂಕಲ್ಪವಾಗಿತ್ತು. ಆದರೆ ಇಂದು ಮನುಷ್ಯನಿಗೆ ಹತ್ತಾರು ಮಾಧ್ಯಮಗಳ ಪರಿಣಾಮವಾಗಿ ಯಾವದಾರಿಯಲ್ಲಿ ಸಾಗಬೇಕೆಂಬ ಗೊಂದಲವೇ ಹೆಚ್ಚಿದೆ.ಹಾಗಾಗಿ ನಿಜವಾದ ಸುಖವನನುಭವಿಸಲು ಒಂದಿಷ್ಟು ವೇದಾಧಾರಿತ ಸರಳಮಾರ್ಗವನ್ನು ಈ ತಾಣದಲ್ಲಿ ಕೊಡಬೇಕಾಗಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸೋಣ. ಹೌದು ವಿಶ್ವದ ನಾವೆಲ್ಲರೂ ಒಂದೇ ಕುಟುಂಬದವರೆಂದು ವೇದವು ಸಾರಿದೆ. ಅದಕ್ಕೆ ಪೂರಕವಾಗಿ ಸಾಗೋಣ.

    ReplyDelete
  2. ಓದಿದ, ಸ್ಪಂದಿಸಿದ ಎಲ್ಲರಿಗೂ ಅನಂತ ನಮನಗಳು

    ReplyDelete
  3. ಚೆನ್ನಾಗಿ ಮೂಡಿಬಂದಿದೆ. ಅಂತಿಮ ಸತ್ಯ (ಸಾವು) ಸದಾ ಜಾಗೃತವಾಗಿದ್ದಲ್ಲಿ ಜಗತ್ತಿನಲ್ಲಿ ನಡೆವ ಅನೇಕ ಪ್ರಮಾದಗಳು ತಂತಾನೇ ಕಡಿಮೆಯಾಗಬಲ್ಲವು. ಆದರೆ ಜಾಣಕುರುಡರು ಮತ್ತು ಜಾಣಕಿವುಡರೇ ಜಾಸ್ತಿ ಇರುವಾಗ ಹೆಚ್ಚಿಗೆ ಅಪೇಕ್ಷೆ ಪಡಲಾಗದು.

    ReplyDelete
  4. ಇರುವ ನಾಲ್ಕು ದಿನಗಳಲಿ ನಗುತ ಕೂಡಿ ಬಾಳದೆ
    ಕಿಚ್ಚು ಹಚ್ಚಿ ಬಡಿದು ಬಾಳೆ ಸುಖವನದು ತರುವುದೇ?
    ಶಾಂತಿ ಹರ್ಷ ಸುರಿದು ಬರದು ಎಂದಿಗೂ
    ಶ್ರಮದಿ ನಾವು ನಿರ್ಮಿಸೆ ಇಹುದದೆಂದೆಂದಿಗೂ

    ReplyDelete
  5. ಆತ್ಮೀಯ ಶ್ರೀ ಕವಿ ಸುರೇಶ್ ಮತ್ತು ಶ್ರೀ ಸುಧಾಕರ ಶರ್ಮಾಜಿ, ತಮ್ಮೀರ್ವರ ಅಭಿಮತಕ್ಕೂ ತಲೆಬಾಗಿದ್ದೇನೆ. ವೇದಸುಧೆಯಲ್ಲಿ ನಿಮ್ಮೆಲ್ಲರ ಸಾಹಚರ್ಯೆಯಿಂದ ತೆವಳಲು ಪ್ರಯತ್ನ, ಧನ್ಯವಾದಗಳು.

    ReplyDelete