ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, November 27, 2011

ಹೊಸ ಪ್ರಯೋಗ

ಇಂದು ಮನುಷ್ಯನದು ಧಾವಂತ ಜೀವನ. ಅತಿಯಾದ ಆಧುನಿಕತೆ. ನಮ್ಮತನವನ್ನು ಮರೆತು  ವಿದೇಶೀ ಭೋಗಜೀವನ ಶೈಲಿಯನ್ನು ಅನ್ಧಾನುಕರಿಸುತ್ತಿರುವ ನಮ್ಮ ಯುವ ಪೀಳಿಗೆ.ಯಾವುದು ತಪ್ಪು ? ಯಾವುದು ಸರಿ ಎಂಬ ವಿವೇಚನಾರಹಿತ ಜೀವನ. ಎಲ್ಲವೂ ಆಧುಕತೆಯ ಹೆಸರಲ್ಲಿ. ಸರಿ, ಅದರಲ್ಲಾದರೂ  ದೇಹ, ಮನಸ್ಸು, ಬುದ್ಧಿಯ ಸ್ವಾಸ್ಥ್ಯ ಸರಿ ಇದೆಯೇ? ಖಂಡಿತವಾಗಿಯೂ ಇಲ್ಲ ವೆಂದೆ ಹೇಳಬೇಕಾದ ಅನಿವಾರ್ಯತೆ. ಬೆಳಿಗ್ಗೆ ಏಳುವಾಗಲೇ ಟಿ.ವಿ. ರಿಮೋಟ್ ಹಿಡಿದುಕೊಂಡೆ ಏಳುವ ಪರಿ. ಅದರಲ್ಲಾದರೋ ಸಾಕಷ್ಟು ಸದ್ವಿಚಾರಗಳಿಗೆ ಅವಕಾಶವಿದ್ದರೂ  ಪ್ರತಿಶತ ೯೦ ಕ್ಕಿಂತಲೂ ಹೆಚ್ಚು ಮನಸ್ಸನ್ನು ಕೆಡಸುವ ಕಾರ್ಯಕ್ರಮಗಳು. ಬೆಳಿಗ್ಗೆ ಎದ್ದಾಗ ಆರಂಭವಾದ  ಟಿ .ವಿ. ಪರದೆಯ ಮೇಲೆ ಹೊಡೆದಾಟ ಬಡಿದಾಟ ,ರಕ್ತದ ಹರಿದಾಟ ದೃಶ್ಯಗಳನ್ನು ರಾತ್ರಿ ಮಲಗುವಾಗಲೂ ನೋಡಿ ಮಲಗುವಂತಹ ಪರಿಸ್ಥಿತಿ. ದಾರಾವಾಹಿಗಳ ಬಗ್ಗೆಯಂತೂ ಚರ್ಚಿಸದಿರುವುದೇ ಸೂಕ್ತ. ನಿತ್ಯವೂ ಹತ್ತಾರು ದಾರಾವಾಹಿಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುವ ಗೃಹಿಣಿಯರು. ದಾರಾವಾಹಿಯ ಸಮಯದಲ್ಲಿ  ಮನೆಗೆ ಬೆಂಕಿ ಬಿದ್ದರೂ ಗಮನ ಹರಿಸದಂತಹ ಮನಸ್ಥಿತಿ! 
ಹೌದು, ನಾವೆತ್ತಾ ಸಾಗುತ್ತಿದ್ದೇವೆ?  ನಮ್ಮ  ಇಂತಹ ಜೀವನದಿಂದ ನೆಮ್ಮದಿಯ ಆರೋಗ್ಯ ಪೂರ್ಣ ಬದುಕು ಸಾಧ್ಯವೇ? ಇಂತಹಾ ಧಾವಂತದ ದಿನಗಳಲ್ಲಿ ಸದ್ವಿಚಾರಗಳನ್ನು ಗಂಟೆ ಗಟ್ಟಲೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಆದ್ದರಿಂದ ಇಲ್ಲೊಂದು ಹೊಸ ಪ್ರಯೋಗ. ಸದ್ವಿಚಾರಗಳನ್ನು ಎರಡು ನಿಮಿಷಗಳಲ್ಲಿ ಜನರ ಕಿವಿಗೆ ಬೀಳಿಸುವ ಪ್ರಯತ್ನ. ಅದರಿಂದ ಏನಾದರೂ ಪ್ರಭಾವವಾಗಿ ಬೇಕೆನಿಸಿದವರಿಗೆ  ಸಾಕಷ್ಟು  ವಿಚಾರಗಳಿಗೆ ವೇದಸುಧೆಯಂತಹ ಅನೇಕ ತಾಣಗಳು ಈಗಾಗಲೇ ಇದ್ದೆ ಇವೆ. ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

6 comments:

 1. Need of the day !!!...thanks for the share ಶ್ರೀಧರ್ Sir !!!

  ReplyDelete
 2. ಶ್ರೀ ಜಗದೀಶ್,
  ನಿತ್ಯದ ಹುಡುಕಾಟದಲ್ಲಿ ಹೊಳೆದದ್ದು ಈ ಪ್ರಯೋಗ. ನೂರಾರು ಪ್ರವಚನಗಳನ್ನು ಕೇಳಿದ್ದಾಗಿದೆ. ಅವುಗಳಲ್ಲಿ ಮನಮುಟ್ಟುವ ಹಾಗೂ ಸದ್ವಿಚಾರಗಳನ್ನು ಜಾಗೃತ ಗೊಳಿಸಬಲ್ಲ ಕೆಲವು ಮಾತುಗಳನ್ನಾದರೂ ಮಿಂಚಿನಂತೆ ಈ ಪ್ರಯೋಗದಲ್ಲಿ ಅಳವಡಿಸಲು ಯೋಚಿಸಿರುವೆ-ದಿನಕ್ಕೊಂದು ಸುಭಾಷಿತದಂತೆ.

  ReplyDelete
 3. This is very useful. Hearing small bits of wisdom like this is helpful too. It gets embedded in our mind.

  Kindly keep this going.

  ReplyDelete
 4. ಪ್ರಯತ್ನ ಮುಂದುವರೆಯುತ್ತದೆ. ನಿಮ್ಮ ಸಹಕಾರವಿರಲಿ. ಧನ್ಯವಾದಗಳು

  ReplyDelete
 5. ಶ್ರೀಧರರೇ, Nice ! ಉತ್ತಮ ಬೆಳವಣಿಗೆ, ಹಸು ಕಟ್ಟಲಾರೆವು-ಹೊಟ್ಟೆ ಹೊರೆಯಲಾರೆವು, ಹಾಲು ತಂದು ಕಾಸಿ ಮೊಸರುಮಾಡಿ ಕಡೆಯುವ ವ್ಯವಧಾನ ನಮಗಿಲ್ಲ, ಸಿಗುವ ಬೆಣ್ಣೆಯನ್ನಾದರೂ ಉಪಯೋಗಿಸಬಹುದಲ್ಲಾ ? ಬೆಣ್ಣೆ ಎತ್ತುವ ಕೆಲಸ ನಿಮ್ಮಿಂದ ಆಗುತ್ತಿದೆ, ಅದಕ್ಕೆ ಅಭಿನಂದನೆಗಳು.

  ReplyDelete