ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, March 17, 2011

ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮ

ಶ್ರೀ ಎಸ್.ಎಲ್.ಎನ್. ಸ್ವಾಮಿಯವರು ವೇದಾಧ್ಯಾಯೀ ಸುಧಾಕರ ಶರ್ಮರೊಡನೆ ನಡೆಸಿದ ಸಂದರ್ಶನವು ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ನಿನ್ನೆ ರಾತ್ರಿ ೯.೦೦ರಿಂದ ಒಂದು ಗಂಟೆಗಳ ಕಾಲ ಪ್ರದರ್ಶನವಾಯ್ತು. ವೇದದ ವಿಚಾರದಲ್ಲಿ ಜಿಜ್ಞಾಸುಗಳಿಗೆ ಇರಬಹುದಾದ ಹಲವಾರು ಅನುಮಾನಗಳನ್ನು ಬಿಡಿಬಿಡಿಯಾಗಿ ಬಹಳ ಸ್ಪಷ್ಟ ನುಡಿಗಳಲ್ಲಿ ವಿವರಿಸುತ್ತಾ ಶ್ರೀ ಶರ್ಮರ ಸಂದರ್ಶನವು ಸಾಗಿತ್ತು. ವೇದಸುಧೆಯಲ್ಲಿ ಕೆಲವು ಗಂಟೆಗಳ ಮುಂಚೆ ಈ ಕಾರ್ಯಕ್ರಮದ ಬಗ್ಗೆ ಪ್ರಕಟಿಸಲಾಗಿತ್ತು. ಅದರ ಮೂಲಕ ಸುದ್ಧಿ ತಿಳಿದ ಅನೇಕರು ಕಾರ್ಯಕ್ರಮದ ಪ್ರಸಾರಸಮಯದಲ್ಲಿಯೇ ತಮ್ಮ ಸ್ನೇಹಿತರುಗಳಿಗೆ ಮೊಬೈಲ್ ಮೂಲಕ ಸುದ್ಧಿ ತಲುಪಿಸಿ ಈ ಕಾರ್ಯಕ್ರಮವನ್ನು ನೋಡಲು ಕಾರಣರಾದರು. ಈ ಸಂದರ್ಶನದ ಆಡಿಯೋ ವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಾವಕಾಶವಾಗಿ ಕೇಳಿ ನಿಮ್ಮ ಅನಿಸಿಕೆಗಳನ್ನು ಶ್ರೀ ಶಂಕರ ಟಿ.ವಿ. ಚಾನಲ್ ಗಾಗಲೀ ಅಥವಾ ವೇದಸುಧೆಗಾಗಲೀ ಬರೆಯುವುದನ್ನು ಮರೆಯದಿರಿ.

ಕೃಪೆ: ಶ್ರೀ ಶಂಕರ ಟಿ.ವಿ. ಚಾನಲ್2 comments:

  1. ಶ್ರೀಯುತ ಶ್ರೀಧರರೇ, ಎಂದಿನಂತೇ ಸಮರ್ಪಕ ಸಂದೇಶಗಳು, ಆದರೆ ಮಾಧ್ಯಮ ವಾಹಿನಿಯಲ್ಲಿ ಅವರ ಸಂದರ್ಶನಕ್ಕಿಂತ ಆರ್ಷೇಯ ಜೀವನ ಪದ್ಧತಿ ಎಂಬ ಒಂದು ಧಾರಾವಹಿ ನಡೆದರೆ ತುಂಬಾ ಪ್ರಸ್ತುತವಾಗುತ್ತದೆ. ನಿನ್ನೆ ಬೆಳಗಿನಿಂದ ಬ್ಲಾಗಿಗೆ ಬಂದಿರಲಿಲ್ಲ. ಆದರೆ ತಾವು ಕಳಿಸಿದ ಮೊಬೈಲ್ ಸಂದೇಶದ ಮೂಲಕ ತಿಳಿದು ಕಚೇರಿಯ ಕೆಲಸದಲ್ಲೇ ಹೊರಗಡೆ ಇದ್ದರೂ ಓಡಿಬಂದು ಅದನ್ನು ವೀಕ್ಷಿಸಿದ್ದೇನೆ. ಸಮಯದ ಅಭಾವ ಢಾಳಾಗಿ ಕಾಣುತ್ತಿತ್ತು. ಆದರೂ ತಕ್ಕ ಮಟ್ಟಿಗೆ ಅಡ್ಡಿಯಿಲ್ಲ.

    ReplyDelete
  2. ಶ್ರೀಯುತ ಭಟ್ ಜೀ!
    ನಿಮ್ಮ ಕಳಕಳಿಗೆ ಧನ್ಯವಾದಗಳು.
    ಈಗಾಗಲೇ `ಹೊಸಬೆಳಕು - ಸತ್ಯಸಂಪ್ರದಾಯದತ್ತ' ಎನ್ನುವ ಟಿ.ವಿ. ಧಾರಾವಾಹಿ ಸಿದ್ಧವಾಗಿದೆ. ಅಣ್ಣ-ತಂಗಿ ಸಂವಾದದಂತಿರುವ ಇದರಲ್ಲಿ ನಾನು ಅಣ್ಣನಾಗಿ, ಶ್ರೀಮತಿ ವಿನಯಾ ಪ್ರಸಾದ್ ರವರು ತಂಗಿಯಾಗಿ ಅನೇಕ ವಿಚಾರಗಳನ್ನು ಮಂಡಿಸುವ ಪ್ರಯತ್ನ ಮಾಡಿದ್ದೇವೆ. Sponsorerಗಳ ಕೊರತೆಯಿಂದಾಗಿ ತಡವರಿಸುತ್ತಿದೆ. ನಿಮ್ಮ ಪರಿಚಯದ ವಲಯದಲ್ಲಿ ಇದಕ್ಕೊಂದು ಪರಿಹಾರ ಕಂಡುಹಿಡಿಯಬಹುದೇ?!

    ReplyDelete