Pages

Wednesday, November 9, 2011

"ಈಶಾವಾಸ್ಯಮ್" ಗೃಹಪ್ರವೇಶ

" ಈಶಾವಾಸ್ಯಂ " ಗೃಹಪ್ರವೇಶದ ಚಿತ್ರಗಳನ್ನು ವೇದಸುಧೆಯಲ್ಲಿ ಪ್ರಕಟಿಸುವುದು ಉಚಿತವೆ? ಹೀಗೆ ನಾಲ್ಕೈದು ದಿನಗಳಿಂದ ಯೋಚಿಸುತ್ತಿದ್ದೆ. ಕೊನೆಗೊಮ್ಮೆ ಗಟ್ಟಿ ನಿರ್ಧಾರಕ್ಕೆ ಬಂದೆ." ಪ್ರಕಟಿಸಬೇಕು" .ಕಾರಣ ನನ್ನ ವಾಸ್ತವ್ಯದ  ಜೊತೆ ಜೊತೆಗೆ ಸಮಾಜಕ್ಕಾಗಿಯೂ ಸ್ವಲ್ಪ ಚಿಂತನೆ ನನ್ನ ಯೋಜನೆಯಲ್ಲಿರ ಬೇಕಾದರೆ ,ಪ್ರಕಟಿಸುವುದು ತಪ್ಪಾಗುವುದಿಲ್ಲ.ಸರಿ ಪ್ರಕಟಿಸುವ ನಿರ್ಧಾರ ಮಾಡಿದೆ.
ಈಶಾವಾಸ್ಯಮ್ ನಲ್ಲಿ ಏನೇನಿದೆ?
* ಸತ್ಸಂಗ ಕ್ಕಾಗಿಯೇ ಸುಮಾರು ೮೦ ಜನರು ಕುಳಿತುಕೊಳ್ಳಲು ಅನುಕೂಲವಾಗಿರುವ ಸಭಾಂಗಣ.
* ಉಪನ್ಯಾಸಕಾರಿಗೆ ವಿಶ್ರಾಂತಿ ಕೊಠಡಿ
*ಸಭಾಂಗಣದಲ್ಲಿ ಶಾಶ್ವತ ಧ್ವನಿ ವರ್ಧಕ
* ಅನಿವಾರ್ಯವಾದವರಿಗೆ ಖುರ್ಚಿ
* ಶೌಚಾಲಯ
*ಅಡಿಗೆ ಸಿದ್ಧಪಡಿಸಲು ಪ್ರತ್ಯೇಕ ವ್ಯವಸ್ಥೆ
*ತಡೆರಹಿತ ವಿದ್ಯುತ್
ಉದ್ಧೇ ಶಿತ ಕಾರ್ಯ ಕ್ರಮಗಳು 
*ವರ್ಷದಲ್ಲಿ ಹತ್ತಾರು ಅಧ್ಯಾತ್ಮ ಶಿಬಿರಗಳು
*ಮಾಸಿಕ ಸತ್ಸಂಗ
*ನಿತ್ಯ ಅಗ್ನಿಹೋತ್ರ \ಧ್ಯಾನ\ಪ್ರಾಣಾಯಾಮ ಅಭ್ಯಾಸ 
-------------------------------------------------------
ಕಳೆದ ಎರಡರಂದು ನಮ್ಮ ಮನೆ ವು ಸಾಂಗವಾಗಿ ನೆರವೇರಿತು. ಮುದ್ರಿತ ಆಮಂತ್ರಣವಿಲ್ಲದ ,ಕೇವಲ ಈ ಮೇಲ್ ಮತ್ತು ದೂರವಾಣಿಯ ಮೂಲಕ ಮಾಡಿದ ಮನವಿಗೆ ಸ್ನೇಹಿತರು ಮತ್ತು ಬಂಧುಗಳು ಬಂದು ಶುಭ ಕೋರಿದರು.ವರ್ಕಿಂಗ್ ಡೇ ಆದ್ದರಿಂದ ಹಲವರಿಗೆ ಬರಲಾಗಲಿಲ್ಲ. ಆದರೂ ಭಾವನಾತ್ಮಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಹಲವು ವರ್ಷಗಳ ಕನಸಾದ " ಸತ್ಸಂಗ ಸಭಾಂಗಣ" ತುಂಬಿತ್ತು. ನನ್ನ ಜೀವನದಲ್ಲಿ ನನ್ನನ್ನು ಕೈ ಹಿಡಿದು ನಡೆಸಿದವರನ್ನು ಸ್ಮರಿಸುವ ಕಾರ್ಯಕ್ರಮ " ಸಮಾಜ ಸ್ಮರಣೆ "  ಹಲವರಿಗೆ ಸಂತಸ ನೀಡಿತು. ನನ್ನ ಅಧ್ಯಾತ್ಮ ಕ್ಷೇತ್ರದಲ್ಲಿ ಮಾರ್ಗದರ್ಶಿಗಳಾಗಿರುವ ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯೀ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ರಾ. ಸ್ವ.ಸಂಘದ  ಹಿರಿಯ ಪ್ರಚರಕರೂ " ಕುಟುಂಬ ಪ್ರಭೋದನ್"  ಪರಿವಾರದ ಅಖಿಲ ಭಾರತ ಪ್ರಮುಖರೂ ಆದ ಮಾನ್ಯ ಶ್ರೀ ಸು.ರಾಮಣ್ಣ  ನವರು ಉಪಸ್ಥಿತರಿದ್ದು  ನಮ್ಮನ್ನು ಹಾರೈಸಿದರು. ನಮ್ಮ ಕುಟುಂಬದ ಹಿರಿಯರೂ ಅಂದೇ 86 ನೇ ವರ್ಷಕ್ಕೆ ಕಾಲಿಟ್ಟ ಶ್ರೀ ಹೆಚ್.ಆರ್. ಶ್ರೀಕಂಠಯ್ಯನವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಹಲವರಿಗೆ  ವಿಶೇಷ ವೆನಿಸಿತು.ಸಭೆಯಲ್ಲಿ ಉಪಷ್ಟಿತರಿದ್ದ ನನ್ನ ಗುರುಗಳಾದ ಶ್ರೀ ಹನುಮೇ ಗೌಡರನ್ನೂ, ನನಗೆ ತುತ್ತಿಕ್ಕಿ ಬೆಳಸಿದ ನೂರಾರು ಅನ್ನದಾತರ ಪರವಾಗಿ ಶ್ರೀ ಬೆಳವಾಡಿ ಕೃಷ್ಣ ಮೂರ್ತಿಗಳನ್ನೂ, ಸಮಾಜದಲ್ಲಿ ನನ್ನನ್ನು  ತಿದ್ದಿ ತೀಡಿ ಬೆಳಸಿದ ಶ್ರೀ ಸು.ರಾಮಣ್ಣ ನವರನ್ನೂ ಗೌರವಿಸಲಾಯ್ತು. ನನ್ನ ಕನಸಿನ ಮನೆ " ಈಶಾವಾಸ್ಯಮ್" ನಿರ್ಮಾಣದಲ್ಲಿ ಹಗಲಿರುಳು ದುಡಿದ ಕಾರ್ಮಿಕ ವರ್ಗವನ್ನೂ, ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ  ಅಕ್ಕ ಪಕ್ಕದ ಮನೆಯವರನ್ನೂ ಸಹ ಗೌರವಿಸಲಾಯ್ತು. ಮಿತ್ರ ಚಿನ್ನಪ್ಪ ಸೆರೆ ಹಿಡಿದಿರುವ ಕೆಲವು ದೃಶ್ಯಗಳು ಇಲ್ಲಿವೆ.




ಶ್ರೀಮತಿ ಲಲಿತಾ ರಮೇಶ್  ಹಾಡಿದ್ದು " ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ"

ವೇದಿಕೆಯಲ್ಲಿ ಮಾನ್ಯ ಶ್ರೀ ಸು.ರಾಮಣ್ಣ,ಶ್ರೀ ಹೆಚ್.ಆರ್.ಶ್ರೀಕಂಠಯ್ಯಮತ್ತು ಮಾತಾಜಿ ವಿವೇಕ ಮಯೀ  

ಶ್ರೀ ಸು.ರಾಮಣ್ಣ ನವರಿಂದ ನಮ್ಮ ಮನೆ ಹೇಗಿರ ಬೇಕು? ಮಾರ್ಗದರ್ಶನ 



ಕೈ ಹಿಡಿದು ನಡೆಸಿದವರಿಗೆ ಗೌರವಾರ್ಪಣೆ 

ಪೂಜ್ಯ ಗುರುಗಳಿಗೆ ಗೌರವಾರ್ಪಣೆ 

ತುತ್ತಿಕ್ಕಿ ಬೆಳಸಿದ ಬೆಳವಾಡಿ ಕೃಷ್ಣಮೂರ್ತಿಗಳು 
 ಆದಿ
ಕಟ್ಟಡ ನಿರ್ಮಿಸಿಕೊಟ್ಟ ಶ್ರೀ ದ್ಯಾವಪ್ಪ 


ಮರಳು ಇಟ್ಟಿಗೆ ಹೊತ್ತ ಸಂದೀಪ 


ಕುಟುಂಬದ ಹಿರಿಯರಾದ ಶ್ರೀಕಂಠಯ್ಯ 

ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ ತಾತ್ಕಾಲಿಕ ಉದ್ಯೋಗ ಕೊಡಿಸಿದ ಭಾವ ಕೃಷ್ಣ ಮೂರ್ತಿ 


ಹೊಳೆ ನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಅಧ್ವಯಾ ನಂದೇಂದ್ರ ಸರಸ್ವತೀ 




ಶ್ರೀ ಅನಂತನಾರಾಯಣ ರಿಂದ ಕಾರ್ಯಕ್ರಮ  ನಿರ್ವಹಣೆ 



13 comments:

  1. ಪಥ ಸಿದ್ಧ! ಮುನ್ನಡೆಯಲಿ ಪಥಿಕ!

    ReplyDelete
  2. ಚಿತ್ರಗಳು ತುಂಬಾ ಚೆನ್ನಾಗಿವೆ ಸರ್.
    ನಿಮಗೂ ಮತ್ತು ನಿಮ್ಮ ಕುತುಬದವರಿಗೆ ಅಭಿನಂದನೆಗಳು.
    ಇನ್ನೊಂದು ಮನವಿ, ಎಲ್ಲರಿಗು ತೆರೆದಿರುವಂಥ ಶಿಬಿರಗಳೆನಾದರು ಇದ್ದರೆ
    ದಯವಿಟ್ಟು ವೆದಸುಧೆಯಲ್ಲಿ ತಿಳಿಸಿ.
    ವಂದನೆಗಳೊಂದಿಗೆ
    ಸ್ವರ್ಣ

    ReplyDelete
  3. ಸಧ್ಯಕ್ಕೆ ಒಂದೆರಡು ತಿ೦ಗಳು ಸ್ಥ್ಗಳೀಯವಾಗಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಬಹುಶ: ಬರುವ ಜನವರಿ ಅಥವಾ ಫೆಬ್ರವರಿ ತಿ೦ಗಳಿನಿ೦ದ ೩೦-೪೦ ಜನರ ಅಧ್ಯಾತ್ಮ ಶಿಬಿರಗಳನ್ನು ರೂಪಿಸಲಾಗುವುದು.ಅದಕ್ಕಾಗಿ ರಾಮಕೃಷ್ಣಾಶ್ರಮ\ಚಿನ್ಮಯಾ ಮಿಶನ್ನಿನ ಯತಿಗಳನ್ನು ಸಂಪರ್ಕಿಸಲಾಗುವುದು.ಈಗಾಗಲೇ ಯತಿಗಳ ಸ೦ಪರ್ಕ ಇರುವುದರಿ೦ದ ಅವರ ಮಾರ್ಗದರ್ಶನ ಪಡೆಯುವುದು ಕಷ್ಟವಾಗಲಾರದು.ಸಮಾನ ಮಾನಿಸಿಕತೆಯ ಕೇವಲ ೨೦-೩೦ ಜನರಿದ್ದರೂ ಸಾಕು.ಉತ್ತಮವಾದ ಶಿಬಿರ ಆಯೋಜಿಸಬಹುದು.ಭಗವತ್ ಕೃಪೆಯಿ೦ದ ಚಿಕ್ಕ-ಚೊಕ್ಕ ವ್ಯವಸ್ಥೆಗಳು ಸಿದ್ಧವಾಗಿವೆ.ಅದರ ಸದ್ವಿನಿಯೋಗ ಆಗಬೇಕಷ್ಟೆ.

    ReplyDelete
  4. ಮನ ಮನೆ ಚನ್ನಾಗಿದೆ.

    ReplyDelete
  5. ನನ್ನ ಸೋದರಮಾವ ಶ್ರೀಧರ್ ಅವರು ನೂತನವಾಗಿ ನಿರ್ಮಿಸಿರುವ "ಈಶಾವಾಸ್ಯಮ್" ನ ಗ್ರುಹಪ್ರವೇಶದ ಕೆಲವು ಚಿತ್ರಣಗಳನ್ನು ನಾವೆಲ್ಲ ವೀಕ್ಶಿಸಿದೆವು . ಗ್ರುಹ ತುಮ್ಬ ಸೊಗಸಾಗಿದೆ. ಆ ಮಹಾತಾಯಿ " ದುರ್ಗಾ ಪರಮೇಶ್ವರಿಯ" ಅನುಗ್ರಹ ನಿಮ್ಮ ಕುಟುಮ್ಬದ ಮೇಲಿರಲಿ ಎನ್ದು ಹಾರೈಸುತ್ತೇವೆ.

    ReplyDelete
  6. ಶುಭಾಶಯಗಳು. ಮನೆಯಲ್ಲಿ ಆಧ್ಯಾತ್ಮಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿರುವ ನಿಮ್ಮ ಆಸಕ್ತಿ-ಧ್ಯೇಯವನ್ನು ಕಂಡು ವಿಸ್ಮಿತನಾದೆ. ಉತ್ತರೋತ್ತರ ಅಭಿವೃದ್ಧಿಯಾಗಲಿ ಎನ್ನುವುದು ನನ್ನ ಹರಕೆ.

    ReplyDelete
  7. ಆತ್ಮೀಯರ ಹಾರೈಕೆಗಳಿಗೆ ಕೃತಜ್ಞತೆಗಳು.ಇನ್ನೂ ಕಟ್ಟಡದ ಕಾಮಗಾರಿಯು ಪೂರ್ಣವಾಗಿ ಮುಗಿದಿಲ್ಲವಾದ್ದರಿಂದ ಆಧ್ಯಾತ್ಮಿಕ ಚಟುವಟಿಕೆಗಳು ನಿಧಾನಗತಿಯಲ್ಲಾದರೂ ನಡೆಯುತ್ತವೆಂಬ ನಂಬಿಕೆ ಇದೆ.ಎಲ್ಲರ ಸಹಕಾರ ಸಲಹೆಗಳನ್ನು ನಿರೀಕ್ಷಿಸುವೆ.

    ReplyDelete
  8. .....ಅಭಿನಂದನೆಗಳು !!!... ಹೊಸ ಮನೆಯಲ್ಲಿ ನಿಮ್ಮೆಲ್ಲರ ಬದುಕು ಸುಂದರವಾಗಿ ಅರಳುತ್ತ , ಬೆಳೆಯುತ್ತ ಇರಲಿ ಎಂದು ಭಗವಂತನಲ್ಲಿ ನನ್ನ ಕಳಕಳಿಯ ಪ್ರಾರ್ಥನೆ !!!!.....

    ReplyDelete
  9. ಧನ್ಯವಾದಗಳು, ಜಗದೀಶ್

    ReplyDelete
  10. ಮುಖಸ್ತುತಿಗೆ ಏನೋ ಹೇಳುವ ಜಾಯಮಾನ ನನ್ನದಲ್ಲ, ನಿಮ್ಮಂಥವರು ಅಪರೂಪ. ಸತ್ಸಂಗಕ್ಕೆ ನೀವು ಜಾಗ ಮಾಡಿದಂತೇ ಗುಂಡು ಪಾರ್ಟಿಗೆ ಇವತ್ತಿನ ಜನ ರೂಪ್ ಟಾಪ್ ಗಾರ್ಡನ್ನೋ ಮರ್ದೊಂದೋ ಮಾಡಿಕೊಳ್ಳುತ್ತಾರೆ. ಸಜ್ಜನರ ಸಂಗ ಸಿಗುವುದ ದುರ್ಲಭ; ಅದು ಸೇಬು ಹಣ್ಣಿನ ಬುಟ್ಟಿಯಲ್ಲಿ ಒಂಚೂರೂ ಅಕ್ಕು-ಮುಕ್ಕು ನುಗ್ಗಿ ಹೋಗದ್ದನ್ನು ಹುಡುಕಿ ತಗೆದಹಾಗೇ ! ಸಿಗುವ ಸಜ್ಜನರ ಸಂಗವನ್ನು ಸ್ನೇಹಿತರಿಗೂ ಉಣಬಡಿಸುವ ನಿಮ್ಮ ಕೆಲಸ ಶ್ಲಾಘನೀಯ. ಶ್ರೇಯಾಂಸಿ ಬಹುವಿಘ್ನಾನಿ ಅಂತಾರೆ ಅದೇ ರೀತಿ ಈ ಕಟ್ಟಡದ ಆಲೋಚನೆ ನಿಮ್ಮ ಮನದಲ್ಲಿ ದಶಕದ ಹಿಂದೇ ಮೂಡಿತ್ತು ಎಂಬುದನ್ನು ಭವಿಷ್ಯವಾಗಿ ಹೇಳುತ್ತಿದ್ದೇನೆ ಕೇಳಿ ! ಹಲವು ಅಡೆತಡೆಗಳನ್ನೂ ಮೀರಿ ಅದು ಕಾರ್ಯಗತಾಗಿದ್ದು ಮಾತ್ರ ಈಗ. ವಿಶಾಲ ಮನವನ್ನು ಹೊಂದಿದ್ದೀರಿ, ಮನೆಯನ್ನೂ ಕಟ್ಟಿಸಿ ಪ್ರವೇಶ ಮಾಡಿದ್ದೀರಿ, ಉತ್ತರೋತ್ತರ ಅಭಿವೃದ್ಧಿ ಆಗಲೆಂದು ನಾರಾಯಣ ಸ್ಮರಣ ಪೂರ್ವಕ ತಮಗೆ ಶುಭ ಕೋರುತ್ತೇನೆ, ನಮಸ್ಕಾರ.

    ReplyDelete
  11. ಧನ್ಯವಾದಗಳು, ಭಟ್ಟರೇ

    ReplyDelete
  12. ಸದಾ ಸತ್ಸ೦ಗಸಹಿತರಾಗಿ..ಅನುಭವಿಸಿದ್ದನ್ನು ನಮಗೂ ಉಣಬಡಿಸುವ ಶ್ರೀಧರರೇ... ಭಟ್ಟರು ಹೇಳುವ೦ತೆ ನಿಮ್ಮ೦ಥವರು ಅಪರೂಪ... ನಾವಿನ್ನೂ ಸದಾ ಸ೦ದಾರಸದ ಜ೦ಜಾಟಗಳಲ್ಲಿ ಕಳೆಯಲೇ ಹೊತ್ತು ಸಾಕಾಗುತ್ತಿಲ್ಲವೆ೦ದು ಚಿ೦ತಿಸುತ್ತಿದ್ದರೆ, ನೀವಾಗಲೇ ನಿತ್ಯ ಸತ್ಸ೦ಗಕ್ಕೆ ಮನೆ-ಮನ ಎರಡನ್ನೂ ಮಾಡಿಕೊ೦ಡಿದ್ದೀರಿ.. ಶ್ರೀಮಾತೆಯು ನೂತನ ಗೃಹದಲ್ಲಿ ವಾಸಿಸುವವರೆಲ್ಲರಿಗೂ ಇನ್ನ್ನೂ ಹೆಚ್ಚಿನ ಚೈತನ್ಯ ಶಕ್ತಿ,ಆಯಿರಾರೋಗ್ಯ,ಐಶ್ವರ್ಯವನ್ನು ನೀಡಿ,ಸದಾ ಅವಳಲ್ಲಿ ನೆಲೆನಿಲ್ಲುವ೦ತೆ ಮನಸ್ಸನ್ನು ನಿತ್ಯ ಉದ್ದೀಪನಗೊಳಿಸುತ್ತಿರಲೆ೦ಬ ಶುಭ ಕಾಮನೆ ಹಾಗೂ ಆಮಾತೆಯವರಲ್ಲಿ ಪ್ರಾರ್ಥನೆ ನನ್ನದು.. ಶುಭವಾಗಲಿ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  13. ರಾಘವೇಂದ್ರರೇ,
    ನಾನು ಮೊದಲಬಾರಿಗೆ ಹೊರನಾಡಿಗೆ ಬಂದ ದಿನವೇ ತಾಯಿಗೆ ಮನಸೋತೆ. ಅವಳ ಹೆಸರೇ ನನ್ನ ಮನೆಯ ಹೆಸರು" ಅನ್ನಪೂರ್ಣೇಶ್ವರಿ ನಿಲಯ" .ಈಗಲೂ ಸತ್ಸಂಗ ನಡೆಸುವ ಹಾಲ್ "ಈಶಾವಾಸ್ಯಮ್" . ಆದರೆ ಕೆಳಮನೆ ಮೇಲ್ಮನೆ [ಒಳಮನೆ]ಎರಡಕ್ಕೂ ತಾಯಿಯ ಹೆಸರು ಶಾಶ್ವತವಾಗಿದೆ.ಅವಳ ಕೃಪೆಯಲ್ಲಿಯೇ ಬಾಳು ನಡೆದಿದೆ. ಅವಳೇ ಮುನ್ನಡೆಸುತ್ತಿದ್ದಾಳೆ.ತಾಯಿಯ ಪದಕಮಲದಲ್ಲಿ ಸಾಸ್ಟಾಂಗ ಪ್ರಣಾಮಗಳು.

    ReplyDelete