ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, February 7, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೨


       ಅಥರ್ವ ವೇದವಂತೂ ಉಚ್ಛ-ನೀಚಭಾವದ ಬುಡಕ್ಕೇ ಕೊಡಲಿ ಪೆಟ್ಟು ಹಾಕುತ್ತಾ ಹೇಳುತ್ತದೆ: 


 ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್ |
 ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || (ಅಥರ್ವ.೬.೬೪.೨.)


      ಈ ಮಾನವರೆಲ್ಲರ [ಮಂತ್ರಃ ಸಮಾನಃ] ಮಂತ್ರ ಸಮಾನವಾಗಿರಲಿ. [ಸಮಿತಿಃ ಸಮಾನೀ] ಸಮಿತಿ ಸಮಾನವಾಗಿರಲಿ. [ವ್ರತಂ ಸಮಾನಮ್] ವ್ರತವೂ ಸಮಾನವಾಗಿರಲಿ. [ಏಷಾ ಚಿತ್ತಂ ಸಹ] ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ. [ವಃ] ನಿಮ್ಮೆಲ್ಲರಿಗೂ, [ಸಮಾನೇನ ಹವಿಷಾ] ಸಮಾನವಾದ ಖಾದ್ಯ, ಪೇಯಗಳನ್ನೇ [ಜುಹೋಮಿ] ದಾನ ಮಾಡುತ್ತೇನೆ. [ಸಮಾನಂ ಚೇತಃ] ಸಮಾನವಾದ ಚೈತನ್ಯದಲ್ಲಿಯೇ [ಅಭಿ ಸಂ ವಿಶಧ್ವಮ್] ಎಲ್ಲೆಡೆಯಿಂದಲೂ ಪ್ರವೇಶಿಸಿರಿ.  
     ಭಗವಂತ ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿದ್ದಾನೆ. ಅಥರ್ವವೇದದಲ್ಲಿ ಇನ್ನೊಂದೆಡೆ ಸಮಾನೀ ಪ್ರಪಾ ವೋsನ್ನಭಾಗಃ|| (ಅಥರ್ವ.೩.೩೦.೬.) [ಪ್ರಪಾ ಸಮಾನೀ] ನಿಮ್ಮೆಲ್ಲರ ಜಲಾಶಯಗಳೂ ಒಂದಾಗಿರಲಿ. [ವ ಅನ್ನಭಾಗಃ] ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ ಎನ್ನುತ್ತಿದೆ. ಇಂತಹ ಅದೆಷ್ಟೋ ಮಂತ್ರಗಳನ್ನುದ್ಧರಿಸಬಹುದು. ಅದರೆ ಇಷ್ಟರಿಂದಲೇ ಪಾಠಕರು ವೇದಗಳ ಭಾವನೆಯನ್ನು ತಿಳಿದುಕೊಳ್ಳಬಲ್ಲರು.
 ************** 

3 comments:

  1. ವೇದವನ್ನರಿಯದ ಜನರ ನಡೆ ಹೇಗಾದರೂ ಇರಲಿ. ವೇದಗಳು ಸ್ಪಷ್ಟವಾಗಿ ಸಾರಿರುವ ಸಮಾನತೆಯನ್ನು ವೇದ ಪಂಡಿತರನೇಕರು ಪಾಲಿಸದಿರುವುದು ನಮ್ಮ ಸಮಾಜದ ಶೈತಲ್ಯಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಪಂಡಿತ್ ಸುಧಾಕರ ಚತುರ್ವೇದಿಗಳು ವೇದಗ ಗಳಲ್ಲಿರುವ ಸಮಾನತೆಯ ಮಂತ್ರಗಳನ್ನು ಆಯ್ದು ಪ್ರಕಟಿಸುವ ಪ್ರಯತ್ನ ಮಾಡಿದರೆ ಬಹುಪಾಲು ಪಂಡಿತರ ಆಯ್ಕೆಯೇ ಬೇರೆಯಾಗಿದೆ. ಒಟ್ಟಿನಲ್ಲಿ ವಿಶ್ವದ ಜನರ ನೆಮ್ಮದಿಯ ಬದುಕಿಗೆ ಬೆಳಕಾಗಬಲ್ಲ ವೇದವನ್ನು ಜನರಿಗೆ ಸರಿಯಾಗಿ ಅರ್ಥೈಸುವ ಕೆಲಸಕ್ಕೆ ಹೆಚ್ಚು ಒತ್ತುಕೊಡಬೇಕಾಗಿದೆ. ಇದು ಎಲ್ಲಾ ವೇದಾಭಿಮಾನಿಗಳ ಹೊಣೆಯೆಂದು ನಾನು ಭಾವಿಸುವೆ.

    ReplyDelete
  2. ನಿಮ್ಮ ಅನಿಸಿಕೆ ಸರಿ.

    ReplyDelete