Pages

Sunday, February 26, 2012

ಸಮಾಜದಲ್ಲಿ ಸಾಮರಸ್ಯ


ಹಾಸನದ ಸಮೀಪ ದೊಡ್ದಪುರದಲ್ಲಿ ನಡೆಯಲಿರುವ  ಸಾಂಕೇತಿಕ ಅಶ್ವಮೇಧ ಯಾಗದ ಬಗ್ಗೆ    ವೇದಸುಧೆಯ ಸಕ್ರಿಯ  ಸದಸ್ಯರೂ ಹಾಗೂ ಪತ್ರಕರ್ತರೂ ಆದ ಶ್ರೀ ಹೆಚ್.ಎಸ್. ಪ್ರಭಾಕರ್ ರವರು  ರಾಜ್ಯದ ಹಲವು ಪತ್ರಿಕೆಗಳಲ್ಲಿ ಮತ್ತು ಹಾಸನದ ಸ್ಥಳೀಯ ಪತ್ರಿಕೆಗಳಲ್ಲಿ ಬರೆದಿರುವ ಲೇಖನವನ್ನು ವೇದಸುಧೆಯಲ್ಲೂ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಶ್ರೀ ಸುಧಾಕರ ಶರ್ಮರ ಉಪನ್ಯಾಸವನ್ನೂ ಮತ್ತು ಅದರ  ಬರಹ ರೂಪವನ್ನೂ ಕೂಡ ವೇದಸುಧೆಯಲ್ಲಿ ಪ್ರಕಟಿಸಲಾಗಿದೆ. ವೇದಸುಧೆಯ ಅಭಿಮಾನಿಗಳಲ್ಲಿ   ವಿನಂತಿಸುವುದೆನೆಂದರೆ  ಸಮಾಜದಲ್ಲಿ ಯಾವುದೇ  ಈ ರೀತಿಯ  ಧಾರ್ಮಿಕ ವಿಧಿಗಳು ನಡೆಯುವಾಗ ನಾವು  ವೇದಕ್ಕೆ ಪೂರಕವಾಗಿ ಹಾಗೂ ಸಮಾಜದಲ್ಲಿ ಸಾಮರಸ್ಯವನ್ನು ತರಲು ಅನುಕೂಲವಾಗುವಂತೆ ವ್ಯವಸ್ಥಾಪಕರಿಗೆ ಸಲಹೆ ಕೊಡಲು ಸಾಧ್ಯವೇ? ಪ್ರಯತ್ನಿಸಬೇಕು. ಅಲ್ಲದೆ ಹೀಗೊಂದು ಕಾರ್ಯಕ್ರಮವನ್ನು ಯೋಜಿಸಿರುವಾಗ ಅದಕ್ಕೆ ಪ್ರತಿರೋಧವನ್ನು ಒಡ್ಡುವುದು ಸಮಾಜದ ಸಾಮರಸ್ಯದ ದೃಷ್ಟಿಯಿಂದ ಸಾದುವಲ್ಲ ಎಂಬುದನ್ನು ಮನಗಂಡು ಇದರಿಂದ ಸಮಾಜದ ನೆಮ್ಮದಿಗೆ ಪೂರಕವಾಗುವಂತೆ, ಹಾಗೂ ಮಾಡುವ  ಯಜ್ಞದಿಂದ ಪರಿಸರ ಶುದ್ಧವಾಗಲು  ,ಪಠಿಸುವ ಮಂತ್ರದಿಂದ ಮನಸ್ಸು ಶುದ್ಧವಾಗಲು ಅನುಕೂಲವಾಗುವಂತೆ ಎಚ್ಚರ ವಹಿಸಲು ವ್ಯವಸ್ಥಾಪಕರಿಗೆ  ಸೂಕ್ತ ಸಲಹೆ ಕೊಡಲು ಪ್ರಯತ್ನಿಸಬೇಕು.

2 comments:

  1. ನಿಮ್ಮ ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯ ಶ್ರೀಧರ್ ಅವರೆ. ಪತ್ರಿಕೆಗಳಲ್ಲಿ ಪ್ರಕಟವಾದ ಈ ನನ್ನ ಲೇಖನಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ದೂರವಾಣಿ ಮೂಲಕವೇನೋ ಬಂದವು. ಆದರೆ ಅವೆಲ್ಲವೂ ನೀವು-ನಾವು ಆಶಿಸಿದಂತೆ ಸಂಬಂಧಪಟ್ಟವರ ಮೇಲೆ `ಒತ್ತಡ' ಹಾಗೂ ಮಾರ್ಪಾಟು ತರುವ ಚಳವಳಿಯಾಗಿ ರೂಪುಗೊಳ್ಳಬೇಕೆಂಬುದು ನನ್ನ ಆಶಯವಾಗಿದೆ.

    ReplyDelete
  2. ಶ್ರೀಯುತ ಶ್ರೀಧರ್ರವರೇ,
    ಪ್ರಭಾಕರರವರದ್ದು ಉತ್ತಮವಾದ ಸಮಯೋಚಿತವಾದ ಲೇಖನ. ಯಜ್ಞದ ಮೋಲ ಅರ್ಥವನ್ನೇ ತಪ್ಪಾಗಿ ಗ್ರಹಿಸಿ, ತಾವು ಮಾಡುವ ತಪ್ಪಿನ ಜೊತೆಗೆ ಇತರರನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದ್ದಾರೆ. ಈ ದಿನಗಳಲ್ಲಿ ಆಚರಣೆಗಳು ಆಡಂಬರ ವಾಗಿವೆ. ನಿಜವಾದ ಭಕ್ತಿಯಾಗಲಿ, ವಿಶ್ವಾಸವಾಗಲಿ ಜನಗಳ ಮನಸ್ಸಿನಿಂದ ಮರೆಯಾಗಿದೆ. ಸ್ವಾರ್ಥಲಾಭಾಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಎಂಬ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಕಾವಿಧಾರಿಗಳು ಮಾಡುತ್ತಿದ್ದಾರೆ. ಇದನ್ನು ರಾಜಕೀಯ ಪಕ್ಷಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ ಸ್ವಾರ್ಥ ಲಾಭವೇ ಇಲ್ಲಿ ಹುಚ್ಚೆದ್ದು ಕುಣಿಯುತ್ತಿದೆ. ಈ ಲಾಭ ಏನೂ ಆಗಿರಬಹುದು.
    ಧನ್ಯವಾದಗಳು
    ಪ್ರಕಾಶ್.

    ReplyDelete